Thursday, December 24, 2009

ಹೊರವಲಯದ ಕೆರೆಗಳೇ ಫಿಲ್ಟರ್ ತಾಣ

ಬೆಂಗಳೂರು ನಗರದಲ್ಲಿ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಹೊರವಲಯದ ಕೆರೆಗಳತ್ತ ಯಾರ ಚಿತ್ತವೂ ಹರಿದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಮರಳು ಮಾಫಿಯಾ ಕೆರೆಗಳನ್ನೇ 'ಫಿಲ್ಟರ್' ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದೆ.
ಬಿಬಿಎಂಪಿ, ನಗರ-ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಗಮನಹರಿಸದಿದ್ದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಹೊರವಲಯದ ಕೆರೆಗಳು ವಿನಾಶದ ಅಂಚಿಗೆ ತಲುಪುತ್ತವೆ. ಇಲ್ಲೊಂದು ಕೆರೆ ಇತ್ತು ಎಂಬ ಸುಳಿವನ್ನೂ ಕೆರೆಯ ಅಂಗಳದಲ್ಲೇ ಫಿಲ್ಟರ್ ಮರಳು ದಂಧೆ ನಡೆಯುತ್ತಿದ್ದು, ನೂರಾರು ಲಾರಿಗಳು, ಹತ್ತಾರು ಜೆಸಿಬಿಗಳು ಪ್ರತಿನಿತ್ಯವೂ ಕಾರ್ಯನಿರ್ವಹಿಸುತ್ತಿವೆ.
ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲಿವಿಂಗ್‌ಗಿಂತ ಮುನ್ನ ಕುಪ್ಪಿರೆಡ್ಡಿ ಕೆರೆಯಾದ ಕೂಡಲೇ ಎಡಬದಿಗೆ ತಿರುಗಿದರೆ, ಘಾಟ್‌ನಲ್ಲಿ ಸಂಚರಿಸಿದ ಅನುಭವ ಉಂಟಾಗುತ್ತದೆ. ಅದರ ಉಲ್ಲಾಸವನ್ನು ಕೆಲವೇ ಕಿಮೀ ದಾಟಿದಾಗ, ವಡೇರಹಳ್ಳಿ ಕೆರೆಯ ನೀರ ಸಾಮ್ರಾಜ್ಯ ದುಪ್ಪಟ್ಟುಗೊಳಿಸುತ್ತದೆ. ಕೆರೆಯ ಏರಿ ಮೇಲೆ ನಿಂತರೆ, ದಟ್ಟ ಅರಣ್ಯದ ನಡುವೆ ನೀರು ಕಣ್ಸೆಳೆಯುತ್ತದೆ. ಆದರೆ, ಅದಕ್ಕೇ ಬರಸಿಡಿಲಿನಂತೆ ಬಂದೆರಗುವುದು ಪಂಪ್‌ಸೆಟ್‌ಗಳ ಆರ್ಭಟ, ಜೆಸಿಬಿಗಳ ನರ್ತನ ಹಾಗೂ ಹತ್ತಾರು ಲಾರಿಗಳ ಸಂಚಾರ.
ವಡೇರಹಳ್ಳಿ, ಚಿಕ್ಕಲಿಂಗಶಾಸ್ತ್ರಿ, ಗೋಪಾಲಪುರ ಕೆರೆಗಳ ನೀರ ಸಾಮ್ರಾಜ್ಯ ಹಾಗೂ ಅಲ್ಲಿ ಪರಿಸರಸ್ನೇಹಿ ವಾತಾವರನದ ಬಗ್ಗೆ ವಿಜಯ ಕರ್ನಾಟಕ 'ನಮ್ಮುರ್ ಕೆರೆ' ಲೇಖನ ಮಾಲಿಕೆಯಲ್ಲಿ ವಿವರಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಹೆಮ್ಮೆಪಟ್ಟುಕೊಂಡವು. ಚೆನ್ನಾಗಿವೆಯಲ್ಲ ಎಂದು ಬಿಬಿಎಂಪಿ ಇತ್ತ ನೋಡುವುದು ಬೇಡ ಎಂದು ನಿರ್ಧರಿಸಿತು. ಇದನ್ನೇ 'ಮರಳು ಮಾಫಿಯಾ' ಬಂಡವಾಳವಾಗಿಸಿಕೊಂಡಿದೆ. ಕಳೆದ ವರ್ಷ ಈ ಕೆರೆಗಳ ಸುತ್ತಮುತ್ತ ಫಿಲ್ಟರ್ ಮರಳಿನ ಗಾಳಿಯೂ ಸುಳಿದಿರಲಿಲ್ಲ. ಆದರೆ, ಇದೀಗ ಮೂರ್‍ನಾಲ್ಕು ತಿಂಗಳಿಂದ ಫಿಲ್ಟರ್ ದಂಧೆ ಹೆಮ್ಮರವಾಗಿ ಬೆಳೆದುನಿಂತಿದೆ.
ಕನಕಪುರ ಮುಖ್ಯರಸ್ತೆಯಲ್ಲಿ ಸಾಗುವಾಗ ಇಂತಹ ಕೃತ್ಯ ನಡೆಯುತ್ತಿದೆ ಎಂಬುದು ಅರಿವಿಗೇ ಬರುವುದಿಲ್ಲ. ಟ್ರ್ಯಾಕ್ಟರ್ ಅಷ್ಟೇ ಸಾಗುವ ರಸ್ತೆಗಳನ್ನು ಗ್ರಾಮಸ್ಥರು ನಿರ್ಮಿಸಿಕೊಂಡಿರಬಹುದೆಂದು ಭಾವಿಸಲಾಗುತ್ತದೆ. ಆದರೆ, ಈ ರಸ್ತೆಗಳನ್ನು ಒಂದೆರಡು ಗಂಟೆ ವೀಕ್ಷಿಸಿದರೆ, ಆಗಾಗ ಫಿಲ್ಟರ್ ಮರಳು ತುಂಬಿದ ಟ್ರ್ಯಾಕ್ಟರ್‌ಗಳು ಹೊರಬರುತ್ತಿರುತ್ತವೆ. ಅಲ್ಲಿಂದ ಬಂದ ಟ್ರ್ಯಾಕ್ಟರ್‌ಗಳು ವಿಶಾಲ ಪ್ರದೇಶದಲ್ಲಿ ಫಿಲ್ಟರ್ ಮರಳು ಸುರಿಯುತ್ತವೆ. ಅಲ್ಲಿಂದ ಲಾರಿಗಳು ಅದನ್ನು ನಗರಕ್ಕೆ ಕೊಂಡೊಯ್ಯುತ್ತವೆ. ಇದು ಕೆಲವೇ ಪ್ರದೇಶಗಳ ಮಾತು. ಬಹುತೇಕ ಫಿಲ್ಟರ್ ಮರಳಿನ ಘಟಕಗಳಿಗೆ ಲಾರಿ, ಟಿಪ್ಪರ್‌ಗಳು ಸುಲಭವಾಗಿ ಸಾಗಲು ಆ ಮಾಫಿಯಾವೇ ರಸ್ತೆ ನಿರ್ಮಿಸಿಕೊಂಡಿದೆ.
ಬೆಂಗಳೂರಿಗೆ ದೇವನಹಳ್ಳಿ, ರಾಮನಗರದ ಸುತ್ತಮುತ್ತಲಿಂದ ಮರಳು ಸರಬರಾಜಾಗುತ್ತದೆ. ಈ ಎಲ್ಲ ಪ್ರದೇಶಗಳಲ್ಲೂ ಫಿಲ್ಟರ್ ಮರಳಿನ ದಂಧೆಯೇ. ಈ ಬಗ್ಗೆ ಅಲ್ಲಿನ ಎಲ್ಲ ಪೊಲೀಸ್ ಠಾಣೆಗಳು ಸೇರಿದಂತೆ ಎಲ್ಲ ಇಲಾಖೆಯ ಹಿರಿಯ-ಕಿರಿಯ ಅಧಿಕಾರಿಗಳಿಗೂ ಮಾಹಿತಿ ಇದೆ. ಆದರೆ, ಮಾಮೂಲಿಗೆ ಕೈಚಾಚಿ ಮರಳು ಮಾಫಿಯಾ ಪರಿಸರವನ್ನು ಹಾಳುಮಾಡಲು ಸಹಕರಿಸುತ್ತಿದ್ದಾರೆ. ಕಟ್ಟಡಗಳಿಗೆ ಮಾರಕವಾಗಿರುವ ಈ ದಂಧೆಗೆ ಕುಮ್ಮಕ್ಕು ನೀಡಿ ಜನರ ಭವಿಷ್ಯದ ಮೇಲೂ ಕಲ್ಲುಹಾಕುತ್ತಿದ್ದಾರೆ. ಸಚಿವರು ಇವರಿಗೇ ಮಣೆ ಹಾಕುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವವರ್‍ಯಾರು?
ಎಲ್ಲಿ, ಯಾವ ಕೆರೆಗಳಲ್ಲಿ ಫಿಲ್ಟರ್?
ಕನಕಪುರ ರಸ್ತೆ ಆಸುಪಾಸಿನಲ್ಲಿರುವ ವಡೇರಹಳ್ಳಿ, ಚಿಕ್ಕಲಿಂಗಶಾಸ್ತ್ರಿ, ಸೋಮನಹಳ್ಳಿ, ರಾಜಾಪುರ, ಚಂದಾಪುರ; ಆನೇಕಲ್ ತಾಲೂಕಿನ ಜಿಗಣಿ, ಹಾರಗದ್ದೆ, ರಾಜಾಪುರ, ಸರ್ಜಾಪುರ, ರಾಮನಗರ ತಾಲೂಕಿನ ಬಹುತೇಕ ಪ್ರದೇಶ ಹಾಗೂ ದೇವನಹಳ್ಳಿ ವ್ಯಾಪ್ತಿಯ ವಿಜಯಪುರ ಕೆರೆ ಸೇರಿದಂತೆ ನಗರದ ಹೊರವಲಯದ ಸುಮಾರು ೫೦ಕ್ಕೂ ಹೆಚ್ಚು ಕೆರೆಗಳ ಅಂಗಳದಲ್ಲಿ ಫಿಲ್ಟರ್ ದಂಧೆ ನಡೆಯುತ್ತಿದೆ. ಇಷ್ಟೇ ಅಲ್ಲ, ಈ ಪ್ರದೇಶಗಳಲ್ಲಿರುವ ರೈತರು ತಮ್ಮ ಕೃಷಿಯನ್ನು ಮರೆತು ಫಿಲ್ಟರ್ ದಂಧೆಗೇ ತಮ್ಮನ್ನು ತೆರೆದುಕೊಂಡಿದ್ದಾರೆ.
ತೋಟ ಹಾಗೂ ಮನೆ ಮುಂದಿರುವ ಬಾವಿ ಹಾಗೂ ಬೋರ್‌ವೆಲ್‌ಗಳಿಗೆ ಪಂಪ್‌ಸೆಟ್ ಅಳವಡಿಸಿಕೊಂಡಿರುವ ರೈತರ ಮನೆಗಳ ಮುಂದೆ, ರಾಶಿ ರಾಶಿ ಮಣ್ಣು ಬಿದ್ದಿದೆ. ಕೃಷಿಯನ್ನು ಮರೆತು 'ಫುಲ್‌ಟೈಮ್' ಕೆಲಸವನ್ನಾಗಿ ಫಿಲ್ಟರ್ ಕಾರ್ಯವನ್ನೇ ವಹಿಸಿಕೊಂಡಿದ್ದಾರೆ. ತಿಂಗಳಿಗೆ ಕನಿಷ್ಠ ಐದಾರು ಲೋಡ್ ಮರಳು ಫಿಲ್ಟರ್ ಮಾಡಿದರೆ, ಸುಮಾರು 20 ಸಾವಿರ ರೂ. ಸಂಪಾದನೆ ಆಗುತ್ತದೆ. ಆದ್ದರಿಂದಲೇ, ಬಹುತೇಕ ಮನೆಗಳ ಮುಂದೆ ಮಣ್ಣಿನ ರಾಶಿ, ಕೆಸರು, ಪಂಪ್‌ಸೆಟ್ ಆರ್ಭಟ, ನೀರೆರೆಚಾಟ, ಫಿಲ್ಟರ್ ಮರಳಿನ ಗುಡ್ಡೆಯೇ ಕಾಣುತ್ತದೆ.

