- * I have become forgetful. On such occasions, I have been given the presidency of the conference. However, the organization I was the president of has given me the honour of being the president of the conference. For that, I am indebted to the Parishad.
- * There is no crisis in literature, there may be among writers. Each person has their own ideology. If it is a subject of discussion, new ideas will emerge from it.
- * Kannada has been polluted in Bangalore. It seems that there is no standard when using the language here. Kannadigas should first have respect for the language. That respect should be cultivated in non-Kannada speakers as well.
- * It is not good to suppress or neglect any culture. Literature that complements a harmonious environment where everyone can live should also be created. The government should also recognize it.
- * In many cases, there is a desire to keep some problems alive for political reasons. That is not good, it disrupts the progress of the nation.
Time limit needed for migrants to learn Kannada: Gorucha
Kere Manjunath ಕೆರೆ ಮಂಜುನಾಥ್
Bengaluru: ‘Kannada should be taught to foreigners residing in the state. A time limit should be set for them to learn Kannada. They should learn Kannada within a maximum of five years. The government should take strict action against this,’ opined Go.Ru. Channabasappa, president of the Akhil Bharat Kannada Sahitya Sammelana.
‘A necessary condition should be created in the state for Kannada to be spoken. Non-Kannada speakers should be convinced about the essence, elegance and benefits of using Kannada. In addition, Kannadigas should also be made proud of the language through literature in all media.’ He said.
‘Our Chief Minister has recently announced that everyone should learn Kannada. It should be done on a large scale. If there is no time limit, nothing will be possible,’ he said.
The following is a question and answer session with Gorucha....
- What steps shouldthe government take for the development of the language?
It is not enough for the government to do the work of creating a sense of pride in the language among the people. Educational institutions, literary councils and cultural institutions should prioritize programs to promote the language. Teachers who have close contact with parents should create awareness about learning the language. Literary people should also contribute to the growth of the Kannada language by connecting with the common people. The government should encourage all this. It should formulate necessary policies for this and ensure that they are implemented.
- What topics should be discussed in theconference?
Literary people and literature enthusiasts from many parts of the state participate in the Kannada Sahitya Sammelana. Along with literary topics, there is a need to discuss issues related to the lives of the people. Especially, contemporary issues should be thought about and a universal message should be given through that platform. Although it is not possible to discuss all the issues, priority should be given to urgent issues. An environment that creates harmony in the community, which is one of the most important problems that people are facing, needs to be created. People should accept and embrace multiculturalism. That is a sign of true democracy.
- What is the solution to the problems facing Kannada, the government?
Some of the problems of language, border, water, and immigrants can be resolved by the state government itself. The pressure for that should come from our community and writers. The government should be made to understand that the problem needs to be resolved. In a democracy, the people's demand is the most important. The central government should take responsibility for inter-state problems. The central government should pressure the heads of both the states to resolve inter-state problems. It is the responsibility of the people to pressure them to do so.
- Remember the conference organizedin Mandya when you were the president of the council?
As the president of the Kannada Sahitya Parishad, I had organized a literary conference in Mandya in 1995. It is a coincidence that I am the president of the conference that is currently being held in Mandya. I will never forget the love, support, and cooperation that the people of Mandya gave me during the literary conference in Mandya. They had organized it very wonderfully. There is a lot of encouragement and support for literary activities in Mandya. The government did not provide so much funding then. 6 lakhs to 7 lakhs. We saved the grant given by the government and built district literary houses. When I was the president of the Sahitya Parishad, district literary houses were built everywhere. That was a relief to me.
- Does the Kannada sahitya parishath need grants?
My wish was that the Kannada Sahitya Parishath should be financially self-sufficient without government interference. That is why I had started a fundraising program called ‘Obba Kannadiga One Rupee’. But it did not continue. There is no need to say no to government grants. It is the government’s duty to provide grants. But I hope that those grants should be put to good use.
Primary education in Kannada: Make it compulsory
‘Primary education should be in the mother tongue. All education experts in the world have agreed to this. For that, the government should take bold steps to formulate an education policy. Once it is made compulsory, people will get used to it and accept it,’ opined Go.Ru. Channabasappa.
‘The current problem for Kannada is English. Parents are giving importance to English, which is the most practical language in the world, with the aim of securing the future of our children. There is no need to say no to learning English. However, Kannada should come first. The training given for other subjects should also be given to learning English. "If parents are convinced that such training is available in primary education, no one will object," he said.
