Shyam Benegal with a mirror of Society
A young boy throws a stone at the landlord's house. The film ends there. That is the social situation of the day. That is how Shyam Benegal subtly reveals that even if you stand up to the landlord, success is limited...
Kere Manjunath ಕೆರೆ ಮಂಜುನಾಥ್
The purpose of filmmaking is not to win awards. You can learn, act and study while making a film. It is important to know the tricks of the trade for filmmaking. I have not seen this in anyone's blood...
These are the words of director Shyam Benegal, who created a new wave in Indian cinema. Even when he received the highest award in the film industry, the Dada Saheb Phalke, the feelings of this person, who has shown social concern in his career, have not wavered. He does not hesitate to express his opinions directly.
Cinema is neither dense reality nor light entertainment. Shyam Benegal is the one who showed that it is a combination of both. His films are realistic and have a gentle romantic touch amidst the revelation of deeply troubling problems. His films attempt to hold a mirror to the problems of society. Along with this, there is also a sense of change that flows secretly.
Although it has been 25 years since India gained independence, the landlords' court was not the only one in decline. No one had the organization or courage to rise up against them. 'Ankur', filmed in 1974, based on landlordism, touched the hearts of the backward people and their situation. In the last scene of the film, a young boy throws a stone at the landlord's house. The film ends there. That was the social situation of the time. That is how Shyam Benegal sensitively revealed that even if you stand up against the landlords, success is limited.
After the British rule, there were countless families who were subjected to the atrocities of the landlords. In addition, the life of the economically weaker sections of the society is miserable. Shyam Benegal is famous for directing this touchingly. Such a film was not new to Indian cinema. Satyajit Ray had pioneered this path. But Shyam Benegal succeeded in bringing together a base for a film that reflected social concerns and those with the necessary vision to make it happen. Before directing his first film at the age of forty, his talent had already been honed to a considerable level and taken shape.
Shyam Benegal is from Karnataka. His family lived in the famous coastal town of Benegal. From there, he migrated to Hyderabad. Shyam was born on December 14, 1934, in Alawala, Secunderabad. After graduating from Osmania University, he completed his diploma from FTII, Pune. Before making the film ‘Ankur’, which created a new wave in the Indian cinema, Shyam had mastered the art of cameramanship for 18 years. Shyam was only 12 years old when he was ready to direct a film with the camera gifted by his father, who was a photographer. After that, he immersed himself in advertisements and documentaries. Before being labeled as a director who makes artistic films, Shyam Benegal had worked hard and mastered the advertising field, which was aimed at making money from a commercial perspective. However, the social concerns within him were always awake. He would express them through documentaries. He gave a new perspective to the film industry through the film ‘Ankur’. This film was praised as the second best film of the year 1975. Not only that, Shyam Benegal found a new source of money to make such a film. He taught him the secret of getting capital from the information and broadcasting departments of the central and state governments. A different and exemplary process was the production of his third film ‘Manthan’. The producers of 'Manthan', which extensively exposes the state of Gujarat's dairy industry and the families who rely on it for a living, are 5 lakh farmers from the state of Gujarat. Each farmer contributed Rs. 2 each to make this film. Not only that, they came in droves to watch the film that depicts their lives. The film was also a hit at the box office. This is not only Shyam Benegal's popularity, but also a direct testament to the way he understands the lifestyle and brings it to life on screen.
Shyam Benegal is still eager to make a new kind of film. Not only that, he is also adept at choosing artists who can bring the character of the film to life. Shabana Azmi, Naseeruddin Shah, Om Puri, Smita Patil, Kulbhushan Kharbanda and Amrish Puri have all been tamed under Shyam Benegal. This list goes on and on. ‘Surya’ is our only member. He is none other than Anant Nag, who has shown his acting skills in Kannada without fail. Anant Nag played the role of Surya, the son of a landlord, in Benegal’s first film ‘Ankur’.
A mind that always strives for individual freedom and social harmony never stops in one medium. Once its flow of ideas starts flowing, it is impossible to build a dam to it. Shyam Benegal is still an ideal in this path. Shyam Benegal, who has won the Best Director award twice, directed the serial ‘Yatra’ (1986) for Indian Railways. The serial ‘Bharat Ek Khoj’ (1988), based on Nehru’s Discovery of India, is still a memorable one. The film ‘Kaliyug’, which created the characters of the epic Mahabharata as characters of modern society, is a reflection of his activism.
