R. Manjunath Kere Manjunath ಆರ್. ಮಂಜುನಾಥ್ ಕೆರೆ ಮಂಜುನಾಥ್)

 R. Manjunath (Kere Manjunath)

Chief reporter in Prajavani daily since November 2016.

From 1995 to 2016, worked as a reporter in Ee Sanje, Karnataka News Net, Janavahini, Vijaya Karnataka, Kannada Prabha newspaper, from the post of senior reporter, chief reporter and special reporter.



Articles: I have written hundreds of articles and series in my 29 years of journalism on urban development issues, projects, development and protection of lakes, rivers and the environment. Many types of articles have been published including public interest, politics, environment, day celebrations, personal portraits, cinema. The article series ‘Nammoor Kere’ about the lakes of Bangalore was published in Vijaya Karnataka for 35 consecutive days in 2008, which is a record in Kannada Journalism. After this, the government formulated special plans for the development of lakes. Extensive articles have been published on the revitalization of the Arkavati River, the development of Dharwad lakes, the damage to the environment from chemical Ganapati idols, the plans and implementation of the government and local bodies for the protection of water bodies. Special reports on the projects representing BBMP, BDA, Water Board, Brand Bangalore, including the Smart City project for Bangalore city development, have been published in Prajavani, Vijaya Karnataka, Kannada Prabha. I have attached some copies herewith. Apart from these, hundreds of articles on social concerns, including articles on the achievements of individuals, etc. Articles on the survival of lakes, lake ponds in agriculture, a study article on lakes in Dharwad district, and developmental articles on how Hubballi-Dharwad will become a smart city have also been published.

How smart is the city now?:

Bengaluru joined the third phase of the Centre's 'Smart City' project. Rs 986 crore is being spent on road, education, health, and infrastructure projects to become a 'smart city'. A comprehensive picture of these projects, ‘How Smart is the City Now’, was published in Prajavani in February 2023.

Encroachment on this issue:

Due to encroachment of the Rajakaluves in Bengaluru, water is flowing into the settlements during the rainy season. An article series with information along with maps showing the extent of encroachment of the Rajakaluves in each place was published in Prajavani in September 2022.

Urban Development Articles:

The dream of drinking water for 110 villages around Bangalore from Cauvery Phase 5 was realized in Prajavani in October 2022. Many articles including theme parks in lakes, development of the surrounding environment through lake development have been published in Prajavani.

Bengaluru Urban Development Projects, Green Cover Works for Pollution Control- ‘Theme’ Tree Park for Green Cover Growth’ including ‘How Much Amrutha in BBMP for Where?, When will BBMP Work be Completed?’ series of articles have been published in Prajavani.

Articles recently published in Prajavani on Urban Development Projects:

Junctions to become resting places (25 May 2024), Public Plaza under Sivananda Flyover (10 June 2023), Steps taken for natural gas production (3 July 2023), Kempegowda Heritage Corridor (23 July 2023), Sadashivanagara added value, Jayanagar to get commercial area (6 October 2023), 15 secondary transfer stations for waste management in the city (15 October 2023), 9 high traffic density corridors launched (1 December 2023), Treated water for 38 villages (5 January 2024), Safe 75 Junction Project ready (10 January 2024), BDA Kempegowda Layout Road SST (12 January 2024), BDA Construction of 200 flats (30 January 2024), Cauvery Phase 6 DPR ready (6 February 2024), 279 unauthorized layouts in the city (15 February 2024), 225 crores allocated for village development (18 February 2024), ‘Nambike Map’ for building in a single day (22 February 2024), Hi-tech drainage for 14 villages (27 February 2024), Illegal water connection: Most in the South (2 May 2024), 3 thousand crores for construction of 11 flyovers (1 July 2024), Construction waste: On-site collection (3 August 2024), Bagalur: A new world embraced by development (3 September 2024), BBMP property: ‘Digital Khata’ by the end of the month (13 September 2024).

Recent articles published in Prajavani related to the environment:

Lake storage capacity drops by 35% (16 May 2023), Further encroachment detected in Rajakaluve (17 May 2024), 2 thousand crores for the development of lakes (4 July 2024), Eco-friendly Green Lake (28 July 2024), Punishment if encroachment remains in lake canals (6 September 2023), 50 thousand lake encroachments to drain lakes (10 September 2023), Black water for drinking for city dwellers (14 October 2023), Rs 35 crore for the maintenance of 175 lakes (26 October 2023), Digital monitoring of tree and plant growth (10 November 2023), Lakes are being encroached upon by stone and soil waste (17 November 2023), Nodal officer for each lake (5 December 2023), Launch of Suvarnamukhi River revitalization (2 June 2024), Dubai plant is dangerous for health (5 June 2024), Mandatory septic tanks in canals (8 June 2024), Air quality improvement: 18 crores cost (20 June 2024), ‘Theme’ tree to increase green cover (4 August 2024).

Click here To read articles in Prajavani

Nammoor Kere: A series of articles on the current state of lakes in Bangalore, which was known as the ‘Lake City’, and the impact this has on the environment is called ‘. Under this title, a study report-article series on the status and progress of 106 lakes in Bangalore was conducted for 35 days from August 15, 2008 to October 1, 2008 in Vijaya Karnataka’s Bangalore Vijaya.

Effect: After the ‘Nammoor Kere ’ article series, the state government formulated special plans for the development of lakes in Bangalore. On this occasion, the state government promised to formulate many plans for the development of lakes in Bangalore and to develop the lakes under the possession of the Forest Department through BBMP and BDA.

