Thursday, August 21, 2025

Plaster of Paris Ganesha idols: criminal cases will be filed… ಪಿಒಪಿ ಗಣೇಶ ಮೂರ್ತಿ ತಯಾರಿ: ಕ್ರಿಮಿನಲ್ ಮೊಕದ್ದಮೆ

Guidelines Issued Regarding Measures for an Eco-Friendly Ganesha Festival

Plaster of Paris Ganesha idols: criminal cases will be filed



Bengaluru, In connection with the 2025 Gauri-Ganesha Festival, the preparation of Ganesha idols has already commenced. A meeting chaired by the BBMP Chief Commissioner was held to discuss the complete prohibition and restriction on the use of chemical paints, thermocol, and Plaster of Paris in idol-making. It was also decided that idols made using these materials will be seized and disposed of in accordance with regulations. Further, to handle the wet waste generated during the festival celebrations, arrangements will be made to send the waste to the BBMP's processing units.

The meeting emphasized that only eco-friendly Ganesha idols must be worshipped in the city. It was resolved that criminal cases will be filed against individuals found manufacturing Ganesha idols using banned materials like Plaster of Paris.

Accordingly, based on the discussions and decisions made during the meeting chaired by the Chief Commissioner on 05-08-2025, zone-level officers are directed to take the following measures to ensure an eco-friendly Ganesha festival:

1. *Permission Process*:

   Individuals seeking permission to install public Ganesha idols must apply at the offices of the Assistant Executive Engineers designated as Nodal Officers at the sub-divisional level. The Nodal Officers will coordinate with the Police, BESCOM, Fire Department, and other relevant departments to obtain and issue approvals through a single-window system swiftly.


Also read.... Colour Ganesha: A loophole for the Environment


Also read....Ganesha, a symbol of the environment ಪರಿಸರ ಗಣೇಶ 

Also read…. Ganesha idol hit by hammer, axe!


ALSO Read… POP idol: BBMP hiding the truth ಪಿಒಪಿ ಮೂರ್ತಿ ಮುಚ್ಚಿಟ್ಟ ಬಿಬಿಎಂಪಿ

2. *Prohibition and Enforcement*:

   The manufacture and sale of Ganesha idols using chemical paints, thermocol, and Plaster of Paris are strictly prohibited within BBMP limits. Nodal Officers from the respective BBMP sub-divisions, along with officers from the Police, Fire, and BESCOM departments, must inspect such manufacturing/sales areas, issue notices, conduct site inspections, and, upon discovering any violations, impose fines, file criminal cases, and seize the banned materials. Zonal Commissioners will oversee these actions at the zonal level.


3. *Disposal of Seized Materials*:

   Seized banned materials must be disposed of in accordance with applicable regulations.


4. *Promotion of Eco-Friendly Idols*:

   Idol makers must be encouraged and instructed to create only eco-friendly idols made from natural clay. Awareness campaigns and advertisements will be conducted to promote this.


5. *Home Immersion and Awareness*:

   Citizens will be encouraged to immerse small eco-friendly idols at home in buckets, and the residual clay should be reused for gardening or potted plants.


6. *Immersion Facilities for Large Idols*:

   BBMP will identify designated immersion locations in each ward for larger idols and disseminate this information widely. If necessary, mobile immersion units will be deployed within ward limits.


7. *Temporary Immersion Sites and Waste Management*:

   To prevent pollution in lakes and temple ponds, temporary immersion tanks will be created nearby. The waste materials such as clay, flowers, and plastic will be segregated—wet waste will be sent to wet waste processing units, and dry waste to respective collection centers. Dedicated teams will be deployed at immersion sites to ensure public safety. Necessary arrangements such as ambulances, medical staff, lighting, barricading, sound systems, and trained swimmers (including NDRF teams) will be made.


8. *Appointment of Supervising and Nodal Officers*:

   Zonal Commissioners will appoint one supervising officer per zone and one nodal officer per ward to oversee immersion-related activities.


9. *Enforcement of Plastic Ban*:

   Enforcement teams will be formed in each zone to monitor the illegal sale and use of plastic, and violators will be penalized as per the rules.


10. *Facilitation and Permissions*:

    The celebration of an eco-friendly Ganesha festival will be supported, and necessary permissions will be issued under conditions specified by BBMP, Police Department, Fire Department, BESCOM, and the Karnataka State Pollution Control Board.


*Establishment of 75 Single-Window Centers*

To streamline the process of granting permissions for the installation of Ganesha idols, 75 single-window centers will be set up at sub-divisional offices within BBMP limits. Officers from BBMP, Police, BESCOM, and the Fire Department will be present at these centers to provide approval from a single location.

*For more information, copies of the official order and details of the 75 single-window centers are enclosed.*


ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕ್ರಮವಹಿಸುವ ಕುರಿತು ಮಾರ್ಗಸೂಚಿ

ಪಿಒಪಿ ಗಣೇಶ ಮೂರ್ತಿ ತಯಾರಿ: ಕ್ರಿಮಿನಲ್ ಮೊಕದ್ದಮೆ

*ಬೆಂಗಳೂರು:  2025ನೇ ಸಾಲಿನ ಗೌರಿ-ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ, ಗಣೇಶ ಮೂರ್ತಿಗಳ ತಯಾರಿಕೆ ಪ್ರಾರಂಭವಾಗಿದ್ದು, ಗಣೇಶ ಮೂರ್ತಿಯ ತಯಾರಿಕೆಗಾಗಿ ಬಳಸುವ ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ನಿರ್ಬಂಧಿಸುವುದರ ಕುರಿತು ಹಾಗೂ ಈ ರೀತಿಯ ವಸ್ತುಗಳನ್ನು ಬಳಸಿ ತಯಾರಿಕೆಯಾಗುವ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು ನಿಯಾಮಾನುಸಾರ ವಿಲೇವಾರಿ ಮಾಡುವ ಕುರಿತು ಹಾಗೂ ಹಬ್ಬಗಳ ಆಚರಣೆಯಿಂದ ಬರುವ ಹಸಿ ತ್ಯಾಜ್ಯವನ್ನು ಪಾಲಿಕೆಯ ಸಂಸ್ಕರಣಾ ಘಟಕಗಳಿಗೆ ಸಂಸ್ಕರಣೆಗಾಗಿ ಕಳುಹಿಸುವ ನಿಮಿತ್ತ ಬಿಬಿಎಂಪಿ ಮುಖ್ಯ ಆಯುಕ್ತರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿರುತ್ತದೆ.

ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕಾಗಿ ತೀರ್ಮಾನವಾಗಿರುತ್ತದೆ.

ಅದರಂತೆ, ದಿನಾಂಕ: 05-08-2025 ರಂದು ಬಿಬಿಎಂಪಿ ಮುಖ್ಯ ಆಯುಕ್ತರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಹಾಗೂ ತೀರ್ಮಾನಗಳಂತೆ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ವಲಯದ ಅಧಿಕಾರಿಗಳು ಈ ಕೆಳಕಂಡಂತೆ ಅಗತ್ಯ ಕ್ರಮವಹಿಸಲು ಸೂಚಿಸಿದೆ.


1. ಗಣೇಶ ಹಬ್ಬದ ನಿಮಿತ್ತ ಸಾರ್ವಜನಿಕವಾಗಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಸಲುವಾಗಿ ಅನುಮತಿ ಪಡೆಯಲು ಉಪ ವಿಭಾಗದ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಾಗಿ ನೇಮಿಸಲಾದ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳ ಕಾರ್ಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ನೋಡಲ್ ಅಧಿಕಾರಿಗಳು ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಭಿಪ್ರಾಯ ಪಡೆದು ಏಕಗವಾಕ್ಷಿಯಲ್ಲಿ ತ್ವರಿತವಾಗಿ ಅನುಮತಿ ನೀಡಲು ಕ್ರಮಕೈಗೊಳ್ಳುವುದು.


2. ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್... ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸದರಿ ವಸ್ತುಗಳನ್ನು ಬಳಸಿ ತಯಾರಿಸುವ, ಮಾರಾಟ ಮಾಡುವ ಪ್ರದೇಶಗಳನ್ನು ಸಂಬಂಧಪಟ್ಟ ಬಿಬಿಎಂಪಿಯ ಉಪ ವಿಭಾಗದ ನೋಡೆಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಖುದ್ದಾಗಿ ಪರಿಶೀಲಿಸಿ ನೋಟೀಸ್ ನೀಡಬೇಕು, ಸ್ಥಳ ತನಿಖೆ ಕೈಗೊಂಡು ರಾಸಾಯನಿಕ ಬಣ್ಣಗಳು ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯ ತಯಾರಿಕೆಯನ್ನು ನಡೆಸುತ್ತಿದ್ದಲ್ಲಿ ಹಾಗೂ ಮಾರಾಟ ಮಾಡುತ್ತಿದ್ದಲ್ಲಿ ದಂಡ ವಿಧಿಸಿ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಿ ನಿಷೇಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಕ್ರಮವಹಿಸುವುದು. ಸದರಿ ಕಾರ್ಯವನ್ನು ವಲಯ ಆಯುಕ್ತರು, ವಲಯ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸುವುದು.


3. ವಶಪಡಿಸಿಕೊಳ್ಳಲಾದ ಮೇಲ್ಕಂಡ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿಗೊಳಿಸಲು ಕ್ರಮವಹಿಸುವುದು.


4. ಗಣೇಶಮೂರ್ತಿ ತಯಾರಿಕೆದಾರರಿಗೆ ಪರಿಸರ ಸ್ನೇಹಿ/ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಮಾತ್ರ ತಯಾರಿಸಲು ಜಾಹೀರಾತು ನೀಡುವುದು.


5. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ, ಬಕೇಟ್‌ಗಳಲ್ಲಿ ವಿಸರ್ಜನೆಗೊಳಿಸಿ, ಬರುವ ಮಣ್ಣನ್ನು ಕೈತೋಟಗಳಿಗೆ, ಹೂವಿನ ಕುಂಡಗಳಿಗೆ ಬಳಸಲು ಅರಿವು ಮೂಡಿಸುವುದು.


6. ದೊಡ್ಡ ಗಾತ್ರದ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ವಿಸರ್ಜನೆ/ನಿಮಜ್ಜನ ಸ್ಥಳಗಳನ್ನು ಗುರುತಿಸಿ, ಸದರಿ ಸ್ಥಳಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚುರಪಡಿಸುವುದು. ಅವಶ್ಯವಿದ್ದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಸಂಚಾರಿ ವಾಹನ ಮೂಲಕ ವಿಸರ್ಜನೆ ಅಗತ್ಯ ವ್ಯವಸ್ಥೆ ಕೈಗೊಳ್ಳುವುದು.


7. ಪಾಲಿಕೆಯ ವ್ಯಾಪ್ತಿಯ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಸದರಿ ಸ್ಥಳಗಳ ಸಮೀಪದಲ್ಲಿ ತಾತ್ಕಾಲಿಕ ವಿಸರ್ಜನೆ ಸ್ಥಳಗಳನ್ನು ನಿರ್ಮಿಸುವುದು.  ಸದರಿ ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು ಹಾಗೂ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ವಿಂಗಡಿಸಿ ಹಸಿತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹಾಗೂ ಒಣತ್ಯಾಜ್ಯವನ್ನು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ರವಾನಿಸುವುದು, ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ತಂಡಗಳನ್ನು ನೇಮಿಸುವುದು ಹಾಗೂ ಕಿಯಾಸ್, ಆಂಬ್ಯುಲೆನ್ಸ್ ವ್ಯವಸ್ಥೆ, ವೈದ್ಯರು ಮತ್ತು ಶುಶೂಷಕಿಯರನ್ನು ಪ್ರಾಥಮಿಕ ಚಿಕಿತ್ಸೆ ನೀಡಲು ನೇಮಿಸಿ, ಎಲ್ಲಾ ಪಿ.ಹೆಚ್.ಸಿ ಗಳ ಬಳಿಯಲ್ಲಿ ಹೆಚ್ಚುವರಿ ಆಂಬ್ಯುಲೆನ್ಸ್ ಹಾಗೂ ವೈದ್ಯರು ಸಿದ್ದವಿರುವಂತೆ ಕ್ರಮವಹಿಸುವುದು ಹಾಗೂ ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ಧ್ವನಿವರ್ಧಕ ವ್ಯವಸ್ಥೆ ಮತ್ತು ನುರಿತ ಈಜುಗಾರರನ್ನು ಒಳಗೊಂಡಂತೆ ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ಹಾಜರಿರುವಂತೆ ಕ್ರಮವಹಿಸುವುದು.


8. ಪರಿಸರ ಸ್ನೇಹಿ ಗಣೇಶ ಆಚರಣೆಯ ನಿಮಿತ್ತ ವಲಯ ಆಯುಕ್ತರು ವಲಯಕ್ಕೆ ಒಬ್ಬರನ್ನು ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿ, ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ವಾರ್ಡಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಲು ಅಗತ್ಯ ಕ್ರಮವಹಿಸುವುದು.


9. ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಯಲಿದ್ದು, ವಲಯ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಕಂಡುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಿ ಕ್ರಮಕೈಗೊಳ್ಳುವುದು.


10. ಪರಿಸರ ಸ್ನೇಹಿ ಗಣೇಶ ಆಚರಣೆಗೆ ಪ್ರೋತ್ಸಾಹ ನೀಡುವುದು ಹಾಗೂ ಬಿ.ಬಿ.ಎಂ.ಪಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ ಹಾಗೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊರಡಿಸುವ ಷರತ್ತುಗೊಳಪಡಿಸಿ, ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಲು ಕ್ರಮವಹಿಸುವುದು.


*75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ:*

ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಅನುಮತಿ ನೀಡುವ ಸಲುವಾಗಿ 75 ಉಪ ವಿಭಾಗ ಕಛೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ. ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಒಂದೇ ಸ್ಥಳದಲ್ಲಿದ್ದು, ಅನುಮತಿ ಪತ್ರವನ್ನು ನೀಡಲಿದ್ದಾರೆ.


75 ಏಕ‌ಗವಾಕ್ಷಿ ಕೇಂದ್ರಗಳ‌ ಮಾಹಿತಿ 

Sunday, August 17, 2025

BDA has no site for emergency services either ತುರ್ತು ಸೇವೆಗಳಿಗೂ ಬಿಡಿಎ ನಿವೇಶನ ಇಲ್ಲ

BDA has not allotted sites for police and fire stations for decades despite being allocated in the PLAN

BDA has no site for emergency services either

Kere Manjunath ಕೆರೆ ಮಂಜುನಾಥ್

Bengaluru: The BDA has been counting down the years to allocate sites reserved for emergency services like police stations and fire stations.

