Friday, May 8, 2009

ಕಲ್ಯಾಣಿ ಟಿವಿಯಲ್ಲಿ ‘ಕೆರೆ ಕರಗುವ ಸಮಯ’

ಆತ್ಮೀಯರೇ,
ಪರಿಸರದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ನೀಡಬೇಕೆಂದು ಕಲ್ಯಾಣಿ ಟಿವಿ ಪ್ರತಿನಿಧಿ ನನ್ನನ್ನು ಕೇಳಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೆರೆಯ ಬಗ್ಗೆ ಮಾತನಾಡಿ ಎಂದಾಗ, ಒಂದಷ್ಟು ಮಾಹಿತಿಯನ್ನು ಟಿವಿ ವೀಕ್ಷಕರೊಂದಿಗೆ ಹಂಚಿಕೊಳ್ಳಬೇಕೆಂಬ ದೃಷ್ಟಿಯಿಂದ ಸಮ್ಮತಿಸಿದ್ದೇನೆ. ಕೆರೆಗಳ ಪರಿಸರ ಹಾಗೂ ಅದರ ರಕ್ಷಣೆ ಬಗ್ಗೆ ಮಾತನಾಡಲಿದ್ದೇನೆ. ಕಲ್ಯಾಣಿ ಟಿವಿಯಲ್ಲಿ ಭಾನುವಾರ ಮೇ 10ರಂದು ಸಂಜೆ 7ರಿಂದ 8 ಗಂಟೆವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಬೆಂಗಳೂರಿನ ಎಲ್ಲ ಭಾಗದಲ್ಲೂ ಈ ಟಿವಿ ಪ್ರಸಾರ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಬಹುತೇಕ ಭಾಗದಲ್ಲಿ ಈ ಟಿವಿ ಪ್ರಸಾರ ಆಗಲಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ನಿಮ್ಮ ಮನೆಯಲ್ಲಿ ಪ್ರಸಾರವಾದರೆ ದಯವಿಟ್ಟು ವೀಕ್ಷಿಸಿ, ಒಂದು ಪ್ರತ್ಯುತ್ತರ ನೀಡಿ. ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ...
ಪ್ರೀತಿಯಿಂದ
ಕೆರೆ ಮಂಜು

1 comment:

  1. ಅಭಿನಂದನೆಗಳು ಮಂಜುನಾಥ್ ಅವರೆ

    ಇದೇ ಮೇ ೨೯.೦೫.೦೯ ರ ರಾತ್ರಿ ಥಟ್ ಅಂತ ಹೇಳಿಯಲ್ಲಿ ಕೆರೆ ಕರಗುವ ಸಮಯದ ಪುಸ್ತಕ ಪರಿಚಯವಿದೆ. ಇದೇ ಕಾರ್ಯಕ್ರಮ ಮರುದಿನ ೧೧.೦೫ಕ್ಕೆ ಮರುಪ್ರಸಾರವಾಗಲಿದೆ.....

    ರಾವ್ ಬಹಾದೂರ್ ಎಲೆ ಮಲ್ಲಪ್ಪ ಶೆಟ್ಟರು ಎನ್ನುವ ಕಿರು ಪುಸ್ತಕವನ್ನು ಅವರ ವಂಶಸ್ಥರಾದ ಶ್ರೀಮತಿ ಜಯಾ ರಾಜಶೇಖರ್ ಅವರು ಬರೆದಿದ್ದಾರೆ. ಅದರಲ್ಲಿ ಅವರು ಕೆರೆಯನ್ನು ಏಕೆ ಕಟ್ಟಿದರು, ಹೇಗೆ ಕಟ್ಟಿದರು, ಅದು ಹೇಗೆ ಬೆಂಗಳೂರು ನಗರದ ಜನರಿಗೆ ಜೀವದಾನ ನೀಡಿತು ಎಂಬುದನ್ನು ಸೊಗಸಾಗಿ ಬರೆದಿದ್ದಾರೆ. ದಯವಿಟ್ಟು ಅದನ್ನು ಒಮ್ಮೆ ಓದಿ. ಆ ಕಥೆಯ ಹಿನ್ನೆಲ್ಯಲ್ಲಿ ಇಂದಿನ ಎಲೆಮ್ಮಲ್ಲಪ್ಪ ಕೆರೆಯ ಕಥೆಯನ್ನು ಸೊಗಸಾಗಿ ಪುನಾರಚಿಸಬಹುದು.

    ಪ್ರಕಾಶಕರು: ಸಿರಿ ಪ್ರಕಾಶನ, ೩೩-೧೫ನೆಯ ಅಡ್ಡರಸ್ತೆ, ೩ನೇ ಬ್ಲಾಕ್, ಜಯನಗರ, ಬೆಂಗಳೂರು-೫೬೦೦೧೧. ದೂರವಾಣಿ: ೨೬೫೪ ೮೪೨೪.

    -ನಾಸೋ

    ReplyDelete