Friday, August 16, 2013

Saturday, August 10, 2013

ಒತ್ತುವರಿ ಸುಳಿಯಲ್ಲಿ 46 ಕೆರೆ

ಬೆಂಗಳೂರು ನಗರ ಜಿಲ್ಲೆಯ ತಹಸೀಲ್ದಾರರ ನಿರ್ಲಕ್ಷ್ಯದಿಂದ 46 ಕೆರೆಗಳು ಒತ್ತುವರಿಯ ಸುಳಿಯಲ್ಲೇ ನಲುಗುತ್ತಿವೆ. ಸಣ್ಣ ನೀರಾವರಿ ಇಲಾಖೆಯಿಂದ ಸಾಕಷ್ಟು ಬಾರಿ ಸರ್ವೆ ಕಾರ್ಯ ಹಾಗೂ ಒತ್ತುವರಿ ತೆರವಿಗೆ ಸೂಚನೆ ಬಂದಿದ್ದರೂ ಅದನ್ನು ತಹಸೀಲ್ದಾರರು ನಿರ್ವಹಿಸುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವರ್ಷದಲ್ಲಿ 12 ಸಾವಿರ ಕೆರೆಗಳ ಸರ್ವೆ ನಡೆಸಿ, ಅವುಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ವರ್ಷಗಳಿಂದ ಕೆರೆಗಳ ಸರ್ವೆ ನಡೆದಿಲ್ಲ. ಇದಕ್ಕೆ ಕಾರಣ ಕಂದಾಯ ಇಲಾಖೆ. ತಹಸೀಲ್ದಾರರೇ ಈ ಕೆರೆಗಳ ಸರ್ವೆ ನಡೆಸಬೇಕು. ಸರ್ವೆ ನಡೆದರೆ ಒತ್ತುವರಿ ತೆರವಾಗುತ್ತಲ್ಲ ಎಂಬ ದೂ(ದು)ರಾಲೋಚನೆಯಿಂದ ಕಡತ ಮುಂದುವರಿಯುತ್ತಲೇ ಇಲ್ಲ.
ರಾಜ್ಯದ 33 ಸಾವಿರ ಕೆರೆಗಳ ಬಹುತೇಕ ಕೆರೆಗಳ ಸ್ಥಿತಿಯೂ ಇದೇ ರೀತಿಯಲ್ಲಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ವೆ ತಡೆ ಪ್ರಭಾವ ಅತಿಯಾಗಿದೆ. ಇದಕ್ಕೆ ಇಲ್ಲಿನ ರಾಜಕಾರಣಿಗಳು ಹಾಗೂ ಭೂದಾಹಿಗಳೇ ಕಾರಣ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊರತಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 47 ಕೆರೆಗಳ ಒಳಪಡುತ್ತವೆ. ಇದರಲ್ಲಿ ಒಂದು ಕೆರೆಯನ್ನು ಬಿಡಿಎಗೆ ಹಸ್ತಾಂತರಿಸಲಾಗಿದೆ. ಉಳಿದ 46 ಕೆರೆಗಳನ್ನು ಐದಾರು ವರ್ಷಗಳಿಂದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಈವರೆಗೆ ಒಂದು ಕೆರೆಯ ಅಭಿವೃದ್ಧಿಯೂ ಪೂರ್ಣಗೊಂಡಿಲ್ಲ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 46 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿವೆ. ಇದರಲ್ಲಿ 39 ಕೆರೆಗಳು ಒತ್ತುವರಿಯಾಗಿವೆ. 148.49 ಹೆಕ್ಟೇರ್ (366 ಎಕರೆ) ಪ್ರದೇಶ ಒತ್ತುವರಿಯಾಗಿದೆ. 110.78 ಹೆಕ್ಟೇರ್ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದ್ದರೂ, ಕೆರೆಗಳಿಗೆ ಬೇಲಿ ಹಾಕುವ ಕಾರ್ಯ ಆಗಿಲ್ಲ. ಏಕೆಂದರೆ ಗಡಿ ಪ್ರದೇಶ ಗುರುತಾಗಿಲ್ಲ.
ಆನೇಕಲ್‌ನಲ್ಲೇ ಹೆಚ್ಚು: ಸಣ್ಣ ನೀರಾವರಿ ಇಲಾಖೆಗೆ ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲೇ 26 ಕೆರೆಗಳಿವೆ. ಈ ಕೆರೆಗಳ ಒಟ್ಟು ವಿಸ್ತೀರ್ಣ 1211.37 ಹೆಕ್ಟೇರ್ (2993 ಎಕರೆ). ಈ 26 ಕೆರೆಗಳ ಸರ್ವೆಯಲ್ಲೇ ಸಾಕಷ್ಟು ವಿಳಂಬವಾಗುತ್ತಿದೆ. ಕೆರೆಗಳ ಸರ್ವೆ ಕಾರ್ಯಕ್ಕೆ ಇಲಾಖೆ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದರೂ ಇನ್ನೂ ಸರ್ವೆ ಕಾರ್ಯ ನಡೆಸಿಲ್ಲ. ಹೀಗಾಗಿ ಬೇಲಿ ನಿರ್ಮಿಸುವ ಪ್ರಥಮ ಕಾರ್ಯವೂ ಆಗಿಲ್ಲ.
ಆನೇಕಲ್ ತಾಲೂಕಿನಲ್ಲಿ ಬಹುಮಹಡಿ ಕಟ್ಟಡಗಳು ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆ ಹೆಚ್ಚಿರುವುದರಿಂದ ಕೆರೆಗಳ ಒತ್ತುವರಿ ಅತಿಹೆಚ್ಚಾಗಿದೆ. ಇಲ್ಲಿ ಸರ್ವೆ ಮಾಡಿದರೆ ಸಾಕಷ್ಟು ಕಟ್ಟಡಗಳು ನೆಲಸಮವಾಗಬೇಕಾಗುತ್ತದೆ. ಇದನ್ನು ತಡೆಯುವ ದೃಷ್ಟಿಯಿಂದ ಪಟ್ಟಭದ್ರ ಹಿತಾಸಕ್ತಿಗಳು ತಹಸೀಲ್ದಾರರ ಮೇಲೆ ಪ್ರಭಾವ ಬೀರುತ್ತಿವೆ. ಇದಕ್ಕೆ ತಹಸೀಲ್ದಾರ್ ಮಣಿದಿದ್ದಾರೆ. ಅದಕ್ಕೇ ಕೆರೆಗಳ ಒತ್ತುವರಿ ಹಾಗೇ ಉಳಿದುಕೊಂಡಿದೆ ಎಂಬ ಆರೋಪ ಬಲವಾಗಿದೆ.

