Wednesday, October 8, 2025

Lake Buffer Zone: Amendment from the Legislative Assembly…. ಕೆರೆ ಬಫರ್‌ ಝೋನ್: ವಿಧಾನಸಭೆಯಿಂದ ತಿದ್ದೋಲೆ

Lake Buffer Zone: Amendment from the Legislative Assembly

Kere Manjunath ಕೆರೆ ಮಂಜುನಾಥ್


‘An amendment has been brought to the Lake Conservation and Development Authority (Amendment) Bill – 2025,’ said Legislative Assembly Secretary M.K. Vishalakshi.

This is an amendment that redefines the buffer zone of lakes. The buffer zone has been fixed in meters from the revenue boundary of the lake.

Report to Governor soon : Minor Irrigation Minister N.S. Bosaraju

An explanation will be submitted to the Governor soon with the advice of legal experts regarding the amendment bill related to the buffer zone of lakes, said Minor Irrigation Minister N.S. Bosaraju.

‘This historic amendment has been made through a scientific study. The Governor has sought an explanation based on a complaint from a Bengaluru-based organization. In this context, the necessary explanation will be submitted,’ he said.

‘A committee headed by the Chief Secretary and comprising members of the secretaries of the concerned departments prepared the amendment bill as per the decision and presented it in both the Houses. This has also been approved by both the Houses. In the wake of the complaint, the Governor has sought an explanation and an explanation is being prepared for this,’ he said.


Buffer zone of lakes

Lake area; Buffer zone

Up to 5 guntes; 0

5 guntes to 10 guntes; 1 m

10 guntes to 1 acre; 3 m

1 acre to 10 acres; 6 m

10 acres to 25 acres; 12 m

25 acres to 100 acres; 24 m

Above 100 acres; 30 m


Lake Buffer zone reduce: Governor returns Bill to Government.., ಕೆರೆ ಬಫರ್ ವಲಯ ಕಡಿತ: ಮಸೂದೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ ರಾಜ್ಯಪಾಲರು

Notification to reduce Rajakaluve buffer zone… ರಾಜಕಾಲುವೆ ಬಫರ್‌ ಝೋನ್‌ ಕಡಿತಕ್ಕೆ ಅಧಿಸೂಚನೆ

ALSO Read….. *LAKES 30 out meter buffer zone will be reduced*; benefits real estate in urban areas *ಕೆರೆಗಳ ‘ಸಂರಕ್ಷಿತ ಪ್ರದೇಶ’ಕ್ಕೆ ಕಂಟಕ*

ALSO Read…. 172 water bodies under BBMP jurisdiction reduced to ‘protected areas’ *ಬೆಂಗಳೂರಿನಲ್ಲಿ 11 ಕೆರೆಗಷ್ಟೇ 30 ಮೀಟರ್‌ ಬಫರ್‌ ಝೋನ್‌!*

ALSO Read…. 42 km service road in Rajakaluve buffer zone ರಾಜಕಾಲುವೆ ಬಫರ್‌ ಝೋನ್‌ನಲ್ಲಿ 42 ಕಿ.ಮೀ ಸರ್ವಿಸ್‌ ರಸ್ತೆ

_First-of-its-kind Proposal in the Country for Scientific Modification of Buffer Zones: KTDCA _ *ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಬಫರ್‌ ಝೋನ್‌ ತಿದ್ದುಪಡಿ:ಕೆಟಿಸಿಡಿಎ*



ಕೆರೆ ಬಫರ್‌ ಝೋನ್: ವಿಧಾನಸಭೆಯಿಂದ ತಿದ್ದೋಲೆ

Kere Manjunath ಕೆರೆ ಮಂಜುನಾಥ್

‘ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ– 2025ಕ್ಕೆ  ತಿದ್ದೋಲೆಯನ್ನು ತರಲಾಗಿದೆ’ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.

ಕೆರೆಗಳ ಬಫರ್‌ ಝೋನ್‌ ವಲಯವನ್ನು ಮರುನಿಗದಿಪಡಿಸಿದ ತಿದ್ದೋಲೆ ಇದಾಗಿದೆ. ಕೆರೆಯ ಕಂದಾಯ ಗಡಿಯಿಂದ ಬಫರ್‌ ವಲಯವನ್ನು ಮೀಟರ್‌ಗಳಲ್ಲಿ ನಿಗದಿಪಡಿಸಲಾಗಿದೆ.


ರಾಜ್ಯಪಾಲರಿಗೆ ಶೀಘ್ರದಲ್ಲೇ ವರದಿ: ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು

ಕೆರೆಗಳ ಬಫರ್‌ ಝೋನ್‌ಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕದ ಕುರಿತಂತೆ ಕಾನೂನು ತಜ್ಞರ ಸಲಹೆಯೊಂದಿಗೆ ರಾಜ್ಯಪಾಲರಿಗೆ ವಿವರಣೆಯನ್ನು ಶೀಘ್ರವೇ  ಸಲ್ಲಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ತಿಳಿಸಿದ್ದಾರೆ.

‘ಈ ಐತಿಹಾಸಿಕ ತಿದ್ದುಪಡಿಯು ವೈಜ್ಞಾನಿಕವಾದ ಅಧ್ಯಯನದ ಮೂಲಕ ಕೈಗೊಳ್ಳಲಾಗಿದೆ. ಬೆಂಗಳೂರು ಮೂಲದ ಸಂಸ್ಥೆಯ ದೂರಿನ ಅನ್ವಯ ರಾಜ್ಯಪಾಲರು ವಿವರಣೆ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ವಿವರಣೆ ಸಲ್ಲಿಸಲಾಗುವುದು’ ಎಂದಿದ್ದಾರೆ.

‘ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆ ಹಾಗೂ ಸಂಬಂಧಿತ ಇಲಾಖೆಗಳ ಕಾರ್ಯದರ್ಶಿಗಳ ಸದಸ್ಯರನ್ನೊಳಗೊಂಡ ಸಮಿತಿಯು ನಿರ್ಧಾರದಂತೆ ತಿದ್ದುಪಡಿ ವಿಧೇಯಕವನ್ನು ಸಿದ್ದಪಡಿಸಿ ಉಭಯ ಸದನಗಳಲ್ಲಿ ಮಂಡಿಸಲಾಗಿತ್ತು. ಇದಕ್ಕೆ ಉಭಯ ಸದನದಲ್ಲೂ ಒಪ್ಪಿಗೆ ದೊರೆತಿದೆ. ದೂರಿನ ಹಿನ್ನಲೆಯಲ್ಲಿ ರಾಜ್ಯಪಾಲರು ವಿವರಣೆ ಕೇಳಿದ್ದು, ಇದಕ್ಕೆ ವಿವರಣೆಯನ್ನು ಸಿದ್ದಪಡಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

 

ಕೆರೆಗಳ ಬಫರ್‌ ಝೋನ್‌

ಕೆರೆ ವಿಸ್ತೀರ್ಣ; ಬಫರ್‌ ಝೋನ್‌

5 ಗುಂಟೆವರೆಗೆ; 0

5 ಗುಂಟೆಯಿಂದ 10 ಗುಂಟೆ; 1 ಮೀ

10 ಗುಂಟೆಯಿಂದ 1 ಎಕರೆ; 3 ಮೀ

1 ಎಕರೆಯಿಂದ 10 ಎಕರೆ; 6 ಮೀ

10 ಎಕರೆಯಿಂದ 25 ಎಕರೆ; 12 ಮೀ

25 ಎಕರೆಯಿಂದ 100 ಎಕರೆ; 24 ಮೀ

100 ಎಕರೆಗೂ ಮೇಲ್ಪಟ್ಟು; 30 ಮೀ

Saturday, October 4, 2025

GBA, 5 Municipal Corporations Staff Not Paid September Salary… ಜಿಬಿಎ, 5 ನಗರ ಪಾಲಿಕೆಗಳ ಸಿಬ್ಬಂದಿಗೆ ಸೆಪ್ಟೆಂಬರ್ ವೇತನವಾಗಿಲ್ಲ

GBA, 5 Municipal Corporations Staff Not Paid September Salary



Bengaluru: The September salary of the staff of Greater Bengaluru and five municipal corporations has not been paid.

On September 2, the BBMP was dissolved and the Greater Bengaluru Authority was formed. Five municipal corporations also came into existence. Knowing this, the BBMP officials had paid the August salary in the last week of that month. But the GBA and municipal corporations have not paid the September salary even after a month of their existence, even by October 4.

GBA Chief Commissioner Maheshwar Rao had said that money has been transferred to the bank accounts of municipal corporations for emergency management and staff salaries. In previous years, there was a process of paying the staff in advance and early during the Ayudha Puja. But this time, the staff complained that the salary has not been paid even though Ayudha Puja and Vijayadashami have passed.


‘In the previous 10 years of the corporation, the employees have not faced such a miserable situation. The Greater Bengaluru Authority was formed on September 2. "No action has been taken to pay the September salary till date," said A. Amrit Raj, a city corporation officer and president of the employees' welfare association of the Greater Bengaluru Authority.


"Meanwhile, B and C grade staff of the city corporations have been assigned for the work of the Social and Educational Survey 2025, but the salary bill has not been prepared in any office of the corporation. There is no staff in the accounts department to take action regarding the payment of that bill. They are all actively involved in election duty, survey work and other work," he said.

"We will continue to perform our duties in the same way. However, in a big city like Bangalore, if the salary is not paid on time, we will have to face many problems. In such a situation, we kindly request the higher officials of the corporation to pay attention to this matter and pay the September salary quickly," he said.



ಜಿಬಿಎ, 5 ನಗರ ಪಾಲಿಕೆಗಳ ಸಿಬ್ಬಂದಿಗೆ ಸೆಪ್ಟೆಂಬರ್ ವೇತನವಾಗಿಲ್ಲ

ಬೆಂಗಳೂರು: ಗ್ರೇಟರ್ ಬೆಂಗಳೂರು ಹಾಗೂ ಐದು ನಗರ ಪಾಲಿಕೆಗಳ ಸಿಬ್ಬಂದಿಗೆ ಸೆಪ್ಟೆಂಬರ್ ವೇತನ ಪಾವತಿಯಾಗಿಲ್ಲ.
ಸೆಪ್ಟೆಂಬರ್ 2 ರಂದು ಬಿಬಿಎಂಪಿ ವಿಸರ್ಜನೆಯಾಗಿ  ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಯಿತು. ಐದು ನಗರ ಪಾಲಿಕೆಗಳೂ ಅಸ್ತಿತ್ವಕ್ಕೆ ಬಂದವು. ಇದನ್ನು ಅರಿತಿದ್ದ ಬಿಬಿಎಂಪಿ ಅಧಿಕಾರಿಗಳು ಆಗಸ್ಟ್ ವೇತನವನ್ನು ಆ ತಿಂಗಳ ಕೊನೆಯ ವಾರದಲ್ಲೇ ಪಾವತಿಸಿದ್ದರು. ಆದರೆ ಜಿಬಿಎ, ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದು ಒಂದು ತಿಂಗಳಾದರೂ ಸೆಪ್ಟೆಂಬರ್ ವೇತನವನ್ನು ಅಕ್ಟೋಬರ್ 4 ಕ್ಕಾದರೂ ಪಾವತಿಸಿಲ್ಲ.
ತುರ್ತು ನಿರ್ವಹಣೆ, ಸಿಬ್ಬಂದಿ ವೇತನಕ್ಕೆ ನಗರ ಪಾಲಿಕೆಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದರು. ಈ ಹಿಂದಿನ ವರ್ಷಗಳಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಸಿಬ್ಬಂದಿಗೆ ಮುಂಗಡ, ಬೇಗ ವೇತನ ಪಾವತಿಸುವ ಪ್ರಕ್ರಿಯೆ ಇತ್ತು. ಆದರೆ ಈ ಬಾರಿ  ಆಯುಧಪೂಜೆ, ವಿಜಯ ದಶಮಿ ಮುಗಿದು ಹೋಗಿದ್ದರೂ ವೇತನ ಪಾವತಿಸಿಲ್ಲ ಎಂದು ಸಿಬ್ಬಂದಿ ದೂರಿದರು.

‘ಪಾಲಿಕೆಯ ಹಿಂದಿನ 10 ವರ್ಷಗಳಲ್ಲಿ ಎಂದು ನೌಕರರಿಗೆ ಇಂತಹ ದಯನೀಯ ಸ್ಥಿತಿ ಎದುರಾಗಿರಲಿಲ್ಲ. ಸೆಪ್ಟೆಂಬರ್ 2 ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ. ಈ ದಿನದವರೆಗೂ ಸೆಪ್ಟೆಂಬರ್ ವೇತನವನ್ನು ಪಾವತಿಸಲು ಕ್ರಮವಹಿಸಿಲ್ಲ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ತಿಳಿಸಿದರು.

