ಎಲ್ಲ ಒತ್ತುವರಿ ತೆರವುಗೊಳಿಸಲು ಜಲಮಂಡಲಿ ಸಚಿವರ ಕಟ್ಟಪ್ಟಣೆ
ಅರ್ಕಾವತಿ ನದಿ ಪಾತ್ರದ ಶುಚಿ ಕಾರ್ಯ ಕೂಡಲೇ ಪ್ರಾರಂಭ ಮಾಡಿ ನೀರು ಹರಿವಿಗೆ ತಡೆಯಾಗಿರುವ ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕೆಂದು ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಪ್ಪಣೆ ಮಾಡಿದ್ದಾರೆ. ಸೋಮವಾರದಿಂದ ಕಾಲುವೆ ಶುಚಿ ಆರಂಭವಾಗಲಿದೆ.
ನಂದಿಬೆಟ್ಟದ ತಪ್ಪಲಿನಿಂದ ಹೆಸರಘಟ್ಟ-ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ನದಿ ಪಾತ್ರದಲ್ಲಿರುವ ಹೂಳು, ಗಿಡ-ಮರಗಳನ್ನು ಗುರುವಾರದಿಂದಲೇ ತೆರವುಗೊಳಿಸಬೇಕು. ಕಾಲುವೆ ಒತ್ತುವರಿಯ ಕಟ್ಟಡ ಅಥವಾ ಇನ್ಯಾವುದೇ ರೀತಿಯ ತಡೆ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಗರ-ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರ ಈ ಮಳೆಗಾಲದಲ್ಲಿ ಕಾಣಬೇಕು. ಎಲ್ಲಿಯೂ ಒತ್ತುವರಿ ಉಳಿಸಬಾರದು. ಇದಕ್ಕೆ ಸಕ್ರಿಯ ಕಾಮಗಾರಿ ಕೂಡಲೇ ಆರಂಭವಾಗಬೇಕಾದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಕಾವೇರಿ ಜಲನಿಗಮ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭ ಇಲಾಖೆ, ನಗರ-ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿದ್ದು, ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿ ತತ್‌ಕ್ಷಣದಿಂದ ಕಾರ್ಯ ಆರಂಭಿಸಿದ್ದು, ನದಿಪಾತ್ರ ಸಮೀಕ್ಷೆ ನಡೆದಿದೆ. ಸೋಮವಾರದಿಂದ ಶುಚಿ ಕಾರ್ಯ ಆರಂಭವಾಗಲಿದೆ.
ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅರ್ಕಾವತಿ ನದಿ ಪುನಶ್ಚೇತನ ಪಾದಯಾತ್ರೆ ಉದ್ಘಾಟಿಸಿದ್ದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರಿಗೆ ಭವಿಷ್ಯದಲ್ಲಿ ನೀರುಣಿಸುವ ದೂರದೃಷ್ಟಿಯ ಯೋಜನೆಯಡಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಅರ್ಕಾವತಿ ನದಿ ಮೂಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಒಂದಷ್ಟು ದೂರ ನಡೆದಿದ್ದ ಸುರೇಶ್ ಕುಮಾರ್, ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿಲ್ಲ. ಅದರ ಹರಿವು ವಿಮುಖವಾಗಿದೆ. ಅದನ್ನು ಸುಸ್ಥಿತಿಗೆ ತಂದು ನದಿ ಹರಿಯುವಂತೆ ಮಾಡಬೇಕು. ಈ ಮಳೆಗಾಲದಲ್ಲಿ ನದಿ ಪಾತ್ರ ಕಾಣುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ ಪಾತ್ರ ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳನ್ನೂ ತೆರವುಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಾಗ, ೭೯ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮಂಡಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
“ಅರ್ಕಾವತಿ ನದಿ ಪುನಶ್ಚೇತನಕ್ಕೆ ನಾವು ಬದ್ಧರಾಗಿದ್ದೇವೆ. ಒತ್ತುವರಿಯನ್ನು ಸಂಪೂರ್ಣ ರೀತಿಯಲ್ಲಿ ತೆರವುಗೊಳಿಸಲು ಹಾಗೂ ಸಮಗ್ರ ರೀತಿಯಲ್ಲಿ ಕಾಮಗಾರಿ ನಡೆಸಲು ಕೆಲವು ಅಧಿಕಾರಗಳ ಅಗತ್ಯವಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರಿಂದ ಒಪ್ಪಿಗೆ ಪಡೆದು ಸಮಗ್ರವಾಗಿ ಕಾಮಗಾರಿ ಆರಂಭಿಸಲಿದ್ದೇವೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಅರ್ಕಾವತಿ ನದಿ ಪಾತ್ರವನ್ನು ಶುಚಿಗೊಳಿಸುವ ಯೋಜನೆ ನಮ್ಮದಾಗಿದೆ."ಅರ್ಕಾವತಿ ನದಿ ಪಾತ್ರದ ಶುಚಿ ಕಾರ್ಯ ಕೂಡಲೇ ಪ್ರಾರಂಭ ಮಾಡಿ ನೀರು ಹರಿವಿಗೆ ತಡೆಯಾಗಿರುವ ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕೆಂದು ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಪ್ಪಣೆ ಮಾಡಿದ್ದಾರೆ. ಸೋಮವಾರದಿಂದ ಕಾಲುವೆ ಶುಚಿ ಆರಂಭವಾಗಲಿದೆ.
