ನಮ್ಮೂರ್ ಕೆರೆ ಲೇಖನ ಮಾಲಿಕೆ ಆರಂಭವಾದ ಪ್ರಥಮ ದಿನವೇ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಶಿ ಅವರಿಂದ ಕರೆ ಬಂದಿತ್ತು. ‘ಬದ್ರರ್ ತುಂಬಾ ಚೆನ್ನಾಗಿ ಬರೆದಿದ್ದೀರ. ಕೆರೆಗಳ ಪರಿಸ್ಥಿತಿ ಏನಾಯ್ತು ನೋಡಿ’ ಎಂದು ಮರುಗಿದ್ದರು. ನಂತರದ ಕೆಲವು ದಿನಗಳು ಅವರಿಂದ ಯಾವುದೇ ಕರೆ ಬರಲಿಲ್ಲ. ಸರಣಿ ಅಂತ್ಯವಾಯಿತು ನೋಡಿ, ಆಗ ಕರೆ ಬಂದಿತ್ತು. ‘ಎಕ್ಸೆಲೆಂಟ್ ಬ್ರದರ್, ತುಂಬಾ ಚೆನ್ನಾಗಿ ಬಂತು. ನಿಮ್ಮಿಂದ ಕೆರೆಗಳೊಂದಷ್ಟು ಉದ್ಧಾರ ಆಗಲಿ’ ಎಂದಿದ್ದರು. ಕೊನೆಯಲ್ಲಿ ಫೋನ್ ಕಟ್ ಮಾಡುವ ಮುನ್ನ ‘ನಮ್ಮಲ್ಲಿ ನೀವ್ಯಾಕ್ಕೊಂದು ಕಾರ್ಯಕ್ರಮ ನೀಡಬಾರದು?’ ಎಂದು ಸಣ್ಣಗೆ ಹುಳ ಬಿಟ್ಟಿದ್ದರು. ‘ನೋಡೋಣ ಸರ್’ ಎಂದಿದ್ದೆ. ನಂತರ ಹಲವು ಬಾರಿ ಮೊಬೈಲ್ ಸಂಭಾಷಣೆ ಆಗಿದ್ದರೂ, ಇದರ ಬಗ್ಗೆ ಇಬ್ಬರೂ ಮಾತನಾಡಿರಲಿಲ್ಲ.
‘ಕೆರೆ ಕರಗುವ ಸಮಯ’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬನ್ನಿ, ಎಂದು ಒಂದು ಎಸ್‌ಎಂಎಸ್ ಕಳಿಸಿದೆ. ಕೂಡಲೇ ಜೋಶಿ ಕರೆ ಮಾಡಿದ್ದರು. ‘ನಾನು ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡು ಬಿಟ್ಟಿದ್ದೇನೆ. ಅಲ್ಲಿ ಜಸ್ಟೀಸ್ ಎಲ್ಲ ಬರ್ತಾರೆ, ಮಿಸ್ ಮಾಡಲು ಆಗೊಲ್ಲ. ಒಳ್ಳೆದಾಗಲಿ’ ಎಂದು ಶುಭ ಹಾರೈಸಿದರು. ಆಯ್ತು, ಪುಸ್ತಕ ಬಿಡುಗಡೆಯೂ ಆಯ್ತು. ಎರಡು ದಿನ ಕಳೆದಿತ್ತು ಅಷ್ಟೇ, ಜೋಶಿ ಕರೆ ಮಾಡಿದ್ದರು. ‘ಬ್ರದರ್ ನಮ್ಮನ್ನೆಲ್ಲ ಮರೆತು ಹೋದ್ರಾ?’ ಅಂದರು. ಏಕೆ ಎಂದಾಗ, ‘ನೀವು ಪ್ರೋಗ್ರಾಂಗೆ ಬರಲಿಲ್ಲ. ಬನ್ನಿ ನಾಳೆಯೇ ಒಂದು ಕಾರ್ಯಕ್ರಮ ಮಾಡೇ ಬಿಡೋಣ’ ಎಂದರು. ‘ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಒಪ್ಪಿಗೆ ಪಡೆದು ನಿಮಗೆ ತಿಳಿಸುತ್ತೇನೆ’ ಎಂದೆ. ಎರಡು ದಿನ ಬಿಟ್ಟು ಕರೆ ಮಾಡಿ, ಏನಾಯ್ತು ಎಂದರು ಜೋಶಿ. ಸಂಪಾದಕರಿಂದ ಒಪ್ಪಿಗೆ ಪಡೆದಿದ್ದ ನಾನು ಓಕೆ ಎಂದೆ. ಉಳಿದದ್ದು ನನಗೆ ಬಿಡಿ ಎಂದರು ಜೋಶಿ. ಅದಷ್ಟೇ, ಎಲ್ಲವನ್ನೂ ನಿರ್ವಹಿಸಿದ್ದರೂ ಶ್ರೀಯುತ ಮಹೇಶ್ ಜೋಶಿ.