‘ಈ ಮಧ್ಯೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ರ ಕಾರ್ಯಕ್ಕೆ ನಗರ ಪಾಲಿಕೆಗಳ ಬಿ ಮತ್ತು ಸಿ ದರ್ಜೆಯ ಸಿಬ್ಬಂದಿಯನ್ನು ನಿಯೋಜಿಸಿದ್ದು ಪಾಲಿಕೆ ಯಾವ ಕಚೇರಿಯಲ್ಲೂ ಸಹ ವೇತನ ಬಿಲ್ಲನ್ನು ತಯಾರಿಸಲಾಗಿಲ್ಲ. ಆ ಬಿಲ್ಲನ್ನು ಪಾವತಿಸುವ ಬಗ್ಗೆ ಕ್ರಮ ವಹಿಸಲು ಲೆಕ್ಕ ಶಾಖೆಯಲ್ಲಿ ಸಿಬ್ಬಂದಿ ಇರುವುದಿಲ್ಲ. ಅವರೆಲ್ಲ ಚುನಾವಣೆ ಕರ್ತವ್ಯ, ಸಮೀಕ್ಷೆ ಕೆಲಸ ಕಾರ್ಯಗಳು ಮತ್ತು ಇತರೆ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ’ ಎಂದರು.
‘ನಾವೆಲ್ಲ ಇನ್ನು ಮುಂದೆ ಸಹ ಅದೇ ರೀತಿ ಕರ್ತವ್ಯ ನಿರ್ವಹಿಸುತ್ತೇವೆ. ಆದರೆ, ಬೆಂಗಳೂರಿನಂತಹ ಒಂದು ದೊಡ್ಡ ನಗರದಲ್ಲಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದೆ ಇದ್ದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದಯಮಾಡಿ ಪಾಲಿಕೆ ಉನ್ನತ ಅಧಿಕಾರಿಗಳು ಈ ವಿಷಯದ ಬಗ್ಗೆ ಗಮನಹರಿಸಿ ಸೆಪ್ಟೆಂಬರ್ ವೇತನವನ್ನು ತ್ವರಿತವಾಗಿ ಪಾವತಿಸಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇವೆ’ ಎಂದರು.

Friday, October 3, 2025

R.R. Nagar in three CITY corporations…. ಮೂರು ಪಾಲಿಕೆಯಲ್ಲಿ ಆರ್.ಆರ್. ನಗರ

R.R. Nagar in three CITY corporations

Wards of Dasarahalli, Mahadevapura, Yeshwantpur, Padmanabhanagar assembly constituency in two City corporations 



Kere Manjunath ಕೆರೆ ಮಂಜುನಾಥ್

Bengaluru: Although there are rules that the areas of one assembly constituency should be in one City corporation, the areas under the jurisdiction of five assembly constituencies have been divided among more than two City corporations.

According to Sub-section 3 of the Greater Bangalore Administration Act-2024 (GBGA) Chapter 4, the formation of City corporations, ‘an assembly constituency shall not be divided into two or more municipal corporations’. However, as per the draft notification for the ward re-demarcation of City corporations, a total of 19 wards under the jurisdiction of Rajarajeshwari Nagar assembly constituency have been divided among three City corporations.

There are 13 wards in the West City Corporation, five in the North CITY Corporation and one in the South CITY Corporation.

Out of 12 wards in the Yeshwanthpur assembly constituency, one ward is in the South CITY Corporation, while the remaining 11 wards are in the West CITY Corporation. Out of 18 wards in the Dasarahalli assembly constituency, 8 wards are in the North Municipal Corporation, while the West CITY Corporation has 10 wards. Out of 14 wards in the Padmanabhagar assembly constituency, 6 wards are in the South CITY Corporation and 8 wards are in the West CITY Corporation. Out of 24 wards in the Mahadevapura assembly constituency, only one ward is in the South CITY Corporation, while the remaining 23 wards are in the East CITY Corporation.

25 thousand population:

 The average ward population of all five city corporations has been re-allocated to 25 thousand. Each ward has a population of 20,000 to 27,000 out of a total of 368 wards.

Ward Map: The ward boundaries of the five municipal corporations have been published online 

https://bbmp.gov.in/gba-corporations-delimitation-2025/

along with the assembly map and ward map by the Greater Bengaluru Authority (GBA).


Which assembly constituency is in which CITY corporation?

Bangalore Central CITY Corporation- Total 63 wards

Chamarajapet (10 wards), Chikkapet (12 wards), C.V. Raman Nagar (13 wards), Gandhinagar (10 wards), Shanthinagar (10 wards), Shivajinagar (8 wards).


Bengaluru North CITY Corporation- Total 72 wards

Dasarahalli (8 wards), Pulakeshinagar (11 wards) Batarayanapur (14 wards), Yalahanka (7 wards), Rajarajeshwarinagar (5 wards), Sarvajnanagar (16 wards), Hebbala (11 wards).


Bangalore South CITY Corporation- Total 72 wards

Anekal (1 Ward), Jayanagar (10 Ward), Padmanabhanagar (6 Ward), BTM Layout (13 Ward), Bangalore South (19 Ward), Bommanahalli (20 Ward), Mahadevpur (1 Ward), Yeshavantpur (1 Ward), Rajarajeshwari Nagar (1 Ward).


Bangalore East City Corporation- Total 50 Wards

K.R. Pura (27 wards), Mahadevapura (23 wards)


Bangalore West CITY Corporation- Total 111 wards

Govindaraja Nagar (13 wards), Dasarahalli (10 wards), Padmanabhanagar (8 wards), Basavanagudi (10 wards), Malleshwara (10 wards), Mahalakshmi Layout (12 wards), Yeshwantpur (11 wards), Rajarajeshwari Nagar (13 wards), Rajajinagar (11 wards), Vijayanagar (13 wards).


K.R. Pura has the most wards

Out of the 28 assembly constituencies under GBA, K.R. Pura has the most wards, while Anekal assembly constituency has only one ward as before.

K.R. Pura has 27 wards, while Mahadevapura has 24 wards. Bommanahalli assembly constituency has 20 wards, while Bangalore South and Rajarajeshwari Nagar have 19 wards each. Dasarahalli (18 wards), Sarvajnanagar (16 wards), Padmanabhanagar (14 wards), Byatarayanapura (14 wards) and Vijayanagar, BTM Layout, C.V. Raman Nagar, Govindaraja Nagar assembly constituencies have 13 wards each.


What is your City Corporation? Which ward is your area under? Click here to get information like your assembly constituency….




ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ


ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



ಮೂರು ಪಾಲಿಕೆಯಲ್ಲಿ ಆರ್.ಆರ್. ನಗರ

ಎರಡು ನಗರ ಪಾಲಿಕೆಗಳಲ್ಲಿ ದಾಸರಹಳ್ಳಿ, ಮಹದೇವಪುರ, ಯಶವಂತಪುರ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡಗಳು 

Kere Manjunath ಕೆರೆ ಮಂಜುನಾಥ್

ಬೆಂಗಳೂರು: ಒಂದು ವಿಧಾನಸಭೆ ಕ್ಷೇತ್ರದ ಪ್ರದೇಶಗಳು ಒಂದು ನಗರ ಪಾಲಿಕೆಯಲ್ಲೇ ಇರಬೇಕೆಂಬ ನಿಯಮಗಳಿದ್ದರೂ, ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಪ್ರದೇಶಗಳು ಎರಡಕ್ಕಿಂತ ಹೆಚ್ಚು ನಗರ ಪಾಲಿಕೆಗಳಲ್ಲಿ ಹಂಚಿಕೆಯಾಗಿವೆ.

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 (ಜಿಬಿಜಿಎ) ಅಧ್ಯಾಯ 4ರ ನಗರ ಪಾಲಿಕೆ ರಚನೆಯ ಉಪ ಪ್ರಕರಣ 3ರ ಪ್ರಕಾರ, ‘ಒಂದು ವಿಧಾನಸಭೆ ಕ್ಷೇತ್ರವನ್ನು ಎರಡು ಅಥವಾ ಹೆಚ್ಚಿನ ನಗರ ಪಾಲಿಕೆಗಳಿಗೆ ವಿಭಜಿಸತಕ್ಕದ್ದಲ್ಲ’. ಆದರೆ, ನಗರ ಪಾಲಿಕೆಗಳ ವಾರ್ಡ್ ಪುನರ್ ವಿಂಗಡಣೆಯ ಕರಡು ಅಧಿಸೂಚನೆಯಂತೆ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಒಟ್ಟು 19 ವಾರ್ಡ್ ಗಳು ಮೂರು ನಗರ ಪಾಲಿಕೆಗಳಿಗೆ ಹಂಚಿಕೆಯಾಗಿವೆ.

ಪಶ್ಚಿಮ ನಗರ ಪಾಲಿಕೆಯಲ್ಲಿ 13 ವಾರ್ಡ್ ಗಳಿದ್ದರೆ, ಉತ್ತರ ನಗರ ಪಾಲಿಕೆಯಲ್ಲಿ ಐದು ವಾರ್ಡ್ ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಒಂದು ವಾರ್ಡ್ ಇದೆ.

ಯಶವಂತಪುರ ವಿಧಾನಸಭೆ ಕ್ಷೇತ್ರದ 12 ವಾರ್ಡ್ ಗಳಲ್ಲಿ ಒಂದು ವಾರ್ಡ್ ದಕ್ಷಿಣ ನಗರ ಪಾಲಿಕೆಯಲ್ಲಿದ್ದರೆ, ಉಳಿದ 11 ವಾರ್ಡ್ ಗಳು ಪಶ್ಚಿಮ ನಗರ ಪಾಲಿಕೆಯಲ್ಲಿವೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ 18 ವಾರ್ಡ್ ಗಳಲ್ಲಿ 8 ವಾರ್ಡ್ ಗಳು ಉತ್ತರ ನಗರ ಪಾಲಿಕೆಯಲ್ಲಿದ್ದರೆ, ಪಶ್ಚಿಮ ನಗರ ಪಾಲಿಕೆಯಲ್ಲಿ 10 ವಾರ್ಡ್ ಗಳಿವೆ. ಪದ್ಮನಾಭಗರ ವಿಧಾನಸಭೆ ಕ್ಷೇತ್ರದ 14 ವಾರ್ಡ್ ಗಳಲ್ಲಿ ದಕ್ಷಿಣ ನಗರ ಪಾಲಿಕೆಯಲ್ಲಿ 6 ವಾರ್ಡ್ ಹಾಗೂ ಪಶ್ಚಿಮ ನಗರ ಪಾಲಿಕೆಯಲ್ಲಿ 8 ವಾರ್ಡ್ ಗಳು ಹಂಚಿಕೆಯಾಗಿವೆ. ಮಹದೇವಪುರ ವಿಧಾನಸಭೆ ಕ್ಷೇತ್ರದ 24 ವಾರ್ಡ್ ಗಳಲ್ಲಿ ಒಂದು ವಾರ್ಡ್ ಮಾತ್ರ ದಕ್ಷಿಣ ನಗರ ಪಾಲಿಕೆಯಲ್ಲಿದ್ದು, ಉಳಿದ 23 ವಾರ್ಡ್ ಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿವೆ.

25 ಸಾವಿರ ಜನಸಂಖ್ಯೆ:

 ಐದೂ ನಗರ ಪಾಲಿಕೆಗಳ ವಾರ್ಡ್ ಜನಸಂಖ್ಯೆಯನ್ನು ಸರಾಸರಿ 25 ಸಾವಿರವಿರುವಂತೆ ಪುನರ್ ವಿಂಗಡಣೆ ಮಾಡಲಾಗಿದೆ. ಒಟ್ಟು 368 ವಾರ್ಡ್ ಗಳಲ್ಲಿ ಪ್ರತಿಯೊಂದು ವಾರ್ಡ್ ಜನಸಂಖ್ಯೆ 20 ಸಾವಿರದಿಂದ 27 ಸಾವಿರ ಇದೆ.

ವಾರ್ಡ್ ನಕ್ಷೆ: 

ಐದು ನಗರ ಪಾಲಿಕೆಗಳ ವಾರ್ಡ್ ಗಳ ಗಡಿಯನ್ನು ವಿಧಾನಸಭೆ ನಕ್ಷೆ, ವಾರ್ಡ್ ನಕ್ಷೆಯೊಂದಿಗೆ ಆನ್ ಲೈನ್ ನಲ್ಲಿ (https://bbmp.gov.in/gba-corporations-delimitation-2025/) ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರಕಟಿಸಿದೆ.

 

ಯಾವ ನಗರ ಪಾಲಿಕೆಯಲ್ಲಿದೆ ಯಾವ ವಿಧಾನಸಭೆ ಕ್ಷೇತ್ರ?