It has been 15 years since the Sir M. Visvesvaraya Layout was built. Civil Amenity (CA) sites have been identified in the layout plan . Sites have also been allocated for important services like police stations, hospitals, schools, colleges, and fire stations. However, BDA officials are not keen on handing them over.

In the map of the 2nd block of Visvesvaraya Layout, CA site number 4 is mentioned as ‘Fire Station’. The Director General of the State Fire and Emergency Services and the State Disaster Response Force Directorate wrote a letter to the BDA Chairman and Commissioner on February 12, 2024, requesting the allocation of this site, which is about three-quarters of an acre, for the purpose. 

‘It is necessary to create awareness among the public and students about the precautionary measures to be taken in the event of accidents, including firefighting, search and rescue, disaster management, granting no-objection to multi-storey buildings, oil products, storage of explosives, and to establish a fire station to perform neutral duties for the security of dignitaries. Therefore, the site should be allocated to the department and a possession letter should be issued,’ the letter has requested. However, the BDA officials have not responded. 

Also read… BBMP neglects hospital site registration ಆಸ್ಪತ್ರೆ ನಿವೇಶನ ನೋಂದಣಿಗೆ ಬಿಬಿಎಂಪಿ ನಿರ್ಲಕ್ಷ್ಯ


Earlier, some people were illegally constructing a compound in the area of ​​CA Site 4. Even then, the fire brigade had stopped it. Instead of issuing an allotment letter, the BDA officials are making excuses that ‘this area is in dispute’.

Police Station:

 CA Plot No. 9, measuring 1 acre and 20 guntas, in Block 2 of Vishweshwar Layout, has been earmarked for a police station. The Kengeri Inspector submitted a request to the BDA Commissioner on May 30, 2024, to allocate this. There has been no response to this request yet.

Also Read... Negligence of BDA in CA plot allotment to government college... https://keremanju.blogspot.com/2024/10/negligence-of-bda-to-provide-land-for.html

‘CA Plot 9 is a suitable area to build a police station since it is in the middle of Vishweshwar Layout. It is formed with blocks 1 to 9 of Vishweshwar Layout, and there are private layouts and old towns in between. Therefore, a police station is required here, so the site should be allocated and given for possession,’ the Inspector has requested.


Decision after discussion with the chairman: Manivannan

‘We must give the plots of land reserved for the citizens for emergency services. We will review this matter, discuss it with the chairman and take action to hand over the plots to the fire brigade and police stations soon,’ said BDA Commissioner Manivannan.


There is money, no site: Shivashankar

‘We have money under the 15th financial plan to establish a fire station. We have written a letter to the BDA chairman and commissioner asking them to hand over the plot reserved for the fire station in Visvesvaraya Layout. But there has been no response,’ said Fire and Emergency Services Director T.N. Shivashankar.


If there is protection, people will build houses: Shivakumar

‘Although it has been 15 years since the Visvesvaraya Layout was built, not many people have built buildings here. If there are security and emergency facilities like police stations and fire stations in this area, people will come to live here with courage. Also, the people around this area need to get emergency services quickly. MLA S.T. Somashekar has written a letter to the BDA President and Commissioner asking them to sanction the site, but no action has been taken. The officials are trying to make more profit by making money from real estate scams,' accused Shivakumar, President of Jayaprakash Narayan Discussion Forum.



ನಕ್ಷೆಯಲ್ಲಿ ಮೀಸಲಿಟ್ಟಿದ್ದರೂ ಪೊಲೀಸ್‌, ಅಗ್ನಿಶಾಮಕ ಠಾಣೆಗೆ ದಶಕದಿಂದ ನಿವೇಶನ ಹಂಚಿಕೆ ಮಾಡದ ಬಿಡಿಎ

ತುರ್ತು ಸೇವೆಗಳಿಗೂ ಬಿಡಿಎ ನಿವೇಶನ ಇಲ್ಲ

Kere Manjunath ಕೆರೆ ಮಂಜುನಾಥ್

ಬೆಂಗಳೂರು: ಪೊಲೀಸ್‌ ಠಾಣೆ, ಅಗ್ನಿಶಾಮಕ ಠಾಣೆಯಂತಹ ತುರ್ತುಸೇವೆಗಳಿಗೆ ಮೀಸಲಿಟ್ಟಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ದಶಕಗಳಿಂದ ಮೀನಮೇಷ ಎಣಿಸುತ್ತಿದೆ.

ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯನ್ನು ನಿರ್ಮಿಸಿ 15 ವರ್ಷ ಕಳೆದಿದೆ. ಬಡಾವಣೆಯ ನಕ್ಷೆಯಲ್ಲಿ ನಾಗರಿಕ ಸೌಲಭ್ಯ (ಸಿ.ಎ) ನಿವೇಶನಗಳನ್ನು ಗುರುತಿಸಲಾಗಿದೆ. ಪೊಲೀಸ್‌ ಠಾಣೆ, ಆಸ್ಪತ್ರೆ, ಶಾಲೆ, ಕಾಲೇಜು, ಅಗ್ನಿಶಾಮಕ ಠಾಣೆಯಂತಹ ಪ್ರಮುಖ ಸೇವೆಗಳಿಗೂ ನಿವೇಶನಗಳನ್ನು ಮೀಸಲಿಡಲಾಗಿದೆ. ಆದರೆ, ಅವುಗಳನ್ನು ಹಸ್ತಾಂತರಿಸಲು ಬಿಡಿಎ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.

ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನ ನಕ್ಷೆಯಲ್ಲಿ ಸಿ.ಎ ನಿವೇಶನ ಸಂಖ್ಯೆ 4 ಅನ್ನು ‘ಅಗ್ನಿಶಾಮಕ ಠಾಣೆ’ ಎಂದು ನಮೂದಿಸಲಾಗಿದೆ. ಸುಮಾರು ಮೂರುಮುಕ್ಕಾಲು ಎಕರೆ ವಿಸ್ತೀರ್ಣದ ಈ ನಿವೇಶನವನ್ನು ಹಂಚಿಕೆ ಮಾಡಿ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ನಿರ್ದೇಶನಾಲಯದ ಮಹಾ ನಿರ್ದೇಶಕರು 2024ರ ಫೆಬ್ರುವರಿ 12ರಂದು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 

‘ಅಗ್ನಿಶಮನ, ಶೋಧನೆ–ರಕ್ಷಣೆ, ವಿಪತ್ತು ನಿರ್ವಹಣೆ, ಬಹುಮಹಡಿ ಕಟ್ಟಡ, ತೈಲೋತ್ಪನ್ನ, ಸ್ಫೋಟಕಗಳ ಶೇಖರಣೆಗೆ ನಿರಾಕ್ಷೇಪಣೆ ನೀಡುವುದು ಸೇರಿದಂತೆ ಅವಘಡಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, ಗಣ್ಯ ವ್ಯಕ್ತಿಗಳ ಭದ್ರತೆಗೆ ತಟಸ್ಥ ಕರ್ತವ್ಯ ನಿರ್ವಹಣೆಗೆ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಹೀಗಾಗಿ, ನಿವೇಶನವನ್ನು ಇಲಾಖೆಗೆ ಹಂಚಿಕೆ ಮಾಡಿ, ಸ್ವಾಧೀನ ಪತ್ರ ನೀಡಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಬಿಡಿಎ ಅಧಿಕಾರಿಗಳು ಸ್ಪಂದಿಸಿಲ್ಲ.

ಸಿ.ಎ ನಿವೇಶನ 4ರ ಪ್ರದೇಶದಲ್ಲಿ ಈ ಹಿಂದೆ ಕೆಲವರು ಅಕ್ರಮವಾಗಿ ಕಾಂಪೌಂಡ್‌ ನಿರ್ಮಿಸುತ್ತಿದ್ದರು. ಆಗಲೂ ಅಗ್ನಿಶಾಮಕ ದಳದವರೇ ಅದನ್ನು ತಡೆದಿದ್ದರು. ಹಂಚಿಕೆ ಪತ್ರ ನೀಡುವ ಬದಲು, ‘ಈ ಪ್ರದೇಶ ವ್ಯಾಜ್ಯದಲ್ಲಿದೆ’ ಎಂದು ಬಿಡಿಎ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.

ಪೊಲೀಸ್‌ ಠಾಣೆ: ವಿಶ್ವೇಶ್ವರ ಬಡಾವಣೆಯ 2ನೇ ಬ್ಲಾಕ್‌ನಲ್ಲಿ ಒಂದು ಎಕರೆ 20 ಗುಂಟೆಯಲ್ಲಿರುವ ಸಿ.ಎ ನಿವೇಶನ ಸಂಖ್ಯೆ 9 ಅನ್ನು ಪೊಲೀಸ್ ಠಾಣೆಗೆ ಮೀಸಲಿಡಲಾಗಿದೆ.  ಇದನ್ನು ಹಂಚಿಕೆ ಮಾಡಲು ಕೆಂಗೇರಿ ಇನ್‌ಸ್ಪೆಕ್ಟರ್‌ ಅವರು 2024ರ ಮೇ 30ರಂದು ಬಿಡಿಎ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಗೂ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.

‘ಸಿ.ಎ ನಿವೇಶನ 9, ವಿಶ್ವೇಶ್ವರಯ್ಯ ಬಡಾವಣೆಯ ಮಧ್ಯಭಾಗದಲ್ಲಿರುವುದರಿಂದ ಪೊಲೀಸ್‌ ಠಾಣೆ ನಿರ್ಮಿಸಲು ಸೂಕ್ತ ಪ್ರದೇಶವಾಗಿರುತ್ತದೆ. ವಿಶ್ವೇಶ್ವರಯ್ಯ ಬಡಾವಣೆಯ 1ರಿಂದ 9 ಬ್ಲಾಕ್‌ಗಳೊಂದಿಗೆ ರಚನೆಯಾಗಿದ್ದು, ಮಧ್ಯೆ ಖಾಸಗಿ ಬಡಾವಣೆ, ಹಳೆ ಊರುಗಳೂ ಇವೆ. ಹೀಗಾಗಿ, ಇಲ್ಲಿ ಪೊಲೀಸ್‌ ಠಾಣೆ ಅಗತ್ಯವಾಗಿದ್ದು, ನಿವೇಶನವನ್ನು ಹಂಚಿಕೆ ಮಾಡಿ, ಸ್ವಾಧೀನಕ್ಕೆ ನೀಡಿ’ ಎಂದು ಇನ್‌ಸ್ಪೆಕ್ಟರ್‌ ಮನವಿ ಮಾಡಿದ್ದಾರೆ.

 

ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧಾರ: ಮಣಿವಣ್ಣನ್‌

‘ತುರ್ತುಸೇವೆಗಳಿಗೆ ಮೀಸಲಿಟ್ಟಿರುವ ನಾಗರಿಕರ ಸೌಲಭ್ಯದ ನಿವೇಶನಗಳನ್ನು ನಾವು ನೀಡಲೇಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ, ಅಧ್ಯಕ್ಷರೊಂದಿಗೆ ಚರ್ಚೆ ಮಾಡಿ ಶೀಘ್ರ ನಿವೇಶನಗಳನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಠಾಣೆಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಡಿಎ ಆಯುಕ್ತ ಮಣಿವಣ್ಣನ್ ತಿಳಿಸಿದರು.

 

ಹಣವಿದೆ, ನಿವೇಶನ ಇಲ್ಲ: ಶಿವಶಂಕರ್‌

‘ಅಗ್ನಿಶಾಮಕ ಠಾಣೆ ಸ್ಥಾಪಿಸಲು 15ನೇ ಹಣಕಾಸು ಯೋಜನೆಯಡಿ ನಮ್ಮಲ್ಲಿ ಹಣವಿದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅಗ್ನಿಶಾಮಕ ಠಾಣೆಗಾಗಿಯೇ ಮೀಸಲಿಟ್ಟರುವ ನಿವೇಶನವನ್ನು ಹಸ್ತಾಂತರಿಸಿ ಎಂದು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ ಟಿ.ಎನ್‌. ಶಿವಶಂಕರ ತಿಳಿಸಿದರು.

 

ರಕ್ಷಣೆ ಇದ್ದರೆ ಮನೆ ಕಟ್ಟಿಕೊಳ್ಳುತ್ತಾರೆ: ಶಿವಕುಮಾರ್‌

‘ವಿಶ್ವೇಶ್ವರಯ್ಯ ಬಡಾವಣೆ ನಿರ್ಮಾಣವಾಗಿ 15 ವರ್ಷವಾಗುತ್ತಿದ್ದರೂ ಹೆಚ್ಚು ಜನರು ಇಲ್ಲಿ ಕಟ್ಟಡ ನಿರ್ಮಿಸಿಲ್ಲ. ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ಠಾಣೆಗಳಂತಹ ರಕ್ಷಣೆ– ತುರ್ತು ಸೌಲಭ್ಯಗಳು ಈ ಪ್ರದೇಶದಲ್ಲಾದರೆ ಜನರು ಧೈರ್ಯದಿಂದ ಇಲ್ಲಿ ವಾಸಿಸಲು ಬರುತ್ತದೆ. ಅಲ್ಲದೆ, ಈ ಪ್ರದೇಶ ಸುತ್ತಮುತ್ತಲಿನ ಜನರಿಗೆ ತುರ್ತುಸೇವೆಗಳು ಶೀಘ್ರವಾಗಿ ಸಿಗಬೇಕಾದ ಅಗತ್ಯವಿದ. ಶಾಸಕ ಎಸ್‌.ಟಿ. ಸೋಮಶೇಖರ್‌ ಅವರು ಬಿಡಿಎ ಅಧ್ಯಕ್ಷ ಹಾಗೂ ಆಯುಕ್ತರಿಗೆ ಪತ್ರ ಬರೆದು ನಿವೇಶನ ಮಂಜೂರು ಮಾಡಲು ಹೇಳಿದ್ದರೂ ಕ್ರಮವಾಗಿಲ್ಲ. ರಿಯಲ್‌ ಎಸ್ಟೇಟ್‌ ಕುಳಗಳಿಗೆ ಮಣೆ ಹಾಕಿ, ಅಧಿಕಾರಿಗಳು ಹೆಚ್ಚಿನ ಲಾಭ ಗಳಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಅಧ್ಯಕ್ಷ ಶಿವಕುಮಾರ್‌ ಆರೋಪಿಸಿದರು.