Introduction to Go.R. Channabasappa
Full name: Gondedahalli Rudrappa Channabasappa
Date of birth: 18 May 1930 (94 years)
Place of birth: Gondedahalli, Tarikere taluk, Chikkamagaluru
Father: Rudrappa Girigowdar
Mother: Akkamma Rudrappa
Primary education: Hadagalu Thimmapura, Chikkamagaluru
Freedom movement: 1944-48 in Ajjampura, Birur, Kadur, Mayakonda.
Career: Started his career as a primary school teacher in 1948. Social education training in Gandhigram. Work in Bhoodan movement, adult education, Sevadals. General Commissioner of Bharat Scouts and Gouds. President of Kannada Sahitya Parishad, All India Sharan Sahitya Parishad.
Author of more than 50 works including Mahadevi, Sadashiva Shivacharya, Karnataka Pragatipatha, Cheluvambike, Kunala, Sakshi Kallu, Bellakki Hindu Bedaryavo, Bagur Nagamma, Gramagitagala, Vibhuti, Karnataka Folk Arts.
In Kannada Sahitya Parishath
1975-77: Convener of the Folklore Section
1987-88: Editor of the Kannada Sahitya Parishath Newspaper
1989-92: Honorary Secretary, organized three conferences
1990: First time in the Parishad, Rebel Literature Conference
1992-95: President of Kannada Sahitya Parishath
* ನನಗೆ ಮರೆವು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ನನಗೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಆದರೂ, ನಾನು ಅಧ್ಯಕ್ಷನಾಗಿದ್ದ ಸಂಸ್ಥೆ ನನಗೆ ಸಮ್ಮೇಳನದ ಅಧ್ಯಕ್ಷನಾಗುವ ಗೌರವ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಪರಿಷತ್ ಗೆ ಋಣಿಯಾಗಿರುತ್ತೇನೆ.
* ಸಾಹಿತ್ಯದಲ್ಲಿ ಬಿಕ್ಕಟ್ಟಿಲ್ಲ, ಸಾಹಿತಿಗಳಲ್ಲಿ ಇರಬಹುದು. ಒಬ್ಬೊಬ್ಬರ ವಿಚಾರಧಾರೆ ಒಂದೊಂದು ರೀತಿ ಇರುತ್ತದೆ. ಅದು ಚರ್ಚೆಯ ವಸ್ತುವಾದರೆ ಅದರಿಂದ ಹೊಸ ವಿಚಾರಗಳು ಹೊಮ್ಮುತ್ತದೆ.
* ಬೆಂಗಳೂರಿನಲ್ಲಿ ಕನ್ನಡ ಮಾಲಿನ್ಯಗೊಂಡಿದೆ. ಇಲ್ಲಿ ಭಾಷೆ ಬಳಸುವಾಗ ಯಾವ ಮಾನದಂಡವೂ ಇಲ್ಲದಂತಾಗಿದೆ. ಕನ್ನಡಿಗರಲ್ಲಿ ಮೊದಲು ಭಾಷೆ ಬಗ್ಗೆ ಅಭಿಮಾನ ಇರಬೇಕು. ಆ ಅಭಿಮಾನವನ್ನು ಕನ್ನಡೇತರರಲ್ಲೂ ಬೆಳೆಸಬೇಕು.
* ಯಾವುದೇ ಸಂಸ್ಕೃತಿಯನ್ನು ಹತ್ತಿಕ್ಕುವ ಅಥವಾ ಉಪೇಕ್ಷೆ ಮಾಡುವುದು ಒಳ್ಳೆಯದಲ್ಲ. ಎಲ್ಲರೂ ಬದುಕುವಂತಹ ಸೌಹಾರ್ದಯುತ ವಾತಾವರಣಕ್ಕೆ ಪೂರಕವಾಗುವ ಸಾಹಿತ್ಯವೂ ಸೃಷ್ಟಿಯಾಗಬೇಕು. ಸರ್ಕಾರವೂ ಅದಕ್ಕೆ ಮನ್ನಣೆ ಕೊಡಬೇಕು.
* ಹಲವು ಸಂದರ್ಭದಲ್ಲಿ ರಾಜಕೀಯ ಕಾರಣಗಳಿಂದ ಕೆಲವು ಸಮಸ್ಯೆಗಳನ್ನು ಜೀವಂತವಾಗಿಡುವಂತಹ ಹುನ್ನಾರವೂ ಇದೆ. ಅದು ಒಳ್ಳೆಯದಲ್ಲ, ಅದು ರಾಷ್ಟ್ರದ ಪ್ರಗತಿಗೆ ಭಂಗ ತರುವಂತಹದ್ದು.