A man who makes a decision about giving birth to a child does not take the woman into account at all. This is the situation of a woman in society. She has no right over her body. Such a sensitive subject is the plot of Shyam Benegal’s next film. A mirror of the heart of a director who observes society and exposes it. Shyam’s films bridged the gap between Satyajit Ray-inspired artistic films and commercial films dominated by songs and laughter. When it comes to the narration and rhythm of the film, he is Shyam Benegal’s equal.
(Article written in August 2007 (Article published 12-08-2007) on the occasion of the awarding of the highest award in Indian cinema, the Dadasaheb Phalke Award (2005), to director Shyam Benegal, who created a new wave in Indian cinema)
Personal Profile
Full Name: Shyam Benegal
Born: 14th December 1934
Hometown: Alawala, Secunderabad
Education: Graduated from Osmania University.
Career: Advertisement copywriter and director at Lintas Agency, Mumbai from 1960-66. Babasaheb Fellowship, worked in the US. Independent producer after coming to India in 1970. 1500 advertisements; 45 documentaries, 53 one-hour episodes of Bharat Ek Khoj; 21 feature films directed.
Awards: Best Director Award for 'Junoon' in 1978 and 'Kaliyug' in 1980.
Padma Shri in 1976; Padma Bhushan in 1991; Indira Gandhi Award in 2004; Dadasaheb Phalke Award in 2007
ಸಮಾಜದ ಬೆನ್ನಿಗೆ ಕನ್ನಡಿ ಹಿಡಿವ ಶ್ಯಾಮ್
ಚಿಕ್ಕ ಹುಡುಗ ಜಮೀನುದಾರನ ಮನೆಯತ್ತ ಕಲ್ಲು ತೂರುತ್ತಾನೆ. ಚಿತ್ರ ಅಲ್ಲಿಗೇ ಕೊನೆಗೊಳ್ಳುತ್ತದೆ. ಅದು ಅಂದಿನ ಸಾಮಾಜಿಕ ಪರಿಸ್ಥಿತಿ. ಜಮೀನುದಾರರ ವಿರುದ್ಧ ಸೆಟೆದು ನಿಂತರೂ ಯಶಸ್ಸು ಕ್ಷೀಣ ಎಂಬುದನ್ನು ಶ್ಯಾಮ್ ಬೆನಗಲ್ ಸೂಕ್ಷ್ಮವಾಗಿ ತೆರೆದಿಟ್ಟ ಬಗೆ ಅದು...
Kere Manjunath ಕೆರೆ ಮಂಜುನಾಥ್
ಪ್ರಶಸ್ತಿ ಪಡೆಯುವುದೇ ಚಿತ್ರ ನಿರ್ಮಾಣದ ಉದ್ದೇಶವಲ್ಲ. ಚಿತ್ರ ನಿರ್ಮಿಸುವಾಗ ಕಲಿಯಬಹುದು, ಕಾರ್ಯನಿರ್ವಹಿಸಬಹುದು ಮತ್ತು ಅಧ್ಯಯನ ಮಾಡಬಹುದು. ಚಿತ್ರ ನಿರ್ಮಾಣಕ್ಕೆ ವ್ಯಾಪಾರದ ಟ್ರಿಕ್‌ಗಳನ್ನು ಅರಿಯುವುದು ಮುಖ್ಯ. ಇದು ರಕ್ತಗತವಾಗಿರುವುದನ್ನು ನಾನು ಯಾರಲ್ಲೂ ಕಂಡಿಲ್ಲ...
ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಮಾತು ಇದು. ಚಿತ್ರರಂಗದಲ್ಲಿ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಸಂದ ಸಮಯದಲ್ಲೂ ವೃತ್ತಿಜೀವನದಲ್ಲಿ ಸಾಮಾಜಿಕ ಕಳಕಳಿಯನ್ನೇ ಮೆರೆದ ಈ ವ್ಯಕ್ತಿಯ ಭಾವನೆಗಳು ಕದಡಿಲ್ಲ. ಅಭಿಪ್ರಾಯಗಳನ್ನು ನೇರವಾಗಿಯೇ ವ್ಯಕ್ತಪಡಿಸಲು ತಡವರಿಸುವುದಿಲ್ಲ.