Friday, August 15, 2025

Hospital at a cost of ₹21.25 crore ₹21.25 ಕೋಟಿ ವೆಚ್ಚದಲ್ಲಿ ಆಸ್ಪತ್ರೆ

BBMP plans to build a mother-child hospital after 14 years

Hospital at a cost of ₹21.25 crore

Bengaluru: 14 years after the BDA allotted a civic facility site, the BBMP, which has acquired the site, is planning to build a mother-child hospital at a cost of ₹21.25 crore.

BBMP has prepared a plan to build a 50-bed mother-child hospital in an area of 3,432 square meters at Citizen's Site No. 2 in the 2nd Block of Sir M. Visvesvaraya Layout.

It is planned to build a ground and two-storey building in an area of 3278 square meters, and the cost of civil works will be ₹10.49 crore. The Health and Family Welfare Department engineers have submitted a report to the BBMP stating that the cost of the project, including fire extinguishers, lifts, CCTV systems, telephones, nurse call systems, TVs, and UPS systems, is ₹1.48 crore, model surgery units, medical gas pipelines, and furniture are ₹1.61 crore, infrastructure including electrical, water, STP, and borewells is ₹1.94 crore, medical equipment is ₹70 lakh, tender premium is ₹1.55 crore, project management consultants are ₹7.76 lakh, GST is ₹3.21 crore, and other expenses are ₹21.25 crore.

“As per the instructions of the Deputy Chief Minister, steps have been taken to build the hospital. A plan has been prepared and tenders will be called soon,” BBMP officials said.

Hospital from the corporation: 

‘The hospital will be built by the BBMP itself on the civic facility site provided by the BDA in Visvesvaraya 2nd block. Later, it will be considered for handing it over to the Health Department,’ Bangalore Urban Development Minister D.K. Shivakumar told the Legislative Council on Thursday.

Responding to a question from Congress’s Umashree, he assured that the hospital would be built soon.

‘Action should be taken against the officials who delayed in acquiring the hospital site,’ demanded Umashree. ‘Action will be taken on this after examining it,’ said Shivakumar.


Also read… BBMP neglects hospital site registration ಆಸ್ಪತ್ರೆ ನಿವೇಶನ ನೋಂದಣಿಗೆ ಬಿಬಿಎಂಪಿ ನಿರ್ಲಕ್ಷ್ಯ


The site that BBMP forgot!

The BDA had given the allotment letter for the CA site to the BBMP on January 6, 2011. Even after 11 years, the BBMP had not acquired the site. A special report on this was published in ‘Prajavani’ on October 7, 2022 under the title ‘BBMP Forgotten Hospital Site’. After this, the lease money was paid after the intervention of Deputy Chief Minister D.K. Shivakumar.

BBMP had paid ₹1.71 crore to BDA for the CA site on January 17, 2024. However, the BBMP Rajarajeshwari Nagar zone officials had not taken any action regarding the registration of this site. A special report was published in Prajavani on June 21, 2025 under the title ‘Negligence in Hospital Site Registration’ regarding this. Later, on the instructions of Rajarajeshwari Nagar Zone Commissioner Satish, BBMP officials had entered into a 30-year lease agreement with BDA on July 22.


14 ವರ್ಷದ ನಂತರ ಬಿಬಿಎಂಪಿಯಿಂದ ತಾಯಿ–ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ

₹21.25 ಕೋಟಿ ವೆಚ್ಚದಲ್ಲಿ ಆಸ್ಪತ್ರೆ

ಬೆಂಗಳೂರು: ಬಿಡಿಎ ವತಿಯಿಂದ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಮಾಡಿ 14 ವರ್ಷದ ನಂತರ, ನಿವೇಶನ ಪಡೆದುಕೊಂಡಿರುವ ಬಿಬಿಎಂಪಿ ₹21.25 ಕೋಟಿ ವೆಚ್ಚದಲ್ಲಿ ತಾಯಿ–ಮಕ್ಕಳ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ.

ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನಲ್ಲಿ ನಾಗರಿಕರ ನಿವೇಶನ ಸಂಖ್ಯೆ 2ರಲ್ಲಿ 3,432 ಚದರ ಮೀಟರ್‌ ವಿಸ್ತೀರ್ಣದಲ್ಲಿ 50 ಹಾಸಿಗೆಗಳ ತಾಯಿ–ಮಕ್ಕಳ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿ ಯೋಜನೆ ತಯಾರಿಸಿದೆ.

3278 ಚದರ ಮೀಟರ್‌ ವಿಸ್ತೀರ್ಣದಲ್ಲಿ ನೆಲ ಹಾಗೂ ಎರಡು ಅಂತಸ್ತುಗಳ ಕಟ್ಟಡ ನಿರ್ಮಿಸಲು ಯೋಜಿಸಲಾಗಿದ್ದು,  ಸಿವಿಲ್‌ ಕೆಲಸಗಳಿಗೆ ₹10.49 ಕೋಟಿ ವೆಚ್ಚವಾಗಲಿದೆ. ಅಗ್ನಿಶಾಮಕ, ಲಿಫ್ಟ್‌, ಸಿಸಿ ಟಿವಿ ವ್ಯವಸ್ಥೆ, ದೂರವಾಣಿ, ನರ್ಸ್‌ ಕರೆ ವ್ಯವಸ್ಥೆ, ಟಿವಿ, ಯುಪಿಎಸ್‌ ವ್ಯವಸ್ಥೆಗೆ ₹1.48 ಕೋಟಿ, ಮಾದರಿ ಶಸ್ತ್ರಚಿಕಿತ್ಸೆ ಘಟಕ, ವೈದ್ಯ ಗ್ಯಾಸ್‌ ಕೊಳವೆ ಮಾರ್ಗ, ಪೀಠೋಪಕರಣಕ್ಕೆ ₹1.61 ಕೋಟಿ, ಎಲೆಕ್ಟ್ರಿಕಲ್‌, ನೀರು, ಎಸ್‌ಟಿಪಿ, ಕೊಳವೆಬಾವಿ ಸೇರಿದಂತೆ ಮೂಲಸೌಕರ್ಯಕ್ಕೆ ₹1.94 ಕೋಟಿ, ವೈದ್ಯಕೀಯ ಉಪಕರಣಗಳಿಗೆ ₹70 ಲಕ್ಷ,  ಟೆಂಡರ್‌ ಪ್ರೀಮಿಯಂಗೆ ₹1.55 ಕೋಟಿ, ಯೋಜನಾ ನಿರ್ವಹಣೆ ಸಲಹೆಗಾರರಿಗೆ ₹7.76 ಲಕ್ಷ, ಜಿಎಸ್‌ಟಿ ₹3.21 ಕೋಟಿ ಹಾಗೂ ಇತರೆ ವೆಚ್ಚಗಳೂ ಸೇರಿ ₹21.25 ಕೋಟಿ ವೆಚ್ಚವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರ್‌ಗಳು ವರದಿ ಸಲ್ಲಿಸಿ ಬಿಬಿಎಂಪಿಗೆ ನೀಡಿದ್ದಾರೆ.

‘ಉಪ ಮುಖ್ಯಮಂತ್ರಿಯವರ ಸೂಚನೆಯಂತೆ ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಟೆಂಡರ್‌ ಕರೆಯಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.


Also read… BBMP neglects hospital site registration ಆಸ್ಪತ್ರೆ ನಿವೇಶನ ನೋಂದಣಿಗೆ ಬಿಬಿಎಂಪಿ ನಿರ್ಲಕ್ಷ್ಯ


ಪಾಲಿಕೆಯಿಂದ ಆಸ್ಪತ್ರೆ: 

‘ವಿಶ್ವೇಶ್ವರಯ್ಯ 2ನೇ ಬ್ಲಾಕ್‌ನಲ್ಲಿ ಬಿಡಿಎ ನೀಡಿರುವ ನಾಗರಿಕ ಸೌಲಭ್ಯ ನಿವೇಶನದಲ್ಲಿ ಬಿಬಿಎಂಪಿ ವತಿಯಿಂದಲೇ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ನಂತರ ಅದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಆಲೋಚಿಸಲಾಗುತ್ತದೆ’ ಎಂದು ವಿಧಾನಪರಿಷತ್‌ನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ತಿಳಿಸಿದರು.

ಕಾಂಗ್ರೆಸ್‌ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಆಸ್ಪತ್ರೆಯನ್ನು ಶೀಘ್ರವಾಗಿ ನಿರ್ಮಿಸಲಾಗತ್ತದೆ ಎಂಬ ಭರವಸೆ ನೀಡಿದರು.

‘ಆಸ್ಪತ್ರೆ ನಿವೇಶನವನ್ನು ಪಡೆದುಕೊಳ್ಳಲು ವಿಳಂಬಧೋರಣೆ ಅನುಸರಿಸಿದ ಅಧಿಕಾರಿಗಳ ಮೇಲೆ ಕ್ರಮವಾಗಬೇಕು’ ಎಂದು ಉಮಾಶ್ರೀ ಆಗ್ರಹಿಸಿದರು. ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಶಿವಕುಮಾರ್‌ ಹೇಳಿದರು.

 

ಬಿಬಿಎಂಪಿ ಮರೆತಿದ್ದ ನಿವೇಶನ!

ಬಿಡಿಎ ಸಿಎ ನಿವೇಶನವನ್ನು 2011ರ ಜನವರಿ 6ರಂದು ಬಿಬಿಎಂಪಿಗೆ ಹಂಚಿಕೆ ಪತ್ರ ನೀಡಿತ್ತು. ಇದಾಗಿ 11 ವರ್ಷವಾದರೂ ಬಿಬಿಎಂಪಿ ನಿವೇಶನ ಪಡೆದುಕೊಂಡಿರಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ 2022ರ ಅಕ್ಟೋಬರ್‌ 7ರಂದು ‘ಬಿಬಿಎಂಪಿ ಮರೆತ ಆಸ್ಪತ್ರೆ ನಿವೇಶನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದಾದ ನಂತರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಧ್ಯಪ್ರವೇಶದ ನಂತರ ಗುತ್ತಿಗೆ ಹಣ ಪಾವತಿಸಿತ್ತು.

ಬಿಬಿಎಂಪಿ  2024ರ ಜನವರಿ 17ರಂದು ಸಿಎ ನಿವೇಶನಕ್ಕಾಗಿ ₹1.71 ಕೋಟಿಯನ್ನು ಬಿಡಿಎಗೆ  ಪಾವತಿಸಿತ್ತು. ಆದರೆ, ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯದ ಅಧಿಕಾರಿಗಳು ಈ ನಿವೇಶನ ನೋಂದಣಿ ಬಗ್ಗೆ ಕ್ರಮಕೈಗೊಂಡಿರಲಿಲ್ಲ. ಈ ಬಗ್ಗೆ ಪ್ರಜಾವಾಣಿಯಲ್ಲಿ ‘ಆಸ್ಪತ್ರೆ ನಿವೇಶನ ನೋಂದಣಿಗೆ ನಿರ್ಲಕ್ಷ್ಯ’ ಶೀರ್ಷಿಕೆಯಡಿ 2025ರ ಜೂನ್‌ 21ರಂದು ವಿಶೇಷ ವರದಿ ಪ್ರಕಟವಾಗಿತ್ತು. ನಂತರ, ರಾಜರಾಜೇಶ್ವರಿ ನಗರ ವಲಯ ಆಯುಕ್ತ ಸತೀಶ್‌ ಅವರ ಸೂಚನೆಯಂತೆ, ಬಿಡಿಎಯೊಂದಿಗೆ 30 ವರ್ಷಗಳ ಗುತ್ತಿಗೆ ಕರಾರನ್ನು ಬಿಬಿಎಂಪಿ ಅಧಿಕಾರಿಗಳು  ಜುಲೈ 22ರಂದು ಮಾಡಿಕೊಂಡಿದ್ದರು.

Wednesday, August 13, 2025

A ‘shelter’ for ALFA stray dogs! ವ್ಯಗ್ರ ಬೀದಿ ನಾಯಿಗಳಿಗೆ ‘ಆಶ್ರಯ ಕೇಂದ್ರ’!

BBMP plans to permanently house stray dogs with a habit of biting

A ‘shelter’ for ALFA stray dogs!



Bengaluru: BBMP is planning to permanently house stray dogs in the city and take care of them in a ‘shelter’.

Cases of stray dog bites are increasing in the city. As per the Animal Breeding Control (ABC) rules, stray dogs that bite are caught, surgically or given rabies injections, monitored for ten days and then released back to their original location. Even after this, cases of dogs that have become accustomed to biting are being recorded.

Even though stray dogs with a habit of biting or ferocious stray dogs are kept in a monitoring center and given medication, they do not stop biting. Therefore, BBMP Animal Husbandry Department officials have planned to build ‘shelter’ sites to permanently house and care for such stray dogs. After overcoming the legal hurdles, they have decided to implement a new plan after reading the suggestions of the Animal Welfare Association.

The Supreme Court has directed that ‘stray dogs in Delhi and surrounding areas should be caught and shifted to shelters.’ Accordingly, the directive was issued to the officials in Bengaluru on Monday. Since the demand that ‘this order should be followed in the city as well’ has been heard in the Legislative Council, a discussion has started on the matter.

ALDO read…. STRAY DOGs Attack, citizens in distress ಬೀದಿ ನಾಯಿಗಳ ಹುಚ್ಚಾಟ, ನಾಗರಿಕರಿಗೆ ಪ್ರಾಣ ಸಂಕಟ

‘It is not possible to set up shelters for all stray dogs. Therefore, a plan needs to be formulated to permanently keep even the aggressive and biting stray dogs in the monitoring center or shelters. This is still an initial discussion and a decision has to be taken at the government level,’ said BBMP Animal Husbandry Department officials.


‘Alpha Dog’ in the monitoring center for a long time!

‘Straw dogs that bite are caught and given medication for 10 days in the monitoring center like the ABC program. After that, they are released back to the same place. They are biting again. Therefore, the possibilities in the rules to keep such ‘alpha dogs’ in the observation center for a longer period are being examined,’ said BBMP Animal Husbandry Department officials.

‘There is an idea that the ‘alpha dogs’ in the observation center should be released after their behavior improves. For this, a committee including doctors and animal lovers will be formed and as per the decision of that committee, it will be decided how long the ‘alpha dogs’ should be kept in the observation center. Discussions are underway on this and it is likely to be finalized in the coming days,’ he said.

Stray dog bites two students

A group of stray dogs attacked and bit two students of the B.R. Ambedkar School of Economics inside the Jnanabharati campus, leaving one student seriously injured.

‘A student was seriously injured in 10 places after being attacked by stray dogs during a morning walk on Tuesday. The student was being treated in the intensive care unit till Tuesday evening,' said the BBMP's assistant director of animal husbandry.

