ಸಂಪ್ರದಾಯದ ಆಚರಣೆ; ವಾತಾವರಣದ ಆಲಂಗನೆ
ಆನೆಯ ಮುಖದ ಗಣಪ, ಪ್ರಕೃತಿಯ ಸಂಕೇತ. ಮಣ್ಣಿನಿಂದ ಮೂರ್ತಿಯನ್ನು ನಿರ್ಮಿಸಿ ಪೂಜಿಸಲಾಗುತ್ತದೆ. ವಿಸರ್ಜನೆ ಪ್ರಕ್ರಿಯೆ ಮೂಲಕ ಅದನ್ನು ಮತ್ತೆ ನಿಸರ್ಗಕ್ಕೆ ವಾಪಸ್ಸು ನೀಡಲಾಗುತ್ತದೆ. ಈ ಪರಿಕಲ್ಪನೆ ಪರಿಸರಕ್ಕೆ ಮನುಷ್ಯನಿಂದ ನಿಷ್ಠನಾಗಿರಬೇಕೆಂಬ ಪಾಠ. ಆದರೆ, ಜೀವನಶೈಲಿ ಹೊಸ ಸ್ತರಕ್ಕೆ ತಲುಪುತ್ತಿರುವಂತೆಯೇ, ಕೃತಕ, ಹಾನಿಕಾರಕ ಅಂಶಗಳ ಬಳಕೆ ಹೆಚ್ಚಾಗಿ, ಪ್ರಕೃತಿಗೆ ಆಘಾತ ನೀಡುತ್ತಿದ್ದಾನೆ ಮನುಷ್ಯ.A celebration of tradition; Atmospheric friendly...
ಜೇಡಿ ಮಣ್ಣು ಅಥವಾ ಮೃದುಮಣ್ಣಿನಿಂದ ತಯಾರಿಸಿರುವ ಗಣಪ ಮೂರ್ತಿ ಖರೀದಿ ಹಾಗೂ ಪೂಜಿಸುವುದು ಒಳಿತು. ಇಂತಹ ಮೂರ್ತಿಗಳ ವಿಸರ್ಜನೆಯಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ. ಪರಿಸರದಿಂದಲೇ ತೆಗೆದುಕೊಂಡ ಮಣ್ಣನ್ನು, ವಿಸರ್ಜನೆ ರೂಪದಲ್ಲಿ ಮರಳಿ ಅದಕ್ಕೇ ನೀಡಿದಂತಾಗುತ್ತದೆ. ಪರಿಸರವನ್ನು ಸ್ವಚ್ಛವಾಗಿಸಿಕೊಳ್ಳುವ ಪ್ರಯತ್ನ ಎಲ್ಲರದ್ದಾಗಬೇಕು.
ನೈಸರ್ಗಿಕ ಬಣ್ಣ ಇರಲಿ
ಗಣಪನ ಮೂರ್ತಿ ಮಣ್ಣಿನ ಬಣ್ಣದಲ್ಲಿದ್ದರೆ, ಅದನ್ನು ಸಿಂಗಾರದ ಮೂಲಕ ಹೆಚ್ಚಿನ ಮೆರುಗು ನೀಡಬಹುದು. ಬಣ್ಣ ಬೇಕೇಬೇಕು ಎಂಬಂತಾದರೆ, ನೈಸರ್ಗಿಕ ಬಣ್ಣಗಳನ್ನು ಬಳಸಬಹುದು. ಈ ರೀತಿಯ ಗಣಪತಿ ಮೂರ್ತಿಗಳು ನಗರದ ಹಲವು ಭಾಗಗಳಲ್ಲಿ ಲಭ್ಯವಾಗುತ್ತದೆ. ಆದ್ದರಿಂದ, ಪರಿಸರ ಸ್ನೇಹಿ ಬಣ್ಣಗಳಿರುವ ಮೂರ್ತಿಗಳನ್ನು ಪೂಜಿಸಿ ಆರಾಧಿಸಬಹುದು.ಖರೀದಿದಾರರು ಪರಿಸರ ಸ್ನೇಹಿ ಅಥವಾ ಮಣ್ಣಿನ ಗಣಪನ ಮೂರ್ತಿಯಲ್ಲಿ ಆಸಕ್ತಿ ತೋರಿದರೆ, ಮಾರಾಟಗಾರರೂ ಪರಿಸರಸ್ನೇಹಿ ಮೂರ್ತಿಗಳಿಗೇ ಹೆಚ್ಚನ ಪ್ರಾಮುಖ್ಯ ತೋರುತ್ತಾರೆ. ಮಕ್ಕಳು ರಚ್ಚೆ ಹಿಡಿಯುತ್ತಾರೆ ಎಂದು ಬಣ್ಣದ ಗಣಪನನ್ನು ಕೊಳ್ಳುವವರಿದ್ದಾರೆ. ಅವರಿಗೆ ತಿಳಿ ಹೇಳಿ, ಪರಿಸರದ ಪ್ರಜ್ಞೆ ಮೂಡಿಸಿದರೆ, ಮಾಲಿನ್ಯರಹಿತ ಪರಿಸರವನ್ನು ನಿರ್ಮಿಸುವ ಭವಿಷ್ಯದ ಪ್ರಜೆಯನ್ನು ನಾವು ತಯಾರು ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು.