ಸಿನಿಮಾ ಎಂದರೆ ದಟ್ಟ ವಾಸ್ತವವೂ ಅಲ್ಲ, ಅಲ್ಪ ಮನರಂಜನೆಯೂ ಅಲ್ಲ. ಇವೆರಡರ ಸಮ್ಮಿಶ್ರಣ ಎಂಬುದನ್ನು ತೋರಿಸಿಕೊಟ್ಟವರು ಶ್ಯಾಮ್ ಬೆನಗಲ್. ಇವರ ಚಿತ್ರಗಳಲ್ಲಿ ನೈಜತೆ, ಗಾಢವಾಗಿ ಕಾಡುವ ಸಮಸ್ಯೆಗಳ ಅನಾವರಣದ ನಡುವೆ ನವಿರಾದ ರೊಮ್ಯಾಂಟಿಕ್ ಸ್ಪರ್ಶವೂ ಇವೆ. ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿವ ಪ್ರಯತ್ನ ಇವರ ಚಿತ್ರಗಳಲ್ಲಿ ಹಾಸಸು ಹೊಕ್ಕಾಗಿದೆ. ಜತೆಗೆ ಗುಪ್ತವಾಗಿ ಹರಿಯುವ ಬದಲಾವಣೆಯ ತುಡಿತವೂ ಇದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳಾಗಿದ್ದರೂ ಜಮೀನ್ದಾರರ ದರ್ಬಾರು ಮಾತ್ರ ಇಳಿಮುಖವಾಗಿರಲಿಲ್ಲ. ಅವರ ವಿರುದ್ಧ ಸಿಡಿದೇಳುವ ಸಂಘಟನೆ ಅಥವಾ ಧೈರ್ಯ ಯಾರಲ್ಲೂ ಇರಲಿಲ್ಲ. ಜಮೀನ್ದಾರಿಕೆಯನ್ನೇ ಆಧಾರವಾಗಿಟ್ಟುಕೊಂಡು 1974ರಲ್ಲಿ ಚಿತ್ರಿಸಿದ ‘ಅಂಕುರ್’ ಹಿಂದುಳಿದ ಜನ ಅನುಭವಿಸುವ ಯಾತನೆ ಹಾಗೂ ಅವರ ಪರಿಸ್ಥಿತಿಯನ್ನು ಮನಮುಟ್ಟುವಂತೆ ತೆರೆದಿಟ್ಟಿತು. ಚಿತ್ರದ ಕೊನೆಯ ದೃಶ್ಯದಲ್ಲಿ ಚಿಕ್ಕ ಹುಡುಗ ಜಮೀನುದಾರನ ಮನೆಯತ್ತ ಕಲ್ಲು ತೂರುತ್ತಾನೆ. ಚಿತ್ರ ಅಲ್ಲಿಗೇ ಕೊನೆಗೊಳ್ಳುತ್ತದೆ. ಅದು ಅಂದಿನ ಸಾಮಾಜಿಕ ಪರಿಸ್ಥಿತಿ. ಜಮೀನುದಾರರ ವಿರುದ್ಧ ಸೆಟೆದು ನಿಂತರೂ ಯಶಸ್ಸು ಕ್ಷೀಣ ಎಂಬುದನ್ನು ಶ್ಯಾಮ್ ಬೆನಗಲ್ ಸೂಕ್ಷ್ಮವಾಗಿ ತೆರೆದಿಟ್ಟ ಬಗೆ ಅದು.
