Friday, April 17, 2026

11 Elevated Corridors at a cost of ₹13,262.70 Crore… ₹13,262.70 ಕೋಟಿ ವೆಚ್ಚದಲ್ಲಿ 11 ಎಲಿವೇಟೆಡ್‌ ಕಾರಿಡಾರ್‌

Cabinet Approves Rotary Flyover *

11 Elevated Corridors at a cost of ₹13,262.70 Crore… ₹13,262.70 ಕೋಟಿ ವೆಚ್ಚದಲ್ಲಿ 11 ಎಲಿವೇಟೆಡ್‌ ಕಾರಿಡಾರ್‌


Bengaluru: The State Cabinet on Thursday granted administrative approval for the construction of 11 elevated corridors across five municipal zones under the B-SMILE initiative, along with a specialized Rotary Flyover at Baiyappanahalli.


 Total Investment: ₹13,262.70 Crore for 11 elevated corridors covering 75.60 km**.

 Baiyappanahalli Project:The revised estimate for the flyover at the railway level crossing and the elevated rotary flyover at the IOC junction is now ₹436.44 Crore (up from the initial ₹380 Crore tender).

 Green Energy: ₹85 Crore approved for a Public-Private Partnership (PPP) project to implement a 'Biogas Purification and Compression System' using sludge from five BWSSB sewage treatment plants.

 Inter-Ring Road (IRR): The Cabinet decided to scrap the 2023 alignment for the BMRDA Inter-Ring Road and revert to the 2007 alignment with minor modifications.

 Institutional Shift: 51% of shares in the Karnataka Technology and Innovation Museum Foundation (KTIMF) will be transferred to the Unboxing BLR Foundation

The 11 Proposed Elevated Corridors

MEI Junction: Split flyover | 0.5 km | ₹52 Cr |

West of Chord Road: Grade separator to ORR via Pipeline Road | 2.0 km | ₹489 Cr |

Doddaballapur Road: Flyover via Yelahanka to Kogilu Cross | 1.5 km | ₹142 Cr |

Kanakapura Road: Flyover at Konanakunte Cross | 1.5 km | ₹291 Cr |

Kanakapura Road: Flyover at Raghuvanahalli Cross (A2B Junction) | 0.9 km | ₹230 Cr |

Central Hub: Minerva Circle to Hudson Circle; Loop at BGS Flyover; Sangolli Rayanna Circle to Nrupathunga Road | 7.0 km | ₹725 Cr |

Mysuru Road: Sirsi Circle to Nayandahalli | 5.2 km | ₹810 Cr |

Hosur Road: Shooley Circle to St. John’s Hospital Road (via Anepalya & Adugodi) | 5.3 km | ₹716 Cr |

East-South Link: Old Madras Road to Electronic City Flyover (via Indiranagar, Old Airport Rd, and Silk Board) | 5.2 km | ₹1,300 Cr |

North-East Link: Yashwantpur/Mattikere to Tin Factory (via IISc, Mehkri Circle, Jayamahal, and Ulsoor Lake) | 28.0 km | ₹4,621.45 Cr |

South Link: Marenahalli (Ragigudda) to Talaghattapura Junction (via Pipeline Road) | 18.5 km | ₹2,956.32 Cr |



Also READ!!!! Proposal for construction of 16 elevated corridors; DPR of 10 works ready ₹13 thousand crore for 16 Flyovers

AlSO rEAD???? 11 Elevated Corridors at a cost of ₹13,262.70 Crore ₹13,262.70 ಕೋಟಿ ವೆಚ್ಚದಲ್ಲಿ 11 ಎಲಿವೇಟೆಡ್‌ ಕಾರಿಡಾರ್‌ Cabinet Approves Rotary Flyover