ಜಾಗೃತಿಗೆ ಆಂದೋಲನ
ಪರಿಸ್ನೇಹಿ ಗಣಪನನ್ನೇ ಪೂಜಿಸಿ. ಕೃತಕ ಬಣ್ಣದ ಮೂರ್ತಿಗಳ ಬಳಕೆ ಬೇಡ. ಇದರಿಂದ ಪರಿಸರಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ ಎಂದು ಸಾರಲು ಪರಿಸರಗಣಪತಿ.ನೆಟ್ ಎಂಬ ವೆಬ್‌ಸೈಟ್ ಅನಾವರಣಗೊಂಡಿದೆ. ಜನರಿಗೆ ಪರಿಸರ ಗಣಪತಿಯ ಅರಿವು ನೀಡುವ ಜತೆಗೆ, ಪರಿಸರಸ್ನೇಹಿ ಗಣಪನ ಮೂರ್ತಿಗಳು ಎಲ್ಲಿ ಸಿಗುತ್ತವೆ ಎಂಬ ಮಾಹಿತಿಯನ್ನೂ ಇದು ನೀಡುತ್ತದೆ. ಜತೆಗೆ, ಧಾರ್ಮಿಕ ಆಚರಣೆ ಹಾಗೂ ಪರಿಸರ ರಕ್ಷಣೆಯ ಬಗ್ಗೆ ಪ್ರಮುಖ ಸ್ವಾಮೀಜಿಗಳ ಅಭಿಪ್ರಾಯವನ್ನು ನೀಡಿದೆ. (ಇದರ ಕೆಲವು ಅಂಶಗಳು ಇಲ್ಲಿ ಪ್ರಕಟಿಸಲಾಗಿದೆ). ಕೃತಕ ಬಣ್ಣದ ಗಣಪನ ಮೂರ್ತಿಗಳಿಂದ ಪರಿಸರದ ಮೇಲೆ ಉಂಟಾಗುವ ಸವಿವರಗಳೂ ಈ ವೆಬ್‌ಸೈಟ್‌ನಲ್ಲಿವೆ.ಧಾರ್ಮಿಕ ಆಚರಣೆ
ಪಾರ್ವತಿಸುತ ಗಣೇಶನ ಹುಟ್ಟು ಹಾಗೂ ಆತನ ಮರುಜನ್ಮದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆನೆಯ ಮುಖದಿಂದ ಮತ್ತೆ ಪ್ರಾಣ ಪಡೆದ ಗಣಪನಿಗೆ ಈಶ್ವರ ಅಗ್ರಪೂಜೆಯ ವರವನ್ನೂ ಪ್ರಸಾದಿಸಿದ. ಇಂತಹ ಗಣಪನನ್ನು ಆದಿಕಾಲದಿಂದಲೂ ಪೂಜಿಸುತ್ತಿದ್ದೇವೆ. ಗಣಪನನ್ನು ನಿಸರ್ಗಪ್ರಿಯ, ಪ್ರಾಣಿಕುಲದ ಸಂರಕ್ಷಕ ಎಂದೇ ಋಷಿಮುನಿಗಳು ಭಾವಿಸಿ, ಆರಾಧಿಸುತ್ತಿದ್ದರು. ಅದಕ್ಕೇ, ಹೊಂಡ, ಕೆರೆಯ ದಡದಲ್ಲಿ ಸಿಗುವ ಜೇಡಿ ಮಣ್ಣು ಅಥವಾ ಮೃದುವಾಗಿರುವ ಮಣ್ಣಿನಲ್ಲಿ ಗಣೇಶನ ಮೂರ್ತಿ ತಯಾರಿಸಿ, ಪೂಜೆ ಸಲ್ಲಿಸುತ್ತಿದ್ದರು.ಕೆರೆಯಿಂದ ಮಣ್ಣನ್ನು ತೆಗದು, ಮೂರ್ತಿ ಮಾಡಿ, ಪೂಜಿಸಿ, ಮತ್ತೆ ಕೆರೆಗೇ ಆ ಮೂರ್ತಿಯನ್ನು ಬಿಡುವ ಪರಿಕಲ್ಪನೆ ಪ್ರಕೃತಿ ಪೂಜೆಯೇ ಆಗಿತ್ತು. ಅದಕ್ಕೇ ಯಾವುದೇ ಕೃತಕವಾದದ್ದು ಸೇರಿಸುತ್ತಿರಲಿಲ್ಲ. ಬಣ್ಣವೂ ಇರಲಿಲ್ಲ. ಕೇವಲ ಮಣ್ಣಿನಿಂದ ತಯಾರಿಸಿದ ಗಣಪನ ಮೂರ್ತಿಯೇ ಪೂಜೆಗೆ ಶ್ರೇಷ್ಠ ಎಂಬುದು ನಮ್ಮ ಆಚರಣೆಗಳಿಂದ ತಿಳಿದುಬರುತ್ತದೆ.