ವಲಸಿಗರಿಗೆ ಕನ್ನಡ ಕಲಿಯಲು ಕಾಲಮಿತಿ ಅಗತ್ಯ: ಗೊರುಚ
ಬೆಂಗಳೂರು: ‘ರಾಜ್ಯದಲ್ಲಿ ನೆಲೆಸಿರುವಂತಹ ಹೊರ ರಾಜ್ಯದವರಿಗೆ ಕನ್ನಡ ಕಲಿಸಲೇಬೇಕು. ಅವರು ಕನ್ನಡ ಕಲಿಯುವಂತೆ ಕಾಲಮಿತಿ ನಿಗದಿ ಮಾಡಬೇಕು. ಗರಿಷ್ಠ ಐದು ವರ್ಷಗಳಲ್ಲಿ ಅವರು ಕನ್ನಡ ಕಲಿಯಬೇಕು. ಈ ನಿಟ್ಟಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.
, ‘ಕನ್ನಡ ಮಾತನಾಡಬೇಕೆಂಬ ಅನಿವಾರ್ಯ ಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಬೇಕು. ಕನ್ನಡೇತರರಿಗೆ ಕನ್ನಡದ ಸತ್ವ, ಸೊಗಸು, ಕನ್ನಡ ಬಳಕೆಯಿಂದಾಗುವಂತಹ ಲಾಭದ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಡಬೇಕು. ಇದರ ಜೊತೆಗೆ, ಸಾಹಿತ್ಯದ ಮೂಲಕ ಎಲ್ಲ ಮಾಧ್ಯಮಗಳಲ್ಲಿ ಕನ್ನಡಿಗರಿಗೂ ಭಾಷೆ ಬಗ್ಗೆ ಅಭಿಮಾನ ಮೂಡಿಸಬೇಕು’ ಎಂದು ಹೇಳಿದರು.
‘ನಮ್ಮ ಮುಖ್ಯಮಂತ್ರಿಯವರು ಇತ್ತೀಚೆಗೆ ಎಲ್ಲರೂ ಕನ್ನಡ ಕಲಿಯಬೇಕು ಎಂದು ಘೋಷಿಸಿದ್ದಾರೆ. ಅದು ದೊಡ್ಡ ಪ್ರಮಾಣದಲ್ಲಾಗಬೇಕು. ಕಾಲಮಿತಿ ಹಾಕದಿದ್ದರೆ ಯಾವುದೂ ಸಾಧ್ಯವಾಗುವುದಿಲ್ಲ’ ಎಂದರು.
ಗೊರುಚ ಅವರೊಂದಿಗಿನ ಪ್ರಶ್ನೋತ್ತರ ಹೀಗಿದೆ....
- ಭಾಷೆ ಬೆಳವಣಿಗೆಗೆ ಸರ್ಕಾರ ಕೈಗೊಳ್ಳಬೇಕಾದಕ್ರಮಗಳೇನು?
ಜನರಲ್ಲಿ ಭಾಷೆ ಬಗ್ಗೆ ಅಭಿಮಾನ ಉಂಟು ಮಾಡಬೇಕಾದ ಕೆಲಸವನ್ನು ಸರ್ಕಾರ ಮಾತ್ರ ಮಾಡಿದರೆ ಸಾಲದು. ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಭಾಷೆಯನ್ನು ಉತ್ತೇಜಿಸುವಂತೆಹ ಕಾರ್ಯಕ್ರಮಗಳಿಗೇ ಆದ್ಯತೆ ನೀಡಬೇಕು. ಪೋಷಕರೊಂದಿಗೆ ಹೆಚ್ಚು ನಿಕಟ ಸಂಪರ್ಕ ಹೊಂದಿರುವ ಶಿಕ್ಷಕರು, ಭಾಷೆ ಕಲಿಯುವ ಬಗ್ಗೆ ಅರಿವು ಮೂಡಿಸಬೇಕು. ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದುವ ಮೂಲಕ ಸಾಹಿತಿಗಳೂ ಕನ್ನಡ ಭಾಷೆ ಬೆಳವಣಿಗೆಗೆ ಸಹಕಾರಿಯಾಗಬೇಕು. ಇದಕ್ಕೆಲ್ಲ ಸರ್ಕಾರ ಉತ್ತೇಜನ ನೀಡಬೇಕು. ಅದಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸಿ ಅವು ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು.