In the following few months, the Bruhat Bengaluru Mahanagara Palike launched a project to develop 22 lakes. The Bangalore Development Authority also launched the development of 11 lakes by the then Chief Minister B.S. Yediyurappa. In addition, the responsibility of developing all the lakes in the city has been entrusted to BDA and BBMP.

After the ‘Nammoor Kere’ article series, organizations have become aware and are organizing awareness programs on lake development and lake conservation. Many organizations including K.V. Subbanna Apta Rangamandira, Manthan, Jenugudu, Sneha Chaitanya Social Service Trust, Pragatipara Mahila Samaj, A.G.S Cultural Trust have organized programs on lake conservation. Environmentalists Dr. A.N. Yellappareddy, Suresh Heblikar, Shivamallu and many others have led the programs. I have also participated in many such programs.

Inspired by the ‘Nammoor Kere’ column, many MLAs who have taken special care of the development of lakes are formulating active plans for the conservation and development of the lakes in their constituencies and are making efforts for their development.

The book ‘Kere Karaguva Samaya’, a study of 106 lakes in Bangalore, has been released. 168 color pages printed on art paper. With this series of articles on lakes, not only the lakes of Bangalore but also the lakes of the state have moved towards the path of development. Groundwater development works are being done.

A presentation on the lakes of Bangalore under the title ‘Time of Lake Melting’ at the symposium on the conservation of lakes in Bangalore at the Indian Institute of Science (IISc).

A presentation on the lakes of Bangalore under the title ‘Time of Lake Melting’ at the symposium on urban development and environmental protection at the 76th All India Kannada Sahitya Sammelana held in Gadag.

Arkavathi Eki Durgati?: 

A series of articles on the plight of the Arkavathi River, which supplied drinking water to Bangalore for the first time, was published in Vijaya Karnataka under the title ‘Arkavathi Eki Durgati?’ for 17 days from May 25, 2009 to June 12. A detailed article was published on the condition of the river and the threat it poses to the environment in the 194 km stretch from Nandi Hills to Hesaraghatta, Thippagondanahalli, Manchanabele, Sangamada.

Result: After the article series, ‘Arkavathi Eki Durgati?’  it was submitted in its entirety in book form to Chief Minister B.S. Yediyurappa. The Chief Minister promised to form an authority or committee for the revival of the Arkavathi river.

Yelahanka MLA S.R. Vishwanath and Dasarahalli MLA S. Muniraju, who learned about the condition of the Arkavathi river through this article series, undertook a four-day padyatra covering a distance of 108 km from Nandi Hills to Thippagondanahalli to create awareness among the people about river conservation. Ministers Suresh Kumar, R. Ashok, Ramachandra Gowda, MP Ananth Kumar, environmentalists Dr. A.N. Yellappa Reddy, Suresh Heblikar, Mahesh Bhatt, Sitaram and many others participated in this walk.

The ‘Arkavathi River Revitalization Committee’, comprising senior officials from all departments under the leadership of the Minister of Revenue, Water Resources and Water Boards, is now functioning on the orders of the Chief Minister for the revitalization of the Arkavathi River.

Kanive Bavane: A series of articles on the lakes in the Koramangala-Challaghatta-Varthur valley of Bangalore and the adverse effects of the chemical elements in that canal were published in Kannada Prabha from May 22, 2005. After this series, the government started taking steps for the development of the lakes in this area, including the Bellandur lake.

Nam Keri Kathi: There were thousands of lakes in Dharwad district for centuries. Many lakes were built to provide drinking water to the people. Today, even if you touch such lakes that provided life-giving water, diseases can spread. Because, lakes are the places for sewage water and fresh water. In addition to all this, hundreds of lakes have also been encroached upon. Some have lost their existence. The condition of the lakes under the Hubballi-Dharwad Municipal Corporation is especially deplorable. Among the lakes that have died for development, many lakes are struggling to survive. In this context, Prajavani – ‘Nam Keri Kathi’ series revealed the actual condition of 101 lakes under the jurisdiction of Hubballi-Dharwad Municipal Corporation from January 6 to February 19, 2020. The District Administration and the District In-charge Minister have taken steps for the development of the lakes. The Lokayukta has suo motu registered a complaint and directed the District Administration to develop the lakes. 

Green Talk: History of lakes, environmental concerns, current issues on the environment, introduction of environmental activists, talk on civic issues in nature protection, statistics, interesting explanations. Green Talk- Prakriti Madila Matu video series, which includes surprising information about nature including water sources, land, has been aired in 33 episodes on the Prajavani website.

Click here to watch Green Talk


Award: 

Yajaman T. Narayanappa Memorial Award-2019 from the Karnataka Working Journalists Association (Best Agriculture Report-'Gule Tada Manegondu Kere' published in Prajavani)

Mysore Diganta-2015 Award from the Karnataka Media Academy. (For the article series 'Kanive Bavane' published in Kannada Prabha)

Kempegowda Award in 2011 from the Bruhat Bangalore Mahanagara Palike.

Bangalore Nirmatru Kempegowda Memorial Award in 2008 from the Karnataka Working Journalists Association

Parasara Ratna, Kannada Ratna, and Parasara Premi Awards from many organizations.

Presentation on the physical condition of lakes at a symposium organized by the Karnataka Media Academy in Kolar.




ಆರ್. ಮಂಜುನಾಥ್ (ಕೆರೆ ಮಂಜುನಾಥ್)

  2016ರ ನವೆಂಬರ್‌ನಿಂದ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಧಾನ ವರದಿಗಾರ.