ಬ್ರಿಟಿಷರ ದರ್ಪದ ನಂತರ ಜಮೀನುದಾರರ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳು ಅಸಂಖ್ಯ. ಇದರ ಜತೆಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ದುರ್ಬಲವಾದವರ ಬದುಕು ಯಾತನಮಯ. ಇದನ್ನು ಮನಮುಟ್ಟುವಂತೆ ನಿರ್ದೇಶಿಸಿದ ಖ್ಯಾತಿ ಶ್ಯಾಮ್ ಬೆನಗಲ್ ಅವರದ್ದು. ಇಂತಹ ಚಿತ್ರ ಭಾರತ ಚಿತ್ರರಂಗಕ್ಕೆ ಹೊಸದೇನೂ ಆಗಿರಲಿಲ್ಲ. ಸತ್ಯಜಿತ್ ರೇ ಈ ಹಾದಿಯಲ್ಲಿ ಮುನ್ನುಗ್ಗಿದ್ದರು. ಆದರೆ ಸಾಮಾಜಿಕ ಕಳಕಳಿ ಬಿಂಬಿಸುವ ಚಿತ್ರಕ್ಕೊಂದು ನೆಲೆ ಹಾಗೂ ಅದನ್ನು ನಿರ್ಮಿಸಲು ಅಗತ್ಯವಾದ ದೃಷ್ಟಿಕೋನವುಳ್ಳವರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ಸು ಸಾಧಿಸಿದ್ದು ಶ್ಯಾಮ್ ಬೆನಗಲ್. ತಮ್ಮ ನಲವತ್ತನೇ ವಯಸ್ಸಿನಲ್ಲಿ ಪ್ರಥಮ ಚಿತ್ರ ನಿರ್ದೇಶಿಸುವ ಮುನ್ನ ಅವರ ಪ್ರತಿಭೆ ಸಾಕಷ್ಟು ಸ್ತರದಲ್ಲಿ ಸಾಣೆ ಹಿಡಿದೇ, ಒಂದು ರೂಪ ಪಡೆದುಕೊಂಡಿದ್ದು.
ಶ್ಯಾಮ್ ಬೆನಗಲ್ ಕರ್ನಾಟಕದ ಮೂಲದವರು. ಕರಾವಳಿ ತೀರದ ಪ್ರಸಿದ್ಧ ಬೆನಗಲ್‌ನಲ್ಲಿ ಇವರ ಕುಟುಂಬ ವಾಸವಾಗಿತ್ತು. ಅಲ್ಲಿಂದ ಹೈದರಾಬಾದ್‌ಗೆ ವಲಸೆ ಹೋಯಿತು. 1934ರ ಡಿಸೆಂಬರ್ 14ರಂದು ಸಿಕಂದರಾಬಾದ್‌ನ ಅಲವಾಲಾದಲ್ಲಿ ಶ್ಯಾಮ್ ಜನಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅವರು, ಪುಣೆಯ ಎಫ್‌ಟಿಐಐನಲ್ಲಿ ಡಿಪ್ಲೊಮಾ ಪೂರೈಸಿದರು. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ‘ಅಂಕುರ್’ ಚಿತ್ರ ನಿರ್ಮಿಸುವ ಮೊದಲೇ 18 ವರ್ಷಗಳ ಕಾಲ ಕ್ಯಾಮೆರಾ ಕೈಚಳಕ ಕರಗತಗೊಂಡಿತ್ತು. ಛಾಯಾಗ್ರಾಹಕರಾಗಿದ್ದ ಅವರ ತಂದೆ ಉಡುಗೊರೆಯಾಗಿ ನೀಡಿದ ಕ್ಯಾಮೆರಾ ಹಿಡಿದು ಚಿತ್ರ ನಿರ್ದೇಶಿಸಲು ಸನ್ನದ್ಧರಾದ ಶ್ಯಾಮ್‌ಗೆ ಆಗ ಕೇವಲ 12 ವರ್ಷ. ಆನಂತರ ಜಾಹೀರಾತು ಹಾಗೂ ಸಾಕ್ಷ್ಯಚಿತ್ರಗಳಲ್ಲೇ ಮುಳುಗಿಹೋದರು.