ಬಿಡಿಎ: ಕೆರೆಗಳಲ್ಲಿ 240 ಕೋಟಿ ಲೀಟರ್ ಸಂಗ್ರಹ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಲ್ಲಿರುವ 12 ಕೆರೆಗಳು ಮುಂದಿನ ಮಳೆಗಾಲದಲ್ಲಿ ಸುಮಾರು 240 ಕೋಟಿ ಲೀಟರ್ ಮಳೆ ನೀರು ಸಂಗ್ರಹಿಸಲು ಸಿದ್ಧವಾಗಲಿವೆ. ಅಷ್ಟೇಅಲ್ಲ, ಅಂತರ್ಜಲ ಮಟ್ಟದ ವೃದ್ಧಿಗೆ ಪ್ರಮುಖ ಜಲಮೂಲಗಳೂ ಆಗಲಿವೆ.
ಏಪ್ರಿಲ್ ವೇಳೆಗೆ 12 ಕೆರೆಗಳ ಅಭಿವೃದ್ಧಿಯನ್ನು ಸುಮಾರು 105 ಕೋಟಿ ರೂ.ಗಳ ವೆಚ್ಚದಲ್ಲಿ ಬಿಡಿಎ ಪೂರ್ಣಗೊಳಿಸಲಿದೆ. ಕೆರೆಗಳಲ್ಲಿ ಹೂಳು ತೆಗೆದಿರುವುದರಿಂದ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಜತೆಗೆ, ಅಲ್ಲಲ್ಲಿ ಅಂತರ್ಜಲ ಪುನಶ್ಚೇತನಕ್ಕೆ ಹೊಂಡಗಳನ್ನೂ ನಿರ್ಮಿಸಲಾಗುತ್ತದೆ. ಇದು ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲು ನೆರವಾಗುತ್ತದೆ.
ಬಿಡಿಎ ವ್ಯಾಪ್ತಿಯ ಕೆರೆಗಳೆಲ್ಲ ತುಂಬಿ ಹೋದರೆ, ಬೆಂಗಳೂರಿಗೆ ದಿನವೊಂದಕ್ಕೆ ಪೂರೈಕೆಯಾಗುತ್ತಿರುವ ನೀರಿಗಿಂತ ಮೂರು ಪಟ್ಟು ಹೆಚ್ಚು ನೀರು ಈ 12 ಕೆರೆಗಳಲ್ಲೇ ಸಂಗ್ರಹವಾಗಲಿದೆ. ಇದೇ ರೀತಿ ಎಲ್ಲ ಕೆರೆಗಳು ಅಭಿವೃದ್ಧಿ ಆಗಿದ್ದೇ ಆದರೆ, ವಾತಾವರಣ ತಂಪು, ಅಂತರ್ಜಲ ಸಂಪು.
ಅರ್ಕಾವತಿ ಬಡಾವಣೆ ವ್ಯಾಪ್ತಿಯಲ್ಲಿರುವ ಜಕ್ಕೂರು-ಸಂಪಿಗೆ ಹಳ್ಳಿ, ರಾಚೇನಹಳ್ಳಿ, ವೆಂಕಟೇಶಪುರ; ವಿಶ್ವೇಶ್ವರಯ್ಯ ಬಡಾವಣೆ ವ್ಯಾಪ್ತಿಯ ಉಲ್ಲಾಳು, ಮಲ್ಲತ್ತಹಳ್ಳಿ, ಕೊಮ್ಮಘಟ್ಟ; ಅಂಜನಾಪುರದ ಕೊತ್ತನೂರು ಕೆರೆ; ಬನಶಂಕರಿ 6ನೇ ಘಟ್ಟದ ತಲಘಟ್ಟಪುರ, ಸೋಮಪುರ ಮತ್ತು ಕೋನಸಂದ್ರ ಕೆರೆ ಅಭಿವೃದ್ಧಿ ಕಾರ್ಯಗಳು ನಾನಾ ಹಂತದಲ್ಲಿವೆ. ಈ ಎಲ್ಲ ಕೆರೆಗಳ ಕಾಮಗಾರಿ ಏಪ್ರಿಲ್ ವೇಳಗೆ ಪೂರ್ಣಗೊಳ್ಳಲಿದೆ.
ಬಡಾವಣೆ ನಿರ್ಮಾಣ ಸಮಯದಲ್ಲಿ ಕೋನಸಂದ್ರ ಹಾಗೂ ತಲಘಟ್ಟಪುರ ಕೆರೆಯನ್ನು ಬಿಡಿಎ ಒತ್ತುವರಿ ಮಾಡಿಕೊಂಡಿತ್ತು. ಯಾವುದೇ ಕಾರಣಕ್ಕೂ ಕೆರೆ ಒತ್ತುವರಿ ಆಗುವುದು ಬೇಡ ಎಂಬ ಆಯುಕ್ತ ಸಿದ್ಧಯ್ಯನವರ ಆದೇಶದ ಮೇರೆಗೆ, ಒತ್ತುವರಿ ತೆರವುಗೊಳಿಸಲಾಗಿದೆ. ಅಲ್ಲದೆ, ಮತ್ತಷ್ಟು ಭಾಗವನ್ನೂ ಕೆರೆಗೆ ಹೆಚ್ಚುವರಿಯಾಗಿ ಸೇರಿಸಿಕೊಂಡು, ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅರಣ್ಯ ಉಪಸಂರಕ್ಷಣಾಧಿಕಾರಿ ಅಮರನಾಥ್ ತಿಳಿಸಿದರು.
ಕೆರೆಗಳ ಅಭಿವೃದ್ಧಿಯಲ್ಲಿ ಬಿಡಿಎ ಕಾರ್ಯಚೂಚಿ
ಕೆರೆ ಗಡಿಯನ್ನು ಗುರುತಿಸಿ, ಅದರ ಸಂರಕ್ಷಣೆ; ಒಳ ಮತ್ತು ಹೊರ ಹರಿವಿನ ಕಾಲುವೆಗಳ ಮರುಸ್ಥಾಪನೆ; ಒಳಚರಂಡಿ ನೀರು ಹರಿವು ಮಾರ್ಗ ಬದಲು ಮತ್ತು ಸಂಸ್ಕರಣೆ; ಹೂಳು ಮತ್ತು ಕಳೆ ನಿರ್ಮೂಲನೆ; ಒಳಚರಂಡಿ ಹಾಗೂ ಮಳೆ ನೀರಿನ ಮೂಲಕ ಘನತ್ಯಾಜ್ಯ ಕೆರೆಗೆ ಹರಿಯದಂತೆ ನಿಗ್ರಹಿಸಲು ಹೂಳು ಕವಾಟಕ, ಬೇಲಿ ನಿರ್ಮಾಣ; ಏರಿಯನ್ನು ಸದೃಢಗೊಳಿಸುವುದು; ಕುಷ್ಕಿ ಭೂಮಿ ನಿರ್ಮಾಣ; ಕೆರೆ ತೀರದಲ್ಲಿ ಸಸಿ ನೆಡುವುದು. ಈ ಎಲ್ಲ ಕಾರ್ಯಗಳು ಕೆರೆಗಳಲ್ಲಿ ನಾನಾ ಹಂತಗಳಲ್ಲಿ ನಡೆಯುತ್ತಿವೆ.
ಎಲ್ಲ ಕೆರೆಗಳಲ್ಲಿ ವಾಕಿಂಗ್ ಪಾಥ್ ಹಾಗೂ ದ್ವೀಪಗಳು ಬರಲಿದ್ದು, ಕೆರೆಯ ಸುತ್ತಲೂ ಸ್ವದೇಶಿ ಮರ-ಗಿಡಗಳು ಕಂಗೊಳಿಸಲಿವೆ. ವೆಂಕಟೇಶಪುರ ಕೆರೆಯಲ್ಲಿ ಯಕ್ಷಕೊಳ, ಶಿಲ್ಪೋದ್ಯಾನ, ಬ್ರಹ್ಮಕಮಲ ವನಗಳು ನಿರ್ಮಾಣವಾಗಲಿವೆ. ಒಳಚರಂಡಿ ನೀರಿನಿಂದ ಮುಕ್ತವಾಗುವ ಎಲ್ಲ ಕೆರೆಗಳೂ ಪಿಕ್‌ನಿಕ್ ಸ್ಟಾಟ್ ಆಗಲಿವೆ. ಮುಂದಿನ ಮಳೆಗಾಲದಲ್ಲಿ ಮಳೆನೀರು ವ್ಯರ್ಥವಾಗದೆ, ಕೆರೆಗಳಲ್ಲಿ ಸಂಗ್ರಹವಾಗಲಿದ್ದು ಅಂತರ್ಜಲ ಹೆಚ್ಚಿಸಲಿದೆ. ಬೆಂಗಳೂರಿನ ವಾತಾವರಣವೂ ತಂಪಾಗಲಿದೆ.
ಯಾವ ಕೆರೆಗೆ ಎಷ್ಟು ವೆಚ್ಚ?
ಜಕ್ಕೂರು- ಸಂಪಿಗೆಹಳ್ಳಿ 2191 ಲಕ್ಷ
ರಾಚೇನಹಳ್ಳಿ 1900 ಲಕ್ಷ
ವೆಂಕಟೇಶಪುರ 47 ಲಕ್ಷ
ಉಲ್ಲಾಳು 449 ಲಕ್ಷ
ಮಲ್ಲತ್ತಹಳ್ಳಿ 2295 ಲಕ್ಷ
ಕೊಮ್ಮಘಟ್ಟ 644 ಲಕ್ಷ
ರಾಮಸಂದ್ರ 1340 ಲಕ್ಷ
ಕೊತ್ತನೂರು 360 ಲಕ್ಷ
ತಲಘಟ್ಟಪುರ 240 ಲಕ್ಷ
ಸೋಮಪುರ 385 ಲಕ್ಷ
ಕೋನಸಂದ್ರ 610 ಲಕ್ಷ

ಪಾರಂಪರಿಕ ತಾಣಗಳ ಪಟ್ಟಿಗೆ ಕೆರೆಗಳು
ಕರ್ನಾಟಕ 2020 ವಿಷನ್‌ನಲ್ಲಿ ಬೆಂಗಳೂರಿನ ಕೆರೆಗಳನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರಕ್ಕೆ ಸಲಹೆ ನೀಡಲಾಗುತ್ತದೆ ಎಂದು ವಿಷನ್‌ನ ಸಮಿತಿಯಲ್ಲಿರುವ ಬಿಡಿಎ ಕೆರೆಗಳ ಅಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ತಿಳಿಸಿದ್ದಾರೆ.
ಬಿಡಿಎ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಶುಕ್ರವಾರ ಪರಿವೀಕ್ಷಿಸಿದ ಅವರು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ 2008ರಲ್ಲಿ ರೂಪಿಸಿರುವ ನಿಯಮಗಳನ್ನು ಕೆರೆಗಳನ್ನು ಉಳಿಸಲು ರಾಜ್ಯ ಸರಕಾರ ಅಳವಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಇದಕ್ಕಾಗಿ, ಸೂಕ್ತ ಕಾನೂನು ರಚಿಸಲು, ರೂಪುರೇಷೆಯ ಕರಡು ಸಿದ್ಧಪಡಿಸುವ ಯೋಜನೆಯನ್ನು ವಿಷನ್ ಸಮಿತಿ ಹೊಂದಿದೆ. ಕೆರೆಗಳಿಗೆ ಹಾನಿ ಉಂಟುಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರಕಾರಕ್ಕೆ ಸಲಹೆ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಸುಮಾರು 70 ಜಾತಿಯ ಪಕ್ಷಿಗಳು ಬೆಂಗಳೂರಿಗೆ ವಲಸೆ ಬರುತ್ತಿದ್ದವು. 1985ರಲ್ಲಿ ನಡೆದ ಗಣತಿಯ ಪ್ರಕಾರ, ಕೆರೆಗಳಲ್ಲಿ ಪಕ್ಷಿಗಳಿಗೆ ಸೂಕ್ತ ತಾಣ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Monday, November 30, 2009

ಮಲ್ಲೇಶ್‌ಪಾಳ್ಯದಲ್ಲಿ ಕೆರೆ ಉಳಿಸಿ: ಅಭಿಯಾನ; ಜಾತ್ರೆ

ನಗರದಲ್ಲಿ ಹಿಂದೆ ಕೆರೆಗಳು ಧಾರ್ಮಿಕ ಆಚರಣೆಗಳ ಕೇಂದ್ರ ಬಿಂದುವಾಗಿದ್ದವು. ಇಂದು ಆಚರಣೆಗಳ ಸೊಗಡಿನಿಂದಲೇ ಕೆರೆಗಳನ್ನು ಸಂರಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ’ಕೆರೆ ಉಳಿಸಿಎಂದು ಸಾರಲು, ಊರಹಬ್ಬ, ಜಾತ್ರೆಯ ವಾತಾವರಣ ನಿಮಾರ್ಣ ವಾಗುತ್ತಿದೆ. ಮಲ್ಲೇಶಪಾಳ್ಯ ಇಂತಹ ಜಾಗೃತಿಹಬ್ಬದಲ್ಲಿ ಮಿಂದೆದ್ದಿತು.
ಬೆಂಗಳೂರಿನಲ್ಲಿ ಕೆರೆಗಳು ಅಭಿವೃದ್ಧಿ ಆಗುತ್ತಿರುವುದು ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿ ಮನಸ್ಸಿಗೂ ಆಹ್ಲಾದ ಉಂಟು ಮಾಡುತ್ತದೆ. ಇಂತಹ ಯೋಜನೆಗಳು ಅಲ್ಲಲ್ಲಿ ಆರಂಭವಾಗುತ್ತಿರುವುದು ಸಂತಸಕರ. ಅದರಲ್ಲೂ ಒಂದು ಕೆರೆ ಅಭಿವೃದ್ಧಿಗೆ ಊರ ಸಂಸ್ಕೃತಿಯನ್ನು ಸಾರುವ ಮೆರವಣಿಗೆ ಮಾಡುವುದು ಶ್ಲಾಘನೀಯ. ಇದು ಊರಹಬ್ಬದ ಆಚರಣೆ ಆಗಬೇಕು. ಪ್ರತಿಯೊಂದು ಕೆರೆಯಲ್ಲೂ ಪ್ರತಿ ತಿಂಗಳೂ ತೆಪ್ಪೋತ್ಸವ ನಡೆಯಬೇಕು. ಇದು ನಮ್ಮ ಸಂಸ್ಕೃತಿಯನ್ನು ಸಾರುವ ಉತ್ಸವಗಳು ಕೆರೆಗಳಲ್ಲೇ ಆಗಬೇಕು
ಸರ್ ಸಿ.ವಿ. ರಾಮನ್‌ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಗ್ಗದಾಸಪುರ ಮತ್ತು ಮಲ್ಲೇಶಪಾಳ್ಯ ಕೆರೆ ಅಭಿವೃದ್ಧಿಗಾಗಿ ಜಾಗೃತಿ ಜಾಥಾ ನಡೆಯಿತು. ಬೆಂಗಳೂರಿನಲ್ಲಿ ಬಿಬಿಎಂಪಿ ಮತ್ತು ಬಿಡಿಎ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿವೆ. ಆದರೆ ಕಗ್ಗದಾಸಪುರ-ಮಲ್ಲೇಶಪಾಳ್ಯ ಕೆರೆಯನ್ನು ಶಾಸಕರ ನಿಧಿಯಿಂದ ಈ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಇಲ್ಲಿನ ವಿಶೇಷ.
ಊರಹಬ್ಬದಂತೆ ಮೆರವಣಿಗೆ ಮೂಲಕ ಸಾಗಿ ಶಾಸಕ ಎಸ್. ರಘು ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದರು. ಜಾನಪದ ಕಲಾತಂಡಗಳ ನೃತ್ಯ, ಕೆರೆ ಉಳಿಸಿ ಎಂದು ಸಾರುವ ಸಾವಿರಾರು ಟಿಶರ್ಟ್ ಧಾರಿಗಳು ಈ ಮೆರವಣಿಗೆಯ ಹೈಲೈಟ್.
’ಕೆರೆಗಳು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ’ ಎಂಬ ಹಿರಿಯ ಮಾತನ್ನು ಅನುಸರಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ’ನಮ್ಮೂರ್ ಕೆರೆ’ ಲೇಖನ ಮಾಲಿಕೆಯಿಂದ ಕೆರೆಯ ನಿಜಸ್ಥಿತಿಯ ಅರಿವಾಯಿತು. ಕಗ್ಗದಾಸಪುರ ಕೆರೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಬಿಬಿಎಂಪಿ ಇದರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಇದು ಮುಂದಿನ ವರ್ಷ ಕಾರ್ಯಗತವಾಗುತ್ತದೆ. ಆದರೆ, ಈ ಕೆರೆಗೆ ಬೇಲಿ ಹಾಕಿ, ಹೂಳು ತೆಗೆಯಬೇಕಾದ್ದು ತುರ್ತುಸ್ಥಿತಿ. ಆದ್ದರಿಂದ ’ಶಾಸಕರ ನಿಧಿ’ಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್. ರಘು ತಿಳಿಸಿದರು.
ಕೆರೆಗೆ ಬೇಲಿ, ತಡೆಗೋಡೆ, ಹೂಳು ತೆಗೆಯುವುದು, ಮಾಲಿನ್ಯ ನಿಯಂತ್ರಣ, ವಾಕಿಂಗ್ ಟ್ರ್ಯಾಕ್ ಸೌಲಭ್ಯಗಳು ಮುಂದಿನ ಆರು ತಿಂಗಳಲ್ಲಿ ಸುಮಾರು 1.25 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಲಿದೆ. ಬಿಬಿಎಂಪಿ ವತಿಯಿಂದ ಮುಂದಿನ ಯೋಜನೆ ಕೈಗೊಂಡು ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸಲಾಗುತ್ತದೆ. ಕಗ್ಗದಾಸಪುರ ಕೆರೆಯ ದಡದಲ್ಲಿರುವ ಇತಿಹಾಸ ಪ್ರಸಿದ್ಧ ಜಲಕಂಠೇಶ್ವರ ದೇವಸ್ಥಾನದ ಅಭಿವೃದ್ಧಿಗೆ 38 ಲಕ್ಷ ಮೀಸಲಿರಿಸಲಾಗಿದೆ ಎಂದರು.
ಮಲ್ಲೇಶ್‌ಪಾಳ್ಯದಲ್ಲಿ ಬಸ್ ನಿಲ್ದಾಣ, ಈ ಬಸ್‌ನಿಲ್ದಾಣದಿಂದ ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ, ಐಟಿಪಿಎಲ್‌ಗೆ ವೋಲ್ವೊ ಬಸ್ ಸೌಲಭ್ಯ ಹಾಗೂ ಹೈಮಾಸ್ಟ್ ವಿದ್ಯುತ್‌ದೀಪಗಳಿಗೆ ಶಾಸಕ ಎಸ್. ರಘು ಚಾಲನೆ ನೀಡಿದರು. ಮಲ್ಲೇಶ್‌ಪಾಳ್ಯ ಮುಖ್ಯರಸ್ತೆ ಅಗಲೀಕರಣಗೊಂಡು, ಡಾಂಬರೀಕರಣವಾಗಿದ್ದು, ಇದನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಲಾಯಿತು.