 1995ರಿಂದ 2016ರವರೆಗೆ ಈ ಸಂಜೆ, ಕರ್ನಾಟಕ ನ್ಯೂಸ್ ನೆಟ್,  ಜನವಾಹಿನಿ, ವಿಜಯ ಕರ್ನಾಟಕ, ಕನ್ನಡಪ್ರಭ ಪತ್ರಿಕೆಯಲ್ಲಿ ವರದಿಗಾರ ಹುದ್ದೆಯಿಂದ ಹಿರಿಯ ವರದಿಗಾರ, ಮುಖ್ಯ ವರದಿಗಾರ ಹಾಗೂ ವಿಶೇಷ ವರದಿಗಾರನಾಗಿ ಕಾರ್ಯನಿರ್ವಹಣೆ.

ಲೇಖನಗಳು  :       ನಗರ ಅಭಿವೃದ್ಧಿ ವಿಷಯಗಳು, ಯೋಜನೆಗಳು, ಕೆರೆಗಳು, ನದಿಗಳು ಹಾಗೂ ಪರಿಸರದ ಅಭಿವೃದ್ಧಿ ಹಾಗೂ ರಕ್ಷಣೆಗೆ ನನ್ನ 29 ವರ್ಷಗಳ ಪತ್ರಿಕಾರಂಗದಲ್ಲಿ ನೂರಾರು ಲೇಖನಗಳನ್ನು, ಸರಣಿಗಳನ್ನು ಬರೆದಿದ್ದೇನೆ. ಸಾರ್ವಜನಿಕ ಹಿತಾಸಕ್ತಿ, ರಾಜಕೀಯ, ಪರಿಸರ, ದಿನಾಚರಣೆ, ವ್ಯಕ್ತಿಚಿತ್ರ, ಸಿನಿಮಾ ಸೇರಿದಂತೆ ಹಲವು ರೀತಿಯ ಲೇಖನಗಳು ಪ್ರಕಟವಾಗಿವೆ. ಬೆಂಗಳೂರಿನ ಕೆರೆಗಳ ಬಗ್ಗೆ ‘ನಮ್ಮೂರ್ ಕೆರೆ’ ಎಂಬ ಲೇಖನ ಮಾಲಿಕೆ ಸತತವಾಗಿ 35 ದಿನ  ವಿಜಯ ಕರ್ನಾಟಕದಲ್ಲಿ 2008ರಲ್ಲಿ ಪ್ರಕಟಗೊಂಡಿದ್ದು ದಾಖಲೆ. ಇದಾದ ಮೇಲೆ ಸರ್ಕಾರ ಕೆರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿತು. ಅರ್ಕಾವತಿ ನದಿ ಪುನಶ್ಚೇತನ, ಧಾರವಾಡ ಕೆರೆಗಳ ಅಭಿವೃದ್ಧಿ, ರಾಸಾಯನಿಕ ಅಂಶಗಳ ಗಣಪತಿ ಮೂರ್ತಿಗಳಿಂದ ಪರಿಸರಕ್ಕೆ ಹಾನಿ, ಜಲಮೂಲಗಳ ರಕ್ಷಣೆಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳ ಯೋಜನೆ, ಕಾರ್ಯಗತದ ಬಗ್ಗೆ ವಿಸ್ತೃತ ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರು ನಗರ ಅಭಿವೃದ್ಧಿಯ ಸ್ಮಾರ್ಟ್ ಸಿಟಿ ಯೋಜನೆಯೂ ಸೇರಿದಂತೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬ್ರ್ಯಾಂಡ್ ಬೆಂಗಳೂರನ್ನು ಪ್ರತಿನಿಧಿಸುವ ಯೋಜನೆಗಳ ವಿಶೇಷ ವರದಿಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡಪ್ರಭಗಳಲ್ಲಿ ಪ್ರಕಟಗೊಂಡಿವೆ. ಕೆಲವು ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿದ್ದೇನೆ. ಇವುಗಳಲ್ಲದೆ,, ವ್ಯಕ್ತಿಯ ಸಾಧನೆಯ ಚಿತ್ರಣ ಇತ್ಯಾದಿ ಲೇಖನಗಳು ಸೇರಿದಂತೆ, ಸಾಮಾಜಿಕ ಕಳಕಳಿಯ ನೂರಾರು ಲೇಖನಗಳು. ಕೆರೆಗಳ ಉಳಿವು, ಕೃಷಿಯಲ್ಲಿ ಕೆರೆ ಹೊಂಡ, ಧಾರವಾಡ ಜಿಲ್ಲೆಯಲ್ಲಿನ ಕೆರೆಗಳ ಅಧ್ಯಯನ ಲೇಖನ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿಯಾಗುವ ಅಭಿವೃದ್ಧಿಶೀಲ ಲೇಖನಗಳೂ ಪ್ರಕಟವಾಗಿವೆ.

ಸಿಟಿ ಈಗ ಎಷ್ಟು ಸ್ಮಾರ್ಟ್?: 

ಕೇಂದ್ರದ ‘ಸ್ಮಾರ್ಟ್ ಸಿಟಿ’ ಯೋಜನೆಯಲ್ಲಿ ಬೆಂಗಳೂರು ಮೂರನೇ ಹಂತದಲ್ಲಿ ಸೇರಿಕೊಂಡಿತುರಸ್ತೆಶಿಕ್ಷಣಆರೋಗ್ಯಮೂಲಸೌಕರ್ಯ ಕ್ಷೇತ್ರ ಯೋಜನೆಗಳಿಗೆಳೆಲ್ಲ  ‘ಸ್ಮಾರ್ಟ್ ಸಿಟಿ’ ಆಗಲು 986 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.  ಈ ಯೋಜನೆಗಳ ಸಮಗ್ರ ಚಿತ್ರಣದ ‘ಸಿಟಿ ಈಗ ಎಷ್ಟು ಸ್ಮಾರ್ಟ್’ ಲೇಖನ ಮಾಲೆ 2023ರ ಫೆಬ್ರುವರಿಯಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದೆ.