ಕಲಾತ್ಮಕ ಚಿತ್ರ ನಿರ್ಮಿಸುವ ನಿರ್ದೇಶಕ ಎಂಬ ಹಣೆಪಟ್ಟಿ ಬರುವ ಮುನ್ನವೇ ವಾಣಿಜ್ಯ ದೃಷ್ಟಿಯಲ್ಲಿ ಹಣ ಮಾಡುವುದನ್ನೇ ಉದ್ದೇಶವಾಗಿರಿಸಿಕೊಂಡ ಜಾಹೀರಾತು ಕ್ಷೇತ್ರದಲ್ಲಿ ಶ್ಯಾಮ್ ಬೆನಗಲ್ ಶ್ರಮಿಸಿ, ಪಳಗಿಹೋಗಿದ್ದರು. ಆದರೂ ಅವರೊಳಗಿದ್ದ ಸಾಮಾಜಿಕ ಕಳಕಳಿ ಮಾತ್ರ ಎಂದೂ ಜಾಗೃತವಾಗಿತ್ತು. ಅವುಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ‘ಅಂಕುರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಹೊಸ ದೃಷ್ಟಿಕೋನ ನೀಡಿದರು. ಈ ಚಿತ್ರ 1975ರ ಸಾಲಿನ ಎರಡನೇ ಅತ್ಯುತ್ತಮ ಚಿತ್ರ ಎಂಬ ಪ್ರಶಂಸೆಗೆ ಪಾತ್ರವಾಯಿತು. ಅಷ್ಟೇ ಅಲ್ಲ, ಶ್ಯಾಮ್ ಬೆನಗಲ್ ಇಂತಹ ಚಿತ್ರವನ್ನು ನಿರ್ಮಿಸಲು ಹೊಸ ರೀತಿಯ ಹಣದ ಮೂಲವನ್ನು ಹುಡುಕಿಕೊಟ್ಟರು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಾರ್ತಾ ಪ್ರಸಾರ ಇಲಾಖೆಗಳಿಂದ ಬಂಡವಾಳ ಪಡೆಯುವ ಗುಟ್ಟನ್ನು ಹೇಳಿಕೊಟ್ಟರು. ಇದಕ್ಕಿಂತ ವಿಭಿನ್ನ ಹಾಗೂ ಮಾದರಿಯಾಗಿ ನಿಲ್ಲಬಲ್ಲ ಪ್ರಕ್ರಿಯೆ ಎಂದರೆ ಅವರ ಮೂರನೇ ಚಿತ್ರ ‘ಮಂಥನ್’ನ ನಿರ್ಮಾಣ. ಗುಜರಾತ್‌ನ ಡೇರಿ ಉದ್ಯಮ ಹಾಗೂ ಅದನ್ನೇ ನಂಬಿಕೊಂಡು ಜೀವನ ನಡೆಸುವ ಕುಟುಂಬಗಳ ಸ್ಥಿತಿಯನ್ನು ವಿಸ್ತೃತವಾಗಿ ಬಿಚ್ಚಿಡುವ ‘ಮಂಥನ್’ನ ನಿರ್ಮಾಪಕರು ಗುಜರಾತ್ ರಾಜ್ಯದ 5 ಲಕ್ಷ ರೈತರು. ಪ್ರತಿಯೊಬ್ಬ ರೈತ ತಲಾ 2 ರೂ. ಕೊಡುಗೆ ನೀಡುವ ಮೂಲಕ ಈ ಚಿತ್ರವನ್ನು ನಿರ್ಮಿಸಿದ. ಅಷ್ಟೇ ಅಲ್ಲ, ತಮ್ಮ ಜೀವನವನ್ನೇ ಬಿಂಬಿಸುವ ಚಿತ್ರವನ್ನು ನೋಡಲು ಲಾರಿಗಳಲ್ಲಿ ಗುಂಪಾಗಿ ಬಂದರು. ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಹಿಟ್ ಆಯಿತು. ಇದು ಶ್ಯಾಮ್ ಬೆನಗಲ್ ಜನಪ್ರಿಯತೆ ಅಲ್ಲಲ್ಲ, ಅವರು ಜೀವನಶೈಲಿಯನ್ನು ಅರ್ಥೈಸಿಕೊಂಡು ತೆರೆಯ ಮೇಲೆ ತೆರೆದಿಡುವ ರೀತಿಗೆ ಪ್ರತ್ಯಕ್ಷ ಸಾಕ್ಷಿ.