ರೋಟರಿ ಮೇಲ್ಸೇತುವೆಗೂ ಸಮ್ಮತಿ,

₹13,262.70 ಕೋಟಿ ವೆಚ್ಚದಲ್ಲಿ 11 ಎಲಿವೇಟೆಡ್‌ ಕಾರಿಡಾರ್‌

ಬೆಂಗಳೂರು: ನಗರದದಲ್ಲಿ ಬಿ–ಸ್ಮೈಲ್‌ ವತಿಯಿಂದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 11 ಎಲಿವೇಟೆಡ್‌ ಕಾರಿಡಾರ್‌, ಬೈಯಪ್ಪನಹಳ್ಳಿಯಲ್ಲಿ ರೋಟರಿ ಮೇಲ್ಸೇತುವೆ ಯೋಜನೆಗೆ ಸಚಿವ ಸಂಪುಟ ಗುರವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬೈಯಪ್ಪನಹಳ್ಳಿಯಲ್ಲಿ ರೋಟರಿ ಮೇಲ್ಸೇತುವೆಗೆ ಈ ಹಿಂದೆ ₹380 ಕೋಟಿ ವೆಚ್ಚಕ್ಕೆ ಟೆಂಡರ್‌ ಕರೆಯಲಾಗಿತ್ತು. ಈ ಯೋಜನೆಗೆ ₹436.44 ಕೋಟಿ ವೆಚ್ಚ ಮಾಡಲು ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಜಲಮಂಡಳಿಯ ಐದು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಕೆಸರಿನಿಂದ ಉತ್ಪತ್ತಿಯಾಗುವ ಬಯೊ ಗ್ಯಾಸ್‌ ಅನ್ನು ಬಳಸಿಕೊಂಡು ‘ಬಯೊಗ್ಯಾಸ್‌ ಪ್ಯೂರಿಫಿಕೇಷನ್‌ ಆ್ಯಂಡ್‌ ಕಂಪ್ರೆಷನ್‌ ಸಿಸ್ಟಮ್‌’ ಯೋಜೆಯನ್ನು ಸಾರ್ವಜನಿಕ– ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಲು ಸಮ್ಮತಿ ನೀಡಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಮಧ್ಯಂತರ ವರ್ತುಲ ರಸ್ತೆ–2023ರ ಪಂಕ್ತೀಕರಣದ (ಅಲೈನ್‌ಮೆಂಟ್‌) ಬದಲಿಗೆ ಮಧ್ಯಂತರ ವರ್ತುಲ ರಸ್ತೆ– 2007ರ ಪಂಕ್ತೀಕರಣವನ್ನು ಅಲ್ಪ ಬದಲಾವಣೆಯೊಂದಿಗೆ ಮರುನಿಗದಿಪಡಿಸಿ, ಪರಿಷ್ಕತ ಅಧಿಸೂಚನೆ ಹೊರಡಿಸಲು ಸಮ್ಮತಿಸಲಾಗಿದೆ.

ಕರ್ನಾಟಕ ಟೆಕ್ನಾಲಜಿ ಮತ್ತು ಇನ್ನೋವೇಷನ್‌ ಮ್ಯೂಸಿಯಂ ಫೌಂಡೇಷನ್‌ನ (ಕೆಟಿಐಎಂಎಫ್) ಶೇ 51ರಷ್ಟು ಷೇರುಗಳನ್ನು ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಫೌಂಡೇಷನ್‌ಗೆ ವರ್ಗಾಯಿಸಲು ಅನುಮೋದನೆ ನೀಡಲಾಗಿದೆ.

 

₹13,262.70 ಕೋಟಿ; ಒಟ್ಟು 75.60 ಕಿ.ಮೀ ಉದ್ದದ 11 ಎಲಿವೇಟಡ್‌ ಕಾರಿಡಾರ್‌ಗಳ ಅಂದಾಜು ವೆಚ್ಚ

₹436.44 ಕೋಟಿ; ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ ಬಳಿ ಮೇಲ್ಸೇತುವೆ, ಐಒಸಿ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ರೋಟರಿ ಮೇಲ್ಸೇತುವೆಗೆ ಪರಿಷ್ಕೃತ ಅಂದಾಜು

₹85 ಕೋಟಿ; ಜಲಮಂಡಳಿಯ ಐದು ತ್ಯಾಜ್ಯ ನೀರು ಘಟಕಗಳ ಕೆಸರಿನಿಂದ ಬಯೊಗ್ಯಾಸ್‌ ಉತ್ಪಾದನೆಗೆ ಪಿಪಿಪಿ ಮಾದರಿ

 

 

ಎಲಿವೇಟೆಡ್ ಕಾರಿಡಾರ್ 

ಎಂಇಐ ಜಂಕ್ಷನ್‌ನಲ್ಲಿ ವಿಭಜಿತ ಮೇಲ್ಸೇತುವೆ;0.5 ಕಿಮೀ ₹52 ಕೋಟಿ 

ವೆಸ್ಟ್ ಆಫ್‌ ಕಾರ್ಡ್‌ ರಸ್ತೆಯಿಂದ ಪೈಪ್‌ಲೈನ್‌ ರಸ್ತೆ ಮೂಲಕ ಮಹಾಲಕ್ಷ್ಮಿ ಲೇಔಟ್‌ನ ಹೊರ ವರ್ತುಲ ರಸ್ತೆಗೆ ಗ್ರೇಡ್‌ ಸಪರೇಟರ್‌;2.0 ಕಿಮೀ ₹489 ಕೋಟಿ 

ಯಲಹಂಕ ಮೂಲಕ ಕೋಗಿಲು ವೃತ್ತದವರೆಗೆ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಮೇಲ್ಸೇತುವೆ;1.5 ಕಿಮೀ ₹142 ಕೋಟಿ 