ಬೆಂಗಳೂರು ಕೇಂದ್ರ ನಗರ ಪಾಲಿಕೆ- ಒಟ್ಟು 63 ವಾರ್ಡ್

ಚಾಮರಾಜಪೇಟೆ (10 ವಾರ್ಡ್), ಚಿಕ್ಕಪೇಟೆ (12 ವಾರ್ಡ್), ಸಿ.ವಿ. ರಾಮನ್ ನಗರ (13 ವಾರ್ಡ್), ಗಾಂಧಿನಗರ (10 ವಾರ್ಡ್), ಶಾಂತಿನಗರ (10 ವಾರ್ಡ್), ಶಿವಾಜಿನಗರ (8 ವಾರ್ಡ್).

 

ಬೆಂಗಳೂರು ಉತ್ತರ ನಗರ ಪಾಲಿಕೆ- ಒಟ್ಟು 72 ವಾರ್ಡ್

ದಾಸರಹಳ್ಳಿ (8 ವಾರ್ಡ್), ಪುಲಕೇಶಿನಗರ (11 ವಾರ್ಡ್) ಬ್ಯಾಟರಾಯನಪುರ (14 ವಾರ್ಡ್), ಯಲಹಂಕ (7 ವಾರ್ಡ್), ರಾಜರಾಜೇಶ್ವರಿನಗರ (5 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಹೆಬ್ಬಾಳ (11 ವಾರ್ಡ್).

 

ಬೆಂಗಳೂರು ದಕ್ಷಿಣ ನಗರ ಪಾಲಿಕೆ- ಒಟ್ಟು 72 ವಾರ್ಡ್

ಆನೇಕಲ್ (1 ವಾರ್ಡ್), ಜಯನಗರ (10 ವಾರ್ಡ್), ಪದ್ಮನಾಭನಗರ (6 ವಾರ್ಡ್), ಬಿಟಿಎಂ ಲೇಔಟ್ (13 ವಾರ್ಡ್), ಬೆಂಗಳೂರು ದಕ್ಷಿಣ (19 ವಾರ್ಡ್), ಬೊಮ್ಮನಹಳ್ಳಿ (20 ವಾರ್ಡ್), ಮಹದೇವಪುರ (1 ವಾರ್ಡ್), ಯಶವಂತಪುರ (1 ವಾರ್ಡ್), ರಾಜರಾಜೇಶ್ವರಿ ನಗರ (1 ವಾರ್ಡ್).

 

ಬೆಂಗಳೂರು ಪೂರ್ವ ನಗರ ಪಾಲಿಕೆ- ಒಟ್ಟು 50 ವಾರ್ಡ್

ಕೆ.ಆರ್. ಪುರ (27 ವಾರ್ಡ್), ಮಹದೇವಪುರ (23 ವಾರ್ಡ್)

 

ಬೆಂಗಳೂರು ಪಶ್ಚಿಮ ನಗರ ಪಾಲಿಕೆ- ಒಟ್ಟು 111 ವಾರ್ಡ್

ಗೋವಿಂದರಾಜ ನಗರ (13 ವಾರ್ಡ್), ದಾಸರಹಳ್ಳಿ (10 ವಾರ್ಡ್), ಪದ್ಮನಾಭನಗರ (8 ವಾರ್ಡ್), ಬಸವನಗುಡಿ (10 ವಾರ್ಡ್), ಮಲ್ಲೇಶ್ವರ (10 ವಾರ್ಡ್), ಮಹಾಲಕ್ಷ್ಮಿ ಲೇಔಟ್ (12 ವಾರ್ಡ್), ಯಶವಂತಪುರ (11 ವಾರ್ಡ್), ರಾಜರಾಜೇಶ್ವರಿ ನಗರ (13 ವಾರ್ಡ್), ರಾಜಾಜಿನಗರ (11 ವಾರ್ಡ್), ವಿಜಯನಗರ (13 ವಾರ್ಡ್).

 

ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್

ಜಿಬಿಎ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್ ಗಳಿದ್ದು, ಆನೇಕಲ್ ವಿಧಾನಸಭೆ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದಂತೆ ಒಂದು ವಾರ್ಡ್ ಮಾತ್ರ ಇದೆ.

ಕೆ.ಆರ್. ಪುರದಲ್ಲಿ 27 ವಾರ್ಡ್ ಗಳಿದ್ದು, ಮಹದೇವಪುರದಲ್ಲಿ 24 ವಾರ್ಡ್ ಗಳಿವೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 20 ವಾರ್ಡ್ ಗಳಿದ್ದರೆ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ತಲಾ 19 ವಾರ್ಡ್ ಗಳಿವೆ. ದಾಸರಹಳ್ಳಿ (18 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಪದ್ಮನಾಭನಗರ (14 ವಾರ್ಡ್), ಬ್ಯಾಟರಾಯನಪುರ (14 ವಾರ್ಡ್) ಮತ್ತು ವಿಜಯನಗರ, ಬಿಟಿಎಂ ಲೇಔಟ್, ಸಿ.ವಿ. ರಾಮನ್ ನಗರ, ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 13 ವಾರ್ಡ್ ಗಳಿವೆ.

Wednesday, October 1, 2025

City Corporation ward name: DVG for Kalasipalya, Abdul Kalam for Jayanagar… ಕಲಾಸಿಪಾಳ್ಯಕ್ಕೆ ಡಿವಿಜಿ, ಜಯನಗರಕ್ಕೆ ಅಬ್ದುಲ್ ಕಲಾಂ

Ward names include Subhash Chandra Bose, Mangal Pandey, Kuvempu, Puneeth, Abdul Kalam Azad, Krishnadevaraya, Vivekananda, Anibesant

City Corporation ward name: DVG for Kalasipalya, Abdul Kalam for Jayanagar




Kere Manjunath ಕೆರೆ ಮಂಜುನಾಥ್

Bengaluru: Various wards of five City corporations have been named after historical maharajas, freedom fighters, writers, scientists, social activists and film actors.

The ward covering Kalasipalya areas under the jurisdiction of Bangalore Central City Corporation has been named after literary figure D.V. Gumpa. The ward covering Jayanagar T-block areas of South City Corporation has been named after former President Abdul Kalam, and the ward covering the areas of Kumaraswamy Layout 2nd phase has been named after Abdul Kalam Azad, who was the education minister.

The names of special personalities and achievers have increased in the wards of the West City Corporation. The South City Corporation is at the second position in this list, followed by the Central, Northern and Eastern Municipal Corporations.

The wards in the West City Corporation, which include the Kamakshi Palya area, Kempapura Agrahara, Magadi Road KHB Colony areas, have been named after freedom fighters ‘Mangal Pandey’, ‘Sangolli Rayanna’ and ‘Rani Jhansi’ respectively.

The ward in the Shankarnagar area is named after the Maharaja of Mysore ‘Nalvadi Krishnaraja Wodeyar’, the ward in the Bapujinagar area is named after the King of Vijayanagar ‘Krishna Devaraya’, the ward in the Kanteerava Studio area is named after the actor ‘Dr. Puneeth Rajkumar: The ward in Dasarahalli-Rajagopala Nagar has been named after politician Shantaveri Gopalagowda, the ward in Peenya Andrahalli has been named ‘Nadaprabhu Kempegowda Nagar’, and the ward in Nandini Layout area has been named ‘Kittur Rani Channamma’.

The ward in Laggere area has been named ‘Freedom Fighter Ward’, the ward in Rajajinagar 4th M Block area has been named after Jnanpith awardee D.R. Bendre, the ward in Rajajinagar 6th Block has been named after ‘Dr. Rajkumar’ and the ward in Hosakerehalli Layout, Banashankari 3rd Phase areas has been named ‘Swami Vivekananda’.


Important names for wards

Among the wards in the South City Corporation, Chikkalasandra area has been named ‘Sarvabhoumanagara’, Koramangala 6th block has been named after social activist ‘Anni Besant’, BTM Layout 1st phase has been named ‘Vishvamanava Kuvempu’, Bommanahalli’s K.R. Layout has been named ‘Kengal Hanumanthaiyya’.

Wards under the jurisdiction of the Central City Corporation have been named as Ittage Anjanappa Lane, Chowdappa Road as ‘IDP Salappa’, Manjunatha Nagar B Block, Gandhinagar area as ‘Subhashchandra Bose’.

In the North City Corporation, Hidayat Nagar has been named ‘Samadhana Nagar’, HBR Layout 5th Block has been named after educationist ‘Aruna Asif Ali’, and Devarajeevanahalli has been named ‘Doddannanagara’.

In the East City Corporation, Kottur-Darga Mohalla has been named after poet ‘K.S. Nisar Ahmed’, and the Science City on Kaggadasapura main road has been named ‘Talacauvery’.


Bangalore South City Corporation

3. Sarvabhaumanagar: Chikkalasandra, Sewell Hills Layout

18. Anibesent: Koramangala 6th Block, Ashwini Layout

22. Abdul Kalam Nagar: Jayanagar T Block, Gurappanapally

26. Vishwamanava Kuvempu: Mico Layout, BHBCS Layout, Kuvempunagar, BTM Layout 1st Phase

60. Kengal Hanumanthaiah: K.R. Layout, Bommanahalli

66. Abdul Kalam Azad: Kumaraswamy Layout 2nd Phase


Bangalore Central City Corporation

43. D.V. Gundappa: Kalasipalya

46. ​​IDP Salappa: Ittage Anjanappa Lane, Chaudappa Road, Tankbund Road

48. Subhash Chandra Bose: Manjunath Nagar B Block, Gandhinagar


Bangalore North City Corporation

53. Samadhana Nagar: Hidayat Nagar

67. Aruna Asif Ali: Munishwar Nagar, Saeed Nagar, Shadab Nagar, HBR Layout 5th Block

70. Doddannanagar: Devarjeevanahalli


Bangalore East City Corporation

22. K.S. Nisar Ahmed: Pi Payout, A Block, Dargah Mohalla – Kottoor

36. Talakaveri: Vigyan Nagar, K.R. Pura Kaggadaspur Main Road


Bengaluru West City Corporation

14. Nalvadi Krishnaraja Wodeyar: Between Shankar Nagar, Vijayananda Nagar, Tumkur Road, Card Road, Mahalakshmi Laut.

15. Dr. Puneeth Rajkumar: Rajiv Gandhi Nagar, Gayathri HBCS Layout – Kantheerava Studio Main Road, 

19. Shantaveri Gopalagowda: Between Shivpur – Dasarahalli, Rajagopalnagar, Shushrut Hospital

21. Nadaprabhu Kempegowda Nagar: Between Tunganagar, Phenomena Nagar, Lingadhirnagar, Syndicate Bangkok, Hosahalli Gollarpalya, Gollarhatti- Peenya, Andhrahalli Main Road, Herohalli Main Road

29. Freedom Fighter Ward: Laggere Seruve, in the middle of outer circle

31. Kittur Rani Channamma: BHEL Officers Colony, Sakamma Layout – Nandini Layout, in the midst of Saraswatipur

57. D.Ra. Bendre: Rajajinagar 4th M Block

58. Dr. Rajkumar: Rajajinagar 6th Block

61. Rani Jhansi Ward: Meenakshi Nagar, KHB Colony Magadi Road

63. Mangal Pandey Ward: Kamakshi Palya

70. Sangolli Rayanna: Kempapura Agrahara, Vijayanagar

71. Krishnadevaraya: Bapujinagar, 

87, Swami Vivekananda Ward: Hoskerehalli Block, Banashankari 3rd Phase, Girinagar


ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ


ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



ವಾರ್ಡ್‌ ಹೆಸರಿನಲ್ಲಿ ಸುಭಾಷ್‌ ಚಂದ್ರ ಬೋಸ್‌, ಮಂಗಲ್‌ ಪಾಂಡೆ, ಕುವೆಂಪು, ಪುನೀತ್‌, ಅಬ್ದುಲ್ ಕಲಾಂ ಆಜಾದ್‌, ಕೃಷ್ಣದೇವರಾಯ, ವಿವೇಕಾನಂದ, ಅನಿಬೆಸೆಂಟ್‌

ಕಲಾಸಿಪಾಳ್ಯಕ್ಕೆ ಡಿವಿಜಿ, ಜಯನಗರಕ್ಕೆ ಅಬ್ದುಲ್ ಕಲಾಂ

Kere Manjunath ಕೆರೆ ಮಂಜುನಾಥ್

ಬೆಂಗಳೂರು: ಇತಿಹಾಸ ಪ್ರಸಿದ್ಧ ಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು, ಚಿತ್ರನಟರ ಹೆಸರನ್ನು ಐದು ನಗರ ಪಾಲಿಕೆಗಳ ವಿವಿಧ ವಾರ್ಡ್‌ಗಳಿಗೆ ಹೆಸರಿಸಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಲಾಸಿಪಾಳ್ಯದ ಪ್ರದೇಶಗಳನ್ನು  ಒಳಗೊಂಡಿರುವ ವಾರ್ಡ್‌ ಸಾಹಿತಿ ಡಿ.ವಿ. ಗುಂಪ್ಪ ಅವರ ಹೆಸರಿಡಲಾಗಿದೆ. ದಕ್ಷಿಣ ನಗರ ಪಾಲಿಕೆಯ ಜಯನಗರ ಟಿ ಬ್ಲಾಕ್‌ ಪ್ರದೇಶಗಳ ವಾರ್ಡ್‌ಗೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಆಜಾದ್‌ ಅವರ ಹೆಸರನ್ನು ಕುಮಾಸ್ವಾಮಿ ಲೇಔಟ್‌ 2ನೇ ಹಂತದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಇಡಲಾಗಿದೆ.

ವಿಶೇಷ ವ್ಯಕ್ತಿಗಳು ಹಾಗೂ ಸಾಧಕರ ಹೆಸರು ಪಶ್ಚಿಮ ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಹೆಚ್ಚಾಗಿದೆ. ದಕ್ಷಿಣ ನಗರ ಪಾಲಿಕೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ,  ಕೇಂದ್ರ, ಉತ್ತರ, ಪೂರ್ವ ನಗರ ಪಾಲಿಕೆಗಳು ನಂತರದ ಸ್ಥಾನದಲ್ಲಿವೆ.

ಪಶ್ಚಿಮ ನಗರ ಪಾಲಿಕೆಯಲ್ಲಿ ಕಾಮಾಕ್ಷಿ ಪಾಳ್ಯ ಪ್ರದೇಶ, ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ ಕೆಎಚ್‌ಬಿ ಕಾಲೊನಿ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗಳಿಗೆ ಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ‘ಮಂಗಲ್‌ ಪಾಂಡೆ’, ‘ಸಂಗೊಳ್ಳಿ ರಾಯಣ್ಣ’, ’ರಾಣಿ ಝಾನ್ಸಿ’ ಎಂದು ಹೆಸರಿಡಲಾಗಿದೆ.

ಶಂಕರನಗರ ವ್ಯಾಪ್ತಿಯ ವಾರ್ಡ್‌ಗೆ ಮೈಸೂರಿನ ಮಹಾರಾಜರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’, ಬಾಪೂಜಿನಗರ ಪ್ರದೇಶದ ವಾರ್ಡ್‌ಗೆ ವಿಜಯನಗರದ ಅರಸು ‘ಕೃಷ್ಣದೇವರಾಯ’, ಕಂಠೀರವ ಸ್ಟುಡಿಯೊ ವ್ಯಾಪ್ತಿಯ ವಾರ್ಡ್‌ಗೆ ನಟ ‘ಡಾ. ಪುನೀತ್‌ ರಾಜ್‌ಕುಮಾರ್‌:, ದಾಸರಹಳ್ಳಿ–ರಾಜಗೋಪಾಲ ನಗರ ವ್ಯಾಪ್ತಿಯ ವಾರ್ಡ್‌ಗೆ ರಾಜಕಾರಣಿ ಶಾಂತವೇರಿ ಗೋಪಾಲಗೌಡ, ಪೀಣ್ಯ ಅಂದ್ರಹಳ್ಳಿ ವ್ಯಾಪ್ತಿಯ ವಾರ್ಡ್‌ಗೆ ‘ನಾಡಪ್ರಭು ಕೆಂಪೇಗೌಡ ನಗರ’, ನಂದಿನಿ ಲೇಔಟ್‌ ಪ್ರದೇಶದ ವ್ಯಾಪ್ತಿಯ ವಾರ್ಡ್‌ಗೆ ‘ಕಿತ್ತೂರು ರಾಣಿ ಚನ್ನಮ್ಮ’ ಎಂದು ಹೆಸರಿಸಲಾಗಿದೆ.

ಲಗ್ಗೆರೆ ಪ್ರದೇಶದ ವಾರ್ಡ್‌ಗೆ ‘ಫ್ರೀಡಂ ಫೈಟರ್‌ ವಾರ್ಡ್‌’ ಎಂದು ಹೆಸರಿಡಲಾಗಿದ್ದರೆ, ರಾಜಾಜಿನಗರ 4ನೇ ಎಂ ಬ್ಲಾಕ್‌ ಪ್ರದೇಶದ ವಾರ್ಡ್‌ಗೆ ಜ್ಞಾನಪೀಠ ಪುರಸ್ಕೃತ  ದ.ರಾ. ಬೇಂದ್ರೆ, ರಾಜಾಜಿನಗರ 6ನೇ ಬ್ಲಾಕ್‌ಗೆ ‘ಡಾ. ರಾಜ್‌ಕುಮಾರ್‌’ ಹಾಗೂ ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತದ ಪ್ರದೇಶಗಳ ವಾರ್ಡ್‌ಗೆ ‘ಸ್ವಾಮಿ ವಿವೇಕಾನಂದ’ ಎಂದು ಹೆಸರಿಡಲಾಗಿದೆ.

 

ವಾರ್ಡ್‌ಗಳಿಗೆ ಪ್ರಮುಖ ಹೆಸರು

ದಕ್ಷಿಣ ನಗರ ಪಾಲಿಕೆಯಲ್ಲಿ ವಾರ್ಡ್‌ಗಳಲ್ಲಿ ಚಿಕ್ಕಲಸಂದ್ರ ಪ್ರದೇಶಕ್ಕೆ ‘ಸಾರ್ವಭೌಮನಗರ’, ಕೋರಮಂಗಲ 6ನೇ ಬ್ಲಾಕ್‌ ಸಾಮಾಜಿಕ ಹೋರಾಟಗಾರರಾದ ‘ಅನಿಬೆಸೆಂಟ್‌’, ಬಿಟಿಎಂ ಲೇಔಟ್‌ 1ನೇ ಹಂತಕ್ಕೆ ‘ವಿಶ್ವಮಾನವ ಕುವೆಂಪು’ ಬೊಮ್ಮನಹಳ್ಳಿಯ ಕೆ.ಆರ್‌. ಲೇಔಟ್‌ಗೆ ‘ಕೆಂಗಲ್‌ ಹನುಮಂತಯ್ಯ’ ಎಂದು ಹೆಸರಿಡಲಾಗಿದೆ.

ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್‌ಗಳಿಗೆ ಇಟ್ಟಗೆ ಆಂಜನಪ್ಪ ಲೇನ್‌, ಚೌಡಪ್ಪ ರಸ್ತೆಗೆ ‘ಐಡಿಪಿ ಸಾಲಪ್ಪ’, ಮಂಜುನಾಥ ನಗರ ಬಿ ಬ್ಲಾಕ್, ಗಾಂಧಿನಗರ ಪ್ರದೇಶಕ್ಕೆ ‘ಸುಭಾಶ್ಚಂದ್ರ ಬೋಸ್‌’ ಎಂದು ನಾಮಕರಣ ಮಾಡಲಾಗಿದೆ.

ಉತ್ತರ ನಗರ ಪಾಲಿಕೆಯಲ್ಲಿ ಹಿದಾಯತ್ ನಗರಕ್ಕೆ ‘ಸಮಾಧಾನ ನಗರ’, ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌ಗೆ ಶಿಕ್ಷಣ ತಜ್ಞೆ ‘ಅರುಣಾ ಆಸಿಫ್‌ ಅಲಿ’, ದೇವರಜೀವನಹಳ್ಳಿಗೆ ‘ದೊಡ್ಡಣ್ಣನಗರ’ ಎಂದು ಹೆಸರಿಸಲಾಗಿದೆ.

ಪೂರ್ವ ನಗರ ಪಾಲಿಕೆಯಲ್ಲಿ ಕೊಟ್ಟೂರು–ದರ್ಗಾ ಮೊಹಲ್ಲಾಗೆ ಕವಿ ‘ಕೆ.ಎಸ್‌. ನಿಸಾರ್‌ ಅಹಮದ್’,  ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ವಿಜ್ಞಾನ ನಗರಕ್ಕೆ ‘ತಲಕಾವೇರಿ’ ಎಂದು ನಾಮಕರಣ ಮಾಡಲಾಗಿದೆ. 


ಬೆಂಗಳೂರು ದಕ್ಷಿಣ ನಗರ ಪಾಲಿಕೆ

3. ಸಾರ್ವಭೌಮನಗರ: ಚಿಕ್ಕಲಸಂದ್ರ, ಸೆವೆಲ್‌ ಹಿಲ್ಸ್‌ ಲೇಔಟ್‌

18. ಅನಿಬೆಸೆಂಟ್‌: ಕೋರಮಂಗಲ 6ನೇ ಬ್ಲಾಕ್‌, ಅಶ್ವಿನಿ ಲೇಔಟ್‌

22. ಅಬ್ದುಲ್‌ಕಲಾಂ ನಗರ: ಜಯನಗರ ಟಿ ಬ್ಲಾಕ್‌, ಗುರಪ್ಪನಪಾಳ್ಯ

26. ವಿಶ್ವಮಾನವ ಕುವೆಂಪು: ಮೈಕೊ ಲೇಔಟ್‌, ಬಿಎಚ್‌ಬಿಸಿಎಸ್‌ ಲೇಔಟ್‌, ಕುವೆಂಪುನಗರ, ಬಿಟಿಎಂ ಲೇಔಟ್‌ 1ನೇ ಹಂತ

60. ಕೆಂಗಲ್‌ ಹನುಮಂತಯ್ಯ: ಕೆ.ಆರ್‌. ಲೇಔಟ್‌, ಬೊಮ್ಮನಹಳ್ಳಿ

66. ಅಬ್ದುಲ್ ಕಲಾಂ ಆಜಾದ್‌: ಕುಮಾರಸ್ವಾಮಿ ಲೇಔಟ್‌ 2ನೇ ಹಂತ

 

ಬೆಂಗಳೂರು ಕೇಂದ್ರ ನಗರ ಪಾಲಿಕೆ

43. ಡಿ.ವಿ. ಗುಂಡಪ್ಪ: ಕಲಾಸಿಪಾಳ್ಯ

46. ಐಡಿಪಿ ಸಾಲಪ್ಪ: ಇಟ್ಟಗೆ ಆಂಜನಪ್ಪ ಲೇನ್‌, ಚೌಡಪ್ಪ ರಸ್ತೆ, ಟ್ಯಾಂಕ್‌ಬಂಡ್ ರಸ್ತೆ

48. ಸುಭಾಶ್ಚಂದ್ರ ಬೋಸ್‌: ಮಂಜುನಾಥ ನಗರ ಬಿ ಬ್ಲಾಕ್, ಗಾಂಧಿನಗರ

 

ಬೆಂಗಳೂರು  ಉತ್ತರ ನಗರ ಪಾಲಿಕೆ

53. ಸಮಾಧಾನ ನಗರ: ಹಿದಾಯತ್‌ ನಗರ

67. ಅರುಣಾ ಆಸಿಫ್‌ ಅಲಿ: ಮುನೀಶ್ವರ್‌ ನಗರ, ಸಯೀದ್ ನಗರ, ಶಾದಾಬ್‌ ನಗರ, ಎಚ್‌ಬಿಆರ್‌ ಲೇಔಟ್‌ 5ನೇ ಬ್ಲಾಕ್‌

70. ದೊಡ್ಡಣ್ಣನಗರ: ದೇವರಜೀವನಹಳ್ಳಿ

 

ಬೆಂಗಳೂರು ಪೂರ್ವ ನಗರ ಪಾಲಿಕೆ

22. ಕೆ.ಎಸ್‌. ನಿಸಾರ್‌ ಅಹಮದ್: ಪೈ ಪೇಔಟ್‌, ಎ ಬ್ಲಾಕ್‌, ದರ್ಗಾ ಮೊಹಲ್ಲಾ– ಕೊಟ್ಟೂರು

36. ತಲಕಾವೇರಿ: ವಿಜ್ಞಾನನಗರ, ಕೆ.ಆರ್. ಪುರ ಕಗ್ಗದಾಸಪುರ ಮುಖ್ಯರಸ್ತೆ

 

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

14. ನಾಲ್ವಡಿ ಕೃಷ್ಣರಾಜ ಒಡೆಯರ್‌: ಶಂಕರ ನಗರ, ವಿಜಯಾನಂದ ನಗರ, ತುಮಕೂರು ರಸ್ತೆ, ಕಾರ್ಡ್‌ ರಸ್ತೆ, ಮಹಾಲಕ್ಷ್ಮಿ ಲೌಟ್‌ ಮಧ್ಯೆ

15. ಡಾ. ಪುನೀತ್‌ ರಾಜ್‌ಕುಮಾರ್: ರಾಜೀವ್‌ಗಾಂಧಿ ನಗರ, ಗಾಯತ್ರಿ ಎಚ್‌ಬಿಸಿಎಸ್‌ ಲೇಔಟ್‌– ಕಂಠೀರವ ಸ್ಟುಡಿಯೊ ಮುಖ್ಯರಸ್ತೆ, 