- ಸಮ್ಮೇಳನದಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆಯಾಗಬೇಕು?
ರಾಜ್ಯದ ಹಲವು ಭಾಗದ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಸಾಹಿತ್ಯಿಕ ವಿಷಯಗಳ ಜೊತೆಗೆ ಜನರ ಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚೆ ಮಾಡಬೇಕಾದ ಅಗತ್ಯವಿದೆ. ಅದರಲ್ಲೂ ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ, ಆ ವೇದಿಕೆ ಮೂಲಕ ಸಾರ್ವತ್ರಿಕ ಸಂದೇಶವನ್ನು ನೀಡಬೇಕು. ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲದಿದ್ದರೂ ತುರ್ತು ವಿಚಾರಗಳಿಗೆ ಆದ್ಯತೆ ಕೊಡಬೇಕು. ಬಹುಮುಖ್ಯವಾಗಿ ಜನರಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿರುವ, ಸಮುದಾಯದಲ್ಲಿ ಸೌಹಾರ್ದ ಮೂಡಿಸುವಂತಹ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯವಿದೆ. ಬಹುಸಂಸ್ಕೃತಿಯನ್ನು ಜನರು ಒಪ್ಪಿಕೊಳ್ಳುವಂತಹ, ಅಪ್ಪಿಕೊಳ್ಳುವಂತಹ ಕೆಲಸವಾಗಬೇಕು. ಅದು ನಿಜವಾದಂತಹ ಪ್ರಜಾಪ್ರಭುತ್ವದ ಲಕ್ಷಣ.
- ಕನ್ನಡ, ಸರ್ಕಾರದ ಮುಂದಿರುವ ಸಮಸ್ಯೆಗಳಿಗೆಪರಿಹಾರವೇನು?
ಭಾಷೆ, ಗಡಿ, ಜಲ, ವಲಸಿಗರ ಸಮಸ್ಯೆಗಳಲ್ಲಿ ಕೆಲವನ್ನು ರಾಜ್ಯ ಸರ್ಕಾರವೇ ನಿರ್ಣಯ ಮಾಡಿ ಪರಿಹರಿಸಲು ಸಾಧ್ಯವಿದೆ. ಅದಕ್ಕೆ ಬೇಕಾದ ಒತ್ತಡ ನಮ್ಮ ಜನಸಮುದಾಯ ಹಾಗೂ ಸಾಹಿತಿಗಳಿಂದಲೇ ಬರಬೇಕು. ಸಮಸ್ಯೆಯನ್ನು ಪರಿಹರಿಸುವುದು ಅಗತ್ಯ ಎಂಬುದನ್ನು ಸರ್ಕಾರಕ್ಕೆ ಅರ್ಥ ಮಾಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಒತ್ತಾಯವೇ ಅತಿಮುಖ್ಯ. ಅಂತರ ರಾಜ್ಯ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು. ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಮುಖ್ಯಸ್ಥರನ್ನು ಅಂತರ ರಾಜ್ಯ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗೆ ಮಾಡಬೇಕು ಎಂದು ಒತ್ತಡ ಹಾಕುವುದು ಜನರ ಜವಾಬ್ದಾರಿ.
ಪರಿಷತ್ ಅಧ್ಯಕ್ಷರಾಗಿದ್ದಾಗ ಮಂಡ್ಯದಲ್ಲಿ ಆಯೋಜಿಸಿದ್ದ ಸಮ್ಮೇಳನ ನೆನಪು ಹೇಳಿ?
