ಗದಗದಲ್ಲಿ ನಡೆಯುವ ೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪರಿಸರ ಕುರಿತ ಗೋಷ್ಠಿಯನ್ನು ಪರಿಸರವಾದಿ ಡಾ. ಅನ ಯಲ್ಲಪ್ಪರೆಡ್ಡಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಈ ಗೋಷ್ಠಿಯಲ್ಲಿ "ನಗರಗಳ ಬೆಳವಣಿಗೆ: ಪರಿಸರ ನಾಶ" ಕುರಿತಂತೆ ೨೦ ನಿಮಿಷಗಳ ವಿಚಾರ ಮಂಡಿಸಲು ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್ ಅವರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಸರದ ಬಗ್ಗೆ ವಿಚಾರ ಮಂಡಿಸುವ ಅವಕಾಶ ದೊರೆತಿರುವುದು ನನಗೆ ಹೆಮ್ಮೆಯ ವಿಷಯವೇ ಸರಿ. ನಗರ ಬೆಳವಣಿಗೆ, ಅಭಿವೃದ್ಧಿ ಹಾಗೂ ಅಂತರ್ಜಲ, ಕೆರೆಗಳ ಬಗ್ಗೆ ವಿಷಯವನ್ನು ಮಂಡಿಸಲು ಸಿದ್ಧತೆ ನಡೆಸಿದ್ದೇನೆ. ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ.
ಗೋಷ್ಠಿ ಫೆಬ್ರವರಿ ೨೧ರಂದು ಬೆಳಗ್ಗೆ ೯.೩೦ಕ್ಕೆ ನಡೆಯಲಿದೆ. ಸ್ಥಳ: ವಿವೇಕಾನಂದ ಸಭಾಭವನ, ಎಪಿಎಂಸಿ ಆವರಣ.