Tuesday, November 10, 2009

ಬೆಂಗಳೂರಿನಲ್ಲಿ 183 ಕೆರೆ- ಇದು ಅಧಿಕೃತ...

123 ಕೆರೆಗಳಿಗೆ ಶುಕ್ರದೆಸೆ; ಭೂದಾಹಿಗಳಿಗೆ ಬೇಲಿ
ಉದ್ಯಾನನಗರಿಯಲ್ಲಿ ಗತವೈಭವದ ಇತಿಹಾಸ ಮೆಲುಕುಹಾಕುತ್ತಾ, ಬಡಕಲಾಗುತ್ತಿದ್ದ ಕೆರೆಗಳಿಗೆ ಕೊನೆಗೂ ಶುಕ್ರದೆಸೆ ಆವರಿಸಿಕೊಳ್ಳುತ್ತಿದೆ. ನಗರದಲ್ಲಿ ನೂರಾರು ಕೆರೆಗಳಿವೆಯೇ ಎಂಬ ಪ್ರಶ್ನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಉತ್ತರ ನೀಡಿದೆ. 183 ಕೆರೆಗಳು ಬಿಬಿಎಂಪಿ ಗಣನೆಗೆ ಬಂದಿದ್ದು, 123 ಕೆರೆಗಳಿಗೆ ಸದ್ಯವೇ ಬೇಲಿ ಬೀಳಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಗೆ ಚಾಲನೆ ದೊರಕಿರುವ 36 ಕೆರೆಗಳಲ್ಲದೆ, 123 ಕೆರೆಗಳ ಸರ್ವೆ ಕಾರ್ಯ ಆರಂಭವಾಗಿದೆ. ಅವುಗಳಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಿ, ಜನವರಿ ಅಂತ್ಯದೊಳಗೆ ಬೇಲಿ ಹಾಕಲಾಗುತ್ತದೆ. ಇದಕ್ಕಾಗಿ 40 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಐದಾರು ಕೆರೆಗಳಲ್ಲಿ ಬೇಲಿ ಕಾಮಗಾರಿಯೂ ಆರಂಭವಾಗಿದೆ.
ವಿಜಯ ಕರ್ನಾಟಕ ಬೆಂಗಳೂರಿನ ಕೆರೆಗಳ ದುಸ್ಥಿತಿಯನ್ನು 'ನಮ್ಮೂರ್ ಕೆರೆ' ಲೇಖನ ಮಾಲಿಕೆ ಮೂಲಕ ವಿವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆನಂತರ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ, ಬಿಡಿಎ ವಿಶೇಷ ಯೋಜನೆಗಳನ್ನು ರೂಪಿಸಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ 21 ಕೆರೆಗಳಿಗೆ ಕಾಯಕಲ್ಪ ನೀಡುವ ಕಾಮಗಾರಿಗೆ ಚಾಲನೆ ನೀಡಿದೆ. ಇದರಲ್ಲಿ ಪ್ರಮುಖವಾಗಿ ಒತ್ತುವರಿ ತೆರವುಗೊಳಿಸಿರುವುದು ಗಮನಾರ್ಹ. ಯಾವುದೇ ಒತ್ತುವರಿಯನ್ನು ಮನ್ನಾ ಮಾಡಬೇಡಿ ಎಂಬ ಬಿಬಿಎಂಪಿ ಆಯುಕ್ತರ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಆದರೆ, ಕೆಲವೆಡೆ ಶಾಸಕರ ಒತ್ತಾಸೆಗೆ ಕೆಲವು ಒತ್ತುವರಿ ತೆರವಾಗಿಲ್ಲ. ಅಭಿವೃದ್ಧಿಯ ಪಥದಲ್ಲಿರುವ ಕೆರೆಯಲ್ಲಿ ಹೂಳು ತೆಗೆದು, ಬೇಲಿ ಹಾಕುವ ಕಾರ್ಯ ಪ್ರಗತಿಯಲ್ಲಿದೆ.
ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಮುನ್ನ ಅಲ್ಲಿನ ಒತ್ತುವರಿಗೆ ಪ್ರಥಮವಾಗಿ ಅಂತ್ಯ ಹಾಡಲಾಗುತ್ತದೆ. ಇದರಿಂದ ಬಡಾವಣೆಗಳಿಗಾಗಿ ಕೆರೆಗಳನ್ನು ನುಂಗಿಕೊಂಡಿದ್ದ ಭೂದಾಹಿಗಳಿಗೆ ಹಿನ್ನಡೆ ಆಗಲಿದೆ. ಅಷ್ಟೇಅಲ್ಲ, ಹೊಸ ಒತ್ತುವರಿಗೂ ಕಡಿವಾಣ ಬೀಳಲಿದೆ.
ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕೆರೆಗಳ ಸಮೀಕ್ಷೆ ಕಾರ್ಯ ಆರಂಭಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ, ಲಾಲ್‌ಬಾಗ್, ಅಗರ, ಹೆಬ್ಬಾಳ, ಹಲಸೂರು, ಕೆಂಪಾಂಬುಧಿ, ಯಡಿಯೂರು, ಸ್ಯಾಂಕಿ, ಹೆಣ್ಣೂರು, ಕೆಂಗೇರಿ, ವಸಂತಪುರ, ಹಲಗೆವಡೇರಹಳ್ಳಿ ಕೆರೆ ಸೇರಿದಂತೆ 25 ಕೆರೆಗಳನ್ನು ಬಿಡಿಎ, ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿವೆ. ಬಿಬಿಎಂಪಿ 21 ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದೆ. ಬಿಡಿಎ ತನ್ನ ವ್ಯಾಪ್ತಿಯ 12 ಕೆರೆಗಳಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಅಮೃತಹಳ್ಳಿ ಹಾಗೂ ಜಕ್ಕೂರು ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಉಳಿದ 123 ಕೆರೆಗಳಿಗೆ ಬಿಬಿಎಂಪಿ, ಒತ್ತುವರಿ ತೆರವುಗೊಳಿಸಿ ಬೇಲಿ ಹಾಕುವ ಕಾರ್ಯವನ್ನು ಆರಂಭಿಸಿದೆ.
ನಗರದ 11 ವಿಧಾನಸಭೆ ವ್ಯಾಪ್ತಿಯಲ್ಲಿರುವ ಈ 123 ಕೆರೆಗಳ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಇದರಲ್ಲಿ 50 ಕೆರೆಗಳ ಸರ್ವೆ ಮುಗಿದಿದ್ದು, ಉಳಿದ್ದದ್ದು ಇನ್ನು ಒಂದು ತಿಂಗಳಲ್ಲಿ ಮುಗಿಯಲಿದೆ. ಡಿಸೆಂಬರ್ 2ನೇ ವಾರದಲ್ಲಿ ಈ ಎಲ್ಲ ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಜನವರಿ ಅಂತ್ಯಕ್ಕೆ ಈ ಕಾಮಗಾರಿ ಮುಗಿಯಲಿದೆ.
ಬೆಳ್ಳಂದೂರು, ಅಟ್ಟೂರು, ಕಲ್ಕೆರೆ, ಚಿನ್ನಪ್ಪನಹಳ್ಳಿ, ವರ್ತೂರು ಕೆರೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇಲ್ಲಿ ಬೇಲಿ ಹಾಕುವ ಕಾರ್ಯ ಆರಂಭವಾಗಿದ್ದು, ಅಂಗಳದಲ್ಲಿ ಸಸಿ ನೆಡಲಾಗುತ್ತಿದೆ. ಮಳೆ ನೀರು ಕೆರೆಗಳಿಗೆ ಹರಿಯಲು ರಾಜಾಕಾಲುವೆಗಳ ತೆರವುಗೊಳಿಸಲಾಗುತ್ತಿದೆ.
ಕೆರೆಗಳಲ್ಲಿ ಔಷಧ ಸಸ್ಯ
ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿರುವ ಕೆರೆಗಳ ಅಂಗಳದಲ್ಲಿ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ನಡೆಲಾಗುತ್ತಿದೆ. ಇದಕ್ಕಾಗಿ 16 ಸಸ್ಯಗಳನ್ನು ಗುರುತಿಸಲಾಗಿದೆ. ಅಮೃತಬಳ್ಳಿ, ಮಾವು, ಬಜೆ, ಆಡುಸೊಗೆ, ಲಾವಂಚಾ, ಭೃಂಗರಾಜ, ದಾಸವಾಳ, ಚಕ್ರಮುಖಿ, ಬಿಳೀ ಲಕ್ಕಿ ಸಸ್ಯಗಳು ಇದರಲ್ಲಿ ಸೇರಿವೆ.
ಬೆಂಗಳೂರಿನಲ್ಲಿ ಎಂಬತ್ತೇ ಕೆರೆಗಳಿರುವುದು ಎಂದು ಕೈಕಟ್ಟಿ ಕುಳಿತಿದ್ದ ಅಧಿಕಾರಿಗಳು, ಇದೀಗ ಎಚ್ಚೆತ್ತುಕೊಂಡಿದ್ದಾರೆ. ಅದಕ್ಕೇ 183 ಕೆರೆಗಳು ಕಾಣಿಸಿಕೊಂಡಿವೆಯಲ್ಲದೆ, ಲೆಕ್ಕಕ್ಕೂ ಸಿಕ್ಕಿವೆ. ಕಂದಾಯ ಇಲಾಖೆಯ ಕಡತಗಳನ್ನು ಪರಿಶೀಲಿಸಿ ಮತ್ತಷ್ಟು ಶೋಧಕಾರ್ಯ ಆದದ್ದೇ ಆದರೆ, ಇನ್ನೂ ನೂರಾರು ಕೆರೆಗಳು ಸಿಗುತ್ತವೆ. ಅವುಗಳೆಲ್ಲಕ್ಕೂ ಬೇಲಿ ಬಿದ್ದರೆ ಭೂದಾಹಿಗಳು
ವಿಧಾನಸಭೆ ಕ್ಷೇತ್ರವಾರು ಬೇಲಿ ಕಾಣಲಿರುವ ಕೆರೆಗಳು
ಮಹದೇವಪುರ-26, ಬೆಂಗಳೂರು ದಕ್ಷಿಣ-24, ಯಶವಂತಪುರ-19, ಕೆ.ಆರ್. ಪುರ-15, ಬ್ಯಾಟರಾಯನಪುರ-10, ಬೊಮ್ಮನಹಳ್ಳಿ-7, ರಾಜರಾಜೇಶ್ವರಿನಗರ-7, ಯಲಹಂಕ-5, ಸರ್ವಜ್ಞನಗರ-4, ದಾಸರಹಳ್ಳಿ-4, ಸಿವಿ ರಾಮನ್‌ನಗರ-2

Tuesday, October 27, 2009

ಕೆಂಪಾಂಬುಧಿ ಕೆರೆ ಏರಿ ಮೇಲೆ...

ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಏರಿ ಮೇಲೆ ಮೊನ್ನೆ ಶುಕ್ರವಾರ ಅಂದರೆ, ಅಕ್ಟೋಬರ್ 23ರಂದು ವಿಶಿಷ್ಟ ಕಾರ್ಯಕ್ರಮ ಆಯೋಜನೆಯಾಗಿತ್ತು. "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಎಂಬ ಶೀರ್ಷಿಕೆಯಡಿ ಕೆರೆಯ ಸಂರಕ್ಷಣೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು. ಜತೆಗೆ ಸ್ಥಳೀಯ ಶಾಸಕರಿಂದ ಕೆರೆ ಅಭಿವೃದ್ಧಿಗೆ ಏನು ಮಾಡುತ್ತೀರಿ ಎಂದು ಕೇಳುವ ಪ್ರಶ್ನೆಯ ವೇದಿಕೆಯನ್ನೂ ಸೃಷ್ಟಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಸ್ನೇಹ ಚೈತನ್ಯ ಸಾಮಾಜಿಕ ಟ್ರಸ್ಟ್ ಹಾಗೂ ಪ್ರಗತಿ ಪರ ಮಹಿಳಾ ಸಮಾಜ ಆಯೋಜಿಸಿದ್ದರಿಂದ ಮಹಿಳೆಯರೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೆರೆ ಸಂರಕ್ಷಣೆಗೆ ಮಹಿಳೆಯರೇ ಬೇಕು. ಅವರಲ್ಲಿರುವ ಕಾಳಜಿ ಹಾಗೂ ಮನೆಯಲ್ಲಿ ನೀರು ಬರಲಿಲ್ಲವೆಂದರೆ ಅವರೇ ಪಾಡು ಪಡಬೇಕಾದ್ದು ಅಲ್ಲವೆ?
ಕೆಂಪೇಗೌಡ ಮನೆತನದವರು ಕಟ್ಟಿಸಿದ ಕೆರೆ ಕೆಂಪಾಂಬುಧಿ ಕೆರೆ. ಪಾಳೇಗಾರರ ವಂಶಸ್ಥರಾದ ಕೆಂಪಮ್ಮನವರ ಹೆಸರು ಈ ಕೆರೆಗಿತ್ತು. ಕೆಂಪಮ್ಮ ಕೆರೆ ಕಾಲ ಕಳೆದಂತೆ ಕೆಂಪಾಂಬುಧಿ ಆಯಿತು. ಕುಡಿಯುವ ನೀರು ಪೂರೈಸುತ್ತಿದ ಕೆರೆ ಇಂದು, ವಿಷಾನಿಲ ಸೂಸುತ್ತಿದೆ. ಕೆರೆಯ ಅಂಗಳದಲ್ಲಿ ಓಡಾಡುವುದೂ ಕಷ್ಟಕರವಾಗಿದೆ. 1983ರಿಂದಲೂ ಈ ಕೆರೆಯ ಅಭಿವೃದ್ಧಿ ಆಗುತ್ತಿದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಅಂದರೆ, ಎಷ್ಟು ಕೋಟಿ ರೂ. ಕೆರೆಗೆ ಚೆಲ್ಲಿದ್ದಾರೆ ಯೋಚಿಸಿ! ಆದರೂ ಈ ಕೆರೆ ಅಭಿವೃದ್ಧಿ ಆಗಿಲ್ಲ. ಈಗ ಮತ್ತೆ ೮ ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಂದರೆ ನಮ್ಮ ಹಣ ಹೇಗೆ ವ್ಯಯ ಆಗುತ್ತಿದೆ ನೋಡಿ. ಇದನ್ನು ನಾವು ಎದ್ದು ನಿಂತು ಕೇಳಲಿಲ್ಲವೆಂದರೆ ಅದೆಲ್ಲದರ ಹೊರೆ ನಮ್ಮ ಮೇಲೇ ಬೀಳುತ್ತದೆ.
ಕುಡಿಯುವ ನೀರು ಕೊಡಿ ಎಂದು ಜನಪ್ರತಿನಿಧಿಗಳ ಮೇಲೆ ಒತ್ತಾಯ ಮಾಡುತ್ತೇವೆ. ಆದರೆ, ಸ್ಥಳೀಯ ವಾತಾವರಣ ಹೇಗಿದೆ? ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಾವೇರಿ ನೀರು ಸಾಲುತ್ತಿಲ್ಲ ಎಂದರೆ, ಬೋರ್‌ವೆಲ್ ಹಾಕಿಬಿಡಿ. ಟ್ಯಾಂಕ್ ಕಟ್ಟಿಸಿ, ಅಲ್ಲಿಂದ ನೀರು ತೆಗೆದುಕೊಳ್ಳುತ್ತೇವೆ ಎಂಬುದು ಸಲಹಾತ್ಮಕ ಒತ್ತಾಯವಾಗಿರುತ್ತದೆ. ಆದರೆ, ಸುತ್ತಮುತ್ತಲಿನ ಪರಿಸರ ಉತ್ತಮವಾಗಿಲ್ಲದಿದ್ದರೆ ಬೋರ್‌ವೆಲ್‌ನಲ್ಲಿ ಒಳ್ಳೆ ನೀರು ಎಲ್ಲಿಂದ ಬರುತ್ತೆ? ಅಂತರ್ಜಲ ಮೂಲವಾಗಿರುವ ಕೆರೆಗಳಲ್ಲಿ ತ್ಯಾಜ್ಯ, ರಾಸಾಯನಿಕ ಅಂಶ, ಕೊಳಕೇ ಇದ್ದರೆ, ಅದೇ ಬೋರ್‌ವೆಲ್‌ನಲ್ಲೂ ಬರುತ್ತದೆ. ಇದು ಎಲ್ಲರ ಗಮನದಲ್ಲಿರಲಿ.
ಅಂದಹಾಗೆ, ಈ ಕಾರ್ಯಕ್ರಮ ಮಧ್ಯಾಹ್ನ 3.3-0ಕ್ಕೆ ಆಯೋಜನೆಯಾಗಿತ್ತು. ಸಮಾರಂಭಕ್ಕೆ ಸಚಿವ ಸುರೇಶ್ ಕುಮಾರ್ ಬರಲಿಲ್ಲ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ತನಿಖೆಗೆ ಕೇಂದ್ರದ ತಂಡ ಆಗಮಿಸಿದ್ದರಿಂದ ಅದರಲ್ಲಿ ಪಾಲ್ಗೊಳ್ಳುವ ಕಾರಣದಿಂದ ಸಚಿವರು ಬರಲಿಲ್ಲವಂತೆ. ಅದರಿಂದ ಕಾರ್ಯಕ್ರಮ ಆರಂಭ ತಡವಾಯಿತು. ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಕೂಡ ತಡವಾಗಿಯೇ ಬಂದರು. ಆದರೆ, ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಸರಿಯಾದ ಸಮಯಕ್ಕೆ ಹಾಜರಿದ್ದರು.
ಕೆರೆ ಸಂರಕ್ಷಣೆಗೆ ಅಲ್ಲಲ್ಲಿ ಆಯಾ ಸ್ಥಳೀಯ ಸಂಘ-ಸಂಸ್ಥೆಗಳು ಟೊಂಕಕಟ್ಟಿ ನಿಂತರೆ, ಏನು ಅಭಿವೃದ್ಧಿ ಆಗುತ್ತಿದೆ ಎಂದು ಪ್ರಶ್ನಿಸಿದರೆ ಬೇಕಾಬಿಟ್ಟಿಗೆ ತಡೆಬೀಳುತ್ತದೆ. ಇಂತಹ ಪ್ರಯತ್ನ ಅಲ್ಲಲ್ಲಿ ಆಗಲಿ.
ವಾಹನಗಳಿಗೇ ಹೆಚ್ಚು ಕಾವೇರಿ ನೀರು ಬಳಕೆ
ನೂರಾರು ಕಿಲೋಮೀಟರ್ ದೂರದಿಂದ ಬೆಂಗಳೂರಿಗೆ ತರುತ್ತಿರುವ ಕಾವೇರಿ ನೀರು ಕುಡಿಯುವುದಕ್ಕಿಂತ ಹೆಚ್ಚಾಗಿ ಇತರೆ ಬಳಕೆಗೆ ಅರ್ಧಕ್ಕಿಂತ ಹೆಚ್ಚು ಬಳಕೆ ಆಗುತ್ತಿದೆಯೇ?
ಹೌದು, ಎನ್ನುತ್ತಾರೆ ಬಸವನಗುಡಿ ಶಾಸಕ ರವಿಸುಬ್ರಮಣ್ಯ. ಬೆಂಗಳೂರು ನಗರದಲ್ಲಿ ಶೇ.೫೦ಕ್ಕೂ ಹೆಚ್ಚು ಕಾವೇರಿ ನೀರು ವಾಹನಗಳನ್ನು ತೊಳೆಯುವುದಕ್ಕೆ ವ್ಯಯವಾಗುತ್ತಿದೆ. ಈ ಬಳಕೆಯನ್ನು ಕಡಿಮೆ ಮಾಡದಿದ್ದರೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ ಎಂಬ ಆತಂಕವೂ ಶಾಸಕರದ್ದಾಗಿದೆ.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಹಾಗೂ ಪ್ರಗತಿಪರ ಮಹಿಳಾ ಸಮಾಜದ ಸಹಯೋಗದಲ್ಲಿ ಬಸವನಗುಡಿಯ ಕೆಂಪಾಂಬುಧಿ ಕೆರೆ ಏರಿಯಲ್ಲಿ "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.
ಕೆಂಪಾಂಬುಧಿ ಕೆರೆಯನ್ನು 1983ರಿಂದಲೂ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೂ ಕೆರೆ ಶುಚಿಯಾಗಿಲ್ಲ. ಇದೀಗ ಕೆರೆಯ ಸಮಗ್ರ ಅಭಿವೃದ್ಧಿಗೆ ೮ ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ನವೆಂಬರ್ ಎರಡನೇ ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಆರು ತಿಂಗಳಲ್ಲಿ ಕೆರೆ ಅಭಿವೃದ್ಧಿ ಆಗುವುದಲ್ಲದೆ, ನಾಡಪ್ರಭು ಕೆಂಪೇಗೌಡರ ಕಾಲದ ಚಿತ್ರಣ ನೀಡುವ ಸ್ಮಾರಕ ಭವನವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ನಗರಕ್ಕೆ ಮಾದರಿ ಕೆರೆಯಾಗಿ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಚನ್ನಮ್ಮರಾಗಿ ಕೆರೆ ಉಳಿಸಿ
ಕಿತ್ತೂರು ರಾಣಿ ಚನ್ನಮ್ಮ ರೀತಿಯಲ್ಲಿ ಧೈರ್ಯವಂತರಾಗಿ ನನ್ನ ಜತೆ ಹೋರಾಡಿ. ನೂರು ಚನ್ನಮ್ಮಂದಿರು ನನ್ನೊಂದಿಗೆ ಹೋರಾಡಿದರೆ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳನ್ನೂ ಉಳಿಸುತ್ತೇನೆ ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಆಶ್ವಾಸನೆ ನೀಡಿದರು.
ನಿಮ್ಮ ಸಮೀಪವಿರುವ ಕೆರೆಗೆ ಯಾರಾದರೂ ಮಣ್ಣು ತುಂಬಿದರೆ, ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರೆ ಅವರಿಗೆ ಪೊರಕೆ ಸೇವೆ ಮಾಡಿ. ಕೆರೆ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ. ಯೋಜನೆ ಬಗ್ಗೆ ನಿಗಾವಹಿಸಿ, ಲೆಕ್ಕ ಪರಿಶೋಧಿಸಿ. ಇದರಿಂದ ಕೆರೆ ಅಭಿವೃದ್ಧಿ ಆಗುತ್ತದೆ ಎಂದು ಕರೆ ನೀಡಿದರು.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಮಹಾಪೋಷಕ ಸಿದ್ದೇಗೌಡ, ವಿಜಯ ಕರ್ನಾಟಕದ ಹಿರಿಯ ವರದಿಗಾರ ಆರ್. ಮಂಜುನಾಥ್, ನಿಸರ್ಗ ಪ್ರಸ್ಥಾನದ ಅಧ್ಯಕ್ಷ ಚಂದ್ರಶೇಖರ ಬಾಳೆ, ಗ್ಲೋಬಲ್ ಟೆಕ್ನಾಲಜಿಯ ಪ್ರೊ. ವೈ. ಲಿಂಗರಾಜು, ಪರಿಸರವಾದಿ ಶಿವಮಲ್ಲು, ಟ್ರಸ್ಟ್ ಅಧ್ಯಕ್ಷೆ ಶೋಭಾಗೌಡ ಹಾಗೂ ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷೆ ಕಮಲ ಬಾಳೆ ಹಾಜರಿದ್ದರು.

Tuesday, September 29, 2009

ಹೆಸರಘಟ್ಟ ಜಲಾಶಯದಲ್ಲಿ 7 ಅಡಿ ನೀರು

ನಂದಿ ಬೆಟ್ಟದಿಂದ ತಾಯಿ ಅರ್ಕಾವತಿ ಹರಿಯಲು ಇನ್ನೂ ಅನುವು ಮಾಡಿಕೊಟ್ಟಿಲ್ಲ. ನದಿ ಪುನಶ್ಚೇತನದ ಮಾತು, ಪಾದಯಾತ್ರೆ ಮಾತ್ರ ಆಗಿದೆ. ಒತ್ತುವರಿ ತೆರವಿಗೆ ಒಂದಿಷ್ಟೂ ಮನೋನಿರ್ಧಾರವಾಗಿದೆ. ಅಷ್ಟರಲ್ಲೇ, ವರುಣ ಕೃಪೆ ತೋರಿದ್ದಾನೆ. 10 ವರ್ಷಗಳ ನಂತರ ಹೆಸರಘಟ್ಟ ಜಲಾಶಯಕ್ಕೆ ಹೆಚ್ಚಿನ ನೀರು ಹರಿಸಿದ್ದಾನೆ. ನೀರೆಲ್ಲ ಹೆಸರಘಟ್ಟ ಸುತ್ತಮುತ್ತಲಿಂದ ಬಂದದ್ದು. ನಂದಿಯಲ್ಲಿನ ಮಳೆ ಕಾಲುವೆ ಮೂಲಕ ನೇರವಾಗಿ ಹರಿದಿದ್ದರೆ ಹೆಸರಘಟ್ಟ ಇನ್ನೆಷ್ಟು ನೀರು ತುಂಬಿಕೊಳ್ಳುತ್ತಿತ್ತು? ಅಂದರೆ, ಈಗ ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲೇ ಹೆಸರಘಟ್ಟಕ್ಕೆ ನೀರು ಹರಿಸಬಹುದೆಂಬುದು ಸಾಬೀತಾಗಿದೆ ಅಲ್ಲವೆ? ಇನ್ನೇಕೆ ತಡ? ಕಾರ್ಯಾರಂಭವಾಗಲಿ....