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನವನ್ನು 1995ರಲ್ಲಿ ನಡೆಸಿದ್ದೆ. ಇದೀಗ ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಅಧ್ಯಕ್ಷನಾಗಿರುವುದು ಒಂದು ಆಕಸ್ಮಿಕ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಮಾಡಿದ ಸಂದರ್ಭದಲ್ಲಿ ಮಂಡ್ಯದ ಜನತೆ ನನಗೆ ನೀಡಿದ ಪ್ರೀತಿ, ಬೆಂಬಲ, ಸಹಕಾರವನ್ನು ನಾನು ಎಂದೆಂದಿಗೂ ಮರೆಯುವುದಿಲ್ಲ. ಬಹಳ ಅದ್ಭುತವಾದ ಆಯೋಜನೆ ಮಾಡಿದ್ದರು. ಮಂಡ್ಯದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಆಶ್ರಯ ಇದೆ. ಹೀಗಿನಂತೆ ಸರ್ಕಾರ ಆಗ ಅಷ್ಟೊಂದು ಅನುದಾನ ನೀಡುತ್ತಿರಲಿಲ್ಲ. 6 ಲಕ್ಷ 7 ಲಕ್ಷ ನೀಡುತ್ತಿತ್ತು. ಸರ್ಕಾರ ಕೊಟ್ಟ ಅನುದಾನದಲ್ಲೇ ನಾವು ಉಳಿಸಿ, ಜಿಲ್ಲಾ ಸಾಹಿತ್ಯ ಭವನಗಳನ್ನು ನಿರ್ಮಿಸಿದ್ದೆವು. ನಾನು ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದಾಗ ಎಲ್ಲೆಡೆ ಜಿಲ್ಲಾ ಭವನಗಳನ್ನು ನಿರ್ಮಿಸಲಾಯಿತು. ನನಗೆ ಅದೊಂದು ಸಮಾಧಾನದ ಸಂಗತಿ.
- ಪರಿಷತ್ ಗೆ ಅನುದಾನದ ಅಗತ್ಯವಿದೆಯೇ?
ಸರ್ಕಾರದ ಹಂಗಿಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಎಂಬುದು ನನ್ನ ಆಸೆಯಾಗಿತ್ತು. ಅದಕ್ಕಾಗಿಯೇ ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂಬ ಹಣ ಸಂಗ್ರಹ ಕಾರ್ಯಕ್ರಮ ಆರಂಭಿಸಿದ್ದೆ. ಆದರೆ ಅದು ಮುಂದುವರಿಯಲಿಲ್ಲ. ಸರ್ಕಾರ ಅನುದಾನವನ್ನು ಬೇಡ ಎಂದು ಹೇಳುವ ಅಗತ್ಯ ಇಲ್ಲ. ಅನುದಾನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಅನುದಾನ ಸದುಪಯೋಗವಾಗಬೇಕು ಎಂಬುದು ನನ್ನ ನಿರೀಕ್ಷೆ.
ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ: ಕಡ್ಡಾಯವಾಗಲಿ
‘ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. ಇದನ್ನು ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಸರ್ಕಾರ ಶಿಕ್ಷಣ ನೀತಿಯನ್ನು ರೂಪಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು. ಒಂದು ಬಾರಿ ಕಡ್ಡಾಯವಾದರೆ ಜನರೂ ಅದಕ್ಕೆ ಒಗ್ಗಿಕೊಂಡು, ಒಪ್ಪಿಕೊಂಡುಬಿಡುತ್ತಾರೆ’ ಎಂದು ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.
‘ಕನ್ನಡಕ್ಕೆ ಈಗಿನ ತೊಂದರೆ ಎಂದರೆ ಇಂಗ್ಲಿಷ್. ಪೋಷಕರಿಗೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಬೇಕೆಂಬ ಉದ್ದೇಶದಿಂದ ಜಗತ್ತಿನಲ್ಲಿ ಹೆಚ್ಚು ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್ ಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ನಾವು ಇಂಗ್ಲಿಷ್ ಕಲಿಯುವುದನ್ನು ಬೇಡ ಎನ್ನುವ ಅಗತ್ಯವಿಲ್ಲ. ಆದರೆ, ಕನ್ನಡ ಮೊದಲಾಗಬೇಕು. ಬೇರೆಬೇರೆ ವಿಷಯಗಳಿಗೆ ನೀಡಲಾಗುತ್ತಿರುವ ತರಬೇತಿಯನ್ನು ಇಂಗ್ಲಿಷ್ ಕಲಿಕೆಗೂ ನೀಡಬೇಕು. ಇಂತಹ ತರಬೇತಿ ಪ್ರಾಥಮಿಕ ಶಿಕ್ಷಣದಲ್ಲೇ ಸಿಗುತ್ತದೆ ಎಂಬ ಭರವಸೆ ಪೋಷಕರಲ್ಲಿ ಬಂದು, ಅದು ಮನದಟ್ಟಾದರೆ ಯಾರೂ ವಿರೋಧ ಮಾಡುವುದಿಲ್ಲ’ ಎಂದರು.