ದೂರದರ್ಶನ ಚಂದನಲ್ಲಿ ನಿರೂಪಕರಾಗಿರುವ ಶಿವರಾಂ ಕರೆ ಮಾಡಿದರು. ಸರ್, ಕೆರೆಗಳ ಬಗ್ಗೆ ಕಾರ್ಯಕ್ರಮ. ನಾಳೆಯೇ ಬನ್ನಿ, ಚರ್ಚಿಸಿ ಕಾರ್ಯಕ್ರಮ ಮಾಡೋಣ ಎಂದರು. ನಾಳೆ ಆಗೊಲ್ಲ, ಮತ್ತೊಮ್ಮೆ ಬರುತ್ತೇನೆ ಎಂದೆ. ಆಮೇಲೆ ಏಪ್ರಿಲ್ 8ರಂದು ದೂರದರ್ಶನ ಕೇಂದ್ರಕ್ಕೆ ಹೋದೆ. ಅಲ್ಲಿ ಸಹಾಯಕ ಕೇಂದ್ರ ನಿರ್ದೇಶಕ ಬಿ.ಎನ್. ಚಂದ್ರಕುಮಾರ್ ಅವರೊಂದಿಗೆ ಮಾತನಾಡಿದೆ. ಅತ್ಯಂತ ಅನುಭವದ ಚಂದ್ರಶೇಖರ್, ದೂರದರ್ಶನದ ನೂರಾರು ಕಾರ್ಯಕ್ರಮಗಳಿಗೆ ಕಾರಣರಾಗಿದ್ದಾರೆ. ಅವರಲ್ಲಿದ್ದ ಕೆರೆಗಳ ಬಗ್ಗೆಗಿನ ಮಾಹಿತಿಗೆ ನಾನು ಮಾರುಹೋದೆ. ಅವರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದಾಗ ಸಮಯ ಹೋಗಿದ ಅರಿವೇ ಆಗಲಿಲ್ಲ. ಅವರು ಅವರೇ ನೋಡಿದ ಕೆರೆ ಹಾಗೂ ಐದೇ ಅಡಿಯಲ್ಲಿ ನೀರು ಸಿಗುವ ಬಾವಿ ಬಗ್ಗೆ ವಿವರ ನೀಡಿದರು. ಅವರು ಮಿತುಭಾಷಿ ಎಂಬುದು ಅರಿವಿಗೆ ಬಂತು. ಅದೇ ಸ್ವಭಾವದ ನಾನೂ ಅವರು ಸಾಕಷ್ಟು ಮಾತನಾಡಿದೆವು. ಆದರೆ, ದಿನ ಅವರೊಂದಿಗೆ ಮಾತನಾಡಬೇಕೆಂಬ ಹಾಗೂ ಅವರಲ್ಲಿರುವ ಮಾಹಿತಿ ಕಣಜದಲ್ಲಿ ಕೊಂಚ ಭಾಗವನ್ನಾದರೂ ಅರಿಯಬೇಕೆಂಬ ಆಸೆ ಇದೆ. ಇದು ಸಾಧ್ಯಾನಾ? ಗೊತ್ತಿಲ್ಲ. ಏಕೆಂದರೆ, ಚಂದ್ರಕುಮಾರ್ ಅವರನ್ನು ನಾನು ಈ ಬಗ್ಗೆ ಕೇಳಿಯೇ ಇಲ್ಲ!
ಕಾರ್ಯಕ್ರಮದ ಬಗ್ಗೆ ಚರ್ಚೆ ಆದ ಮೇಲೆ, ಏಪ್ರಿಲ್ 9ರಂದು ರೆಕಾರ್ಡಿಂಗ್ ಎಂದು ಚಂದ್ರಕುಮಾರ್ ಹೇಳಿದರು. ಅವರೊಂದಿಗೆ ಕಾಫಿ ಕುಡಿದು, ಥ್ಯಾಂಕ್ಸ್ ಹೇಳಿ ಗೆಳೆಯ ಶಿವರಾಂನೊಂದಿಗೆ ಹೊರಬಿದ್ದೆ. ನಾಳೆ ಬೆಳಗ್ಗೆ 9.3೦ ಬಂದುಬಿಡಿ ಎಂದ ಶಿವರಾಂನೊಂದಿಗೆ ಕೆಲ ಸಮಯ ಮಾತನಾಡಿ, ಕೇಂದ್ರದ ಗೇಟ್ ಹೊರಗೆ ಕಾರು ಡ್ರೈವ್ ಮಾಡಿ ಹೊರಬಿದ್ದೆ. ಆದರೆ, ರೆಕಾರ್ಡಿಂಗ್ ಮನಸ್ಸು, ತಲೆ ಎರಡನ್ನೂ ಆವರಿಸಿಕೊಂಡಿತ್ತು. ಅದರ ಬಗ್ಗೆಯೇ ಚಿಂತೆ. ಏಕೆಂದರೆ, ಪ್ರಥಮ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದೆ. ಆತಂಕಕ್ಕಿಂತ ಕಾತುರ ತುಂಬಿಹೋಗಿತ್ತು.