  • ಬೆಂಗಳೂರಿಗೆ ಪ್ರಥಮ ಬಾರಿಗೆ ಸಂಸ್ಕರಿತ ನೀರು ಪೂರೈಸಿದ ಹೆಸರಘಟ್ಟ ಜಲಾಶಯ ಹತ್ತು ವರ್ಷಗಳ ನಂತರ 7 ಅಡಿ ನೀರಿನ ಸೌಭಾಗ್ಯ ಕಂಡಿದೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯೇ ಇದಕ್ಕೆ ಪ್ರಮುಖ ಆಸರೆಯಾಗಿದ್ದು, ಕಳೆದ7ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದೆ.

ಹೆಸರಘಟ್ಟಕ್ಕೆ ನೀರು ಬರಬೇಕೆಂದರೆ ಬ್ಯಾತ ಹಾಗೂ ಕಾಕೋಳು ಕೆರೆಗಳು ಕೋಡಿ ಆಗಬೇಕು. ಇದರಲ್ಲಿ ಬ್ಯಾತ ಕೆರೆ ಕೋಡಿ ಹರಿಯುತ್ತಿದ್ದು, ಹೆಚ್ಚಿನ ನೀರು ಈ ಮೂಲಕವೇ ಹೆಸರಘಟ್ಟಕ್ಕೆ ಹರಿಯುತ್ತಿದೆ. 20 ದಿನಗಳ ಹಿಂದಷ್ಟೇ ಗಾಲ್ಫ್ ಮೈದಾನದಂತಾಗಿದ್ದ ಹೆಸರಘಟ್ಟ, ಇಂದು ಹತ್ತು ವರ್ಷಗಳ ಹಿಂದಿನ ವೈಭವಕ್ಕೆ ಮರಳಿದೆ. ಜಲಾಶಯದ ಏರಿಯಿಂದ ನೋಡಿದ ದೂರದಷ್ಟೂ ನೀರು ಕಾಣುತ್ತಿದೆ. 1998ರಲ್ಲಿ 8 ಅಡಿ ನೀರು ಬಂದಿತ್ತು. ಅದಾದ ಮೇಲೆ 3-4 ಅಡಿಯಷ್ಟು ನೀರಿನ ಸಂಗ್ರಹ ಮಾತ್ರ ಇಲ್ಲಿ ದಾಖಲಾಗುತ್ತಿತ್ತು.
ಹೆಸರಘಟ್ಟದಲ್ಲಿರುವ ನೀರಿನ ಮಾಪನದಲ್ಲಿ 49 ಅಡಿ ಎಂದು ಸೂಚಿಸುತ್ತಿದೆ. ಆದರೆ, ಗಣನೆಗೆ ತೆಗೆದುಕೊಳ್ಳುವುದು ೪೨ ಅಡಿ ಯಿಂದ. ಉಳಿದದ್ದು ಹೂಳು ತುಂಬಿದೆ. ಹೆಸರಘಟ್ಟ ಜಲಾಶಯದಲ್ಲಿ ಹೂಳು ಏಕೆ ತೆಗೆಯುತ್ತೀರಿ? ನೀರು ಬರೋಲ್ಲ ಎಂದು ಕೊಂಕು ನುಡಿದಿದ್ದವರಿಗೆ ವರುಣ ಸೂಕ್ತ ಉತ್ತರ ನೀಡಿದ್ದಾನೆ. ಅದಕ್ಕೇ ದಿನವೂ ನೂರಾರು ಜನರು ಹೆಸರಘಟ್ಟಕ್ಕೆ ಬಂದು ನೀರಿನ ಸಂಗ್ರಹದ ಸೊಬಗು ಸವಿಯುತ್ತಿದ್ದಾರೆ.
ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೂ ಈ ವರ್ಷ ಹೆಚ್ಚಿನ ನೀರು ಹರಿದುಬರುತ್ತಿದೆ. ಹಿಂದೆ ಕೇವಲ ಕಲ್ಮಶಯುಕ್ತ ನೀರು ಮಾತ್ರ ತಿಪ್ಪಗೊಂಡನಹಳ್ಳಿ ಸೇರುತ್ತಿತ್ತು. ಈ ಬಾರಿ ಸ್ವಚ್ಛ ಮಳೆ ನೀರು ಹರಿದುಬರುತ್ತಿರುವುದು ಜಲಮಂಡಳಿ ಅಧಿಕಾರಿಗಳಲ್ಲಿ ಹರ್ಷ ತಂದಿದೆ. ಕಳೆದ ಐದಾರು ವರ್ಷಗಳಲ್ಲಿ ಇಷ್ಟು ನೀರಿನ ಹರಿವು ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿಗೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅರ್ಕಾವತಿ ನದಿ ಹರಿದರೆ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯ ತುಂಬುತ್ತವೆ. ನಂದಿಬೆಟ್ಟದಿಂದ ಕಾಲುವೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ಒತ್ತುವರಿ ತೆರವುಗೊಳಿಸಿ, ನದಿ ಪುನಶ್ಚೇತನವಾದರೆ ಹೆಸರಘಟ್ಟಕ್ಕೆ ನೀರು ತುಂಬುತ್ತದೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿತ್ತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ಪಾದಯಾತ್ರೆಯನ್ನೂ ಮಾಡಿದ್ದರು. ಸರಕಾರ ಪುನಶ್ಚೇತನಕ್ಕೆ ಸಮಿತಿ ರಚಿಸುವ ಭರವಸೆಯನ್ನೂ ನೀಡಿದೆ. ಈ ಪುನಶ್ಚೇತನದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಇನ್ನು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ್ದರೆ ಇನ್ನೆಷ್ಟು ನೀರು ಬಂದಿರುತ್ತಿತ್ತು? ಈ ಬಗ್ಗೆ ಆಲೋಚಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಮಳೆ: ಒಳಭಾಗದಲ್ಲಿ ಕಿರಿಕಿರಿ; ಹೊರಭಾಗದಲ್ಲಿ ನಲಿನಲಿ

ಭಾರಿ ಮಳೆ ಬಂದಾಗ ಮಹಾನಗರ ತತ್ತರಿಸುತ್ತದೆ. ಒಳಭಾಗದಲ್ಲಿರುವ ಜನರ ಶಾಪಕ್ಕೂ ಗುರಿಯಾಗುತ್ತದೆ. ಏಕೆಂದರೆ, ಇಲ್ಲಿ ಬರೀ ನೀರಲ್ಲ, ಕೊಳಕೂ ಮನೆ ಒಳಗೆ ನುಗ್ಗುತ್ತದೆ. ಆದರೆ, ಹೊರವಲಯ ಹಾಗಲ್ಲ. ಮಳೆಯಲ್ಲಿ ಮಿಂದೇಳಲು ಬಯಸುತ್ತದೆ. ಅದಕ್ಕೇ, ಉದ್ಯಾನನಗರಿಯ ಅಂಚಿನಲ್ಲಿ ನದಿಯೊಂದು ದಶಕದ ನಂತರ ಸ್ವಚ್ಛವಾಗಿ ಹರಿಯುತ್ತಿದೆ.
ಸೋಮವಾರದಿಂದ ಬೆಂಗಳೂರು ಭಾರಿ ಮಳೆ ಸುರಿಯುತ್ತಿದೆ. ನೂರಾರು ಮಿಲಿಮೀಟರ್‌ನಷ್ಟು ಮಳೆಯಾಗಿದೆ. ನಗರದಲ್ಲಿ ನೂರಾರು ಕೆರೆಗಳಿದ್ದರೂ ಈ ನೀರನ್ನು ತಮ್ಮ ಒಡಲಿಗೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿವೆ. ರಾಜಕಾಲುವೆ ಹಾಗೂ ಮಳೆ ನೀರು ಕೆರೆಗೆ ಹರಿಯುವ ವ್ಯವಸ್ಥೆ ಇಲ್ಲ. ಆದ್ದರಿಂದಲೇ ನಗರ ಹಲವು ಭಾಗದಲ್ಲಿ ಒಳಚರಂಡಿ ನೀರು ಮನೆಯೊಳಗೆ ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೀಗಿದ್ದರೂ, ವೃಷಭಾವತಿ ನದಿ ಮಾತ್ರ ಅಲ್ಪ ಕೊಳೆ ಕಳೆದುಕೊಂಡಿದೆ.
ನಗರದಲ್ಲಿರುವ ಕೆರೆಗಳಿಗೆ ಮಳೆ ನೀರು ಹರಿಸುವ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಬೆಂಗಳೂರು ನಗರ ಮಳೆಗೆ ತತ್ತರಿಸುವಂತಾಗಿರುವುದಕ್ಕೆ ಪ್ರಮುಖ ಕಾರಣ. ಮಡಿವಾಳ, ಅಗರ, ಬೇಗೂರು, ದೊರೆಕೆರೆ, ಸಾರಕ್ಕಿ, ಪುಟ್ಟೇನಹಳ್ಳಿಯಂತಹ ದೊಡ್ಡ ಕೆರೆಗಳು ಇಂದಿಗೂ ಕೋಡಿ ಹೋಗಿಲ್ಲ. ಏಕೆಂದರೆ, ಸಾಮಾನ್ಯ ಹರಿವೇ ಹೊರಹೋಗುತ್ತಿದೆ. ಅಂದರೆ, ಒಳಚರಂಡಿ ನೀರು ಬಿಟ್ಟರೆ ಮಳೆ ನೀರು ಇಲ್ಲಿಗೆ ಹರಿಯುತ್ತಿಲ್ಲ. ನಗರದಲ್ಲಿ ಹಲವು ಕೆರೆಗಳಿಗೆ ಮಳೆ ನೀರು ಹರಿಯಲು ಮಾರ್ಗವೇ ಇಲ್ಲ. ಕೆಲವು ಕೆರೆಗಳಿಗೆ ನೀರು ಹರಿದರೂ, ಅಲ್ಲಿ ನೀರಿನ ಸಂಗ್ರಹಕ್ಕೆ ಸ್ಥಳವೇ ಇಲ್ಲ. ಹೂಳು ಯಥೇಚ್ಛವಾಗಿ ತುಂಬಿದೆ.
ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮಳೆ ನೀರು ಹರಿಯಲು ರಾಜಕಾಲುವೆಗಳನ್ನು ಸೂಕ್ತವಾಗಿ ನಿರ್ವಹಿಸಲಾಗಿದೆ. ಕೆರೆಗೆ ನೀರು ಹರಿಸಿ, ಪ್ರವಾಹ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಬೇಸಿಗೆ ಕಾಲದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿತ್ತು. ಆದರೆ, ಕಳೆದ ವಾರದ ನಾಲ್ಕು ದಿನ ಮಳೆ ಇದನ್ನು ಅಲ್ಲಗಳೆದಿದೆ. ಬಿಬಿಎಂಪಿ ಯಾವುದೇ ಮುನ್ನೆಚ್ಚರಿಕೆ ಕಾರ್ಯ ಕೈಗೊಂಡಿಲ್ಲ, ಕೆರೆಯಲ್ಲಿ ಹೂಳು ಎತ್ತಿಲ್ಲ ಎಂಬುದು ಸಾಬೀತಾಗಿದೆ. ಕೆರೆಗಳ ಮಹತ್ವ ಬಿಬಿಎಂಪಿ ಅರಿವಿಗೆ ಇನ್ನಾದರೂ ಬಂದೀತೇ?
ಹೊರವಲಯದಲ್ಲಿ ಖುಷಿ
ನಗರದ ಒಳಗೆ ಮಳೆ ಏಕೆ ಬರುತ್ತೋ ಎಂದು ಜನ ಒಲ್ಲದ ಮನಸ್ಸಿನಿಂದ ಶಾಪ ಹಾಕುತ್ತಿದ್ದರೆ, ಹೊರಭಾಗದಲ್ಲಿ ಮಳೆ ಇನ್ನಷ್ಟು ಬಂದಿದ್ದರೆ ನಮ್ಮ ಕೆರೆ ತುಂಬುತ್ತಿತ್ತು. ಬೋರ್‌ವೆಲ್‌ನಲ್ಲಿ ನೀರು ಹೆಚ್ಚಾಗುತ್ತಿತ್ತು. ನಮ್ಮ ಜಲಾಶಯ ತುಂಬುತ್ತಿತ್ತು ಎಂಬ ಮಾತು ಕೇಳಿಬರುತ್ತಿದೆ. ಮಾಕಳಿಯಲ್ಲಿ ಅರ್ಕಾವತಿ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮಕ್ಕಳು, ಹಿರಿಯರು ಸಂತಸಪಡುತ್ತಿದ್ದಾರೆ.
ಹೆಸರಘಟ್ಟ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದಂತೆ ಅಲ್ಲಿಂದ, ತಿಪ್ಪಗೊಂಡನಹಳ್ಳಿಯವರೆಗೆ ಅರ್ಕಾವತಿ ನದಿ ಹರಿವು ಕೂಡ ಹೆಚ್ಚಾಗಿದೆ. ತರಬನಹಳ್ಳಿ ಸಮೀಪವಿರುವ ರೈಲ್ವೆ ಸೇತುವೆ ಕೆಳಗೆ ಅರ್ಕಾವತಿ ಹೊಳೆ ಮೈದುಂಬಿ ಹರಿಯುತ್ತಿದೆ. ೧೫ ದಿನಗಳ ಹಿಂದ ವಾಹನ ಓಡಾಡುವ ರಸ್ತೆಯಾಗಿದ್ದ ಈ ಪ್ರದೇಶದಲ್ಲಿ ಈಗ ನೀರಿನ ಸಾಮ್ರಾಜ್ಯ.
ಮಾಕಳಿಯ ಬಳಿಯಿರುವ ಭೀರೇಶ್ವರ ಸ್ವಾಮಿ ದೇವಾಲಯದ ತಪ್ಪಲಿನಲ್ಲಿ ಹೊಳೆಯ ಹರಿವು ವೃದ್ಧಿಯಾಗಿದೆ. ಶಾಲಾ ಮಕ್ಕಳು ಈ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮೋಜು ಅನುಭವಿಸುತ್ತಿದ್ದಾರೆ. ಯಾವಾಗಲೂ, ಕಲ್ಮಶವನ್ನು ಮೈಗಂಟಿಕೊಂಡು ಸಣ್ಣದಾಗಿ ಹರಿಯುತ್ತಿದ್ದ ಅರ್ಕಾವತಿ ನದಿ, ಈಗ ಇಲ್ಲಿ ಮೀನುಗಾರರಿಗೆ ಕೆಲಸ ನೀಡಿದ್ದಾಳೆ. ಅಲ್ಲಲ್ಲಿ ಸಣ್ಣ ಬಲೆಗಳನ್ನು ಹಾಕಿ ಮೀನು ಹಿಡಿಯುವ ಕಾರ್ಯ ನಡೆಯುತ್ತಿದೆ.
ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೂ ಅರ್ಕಾವತಿ ನದಿ ಹರಿವು ಹತ್ತು ವರ್ಷಗಳ ನಂತರ ಉತ್ತಮವಾಗಿದೆ. ಸೊಂಡೆಕೊಪ್ಪ, ವರ್ತೂರು ಬಳಿಯ ಹೊಳೆಯ ಹರಿವು ಕಂಡು ಜನ ಸಂತಸಗೊಂಡಿದ್ದಾರೆ. ಅಬ್ಬಾ, ನಮ್ಮ ನದಿ ಮತ್ತೊಮ್ಮೆ ಹರಿಯುತ್ತಿದೆಯಲ್ಲ ಎಂದು ಹಿರಿಯರು ಸಮಾಧಾನ ಪಡುತ್ತಿದ್ದಾರೆ. ಯುವಕರಿಗೆ ಉಲ್ಲಾಸ ಮೈತುಂಬಿದ್ದರೆ, ಮಕ್ಕಳು ಕಣ್ಣರಳಿಸಿಕೊಂಡು ಹೊಳೆಯನ್ನು ನೋಡುತ್ತಿದ್ದಾರೆ. ನೀರು ಹರಿಯುತ್ತಿರುವ ಎಲ್ಲ ಕಡೆಯೂ ಜನ ಅಚ್ಚರಿಯಿಂದ ದೃಷ್ಟಿ ಹರಿಸುತ್ತಿದ್ದಾರೆ.

