Saturday, September 23, 2023

POP idol: BBMP hiding the truth

 Violation of Prohibition Order: Officers who have not taken action despite being pop idol immersion

 POP idol: BBMP hiding the truth

Kere Manjunath ಕೆರೆ ಮಂಜುನಾಥ್

 BENGALURU: The use of POP idols, which is banned across the state, is being immersion before the authorities.  A case has not been registered in this regard.  The information that such idols are being immersion is also being hidden now.

 BBMP had officially informed that more than 10 thousand POP idols were immersed on the first day of Ganesha festival.  The question was expressed by the citizens that 'how was it immersed even though there was a ban?'

 The Forest and Environment Department had issued an order prohibiting the manufacture, sale and immersion of any idols including POP Ganesha idols, Ganesha decorated with heavy metal colored chemical paint.  Manufacturing, selling and immersion of POP idols in violation of this order will be considered a punishable offence.  This offense is punishable by imprisonment for a minimum of one and a half years and a maximum of six years.

 However, on Ganesha festival, more than 10,000 POP idols were immersed in BBMP jurisdiction.  No one had taken any action.  At least one case was not registered.  This was questioned by environmental activists and citizens.  Thus, BBMP has kept the details of immersion of POP idols under wraps.

 1.19 lakh idols were immersed on Wednesday, the third day of Ganesha immersion.  But there is no detail of POP idols.  State Pollution Control Board officials, police, revenue and BBMP officials should have taken action against the sale, use and disposal of POP idols.  Without doing that, the information is hidden and all the immersion ones are depicted as clay idols.  Officials said that they have received a verbal instruction from the Forest Minister's office to do this.

ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ...ಪಿಒಪಿ ಮೂರ್ತಿ

ನಿಷೇಧ ಆದೇಶ ಉಲ್ಲಂಘನೆ: ವಿಸರ್ಜನೆಯಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು

ಪಿಒಪಿ ಮೂರ್ತಿ ಮುಚ್ಚಿಟ್ಟ ಬಿಬಿಎಂಪಿ

ರಾಜ್ಯದಾದ್ಯಂತ ನಿಷೇಧವಾಗಿರುವ ಪಿಒಪಿ ಮೂರ್ತಿಗಳ ಬಳಕೆ, ವಿಸರ್ಜನೆ ಅಧಿಕಾರಿಗಳ ಮುಂದೆ ನಡೆಯುತ್ತಿದೆ. ಆ ಬಗ್ಗೆ ಪ್ರಕರಣ ದಾಖಲಿಸಿಲ್ಲ. ಅಂತಹ ಮೂರ್ತಿ ವಿಸರ್ಜನೆಯಾಗುತ್ತಿವೆ ಎಂಬ ಮಾಹಿತಿಯನ್ನೂ ಇದೀಗ ಮುಚ್ಚಿಡಲಾಗುತ್ತಿದೆ.

ಗಣೇಶ ಹಬ್ಬದ ಮೊದಲನೇ ದಿನ 10 ಸಾವಿರಕ್ಕೂ ಹೆಚ್ಚು ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ ಎಂದು ಬಿಬಿಎಂಪಿ ಅಧಿಕೃತವಾಗಿ ಮಾಹಿತಿ ನೀಡಿತ್ತು. ‘ನಿಷೇಧವಿದ್ದರೂ ಹೇಗೆ ವಿಸರ್ಜನೆ ಮಾಡಿಕೊಡಲಾಯಿತು’ ಎಂಬ ಪ್ರಶ್ನೆ ನಾಗರಿಕರಿಂದ ವ್ಯಕ್ತವಾಗಿತ್ತು.

ಪಿಒಪಿ ಗಣೇಶ ವಿಗ್ರಹಗಳು, ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕಾರ ಮಾಡಿದ ಗಣೇಶ ಸೇರಿ ಯಾವುದೇ ವಿಗ್ರಹಗಳ ತಯಾರಿಕೆ, ಮಾರಾಟ ಹಾಗೂ ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶ ಉಲ್ಲಂಘಿಸಿ ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟ ಮಾಡಿದರೆ ಮತ್ತು ವಿಸರ್ಜಿಸಿದರೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ ಆರು ವರ್ಷಗಳ ಕಾರಾಗೃಹವಾಸ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಆದರೆ, ಗಣೇಶ ಹಬ್ಬದಂದು 10 ಸಾವಿರಕ್ಕೂ ಹೆಚ್ಚು ಪಿಒಪಿ ಮೂರ್ತಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜನೆಯಾಗಿದ್ದವು. ಯಾರೂ ಯಾವ ರೀತಿಯ ಕ್ರಮವನ್ನೂ ಕೈಗೊಂಡಿರಲಿಲ್ಲ. ಕನಿಷ್ಠ ಒಂದು ಪ್ರಕರಣವನ್ನೂ ದಾಖಲಿಸಿರಲಿಲ್ಲ. ಇದನ್ನು ಪರಿಸರ ಕಾರ್ಯಕರ್ತರು, ನಾಗರಿಕರು ಪ್ರಶ್ನಿಸಿದ್ದರು. ಹೀಗಾಗಿ, ಬಿಬಿಎಂಪಿ ಪಿಒಪಿ ಮೂರ್ತಿಗಳ ವಿಸರ್ಜನೆ ಮಾಹಿತಿಯನ್ನೇ ಮುಚ್ಚಿಟ್ಟಿದೆ. 

ಗಣೇಶವ ವಿಸರ್ಜನೆಯ ಮೂರನೇ ದಿನ ಬುಧವಾರ 1.19 ಲಕ್ಷ ಮೂರ್ತಿಗಳು ವಿಸರ್ಜನೆಯಾಗಿವೆ. ಆದರೆ ಪಿಒಪಿ ಮೂರ್ತಿಗಳ ವಿವರ ಇಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪೊಲೀಸ್‌, ಕಂದಾಯ ಹಾಗೂ ಬಿಬಿಎಂಪಿ ಅಧಿಕಾರಿಗಳು ಪಿಒಪಿ ಮೂರ್ತಿಗಳ ಮಾರಾಟ, ಬಳಕೆ, ವಿಸರ್ಜನೆ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿತ್ತು. ಅದನ್ನು ಮಾಡದೆ ಮಾಹಿತಿ ಮುಚ್ಚಿಟ್ಟು, ವಿಸರ್ಜನೆಯಾದವೆಲ್ಲ ಮಣ್ಣಿನ ಮೂರ್ತಿಗಳೇ ಎಂದು ಬಿಂಬಿಸಲಾಗಿದೆ. ಈ ರೀತಿ ಮಾಡುವಂತೆ ಅರಣ್ಯ ಸಚಿವರ ಕಚೇರಿಯಿಂದ ಮೌಖಿಕ ಸೂಚನೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.



No comments:

Post a Comment