Thursday, January 2, 2025

Environment Journalism Award for Kere Manjunath

Environment Journalism Award for Kere Manjunath

Bangalore: (Karnataka News) January -01: The Karnataka government has announced the Environment Journalism Award for the year 2023 for Prajavani senior reporter R. Manjunath (Kere Manjunath).

The Karnataka government has announced the Development and Environment Journalism Awards for the calendar years 2017 to 2023 to be given to journalists who have made outstanding achievements in the fields of development and environment journalism, said Hemant M Nimbalkar, Commissioner of the Information and Public Relations Department. 

Making an announcement in this regard, he said that these awards were instituted by the government since 2001 and till 2016, 32 senior journalists of the country have received both these awards. A committee comprising senior journalists Sanath Kumar Belagali and K. Shivakumar has selected the eligible journalists for the seven-year period from 2017 to 2023, which was delayed due to Covid and other reasons. The award carries a cash prize of one lakh rupees each, a memento, and a letter of appreciation.

Click here to read about Kere Manjunath

ಕೆರೆ ಮಂಜುನಾಥ್ ಅವರಿಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ

 ಬೆಂಗಳೂರು: (ಕರ್ನಾಟಕ ವಾರ್ತೆ) ಜನವರಿ -01:  ಪ್ರಜಾವಾಣಿಯ ಹಿರಿಯ ವರದಿಗಾರ ಆರ್. ಮಂಜುನಾಥ್ (ಕೆರೆ ಮಂಜುನಾಥ್) ಅವರಿಗೆ ಕರ್ನಾಟಕ ಸರ್ಕಾರವು 2023ರ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಿಸಿದೆ.

ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ತಿಳಿಸಿದ್ದಾರೆ. 
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಪ್ರಶಸ್ತಿಗಳನ್ನು ಸರ್ಕಾರವು 2001ನೇ ಸಾಲಿನಿಂದ ಸ್ಥಾಪಿಸಿದ್ದು 2016 ರವರೆಗೆ ನಾಡಿನ 32 ಜನ ಹಿರಿಯ ಪತ್ರಕರ್ತರು ಈ ಎರಡೂ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಅವರಿದ್ದ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ. 

2 comments:

  1. Mr R Manjunath (kere Manjunath) deserve dvery much this award.

    ReplyDelete