'Another student sustained minor injuries. Both of them had recovered by Tuesday evening and are in stable condition,' he informed.


ಕಚ್ಚುವ ಅಭ್ಯಾಸವುಳ್ಳ ಬೀದಿ ನಾಯಿಗಳನ್ನು ಶಾಶ್ವತವಾಗಿ ಕೇಂದ್ರದಲ್ಲಿರಿಸಲು ಬಿಬಿಎಂಪಿ ಚಿಂತನೆ

ವ್ಯಗ್ರ ಬೀದಿ ನಾಯಿಗಳಿಗೆ ‘ಆಶ್ರಯ ಕೇಂದ್ರ’!

ಬೆಂಗಳೂರು: ನಗರದಲ್ಲಿರುವ ವ್ಯಗ್ರ ಹಾಗೂ ಕಚ್ಚುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬೀದಿ ನಾಯಿಗಳನ್ನು ಶಾಶ್ವತವಾಗಿ ‘ಆಶ್ರಯ ಕೇಂದ್ರ’ದಲ್ಲಿರಿಸಿ ಪೋಷಣೆ ಮಾಡಲು ಬಿಬಿಎಂಪಿ ಚಿಂತಿಸುತ್ತಿದೆ.

ಬೀದಿ ನಾಯಿಗಳು ಕಚ್ಚುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದೆ. ಪ್ರಾಣಿ ಸಂತಾನ ನಿಯಂತ್ರಣ (ಎಬಿಸಿ) ನಿಯಮದಂತೆ ಕಚ್ಚುವ ಬೀದಿ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಅಥವಾ ರೇಬಿಸ್‌ ಚುಚ್ಚುಮದ್ದು ನೀಡಿ ಹತ್ತು ದಿನ ನಿಗಾವಹಿಸಿ, ಅವುಗಳಿದ್ದ ಸ್ಥಳಕ್ಕೆ ಬಿಡಲಾಗುತ್ತಿದೆ. ಇದಾದ ಮೇಲೂ, ಕಚ್ಚುವುದನ್ನೇ ಅಭ್ಯಾಸ ಮಾಡಿಕೊಂಡಿರುವ ನಾಯಿಗಳು ಮತ್ತೆ ಕಚ್ಚುವ ಪ್ರಕರಣಗಳು ದಾಖಲಾಗುತ್ತಿವೆ.

ಕಚ್ಚುವ ಅಭ್ಯಾಸವುಳ್ಳ ಅಥವಾ ವ್ಯಗ್ರ ಬೀದಿ ನಾಯಿಗಳನ್ನು ನಿಗಾ ಕೇಂದ್ರದಲ್ಲಿರಿಸಿ ಔಷಧೋಪಚಾರ ನಡೆಸಿದರೂ ಅವುಗಳು ಕಚ್ಚುವ ಚಾಳಿ ಬಿಡುತ್ತಿಲ್ಲ. ಹೀಗಾಗಿ, ಅಂತಹ ಬೀದಿ ನಾಯಿಗಳನ್ನು ಶಾಶ್ವತವಾಗಿ ಇರಿಸಿ, ಪೋಷಣೆ ಮಾಡಲು ‘ಆಶ್ರಯ ತಾಣ’ಗಳನ್ನು ನಿರ್ಮಿಸಲು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇದಕ್ಕಿರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು, ಪ್ರಾಣಿದಯಾ ಸಂಘದ ಸಲಹೆಗಳನ್ನು ಪ‍ಡೆದು ಹೊಸ ಯೋಜನೆ ಅನುಷ್ಠಾನ ಮಾಡಲು ಯೋಚಿಸಿದ್ದಾರೆ.

‘ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ’ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.  ರುವುದರಿಂದ, ಬೆಂಗಳೂರಿನಲ್ಲ ಅಧಿಕಾರಿಗಳಿಗೆ ಸೋಮವಾರ ನಿರ್ದೇಶನ ನೀಡಿದೆ. ‘ಈ ಆದೇಶವನ್ನು ನಗರದಲ್ಲೂ ಪಾಲಿಸಬೇಕು’ ಎಂಬ ಆಗ್ರಹ ವಿಧಾನ ಪರಿಷತ್‌ನಲ್ಲೂ ಕೇಳಿ ಬಂದಿರುವುದರಿಂದ  ಆ ಬಗ್ಗೆ ಚರ್ಚೆ ಆರಂಭವಾಗಿದೆ.

ALDO read…. STRAY DOGs Attack, citizens in distress ಬೀದಿ ನಾಯಿಗಳ ಹುಚ್ಚಾಟ, ನಾಗರಿಕರಿಗೆ ಪ್ರಾಣ ಸಂಕಟ

‘ಎಲ್ಲ ಬೀದಿ ನಾಯಿಗಳಿಗೂ ಆಶ್ರಯ ಕೇಂದ್ರ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವ್ಯಗ್ರ ಹಾಗೂ ಕಚ್ಚುವ ಅಭ್ಯಾಸ ಬೀದಿ ನಾಯಿಗಳನ್ನಾದರೂ ನಿಗಾ ಕೇಂದ್ರ ಅಥವಾ ಆಶ್ರಯ ಕೇಂದ್ರಗಳಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಲು ಯೋಜನೆ ರೂಪಿಸಬೇಕಾಗಿದೆ. ಇದು ಇನ್ನೂ ಆರಂಭಿಕ ಚರ್ಚೆಯಾಗಿದ್ದು, ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ’ ಎಂದು ಬಿಬಿಎಂಪಿ ಪಶು ಸಂಗೋಪನೆ ವಿಭಾಗ ಅಧಿಕಾರಿಗಳು ತಿಳಿಸಿದರು.

 

ನಿಗಾ ಕೇಂದ್ರದಲ್ಲಿ ಹೆಚ್ಚು ದಿನ ‘ಆಲ್ಫಾ ಡಾಗ್‌’!

‘ಕಚ್ಚಿದ ಬೀದಿ ನಾಯಿಗಳನ್ನು ಹಿಡಿದು, ನಿಗಾ ಕೇಂದ್ರದಲ್ಲಿ ಅವುಗಳಿಗೆ ಎಬಿಸಿ ಕಾರ್ಯಕ್ರಮದಂತೆ 10 ದಿನ ಔಷಧೋಪಚಾರ ಮಾಡಲಾಗುತ್ತದೆ. ಆ ನಂತರ ಅವುಗಳನ್ನು ಮತ್ತೆ ಅದೇ ಸ್ಥಳದಲ್ಲಿ ಬಿಡಲಾಗುತ್ತಿದೆ. ಅವು ಮತ್ತೆ ಕಚ್ಚುತ್ತಿವೆ. ಹೀಗಾಗಿ, ಇಂತಹ ‘ಆಲ್ಫಾ ಡಾಗ್‌’ಗಳನ್ನು ಹೆಚ್ಚು ದಿನ ನಿಗಾ ಕೇಂದ್ರದಲ್ಲಿ ಉಳಿಸಿಕೊಳ್ಳಲು ನಿಯಗಳಲ್ಲಿರುವ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಅಧಿಕಾರಿಗಳು ತಿಳಿಸಿದರು.

‘ನಿಗಾ ಕೇಂದ್ರದಲ್ಲಿರುವ ‘ಆಲ್ಫಾ ಡಾಗ್‌’ಗಳ ನಡವಳಿಕೆ ಸುಧಾರಿಸಿದ ಮೇಲೆ ಅವುಗಳನ್ನು ಬಿಡಬೇಕು ಎಂಬ ಯೋಚನೆ ಇದೆ. ಅದಕ್ಕಾಗಿ, ವೈದ್ಯರು, ಪ್ರಾಣಿಪ್ರಿಯರೂ ಸೇರಿದಂತೆ ಎಲ್ಲರನ್ನೂ ಒಳಗೊಂಡ ಒಂದು ಸಮಿತಿ ರಚಿಸಿ, ಆ ಸಮಿತಿಯ ನಿರ್ಧಾರದಂತೆ ಎಷ್ಟು ದಿನ ‘ಆಲ್ಫಾ ಡಾಗ್‌’ಗಳನ್ನು ನಿಗಾ ಕೇಂದ್ರದಲ್ಲಿ ಇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ’ ಎಂದರು.


ವಿದ್ಯಾರ್ಥಿಗಳಿಬ್ಬರಿಗೆ ಬೀದಿ ನಾಯಿ ಕಡಿತ

ಜ್ಞಾನಭಾರತಿ ಆವರಣದೊಳಗಿರುವ ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಇಬ್ಬರು ವಿದ್ಯಾರ್ಥಿಗಳ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿ ಕಚ್ಚಿದ್ದು, ಒಬ್ಬ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿವೆ.

‘ಮಂಗಳವಾರ ಬೆಳಗಿನ ವಾಯುವಿಹಾರದ ಸಂದರ್ಭದಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ ವಿದ್ಯಾರ್ಥಿಯೊಬ್ಬರಿಗೆ 10 ಕಡೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಂಗಳವಾರ ಸಂಜೆಯವರೆಗೂ ವಿದ್ಯಾರ್ಥಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ’ ಎಂದು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಸಹಾಯಕ ನಿರ್ದೇಶಕರು ತಿಳಿಸಿದರು.

‘ಮತ್ತೊಬ್ಬ ವಿದ್ಯಾರ್ಥಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಂಗಳವಾರ ಸಂಜೆ ವೇಳೆಗೆ ಇಬ್ಬರೂ ಚೇತರಿಸಿಕೊಂಡಿದ್ದು, ಆರೋಗ್ಯ ಸ್ಥಿರವಾಗಿದೆ’ ಎಂದು ಮಾಹಿತಿ ನೀಡಿದರು.

Tuesday, August 12, 2025

STRAY DOGs Attack, citizens in distress ಬೀದಿ ನಾಯಿಗಳ ಹುಚ್ಚಾಟ, ನಾಗರಿಕರಿಗೆ ಪ್ರಾಣ ಸಂಕಟ

No permanent solution to the attacks of ferocious stray dogs on the elderly and children on the roads

STRAY DOGs Attack, citizens in distress


Kere Manjunath ಕೆರೆ ಮಂಜುನಾಥ್ 

Bengaluru: Stray dog attacks and bites are increasing in the city, and deaths are also frequent.

According to the census report published on October 23, 2023, the number of stray dogs in the city has decreased by 10 percent. 71.85 percent of stray dogs have been sterilized. However, dog bite cases are only increasing.

In many areas, grounds and roads of the city, including Vidhana Soudha, Vikas Soudha, M.G. Road, around Mayo Hall, Lalbagh, Cubbon Park, after dark, the noise and barking of stray dogs increases, making it impossible to walk alone. Citizens of all ages, including children and the elderly, are facing hardship due to the rampage of ferocious stray dogs.

BBMP statistics say that an average of 15,000 cases of stray dog bites are being registered every year in the last five years. However, more than 13,000 cases of stray dogs have been registered from January to June 2025 alone. A man named Sitappa died in a recent stray dog attack and bite case in Kempegowda Nagar, Batarayanapura. Cases of stray dog bites are being reported frequently in many areas of the city. Ferocious and biting dogs are being taken to the BBMP Animal Husbandry Department and registered at the monitoring center. However, there is a situation where citizens cannot move on the roads peacefully.

‘In Netravati Colony in Kaggadasapura, four dogs are very cruel and have bitten about 40 people since January this year. Some cases are not known,’ members of the Netravati Colony residents’ welfare association have also complained to the Lokayukta. 

‘BBMP staff who catch stray dogs that bite citizens come to the same place after a few days and release them. That dog bites someone else again,’ is the allegation of the city’s citizens.

‘Stray dogs that are ferocious or have been bitten are caught and kept in a monitoring center. After doctors treat them and they return to normal, the dogs should be released back to their place, this is the rule,’ said BBMP officials.

‘It cannot be said that there is a specific reason why street dogs bite. Ferocious street dogs bite for no reason. The time of sexual desire is also one of the reasons for fighting. Lack of food, getting more food, and being on top of people in a fight for meat are also reasons for street dogs to fight,’ he informed.


Asking Don’t feed them, but they like giving them chicken!

‘Street dogs are preying on children and the elderly for food. There is a group that feeds them. Chicken meat, fish meat, bones, etc. are brought from everywhere and fed to some street dogs. In some areas, it is common to feed biscuits every day. Thus, when the food available is not available, the street dogs are attacking citizens. We have been saying many times that if they are not fed, they will go to other areas. But no one listens. The BBMP itself is standing in their support. It has decided to spend ₹2 crore and provide nutritious food including chicken meat to the street dogs. Instead, citizens Srinivas, Jagadish, Sharmila, Uma demanded that action be taken to reduce the menace of street dogs.

Also read… A ‘shelter’ for ALFA stray dogs! ವ್ಯಗ್ರ ಬೀದಿ ನಾಯಿಗಳಿಗೆ ‘ಆಶ್ರಯ ಕೇಂದ್ರ’!

Action on complaint: BBMP

‘Action is being taken as per the complaint filed regarding cases of bites by street dogs. Our team of doctors visits those areas and works to catch the ferocious street dogs. BBMP officials also said that bones will be used to catch stray dogs that cannot be found immediately.

“Stray dogs that are aggressive or have a habit of biting will be caught and kept in observation centers. Doctors will treat them. They will be released after the doctors confirm that they have returned to normal. There is a Dasarahalli observation unit where stray dogs are being kept. Observation centers will be started in Yelahanka and Rajarajeshwari cities. Stray dogs that are aggressive and bite will be kept in these centers,” he said.


‘Trap cage’ for Vaccination, surgery

Dozens of stray dogs are roaming the streets and streets every day, barking. When the BBMP vehicle arrives to catch them, everything disappears. The staff has to work hard to catch the stray dogs.

The BBMP has implemented a new scheme to catch stray dogs and administer Vaccination and sterilization to them, which is the ‘trap cage’.

‘Many people in the city feed stray dogs. When they come, all the dogs follow them to the place where they put the food. Therefore, such people have been appealed to and asked to put food in the ‘trap cage’ kept by the BBMP. The dogs that come to eat are caught in a 10 ft x 15 ft cage and the necessary injections are given to them. If there is no sterilization surgery, then the stray dogs are being released in those places,” informed BBMP Animal Husbandry Department Joint Director Chandraiah.


