Wednesday, August 5, 2009

ಪ್ರಕೃತಿ- ‘ಕೆರೆ ಕರಗುವ ಸಮಯ’ ಬಿಡುಗಡೆ

ಆತ್ಮೀಯ ಸ್ನೇಹಿತರೆ,
ಉದ್ಯಾನವನಗಳಲ್ಲಿ ಪರಿಸರ ಕಾರ್ಯಕ್ರಮ, ಗಿಡ ನೆಡುವುದು, ಸಂಗೀತ ಕಾರ್ಯಕ್ರಮ ನಡೆಯುತ್ತಿರುತ್ತವೆ. ಹಸಿರು ಪರಿಸರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸುವ ಸಾಹಸಕ್ಕೆ ಕೈಹಾಕಿದ್ದೇನೆ. ನಿಮ್ಮೆಲ್ಲರ ಅಭಿಮಾನ ನನ್ನ ಮೇಲಿದೆ ಎಂಬ ನಂಬಿಕೆ ನನ್ನದು. ನಿಮ್ಮ ಆಗಮನವನ್ನು ಆಕಾಂಕ್ಷಿತ ಕಣ್ಣುಗಳ ಕಾತರತೆಯೊಂದಿಗೆ ನಿರೀಕ್ಷಿಸುತ್ತೇನೆ.... ದಯಮಾಡಿ ಬನ್ನಿ.
ಕೆರೆ ಕರಗುವ ಸಮಯ-ಪುಸ್ತಕದ ಪರಿಷ್ಕೃತ ಆವೃತ್ತಿ ತಯಾರಾಗಿದೆ. ಈ ಭಾನುವಾರ ಅಂದರೆ ಆಗಸ್ಟ್‌ 9ರಂದು ಬೆಳಗ್ಗೆ 10.30ಕ್ಕೆ ಬಸವನಗುಡಿಯ ಬ್ಯೂಗಲ್‌ ರಾಕ್‌ (ಕಹಳೆ ಬಂಡೆ) ಉದ್ಯಾನವನದಲ್ಲಿ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದೇನೆ. ಗ್ರಾಮೀಣಾಭಿವೃದ್ಧಿ ಸಚಿವರಾದ ಶೋಭಾ ಕರಂದ್ಲಾಜೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಜಯ ಕರ್ನಾಟಕದ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್‌, ಹಿರಿಯ ಸಂಗೀತ ನಿರ್ದೇಶಕ, ಖ್ಯಾತ ಗಾಯಕರಾದ ಡಾ. ಸಿ. ಅಶ್ವತ್ಥ್‌, ಚಲನಚಿತ್ರ ನಿರ್ದೇಶಕ-ನಟ ಶ್ರೀ ರಮೇಶ್‌ ಅರವಿಂದ್‌, ನೆನಪಿರಲಿ ಖ್ಯಾತಿಯ ನಟ ಪ್ರೇಮ್‌ ಭಾಗವಹಿಸಲಿದ್ದಾರೆ. ಅಲ್ಲದೆ, ಖ್ಯಾತ ಗಾಯಕರಾದ ಡಾ. ಶಿವಮೊಗ್ಗ ಸುಬ್ಬಣ್ಣ, ಶ್ರೀಮತಿ ಬಿ.ಕೆ. ಸುಮಿತ್ರಾ ಹಾಗೂ ಆದರ್ಶ ಸುಗಮ ಸಂಗೀತ ಅಕಾಡೆಮಿಯ ಕಲಾವಿದರ ಸುಗಮ ಸಂಗೀತ ಕಾರ್ಯಕ್ರಮವನ್ನೂ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಇದರ ಬಗ್ಗೆ ಸಂಪೂರ್ಣ ವಿವರದ ಆಮಂತ್ರಣ ಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ದಯವಿಟ್ಟು ನೀವೆಲ್ಲ ಬನ್ನಿ.
ಇಂತಿ ನಿಮ್ಮವ
ಕೆರೆ ಮಂಜು

4 comments:

  1. Congratulations and wishing you all the very best for the book release.

    regards
    Brian Ammanna
    PR Consultant

    ReplyDelete
  2. ಕೊನೆಗೂ ಒಂದು ಪ್ರಯತ್ನ ಕೈಗೂಡಿದೆ. ಸ್ವಂತ ಪ್ರಕಾಶನದ ಅಡಿ ಕೃತಿ ಹೊರ ಬಂದಿದೆ. ಇದು ನಿಜಕ್ಕೂ ಉತ್ತಮ ಸಂಗತಿ. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಯಕ್ರಮಕ್ಕೆ ಸಂಗೀತದ ರಂಗು ಸಿಕ್ಕಿದ್ದು. ಇದೊಂದು ಕಾರ್ಯಕ್ರಮ ಯಾರೊಬ್ಬರೂ, ತಪ್ಪಿಸಿಕೊಳ್ಳಲಾರದ್ದು ಅನ್ನುವುದು ನನ್ನ ಭಾವನೆ. ಜತೆಗೆ ಭಾನುವಾರ ಸಹ ಇದೆ. ಗಣ್ಯರ ಉಪಸ್ಥಿತಿಯಲ್ಲಿ ಅಂದು ಕಾರ್ಯಕ್ರಮ ಕಳೆ ಕಟ್ಟಲಿದೆ. ಹಲವು ಹೊಸತನಗಳಿಗೆ ಈ ಕಾರ್ಯಕ್ರಮ ನಾಂದಿಯಾಗಲಿ. ನಿಮ್ಮ ಪ್ರಯತ್ನ ಯಶ ಕಾಣಲಿ. ಹೊಸತನಕ್ಕೆ ಮುಂದಾಗಿರುವು ನಿಮಗೆ ಯಶಸ್ಸು ಸದಾ ಬೆನ್ನಿಗಿರಲಿ ಎಂದು ಆಶಿಸುವ...
    ಮಹೇಶ್‌ ಹೆಗಡೆ.

    ReplyDelete
  3. HELLO MANJU,
    I WISH U A GRAND SUCCESS FOR ALL YOUR ENDEAVOURS. I CAN'T MAKE A PHYSICAL PRESENCE IN YOUR PROGRAMME, BUT MY HEARTFELT WISHES ARE WITH YOU. THE WORK ABOUT DWINDLING TANKS IS INDEED COMMENDABLE. HATS OFF...

    ReplyDelete
  4. ಅಭಿನಂದನೆಗಳು...

    ಒಳ್ಳೆಯ ಕೆಲಸ...
    ಖಂಡಿತ ಬರುವೆವು...

    ಶುಭವಾಗಲಿ...

    ReplyDelete