Monday, September 21, 2009

ದೊರೆ ಕೊಳಕು ಸಾಮ್ರಾಜ್ಯಕ್ಕೆ ತೆರೆ; ಹೈಟೆಕ್ ಹೊಳೆ

ಬೆಂಗಳೂರು ದಕ್ಷಿಣದ ಉತ್ತರಹಳ್ಳಿಯಲ್ಲಿರುವ ದೊರೆ ಕೆರೆಯ 29 ಎಕರೆ ಸಾಮ್ರಾಜ್ಯ ಕಲ್ಮಶದಿಂದ ಮುಕ್ತವಾಗಿದೆ. ಒಳಚರಂಡಿ ನೀರಿಗೆ ತನ್ನ ಸೆರಗಿನಲ್ಲಿ ರೂಪಿಸಿರುವ ಕಾಲುವೆಯಲ್ಲಿ ದಾರಿ ಮಾಡಿಕೊಟ್ಟು, ಹೈಟೆಕ್ ರೂಪಪಡೆದುಕೊಂಡು, ಪ್ರಕಾಶ ಬೀರಲು ಸಜ್ಜಾಗುತ್ತಿದೆ.
ದೊರೆಕೆರೆಗೆ ಒಳಚರಂಡಿ ನೀರು ಈಗ ಹೋಗುತ್ತಿಲ್ಲ. ಕೆರೆಯನ್ನು ಸಂಪೂರ್ಣ ಒಣಗಿಸಲಾಗಿದೆ. ಮಳೆ ನೀರು ಮಾತ್ರ ಕೆರೆಗೆ ಹರಿಯುತ್ತಿದೆ. ಒಳಚರಂಡಿ ನೀರಿಗೆ ಕೆರೆಯ ಅಂಚಿನಲ್ಲಿ ಕಾಲುವೆ ನಿರ್ಮಿಸಿ ಅಲ್ಲಿಂದ ಹರಿದು ಹೋಗುವಂತೆ ಮಾಡಲಾಗಿದೆ. ಕೆರೆಯ ಒಳಗೆ ಎರಡು ದ್ವೀಪಗಳನ್ನು ಸೃಷ್ಟಿಸಲಾಗಿದೆ. ಅಷ್ಟೇಅಲ್ಲ, ಕೆರೆಯ ಅಂಗಳಕ್ಕೆ ಬೇಲಿ ಹಾಕಲಾಗಿದೆ. ಆದರೆ, ಮೂಲ ಸ್ವರೂಪ ಅಥವಾ ವ್ಯಾಪ್ತಿಗೆ ಬೇಲಿ ಹಾಕಿಲ್ಲ ಎಂಬುದು ಅಚ್ಚರಿ ಸಂಗತಿ. ಇಷ್ಟಾದರೂ, ಕೆರೆಗೊಂದು ಬೇಲಿ, ಕಲ್ಮಶಮುಕ್ತ ವಾತಾವರಣ ರೂಪಿಸಲಾಗಿರುವುದು ಸಮಾಧಾನಕರ. ದಾಖಲೆಯಲ್ಲಿರುವ ದೊರೆ ಕೆರೆಯ ವಿಸ್ತೀರ್ಣ 31 ಎಕರೆ 32.88 ಗುಂಟೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 1.20 ಕೋಟಿ ರೂ. ವೆಚ್ಚದಲ್ಲಿ ದೊರೆ ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಕೆರೆಯನ್ನು ಒಣಗಿಸಿ, ಅದರಲ್ಲಿನ ಕಲ್ಮಶವನ್ನು ಹೊರಹಾಕಲಾಗಿದೆ. ಅದರೊಳಗೆ ಎರಡು ದ್ವೀಪ ನಿರ್ಮಾಣವಾಗಿದೆ. ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕೆರೆಗೆ ಮಳೆನೀರು ಮಾತ್ರ ಒಳಬರುವ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದಲ್ಲದೆ, ಬೋಟಿಂಗ್ ವ್ಯವಸ್ಥೆ, ಶೌಚಾಲಯ, ನೀರು ಸಂಸ್ಕರಣ ಘಟಕ, ವಾಚ್‌ಮೆನ್ ಶೆಡ್, ಧ್ಯಾನ ಕೇಂದ್ರ ಒಳಗೊಂಡಂತೆ ಹೈಟೆಕ್ ಮಾದರಿಯಲ್ಲಿ (ನೀಲನಕ್ಷೆ ನೋಡಿ) ದೊರೆಕೆರೆ ಅಭಿವೃದ್ಧಿಯಾಗಲಿದೆ.
ದೊರೆಕೆರೆಯನ್ನು ನಗರಕ್ಕೆ ಮಾದರಿ ಕೆರೆಯನ್ನಾಗಿ ಪರಿವರ್ತಿಸಲಾಗುವುದು. ಈಗಾಗಲೇ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಾರು ತಿಂಗಳಲ್ಲಿ ಕೆರೆಗೆ ಹೊಸ ಸ್ವರೂಪ ನೀಡಲಾಗುತ್ತದೆ. ದೊರೆ ಕೆರೆ ಈ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಎಲ್ಲ ರೀತಿಯ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗೆ ಹೈಟೆಕ್ ಸ್ವರೂಪ ನೀಡಲಾಗುತ್ತದೆ. ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ದ್ವೀಪ, ಬೋಟಿಂಗ್ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 14 ದೊಡ್ಡ ಕೆರೆಗಳಿವೆ. ಅವುಗಳೆಲ್ಲವನ್ನೂ ಉನ್ನತ ದರ್ಜೆಯಲ್ಲಿಯೇ ಅಭಿವೃದ್ಧಿ ಮಾಡಲಾಗುತ್ತದೆ. ಬಿಡಿಎ, ಬಿಬಿಎಂಪಿ ವತಿಯಿಂದ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಥಮ ಹಂತದ ಕಾಮಗಾರಿಯಲ್ಲಿ ಕೆರೆಗಳೂ ಕಲ್ಮಶಂiಮುಕ್ತವಾಗುವಂತೆ ಮಾಡಲಾಗುತ್ತದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಈ ಎಲ್ಲ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆಗಳೆಂದರೆ ಹೀಗಿರಬೇಕು ಎಂದು ಪರಿಸರವಾದಿಗಳು ಸೇರಿದಂತೆ ಸ್ಥಳೀಯ ಜನರು ಹೆಮ್ಮೆ ಪಟ್ಟುಕೊಂಡು ಹೇಳಬೇಕು. ಆ ರೀತಿ ಈ ಕೆರೆಗಳು ಅಭಿವೃದ್ಧಿ ಆಗಲಿವೆ.
ಕೊತ್ತನೂರು, ಚುಂಚಘಟ್ಟ ಕೆರೆ ಕಲ್ಮಶ ಮುಕ್ತ
ಕೊತ್ತನೂರು ಹಾಗೂ ಚುಂಚಘಟ್ಟ ಕೆರೆಗೆ ಸುತ್ತಮುತ್ತಲ ಪ್ರದೇಶದ ಒಳಚರಂಡಿ ನೀರು ಸಂಪೂರ್ಣವಾಗಿ ಹರಿಯುತ್ತಿದೆ. ಈ ಕಲ್ಮಶವನ್ನು ಕೆರೆಯ ಹೊರಭಾಗದಿಂದ ಹರಿಯುವಂತೆ ಮಾಡಿ, ಅದಕ್ಕಾಗಿ ವಿಶೇಷ ರೀತಿಯ ಕಾಮಗಾರಿಯನ್ನು ಕೈಗೊಳ್ಳಲು ಬೆಂಗಳೂರು ಒಳಚರಂಡಿ ಮಂಡಳಿ ಅಣಿಯಾಗಿದೆ. ಈ ಎರಡೂ ಕೆರೆಗಳ ಅಂಚಿನಿಂದ ಪೈಪ್‌ಲೈನ್ ಮೂಲಕ ಒಳಚರಂಡಿ ನೀರು ಹರಿಯುವಂತೆ ಮಾಡಲಾಗುತ್ತದೆ. ಒಳಚರಂಡಿ ನೀರು ಕೆರೆಗೆ ಹೋಗದಂತೆ ತಡೆ ಹಾಕಲಾಗುತ್ತದೆ.
ಈ ಎರಡೂ ಕೆರೆಗಳನ್ನು ಕಲ್ಮಶಮುಕ್ತವನ್ನಾಗಿಸುವ ಯೋಜನೆಗೆ ಇನ್ನು ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ. ಈಗಾಗಲೇ ಯೋಜನೆ ರಚನೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದು ಪೂರ್ಣಗೊಂಡ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಮೂರು ಅಥವಾ ನಾಲ್ಕು ತಿಂಗಳಲ್ಲೆ ಚುಂಚಘಟ್ಟ ಹಾಗೂ ಕೊತ್ತನೂರು ಕೆರೆಗಳು ಕಲ್ಮಶದಿಂದ ಮುಕ್ತವಾಗುತ್ತದೆ.
ಕೊತ್ತನೂರು ಕೆರೆಯನ್ನು ಬಿಡಿಎ ಅಭಿವೃದ್ಧಿಪಡಿಸಲು 3.6 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದೆ. ಈ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲವಾದರೂ, ಇದನ್ನು ಕೂಡಲೇ ಆರಂಭಿಸಲು ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಇನ್ನೊಂದು ವರ್ಷದಲ್ಲಿ ಕೊತ್ತನೂರು ಕೆರೆ ಅಭಿವೃದ್ಧಿ ಆಗಲಿದೆ.
ಚುಂಚಘಟ್ಟ ಕೆರೆಯನ್ನು ಬಿಬಿಎಂಪಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆ ಸಂಪೂರ್ಣ ಕಲ್ಮಶಗೊಂಡಿರುವುದರಿಂದ ಏರಿಯ ಕೆಳಭಾಗದಲ್ಲಿ ಕೊಳವೆ ಬಾವಿಯಲ್ಲಿ ಕಲ್ಮಶ ನೀರು ಬರುತ್ತಿದೆ. ಆದ್ದರಿಂದ, ಮೊದಲ ಹಂತದಲ್ಲಿ ಒಳಚರಂಡಿ ನೀರಿಗೆ ತಡೆ ಹಾಕಲಾಗುತ್ತದೆ. ನಂತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎನ್ನುತ್ತಾರೆ ಶಾಸಕ ಎಂ. ಕೃಷ್ಣಪ್ಪ.
ಗೊಟ್ಟಿಗೆರೆ ಊರ ಬಂಡೆ ಮೇಲೆ ಜಲಸಂಗ್ರಹಗಾರ
ಗೊಟ್ಟಿಗೆರೆ ಕೆರೆ ನೈಸ್ ರಸ್ತೆಯ ಕಾಮಗಾರಿಯಿಂದ ಪ್ರಚಲಿತವಾಗಿದೆ. ಈ ಕೆರೆಯ ಮೇಲೆ ನೈಸ್ ರಸ್ತೆ ಸಾಗದಂತೆ ಸ್ಥಳೀಯರು ಹಾಗೂ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಹೈಕೋರ್ಟ್ ಕೂಡ ಸಾಕಷ್ಟು ಸಹಕರಿಸುತ್ತಿದೆ. ಇದೇ ಗೊಟ್ಟಿಗೆರೆಯ ಊರಬಂಡೆ, ಇದೀಗ ಸುದ್ದಿಯಲ್ಲಿದೆ. ನೂರಾರು ಬಡಾವಣೆಗಳಿಗೆ ನೀರು ಕಾವೇರಿ ನೀರು ಕೊಡುವ ಜಲಾಗಾರಕ್ಕೆ ಈ ಊರಬಂಡೆ ಆಶ್ರಯ ನೀಡಲು ಅಣಿಯಾಗುತ್ತಿದೆ.
ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ನಾಲ್ಕನೇ ಹಂತದ 2ನೇ ಘಟ್ಟಕ್ಕೆ ಜಲಸಂಗ್ರಹಗಾರಕ್ಕಾಗಿ ಪ್ರದೇಶವನ್ನು ಹುಡುಕಲಾಗುತ್ತಿತ್ತು. 950 ಮೀಟರ್ ಎತ್ತರವಿರುವ, ಗೊಟ್ಟಿಗೆರೆ ಊರಬಂಡೆ ಪ್ರದೇಶವನ್ನು ಇದೀಗ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಊರಬಂಡೆ ಜಾಗದಲ್ಲಿ ತೋಟಗಾರಿಕೆ ಇಲಾಖೆ ಈಗಾಗಲೇ ಉದ್ಯಾನ ನಿರ್ಮಿಸುವ ಕಾಮಗಾರಿ ಕೈಗೊಂಡಿದೆ. ಇದೀಗ ಜಲಸಂಗ್ರಹಗಾರಕ್ಕೆ 6 ಎಕರೆ ಪ್ರದೇಶವನ್ನು ನೀಡುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಊರಬಂಡೆ ಪಾತ್ರವಾಗುತ್ತದೆ.
ನಗರದ ಅತ್ಯಂತ ಎತ್ತರ ಪ್ರದೇಶವಾಗಿರುವ ಈ ಊರಬಂಡೆಯಲ್ಲಿ ಜಲಸಂಗ್ರಹಗಾರ ನಿರ್ಮಿಸಿದರೆ, ಪಂಪಿಂಗ್‌ನ ಅಗತ್ಯವಿಲ್ಲದೆ ಗುರುತ್ವಾಕರ್ಷಣೆಯಿಂದಲೇ ನೀರನ್ನು ಪೂರೈಸಬಹುದು. 22 ದಶಲಕ್ಷ ಲೀಟರ್ ನೀರು ಪೂರೈಸಬಹುದು. ಆದ್ದರಿಂದ, ಈ ಪ್ರದೇಶವನ್ನು ಜಲಮಂಡಳಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಕಾಮಗಾರಿಗೆ ಜಲಮಂಡಳಿ ಖಾತೆ ಸಚಿವ ಕಟ್ಟಾ ಸುಬ್ರಹ್ಮಣನಾಯ್ಡು ಅವರೇ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
ಪರಿಸರ ರಕ್ಷಣೆಯಲ್ಲಿ ಉದ್ಯಾನವನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 50 ಉದ್ಯಾನವನಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ 15 ಉದ್ಯಾನಗಳನ್ನು ಇನ್ನು 15 ದಿನಗಳಲ್ಲಿ ಉದ್ಘಾಟಿಸಲಾಗುತ್ತದೆ. ಕೆಲವು ಉದ್ಯಾನಗಳಲ್ಲಿ ಸಂಗೀತದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