2,79,335; Stray dogs in BBMP area (2023 census)

1,65,341; Male stray dog

82,757; Female stray dog

31,237; Gender not known


Zone; Number of stray dogs

East; 37,685

West; 22,025

South; 23,241

Dasarahalli; 21,221

R.R. Nagar; 41,266

Bommanahalli; 39,183

Yelahanka; 36,343

Mahadevapura; 58,371


Street dog bite cases

2,31,091; In the state from January to June 2025

13,831; In BBMP limits from January to June 2025

2,562; In May 2025

2,184; In June 2025

22,000; In 2022–23

35,000; In 2017–18


Vaccination for street dogs

89 thousand; in 2024–25

55 thousand; April to July 2025


sterilization surgery of street dogs

38 thousand; In 2024–25

8 thousand; April to July 2025


AlSo. ReAD…. STRAY DOGs Attack, citizens in distress ಬೀದಿ ನಾಯಿಗಳ ಹುಚ್ಚಾಟ, ನಾಗರಿಕರಿಗೆ ಪ್ರಾಣ ಸಂಕಟ

Also READ…. Nutritious food for STREET DOGS ಬೀದಿ ನಾಯಿಗಳಿಗೆ ಪೋಷಕಾಂಶಯುಕ್ತ ಆಹಾರ

Also Read… Notice for collection of street dog information…. ಬೀದಿ ನಾಯಿ ಮಾಹಿತಿ ಸಂಗ್ರಹಕ್ಕೆ ನೋಟಿಸ್‌

ALSO READ…. ₹3,035 Monthly Expenditure per Stray Dog…. ಪ್ರತಿ ಬೀದಿ ನಾಯಿಗೆ ತಿಂಗಳಿಗೆ ₹3,035 ವೆಚ್ಚ

Also read… A ‘shelter’ for ALFA stray dogs! ವ್ಯಗ್ರ ಬೀದಿ ನಾಯಿಗಳಿಗೆ ‘ಆಶ್ರಯ ಕೇಂದ್ರ’!


ರಸ್ತೆಗಳಲ್ಲಿ ಒಬ್ಬಂಟಿ ಸಂಚಾರಕ್ಕೆ ಸಂಚಕಾರ, ವೃದ್ಧರು, ಮಕ್ಕಳ ಮೇಲೆ ವ್ಯಗ್ರ ಬೀದಿ ನಾಯಿಗಳ ದಾಳಿಗೆ ಸಿಗುತ್ತಿಲ್ಲ ಶಾಶ್ವತ ಪರಿಹಾರ

ಬೀದಿ ನಾಯಿಗಳ ಹುಚ್ಚಾಟ, ನಾಗರಿಕರಿಗೆ ಪ್ರಾಣ ಸಂಕಟ

Kere Manjunath ಕೆರೆ ಮಂಜುನಾಥ್ 

ಬೆಂಗಳೂರು: ಬೀದಿ ನಾಯಿಗಳ ಹುಚ್ಚಾಟ, ಕಡಿತ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿ, ಆಗಾಗ್ಗೆ ಸಾವೂ ಸಂಭವಿಸುತ್ತಿರುವುದರಿಂದ ನಾಗರಿಕರು ಪ್ರಾಣ ಸಂಕಟದಲ್ಲಿದ್ದಾರೆ.

2023ರ ಅಕ್ಟೋಬರ್  23ರಂದು ಪ್ರಕಟಿಸಲಾಗಿರುವ ಗಣತಿ ವರದಿ ಪ್ರಕಾರ, ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಶೇ 10ರಷ್ಟು ಕಡಿಮೆಯಾಗಿವೆ. ಶೇ 71.85ರಷ್ಟು ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ, ನಾಯಿ ಕಡಿತ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ.

ವಿಧಾನಸೌಧ, ವಿಕಾಸಸೌಧ, ಎಂ.ಜಿ. ರಸ್ತೆಯ ಮೆಯೊ ಹಾಲ್‌, ಲಾಲ್‌ಬಾಗ್‌, ಕಬ್ಬನ್‌ಪಾರ್ಕ್  ಸುತ್ತಮುತ್ತ ಸೇರಿದಂತೆ ನಗರದ ಹಲವು ಪ್ರದೇಶ, ಮೈದಾನ, ರಸ್ತೆಗಳಲ್ಲಿ ಕತ್ತಲಾದ ಮೇಲೆ, ಬೀದಿ ನಾಯಿಗಳ ಅಬ್ಬರ, ಆರ್ಭಟ ಹೆಚ್ಚಾಗುತ್ತಿದ್ದು ಒಬ್ಬರೇ ನಡೆದು ಹೋಗದಂತಹ ಪರಿಸ್ಥಿತಿ ಇದೆ. ವ್ಯಗ್ರ ಬೀದಿ ನಾಯಿಗಳ ಆಟಾಟೋಪಕ್ಕೆ ಮಕ್ಕಳು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಐದು ವರ್ಷಗಳಲ್ಲಿ ವರ್ಷಕ್ಕೆ ಸರಾಸಿ 15 ಸಾವಿರ ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತಿವೆ ಎಂದು ಬಿಬಿಎಂಪಿ ಅಂಕಿ–ಅಂಶ ಹೇಳುತ್ತಿವೆ. ಆದರೆ, 2025ರ ಜನವರಿಯಿಂದ ಜೂನ್‌ವರೆಗೇ 13 ಸಾವಿರಕ್ಕೂ ಹೆಚ್ಚು ಬೀದಿ ನಾಯಿ ಪ್ರಕರಣಗಳು ದಾಖಲಾಗಿವೆ. ಬ್ಯಾಟರಾಯನಪುರದ ಕೆಂಪೇಗೌಡ ನಗರದಲ್ಲಿ ಇತ್ತೀಚೆಗೆ ನಡೆದ ಬೀದಿ ನಾಯಿ ದಾಳಿ, ಕಡಿತ ಪ್ರಕರಣದಲ್ಲಿ ಸೀತಪ್ಪ ಎಂಬುವರು ಮೃತಪಟ್ಟಿದ್ದಾರೆ. ನಗರದಲ್ಲಿ ಹಲವು ಪ್ರದೇಶಗಳಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ವ್ಯಗ್ರ ಹಾಗೂ ಕಡಿಯುವುದನ್ನೇ ಅಭ್ಯಾಸ ಮಾಡಿಕೊಂಡ ನಾಯಿಗಳನ್ನು  ಬಿಬಿಎಂಪಿ ಪಶುಸಂಗೋಪನೆ ವಿಭಾಗದಿಂದ ಹಿಡಿದು, ನಿಗಾ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ. ಆದರೂ, ನಾಗರಿಕರು ನೆಮ್ಮದಿಯಿಂದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.

‘ಕಗ್ಗದಾಸಪುರದ ನೇತ್ರಾವತಿ ಕಾಲೊನಿಯಲ್ಲಿ ನಾಲ್ಕು ನಾಯಿಗೂ ತುಂಬಾ ಕ್ರೂರಿಯಾಗಿದ್ದು, ಈ ವರ್ಷ ಜನವರಿಯಿಂದ ಈವರೆಗೆ ಸುಮಾರು 40 ಜನರಿಗೆ ಕಡಿದಿವೆ. ಕೆಲವು ಪ್ರಕರಣಗಳು ಅರಿವಿಗೆ ಬಂದಿಲ್ಲ’ ನೇತ್ರಾವತಿ ಕಾಲೊನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಲೋಕಾಯುಕ್ತರಿಗೂ ದೂರು ನೀಡಿದ್ದಾರೆ. 

‘ನಾಗರಿಕರನ್ನು ಕಚ್ಚುವ ಬೀದಿ ನಾಯಿಗಳನ್ನು ಹಿಡಿದೊಯ್ಯುವ ಬಿಬಿಎಂಪಿಯವರು ಒಂದಷ್ಟು ದಿನವಾದ ಮೇಲೆ ಅದೇ ಸ್ಥಳಕ್ಕೆ ಬಂದು ಬಿಡುತ್ತಾರೆ. ಆ ನಾಯಿ ಮತ್ತೆ ಬೇರೆಯವರಿಗೆ ಕಚ್ಚುತ್ತದೆ’ ಎಂಬುದು ನಗರದ ನಾಗರಿಕರ ಆರೋಪ.

‘ವ್ಯಗ್ರ ಅಥವಾ ಕಚ್ಚಿದ ಬೀದಿ ನಾಯಿಗಳನ್ನು ಹಿಡಿದು, ನಿಗಾ ಕೇಂದ್ರದಲ್ಲಿ ಇರಿಸಲಾಗುತ್ತದೆ. ವೈದ್ಯರು ಅವುಗಳಿಗೆ ಚಿಕಿತ್ಸೆ ನೀಡಿ, ಅವುಗಳು ಸಹಜ ಸ್ಥಿತಿಗೆ ಬಂದ ನಂತರ ಆ ನಾಯಿಗಳನ್ನು ಅವುಗಳಿದ್ದ ಸ್ಥಳಕ್ಕೇ ಬಿಡಬೇಕು, ಇದು ನಿಯಮ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು..

‘ಬೀದಿ ನಾಯಿಗಳು ಕಚ್ಚಲು ಇಂತಹದ್ದೇ ನಿರ್ದಿಷ್ಟ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ವ್ಯಗ್ರ ಬೀದಿ ನಾಯಿಗಳು ಯಾವ ಕಾರಣವಿಲ್ಲದಿದ್ದರೂ ಕಚ್ಚುತ್ತವೆ. ಲೈಂಗಿಕಾಸಕ್ತಿಯ ಸಮಯವೂ ಕಚ್ಚಾಟದ ಕಾರಣಗಳಲ್ಲಿ ಒಂದು. ಆಹಾರ ಸಿಗದಿರುವುದು, ಹೆಚ್ಚಿನ ಆಹಾರ ಸಿಗುವುದು, ಮಾಂಸಕ್ಕಾಗಿ ಪರಸ್ಪರ ಕಿತ್ತಾಟದಲ್ಲಿ ಜನರ ಮೇಲೆರಗುವುದೂ ಬೀದಿ ನಾಯಿಗಳ ಕಚ್ಚಾಟಕ್ಕೆ ಕಾರಣಗಳಾಗಿವೆ’ ಎಂದು ಮಾಹಿತಿ ನೀಡಿದರು.

 Also read… A ‘shelter’ for ALFA stray dogs! ವ್ಯಗ್ರ ಬೀದಿ ನಾಯಿಗಳಿಗೆ ‘ಆಶ್ರಯ ಕೇಂದ್ರ’!

ಆಹಾರ ನೀಡಬೇಡಿ ಎಂದರೆ, ಚಿಕನ್‌ ನೀಡುತ್ತಾರಂತೆ!

‘ಬೀದಿ ನಾಯಿಗಳು ಆಹಾರಕ್ಕಾಗಿ ಮಕ್ಕಳು ಹಾಗೂ ವೃದ್ಧರ ಮೇಲೆ ಎರಗುತ್ತಿವೆ. ಅವುಗಳಿಗೆ ಆಹಾರ ನೀಡುವ ಗುಂಪೇ ಇದೆ. ಕೋಳಿ ಮಾಂಸ, ಮೀನಿ ಮಾಂಸ, ಮೂಳೆ ಸೇರಿದಂತೆ ಎಲ್ಲೆಲ್ಲಿಂದಲೋ ತಂದು ಕೆಲವು ಬೀದಿ ನಾಯಿಗಳಿಗೆ ಹಾಕುತ್ತಾರೆ. ಕೆಲವು ಪ್ರದೇಶಗಳಲ್ಲಿ ನಿತ್ಯವೂ ಬಿಸ್ಕತ್‌ ಹಾಕುವುದು ಸಾಮಾನ್ಯವಾಗಿದೆ. ಹೀಗೆ, ಸಿಗುವ ಆಹಾರ ಸಿಗದಾಗ ಬೀದಿ ನಾಯಿಗಳು ನಾಗರಿಕರ ಮೇಲೆ ದಾಳಿ ಮಾಡುತ್ತಿವೆ. ಅವುಗಳಿಗೆ ಆಹಾರ ಹಾಕದಿದ್ದರೆ ಬೇರೆ ಪ್ರದೇಶಗಳಿಗೆ ಹೋಗುತ್ತವೆ ಎಂದು ನಾವು ಹಲವು ಬಾರಿ ಹೇಳುತ್ತಿದ್ದೇವೆ. ಆದರೆ ಯಾರೂ ಕೇಳುತ್ತಿಲ್ಲ. ಬಿಬಿಎಂಪಿಯೇ ಅವರ ಬೆಂಬಲಕ್ಕೆ ನಿಂತಿದೆ. ₹2 ಕೋಟಿ ವೆಚ್ಚ ಮಾಡಿ ಬೀದಿ ನಾಯಿಗಳಿಗೆ ಕೋಳಿ ಮಾಂಸ ಸೇರಿದಂತೆ ಪೌಷ್ಟಿಕ ಆಹಾರ ನೀಡಲು ಮುಂದಾಗಿದೆ. ಇದರ ಬದಲು ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿ’ ಎಂದು ನಾಗರಿಕರಾದ ಶ್ರೀನಿವಾಸ್‌, ಜಗದೀಶ್‌, ಶರ್ಮಿಳಾ, ಉಮಾ ಅವರು ಆಗ್ರಹಿಸಿದರು.

 

ದೂರಿನ ಮೇಲೆ ಕ್ರಮ: ಬಿಬಿಎಂಪಿ

‘ಬೀದಿ ನಾಯಿಗಳ ಕಡಿತ ಪ್ರಕರಣಗಳ ಬಗ್ಗೆ ದಾಖಲಾಗುವ ದೂರಿನಂತೆ ಕ್ರಮ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಪ್ರದೇಶಗಳಿಗೆ ನಮ್ಮ ವೈದ್ಯರ ತಂಡ ಭೇಟಿ ನೀಡಿ, ವ್ಯಗ್ರ ಬೀದಿ ನಾಯಿಗಳನ್ನು ಹಿಡಿಯುವ ಕೆಲಸ ಮಾಡುತ್ತದೆ. ತಕ್ಷಣಕ್ಕೆ ಸಿಗದ ಬೀದಿ ನಾಯಿಗಳನ್ನು ಹಿಡಿಯಲು ಬೋನ್‌ಗಳನ್ನೂ ಹಿಡಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳೂ ತಿಳಿಸಿದರು.