19. ಶಾಂತವೇರಿ ಗೋಪಾಲಗೌಡ: ಶಿವಪುರ– ದಾಸರಹಳ್ಳಿ, ರಾಜಗೋಪಾಲನಗರ, ಶುಶ್ರುತ್‌ ಆಸ್ಪತ್ರೆ ನಡುವೆ

21. ನಾಡಪ್ರಭು ಕೆಂಪೇಗೌಡ ನಗರ: ತುಂಗಾನಗರ, ವಿದ್ಯಮಾನ್ಯ ನಗರ, ಲಿಂಗಧೀರನಗರ, ಸಿಂಡಿಕೇಟ್‌ ಬ್ಯಾಂಖಕ್‌, ಹೊಸಹಳ್ಳಿ ಗೊಲ್ಲರಪಾಳ್ಯ, ಗೊಲ್ಲರಹಟ್ಟಿ– ಪೀಣ್ಯ,ಅಂದ್ರಹಳ್ಳಿ ಮುಖ್ಯರಸ್ತೆ , ಹೇರೋಹಳ್ಳಿ ಮುಖ್ಯರಸ್ತೆ ಮಧ್ಯೆ

29. ಫ್ರೀಡಂ  ಫೈಟರ್‌ ವಾರ್ಡ್‌: ಲಗ್ಗೆರೆ ಸೇರುವೆ, ಹೊರ ವರ್ತುಲ ಮಧ್ಯೆ

31. ಕಿತ್ತೂರು ರಾಣಿ ಚನ್ನಮ್ಮ: ಬಿಎಚ್‌ಇಎಲ್ ಆಫೀಸರ್ಸ್‌ ಕಾಲೊನಿ, ಸಾಕಮ್ಮ ಲೇಔಟ್‌– ನಂದಿನಿ ಲೇಔಟ್‌, ಸರಸ್ವತಿ ಪುರ ಮಧ್ಯೆ

57. ದ.ರಾ. ಬೇಂದ್ರೆ: ರಾಜಾಜಿನಗರ 4ನೇ ಎಂ ಬ್ಲಾಕ್‌

58. ಡಾ. ರಾಜ್‌ಕುಮಾರ್‌: ರಾಜಾಜಿನಗರ 6ನೇ ಬ್ಲಾಕ್‌

61. ರಾಣಿ ಝಾನ್ಸಿ ವಾರ್ಡ್‌: ಮೀನಾಕ್ಷಿ ನಗರ, ಕೆಎಚ್‌ಬಿ ಕಾಲೊನಿ ಮಾಗಡಿ ರಸ್ತೆ

63. ಮಂಗಲ್‌ ಪಾಂಡೆ ವಾರ್ಡ್: ಕಾಮಾಕ್ಷಿ ಪಾಳ್ಯ

70. ಸಂಗೊಳ್ಳಿ ರಾಯಣ್ಣ: ಕೆಂಪಾಪುರ ಅಗ್ರಹಾರ, ವಿಜಯನಗರ

71. ಕೃಷ್ಣದೇವರಾಯ: ಬಾಪೂಜಿನಗರ, 

87, ಸ್ವಾಮಿ ವಿವೇಕಾನಂದ ವಾರ್ಡ್‌: ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತ, ಗಿರಿನಗರ

Tuesday, September 30, 2025

Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ



Bengaluru: Five municipal corporations under the jurisdiction of Greater Bangalore Authority (GBA) have re-delineated their wards and the Urban Development Department has issued a draft notification.

63 wards have been formed in Bangalore Central Municipal Corporation, 72 wards in Bangalore South Municipal Corporation, 50 wards in Bangalore East Municipal Corporation, 111 wards in Bangalore West Municipal Corporation and 72 wards in Bangalore North Municipal Corporation.

A Ward Re-Delineation Commission has been constituted under the chairmanship of the Chief Commissioner of Greater Bangalore Authority for the re-delineation of the wards of all the five municipal corporations. The re-delineation of the wards has been done under sub-sections (1) and (3) of Section 29 of the Greater Bangalore Administration Act-2024.

The government issued guidelines for the re-delineation of wards of municipal corporations on September 2. Accordingly, the Ward Re-delineation Commission submitted the report of the Ward Re-delineation to the government on September 30.

The government, having accepted the report of the Ward Re-delineation Commission, has announced the draft ward-wise re-delineation of 63 wards in the Bangalore Central Municipal Corporation, 72 wards in the Bangalore South Municipal Corporation, 50 wards in the Bangalore East Municipal Corporation, 111 wards in the Bangalore West Municipal Corporation and 72 wards in the Bangalore North Municipal Corporation based on the 2011 Census.

If there are any objections/suggestions, the public should submit their full address, signature, and a suitable reason-explanation in writing to the Additional Chief Secretary to the Government, Urban Development Department, Room No. 436, 4th Floor, Vikas Soudha, A. B. R. Ambedkar Road, Bangalore- 560001 by 5 pm on October 15, the Urban Development Department said in a statement.


What is your City Corporation ? Which ward is your area under? Click here to get information like your assembly constituency 👇

What is your City Corporation? Which ward is your area under? Click here to get information like your assembly constituency….




ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ


ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..


ನಿಮ್ಮ ಪಾಲಿಕೆ ಯಾವುದು ? ನಿಮ್ಮ ಪ್ರದೇಶ ಯಾವ ವಾರ್ಡ್ ವ್ಯಾಪ್ತಿಯಲ್ಲಿದೆ? ನಿಮ್ಮ ವಿಧಾನಸಭೆ ಕ್ಷೇತ್ರದಂತೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👇

ನಿಮ್ಮ ಪಾಲಿಕೆ ಯಾವುದು ? ನಿಮ್ಮ ಪ್ರದೇಶ ಯಾವ ವಾರ್ಡ್ ವ್ಯಾಪ್ತಿಯಲ್ಲಿದೆ? ನಿಮ್ಮ ವಿಧಾನಸಭೆ ಕ್ಷೇತ್ರದಂತೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ …

ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ಗಳ ಮರುವಿಂಗಡಣೆ ಮಾಡಿ, ನಗರಾಭಿವೃದ್ಧಿ ಇಲಾಖೆ  ಕರಡು ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 63 ವಾರ್ಡ್‌, ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ 72 ವಾರ್ಡ್‌, ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ 50 ವಾರ್ಡ್‌, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 111 ವಾರ್ಡ್‌ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ 72  ವಾರ್ಡ್‌ಗಳನ್ನು ರಚಿಸಲಾಗಿದೆ.

ಐದೂ ನಗರ ಪಾಲಿಕೆಗಳ ವಾರ್ಡ್‌ಗಳ ಮರುವಿಂಗಡಣೆಗೆ  ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಅಧ್ಯಕ್ಷತೆಯ ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗವನ್ನು ರಚಿಸಲಾಗಿತ್ತು. ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಪ್ರಕರಣ 29ರ ಉಪ ಪ್ರಕರಣ (1) ಮತ್ತು (3)ರ ಅನ್ವಯ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಲಾಗಿದೆ.

 ನಗರ ಪಾಲಿಕೆಗಳ ವಾರ್ಡ್‌ಗಳ ಪುನರ್‌ ವಿಂಗಡಣೆಗೆ ಮಾರ್ಗಸೂಚಿಗಳನ್ನು ಸರ್ಕಾರ ಸೆಪ್ಟೆಂಬರ್‌ 2ರಂದು ಹೊರಡಿಸಿತ್ತು. ಅದರಂತೆ, ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗವು ಸೆಪ್ಟೆಂಬರ್‌ 30ರಂದು ಸರ್ಕಾರಕ್ಕೆ ವಾರ್ಡ್‌ಗಳ ಪುನರ್‌ ವಿಂಗಡಣಾ ವರದಿಯನ್ನು ಸಲ್ಲಿಸಿದೆ.

ಸರ್ಕಾರವು, ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗದ ವರದಿಯನ್ನು ಒಪ್ಪಿ, ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಪ್ರಕರಣ 29ರಲ್ಲಿ ಪ್ರದತ್ತವಾದ ಅಧಿಕಾರದನ್ವಯ 2011ರ ಜನಗಣತಿಯ ಆಧಾರದಲ್ಲಿ, ಗ್ರೇಟರ್‌ ಬೆಂಗಳೂರು ಪ್ರದೇಶದ ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 63 ವಾರ್ಡ್‌, ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ 72 ವಾರ್ಡ್‌, ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ 50 ವಾರ್ಡ್‌, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 111 ವಾರ್ಡ್‌ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ 72  ವಾರ್ಡ್‌ಗಳ ಕರಡು ವಾರ್ಡ್‌ವಾರು ಕ್ಷೇತ್ರ ಪುನರ್‌ ವಿಂಗಡಣೆಯನ್ನು ಪ್ರಕಟಿಸಲಾಗಿದೆ.

ಯಾವುದೇ ಆಕ್ಷೇಪ/ ಸಲಹೆಗಳಿದ್ದರೆ ಸಾರ್ವಜನಿಕರು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ–ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸ ಸೌಧ, ಆ. ಬಿ.ಆರ್‌. ಅಂಬೇಡ್ಕರ್‌ ವೀದಿ, ಬೆಂಗಳೂರು– 560001 ಇವರಿಗೆ ಅಕ್ಟೋಬರ್‌ 15ರ ಸಂಜೆ 5ರೊಳಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

Sunday, September 28, 2025

Commission doubled in Congress government: Contractors… ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್‌ ದುಪ್ಪಟ್ಟು: ಗುತ್ತಿಗೆದಾರರು

State Contractors Association sends letter to Chief Minister Siddaramaiah

Commission doubled in Congress government: Contractors



Kere Manjunath ಕೆರೆ ಮಂಜುನಾಥ್

Bengaluru: The State Contractors Association has written a letter to Chief Minister Siddaramaiah, saying, ‘The commission for bill payment in their government has doubled compared to the previous government.’

‘When you was the leader of the opposition, you had said that if our government comes to power, we will not take any commission for releasing the pending money of contractors. However, the association regrets to bring to your attention that the commission is now double in all departments compared to the previous government,’ the letter written to the Chief Minister on September 25 said.

‘In the current Congress government, officials receive more commission than in the previous BJP government in the state,’ the State Contractors Association had alleged in March 2025. At that time, the Chief Minister had held a meeting with the contractors and promised to release 50 percent of the pending bills in April.

‘For about two years, the office bearers of the association have discussed with you many times about the issue of releasing the money due to the contractors and many other issues. As a result of our association’s fight against corruption, we are bringing to your attention that we are at least partly responsible for the coming of your government,’ said association president R. Manjunath in a letter written to the Chief Minister on Thursday.

‘You have appeased us every time and instructed the officials to resolve the problem. All the contractors of the districts are at peace with you out of respect and immense trust. However, we have not benefited from your government so far. Even after meeting the ministers and secretaries of eight departments, the money has not been released,’ they complained.

‘They are preparing their own ‘formulas’ and releasing only 15 to 20 percent of the contractor’s outstanding money in the form of special LOCs every three months, without following the seniority and transparency laws,’ they alleged in the letter.

‘Package beyond CM’s orders’

‘The officials of the Municipal Administration, Urban Development, and Labor Departments are converting tenders into packages, going against the law and your orders, and are conducting the process to benefit the powerful contractors they want. Although the association has informed this issue many times in writing and verbally, the concerned ministers and officials have not taken action,’ the letter to the Chief Minister explains. In addition, letters have also been written to ministers Rahim Khan, Bairati Suresh, and Santosh Lad,’ said State Contractors Association President R. Manjunath.


Promise not fulfilled: Manjunath

‘Chief Minister Siddaramaiah has promised us many times that he will release the pending bills. But it has not been fulfilled so far. He had said that he would release 50 percent of the pending bills in April, but that has not happened either. The ministers and department secretaries are not paying attention to the Chief Minister’s instructions. Even the request to release money for Dasara has not been responded to. Therefore, we have to take a bold stand. The path of our struggle will be decided next week,' said R. Manjunath, president of the State Contractors Association.


How much is due in which department?

Water Resources; ₹12,000 crore

Public Works; ₹9,000 crore

Panchayat Raj; ₹3,600 crore

Minor Irrigation; ₹3,200 crore

BBMP; ₹1,800 crore

Urban Development; ₹1,200

Housing; ₹900 crore

Labor; ₹800 crore

Municipal Administration; ₹600 crore

Wakf; ₹600 crore



ರಾಜ್ಯ ಗುತ್ತಿಗೆದಾರರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಪತ್ರ ರವಾನೆ

ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್‌ ದುಪ್ಪಟ್ಟು: ಗುತ್ತಿಗೆದಾರರು

Kere Manjunath ಕೆರೆ ಮಂಜುನಾಥ್

ಬೆಂಗಳೂರು: ‘ಹಿಂದಿನ ಸರ್ಕಾರಕ್ಕಿಂತ ತಮ್ಮ ಸರ್ಕಾರದಲ್ಲಿ ಬಿಲ್‌ ಪಾವತಿಗೆ ಕಮಿಷನ್‌ ದುಪ್ಪಟ್ಟಾಗಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಪತ್ರ ಬರೆದಿದೆ.