ಅದೆಷ್ಟೇ ದೊಡ್ಡ ಗಣಪ ಮೂರ್ತಿಯನ್ನು ಕೂರಿಸಲಿ ಪೂಜಿಸಲಿ. ತಾಮ್ರ, ಬೆಳ್ಳಿ, ಚಿನ್ನದಲ್ಲಾದರೂ ಗಣಪನ ಮೂರ್ತಿ ಇರಲಿ. ಇವೆಲ್ಲದಕ್ಕೆ ಮುಂಚೆ ಸಗಣಿಯಲ್ಲಿ ಮಾಡಿದ, ಗರಿಕೆಯಿಂದ ಕೂಡಿದ ಗಣಪನಿಗೆ ಪೂಜೆ ಆಗಲೇಬೇಕು. ಇದನ್ನು ಪಿಲ್ಲಾರಿ ಗಣಪನೆಂದೂ ಕರೆಯಲಾಗುತ್ತದೆ. ಈ ಗಣಪನಿಗೆ ಪೂಜೆ ಸಲ್ಲಿಸಿದರೆ ಮಾತ್ರ, ಪೂಜೆ ಸಾರ್ಥಕ್ಯವಾದಂತೆ.
ಸಗಣಿ ತಾಯಿ ಸ್ವರ್ಣಗೌರಿಯಂತೆ. ಲೋಕದಲ್ಲಿ ಅತ್ಯಂತ ಪವಿತ್ರದ್ದು ಸಗಣಿ. ಇದರಲ್ಲಿ ಗರಿಕೆಯನ್ನು ಇಟ್ಟು ಗಣಪನ ಮೂರ್ತಿ ರಚಿಸಲಾಗುತ್ತದೆ. ಗರಿಕೆ ಅಂದರೆ ಹುಲ್ಲು ಆನೆಗೆ ಅತ್ಯಂತ ಇಷ್ಟವಾದ ಆಹಾರ. ಅಂದರೆ, ತಾಯಿ ಹಾಗೂ ಮುಖವಾಗಿರುವ ಆನೆ ಆಹಾರದೊಂದಿಗೆ ಪಿಲ್ಲಾರಿ ಗಣಪನ ರಚನೆ ಅರ್ಥಪೂರ್ಣವಾದದ್ದು. ಅದಕ್ಕೇ ಇದು ಶ್ರೇಷ್ಠ. ಎಲ್ಲ ಪೂಜೆಗಳಲ್ಲಿ ಅಗ್ರಪೂಜೆ ಆಗುವುದು ಪಿಲ್ಲಾರಿ ಗಣಪನಿಗೇ. ಕೆಲ ಭಾಗದಲ್ಲಿ ಅಕ್ಷತೆ ಹಾಗೂ ಜೇಡಿ ಮಣ್ಣಿನಲ್ಲೂ ಗಣಪನನ್ನು ರಚಿಸಿ ಪೂಜಿಸಲಾಗುತ್ತದೆ.
ಗಣಪನಿಗೆ ಪರಿಸರವೆಂದರೆ ಎಷ್ಟು ಪ್ರೇಮ ಎಂಬುದು ಈ ಆಚರಣೆಗಳಿಂದಲೇ ತಿಳಿದು ಬರುತ್ತದೆ. ಆದ್ದರಿಂದ, ಕೃತಕ ಬಣ್ಣಗಳು ಹಾಗೂ ವಿಷಕಾರಕ ಅಂಶಗಳ ಗಣಪನ ಮೂರ್ತಿಯನ್ನು ತ್ಯಜಿಸುವುದು ಸೂಕ್ತ.