ಒತ್ತುವರಿ ಈ ಪರಿ: 

ಬೆಂಗಳೂರಿನಲ್ಲಿರುವ ರಾಜಕಾಲುವೆಗಳ ಒತ್ತುವರಿಯಿಂದ ಮಳೆಗಾಲದಲ್ಲಿ ನೀರು ಬಡಾವಣೆಗಳಿಗೆ ಹರಿಯುತ್ತಿದೆ. ಎಲ್ಲೆಲ್ಲಿ ಎಷ್ಟೆಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂಬುದನ್ನು ನಕ್ಷೆ ಸಹಿತ ಮಾಹಿತಿಯ ಲೇಖನ ಸರಣಿ ಪ್ರಜಾವಾಣಿಯಲ್ಲಿ 2022ರ ಸೆಪ್ಟೆಂಬರ್ ನಲ್ಲಿ ಪ್ರಕಟಗೊಂಡಿದೆ.

ನಗರ ಅಭಿವೃದ್ಧಿ ಲೇಖನಗಳು:

ಕಾವೇರಿ 5ನೇ ಹಂತದಿಂದ ಬೆಂಗಳೂರು ಸುತ್ತಮುತ್ತಲಿನ 110 ಹಳ್ಳಿಗಳ ಕುಡಿಯುವ ನೀರಿನ ಕನಸು ಸಾಕಾರ 2022ರ ಅಕ್ಟೋಬರ್ ನಲ್ಲಿ  ಪ್ರಜಾವಾಣಿಯಲ್ಲಿ ಪ್ರಕಟ. ಕೆರೆಗಳಲ್ಲಿ ಥೀಮ್ ಪಾರ್ಕ್, ಕೆರೆ ಅಭಿವೃದ್ಧಿಯಿಂದ ಸುತ್ತಮುತ್ತಲ ಪರಿಸರ ಅಭಿವೃದ್ದಿ ಸೇರಿದಂತೆ ಹಲವು ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ. 

ಬೆಂಗಳೂರು ನಗರ ಅಭಿವೃದ್ಧಿ ಯೋಜನೆಗಳು, ಮಾಲಿನ್ಯ ನಿಯಂತ್ರಣಕ್ಕೆ ಹಸಿರು ಹೊದಿಕೆ ಕಾಮಗಾರಿಗಳು- ‘ಹಸಿರು ಹೊದಿಕೆ ವೃದ್ಧಿಗೆ ‘ಥೀಮ್’ ವೃಕ್ಷವನ’ ಸೇರಿದಂತೆ ಬಿಬಿಎಂಪಿಯಲ್ಲಿ ಎಲ್ಲಿಗೆ ಎಷ್ಟು ಅಮೃತ?ಬಿಬಿಎಂಪಿ ಕಾಮಗಾರಿ ಮುಗಿಸೋದು ಯಾವಾಗರಿ?  ಲೇಖನ ಸರಣಿಗಳು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ.

ನಗರ ಅಭಿವೃದ್ಧಿ ಯೋಜನೆಗಳ ಪ್ರಜಾವಾಣಿಯಲ್ಲಿ ಇತ್ತೀಚೆಗೆ ಪ್ರಕಟಗೊಂಡ ಲೇಖನಗಳು:

ವಿಶ್ರಾಂತಿಯ ತಾಣಗಳಾಗಲಿವೆ ಜಂಕ್ಷನ್ (25 ಮೇ 2024), ಶಿವಾನಂದ ಮೇಲ್ಸೇತುವೆ ಕೆಳಗೆ ಪಬ್ಲಿಕ್ ಪ್ಲಾಜಾ  (10 ಜೂನ್  2023), ನೈಸರ್ಗಿಕ ಅನಿಲ ಉತ್ಪಾದನೆಗೆ ಹೆಜ್ಜೆ (3 ಜುಲೈ 2023), ಕೆಂಪೇಗೌಡ ಪಾರಂಪರಿಕ ಕಾರಿಡಾರ್ (23 ಜುಲೈ 2023) ಸದಾಶಿವನಗರ ಅಧಿಕ ಮೌಲ್ಯ, ಜಯನಗರಕ್ಕೆ ವಾಣಿಜ್ಯ ಪ್ರದೇಶದ ಗರಿ (6 ಅಕ್ಟೋಬರ್ 2023), ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ 15 ಸೆಕೆಂಡರಿ ಟ್ರಾನ್ಸ್ ಫರ್ ಸ್ಟೇಷನ್ (15 ಅಕ್ಟೋಬರ್ 2023), 9 ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ ಗೆ ಚಾಲನೆ- (1 ಡಿಸೆಂಬರ್ 2023),  38 ಹಳ್ಳಿಗಳಿಗೆ ಸಂಸ್ಕರಿತ ನೀರು (5 ಜನವರಿ 2024), ಸುರಕ್ಷ 75 ಜಂಕ್ಷನ್ ಯೋಜನೆ ಸಿದ್ಧ (10 ಜನವರಿ 2024),  ಬಿಡಿಎ ಕೆಂಪೇಗೌಡ ಬಡಾವಣೆ ರಸ್ತೆ  ಎಸ್.ಎಸ್.ಟಿ (12 ಜನವರಿ 2024), ಬಿಡಿಎಯಿಂದ 200 ಫ್ಲ್ಯಾಟ್ ನಿರ್ಮಾಣ (30 ಜನವರಿ 2024), ಕಾವೇರಿ 6ನೇ ಹಂತ ಡಿಪಿಆರ್ ಗೆ ಸಜ್ಜು (6 ಫೆಬ್ರುವರಿ 2024), ನಗರದಲ್ಲಿ 279 ಅನಧಿಕೃತ ಬಡಾವಣೆ (15 ಫೆಬ್ರುವರಿ 2024),  ಹಳ್ಳಿಗಳ ಅಭಿವೃದ್ಧಿಗೆ 225 ಕೋಟಿ ನಿಗದಿ (18  ಫೆಬ್ರುವರಿ 2024), ಒಂದೇ ದಿನದಲ್ಲಿ ಕಟ್ಟಡಕ್ಕೆ ‘ನಂಬಿಕೆ ನಕ್ಷೆ” (22 ಫೆಬ್ರುವರಿ 2024),  14 ಹಳ್ಳಿಗಳಿಗೆ ಹೈಟೆಕ್ ಒಳಚರಂಡಿ (27 ಫೆಬ್ರುವರಿ 2024), ನೀರು ಅಕ್ರಮ ಸಂಪರ್ಕ: ದಕ್ಷಿಣದಲ್ಲೇ ಹೆಚ್ಚು (2 ಮೇ 2024),  11 ಮೇಲ್ಸೇತುವೆ ನಿರ್ಮಾಣಕ್ಕೆ 3 ಸಾವಿರ ಕೋಟಿ (1 ಜುಲೈ 2024), ಕಟ್ಟಡ ತ್ಯಾಜ್ಯ: ಸ್ಥಳದಲ್ಲೇ ಸಂಗ್ರಹ (3 ಆಗಸ್ಟ್ 2024)  ಬಾಗಲೂರು: ಅಭಿವೃದ್ಧಿಯ ಆಲಂಗಿಸಿದ ನವ್ಯಲೋಕ (3 ಸೆಪ್ಟೆಂಬರ್ 2024), ಬಿಬಿಎಂಪಿ ಆಸ್ತಿ: ತಿಂಗಳಾಂತ್ಯಕ್ಕೆ ‘ಡಿಜಿಟಲ್ ಖಾತಾ” (13 ಸೆಪ್ಟೆಂಬರ್ 2024).

ಪರಿಸರಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿಯಲ್ಲಿ ಇತ್ತೀಚೆಗೆ ಪ್ರಕಟಗೊಂಡ ಲೇಖನಗಳು:

ಕೆರೆ ಸಂಗ್ರಹ ಸಾಮರ್ಥ್ಯ ಶೇ 35ರಷ್ಟು ಕುಸಿತ (16 ಮೇ 2023), ರಾಜಕಾಲುವೆ ಮತ್ತಷ್ಟು ಒತ್ತುವರಿ ಪತ್ತೆ (17 ಮೇ 2024), ಕೆರೆಗಳ ಅಭಿವೃದ್ಧಿಗೆ 2 ಸಾವಿರ ಕೋಟಿ (4 ಜುಲೈ 2024), ಪರಿಸರ ಸ್ನೇಹಿ ಹಸಿರು ಸರೋವರ (28 ಜುಲೈ 2024), ಕೆರೆ ಕಾಲುವೆಗಳಲ್ಲಿ ಒತ್ತುವರಿ ಉಳಿದರೆ ಶಿಕ್ಷೆ (6 ಸೆಪ್ಟೆಂಬರ್  2023)  ಕೆರೆ ಒಡಲು 50 ಸಾವಿರ ಕೆರೆ ಒತ್ತುವರಿ (10 ಸೆಪ್ಟೆಂಬರ್ 2023), ನಗರವಾಸಿಗಳಿಗೆ ಕುಡಿಯಲು ಕಪ್ಪು ನೀರು (14 ಅಕ್ಟೋಬರ್ 2023), 175 ಕೆರೆಗಳ ನಿರ್ವಹಣೆಗೆ 35 ಕೋಟಿ ರೂ- (26 ಅಕ್ಟೋಬರ್ 2023), ಮರ-ಗಿಡ ಬೆಳವಣಿಗೆಗೆ ಡಿಜಿಟಲ್ ನಿಗಾ (10 ನವೆಂಬರ್ 2023), ಕಲ್ಲು-ಮಣ್ಣು ತ್ಯಾಜ್ಯ ತುಂಬಿ ಕೆರೆ ಕಬಳಿಕೆ (17 ನವೆಂಬರ್ 2023), ಪ್ರತಿ ಕೆರೆಗೂ ನೋಡಲ್ ಅಧಿಕಾರಿ (5 ಡಿಸೆಂಬರ್ 2023), ಸುವರ್ಣಮುಖಿ ನದಿ ಪುನಶ್ಚೇತನಕ್ಕೆ ಚಾಲನೆ (2 ಜೂನ್ 2024),  ಆರೋಗ್ಯಕ್ಕೆ ಮಾರಕ ದುಬೈ ಗಿಡ (5 ಜೂನ್ 2024), ಕಾಲುವೆಗಳಲ್ಲಿ ಇಂಗುಗುಂಡಿ ಕಡ್ಡಾಯ (8 ಜೂನ್ 2024), ವಾಯು ಗುಣಮಟ್ಟ ವೃದ್ಧಿ: 18 ಕೋಟಿ ವೆಚ್ಚ (20 ಜೂನ್ 2024), ಹಸಿರು ಹೊದಿಕೆ ವೃದ್ಧಿಗೆ ‘ಥೀಮ್’ ವೃಕ್ಷವನ (4 ಆಗಸ್ಟ್ 2024). 