‘ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್‌ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರ್ಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್‌ ದುಪ್ಪಟ್ಟು ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ’ ಎಂದು ಮುಖ್ಯಮಂತ್ರಿಯವರಿಗೆ ಸೆಪ್ಟೆಂಬರ್‌ 25ರಂದು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

‘ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ, ಅಧಿಕಾರಿಗಳು ಹೆಚ್ಚು ಕಮಿಷನ್‌ ಪಡೆಯುತ್ತಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘ 2025ರ ಮಾರ್ಚ್‌ನಲ್ಲಿ ಆರೋಪಿಸಿತ್ತು. ಆಗ ಮುಖ್ಯಮಂತ್ರಿಯವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಏಪ್ರಿಲ್‌ನಲ್ಲಿ ಶೇ 50ರಷ್ಟು ಬಾಕಿ ಬಿಲ್‌ ಬಿಡುಗಡೆ ಮಾಡುವ ಭರವಸೆ ನೀಡಿದ್ದರು.

‘ಸುಮಾರು ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ವಿಚಾರ ಮತ್ತು ಹಲವು ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವು ಬಾರಿ ಸಂಘದ ಪದಾಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಮ್ಮ ಸಂಘವು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಫಲವಾಗಿ, ತಮ್ಮ ಸರ್ಕಾರ ಬರುವುದಕ್ಕೆ ಸ್ವಲ್ಪವಾದರೂ ನಾವು ಕಾರಣಕರ್ತರಾಗಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ’ ಎಂದು ಮುಖ್ಯಮಂತ್ರಿಯವರಿಗೆ ಗುರುವಾರ ಬರೆದಿರುವ ಪತ್ರದಲ್ಲಿ ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ತಿಳಿಸಿದ್ದಾರೆ.

‘ನಮ್ಮನ್ನು ಪ್ರತಿ ಸಾರಿ ಸಮಾಧಾನ ಮಾಡಿ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೀರಿ. ನಿಮಗೆ ಗೌರವ ಕೊಟ್ಟು, ಅಪಾರ ನಂಬಿಕೆಯಿಂದ ಜಿಲ್ಲೆಗಳ ಎಲ್ಲ ಗುತ್ತಿಗೆದಾರರೂ ಸಮಾಧಾನದಿಂದ ಇದ್ದೇವೆ. ಆದರೆ, ಇದುವರೆಗೆ ನಿಮ್ಮ ಸರ್ಕಾರದಿಂದ ನಮಗೆ ಪ್ರಯೋಜನವಾಗಿಲ್ಲ. ಎಂಟು ಇಲಾಖೆಗಳ ಸಚಿವರು, ಕಾರ್ಯದರ್ಶಿಗಳನ್ನು ಭೇಟಿ ಮಾಡಿದರೂ  ಹಣ ಬಿಡುಗಡೆಯಾಗಿಲ್ಲ’ ಎಂದು ದೂರಿದ್ದಾರೆ.

‘ಜ್ಯೇಷ್ಠತೆ ಮತ್ತು ಪಾರದರ್ಶಕ ಕಾಯ್ದೆ ಅನುಸರಿಸದೆ, ಅವರದೇ ‘ಫಾರ್ಮುಲ’ಗಳನ್ನು ತಯಾರಿಸಿಕೊಂಡು, ಸ್ಪೆಷಲ್‌ ಎಲ್‌ಒಸಿ ರೂಪದಲ್ಲಿ ಗುತ್ತಿಗೆದಾರರ ಬಾಕಿ ಹಣದಲ್ಲಿ ಮೂರು ತಿಂಗಳಿಗೊಮ್ಮೆ ಶೇ 15ರಿಂದ ಶೇ 20ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದಾರೆ’ ಪತ್ರದಲ್ಲಿ ಎಂದು ಆರೋಪಿಸಿದ್ದಾರೆ.

 

‘ಸಿಎಂ ಆದೇಶ ಮೀರಿ ಪ್ಯಾಕೇಜ್‌’

‘ಪೌರಾಡಳಿತ, ನಗರಾಭಿವೃದ್ಧಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಾನೂನು ಹಾಗೂ ನಿಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್‌ ರೂಪದಲ್ಲಿ ಪರಿವರ್ತಿಸಿ, ತಮಗೆ ಬೇಕಾದ ಬಲಾಢ್ಯ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಸಂಘ ಹಲವು ಬಾರಿ ಪತ್ರ ಹಾಗೂ ಮೌಖಿಕವಾಗಿ ತಿಳಿಸಿದ್ದರೂ, ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ. ಇದಲ್ಲದೆ, ಸಚಿವರಾದ ರಹೀಂಖಾನ್‌, ಬೈರತಿ ಸುರೇಶ್, ಸಂತೋಷ್‌ ಲಾಡ್‌ ಅವರಿಗೂ ಪತ್ರ ಬರೆಯಲಾಗಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್‌ ತಿಳಿಸಿದರು.

 

 

ಭರವಸೆ ಈಡೇರಿಲ್ಲ: ಮಂಜುನಾಥ್‌

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ನಮಗೆ ಬಾಕಿ ಬಿಲ್‌ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅದು ಈವರೆಗೂ ಈಡೇರಿಲ್ಲ. ಏಪ್ರಿಲ್‌ನಲ್ಲಿ ಶೇ 50ರಷ್ಟು ಬಾಕಿ ಬಿಲ್‌ ಬಿಡುಗಡೆ ಮಾಡುವುದಾಗಿ ಹೇಳಿದ್ದರು, ಅದೂ ಆಗಿಲ್ಲ. ಸಚಿವರು, ಇಲಾಖೆ ಕಾರ್ಯದರ್ಶಿಗಳು ಮುಖ್ಯಮಂತ್ರಿಯವರ ಸೂಚನೆಗೂ ಬೆಲೆ ಕೊಡುತ್ತಿಲ್ಲ. ದಸರಾಗೆ ಹಣ ಬಿಡುಗಡೆ ಮಾಡಿ ಎಂಬ ಮನವಿಗೂ ಸ್ಪಂದಿಸಿಲ್ಲ. ಹೀಗಾಗಿ, ನಾವು ದಿಟ್ಟ ನಿಲುವು ತೆಗೆದುಕೊಳ್ಳಬೇಕಾಗಿದೆ. ಮುಂದಿನವಾರ ನಮ್ಮ ಹೋರಾಟದ ಹಾದಿ ನಿರ್ಧಾರವಾಗಲಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್‌ ತಿಳಿಸಿದರು.

 

 

ಯಾವ ಇಲಾಖೆಯಲ್ಲಿ ಎಷ್ಟು ಬಾಕಿ?

ಜಲಸಂಪನ್ಮೂಲ;₹12,000 ಕೋಟಿ

ಲೋಕೋಪಯೋಗಿ;₹9,000 ಕೋಟಿ

ಪಂಚಾಯತ್‌ ರಾಜ್‌;₹3,600 ಕೋಟಿ

ಸಣ್ಣ ನೀರಾವರಿ;₹3,200 ಕೋಟಿ

ಬಿಬಿಎಂಪಿ;₹1,800 ಕೋಟಿ

ನಗರಾಭಿವೃದ್ಧಿ;1,200

ವಸತಿ;₹900 ಕೋಟಿ

ಕಾರ್ಮಿಕ;₹800 ಕೋಟಿ

ಪೌರಾಡಳಿತ;₹600 ಕೋಟಿ

ವಕ್ಫ್‌;600 ಕೋಟಿ

Saturday, September 27, 2025

FIVE City corporations Ward delimitation delayed… ಐದು ನಗರ ಪಾಲಿಕೆಗಳ ವಾರ್ಡ್‌ ಮರುವಿಂಗಡಣೆ ವಿಳಂಬ

FIVE City corporations  Ward delimitation delayed



Bengaluru: The deadline for the ward redivision of five City corporations has passed, and the draft notification is likely to be published next week.

Five municipal corporations were formed in Greater Bengaluru and the final notification was issued on September 2. A ‘Ward Redivision Commission’ was formed under the leadership of GBA Chief Commissioner Maheshwar Rao and was asked to submit a report to the government on September 23.

The Urban Development Department had issued a notification on September 2 that the number and boundaries of the wards of all the five municipal corporations would be identified on September 26 and a draft notification would be issued. However, the ward redivision work was not completed by the deadline.

Even though it was three days after the deadline for submitting the ward redivision report, the commission officials were busy with the final stage of preparations. Deputy Chief Minister D.K. After a meeting with Shivakumar on Thursday, it is said that the submission of the report has been delayed as many changes have to be made.


Deadline of the Urban Development Department,

September 23; Submission of ward formation report by the ‘Wards Re-Delineation Commission’

September 26; Draft notification of wards published by the government

October 10; Opportunity for suggestions/objections from the public

October 17; Commission to examine objections and submit final recommendations

November 1; Final notification of wards by the government


ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..


ಐದು ನಗರ ಪಾಲಿಕೆಗಳ ವಾರ್ಡ್‌ ಮರುವಿಂಗಡಣೆ ವಿಳಂಬ

ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಮರುವಿಂಗಡಣೆ ಕಾರ್ಯ ಗಡುವು ಮೀರಿದ್ದು, ಮುಂದಿನವಾರ ಕರಡು ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ ಸೆಪ್ಟೆಂಬರ್‌ 2ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ನೇತೃತ್ವದಲ್ಲಿ ‘ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗ’ವನ್ನು ರಚಿಸಿ, ಸೆಪ್ಟೆಂಬರ್‌ 23ರಂದು ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

ಸೆಪ್ಟೆಂಬರ್‌ 26ರಂದು ಐದೂ ನಗರ ಪಾಲಿಕೆಗಳ ವಾರ್ಡ್‌ಗಳ ಸಂಖ್ಯೆ, ಗಡಿಯನ್ನು ಗುರುತಿಸಿ, ಕರಡು ಅಧಿಸೂಚನೆಯನ್ನು ಹೊರಡಿಸುವುದಾಗಿ ನಗರಾಭಿವೃದ್ಧಿ ಇಲಾಖೆಯ ಸೆ.2ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಗಡುವಿನಲ್ಲಿ ವಾರ್ಡ್‌ ಮರು ವಿಂಗಡಣೆ ಕಾರ್ಯ ಮುಗಿದಿಲ್ಲ.

ವಾರ್ಡ್‌ಗಳ ಮರು ವಿಂಗಡಣೆ ವರದಿಯನ್ನು ಸಲ್ಲಿಸಬೇಕಾದ ಅವಧಿ ಮುಗಿದು ಮೂರು ದಿನವಾದರೂ ಆಯೋಗದ ಅಧಿಕಾರಿಗಳು ಅಂತಿಮ ಹಂತದ ತಯಾರಿಯಲ್ಲಿ ತೊಡಗಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಗುರುವಾರ ಸಭೆ ನಡೆದ ನಂತರ, ಹಲವು ಬದಲಾವಣೆಗಳನ್ನು ಮಾಡಬೇಕಾಗಿರುವುದರಿಂದ ವರದಿ ಸಲ್ಲಿಕೆ ವಿಳಂಬವಾಗಿದೆ ಎಂದು ಹೇಳಲಾಗಿದೆ.

 

ನಗರಾಭಿವೃದ್ದಿ ಇಲಾಖೆಯ ಗಡುವು

ಸೆಪ್ಟೆಂಬರ್‌ 23; ‘ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗ’ದಿಂದ ವಾರ್ಡ್‌ ರಚನಾ ವರದಿ ಸಲ್ಲಿ‌ಕೆ

ಸೆ.26; ಸರ್ಕಾರದಿಂದ ವಾರ್ಡ್‌ಗಳ ಕರಡು ಅಧಿಸೂಚನೆ ಪ್ರಕಟ

ಅಕ್ಟೋಬರ್‌ 10; ಸಾರ್ವಜನಿಕರಿಂದ ಸಲಹೆ/ ಆಕ್ಷೇಪಕ್ಕೆ ಅವಕಾಶ

ಅ.17; ಆಯೋಗ ಆಕ್ಷೇಪಣೆ ಪರಿಶೀಲಿಸಿ, ಅಂತಿಮ ಶಿಫಾರಸು ಸಲ್ಲಿಸುವುದು

ನವೆಂಬರ್ 1; ಸರ್ಕಾರದಿಂದ ವಾರ್ಡ್‌ಗಳ ಅಂತಿಮ ಅಧಿಸೂಚನೆ

Elevated rotary flyover for free traffic… ಮುಕ್ತ ಸಂಚಾರಕ್ಕೆ ಎಲಿವೇಟೆಡ್‌ ರೋಟರಿ ಮೇಲ್ಸೇತುವೆ

B-Smile project for smooth traffic around Baiyappanahalli-Old Madras Road

Elevated rotary flyover for free traffic



Kere Manjunath ಕೆರೆ ಮಂಜುನಾಥ್

Bengaluru: To facilitate smooth traffic around Old Madras Road, Baiyappanqhalli, Banaswadi, Bangalore Smart Infrastructure Limited (B-Smile) is planning to build an elevated rotor flyover at a cost of ₹380 crore.

