ಆತ್ಮೀಯ ಸ್ನೇಹಿತರೆ,
'ಕೆರೆ ಕರಗುವ ಸಮಯ'- ಬೆಂಗಳೂರಿನ ನೂರಾರು ಕೆರೆಗಳ ಸಮಗ್ರ ಚಿತ್ರಣ ನೀಡುವ ಪುಸ್ತಕದ ಹೆಸರು. ಈ ಪುಸ್ತಕವನ್ನು ಮುದ್ರಿಸಿದ ಉದ್ದೇಶ: ಜನಸಾಮಾನ್ಯರಿಗೆ ನಮ್ಮ ಜಲಸಂಸ್ಕೃತಿಯ ಅವನತಿಯ ಬಗ್ಗೆ ಮಾಹಿತಿ ನೀಡುವುದು ಹಾಗೂ ತಮ್ಮತನ ಕಳೆದುಕೊಳ್ಳುತ್ತಿರುವ ಬಗ್ಗೆ ಎಚ್ಚರಿಸುವುದು. ಜತೆಗೆ, ಅದರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದೇ ಆಗಿತ್ತು. ಆದರೆ, 'ಕೆರೆ ಕರಗುವ ಸಮಯ' ಪುಸ್ತಕದ ಮೊದಲ ಮುದ್ರಣ ಅದ್ಧೂರಿತನದಿಂದ ಕೂಡಿತ್ತೇ ವಿನಹ, ಜನಸಾಮಾನ್ಯರ ಕೈಗೆಟುಕುವಲ್ಲಿ ವಿಫಲವಾಯಿತು.
ಪುಸ್ತಕ ನಿರೀಕ್ಷಿತ ಗುಣಮಟ್ಟದಲ್ಲಿ ಹೊರಬಂದಿತಾದರೂ, ನಾಗರಿಕರಿಗೆ ತಲುಪಲಿಲ್ಲ. ಐದು ನೂರು ರೂಪಾಯಿ ಕೊಟ್ಟು ಖರೀದಿಸುವುದು ಸಾಮಾನ್ಯ ಮಾತಲ್ಲ. ಆದರೂ ಅಗತ್ಯ ಮಾಹಿತಿ ಪಡೆಯಲು ಅಷ್ಟೂ ಹಣವನ್ನು ಕೊಟ್ಟು ಖರೀದಿಸುತ್ತೇನೆ ಎಂಬವರಿಗೆ ಪುಸ್ತಕ ಸಿಗುತ್ತಿರಲಿಲ್ಲ. ದಿನಕ್ಕೆ ಕನಿಷ್ಠವೆಂದರೂ ಮೂರು ಜನ ಪುಸ್ತಕದ ಲಭ್ಯತೆ ಬಗ್ಗೆ ನನಗೆ ಕರೆ ಮಾಡುತ್ತಿದ್ದರು. ಅಲ್ಲಿ ಸಿಗುತ್ತೆ, ಇಲ್ಲಿ ಸಿಗುತ್ತೆ ಎಂದು ಹೇಳುತ್ತಿದ್ದೆ. ಮತ್ತೆ ಅವರು ಕರೆ ಮಾಡಿ ಅಲ್ಲಿಲ್ಲ ಸರ್ ಎನ್ನುತ್ತಿದ್ದರು. ಮೂರ್‍ನಾಲ್ಕು ತಿಂಗಳು ಇದೇ ಮಾತುಗಳನ್ನು ನಾನು ಕೇಳುತ್ತಿದ್ದೆ. ಕಡೆಗೆ ನನ್ನ ಅಭಿಮಾನಿ ಓದುಗರು, ಸ್ನೇಹಿತರು ಪುಸ್ತಕ ದುಬಾರಿ ಆಯಿತು. ಜತೆಗೆ ಎಲ್ಲೂ ಸಿಗುತ್ತಿಲ್ಲ. ನಾಗರಿಕರಿಗೆ ತಲುಪುವ ಉದ್ದೇಶ ನಮ್ಮದಾಗಿರುವುದರಿಂದ ಅದನ್ನು ಮರುಮುದ್ರಿಸುವ ಬಗ್ಗೆ ಆಲೋಚಿಸು. ಬೆಲೆ ಕಡಿಮೆ ಇರಲಿ, ಎಲ್ಲೆಡೆ ಸಿಗುವಂತಾಗಲಿ ಎಂದರು.
ಇಂತಹ ಆಲೋಚನೆಯನ್ನು ನನ್ನ ಮಾರ್ಗದರ್ಶಕರಾದ ಶ್ರೀ ವಿಶ್ವೇಶ್ವರ ಭಟ್ ಅವರ ಮುಂದೆ ಹೇಳಿಕೊಂಡೆ. 'ಇಂಥಾ ಆಲೋಚನೆ ಮೊದಲೇ ಮಾಡಬೇಕಿತ್ತು. ಪ್ರಥಮವಾಗಿಯೇ ನೀವೇ ಮುದ್ರಿಸಬೇಕಿತ್ತು. ಅದ್ಯಾರಿಗೋ ಕೊಟ್ಟು ಇಂಥಾ ಪರಿಸ್ಥಿತಿಗೆ ನಿಮ್ಮನ್ನು ನೀವೇ ತಳ್ಳಿಕೊಂಡಿರಿ. ಹೋಗಲಿ ಬಿಡಿ, ಆದದ್ದೆಲ್ಲ ಒಳ್ಳೆಯದ್ದಕ್ಕೇ. ಬೇಗ ಪರಿಷ್ಕೃತ ಆವೃತಿ ಮುದ್ರಿಸಿ, ಜನರಿಗೆ, ಓದುಗರಿಗೆ ತಲುಪುವಂತೆ ಮಾಡಿ' ಎಂದು ಕೂಡಲೇ ಆದೇಶಿಸಿದ್ದರು. ಮತ್ತಿನ್ನೇನು, ಕೆಲಸ ಆರಂಭವಾಯಿತು.
ಪ್ರಕೃತಿ ಪ್ರಕಾಶನ... ಇಂತಹದ್ದೊಂದು ಸೃಷ್ಟಿ ಆಗುತ್ತದೆ ಎಂದು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ. ಅದೂ 'ಕೆರೆ ಕರಗುವ ಸಮಯ' ಪ್ರಕಟಿಸಲೆಂದೇ 'ಪ್ರಕೃತಿ' ಹುಟ್ಟಿಕೊಳ್ಳುತ್ತದೆ ಎಂಬುದು ಕನಸಿನಲ್ಲೂ ಕಂಡಿರಲಿಲ್ಲ. ಆದರೆ, ಪ್ರಕೃತಿ ಎಂಬ ಹೆಸರು ನನ್ನಲ್ಲಿ ಬಹಳ ದಿನಗಳಿಂದಲೇ ಆವರಿಸಿತ್ತು. ಪ್ರಕಾಶನಕ್ಕೊಂದು ಹೆಸರು ಸೂಚಿಸಬೇಕೆಂದಾಗ, ಹಿಂದೆ-ಮುಂದೆ ನೋಡದೆ 'ಪ್ರಕೃತಿ' ಅನಾವರಣಗೊಂಡಿತು. 'ಕೆರೆ ಕರಗುವ ಸಮಯ' ಪರಿಷ್ಕೃತಗೊಂಡು ನಿಮ್ಮ ಮುಂದಿದೆ. ಸ್ವೀಕರಿಸಿ...
ಆರ್. ಮಂಜುನಾಥ್

No comments:
Post a Comment