‘ವ್ಯಗ್ರ ಅಥವಾ ಕಚ್ಚುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ನಿಗಾ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ವೈದ್ಯರು ಅವುಗಳಿಗೆ ಚಿಕಿತ್ಸೆ ನೀಡುತ್ತಾರೆ. ಅವುಗಳು ಸಹಜ ಸ್ಥಿತಿಗೆ ಬಂದಿವೆ ಎಂದು ವೈದ್ಯರು ದೃಢೀಕರಿಸಿದ ಮೇಲೆ ಅವುಗಳನ್ನು ಬಿಡಲಾಗುತ್ತದೆ. ದಾಸರಹಳ್ಳಿ ನಿಗಾ ಘಟಕವಿದ್ದು ಅಲ್ಲಿ ಬೀದಿ ನಾಯಿಗಳನ್ನು ಇರಿಸಲಾಗುತ್ತಿದೆ. ಯಲಹಂಕ ಹಾಗೂ ರಾಜರಾಜೇಶ್ವರಿ ನಗರದಲ್ಲಿ ನಿಗಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ವ್ಯಗ್ರ ಹಾಗೂ ಕಚ್ಚುತ್ತಿರುವ ಬೀದಿ ನಾಯಿಗಳನ್ನು ಈ ಕೇಂದ್ರದಲ್ಲಿ ಇರಿಸಲಾಗುತ್ತದೆ’ ಎಂದರು.

 

ಚುಚ್ಚುಮದ್ದು, ಶಸ್ತ್ರಚಿಕಿತ್ಸೆಗೆ ‘ಟ್ರ್ಯಾ‍ಪ್‌ ಕೇಜ್‌’

ರಸ್ತೆ, ಬೀದಿಯಲ್ಲಿ ಹತ್ತಾರು ಸಂಖ್ಯೆಯಲ್ಲಿ ಬೀದಿ ನಾಯಿಗಳು ನಿತ್ಯವೂ ಅಡ್ಡಾಡುತ್ತಿರುತ್ತವೆ, ಬೊಗಳುತ್ತಿರುತ್ತವೆ. ಅವುಗಳನ್ನು ಹಿಡಿಯಲು ಬಿಬಿಎಂಪಿ ವಾಹನ ಬಂದ ಸಂದರ್ಭದಲ್ಲಿ ಎಲ್ಲವೂ ಮಾಯವಾಗುತ್ತವೆ. ಬೀದಿ ನಾಯಿಗಳನ್ನು ಹಿಡಿಯಲು ಸಿಬ್ಬಂದಿ ಹರಸಾಹಸ ಪಡೆಬೇಕಾಗಿದೆ.

ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚು ಮದ್ದು ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಬಿಬಿಎಂಪಿ ಹೊಸ ಯೋಜನೆ ಜಾರಿಗೊಳಿಸಿದೆ, ಅದುವೇ ‘ಟ್ರ್ಯಾಪ್‌ ಕೇಜ್’.

‘ನಗರದಲ್ಲಿ ಹಲವರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಅವರು ಬಂದಾಗ ನಾಯಿಗಳೆಲ್ಲ ಅವರ ಹಿಂದೆ, ಅವರು ಆಹಾರ ಹಾಕುವ ಸ್ಥಳಕ್ಕೆ ಬರುತ್ತವೆ. ಹೀಗಾಗಿ, ಅಂತಹವರನ್ನು ಮನವಿ ಮಾಡಿಕೊಂಡಿದ್ದು, ಬಿಬಿಎಂಪಿ ಇರಿಸುವ ‘ಟ್ರ್ಯಾಪ್‌ ಕೇಜ್‌’ನಲ್ಲಿ ಆಹಾರ ಹಾಕುವಂತೆ ಕೇಳಿಕೊಳ್ಳಲಾಗಿದೆ. 10 ಅಡಿ x 15 ಅಡಿಯ ಬೋನಿನಲ್ಲಿ ಆಹಾರ ಸೇವಿಸಲು ಬರುವ ನಾಯಿಗಳನ್ನು ಹಿಡಿದು, ಅವುಗಳಿಗೆ ಅಗತ್ಯವಾದ ಚುಚ್ಚುಮದ್ದು ನೀಡಲಾಗುತ್ತದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಾಗಿರದಿದ್ದರೆ ಅದನ್ನು ಮಾಡಿದ ನಂತರ, ಆ ಸ್ಥಳಗಳಲ್ಲೇ ಬೀದಿ ನಾಯಿಗಳನ್ನು ಬಿಡಲಾಗುತ್ತಿದೆ’ ಎಂದು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಜಂಟಿ ನಿರ್ದೇಶಕ ಚಂದ್ರಯ್ಯ ಅವರು ಮಾಹಿತಿ ನೀಡಿದರು.


2,79,335; ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳು (2023ರ ಗಣತಿ)

1,65,341; ಗಂಡು ಬೀದಿ ನಾಯಿ

82,757; ಹೆಣ್ಣು ಬೀದಿ ನಾಯಿ

31,237;ಲಿಂಗ ಪತ್ತೆಯಾಗದ್ದು


ವಲಯ; ಬೀದಿ ನಾಯಿಗಳ ಸಂಖ್ಯೆ

ಪೂರ್ವ; 37,685

ಪಶ್ಚಿಮ; 22,025

ದಕ್ಷಿಣ; 23,241

ದಾಸರಹಳ್ಳಿ; 21,221

ಆರ್.ಆರ್.ನಗರ; 41,266

ಬೊಮ್ಮನಹಳ್ಳಿ; 39,183

ಯಲಹಂಕ; 36,343

ಮಹದೇವಪುರ; 58,371

 

==

ಬೀದಿ ನಾಯಿ ಕಡಿತ ಪ್ರಕರಣಗಳು

2,31,091; ರಾಜ್ಯದಲ್ಲಿ 2025ರ ಜನವರಿಯಿಂದ ಜೂನ್‌ವರೆಗೆ

13,831; ಬಿಬಿಎಂಪಿ ವ್ಯಾಪ್ತಿಯಲ್ಲಿ 2025ರ ಜನವರಿಯಿಂದ ಜೂನ್‌ವರೆಗೆ

2,562; ಮೇ 2025ರಲ್ಲಿ

2,184; ಜೂನ್ 2025ರಲ್ಲಿ

22,000; 2022–23ನೇ ಸಾಲು

35,000; 2017–18ನೇ ಸಾಲು

 

ಬೀದಿನಾಯಿಗಳಿಗೆ ಚುಚ್ಚುಮದ್ದು

‌89 ಸಾವಿರ; 2024–25ನೇ ಸಾಲು 

55 ಸಾವಿರ; 2025ರ ಏಪ್ರಿಲ್‌ನಿಂದ ಜುಲೈವರೆಗೆ


ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

38 ಸಾವಿರ; 2024–25ನೇ ಸಾಲಿನಲ್ಲಿ 

8 ಸಾವಿರ; 2025ರ ಏಪ್ರಿಲ್‌ನಿಂದ ಜುಲೈವರೆಗೆ

Friday, August 8, 2025

Ground floor ‘stilt floor’: Reserved for parking ನೆಲ ಅಂತಸ್ತು ‘ಸ್ಟಿಲ್ಟ್‌ ಫ್ಲೋರ್’: ಪಾರ್ಕಿಂಗ್‌ಗೆ ಮೀಸಲು

Permission to build one more floor: Exemption for three meters in height

Ground floor ‘stilt floor’: Reserved for parking



Bengaluru: Rules have been implemented to consider the ground floor as ‘stilt floor’ in the BBMP and BDA limits and completely reserve it for vehicle parking.

Section 13-E of the Karnataka Town and Country Planning (KTCP) Act, 1961 has been amended and the ‘Bengaluru Local Planning Authority (Amendment) Rules – 2025’ have been implemented for the zoning rules of the Revised Master Plan – 2015.

The Urban Development Department, which had issued a draft order on June 12, 2025, considered them after the 30-day period given for objections expired and issued a final notification on August 1.

The ground floor of the buildings constructed, under construction and to be constructed in the BBMP and BDA limits has been considered as ‘stilt parking floor’ and its height has been fixed at three meters. This ‘stilt parking floor’ should not be considered in the overall height of the building as it is used for parking. The overall height of the building should not exceed 15 meters. Similarly, the new rules have allowed for granting plan approval or revised plan.

A building with a ground floor reserved for parking will be allowed to build a fourth floor (G+4) with a concession in setback. Those who have already built a G+3 building, if they completely reserve the ground floor for parking, they will be allowed to build another floor. If the parking floor is used for any other purpose, the BESCOM and water board connections will be disconnected. If parking space is misused in non-residential buildings, the business license will also be cancelled.

A report on the implementation of the ‘stilt parking floor’ facility was published in ‘Prajavani’ on June 3, 2025.



ಒಂದು ಅಂತಸ್ತು ಹೆಚ್ಚು ನಿರ್ಮಿಸಲು ಅವಕಾಶ: ಮೂರು ಮೀಟರ್ ಎತ್ತರಕ್ಕೆ ವಿನಾಯಿತಿ

ನೆಲ ಅಂತಸ್ತು ‘ಸ್ಟಿಲ್ಟ್‌ ಫ್ಲೋರ್’: ಪಾರ್ಕಿಂಗ್‌ಗೆ ಮೀಸಲು

ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ನೆಲ ಅಂತಸ್ತನ್ನು ‘ಸ್ಟಿಲ್ಟ್‌ ಫ್ಲೋರ್’ ಆಗಿ ಪರಿಗಣಿಸಿ, ಸಂಪೂರ್ಣವಾಗಿ ವಾಹನ ನಿಲುಗಡೆಗೆ ಮೀಸಲಿಡುವ ನಿಯಮಗಳು ಜಾರಿಯಾಗಿವೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಸೆಕ್ಷನ್‌ 13–ಇಗೆ ತಿದ್ದುಪಡಿಯಾಗಿ, ಪರಿಷ್ಕೃತ ಮಾಸ್ಟರ್‌ ಪ್ಲಾನ್‌–2015ರ ವಲಯ ನಿಯಮಗಳಿಗೆ ‘ಬೆಂಗಳೂರು ಸ್ಥಳೀಯ ಯೋಜನಾ ಪ್ರಾಧಿಕಾರ (ತಿದ್ದುಪಡಿ) ನಿಯಮಗಳು– 2025’ ಜಾರಿಯಾಗಿವೆ.

2025ರ ಜೂನ್‌ 12ರಂದು ಕರಡು ಆದೇಶ ಹೊರಡಿಸಿದ್ದ ನಗರಾಭಿವೃದ್ಧಿ ಇಲಾಖೆ, ಆಕ್ಷೇಪಣೆಗೆ ನೀಡಿದ್ದ 30 ದಿನದ ಅವಕಾಶ ಮುಗಿದ ಮೇಲೆ ಅವುಗಳನ್ನ ಪರಿಗಣಿಸಿ ಆಗಸ್ಟ್‌ 1ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ನಿರ್ಮಿಸಿರುವ, ನಿರ್ಮಾಣ ಹಂತದಲ್ಲಿರುವ ಹಾಗೂ ಮುಂದೆ ನಿರ್ಮಾಣವಾಗಲಿರುವ ಕಟ್ಟಡಗಳಲ್ಲಿನ ನೆಲ ಅಂತಸ್ತನ್ನು ‘ಸ್ಟಿಲ್ಟ್‌ ಪಾರ್ಕಿಂಗ್‌ ಫ್ಲೋರ್’ ಎಂದು ಪರಿಗಣಿಸಿ, ಅದರ ಎತ್ತರವನ್ನು ಮೂರು ಮೀಟರ್‌ಗೆ ನಿಗದಿಪಡಿಸಲಾಗಿದೆ. ಈ ‘ಸ್ಟಿಲ್ಟ್‌ ಪಾರ್ಕಿಂಗ್‌ ಫ್ಲೋರ್’ ಅನ್ನು ಪಾರ್ಕಿಂಗ್‌ಗೆ ಬಳಸುವುದರಿಂದ ಕಟ್ಟಡದ ಒಟ್ಟಾರೆ ಎತ್ತರದಲ್ಲಿ ಪರಿಗಣಿಸಬಾರದು. ಕಟ್ಟಡದ ಒಟ್ಟಾರೆ ಎತ್ತರ 15 ಮೀಟರ್‌ ಮೀರಬಾರದು. ಅದರಂತೆಯೇ ನಕ್ಷೆ ಅನುಮೋದನೆ ಅಥವಾ ಪರಿಷ್ಕೃತ ನಕ್ಷೆ ನೀಡಲು ಹೊಸ ನಿಯಮಗಳು ಅವಕಾಶ ಮಾಡಿಕೊಟ್ಟಿವೆ.

ನೆಲ ಅಂತಸ್ತನ್ನು ಪಾರ್ಕಿಂಗ್‌ಗೆ ಮೀಸಲಿಟ್ಟ ಕಟ್ಟಡಕ್ಕೆ, ಸೆಟ್‌ಬ್ಯಾಕ್‌ನಲ್ಲಿ ರಿಯಾಯಿತಿ ನೀಡಿ ನಾಲ್ಕನೇ ಅಂತಸ್ತನ್ನು (ಜಿ+4) ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಜಿ+3 ಕಟ್ಟಡ ನಿರ್ಮಿಸಿರುವವರು, ನೆಲ ಅಂತಸ್ತನ್ನು ಸಂಪೂರ್ಣವಾಗಿ ಪಾರ್ಕಿಂಗ್‌ಗೆ ಮೀಸಲಿಟ್ಟರೆ, ಅವರಿಗೆ ಇನ್ನೊಂದು ಅಂತಸ್ತು ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಪಾರ್ಕಿಂಗ್‌ ಅಂತಸ್ತನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಿದರೆ, ಬೆಸ್ಕಾಂ, ಜಲಮಂಡಳಿ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ವಸತಿಯೇತರ ಕಟ್ಟಡಗಳಲ್ಲಿ ಪಾರ್ಕಿಂಗ್‌ ಜಾಗವನ್ನು ದುರುಪಯೋಗಪಡಿಸಿಕೊಂಡರೆ ಉದ್ದಿಮೆ ಪರವಾನಗಿಯನ್ನೂ ರದ್ದುಗೊಳಿಸಲಾಗುತ್ತದೆ.

‘ಸ್ಟಿಲ್ಟ್‌ ಪಾರ್ಕಿಂಗ್‌ ಫ್ಲೋರ್’ ಅವಕಾಶ ಜಾರಿಯಾಗುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ 2025ರ ಜೂನ್‌ 3ರಂದು ವರದಿ ಪ್ರಕಟವಾಗಿತ್ತು.