This project was prepared in February 2024 and tenders have been invited for its implementation through B-Smile. Bids have been allowed till October 13 and the project is targeted to be completed in 24 months.

This is a ‘turnkey lump sum’ type of tender to complete the project. The tender has been invited for a cost of ₹304 crore excluding GST. The Railways, which stands to benefit the most from the project, has already agreed to provide the land required for the project. It has been decided to acquire private land for the project by granting Transferable Development Rights (TDR).

Details of land requirement

  • 32,704.81 sq m; Total land required
  • 8,636.28 sq m; Private property (TDR)
  • 15,306.65 sq m; Railway property
  • 84.33 sq m; BBMP property
  • 3,872.77 sq m; Government Isolation Hospital land
  • 4,804.78 sq m; Defence Department Property


Project Details

* Two lanes of Banaswadi flyover connecting Maruti Sewanagar to Banaswadi and Maruti Sewanagar to Kammanahalli, Banaswadi to Baiyappanahalli will be removed

* Two additional railway flyovers will be constructed in addition to the existing railway flyover.

* The elevated rotary to be constructed at IOC Junction (Baiyappanahalli Railway Station) will connect all four major connecting roads.

* Four-lane ‘unidirectional’ elevated rotary of steel box girder

* 15-metre wide rotary, 10 metres above the railway line

* Two-lane up ramp from the rotary towards Banaswadi Road

* Two-way ramp from the rotary towards Kammanahalli

* Down ramp towards Byappanahalli Terminal Railway Station, uphill ramp from the rotary towards Indiranagar (Old Madras Road)

* Down ramp from the central part of the rotary towards Byappanahalli Terminal Railway Station and Old Madras Road

* Up/down ramp towards Maruthi Sewanagar Road

* Up/down ramp towards Railway Maintenance Shed


Where is it used?

Roads: Sir M. Visvesvaraya Terminal, Byappanahalli Railway Station, Mukunda Theatre, Kammanahalli Main Road, Banaswadi Main Road, Swami Vivekananda Metro Station, Old Madras Road, Orion East Mall, ITC Infotech India – ITC Limited

Villages: Doddanekkundi, Lingarajpura, Byataguntepalya, Banaswadi, Byappanahalli Munavarthi Kaval, Byappanahalli, Binnamangala.

Taluk: Bangalore North-East

Assembly Constituency: Sarvajnanagar, C.V. Ramannagar

Wards: Marutisevanagar, Kammanahalli, Benniganahalli


ಬೈಯಪ್ಪನಹಳ್ಳಿ–ಹಳೆ ಮದ್ರಾಸ್‌ ರಸ್ತೆ ಸುತ್ತಮುತ್ತ ಸುಗಮ ಸಂಚಾರಕ್ಕೆ ಬಿ–ಸ್ಮೈಲ್‌ ಯೋಜನೆ

ಮುಕ್ತ ಸಂಚಾರಕ್ಕೆ ಎಲಿವೇಟೆಡ್‌ ರೋಟರಿ ಮೇಲ್ಸೇತುವೆ

Kere Manjunath ಕೆರೆ ಮಂಜುನಾಥ್

ಬೆಂಗಳೂರು: ಹಳೆ ಮದ್ರಾಸ್‌ ರಸ್ತೆ, ಬೈಯಪ್ಪನಹಳ್ಳಿ, ಬಾಣಸವಾಡಿ ಸುತ್ತಮುತ್ತ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ನಿಯಮಿತ (ಬಿ–ಸ್ಮೈಲ್‌) ₹380 ಕೋಟಿ ವೆಚ್ಚದ ಎಲಿವೇಟೆಡ್‌ ರೋಟರ್‌ ಫ್ಲೈಓವರ್‌ ನಿರ್ಮಿಸಲು ಮುಂದಾಗಿದೆ.

2024ರ ಫೆಬ್ರುವರಿಯಲ್ಲೇ ಈ ಯೋಜನೆಯನ್ನು ತಯಾರಿಸಲಾಗಿದ್ದು,  ಬಿ–ಸ್ಮೈಲ್‌ ಮೂಲಕ ಅನುಷ್ಠಾನಗೊಳಿಸಲು ಟೆಂಡರ್‌ ಆಹ್ವಾನಿಸಲಾಗಿದೆ. ಅಕ್ಟೋಬರ್‌ 13ರವರೆಗೆ ಬಿಡ್‌ ಸಲ್ಲಿಸಲು ಅವಕಾಶ ನೀಡಲಾಗಿದ್ದು, 24 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

‘ಟರ್ನ್‌ ಕೀ ಲಂಪ್‌ ಸಮ್‌’ ನಿಗದಿಪಡಿಸಿದ ದರಕ್ಕೇ ಯೋಜನೆಯನ್ನು ಪೂರ್ಣಗೊಳಿಸುವ ಮಾದರಿಯ ಟೆಂಡರ್‌ ಇದಾಗಿದೆ. ಜಿಎಸ್‌ಟಿ ಹೊರತುಪಡಿಸಿ, ₹304 ಕೋಟಿಯ ವೆಚ್ಚಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ. ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯುವ ರೈಲ್ವೆ ಇಲಾಖೆ, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ನೀಡಲು ಈಗಾಗಲೇ ಒಪ್ಪಿದೆ. ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ನೀಡುವ ಮೂಲಕ  ಖಾಸಗಿ ಭೂಮಿಯನ್ನು ಯೋಜನೆಗೆ ಸ್ವಾಧೀನಪಡಿಕೊಳ್ಳಲು ನಿರ್ಧರಿಸಲಾಗಿದೆ.

 

ಭೂಮಿ ಅಗತ್ಯದ ವಿವರ

  • 32,704.81 ಚದರ ಮೀಟರ್; ಒಟ್ಟು ಅಗತ್ಯವಿರುವ ಭೂಮಿ
  • 8,636.28 ಚದರ ಮೀಟರ್‌; ಖಾಸಗಿ ಸ್ವತ್ತು (ಟಿಡಿಆರ್‌) 
  • 15,306.65 ಚದರ ಮೀಟರ್; ರೈಲ್ವೆ ಸ್ವತ್ತು
  • 84.33 ಚದರ ಮೀಟರ್; ಬಿಬಿಎಂಪಿ ಆಸ್ತಿ
  • 3,872.77 ಚದರ ಮೀಟರ್‌; ಸರ್ಕಾರಿ ಐಸೊಲೇಷನ್‌ ಆಸ್ಪತ್ರೆ ಜಾಗ
  • 4,804.78 ಚದರ ಮೀಟರ್‌; ರಕ್ಷಣಾ ಇಲಾಖೆಯ ಆಸ್ತಿ

 

ಯೋಜನೆ ವಿವರ

* ಮಾರುತಿ ಸೇವಾನಗರದಿಂದ ಬಾಣಸವಾಡಿ ಮತ್ತು ಮಾರುತಿ ಸೇವಾನಗರದಿಂದ ಕಮ್ಮನಹಳ್ಳಿ,  ಬಾಣಸವಾಡಿಯಿಂದ ಬೈಯಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸುವ ಬಾಣಸವಾಡಿ ಮೇಲ್ಸೇತುವೆಯ ಎರಡು ಪಥವನ್ನು ತೆಗೆದುಹಾಕಲಾಗುತ್ತದೆ

* ಈಗಿರುವ ರೈಲ್ವೆ ಮೇಲ್ಸೇತುವೆ ಜೊತೆಗೆ ಹೆಚ್ಚುವರಿಯಾಗಿ ಎರಡು ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತದೆ.

* ಐಒಸಿ ಜಂಕ್ಷನ್‌ನಲ್ಲಿ (ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ) ನಿರ್ಮಾಣವಾಗುವ ಎಲಿವೇಟೆಡ್‌ ರೋಟರಿ ಎಲ್ಲ ನಾಲ್ಕು ಪ್ರಮುಖ ಸಂಪರ್ಕ  ರಸ್ತೆಗಳನ್ನು ಸಂಪರ್ಕಿಸುತ್ತದೆ.

* ಸ್ಟೀಲ್‌ ಬಾಕ್ಸ್‌ ಗಿರ್ಡರ್‌ನ ನಾಲ್ಕು ಪಥಗಳ ‘ಯೂನಿ ಡೈರೆಕ್ಷನಲ್‌’ ಎಲಿವೇಟೆಡ್‌ ರೋಟರಿ

* 15 ಮೀಟರ್‌ ಅಗಲ ರೋಟರಿ, ರೈಲು ಮಾರ್ಗದಿಂದ 10 ಮೀಟರ್‌ ಎತ್ತರದಲ್ಲಿರುತ್ತದೆ

 

* ರೋಟರಿಯಿಂದ ಬಾಣಸವಾಡಿ ರಸ್ತೆ ಕಡೆಗೆ ಎರಡು ಪಥದ ಮೇಲ್ಮುಖ ರ್‍ಯಾಂಪ್‌

* ರೋಟರಿಯಿಂದ ಕಮ್ಮನಹಳ್ಳಿ ಕಡೆಗೆ ದ್ವಿಮುಖ ರ‍್ಯಾಂಪ್‌

* ಬೈಯಪ್ಪನಹಳ್ಳಿ ಟರ್ಮಿನಲ್‌ ರೈಲ್ವೆ ನಿಲ್ದಾಣದ ಕಡೆಗೆ ಕೆಳಮುಖದ ರ‍್ಯಾಂಪ್‌, ರೋಟರಿಯಿಂದ ಇಂದಿರಾನಗರದ (ಹಳೆ ಮದ್ರಾಸ್‌ ರಸ್ತೆ) ಕಡೆಗೆ ಮೇಲ್ಮುಖದ ರ‍್ಯಾಂಪ್‌

* ಬೈಯಪ್ಪನಹಳ್ಳಿ ಟರ್ಮಿನಲ್‌ ರೈಲ್ವೆ ನಿಲ್ದಾಣದ ಹಿಂಭಾಗ ಮತ್ತು ಹಳೆ ಮದ್ರಾಸ್‌ ರಸ್ತೆ ಕಡೆಗೆ ರೋಟರಿ ಕೇಂದ್ರ ಭಾಗದಿಂದ ಕೆಳಮುಖ  ರ‍್ಯಾಂಪ್‌

* ಮಾರುತಿಸೇವಾನಗರ ರಸ್ತೆ ಕಡೆಗೆ ಮೇಲ್ಮುಖ/ಕೆಳಮುಖ ರ‍್ಯಾಂಪ್‌

* ರೈಲ್ವೆ ನಿರ್ವಹಣಾ ಶೆಡ್‌ ಕಡೆಗೆ ಮೇಲ್ಮುಖ/ಕೆಳಮುಖ ರ‍್ಯಾಂಪ್‌

 

ಎಲ್ಲೆಲ್ಲಿ ಉಪಯೋಗ?

ರಸ್ತೆಗಳು: ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌, ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ, ಮುಕುಂದ ಥಿಯೇಟರ್‌, ಕಮ್ಮನಹಳ್ಳಿ ಮುಖ್ಯರಸ್ತೆ, ಬಾಣಸವಾಡಿ ಮುಖ್ಯರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೊ ನಿಲ್ದಾಣ, ಹಳೆ ಮದ್ರಾಸ್‌ ರಸ್ತೆ, ಒರೈಯನ್‌ ಈಸ್ಟ್‌ ಮಾಲ್‌, ಐಟಿಸಿ ಇನ್‌ಫೋಟೆಕ್‌ ಇಂಡಿಯಾ– ಐಟಿಸಿ ಲಿಮಿಟೆಡ್‌

ಹಳ್ಳಿಗಳು: ದೊಡ್ಡನೆಕ್ಕುಂದಿ, ಲಿಂಗರಾಜಪುರ, ಬ್ಯಾಟಗುಂಟೆಪಾಳ್ಯ,  ಬಾಣಸವಾಡಿ, ಬೈಯಪ್ಪನಹಳ್ಳಿ ಮುನವರ್ತಿ ಕಾವಲ್‌, ಬೈಯಪ್ಪನಹಳ್ಳಿ, ಬಿನ್ನಮಂಗಲ.