ಸ್ವಾಮೀಜಿಗಳು ಏನು ಹೇಳುತ್ತಾರೆ?
ಗಣಪತಿಯ ಪೂಜೆಯನ್ನು ಧಾರ್ಮಿಕವಾಗಿ ಹೆಚ್ಚಿನ ಕಾಳಜಿಯಿಂದ ನಿರ್ವಹಿಸಬೇಕು. ಮೂರ್ತಿಗಳನ್ನು ಶುದ್ಧ ನೀರಿನಲ್ಲಿ ವಿಸರ್ಜಿಸಬೇಕು. ಮಾಲಿನ್ಯ ಉಂಟು ಮಾಡುವ ಪೈಂಟ್‌ಗಳನ್ನು ವರ್ಜಿಸಬೇಕು. ಪರಿಸರ, ನೆರೆಹೊರೆಗೆ ಅನಾನುಕೂಲವಾಗದಂತೆ ಪೂಜೆ ಮಾಡಬೇಕು.
- -ಸ್ವಾಮಿ ಬ್ರಹ್ಮಾನಂದಜಿ, ಚಿನ್ಮಯ ಮಿಷನ್, ಬೆಂಗಳೂರು
- ಮೂರ್ತಿಯ ಬಣ್ಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡದೆ, ಸಕಲ ಪಾಪ ಪರಿಹಾರ ಮಾಡಿ, ಐಶ್ವರ್ಯ ಕೊಡುವ ಸಾಕ್ಷಾತ್ ಲಕ್ಷ್ಮಿಯ ಅಂಶವಿರುವ ಮಣ್ಣಿನ ಮೂರ್ತಿಯನ್ನೇ ಪೂಜಿಸಬೇಕು. ಪರಿಸರಕ್ಕೆ ಹಾನಿ ಇಲ್ಲದ ಬಣ್ಣಗಳನ್ನು ಮಾತ್ರ ಬಳಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.
- -ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಮಠ
ಆನೆಯ ಬಣ್ಣ ಒಂದೇ ಅಗಿರುತ್ತದೆ. ಅದು ಸ್ವಾಭಾವಿಕ ಬಣ್ಣ. ಗಣಪತಿ ಮೂರ್ತಿಯ ಬಣ್ಣವೂ ಕೂಡ ನೈಸರ್ಗಿಕವಾಗಿರಬೇಕು. ಹಾನಿಕಾರ ಬಣ್ಣಗಳನ್ನು ಉಪಯೋಗಿಸುವುದರಿಂದ ತಾಯಿ ಗಂಗಾಭವಾನಿಯನ್ನು ಮಾಲಿನ್ಯ ಮಾಡಿದಂತಾಗುತ್ತದೆ. ಪೂಜೆ ಮಾಡುವಾಗ ಗಣಪತಿ ಮನಸ್ಸಿನಲ್ಲಿರಬೇಕು. ಪರಿಸರಕ್ಕೆ ಹಾನಿ ಮಾಡಬಾರದು.
- -ಶ್ರೀ ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್
ಭಾರತದ ಧಾರ್ಮಿಕ, ಸಂಸ್ಕೃತಿ ಹಾಗೂ ಸಂಪ್ರದಾಯದ ದೇಶ. ಗಣಪತಿ ಹಬ್ಬದಂತಹ ಆಚರಣೆಗಳ ಮೂಲಕ ಮುಂದಿನ ಜನಾಂಗಕ್ಕೆ ಅದನ್ನು ಪಸರಿಸಬೇಕು. ಆದ್ದರಿಂದ ನಮ್ಮ ಸಂಪ್ರದಾಯದಂತೆ ಮಣ್ಣಿನ ಮೂರ್ತಿಯನ್ನೇ ಪೂಜಿಸಬೇಕು. ಬಣ್ಣದ ಮೂರ್ತಿಗಳ ಮೂಲಕ ನೀರಿನ ಮೂಲಗಳಿಗೆ ರಾಸಾಯನಿಕ ಬಿಡಬಾರದು.
- -ಶ್ರೀ ಡಾ. ಶಿವಮೂರ್ತಿ ಮುರುಘ ಶರಣರು, ಶ್ರೀ ಮುರುಘ ಮಠ
ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ವಿಷಕಾರಕ ರಾಸಾಯನಿಕಯುಕ್ತ ಪೈಂಟ್ ಬಳಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ನಮ್ಮ ಸಂಪ್ರದಾಯದಂತೆ ಕೆರೆಗಳ ದಡದ ಮಣ್ಣಿನಿಂದ ಮೂರ್ತಿಗಳನ್ನು ತಯಾರಿಸಬೇಕು. ಬಣ್ಣ ಬೇಕೆಂದೇ ಆದರೆ, ತರಕಾರಿ ಮೂಲದಿಂದ ತಯಾರಾದ ಬಣ್ಣಗಳನ್ನು ಬಳಸಬೇಕು.