https://www.prajavani.net/author/manjunath-r

ನಮ್ಮೂರ್ ಕೆರೆ:       ‘ಲೇಕ್ ಸಿಟಿ’ ಎನಿಸಿಕೊಂಡಿದ್ದ ಬೆಂಗಳೂರಿನಲ್ಲಿ ಕೆರೆಗಳ ಇಂದಿನ ದುಸ್ಥಿತಿ, ಇದರಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮ ಕುರಿತ ಲೇಖನ ಮಾಲಿಕೆ ‘ನಮ್ಮೂರ್ ಕೆರೆ’. ಈ ಶೀರ್ಷಿಕೆಯಡಿ ವಿಜಯ ಕರ್ನಾಟಕದ ಬೆಂಗಳೂರು ವಿಜಯದಲ್ಲಿ ಆಗಸ್ಟ್ 15, 2008ರಿಂದ ಅಕ್ಟೋಬರ್ 1, 2008ರವರೆಗೆ 35 ದಿನಗಳು ಬೆಂಗಳೂರಿನ 106 ಕೆರೆಗಳ ಸ್ಥಿತಿ-ಗತಿಗಳ ಅಧ್ಯಯನ ವರದಿ-ಲೇಖನ ಸರಣಿ.

 ಪರಿಣಾಮ: ‘ನಮ್ಮೂರ್ ಕೆರೆ’ ಲೇಖನ ಮಾಲಿಕೆಯ ನಂತರ ರಾಜ್ಯ ಸರಕಾರ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿತು. ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸುವುದಾಗಿ, ಅರಣ್ಯ ಇಲಾಖೆ ಸ್ವಾಧೀನದಲ್ಲಿರುವ ಕೆರೆಗಳನ್ನು ಬಿಬಿಎಂಪಿ ಹಾಗೂ ಬಿಡಿಎ ವತಿಯಿಂದ ಅಭಿವೃದ್ಧಿಪಡಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡಿತು.

          ಇದಾದ ಕೆಲವು ತಿಂಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 22 ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಚಾಲನೆ ನೀಡಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೂಡ 11 ಕೆರೆಗಳ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಇದಲ್ಲದೆ, ನಂತರ ನಗರದ ಎಲ್ಲ ಕೆರೆಗಳ ಅಭಿವೃದ್ಧಿ ಜವಾಬ್ದಾರಿ ಬಿಡಿಎ, ಬಿಬಿಎಂಪಿಗೆ ವಹಿಸಲಾಗಿದೆ.

         ‘ನಮ್ಮೂರ್ ಕೆರೆ’ ಲೇಖನ ಸರಣಿಯ ನಂತರ ಸಂಘ-ಸಂಸ್ಥೆಗಳು ಎಚ್ಚೆತ್ತುಕೊಂಡಿದ್ದು, ಅಲ್ಲಲ್ಲಿ ಕೆರೆ ಅಭಿವೃದ್ಧಿ ಹಾಗೂ ಕೆರೆ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ಮಂಥನ, ಜೇನುಗೂಡು, ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್, ಪ್ರಗತಿಪರ ಮಹಿಳಾ ಸಮಾಜ, ಎ.ಜೀಸ್ ಸಾಂಸ್ಕೃತಿಕ ಟ್ರಸ್ಟ್ ಸೇರಿದಂತೆ ಹಲವು ಸಂಸ್ಥೆಗಳಿಂದ ಕೆರೆ ಸಂರಕ್ಷಣೆ ಕುರಿತಾದ ಕಾರ್ಯಕ್ರಮ. ಪರಿಸರವಾದಿಗಳಾದ ಡಾ.ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್, ಶಿವಮಲ್ಲು ಸೇರಿದಂತೆ ಹಲವರು ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದಾರೆ. ಇಂತಹ ಹಲವು ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದೇನೆ.

             ‘ನಮ್ಮೂರ್ ಕೆರೆ’ ಅಂಕಣದಿಂದ ಪ್ರೇರೇಪಿತರಾಗಿ ಕೆರೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿರುವ ಹಲವು ಶಾಸಕರು ಅವರ ಕ್ಷೇತ್ರಗಳಲ್ಲಿರುವ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಿಯಾತ್ಮಕ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿಗೆ ಪ್ರಯತ್ನಪಡುತ್ತಿದ್ದಾರೆ.

               ಬೆಂಗಳೂರಿನ 106 ಕೆರೆಗಳ ಅಧ್ಯಯನದ ‘ಕೆರೆ ಕರಗುವ ಸಮಯ’  ಪುಸ್ತಕವನ್ನು ಬಿಡುಗಡೆಯಾಗಿದೆ. 168ವರ್ಣ ಪುಟಗಳನ್ನು ಆರ್ಟ್ ಪೇಪರ್‌ನಲ್ಲಿ ಮುದ್ರಿಸಲಾಗಿದೆ.          ಈ ಕೆರೆಗಳ ಲೇಖನ ಮಾಲಿಕೆಯಿಂದ ಬೆಂಗಳೂರಿನ ಕೆರೆಗಳು ಮಾತ್ರವಲ್ಲ, ರಾಜ್ಯದ ಕೆರೆಗಳೂ ಅಭಿವೃದ್ಧಿ ಪಥದತ್ತ ಸಾಗಿವೆ. ಅಂತರ್ಜಲ ಅಭಿವೃದ್ಧಿ ಕಾರ್ಯಗಳಾಗುತ್ತಿವೆ.

               ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆ ಕುರಿತ ವಿಚಾರ ಸಂಕಿರಣದಲ್ಲಿ, ‘ಕೆರೆ ಕರಗುವ ಸಮಯ’ ಶೀರ್ಷಿಕೆಯಡಿ ಬೆಂಗಳೂರಿನ ಕೆರೆಗಳ ಬಗ್ಗೆ ವಿಷಯ ಮಂಡನೆ.

               ಗದಗದಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಗರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಕುರಿತ ವಿಚಾರ ಸಂಕಿರಣದಲ್ಲಿ ವಿಚಾರ ಮಂಡನೆ.

 

ಅರ್ಕಾವತಿ ಏಕೀ ದುರ್ಗತಿ?:   

               ಬೆಂಗಳೂರಿಗೆ ಪ್ರಥಮ ಬಾರಿಗೆ ಕುಡಿಯುವ ನೀರು ಪೂರೈಸಿದ ಅರ್ಕಾವತಿ ನದಿಯ ದುಸ್ಥಿತಿಯನ್ನು ವಿಜಯ ಕರ್ನಾಟಕದಲ್ಲಿ ‘ಅರ್ಕಾವತಿ ಏಕೀ ದುರ್ಗತಿ?’ ಎಂಬ ಶೀರ್ಷಿಕೆಯಡಿ ಮೇ 25, 2009ರಿಂದ ಜೂನ್ 12ರವರೆಗೆ 17 ದಿನ ಅಧ್ಯಯನದ ಲೇಖನ ಮಾಲಿಕೆ ಪ್ರಕಟ. ನಂದಿಬೆಟ್ಟದಿಂದ ಹೆಸರಘಟ್ಟ, ತಿಪ್ಪಗೊಂಡನಹಳ್ಳಿ, ಮಂಚನಬೆಲೆ, ಸಂಗಮದವರೆಗಿನ 194 ಕಿಮೀ ವ್ಯಾಪ್ತಿಯಲ್ಲಿ ಈ ನದಿಯ ದುಸ್ಥಿತಿ ಹಾಗೂ ಪರಿಸರಕ್ಕೆ ಉಂಟಾಗುತ್ತಿರುವ ಧಕ್ಕೆ ಕುರಿತಂತೆ ಸವಿವರ ಲೇಖನ ಪ್ರಕಟ. 

               ಪರಿಣಾಮ: ‘ಅರ್ಕಾವತಿ ಏಕೀ ದುರ್ಗತಿ?’ ಲೇಖನ ಮಾಲಿಕೆ ನಂತರ ಅದನ್ನು ಸಮಗ್ರವಾಗಿ ಪುಸ್ತಕ ರೂಪದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಿಕೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಪ್ರಾಧಿಕಾರ ಅಥವಾ ಸಮಿತಿ ರಚನೆಗೆ ಮುಖ್ಯಮಂತ್ರಿ ಅವರು ಭರವಸೆ.

               ಅರ್ಕಾವತಿ ನದಿ ದುರ್ಗತಿಯನ್ನು ಈ ಲೇಖನ ಮಾಲಿಕೆ ಮೂಲಕ ಅರಿತ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ದಾಸರಹಳ್ಳಿ ಶಾಸಕ ಎಸ್. ಮುನಿರಾಜು ಅವರು ಜನರಲ್ಲಿ ನದಿ ಸಂರಕ್ಷಣೆಗೆ ಅರಿವು ಮೂಡಿಸಲು ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ 108 ಕಿಮೀ ದೂರ ನಾಲ್ಕು ದಿನ ಪಾದಯಾತ್ರೆ ಮಾಡಿದರು. ಸಚಿವರಾದ ಸುರೇಶ್ ಕುಮಾರ್, ಆರ್. ಅಶೋಕ್, ರಾಮಚಂದ್ರಗೌಡ, ಸಂಸದ ಅನಂತಕುಮಾರ್, ಪರಿಸರವಾದಿಗಳಾದ ಡಾ.ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್, ಮಹೇಶ್ ಭಟ್, ಸೀತಾರಾಂ ಸೇರಿದಂತೆ ಹಲವು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

               ಅರ್ಕಾವತಿ ನದಿ ಪುನಶ್ಚೇತನಕ್ಕೆ ಕಂದಾಯ, ಜಲಸಂಪನ್ಮೂಲ, ಜಲಮಂಡಳಿ ಖಾತೆ ಸಚಿವರ ನೇತೃತ್ವದಲ್ಲಿ  ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ‘ಅರ್ಕಾವತಿ ನದಿ ಪುನಶ್ಚೇತನ ಸಮಿತಿ’ ಮುಖ್ಯಮಂತ್ರಿ ಆದೇಶದ ಮೇರೆಗೆ ಇದೀಗ ಕಾರ್ಯನಿರ್ವಹಿಸುತ್ತಿದೆ. 


 

ಕಣಿವೆ ಬವಣೆ: ಬೆಂಗಳೂರಿನ ಕೋರಮಂಗಲ-ಚಲ್ಲಘಟ್ಟ-ವರ್ತೂರು ಕಣಿವೆಯ ಸರಣಿಯಲ್ಲಿರುವ ಕೆರೆಗಳು ಹಾಗೂ ಆ ಕಾಲುವೆಯಲ್ಲಿರುವ ರಾಸಾಯನಿಕ ಅಂಶಗಳಿಂದಾಗುತ್ತಿರುವ ದುಷ್ಪರಿಣಾಮ ಕುರಿತು ಕನ್ನಡಪ್ರಭದಲ್ಲಿ 2005 ಮೇ 22ರಿಂದ ಕಣಿವೆ ಬವಣೆ ಸರಣಿ ಲೇಖನ. ಈ ಸರಣಿ ನಂತರ, ಬೆಳ್ಳಂದೂರು ಕೆರೆ ಸೇರಿದಂತೆ ಈ ಭಾಗದ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲು ಆರಂಭಿಸಿತು.