ಶ್ಯಾಮ್ ಬೆನಗಲ್ ಇಂದೂ ಹೊಸ ರೀತಿಯ ಚಿತ್ರವನ್ನೇ ಮಾಡಬೇಕೆಂಬ ತುಡಿತ ಉಳ್ಳವರು. ಅಷ್ಟೇ ಅಲ್ಲ, ಚಿತ್ರದ ಪಾತ್ರಕ್ಕೆ ಜೀವ ತುಂಬುವ ಕಲಾವಿದರನ್ನೇ ಆರಿಸಿಕೊಳ್ಳುವಲ್ಲಿ ಸಿದ್ಧಹಸ್ತರು. ಶಬಾನಾ ಆಜ್ಮಿ, ನಾಸಿರುದ್ದೀನ್ ಶಾ, ಓಂಪುರಿ, ಸ್ಮಿತಾ ಪಾಟೀಲ್, ಕುಲ್‌ಭೂಷಣ್ ಖರ್ಬಂದಾ ಮತ್ತು ಅಮರೀಶ್ ಪುರಿ ಅವರೆಲ್ಲ ಶ್ಯಾಮ್ ಬೆನಗಲ್ ಗರಡಿಯಲ್ಲಿ ಪಳಗಿದವರೇ. ಈ ಪಟ್ಟಿ ಮತ್ತಷ್ಟು ಉದ್ದ ಸಾಗುತ್ತದೆ. ಇದರಲ್ಲಿ ‘ಸೂರ್ಯ’ ಮಾತ್ರ ನಮ್ಮನೆಯ ಸದಸ್ಯ. ಈತ ಬೇರಾರೂ ಅಲ್ಲ, ಕನ್ನಡದಲ್ಲಿ ತಮ್ಮ ನಟನಾ ಕೌಶಲ್ಯವನ್ನು ಅಚ್ಚಳಿಯದಂತೆ ಬಿತ್ತಿರುವ ಅನಂತ್‌ನಾಗ್. ಬೆನಗಲ್ ಅವರ ಪ್ರಥಮ ಚಿತ್ರ ‘ಅಂಕುರ್’ನಲ್ಲಿ ಜಮೀನ್ದಾರನ ಪುತ್ರ ಸೂರ್ಯನ ಪಾತ್ರವನ್ನು ಅನಂತ್‌ನಾಗ್ ನಿರ್ವಹಿಸಿದ್ದಾರೆ.
ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಸಮನ್ವತೆಯ ಬಗ್ಗೆ ಎಂದೂ ತುಡಿಯುವ ಮನಸ್ಸು ಒಂದೇ ಮಾಧ್ಯಮದಲ್ಲಿ ಎಂದೂ ನಿಲ್ಲುವುದಿಲ್ಲ. ತನ್ನ ವಿಚಾರಲಹರಿ ಹರಿಯತೊಡಗಿದರೆ ಅದಕ್ಕೊಂದು ಅಣೆಕಟ್ಟೆ ಕಟ್ಟುವುದು ಅಸಾಧ್ಯ. ಈ ಹಾದಿಯಲ್ಲಿ ಶ್ಯಾಮ್ ಬೆನಗಲ್ ಇಂದಿಗೂ ಆದರ್ಶಪ್ರಾಯ. ಎರಡು ಬಾರಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದಿರುವ ಶ್ಯಾಮ್ ಬೆನಗಲ್, ಭಾರತೀಯ ರೈಲ್ವೆಗೆ ‘ಯಾತ್ರಾ’ ಧಾರಾವಾಹಿ (1986) ನಿರ್ದೇಶಿಸಿದ್ದಾರೆ. ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಆಧರಿಸಿದ ‘ಭಾರತ್ ಏಕ್ ಖೋಜ್’ (1988) ಧಾರಾವಾಹಿ ಇಂದಿಗೂ ಕಣ್ಣಲ್ಲಿನ ಚಿತ್ರಣ. ಮಹಾಕಾವ್ಯ ಮಹಾಭಾರತದ ಪಾತ್ರಗಳನ್ನೇ ಆಧುನಿಕ ಸಮಾಜದ ಪಾತ್ರಗಳನ್ನಾಗಿ ಸೃಷ್ಟಿಸಿದ ‘ಕಲಿಯುಗ್’ ಚಿತ್ರ ಅವರ ಕ್ರಿಯಾಶೀಲತೆಯ ಪ್ರತಿಬಿಂಬ.