=

ಕಟ್ಟಡದ ಎತ್ತರ, ಸೆಟ್‌ಬ್ಯಾಕ್‌

;ಮುಂದೆ;ಹಿಂದೆ;ಅಕ್ಕಪಕ್ಕ

‘ಸ್ಟಿಲ್ಟ್‌ ಪಾರ್ಕಿಂಗ್‌ ಫ್ಲೋರ್’ ಇರುವ 12 ಮೀಟರ್‌ನಿಂದ 15 ಮೀಟರ್‌
4 ಸಾವಿರ ಚದರ ಮೀಟರ್‌ವರೆಗಿನ ನಿವೇಶನ;1.5 ಮೀ;1 ಮೀ;1 ಮೀ

4 ಸಾವಿರ ಚದರ ಮೀಟರ್‌ಗೂ ಹೆಚ್ಚಿನ ನಿವೇಶನ; ಸುತ್ತಲೂ 5 ಮೀ

‘ಸ್ಟಿಲ್ಟ್‌ ಪಾರ್ಕಿಂಗ್‌ ಫ್ಲೋರ್’ ಇಲ್ಲದ 12 ಮೀಟರ್‌ನಿಂದ 15 ಮೀಟರ್‌ವರೆಗಿನ ಕಟ್ಟಡ; ಸುತ್ತಲೂ 5 ಮೀ

=

ಇತರೆ ಕಟ್ಟಡಗಳಿಗೆ ಸೆಟ್‌ಬ್ಯಾಕ್‌

15 ಮೀ ನಿಂದ 18 ಮೀ; ಸುತ್ತಲೂ 6 ಮೀ

18 ಮೀ ನಿಂದ 21 ಮೀ; ಸುತ್ತಲೂ 7 ಮೀ

21 ಮೀ ನಿಂದ 24 ಮೀ; ಸುತ್ತಲೂ 8 ಮೀ

24 ಮೀ ನಿಂದ 27 ಮೀ; ಸುತ್ತಲೂ 9 ಮೀ

27 ಮೀ ನಿಂದ 30 ಮೀ; ಸುತ್ತಲೂ 10 ಮೀ

30 ಮೀ ನಿಂದ 35 ಮೀ; ಸುತ್ತಲೂ 11 ಮೀ

35 ಮೀ ನಿಂದ 40 ಮೀ; ಸುತ್ತಲೂ 12 ಮೀ

40 ಮೀ ನಿಂದ 45 ಮೀ; ಸುತ್ತಲೂ 13 ಮೀ

45 ಮೀ ನಿಂದ 50 ಮೀ; ಸುತ್ತಲೂ 14 ಮೀ

50 ಮೀಟರ್‌ಗೂ ಹೆಚ್ಚು; ಸುತ್ತಲೂ 16 ಮೀ


Sunday, August 3, 2025

First-of-its-kind Proposal in the Country for Scientific Modification of Buffer Zones: KTDCA ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಬಫರ್‌ ಝೋನ್‌ ತಿದ್ದುಪಡಿ:ಕೆಟಿಸಿಡಿಎ

First-of-its-kind Proposal in the Country for Scientific Modification of Buffer Zones Based on the Size of Waterbodies

• Proposal framed after a comprehensive study of buffer zone regulations followed in various states and designed with a scientific approach

Bengaluru, August 03: The Karnataka Tank Conservation and Development Authority (KTCDA) has announced that, for the first time in the country, a proposal has been made to scientifically modify buffer zone regulations based on the size of waterbodies/tanks in the state.

In a press release issued on the proposed modification of lake and nala buffer zones, KTCDA has clarified the factors that necessitated this change.

The Karnataka Tank Conservation and Development Authority (KTCDA) was established in 2014 with the objective of protecting, conserving, and rejuvenating waterbodies across the state. The Hon’ble National Green Tribunal (NGT), in its order OA No. 222/2014 dated 04.05.2016, had prescribed the following buffer zones for Bengaluru’s lakes:

• 75 meters for lakes
• 50 meters for primary nalas
• 35 meters for secondary nalas
• 25 meters for tertiary nalas

Subsequently, the Hon’ble Supreme Court, through its order CA No. 5016/2019 dated 05.03.2019, modified the NGT’s directive and prescribed a buffer zone of 30 meters for lakes, reiterating the importance of balancing environmental protection with sustainable development. The Government of Karnataka adopted this order through a Government Order UDD BMR 2017 dated 20.07.2019. Buffer zones typically function as protective barriers between human activity and sensitive ecological water resources.

MLA Kundapura, DC Udupi have others are requested the Government to modify the buffer zone area since the 30 meters buffer specified by the Government applies uniformly to smaller size lakes of one acer and below and bigger size lakes with 100 acers and more. The matter was discussed in meetings held on 31.08.2024 under the chairmanship of the Hon’ble Deputy Chief Minister and on 22.04.2025 under the chairmanship of the Hon’ble Chief Minister.


Lake Buffer zone reduce: Governor returns Bill to Government.., ಕೆರೆ ಬಫರ್ ವಲಯ ಕಡಿತ: ಮಸೂದೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ ರಾಜ್ಯಪಾಲರು

Notification to reduce Rajakaluve buffer zone… ರಾಜಕಾಲುವೆ ಬಫರ್‌ ಝೋನ್‌ ಕಡಿತಕ್ಕೆ ಅಧಿಸೂಚನೆ

ALSO Read….. *LAKES 30 out meter buffer zone will be reduced*; benefits real estate in urban areas *ಕೆರೆಗಳ ‘ಸಂರಕ್ಷಿತ ಪ್ರದೇಶ’ಕ್ಕೆ ಕಂಟಕ*

ALSO Read…. 172 water bodies under BBMP jurisdiction reduced to ‘protected areas’ *ಬೆಂಗಳೂರಿನಲ್ಲಿ 11 ಕೆರೆಗಷ್ಟೇ 30 ಮೀಟರ್‌ ಬಫರ್‌ ಝೋನ್‌!*

ALSO Read…. 42 km service road in Rajakaluve buffer zone ರಾಜಕಾಲುವೆ ಬಫರ್‌ ಝೋನ್‌ನಲ್ಲಿ 42 ಕಿ.ಮೀ ಸರ್ವಿಸ್‌ ರಸ್ತೆ


Following these deliberations, a committee was constituted under the chairmanship of the Chief Secretary with members from relevant departments. The primary objectives of the proposed buffer zone modification are:

• Karnataka has 41,849 tanks of varying sizes, ranging from 1 gunta to more than 1,000 acres. Hence, it is essential to establish uniform guidelines across the state.
• It is imperative to accommodate public utility works such as drinking water pipelines, underground electric cables, roads and bridges connecting important routes, jackwell cum pump houses for lift irrigation projects, drinking water projects, sewage treatment plants, and other similar infrastructure within the lake buffer zone for public welfare.

After careful examination and with public interest in mind, and after studying buffer zone practices adopted by other states, it is proposed to modify the buffer zones based on the size of the tank as follows:

Sl. No.

Area of the Tank (Acre / Gunta)

Buffer from the Revenue Boundary of the Tank (m)

1

Up to 5 guntas

0

2

Above 5 guntas and up to 1 acre

3.0

3

Above 1 acre and up to 10 acres

6.0

4

Above 10 acres and up to 25 acres

12.0

5

Above 25 acres and up to 100 acres

24.0

6

Above 100 acres

30.0

 

Up to 5 guntas Meters

Above 5 guntas and up to 1 acre 3.0 Meters

Above 1 acre and up to 10 acres 6.0 Meters

Above 10 acres and up to 25 acres  12.0 Meters

Above 25 acres and up to 100 acres  24.Meters

Above 100 acres  30.0 Meters

This buffer distance has been framed using a scientific approach, as the buffer zone serves to facilitate the natural inflow of rainwater into lakes. In several instances, particularly district like udupi, the earlier buffer area was disproportionately larger than the tank size. Historically, tank bunds in Karnataka were used by the public as approach roads. Accordingly, the revised buffer zones have now been proportionately determined based on the tank size—smaller tanks will have smaller buffers, while larger tanks will have larger buffers.

Studies were also conducted on buffer zone regulations followed in other states. Gujarat prescribes a 9-meter buffer from the edge of waterbodies. Telangana follows 30 meters for tanks above 10 hectares and 9 meters for those below 10 hectares. Tamil Nadu prescribes a uniform 3-meter buffer from the edge of tanks. Karnataka is the only state to have framed incremental buffer guidelines scientifically linked to tank size.

Regarding Nala buffers: The existing buffer regulations—30 meters (primary nala), 15 meters (secondary nala), and 10 meters (tertiary nala)—were found to be unscientific, as in many cases, the width of the nala itself was smaller than the prescribed buffer. Hence, after detailed assessment, the revised nala buffers have been prescribed as:

• 15 meters for primary nalas
• 10 meters for secondary nalas
• 5 meters for tertiary nalas

Key Advantages of the Proposed Modification

1. The modification allows only public utility within buffer zones, without reducing the tank capacity or obstructing water flow. This ensures hydrological continuity between the tank and its catchment area.
2. In many cases, lake buffer zones fall under private land and are declared as ‘No Construction Zones’.
3. The proposed modification does not increase flood risks; on the contrary, it helps mitigate flood risks in urban areas through better infrastructure development.
4. This modification is not intended for real estate development; it aims solely to bring uniformity in buffer zones for different tank sizes.
5. The modification does not adversely impact ecological services. Instead, it supports government efforts to provide essential urban infrastructure. Decentralized STPs near lakes are crucial to prevent untreated sewage from entering lakes and reservoirs.
6. The modification balances environmental protection with developmental needs, enabling the provision of necessary public utilities while safeguarding waterbodies.
7. Buffer zones can be effectively used to develop utility networks such as water supply, sewage, and electricity, thereby improving the overall infrastructure of urban areas.




ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಬಫರ್‌ ಝೋನ್‌ ತಿದ್ದುಪಡಿ ಪ್ರಸ್ತಾವನೆ

- ವಿವಿಧ ರಾಜ್ಯಗಳ ಬಫರ್‌ ಝೋನ್‌ ನಿಯಮಾವಳಿಗಳು ಅಧ್ಯಯನದ ನಂತರ ವೈಜ್ಞಾನಿಕವಾಗಿ ಬಫರ್‌ ಝೋನ್‌ ತಿದ್ದುಪಡಿಯ ಪ್ರಸ್ತಾವನೆ

*ಬೆಂಗಳೂರು ಆಗಸ್ಟ್‌ 03*: ಕರ್ನಾಟಕ ರಾಜ್ಯದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳು/ಕೆರೆಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿವಾಗಿ ಬಫರ್‌ ಝೋನ್‌ ನಿಯಮಾವಳಿಗಳ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದು ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ದಿ ಪ್ರಾಧಿಕಾರ ಪ್ರಕಟಣೆ ನೀಡಿದೆ. 

ಕೆರೆ ಮತ್ತು ಕಾಲುವೆ ಬಫರ್‌ ತಿದ್ದುಪಡಿ ಪ್ರಸ್ತಾವನೆಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ದಿ ಪ್ರಾಧಿಕಾರ, ಈ ತಿದ್ದುಪಡಿಗೆ ಕಾರಣವಾದ ಅಂಶಗಳನ್ನು ಈ ಮೂಲಕ ಸ್ಪಷ್ಟಪಡಿಸಿದೆ. 

ಕರ್ನಾಟಕ ರಾಜ್ಯದ ಜಲಾಶಯಗಳನ್ನು ಸಂರಕ್ಷಿಸುವುದು, ಕಾಪಾಡುವುದು ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ಅನ್ನು 2014ರಲ್ಲಿ ಸ್ಥಾಪಿಸಲಾಗಿದೆ. ಗೌರವಾನ್ವಿತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ತನ್ನ OA ಸಂಖ್ಯೆ 222/2014, ದಿನಾಂಕ 04.05.2016ರ ಆದೇಶದಲ್ಲಿ, ಬೆಂಗಳೂರು ಕೆರೆಗಳ ಬಫರ್ ವಲಯವನ್ನು ಈ ಕೆಳಕಂಡಂತೆ ನಿಗದಿಪಡಿಸಿತ್ತು. 

1.ಕೆರೆಗಳಿಗೆ 75 ಮೀ 

2.ಪ್ರಾಥಮಿಕ ಕಾಲುವೆಗೆ 50 ಮೀ 

3.ದ್ವಿತೀಯ ಕಾಲುವೆಗೆ 35 ಮೀ 

4.ತೃತೀಯ ಕಾಲುವೆಗೆ 25 ಮೀ 

ನಂತರ, ಗೌರವಾನ್ವಿತ ಸುಪ್ರೀಂ ಕೋರ್ಟ್ ತನ್ನ ಆದೇಶ CA ಸಂಖ್ಯೆ 5016/2019, ದಿನಾಂಕ 05.03.2019ರ ಆದೇಶದಲ್ಲಿ NGT ಯ ಆದೇಶವನ್ನು ತಿದ್ದುಪಡಿ ಮಾಡಿ, ಕೆರೆಗಳ ಬಫರ್ ವಲಯವನ್ನು 30 ಮೀ ಎಂದು ನಿಗದಿಪಡಿಸಿತು. ಅಲ್ಲದೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ನಡುವೆ ಸಮತೋಲನವನ್ನು ಕಾಪಾಡುವಂತೆ NGT ಯ ಆದೇಶವನ್ನು ಮರುನಿರೂಪಿಸಿತು. 

ಇದನ್ನು ಕರ್ನಾಟಕ ಸರ್ಕಾರವು 20.07.2019ರ ದಿನಾಂಕದ UDD BMR 2017 ಸರಕಾರಿ ಆದೇಶದ ಮೂಲಕ ರಾಜ್ಯದಲ್ಲಿ ಅನುಷ್ಠಾನಗೊಳಿಸಿದೆ. ಸಾಮಾನ್ಯವಾಗಿ ಬಫರ್ ವಲಯಗಳು ಮಾನವ ಚಟುವಟಿಕೆ ಮತ್ತು ಸೂಕ್ಷ್ಮ ಪರಿಸರವನ್ನು ಹೊಂದಿರುವ ಜಲ ಸಂಪನ್ಮೂಲಗಳ ನಡುವೆ ತಡೆಗೊಡೆಯಾಗಿ ಹಾಗೂ ರಕ್ಷಣಾ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತವೆ.