ದೂರದರ್ಶನ ಚಂದನಲ್ಲಿ ನಿರೂಪಕರಾಗಿರುವ ಶಿವರಾಂ ಕರೆ ಮಾಡಿದರು. ಸರ್, ಕೆರೆಗಳ ಬಗ್ಗೆ ಕಾರ್ಯಕ್ರಮ. ನಾಳೆಯೇ ಬನ್ನಿ, ಚರ್ಚಿಸಿ ಕಾರ್ಯಕ್ರಮ ಮಾಡೋಣ ಎಂದರು. ನಾಳೆ ಆಗೊಲ್ಲ, ಮತ್ತೊಮ್ಮೆ ಬರುತ್ತೇನೆ ಎಂದೆ. ಆಮೇಲೆ ಏಪ್ರಿಲ್ 8ರಂದು ದೂರದರ್ಶನ ಕೇಂದ್ರಕ್ಕೆ ಹೋದೆ. ಅಲ್ಲಿ ಸಹಾಯಕ ಕೇಂದ್ರ ನಿರ್ದೇಶಕ ಬಿ.ಎನ್. ಚಂದ್ರಕುಮಾರ್ ಅವರೊಂದಿಗೆ ಮಾತನಾಡಿದೆ. ಅತ್ಯಂತ ಅನುಭವದ ಚಂದ್ರಶೇಖರ್, ದೂರದರ್ಶನದ ನೂರಾರು ಕಾರ್ಯಕ್ರಮಗಳಿಗೆ ಕಾರಣರಾಗಿದ್ದಾರೆ. ಅವರಲ್ಲಿದ್ದ ಕೆರೆಗಳ ಬಗ್ಗೆಗಿನ ಮಾಹಿತಿಗೆ ನಾನು ಮಾರುಹೋದೆ. ಅವರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದಾಗ ಸಮಯ ಹೋಗಿದ ಅರಿವೇ ಆಗಲಿಲ್ಲ. ಅವರು ಅವರೇ ನೋಡಿದ ಕೆರೆ ಹಾಗೂ ಐದೇ ಅಡಿಯಲ್ಲಿ ನೀರು ಸಿಗುವ ಬಾವಿ ಬಗ್ಗೆ ವಿವರ ನೀಡಿದರು. ಅವರು ಮಿತುಭಾಷಿ ಎಂಬುದು ಅರಿವಿಗೆ ಬಂತು. ಅದೇ ಸ್ವಭಾವದ ನಾನೂ ಅವರು ಸಾಕಷ್ಟು ಮಾತನಾಡಿದೆವು. ಆದರೆ, ದಿನ ಅವರೊಂದಿಗೆ ಮಾತನಾಡಬೇಕೆಂಬ ಹಾಗೂ ಅವರಲ್ಲಿರುವ ಮಾಹಿತಿ ಕಣಜದಲ್ಲಿ ಕೊಂಚ ಭಾಗವನ್ನಾದರೂ ಅರಿಯಬೇಕೆಂಬ ಆಸೆ ಇದೆ. ಇದು ಸಾಧ್ಯಾನಾ? ಗೊತ್ತಿಲ್ಲ. ಏಕೆಂದರೆ, ಚಂದ್ರಕುಮಾರ್ ಅವರನ್ನು ನಾನು ಈ ಬಗ್ಗೆ ಕೇಳಿಯೇ ಇಲ್ಲ!
ರೆರ್ಕಾಡಿಂಗ್, ಶಾಲಾ ದಿನದ ನಂತರ ಮುಖಕ್ಕೊಂದು ಮೇಕಪ್, ಕೇಂದ್ರ ಸಹೃದಯರೊಂದಿಗಿನ ಮಾತುಕತೆ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ಕ್ಯಾಮೆರಾ ಹಿಂದೆ ಕೇಂದ್ರದ ಹಲವು ಚಟುವಟಿಕೆಗಳಿಗೆ ಕಾರಣರಾದ ಹಿರಿಯರಾದ ಚಂದ್ರಶೇಖರ್ ಅವರನ್ನು ಚಿತ್ರದ ಮೂಲಕ ನಿಮಗೆ ಪರಿಚಯಿಸುವ ಪ್ರಯತ್ನವನ್ನೂ ಮಾಡುತ್ತೇನೆ.
keregala bagge neevu dooradarshanadalli kottq program chennagittu. aadre enu maadodu vidyut kaikottu kaaryakrama poorna nodalu agalilla. ondantuuu nija. keregala bagge prakatagonda lekhanaglu tumbaaaaa parinaaaamakaariyaagi kelasa madive. neevu nanage sms maadiddakke thanks sir.
ReplyDeleteDharanesh, 93410 10517