Wednesday, September 16, 2009

ಪುನಶ್ಚೇತನ ಸಮಿತಿ ಸಾಲದು; ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಆಡಳಿತಾರೂಢ ಪಕ್ಷ ಶಾಸಕರು ಹಾಗೂ ಸಚಿವರು ಪಾದಯಾತ್ರೆ ಮಾಡಿ, ಯಶಸ್ಸೂ ಸಾಧಿಸಿದ್ದಾರೆ. ಅಧಿಕಾರದಲ್ಲಿರುವವರು ಕ್ರಮ ಕೈಗೊಳ್ಳಬಹುದಲ್ಲವೇ? ಪಾದಯಾತ್ರೆ ಏಕೆ? ಎಂದು ಹತ್ತಾರು ದನಿಗಳು ಎದ್ದಿವೆ. ನದಿಪಾತ್ರದಲ್ಲಿನ ಒತ್ತುವರಿ ತೆರವಿಗೆ ಜನಜಾಗೃತಿಗಾಗಿ ಈ ಪಾದಯಾತ್ರೆ ಎಂಬುದು ಸ್ಪಷ್ಟ ಉತ್ತರ. ಇದಾದ ಮೇಲೆ ಮುಂದೇನು? ಎಂಬುದು ಈಗಿನ ಪ್ರಶ್ನೆ.ಅರ್ಕಾವತಿ ನದಿ ಸಂರಕ್ಷಣಾ ವೇದಿಕೆ ಹೆಸರಿನಡಿ ಶಾಸಕಸ್.ಆರ್. ವಿಶ್ವನಾಥ್ ಪಕ್ಷಾತೀತವಾಗಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಎಲ್ಲ ಪಕ್ಷದ ಶಾಸಕರನ್ನೂ ಆಹ್ವಾನಿಸಲಾಗಿತ್ತು. ಪರಿಸರವಾದಿಗಳು ಹಾಗೂ ಹಲವು ಸಂಘಟನೆಗಳು ಇದರಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಿದರು. ಪ್ರತಿಪಕ್ಷಗಳ ಶಾಸಕರು ಬಿಜೆಪಿ ಶಾಸಕರೊಂದಿಗೆ ನಾವೇಕೆ ಗುರುತಿಸಿಕೊಳ್ಳಬೇಕೆಂದು ಸುಮ್ಮನಾದರು.
ನಂದಿಬೆಟ್ಟದಿಂದ ದೊಡ್ಡಬಳ್ಳಾಪುರದವರೆಗೆ ಪ್ರಥಮ ಹಂತದಲ್ಲೇ ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕಿದೆ. ನಂತರ ಹಂತದಲ್ಲಿ ಒತ್ತುವರಿ ಸೇರಿಕೊಂಡಂತೆ ಮಾಲಿನ್ಯರಹಿತ ನದಿಪಾತ್ರ ಸೃಷ್ಟಿಸಬೇಕಿದೆ. ಕೈಗಾರಿಕೆಗಳ ಯಾವುದೇ ಒತ್ತಡಕ್ಕೆ ಮಣಿಯದೆ, ಕಾರ್ಖಾನೆಗಳನ್ನು ನದಿಪಾತ್ರದ ಒಂದು ಕಿಮೀ ದೂರದಿಂದ ಹೊರಗುಳಿಸಬೇಕಿದೆ. ಇದಕ್ಕೆಲ್ಲ ಸಾರ್ವಜನಿಕರು ಹಾಗೂ ಸ್ಥಳೀಯರ ಬೆಂಬಲವೂ ದೊರೆತಿದೆ. ಒತ್ತುವರಿ ತೆಗೆಸಿರಿ, ಇಲ್ಲದಿದ್ದರೆ ನೀರು ಹರಿಯುವುದಿಲ್ಲ. ಇದಕ್ಕಾಗಿ ನಾವೇನು ಮಾಡಬೇಕು ಹೇಳಿ? ನಮ್ಮ ಸಂಪೂರ್ಣ ಸಹಕಾರ ನಿಮಗಿದೆ ಎಂದು ನದಿಪಾತ್ರದ ಮುಖಂಡರು ಹಾಗೂ ನಾಗರಿಕರು ಪಾದಯಾತ್ರಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ಅರ್ಕಾವತಿ ನದಿ ಪಾತ್ರದಲ್ಲಿರುವ ನಾಗರಿಕರು ನದಿ ಹರಿಸುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಆದರೆ, ಇವತ್ತು ಬಂದಿದ್ದಾರೆ ನಾಳೆ ಇದಕ್ಕೆ ಚಾಲನೆ ನೀಡುತ್ತಾರೆಯೇ? ಎಂಬ ಅನುಮಾನವೂ ಅವರಲ್ಲಿದೆ. ಇದನ್ನು ನಿವಾರಿಸಬೇಕೆಂದರೆ, ಪಾದಯಾತ್ರೆಯ ಜನಜಾಗೃತಿ ಉದ್ದೇಶ ಈಡೇರಬೇಕಿದೆ. ಭೇದಭಾವವಿಲ್ಲದೆ ನದಿ ಪುನಶ್ಚೇತನಕ್ಕೆ ಸಕಲ ಕ್ರಮವನ್ನೂ ಕೈಗೊಳ್ಳಬೇಕಿದೆ. ಸರಕಾರ ಇದಕ್ಕೆ ಸ್ಪಂದಿಸಿ ಅರ್ಕಾವತಿ ನದಿ ಪುನಶ್ಚೇತನ ಸಮಿತಿಯನ್ನು ರಚಿಸುವ ಭರವಸೆಯನ್ನೂ ನೀಡಿದೆ.
ನದಿ ಪುನಶ್ಚೇತನಕ್ಕೆ ಪಾದಯಾತ್ರೆ, ಸಮಿತಿ ರಚನೆ ಅಷ್ಟೇ ಸಾಲದು. ಇಷ್ಟಾಯಿತಲ್ಲ ಎಂದು ವಿರಮಿಸಿದರೆ, ಇದೊಂದು ಗಿಮಿಕ್ ಎಂದೆನಿಸಿಬಿಡುತ್ತದೆ. ನದಿ ಪುನಶ್ಚೇತನಕ್ಕೆ ಪ್ರಾಮಾಣಿಕ ಕೆಲಸ ಆಗಬೇಕೆಂದರೆ, ರಚಿಸುವ ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಲೇಬೇಕು. ಎಲ್ಲ ಇಲಾಖೆಗಳಿಂದಲೂ ಕೆಲಸ ಮಾಡಿಸುವ ಅಧಿಕಾರ ಈ ಸಮಿತಿಗೆ ಇರಬೇಕು. ಅರ್ಕಾವತಿ ನದಿ ಪಾತ್ರ ಸಂರಕ್ಷಣೆಗೆ ೨೦೦೩ರಲ್ಲಿ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ತರುವ ಜವಾಬ್ದಾರಿಯೂ ಈ ಸಮಿತಿಗೆ ಇರಬೇಕು.
ನದಿ ಪುನಶ್ಚೇತನಕ್ಕೆ ವಿಧಾನಸೌಧದಲ್ಲಿ ಗಟ್ಟಿಯಾಗಿ ಕುಳಿತು ಯೋಜನೆ ರೂಪಿಸಬೇಕಿತ್ತು. ಇದನ್ನು ಬಿಟ್ಟು ಸರಕಾರದ ಸಚಿವರು, ಶಾಸಕರು ಪಾದಯಾತ್ರೆ ಮಾಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಆಪಾದಿಸಿದ್ದಾರೆ. ಪಾದಯಾತ್ರೆ-ಸಮಿತಿ ರಚನೆ ಭರವಸೆ ಹಂತದಲ್ಲಿಯೇ ಈ ರೀತಿಯ ಆಪಾದನೆ ಆರಂಭವಾಗಿದೆ ಎಂದರೆ, ಮುಂದಿನ ದಿನಗಳಲ್ಲಿ ಇನ್ಯಾವ ರೀತಿ ಆಪಾದನೆಗಳು ಎದುರಾಗಬಹುದು ಎಂಬುದನ್ನು ಅರಿತು, ಸರಕಾರ ಹೆಜ್ಜೆ ಇರಿಸಬೇಕಿದೆ.
ಅರ್ಕಾವತಿ ನದಿ ಪುನಶ್ಚೇತನ ಕಾರ್ಯಕ್ಕೆ ಪಕ್ಷಾತೀತ ಸಹಕಾರವೂ ಅಗತ್ಯ. ಪ್ರತಿಪಕ್ಷ ಕೇವಲ ಆಪಾದನೆಯನ್ನಷ್ಟೇ ಮಾಡಬಾರದು. ಒತ್ತುವರಿ ಮಾಡಿಕೊಂಡಿರುವವರಲ್ಲಿ ಎಲ್ಲ ಪಕ್ಷದ ಮುಖಂಡರೂ ಇದ್ದಾರೆ. ಅವರೆಲ್ಲನ್ನೂ ತೆರವುಗೊಳಿಸಬೇಕು. ಇದಕ್ಕೊಂದು ಸ್ಪಷ್ಟ ನೀತಿ, ನಿರ್ದಾಕ್ಷಿಣ್ಯ ಕ್ರಮ ಅತ್ಯಗತ್ಯ. ಈ ಕಾರ್ಯ ಪ್ರಾಮಾಣಿಕವಾಗಿ ಆಗದಿದ್ದರೆ, ಪಾದಯಾತ್ರೆಯ ಉದ್ದೇಶ ಈಡೇರುವುದಿಲ್ಲ. ಇತಿಹಾಸದಲ್ಲಿ ಒಂದು ಕಾರ್ಯಕ್ರಮವಾಗಿ ಮಾತ್ರ ಉಳಿಯುತ್ತದೆ. ಹಾಗಾಗದಿರಲಿ, ಅರ್ಕಾವತಿ ಹರಿಯಲಿ, ರೈತರು, ಪಟ್ಟಣವಾಸಿಗಳಿಗೆ ನೀರು ಲಭಿಸಲಿ.