ALSO Read….. *LAKES 30 out meter buffer zone will be reduced*; benefits real estate in urban areas *ಕೆರೆಗಳ ‘ಸಂರಕ್ಷಿತ ಪ್ರದೇಶ’ಕ್ಕೆ ಕಂಟಕ*

ALSO Read…. 172 water bodies under BBMP jurisdiction reduced to ‘protected areas’ *ಬೆಂಗಳೂರಿನಲ್ಲಿ 11 ಕೆರೆಗಷ್ಟೇ 30 ಮೀಟರ್‌ ಬಫರ್‌ ಝೋನ್‌!*

ALSO Read…. 42 km service road in Rajakaluve buffer zone ರಾಜಕಾಲುವೆ ಬಫರ್‌ ಝೋನ್‌ನಲ್ಲಿ 42 ಕಿ.ಮೀ ಸರ್ವಿಸ್‌ ರಸ್ತೆ


ಕುಂದಾಪುರದ ಶಾಸಕರು, ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಇತರರು ಸರ್ಕಾರವು ನಿಗಧಿಪಡಿಸಿರುವ ಕೆರೆಯ ಬಫರ್‌ ವಲಯ 30 ಮೀಟರ್‌ ಏಕ ರೂಪವಾಗಿದ್ದು, ಒಂದು ಎಕರೆ ಕೆರೆಗೂ ಹಾಗೂ 100 ಎಕರೆ ಕೆರೆಗೆ ಯಾವುದೇ ವ್ಯತ್ತಾಸವಿಲ್ಲದಂತೆ ನಿಗಧಿಪಡಿಸಲಾಗಿದ್ದು, ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್‌ ನಿಗದಿಪಡಿಸಲು ಕೋರಿರುತ್ತಾರೆ.

ಈ ಮನವಿಯ ಬಗ್ಗೆ 31.08.2024 ರಂದು ಗೌರವಾನ್ವಿತ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮತ್ತು 22.04.2025ರಂದು ಗೌರವಾನ್ವಿತ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಚರ್ಚಿಸಲಾಯಿತು.

ಈ ಹಿನ್ನಲೆಯಲ್ಲಿ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹಾಗೂ ಸಂಬಂಧಿತ ಇಲಾಖೆಗಳನ್ನು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಕೆರೆ ಮತ್ತು ಕಾಲುವೆ ಬಫರ್ ಜೋನ್‌  ತಿದ್ದುಪಡಿ ಸಮಿತಿಯ ಪ್ರಮುಖ ಉದ್ದೇಶಗಳು ಈ ಕೆಳಗಿನಂತಿವೆ:

  • •ಕರ್ನಾಟಕ ರಾಜ್ಯದಲ್ಲಿ 1 ಗುಂಟೆಯಿಂದ 1000 ಎಕರೆಗಳವರೆಗೆ ವಿವಿಧ ಗಾತ್ರದ 41,849 ಕೆರೆಗಳಿವೆ. ಆದ್ದರಿಂದ ರಾಜ್ಯದಾದ್ಯಂತ ಮಾರ್ಗಸೂಚಿಗಳ ಏಕರೂಪತೆ ತರುವುದು ಅಗತ್ಯ.
  • •ಸಾರ್ವಜನಿಕ ಉಪಯೋಗಕ್ಕಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು, ಭೂಗತ ವಿದ್ಯುತ್ ಕೇಬಲ್‌ಗಳು, ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು, ಏತ ನೀರಾವರಿ ಯೋಜನೆಗಳು, ಜ್ಯಾಕ್‌ವೆಲ್ / ಪಂಪ್ ಹೌಸ್, ಕೊಳಚೆ ನೀರು ಶುದ್ಧೀಕರಣ ಘಟಕಗಳು ಮುಂತಾದ ಸಾರ್ವಜನಿಕ ಉಪಯೋಗ ಕಾಮಗಾರಿಗಳನ್ನು ಕೆರೆ ಬಫರ್‌ನಲ್ಲಿ ಅಳವಡಿಸುವುದು ಅತ್ಯಾವಶ್ಯಕ.

ಕೂಲಂಕುಷ ಪರಿಶೀಲನೆಯ ನಂತರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ, ದೇಶದ ಇತರೆ ರಾಜ್ಯಗಳು ಅನುಸರಿಸಿರುವ ಕೆರೆ ಬಫರ್‌ಗಳನ್ನು ಪರಿಗಣಿಸಿ, ಕೆರೆಯ ಗಾತ್ರದ ಆಧಾರದ ಮೇಲೆ ಈ ಕೆಳಗಿನಂತೆ ಬಫರ್ ವಲಯವನ್ನು ತಿದ್ದುಪಡಿ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ:

A.5 ಗುಂಟೆವರೆಗೆ – 0 ಮೀಟರ್‌

B.5 ಗುಂಟೆಯಿಂದ 1 ಏಕರೆಯವರೆಗೆ – 3.0 ಮೀಟರ್‌

C.1 ಏಕರೆಯಿಂದ 10 ಏಕರೆಯವರೆಗೆ – 6.0 ಮೀಟರ್‌

D.10 ಏಕರೆಯಿಂದ 25 ಏಕರೆಯವರೆಗೆ – 12.0 ಮೀಟರ್‌

E.25 ಏಕರೆಯಿಂದ 100 ಏಕರೆಯವರೆಗೆ – 24.0 ಮೀಟರ್‌

F.100 ಏಕರೆಗಿಂತ ದೊಡ್ಡದಾದ ಕೆರೆಗಳಿಗೆ – 30.0 ಮೀಟರ್‌


ಈ ಬಫರ್ ಅಂತರವನ್ನು ರೂಪಿಸುವಾಗ ವೈಜ್ಞಾನಿಕ ದೃಷ್ಟಿಕೋನವನ್ನು ಅನುಸರಿಸಲಾಗಿದೆ. ಕೆರೆ ಬಫರ್ ಎಂದರೆ ಕೆರೆಯ ಸುತ್ತಲಿನ ಪ್ರದೇಶವು ಮಳೆ ನೀರನ್ನು ಕೆರೆಗೆ ಹರಿಯಲು ಅನುಕೂಲವಾಗುವಂತೆ ಮಾಡುವುದು. ಅನೇಕ ಸಂದರ್ಭಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ, ಹಳೆಯ ಬಫರ್ ಝೋನ್‌ ಪ್ರದೇಶವು ಕೆರೆಯ ಗಾತ್ರಕ್ಕಿಂತ ಹೆಚ್ಚಿತ್ತು. ಕರ್ನಾಟಕ ರಾಜ್ಯದಲ್ಲಿ ಮೊದಲು, ಕೆರೆಗಳ ಮೇಲೆ ಬಂಡೆ ನಿರ್ಮಿಸಲಾಗುತ್ತಿತ್ತು ಮತ್ತು ಸಾರ್ವಜನಿಕರು ತಮ್ಮ ಸಂಚಾರಕ್ಕಾಗಿ ಕೆರೆ ಬಂಡೆಯನ್ನು ರಸ್ತೆವಾಗಿ ಬಳಸುತ್ತಿದ್ದರು. ಹೀಗಾಗಿ, ಇದೇ ರೀತಿಯಲ್ಲಿ ಈ ಬಾರಿ ಕೆರೆಗಳ ಗಾತ್ರದ ಆಧಾರದ ಮೇಲೆ ಬಫರ್ ಝೋನ್‌ ನಿಗದಿಪಡಿಸಲಾಗಿದೆ – ಕೆರೆ ಸಣ್ಣದಾಗಿದ್ದರೆ ಕಡಿಮೆ ಬಫರ್ ಝೋನ್‌, ಕೆರೆ ದೊಡ್ಡದಾಗಿದ್ದರೆ ಹೆಚ್ಚು ಬಫರ್ ಝೋನ್‌ ನಿಗದಿಪಡಿಸಲಾಗಿದೆ.

ಇತರೆ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಬಫರ್‌ ಝೋನ್‌ ಅಳವಡಿಸಿಕೊಳ್ಳಲಾಗಿದೆ ಎಂದು ಅಧ್ಯಯನ ನಡೆಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಜಲಮೂಲಗಳ ಪ್ರದೇಶದಿಂದ 9 ಮೀ ಬಫರ್ ನಿಗದಿಪಡಿಸಲಾಗಿದೆ. ತೆಲಂಗಾಣ ರಾಜ್ಯದಲ್ಲಿ 10 ಹೆಕ್ಟೇರ್‌ಗಿಂತ ದೊಡ್ಡದಾದ ಕೆರೆಗೆ 30 ಮೀ ಮತ್ತು 9 ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣದ ಕೆರೆಗೆ 9 ಮೀ ಬಫರ್ ನಿಗದಿಪಡಿಸಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಏಕರೂಪವಾಗಿ ಕೆರೆಗಳ ಅಂಚಿನಿಂದ 3 ಮೀ ಬಫರ್ ಝೋನ್‌ ಅನುಸರಿಸಲಾಗಿದೆ. *ಕರ್ನಾಟಕವು ರಾಜ್ಯವು ವೈಜ್ಞಾನಿಕವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿಸಿರುವ ಬಫರ್ ಝೋನ್‌ ಮಾರ್ಗಸೂಚಿಗಳನ್ನು ರೂಪಿಸಿರುವ ಏಕೈಕ ರಾಜ್ಯವಾಗಿದೆ.*

ಕಾಲುವೆ ಬಫರ್‌ಗಳ ವಿಷಯದಲ್ಲಿ, ಪ್ರಸ್ತುತ 30 ಮೀ (ಪ್ರಾಥಮಿಕ ಕಾಲುವೆ), 15 ಮೀ (ದ್ವಿತೀಯ ಕಾಲುವೆ), 10 ಮೀ (ತೃತೀಯ ಕಾಲುವೆ) ಅವೈಜ್ಞಾನಿಕವಾಗಿದ್ದು, ಅನೇಕ ಸಂದರ್ಭಗಳಲ್ಲಿ ಕಾಲುವೆಯ ಅಗಲವೇ ಬಫರ್‌ಗಿಂತ ಕಡಿಮೆಯಾಗಿದೆ. ಆದ್ದರಿಂದ, ಪರಿಶೀಲನೆಯ ನಂತರ, ಹೊಸ ಕಾಲುವೆ ಬಫರ್‌ಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ: 

- ಪ್ರಾಥಮಿಕ ಕಾಲುವೆ – 15 ಮೀ 

- ದ್ವಿತೀಯ ಕಾಲುವೆ – 10 ಮೀ 

- ತೃತೀಯ ಕಾಲುವೆ – 5 ಮೀ.


*ಪ್ರಸ್ತಾಪಿತ ತಿದ್ದುಪಡಿಯ ಲಾಭಗಳು ಈ ಕೆಳಕಂಡಂತಿವೆ:*

1.ಬಫರ್ ವಲಯದಲ್ಲಿ ಕೆರೆಯ ಸಾಮರ್ಥ್ಯವನ್ನು ಕುಗ್ಗಿಸದೆ ಹಾಗೂ ನೀರಿನ ಹರಿವಿಗೆ ಅಡ್ಡಿಪಡಿಸದಂತಹ ಸಾರ್ವಜನಿಕರಿಗೆ ಉಪಯೋಗವಾಗುವ ಯೋಜನೆಗಳನ್ನು ಮಾತ್ರ ಕೈಗೊಳ್ಳಲಾಗುತ್ತದೆ. ಇದರಿಂದ ಕೆರೆಯ ಸಾಮರ್ಥ್ಯ ಕಡಿಮೆಯಾಗುವುದಿಲ್ಲ ಮತ್ತು ನೀರಿನ ಹರಿವು ಅಡ್ಡಿಯಾಗುವುದಿಲ್ಲ.

2.ಹಲವಾರು ಪ್ರಕರಣಗಳಲ್ಲಿ ಕೆರೆ ಬಫರ್ ಝೋನ್‌ ಖಾಸಗಿ ಭೂಮಿಯಾಗಿದ್ದು, ‘ನಿರ್ಮಾಣ ನಿಷೇಧ ವಲಯ’ ಎಂದು ಘೋಷಿಸಲಾಗಿದೆ.

3.ಈ ತಿದ್ದುಪಡಿಯಿಂದ ಪ್ರವಾಹ ಪ್ರಕರಣಗಳು ಹೆಚ್ಚಾಗುವುದಿಲ್ಲ, ಬದಲಾಗಿ ಉತ್ತಮ ಮೂಲಸೌಕರ್ಯ ಅಭಿವೃದ್ಧಿಯಿಂದ ನಗರ ಪ್ರದೇಶಗಳಲ್ಲಿ ಪ್ರವಾಹ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. 

4.ಈ ತಿದ್ದುಪಡಿ ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಅಲ್ಲ. ಇದು ಕೆರೆಯ ಗಾತ್ರಕ್ಕೆ ಅನುಗುಣವಾಗಿ ಬಫರ್ ವಲಯಗಳಲ್ಲಿ ಏಕರೂಪತೆಯನ್ನು ನಿಗದಿಪಡಿಸುವ ಗುರಿಯನ್ನು ಹೊಂದಿದೆ.

5.ತಿದ್ದುಪಡಿಯಿಂದ ಜಲಮೂಲಗಳ ಜೀವವೈವಿಧ್ಯತೆಯ ಮೇಲೆ ಯಾವುದೇ ಪರಿಣಾಮಗಳನ್ನು ಬೀರುವುದಿಲ್ಲ. ಬದಲಿಗೆ ಸರ್ಕಾರಗಳು ನಗರಗಳಿಗೆ ಮೂಲಸೌಕರ್ಯ ಒದಗಿಸಲು ಸಹಾಯ ಮಾಡುತ್ತದೆ. ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಡೆಗಟ್ಟಲು ಎಸ್‌ಟಿಪಿಗಳ ನಿರ್ಮಾಣ ಅಗತ್ಯ. ಈ ಹಿನ್ನಲೆಯಲ್ಲಿ ಹಾನಿಕಾರಕ ಕೊಳಚೆ ನೀರು ಸೇರ್ಪಡೆಯಾಗದಂತೆ ತಡೆಗಟ್ಟಲು ಕೆರೆಗಳು ಹಾಗೂ ಜಲಮೂಲಗಳ ಹತ್ತಿರ ಎಸ್‌ಟಿಪಿಗಳ ನಿರ್ಮಾಣಕ್ಕೆ ಇದು ಅನುವು ಮಾಡಿಕೊಡುತ್ತದೆ. 

6.ಈ ತಿದ್ದುಪಡಿ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನವನ್ನು ಸಾಧಿಸುತ್ತದೆ.

7.ಬಫರ್ ವಲಯದಲ್ಲಿ ನೀರು, ಒಳಚರಂಡಿ, ವಿದ್ಯುತ್ ಮುಂತಾದ ಉಪಯೋಗ ಜಾಲಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ, ಇದು ನಗರ ಪ್ರದೇಶಗಳ ಒಟ್ಟು ಮೂಲಸೌಕರ್ಯವನ್ನು ಸುಧಾರಿಸಲು ಸಹಾಯಕಾರಿಯಾಗಲಿದೆ.