- -ಸ್ವಾಮಿ ಹರ್ಷಾನಂದಜಿ, ಶ್ರೀ ರಾಮಕೃಷ್ಣ ಮಠ, ಬೆಂಗಳೂರು
ಪರಿಸರಕ್ಕೆ ಹಾನಿಯಾಗುವ ವಿಷಕಾರಿ ಪೇಯಿಂಟ್‌ಗಳನ್ನು ಗಣಪತಿ ಮೂರ್ತಿ ತಯಾರಿಕೆಯಲ್ಲಿ ಬಳಸಬಾರದು. ಗಣಪತಿ ಪೂಜೆಯನ್ನು ಪರಿಸರ ಕಾಳಜಿಯೊಂದಿಗೆ ಮಾಡಬೇಕು. ಸಂಸ್ಕೃತಿ ಮತ್ತು ಧಾರ್ಮಿಕ ಪ್ರಕಾರಗಳು ಶಾಸ್ತ್ರೋಕ್ತವಾಗಿ ಪುರಾಣದಲ್ಲಿದ್ದಂತೆ ನಿರ್ವಹಿಸಬೇಕು.
- -ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠ
ಗಣಪತಿ ಕೃಷಿಯ ದೇವತೆ. ಎರಡು ದೊಡ್ಡ ಕಿವಿಗಳು ಮೊರದಾಕಾರದ ಗುದ್ದಲಿಯ ಪ್ರತೀಕ. ಉದ್ದನೆಯ ದಂತ- ನೇಗಿಲು ಹಾಗೂ ಸೊಂಡಿಲು ನೀರಾವರಿಯ ಪ್ರತೀಕ. ಆದ್ದರಿಂದ ಪರಿಸರ ಸ್ನೇಹಿ ಮೂರ್ತಿಗಳನ್ನೇ ಪೂಜಿಸಬೇಕು. ಆಗಮಗಳ ಪ್ರಕಾರ ದೊಡ್ಡ ಮೂರ್ತಿಗಳನ್ನು ಪೂಜಿಸಬಾರದು. ಮಣ್ಣಿನ ಮೂರ್ತಿಗಳೇ ಶ್ರೇಷ್ಠ.
- -ಶತವಧಾನಿ ಡಾ. ಆರ್. ಗಣೇಶ್
Ganesha, a symbol of the environment
Let the color be natural
A movement for awareness
Religious practice
What do Swamijis say?
The worship of Ganapati should be religiously performed with great care. Idols should be dissolved in pure water. Polluting paints should be avoided. Puja should be done without inconveniencing the environment and the neighborhood.
- -Swami Brahmanandaji, Chinmaya Mission, Bangalore
Without giving too much representation to the color of the idol, one should worship only the clay idol which has the element of Lakshmi, the one who atones all sins and gives wealth. Only environmentally friendly colors should be used. Environmental protection is our responsibility.
- -Sri Vishveshwatheertha Swamiji, Sri Pejavara Math
The color of the elephant is the same. It is a natural color. The color of Ganapati idol should also be natural. Using harmful dyes pollutes mother Ganga Bhavani. Ganapati should be kept in mind while worshiping. Do not harm the environment.
- -Sri Sri Ravi Shankar Guruji, Art of Living
India is a country of religion, culture and tradition. It should be spread to the next generation through rituals like Ganapati festival. Therefore, according to our tradition, the clay idol should be worshipped. Chemicals should not be released into water sources through colored idols.
- - Mr. Dr. Shivamurthy Muruga Sharanaru, Sri Muruga Math
The use of toxic chemical paint in the manufacture of Ganapati idols harms the environment. According to our tradition, idols should be made from the mud of the banks of the lakes. If color is desired, dyes prepared from vegetable sources should be used.
- -Swami Harshanandaji, Sri Ramakrishna Math, Bangalore
Toxic paints which harm the environment should not be used in making Ganapati idol. Ganapati Puja should be done with environmental concern. Culture and religious forms should be maintained ritualistically as in Purana.
- -Sri Balagangadharnath Swamiji, Sri Adichunchanagiri Math
Ganapati is the goddess of agriculture. The two large ears symbolize the hoe. A long tooth-plough and a trunk symbolize irrigation. Therefore environment friendly idols should be worshipped. According to Agamas big idols should not be worshipped. Clay idols are the best.
- - Shatavadhani Dr. R. Ganesh