ಮಗುವಿಗೆ ಜನ್ಮ ನೀಡುವ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪುರುಷ, ಮಹಿಳೆಯನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಇದು ಸಮಾಜದಲ್ಲಿ ಮಹಿಳೆಯ ಪರಿಸ್ಥಿತಿ. ಆಕೆಗೆ ತನ್ನ ದೇಹದ ಮೇಲೆ ಹಕ್ಕಿಲ್ಲ. ಇಂತಹ ಸೂಕ್ಷ್ಮ ವಿಷಯ ಶ್ಯಾಮ್ ಬೆನಗಲ್ ಅವರ ಮುಂದಿನ ಚಿತ್ರದ ಕಥಾವಸ್ತು. ಸಮಾಜವನ್ನು ಗಮನಿಸಿ ಅದನ್ನು ತೆರೆದಿಡುವ ನಿರ್ದೇಶಕನೊಬ್ಬನ ಹೃದಯದ ಕನ್ನಡಿ. ಸತ್ಯಜಿತ್ ರೇ ಪ್ರೇರಿತ ಕಲಾತ್ಮಕ ಚಿತ್ರಗಳು ಹಾಗೂ ಹಾಡು-ಹಸೆಯೇ ಪ್ರಧಾನವಾದ ವಾಣಿಜ್ಯ ಚಿತ್ರಗಳ ನಡುವಿನ ಕಂದಕವನ್ನು ಶ್ಯಾಮ್ ಚಿತ್ರಗಳು ಮುಚ್ಚಿದವು. ಚಿತ್ರದ ಭಾಷ್ಯ ಮತ್ತು ಛಂದಸ್ಸಿನ ವಿಷಯಕ್ಕೆ ಬಂದಾಗ ಶ್ಯಾಮ್ ಬೆನಗಲ್‌ಗೆ ಅವರೇ ಸಾಟಿ.
(ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಗೆ 2007ರ ಆಗಸ್ಟ್ ನಲ್ಲಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ (2005ನೇ ಸಾಲಿನದು) ಸಂದ ಸಮಯದಲ್ಲಿ ಬರೆದ ಲೇಖನ) (ಲೇಖನ ಪ್ರಕಟ 12-08-2007)
ವ್ಯಕ್ತಿ ವಿವರಣೆ
ಪೂರ್ಣ ಹೆಸರು: ಶ್ಯಾಮ್ ಬೆನಗಲ್
ಜನನ: 14ನೇ ಡಿಸೆಂಬರ್ 1934
ಹುಟ್ಟೂರು: ಅಲವಾಲಾ, ಸಿಕಂದರಾಬಾದ್
ಶಿಕ್ಷಣ: ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ.
ವೃತ್ತಿ ಜೀವನ: 1960-66ರವರೆಗೆ ಮುಂಬಯಿಯ ಲಿಂಟಾಸ್ ಏಜೆನ್ಸಿಯಲ್ಲಿ ಜಾಹೀರಾತು ಕಾಪಿರೈಟರ್ ಮತ್ತು ನಿರ್ದೇಶಕ. ಬಾಬಾ ಸಾಹೇಬ್ ಫೆಲೊಶಿಪ್, ಅಮೆರಿಕದಲ್ಲಿ ಕೆಲಸ. 1970ರಲ್ಲಿ ಭಾರತಕ್ಕೆ ಬಂದ ಮೇಲೆ ಸ್ವಾತಂತ್ರ್ಯ ನಿರ್ಮಾಪಕ. 1500 ಜಾಹೀರಾತು; 45 ಸಾಕ್ಷ್ಯಚಿತ್ರ, ಭಾರತ್ ಏಕ್ ಖೋಜ್ ತಲಾ ಒಂದು ಗಂಟೆಯ 53 ಕಂತು; 21 ಚಲನಚಿತ್ರ ನಿರ್ದೇಶನ.
ಪ್ರಶಸ್ತಿ: 1978ರಲ್ಲಿ ‘ಜುನೂನ್’ ಹಾಗೂ 1980ರಲ್ಲಿ ‘ಕಲಿಯುಗ್’ಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ.
1976ರಲ್ಲಿ ಪದ್ಮಶ್ರೀ; 1991ರಲ್ಲಿ ಪದ್ಮಭೂಷಣ; 2004ರಲ್ಲಿ ಇಂದಿರಾ ಗಾಂಧಿ ಪ್ರಶಸಿ; 2007- ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