ನಂದಿಬೆಟ್ಟದ ತಪ್ಪಲಿನಿಂದ ಹೆಸರಘಟ್ಟ-ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ನದಿ ಪಾತ್ರದಲ್ಲಿರುವ ಹೂಳು, ಗಿಡ-ಮರಗಳನ್ನು ಗುರುವಾರದಿಂದಲೇ ತೆರವುಗೊಳಿಸಬೇಕು. ಕಾಲುವೆ ಒತ್ತುವರಿಯ ಕಟ್ಟಡ ಅಥವಾ ಇನ್ಯಾವುದೇ ರೀತಿಯ ತಡೆ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಗರ-ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರ ಈ ಮಳೆಗಾಲದಲ್ಲಿ ಕಾಣಬೇಕು. ಎಲ್ಲಿಯೂ ಒತ್ತುವರಿ ಉಳಿಸಬಾರದು. ಇದಕ್ಕೆ ಸಕ್ರಿಯ ಕಾಮಗಾರಿ ಕೂಡಲೇ ಆರಂಭವಾಗಬೇಕಾದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಕಾವೇರಿ ಜಲನಿಗಮ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭ ಇಲಾಖೆ, ನಗರ-ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿದ್ದು, ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿ ತತ್‌ಕ್ಷಣದಿಂದ ಕಾರ್ಯ ಆರಂಭಿಸಿದ್ದು, ನದಿಪಾತ್ರ ಸಮೀಕ್ಷೆ ನಡೆದಿದೆ. ಸೋಮವಾರದಿಂದ ಶುಚಿ ಕಾರ್ಯ ಆರಂಭವಾಗಲಿದೆ.
ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅರ್ಕಾವತಿ ನದಿ ಪುನಶ್ಚೇತನ ಪಾದಯಾತ್ರೆ ಉದ್ಘಾಟಿಸಿದ್ದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರಿಗೆ ಭವಿಷ್ಯದಲ್ಲಿ ನೀರುಣಿಸುವ ದೂರದೃಷ್ಟಿಯ ಯೋಜನೆಯಡಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಅರ್ಕಾವತಿ ನದಿ ಮೂಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಒಂದಷ್ಟು ದೂರ ನಡೆದಿದ್ದ ಸುರೇಶ್ ಕುಮಾರ್, ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿಲ್ಲ. ಅದರ ಹರಿವು ವಿಮುಖವಾಗಿದೆ. ಅದನ್ನು ಸುಸ್ಥಿತಿಗೆ ತಂದು ನದಿ ಹರಿಯುವಂತೆ ಮಾಡಬೇಕು. ಈ ಮಳೆಗಾಲದಲ್ಲಿ ನದಿ ಪಾತ್ರ ಕಾಣುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ ಪಾತ್ರ ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳನ್ನೂ ತೆರವುಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಾಗ, ೭೯ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮಂಡಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಲಮಂಡಲಿ, ವಸತಿ ಸಚಿವರು