ಕನಕಪುರ ರಸ್ತೆಯಲ್ಲಿ ಕೋಣನಕುಂಟೆ ಕ್ರಾಸ್‌ನಲ್ಲಿ ಮೇಲ್ಸೇತುವೆ;1.5 ಕಿಮೀ ₹291 ಕೋಟಿ 

ಕನಕಪುರ ರಸ್ತೆಯಲ್ಲಿ ಅಡ್ಯಾರ್‌ ಆನಂದ ಭವನ್‌, ರಘುವನಹಳ್ಳಿ ಕ್ರಾಸ್‌ನಲ್ಲಿ ಮೇಲ್ಸೇತುವೆ;0.9 ಕಿಮೀ ₹230 ಕೋಟಿ 

ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದರೆಗೆ ಎಲಿವೇಟೆಡ್‌ ಕಾರಿಡಾರ್‌. ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಲೂಪ್‌. ಸಂಗೊಳ್ಳಿ ರಾಯಣ್ಣ ವೃತ್ತದಿಂದ (ಆನಂದರಾವ್ ಮೇಲ್ಸೇತುವೆ) ನೃಪತುಂಗ ರಸ್ತೆವರೆಗೆ (ಕೆ.ಆರ್‌. ವೃತ್ತ) ಎಲಿವೇಟೆಡ್‌ ಕಾರಿಡಾರ್‌;7 ಕಿಮೀ ₹725 ಕೋಟಿ 

ಸಿರ್ಸಿ ವೃತ್ತದಿಂದ ಮೈಸೂರು ರಸ್ತೆ ಮೂಲಕ ನಾಯಂಡಹಳ್ಳಿವರೆಗೆ ಎಲಿವೇಟೆಡ್‌ ಕಾರಿಡಾರ್‌;5.2 ಕಿಮೀ ₹810 ಕೋಟಿ 

ಹೊಸೂರು ರಸ್ತೆಯಲ್ಲಿ ಶೂಲೆ ವೃತ್ತದಿಂದ ಸೇಂಟ್‌ ಜಾನ್‌ ಆಸ್ಪತ್ರೆ ರಸ್ತೆವರೆಗೆ (ಆನೆಪಾಳ್ಯ ಜಂಕ್ಷನ್‌ ಮತ್ತು ಆಡುಗೋಡಿ ಜಂಕ್ಷನ್‌ ಮೂಲಕ) ಎಲಿವೇಟೆಡ್‌ ಕಾರಿಡಾರ್‌;5.3 ಕಿಮೀ ₹716 ಕೋಟಿ 

ಹಳೆ ಮದ್ರಾಸ್‌ ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆವರೆಗೆ ಎಲಿವೇಟೆಡ್‌ ಕಾರಿಡಾರ್‌ (ಸ್ವಾಮಿ ವಿವೇಕಾನಂದ ಮೆಟ್ರೊ ಸ್ಟೇಷನ್‌– ಇಂದಿರಾನಗರ– ಹಳೆ ವಿಮಾನನಿಲ್ದಾಣ ರಸ್ತೆ– ಹೊಸೂರು ರಸ್ತೆ– ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಮೂಲಕ);5.2 ಕಿಮೀ ₹1,300 ಕೋಟಿ 

ಯಶವಂತಪುರ– ಮತ್ತಿಕೆರೆ ಕ್ರಾಸ್‌ನಿಂದ ಹಳೆ ಮದ್ರಾಸ್‌ ರಸ್ತೆವರೆಗೆ (ಟಿನ್‌ಫ್ಯಾಕ್ಟರಿ ಜಂಕ್ಷನ್‌ ಕೆ.ಆರ್‌. ಪುರ) ಐಐಎಸ್ಸಿ– ಮೇಖ್ರಿ ವೃತ್ತ– ಜಯಮಹಲ್‌– ಸೇಂಟ್‌ ಜಾನ್‌ ಚರ್ಚ್‌ ರಸ್ತೆ, ಹಲಸೂರು ಕೆರೆ ಮೂಲಕ;28 ಕಿಮೀ ₹4,621.45 ಕೋಟಿ 

ಮಾರೇನಹಳ್ಳಿ ಮುಖ್ಯರಸ್ತೆಯಿಂದ (ರಾಗಿಗುಡ್ಡ ಜಂಕ್ಷನ್‌) ಕನಕಪುರ ಮುಖ್ಯರಸ್ತೆಗೆ ಎಲಿವೇಟೆಡ್‌ ಕಾರಿಡಾರ್‌ (ಪೈಪ್‌ಲೈನ್‌ ರಸ್ತೆ ಮೂಲಕ ತಲಘಟ್ಟಪುರ ಜಂಕ್ಷನ್‌);18.5 ಕಿಮೀ ₹2,956.32 ಕೋಟಿ 

No comments:

Post a Comment