ನಮ್ ಕೆರಿ ಕಥಿ:        ಧಾರವಾಡ ಜಿಲ್ಲೆಯಲ್ಲಿ ಶತಮಾನಗಳಿಂದ ಸಾವಿರಾರು ಕೆರೆಗಳಿದ್ದವು. ಜನರಿಗೆ ಕುಡಿಯುವ ನೀರು ಒದಗಿಸಲೆಂದೇ ಹಲವು ಕೆರೆಗಳನ್ನು ನಿರ್ಮಿಸಲಾಗಿತ್ತು. ಅಂತಹ ಜೀವಜಲ ಒದಗಿಸಿದ  ಕೆರೆಗಳಲ್ಲಿ ಇಂದು ಕೈ ಇಟ್ಟರೂ ರೋಗರುಜಿನಗಳು ಆವರಿಸಿಕೊಳ್ಳುವ ಸ್ಥಿತಿ. ಏಕೆಂದರೆ, ಒಳಚರಂಡಿ ನೀರು, ತಾಜ್ಯಕ್ಕೆ ಕೆರೆಗಳೇ ತಾಣವಾಗಿವೆ. ಇದೆಲ್ಲರ ಜೊತೆಗೆ ನೂರಾರು ಕೆರೆಗಳು ಒತ್ತುವರಿಯೂ ಆಗಿವೆ. ಕೆಲವು ಅಸ್ತಿತ್ವವನ್ನೇ ಕಳೆದುಕೊಂಡಿವೆ. ಅದರಲ್ಲೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಸ್ಥಿತಿಯಂತೂ ಶೋಚನೀಯ. ಅಭಿವೃದ್ಧಿಗೆ ಅಳಿದ ಕೆರೆಗಳ ನಡುವೆ, ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಕೆರೆಗಳು ತಿಣುಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಜಾವಾಣಿ – ‘ನಮ್‌ ಕೆರಿ ಕಥಿ’  ಸರಣಿ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 101 ಕೆರೆಗಳ ವಾಸ್ತವ ಸ್ಥಿತಿಯನ್ನು 2020ರ ಜನವರಿ 6ರಿಂದ ಫೆಬ್ರವರಿ 19ರವರೆಗೆ 20 ರವರೆಗೆ ತೆರೆದಿಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಕೆರೆಗಳ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಂಡಿದ್ದಾರೆ. ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕೆರೆಗಳ ಅಭಿವೃದ್ಧಿಗೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. 

ಗ್ರೀನ್ ಟಾಕ್: ಕೆರೆಗಳ ಇತಿಹಾಸಪರಿಸರದ ಕಾಳಜಿಪರಿಸರದ ಮೇಲಿನ ಪ್ರಚಲಿತ ವಿಷಯಗಳುಪರಿಸರ ಸಾಧಕರ ಪರಿಚಯಪ್ರಕೃತಿ ರಕ್ಷಣೆಯಲ್ಲಿ ನಾಗರಿಕ ವಿಷಯಗಳ ಬಗ್ಗೆ ಮಾತುಅಂಕಿಅಂಶಆಸಕ್ತಿದಾಯಕ ವಿವರಣೆಜಲಮೂಲಭೂಮಿ ಸೇರಿದಂತೆ ಪ್ರಕೃತಿಯ ಅಚ್ಚರಿ ಮಾಹಿತಿಗಳನ್ನು ಒಳಗೊಂಡ ಗ್ರೀನ್ ಟಾಕ್- ಪ್ರಕೃತಿ ಮಡಿಲ ಮಾತು ವಿಡಿಯೊ ಸರಣಿ ಪ್ರಜಾವಾಣಿ ವೆಬ್ ಸೈಟ್ ನಲ್ಲಿ 33 ಎಪಿಸೋಡ್ ಪ್ರಸಾರವಾಗಿದೆ. 

https://youtube.com/playlist?list=PLFwa4dONSLBP_XQRf-anKmJs48VAWFrni&si=44RcTX5jrFC43ugg

ಪ್ರಶಸ್ತಿ:       ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಯಜಮಾನ್ ಟಿ.ನಾರಾಯಣಪ್ಪ ಸ್ಮಾರಕ ಪ್ರಶಸ್ತಿ-2019 (ಅತ್ಯುತ್ತಮ ಕೃಷಿ ವರದಿ-ಪ್ರಜಾವಾಣಿಯಲ್ಲಿ ಪ್ರಕಟವಾದ ‘ಗುಳೆ ತಡೆದ ಮನೆಗೊಂದು ಕೆರೆ’)

               ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಮೈಸೂರು ದಿಗಂತ-2015 ಪ್ರಶಸ್ತಿ. (ಕನ್ನಡ ಪ್ರಭದಲ್ಲಿ ಪ್ರಕಟವಾದ ‘ಕಣಿವೆ ಬವಣೆ’ ಲೇಖನ ಸರಣಿಗೆ)

               ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ 2011ರಲ್ಲಿ ಕೆಂಪೇಗೌಡ ಪ್ರಶಸ್ತಿ.

               ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2008ರಲ್ಲಿ  ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ

ಹಲವು ಸಂಘ-ಸಂಸ್ಥೆಗಳಿಂದ ಪರಿಸರ ರತ್ನ, ಕನ್ನಡ ರತ್ನ, ಪರಿಸರ ಪ್ರೇಮಿ ಪ್ರಶಸ್ತಿಗಳು.

               ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಕೋಲಾರದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಕೆರೆಗಳ ವಸ್ತುಸ್ಥಿತಿ ಬಗ್ಗೆ ವಿಷಯ ಮಂಡನೆ.

No comments:

Post a Comment