ಬೆಂ.ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳು
ಪೂರ್ವ ತಾಲೂಕು: ರಾಂಪುರ ಕೆರೆ, ಬಿದರಹಳ್ಳಿ ಕೆರೆ, ದೊಡ್ಡಗುಬ್ಬಿ ಕೆರೆ, ಕೊಡತಿ ಕೆರೆ, ಎಲೆಮಲ್ಲಪ್ಪಶೆಟ್ಟಿ ಕೆರೆ.
ಉತ್ತರ ತಾಲೂಕು: ಸಿಂಗನಾಯಕನಹಳ್ಳಿ ಕೆರೆ, ಬಾಗಲೂರು ಕೆರೆ, ದೊಡ್ಡಜಾಲ ಕೆರೆ, ಆಲೂರು ಕೆರೆ, ಬಂಡೆಕೊಡಗಿಹಳ್ಳಿ ಕೆರೆ, ಅಡ್ಡೆ ವಿಶ್ವನಾಥಪುರ ಕೆರೆ, ಮಹದೇವಕೊಡಿಗೆಹಳ್ಳಿ ಕೆರೆ, ಸೊಂಡೆಕೊಪ್ಪ ಕೆರೆ, ಕಾಚಕನಹಳ್ಳಿ ಕೆರೆ.
ದಕ್ಷಿಣ ತಾಲೂಕು: ಚಿಕ್ಕಲಿಂಗಶಾಸ್ತ್ರಿ ಕೆರೆ, ಗುಳಕಮಲೆ ಕೆರೆ, ವಡೇರಹಳ್ಳಿ ಕೆರೆ, ಊದಿಪಾಳ್ಯ ಕೆರೆ, ಅಗರ ಕೆರೆ.
ಆನೇಕಲ್ ತಾಲೂಕು:  ಮುತ್ತನಲ್ಲೂರು ಅಮಾನಿ ಕೆರೆ, ಕರ್ಪೂರ ಕೆರೆ, ಬಿದರಗುಪ್ಪೆ ಅಮಾನಿ ಕೆರೆ, ಮಾಯಸಂದ್ರ ದೊಡ್ಡ ಕೆರೆ, ಮುಗಳೂರು ಕೋಡಿ ಕೆರೆ, ಮರಸೂರು ದೊಡ್ಡ ಕೆರೆ, ಅರೆಹಳ್ಳಿ ದೊಡ್ಡ ಕೆರೆ, ಸರ್ಜಾಪುರ ಕೆರೆ, ಪಂಡಿತನ ಅಗ್ರಹಾರ ಕೆರೆ, ಬೊಮ್ಮಸಂದ್ರ ಕೆರೆ, ಗಟ್ಟಿಹಳ್ಳಿ ಬೊಮ್ಮನಕೆರೆ, ಹುಸ್ಕೂರು ಕೆರೆ, ಸಿಂಗೇನಹಳ್ಳಿ ಅಗ್ರಹಾರ ಕೆರೆ, ಸರ್ಜಾಪುರ ಚಿಕ್ಕಕೆರೆ, ಬೊಮ್ಮುಂಡಹಳ್ಳಿ ಕೆರೆ, ಹೆನ್ನಾಗರ ಅಮಾನಿ ಕೆರೆ, ಬ್ಯಾಟರಾಯನದೊಡ್ಡಿ ಕೆರೆ, ಹುಲಿಮಂಗಲ ಕೆರೆ, ಸಕಲವಾರ ಭುಜಂಗದಾಸನ ಕೆರೆ, ಬಿದರಿ ಅಮಾನಿ ಕೆರೆ, ಜಿಗಣಿ ದೊಡ್ಡ ಕೆರೆ, ಹಾರಗದ್ದೆ ದೊಡ್ಡ ಕೆರೆ, ಬಗ್ಗನದೊಡ್ಡಿ ಕೆರೆ, ಆನೇಕಲ್ ರಾಜನಕೆರೆ, ಆನೇಕಲ್ ದೊಡ್ಡಕೆರೆ, ಬಿದರಕೆರೆ ದೊಡ್ಡಕೆರೆ.