ತಾಲ್ಲೂಕು: ಬೆಂಗಳೂರು ಉತ್ತರ– ಪೂರ್ವ

ವಿಧಾನಸಭೆ ಕ್ಷೇತ್ರ: ಸರ್ವಜ್ಞನಗರ, ಸಿ.ವಿ. ರಾಮನ್‌ನಗರ

ವಾರ್ಡ್‌ಗಳು: ಮಾರುತಿಸೇವಾನಗರ, ಕಮ್ಮನಹಳ್ಳಿ, ಬೆನ್ನಿಗಾನಹಳ್ಳಿ

Sunday, September 21, 2025

Garbage on the streets, beating drum in front of houses…. ಬೀದಿಗೆ ಕಸ, ಮನೆ ಮುಂದೆ ತಮಟೆ

 BSWML prepares for a new campaign against waste dumpers

Garbage on the streets, beating drum in front of houses



Kere Manjunath ಕೆರೆ ಮಂಜುನಾಥ್

Bengaluru: Bangalore Solid Waste Management Limited (BSWML) is preparing to conduct a new campaign to dump waste in front of the houses of those who dump garbage on roads and vacant lots and beat drum.

Despite making a lot of efforts to eliminate black spots on the roads under the Greater Bengaluru Authority, the number of waste dumpers everywhere is not being fully controlled. Therefore, BSWML staff has decided to identify waste dumpers, dump garbage in front of their houses and beat drum to create awareness.

The civic workers and waste collection auto staff have information about black spots in 198 wards. Based on their information, the garbage dumpers are videotaped and their addresses are traced. After collecting visual and video information, the person's house is fined. Not stopping there, a warning is given to everyone. They are informed about the problem caused by dumping the waste. It has been decided to start this campaign by the end of September.

'Our staff, including marshals, are collecting information about those who throw waste everywhere. We have information about a lot of people. A warning campaign will be started in front of their houses. Our goal is that people should understand the problem and join hands in cleaning the city, and we have no intention of embarrassing them in any way,' said BSWML CEO Karigowda.

₹2,000 fine: 'Those who throw garbage on roads and premises are being fined a minimum of ₹2,000. It has been decided to publish the pictures of those who have paid the fine on social media in the future. We hope that they do not make such a mistake again,' he said.


Notice if they throw waste!

‘The auto crews that collect waste from houses daily in 198 wards know which households are not giving waste. Information is being collected from them and such households are being listed ward-wise. The process of issuing notices to the owners of the houses will also begin soon,’ said BSWML CEO Karigowda.

‘Since the number of people going to work in the city has increased, the timings of the autos have also been changed to allow them to collect waste before they leave their homes. However, if they do not give waste, it is assumed that they are throwing it on the roads. If they are processing the waste themselves, they should prove it,’ he said.


Awareness among the people is necessary: ​​Karigowda

‘In maintaining the cleanliness of the city, especially to ensure that there is no garbage anywhere, the cooperation of the citizens is very important and essential for our crews. Our crews go to the doorsteps to collect garbage. If they do not give them waste and throw it on the streets, it spoils the beauty of the city and also harms health. "People should be aware of their responsibility and cooperate with us. If we are facing any problems or difficulties in waste collection and disposal, they should also send us a WhatsApp message (9448197197)," said BSWML CEO Karigowda.




ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನಕ್ಕೆ ಬಿಎಸ್‌ಡಬ್ಲ್ಯುಎಂಎಲ್‌ ಸಿದ್ಧತೆ

ಬೀದಿಗೆ ಕಸ, ಮನೆ ಮುಂದೆ ತಮಟೆ 

Kere Manjunath ಕೆರೆ ಮಂಜುನಾಥ್ 

ಬೆಂಗಳೂರು: ರಸ್ತೆ–ಬೀದಿ, ಖಾಲಿ ನಿವೇಶನಗಳಲ್ಲಿ ಕಸ ಬಿಸಾಡುವವರ ಮನೆ ಮುಂದೆ ತ್ಯಾಜ್ಯ ಸುರಿದು, ತಮಟೆ ಹೊಡೆಯುವ ವಿನೂತನ ಅಭಿಯಾನ ನಡೆಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಸಿದ್ಧತೆ ನಡೆಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ರಸ್ತೆಗಳಲ್ಲಿ ಬ್ಲ್ಯಾಕ್‌ ಸ್ಪಾಟ್‌ಗಳು ಇಲ್ಲದಂತೆ ಮಾಡಲು ಸಾಕಷ್ಟು ಪ್ರಯತ್ನಪಡುತ್ತಿದ್ದರೂ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಸಂಖ್ಯೆ ಪೂರ್ಣವಾಗಿ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ, ಬಿಎಸ್‌ಡಬ್ಲ್ಯುಎಂಎಲ್ ಸಿಬ್ಬಂದಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ, ಅವರ ಮನೆಯ ಮುಂದೆಯೇ ಕಸ ಸುರಿದು, ತಮಟೆ ಹೊಡೆದು ಅರಿವು ಮೂಡಿಸಲು ಮುಂದಾಗಿದೆ.

198 ವಾರ್ಡ್‌ಗಳಲ್ಲಿ ಬ್ಲ್ಯಾಕ್‌ ಸ್ಪಾಟ್‌ಗಳ ಬಗ್ಗೆ ಪೌರಕಾರ್ಮಿಕರು ಹಾಗೂ ತ್ಯಾಜ್ಯ ಸಂಗ್ರಹಿಸುವ ಆಟೊ ಸಿಬ್ಬಂದಿಗೆ ಮಾಹಿತಿ ಇದೆ. ಇವರ ಮಾಹಿತಿಯನ್ನು ಆಧರಿಸಿ, ಕಸ ಎಸೆಯುವವರ ವಿಡಿಯೊ ಮಾಡಿ, ಅವರ ವಿಳಾಸವನ್ನು ಪತ್ತೆ ಮಾಡಲಾಗುತ್ತದೆ. ದೃಶ್ಯ–ಚಿತ್ರ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಆ ವ್ಯಕ್ತಿಯ ಮನೆಗೆ ಹೋಗಿ ದಂಡ ವಿಧಿಸಲಾಗುತ್ತದೆ. ಅಷ್ಟಕ್ಕೆ ಸುಮ್ಮನಾಗದೆ, ಎಲ್ಲರಿಗೂ ಅರಿವಾಗುವಂತೆ ತಮಟೆ ಬಾರಿಸಿಲಾಗುತ್ತದೆ. ತ್ಯಾಜ್ಯವನ್ನು ಸುರಿದು ಅದರಿಂದ ಎಂತಹ ಸಮಸ್ಯೆಯಾಗುತ್ತದೆ ಎಂಬುದನ್ನು ಅವರಿಗೆ ತಿಳಿಸಿಕೊಡಲಾಗುತ್ತದೆ. ಈ ಅಭಿಯಾನ ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ.

‘ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಬಗ್ಗೆ ಮಾರ್ಷಲ್‌ಗಳು ಸೇರಿದಂತೆ ನಮ್ಮ ಸಿಬ್ಬಂದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾಕಷ್ಟು ಜನರ ಮಾಹಿತಿ ನಮ್ಮ ಬಳಿ ಇದೆ. ಅವರ ಮನೆ ಮುಂದೆ ತಮಟೆ ಬಾರಿಸುವ ಅಭಿಯಾನ ಆರಂಭಿಸಲಾಗುತ್ತದೆ. ಜನರು ಸಮಸ್ಯೆ ಅರಿತು ಅವರು ನಗರ ಸ್ವಚ್ಛತೆಗೆ  ಕೈಜೋಡಿಸಬೇಕು ಎಂಬುದು ನಮ್ಮ ಗುರಿಯೇ ಹೊರತು ಅವರಿಗೆ ಯಾವುದೇ ರೀತಿಯಲ್ಲಿ ಮುಜುಗರವನ್ನು ಉಂಟು ಮಾಡುವ ಉದ್ದೇಶ ನಮಗಿಲ್ಲ’ ಎಂದು ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ತಿಳಿಸಿದರು.

₹2 ಸಾವಿರ ದಂಡ: ‘ರಸ್ತೆ, ನಿವೇಶಗಳಲ್ಲಿ ಕಸ ಎಸೆಯುವವರಿಗೆ ಕನಿಷ್ಠ ₹2 ಸಾವಿರ ದಂಡ ವಿಧಿಸಲಾಗುತ್ತಿದೆ.  ಈ ರೀತಿ ದಂಡ ಪಾವತಿಸಿದವರ ಚಿತ್ರವನ್ನು ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. ಇಂತಹ ತಪ್ಪನ್ನು ಅವರು ಮತ್ತೆ ಮಾಡಬಾರದು ಎಂಬುದು ನಮ್ಮ ಆಶಯ’ ಎಂದರು.


ತ್ಯಾಜ್ಯ ನೀಡದ್ದರೆ ನೋಟಿಸ್‌!

‘198 ವಾರ್ಡ್‌ಗಳಲ್ಲಿ ಪ್ರತಿನಿತ್ಯ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಆಟೊ ಸಿಬ್ಬಂದಿಗಳಿಗೆ ಯಾವ ಮನೆಯವರು ತ್ಯಾಝ್ಯ ನೀಡುತ್ತಿಲ್ಲ ಎಂಬುದು ಗೊತ್ತಿರುತ್ತದೆ. ಅವರಿಂದ ಮಾಹಿತಿ ಪಡೆದುಕೊಂಡು ಅಂತಹ ಮನೆಗಳನ್ನು ವಾರ್ಡ್‌ವಾರು ಪಟ್ಟಿ ಮಾಡಿಕೊಳ್ಳಲಾಗುತ್ತಿದೆ. ಮನೆಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡುವ ಪ್ರಕ್ರಿಯೆಯೂ ಸದ್ಯವೇ ಆರಂಭವಾಗಲಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ತಿಳಿಸಿದರು.

‘ನಗರದಲ್ಲಿ ಉದ್ಯೋಗಕ್ಕೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಅವರು ಮನೆಯಿಂದ ಹೊರಡುವುದಕ್ಕೆ ಮೊದಲೇ ತ್ಯಾಜ್ಯ ಸಂಗ್ರಹ ಮಾಡುವುದಕ್ಕೆ ಅನುವಾಗಲು ಆಟೊಗಳ ಸಮಯವನ್ನೂ ಬದಲಾಯಿಸಲಾಗಿದೆ. ಆದರೂ ತ್ಯಾಜ್ಯ ನೀಡದೆ ಇದ್ದರೆ ಅವರು ರಸ್ತೆಗಳಲ್ಲೇ ಅದನ್ನು ಎಸೆಯುತ್ತಿದ್ದಾರೆ ಎಂದು ಭಾವಿಸಲಾಗುತ್ತದೆ. ಅವರು ತಾವೇ ತ್ಯಾಜ್ಯ ಸಂಸ್ಕರಿಸುತ್ತಿದ್ದೇವೆ ಎಂಬುದಾದರೆ ಅದನ್ನು ಸಾಬೀತುಪಡಿಸಬೇಕು’ ಎಂದು ಹೇಳಿದರು.

 

ಜನರಲ್ಲಿ ಅರಿವು ಅಗತ್ಯ: ಕರೀಗೌಡ

‘ನಗರದ ಸ್ವಚ್ಛತೆ ಕಾ‍ಪಾಡುವಲ್ಲಿ ಅದರಲ್ಲೂ ಎಲ್ಲೂ ಕಸ ಇಲ್ಲದಂತೆ ನೋಡಿಕೊಳ್ಳಲು ನಮ್ಮ ಸಿಬ್ಬಂದಿಗೆ ನಾಗರಿಕರ ಸಹಕಾರ ಅತಿ ಮುಖ್ಯ, ಹಾಗೂ ಅತಿ ಅವಶ್ಯವೂ ಹೌದು. ಮನೆ ಬಾಗಿಲಿಗೆ ಕಸ ತೆಗೆದುಕೊಳ್ಳಲು ನಮ್ಮ ಸಿಬ್ಬಂದಿ ಹೋಗುತ್ತಾರೆ. ಅವರಿಗೆ ತ್ಯಾಜ್ಯ ನೀಡದೆ ಬೀದಿಯಲ್ಲಿ ಬಿಸಾಡಿದರೆ ನಗರದ ಸೌಂದರ್ಯ ಹಾಳಾಗುವ ಜೊತೆಗೆ ಆರೋಗ್ಯವೂ ಹಾಳಾಗುತ್ತದೆ. ಜನರು ತಮ್ಮ ಜವಾಬ್ದಾರಿಯನ್ನು ಅರಿವು ನಮ್ಮೊಂದಿಗೆ ಸಹಕರಿಸಬೇಕು. ತ್ಯಾಜ್ಯ ಸಂಗ್ರಹ, ವಿಲೇವಾರಿಯಲ್ಲಿ ನಮ್ಮಿಂದ ತೊಂದರೆ, ಸಮಸ್ಯೆ ಆಗುತ್ತಿದ್ದರೆ ನಮಗೆ ವಾಟ್ಸ್‌ ಆ್ಯಪ್‌ (9448197197) ಸಂದೇಶವನ್ನೂ ಕಳುಹಿಸಬೇಕು’ ಎಂದು ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ಹೇಳಿದರು.