ಕೆರೆಗಳ
ಸರ್ವೆಗೆ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಸರ್ವೆ ನಡೆದ ಮೇಲೆ ಅವರೇ ಒತ್ತುವರಿ ತೆರವುಗೊಳಿಸಿಕೊಡಬೇಕು. ಕೆರೆಗಳಿಗೆ ಕಲುಷಿತ ನೀರು- ತ್ಯಾಜ್ಯ ಸೇರದಂತೆ ತಡೆಗಟ್ಟಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
- ಶಿವರಾಜ್ ಎಸ್. ತಂಗಡಗಿ, ಸಣ್ಣ ನೀರಾವರಿ ಸಚಿವ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 10-08-2013

Thursday, August 1, 2013

ಸರ್ಕಾರಿ ಭೂಮಿ ಒತ್ತು'ವರಿ'- ಓದುಗ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 01-08-2013

ಸರ್ಕಾರಿ ಭೂಮಿ ಒತ್ತು'ವರಿ'- ಓದುಗ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 31-07-2013

ಸರ್ಕಾರಿ ಭೂಮಿ ಒತ್ತು'ವರಿ'- ಡಿ.ವಿ. ಸದಾನಂದಗೌಡ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 30-07-2013

ಸರ್ಕಾರಿ ಭೂಮಿ ಒತ್ತು'ವರಿ'- ಓದುಗ


 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 30-07-2013

ಸರ್ಕಾರಿ ಭೂಮಿ ಒತ್ತು'ವರಿ'- ರಾಜ್ಯಪಾಲ


 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 28-07-2013

ಭೂಮಾಪಕರ ಮುಷ್ಕರ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 29-07-2013

ಭೂಮಾಪಕರ ಆಯ್ಕೆ

 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 28-07-2013