Tuesday, September 8, 2009

ತಿಪ್ಪಗೊಂಡನಹಳ್ಳಿಯಲ್ಲಿ ಅಂತ್ಯ; ಪುನಶ್ಚೇತನಕ್ಕೆ ಮುನ್ನುಡಿ

ಅರ್ಕಾವತಿ ಪಾದಯಾತ್ರೆ-ದಿನ-4: ಸೆಪ್ಟೆಂಬರ್ 6, 2009
ಸರ್ ಎಂ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ನಿರ್ಮಾಣವಾಗುತ್ತಿದ್ದಾಗ ಸಾವಿರಾರು ಜನರು ಕಾಮಗಾರಿಯಲ್ಲಿ ತೊಡಗಿದ್ದರು. ಅದಾದ ಮೇಲೆ, ಸುಮಾರು 76 ವರ್ಷಗಳ ನಂತರ, ಈ ಜಲಾಶಯದಲ್ಲಿ ಸಾವಿರಾರು ಜನರು ಒಂದೇ ಬಾರಿಗೆ ಇದ್ದದ್ದು ಸೆಪ್ಟೆಂಬರ್ 6, 2009ರ ಭಾನುವಾರ. ಅಂದು ಅರ್ಕಾವತಿ ನದಿ ನೀರಿಗೆ ಅಡ್ಡಲಾಗಿ ಕಾಮಗಾರಿ ನಡೆಯುತ್ತಿದ್ದು, ಇಂದು ಆ ನದಿಗೆ ನೀರು ಹರಿಸಲು ಗಂಗಾಪೂಜೆ ನೆರವೇರಿಸಲು ಜನಪ್ರತಿನಿಧಿಗಳೊಂದಿಗೆ ನಾಗರಿಕರು ಸೇರಿದ್ದರು.
ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರಿಗೆ ಅರ್ಕಾವತಿ ಸಂರಕ್ಷಣಾ ವೇದಿಕೆ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದ ನಾಲ್ಕು ದಿನದ 106 ಕಿಲೋಮೀಟರ್‌ಗಳ ಪಾದಯಾತ್ರೆ ತಿಪ್ಪಗೊಂಡನಹಳ್ಳಿಯಲ್ಲಿ ಭಾನವಾರ ಮುಕ್ತಾಯವಾಯಿತು. ಪಾದಯಾತ್ರೆಯ ಅಂತಿಮಸ್ತರದಲ್ಲಿ ಸಂಸದ ಅನಂತಕುಮಾರ್, ಸಾರಿಗೆ ಸಚಿವ ಆರ್. ಅಶೋಕ್, ಶಾಸಕರಾದ ಎಸ್. ಮುನಿರಾಜು, ರವಿಸುಬ್ರಹ್ಮಣ್ಯ, ವಿಜಯಕುಮಾರ್ ಅವರೊಂದಿಗೆ ಎರಡು ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯನ್ನು ಸೇರಿಕೊಂಡು, ಗಂಗಾಪೂಜೆಗೆ ಸಾಕ್ಷೀಭೂತರಾದರು.
ಅಂತಿಮ ದಿನದ ಪಾದಯಾತ್ರೆ ಸೊಂಡೆಕೊಪ್ಪದಿಂದ ಭಾನುವಾರ ಬೆಳಗ್ಗೆ ಆರಂಭವಾಯಿತು. ಮಲ್ಲಸಂದ್ರದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ತಿಪ್ಪಗೊಂಡನಹಳ್ಳಿಯವರೆಗಿನ ಪ್ರತಿ ಹಳ್ಳಿಯಲ್ಲಿಯೂ ಹಸಿರತೋರಣದ ಸ್ವಾಗತದೊಂದಿಗೆ ಜನಜಾಗೃತಿ ಸಭೆಗಳು ನಡೆದವು. ಹಾಗೆಯೇ, 200ರ ಆಸುಪಾಸಿನಲ್ಲಿದ್ದ ಪಾದಯಾತ್ರಿಗಳ ಗಣನೆ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಗೆ ವಿಸ್ತರಿಸುತ್ತಾ ಹೋಯಿತು. ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದ ಪಾದಯಾತ್ರೆಗೆ ಚೋಳನಾಯಕಹಳ್ಳಿ ಸಮೀಪ ಸಂಸದ ಅನಂತಕುಮಾರ್, ಸಚಿವ ಆರ್. ಅಶೋಕ್, ಶಾಸಕರಾದ ರವಿಸುಬ್ರಹ್ಮಣ್ಯ, ವಿಜಯ್‌ಕುಮಾರ್ ಸೇರಿಕೊಂಡು, ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಹೆಜ್ಜೆ ಹಾಕಿದರು.
ಜಲಾಶಯದ ಹಿಂಭಾಗಕ್ಕೆ ಸಾಗಿದ ಪಾದಯಾತ್ರೆ, ಗಣೇಶನಂತೆ ಆಕಾರ ಹೊಂದಿರುವ ಕಲ್ಲಿಗೆ ವಿಘ್ನೇಶನ ಪೂಜೆ ನೆರವೇರಿಸಿತು. ಅಲ್ಲಿ ನಡೆದ ಗಂಗಾಪೂಜೆಯಲ್ಲಿ ಎಲ್ಲರೂ ಭಾಗವಹಿಸಿದರು. ಅರ್ಕಾವತಿ ಉಗಮಸ್ಥಾನದಿಂದ ಪಾದಯಾತ್ರೆಯಲ್ಲಿ ರಥದ ಮೂಲಕ ತಂದಿದ್ದ ಪಂಚಕುಂಭಗಳಲ್ಲಿನ ನೀರನ್ನು ವಿಶ್ವನಾಥ್ ಹಾಗೂ ಮುನಿರಾಜು ದಂಪತಿ ಮತ್ತು ಅನಂತಕುಮಾರ್, ಅಶೋಕ್ ಅವರು ಜಲಾಶಯಕ್ಕೆ ಸಮರ್ಪಿಸಿದರು. ನಂದಿಬೆಟ್ಟದಲ್ಲಿ ಉಗಮಿಸುವ ಅರ್ಕಾವತಿ ಇಲ್ಲಿಗೆ ಸರಾಗವಾಗಿ ಹರಿಯಲಿ ಎಂದು ಪ್ರಾರ್ಥಿಸಿದರು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಚಿವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಮಿತಿ ರಚಿಸಬೇಕೆಂಬ ಮನವಿ ಪತ್ರವನ್ನು ಪಾದಯಾತ್ರಿಗಳ ಪರವಾಗಿ ವಿಶ್ವನಾಥ್ ಹಾಗೂ ಮುನಿರಾಜು ಅವರು ಸಂಸದ ಅನಂತಕುಮಾರ್, ಸಚಿವ ಅಶೋಕ್ ಅವರಿಗೆ ನೀಡಿದರು. ಮುಖ್ಯಮಂತ್ರಿಯವರಿಗೆ ಈ ಮನವಿ ಪತ್ರ ತಲುಪಿಸಲು ಕೋರಲಾಯಿತು. ಅರ್ಕಾವತಿ ಪುನಶ್ಚೇತನ ಸಮಿತಿಗೆ ಎಲ್ಲ ಇಲಾಖೆಗಳೂ ನಿರ್ದೇಶನ ನೀಡುವ, ಅವರಿಂದ ಕೆಲಸ ಮಾಡುವ ಅಧಿಕಾರ ಸೇರಿದಂತೆ ಸರ್ವ ಅಧಿಕಾರ ನೀಡಬೇಕು ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.
ಇಂತಹ ಇತಿಹಾಸ ರಚಿಸಿದ ಪಾದಯಾತ್ರೆಯ ಉದ್ದೇಶವನ್ನು ಈಡೇರಿಸುವ ಸ್ಪಷ್ಟ ಸೂಚನೆಯನ್ನೂ ರಾಜ್ಯ ಸರಕಾರ ನೀಡಿದೆ. ಸಚಿವರನ್ನು ಒಳಗೊಂಡ ಉನ್ನತಾಧಿಕಾರಿಗಳ ಸಮಿತಿ ರಚನೆಯನ್ನು ಮಾಡುವುದಾಗಿ ಹೇಳಿದೆ. ಇದು ಹೇಳಿಕೆಗೆ ಮಾತ್ರ ಸೀಮಿತವಾಗದೆ, ನದಿಯೊಂದನ್ನು ಪುನಶ್ಚೇತನಗೊಳಿಸಿ ಇತಿಹಾಸ ರಚನೆಯ ಕೆಲಸ ರಾಜ್ಯ ಸರಕಾರದಿಂದ ಪ್ರಾಮಾಣಿಕವಾಗಿ ಆಗಬೇಕಿದೆ. ಆಗ, ಇಡೀ ರಾಷ್ಟ್ರಕ್ಕೆ ಅರ್ಕಾವತಿ ನದಿ ಪುನಶ್ಚೇತನ ಮಾದರಿಯಾಗುತ್ತದೆ.

ಏನೆಂದರು?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರಾಷ್ಟ್ರೀಯ ಜಲನೀತಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಪೂರ್ಣವಾಗಿ ಸಮ್ಮತವಾಗುತ್ತದೆ. ನದಿ ಪುನಶ್ಚೇತನದ ಅವರ ಕನಸನ್ನು ರಾಜ್ಯಮಟ್ಟದಲ್ಲಿ ಪೂರ್ಣಗೊಳಿಸುವ ಕಾರ್ಯ ಅರ್ಕಾವತಿಯಿಂದಲೇ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಹರಿಯುತ್ತಿದ್ದ ನದಿಯನ್ನು ನಾವು ಬತ್ತಿಸಿದ್ದೇವೆ. ಎಲ್ಲವನ್ನೂ ಹೊಂದಿರುವ ಈ ಮಹಾನಗರಿಗೆ ನದಿ ದಂಡೆಯ ವೈಭವವೂ ಲಭಿಸಿದರೆ ಉದ್ಯಾನನಗರಿಯ ಸೊಬಗು ಮತ್ತಷ್ಟು ವೃದ್ಧಿಸುತ್ತದೆ. ಅಷ್ಟೇಅಲ್ಲ, ಕೃಷಿ ಚಟುವಟಿಕೆಗೆ ಬೆನ್ನೆಲುಬಾಗುವ ಅರ್ಕಾವತಿ ನದಿ ಪುನಶ್ಚೇತನದ ಕನಸನ್ನು ರಾಜ್ಯ ಸರಕಾರ ನನಸು ಮಾಡುತ್ತದೆ. ಕೇಂದ್ರದ ಪ್ರತಿನಿಧಿಗಳು ಇದರಲ್ಲಿರುತ್ತಾರೆ. -ಅನಂತಕುಮಾರ್, ಸಂಸದ
ಮುಂದಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗಲಿದೆ. ಇದನ್ನು ಅರಿತಿರುವ ಸರಕಾರ ಮುಂದಾಲೋಚನೆ ದೃಷ್ಟಿಯಿಂದ ಅರ್ಕಾವತಿ ನದಿ ಪುನಶ್ಚೇತನವನ್ನು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಮತ್ತೊಂದು ವೃಷಭಾವತಿ ಆಗಲು ಬಿಡುವುದಿಲ್ಲ. ಅರ್ಕಾವತಿ ನದಿಯನ್ನು ಮಲೀನ ಮಾಡುತ್ತಿರುವವರು, ಒತ್ತುವರಿ ಮಾಡಿಕೊಂಡಿರುವರು, ನದಿ ಪಾತ್ರದಲ್ಲಿ ಕೈಗಾರಿಕೆ, ಗಣಿಗಾರಿಕೆ, ಮರಳುಸಾಗಣೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಮರಳು ನೀತಿಯಲ್ಲಿ ಇವೆಲ್ಲವನ್ನು ಸೇರಿಸಿಕೊಳ್ಳಲು ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿಗಳು ನಗರಕ್ಕೆ ಬಂದ ಕೂಡಲೇ ಉನ್ನತಾಧಿಕಾರಿಗಳ ಸಮಿತಿ ರಚನೆ ಆಗಲಿದೆ. ಅರ್ಕಾವತಿ ಮತ್ತೆ ಹರಿಯಲಿ. ಇದಕ್ಕೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. -ಆರ್. ಅಶೋಕ್, ಸಾರಿಗೆ ಸಚಿವ
ಅರ್ಕಾವತಿ ನದಿ ಪುನಶ್ಚೇತನದಿಂದ ಬೆಂಗಳೂರಿಗೆ ನೀರು ದೊರೆಯುವುದು ಮಾತ್ರವಲ್ಲ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಗ್ರಾಮಗಳಲ್ಲಿ ಕೃಷಿಗೆ ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಇದರಿಂದ ಪರಿಸರದಲ್ಲಿರುವ ಸಾವಿರಾರು ರೀತಿಯ ಜಲಚರ, ಪ್ರಾಣಿಪಕ್ಷಿಗಳಿಗೆ ಪ್ರಯೋಜನವಾಗುತ್ತದೆ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಜನಜಾಗೃತಿಗೆ ಈ ಪಾದಯಾತ್ರೆ ನಡೆಸಲಾಯಿತು. ಅರ್ಕಾವತಿ ನದಿ ನಂದಿಬೆಟ್ಟಯಿಂದ ಹರಿದು ಹೆಸರಘಟ್ಟ ತುಂಬಿದರೆ, ಅಲ್ಲಿಂದ ನಂದಿಗೆ ಪಾದಯಾತ್ರೆ ಮಾಡುತ್ತೇನೆ. ಆ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ. -ಎಸ್.ಆರ್. ವಿಶ್ವನಾಥ್, ಶಾಸಕ
ಅರ್ಕಾವತಿ ನದಿ ಹರಿದು ಹೆಸರಘಟ್ಟ ತುಂಬಿದರೆ, ಈಗಿರುವ ವ್ಯವಸ್ಥೆಯಿಂದ ದಾಸರಹಳ್ಳಿ ಕ್ಷೇತ್ರಕ್ಕೆ ಕೂಡಲೇ ಕುಡಿಯುವ ನೀರು ನೀಡಬಹುದು. ಇದು ನನ್ನ ಕ್ಷೇತ್ರದ ಜನರ ಪಾಲಿನ ಜೀವಗಂಗೆ. ಈ ನದಿಯನ್ನು ಹರಿಸಿದರೆ, ಬೆಂಗಳೂರಿನ ಶೇ.25ರಷ್ಟು ಭಾಗಕ್ಕೆ ನೀರು ಕೊಡಬಹುದು. ಆದ್ದರಿಂದ ಈ ನದಿ ಪುನಶ್ಚೇತನಕ್ಕಾಗಿ ಸರ್ವಪ್ರಯತ್ನ ಮಾಡುತ್ತೇನೆ. -ಎಸ್. ಮುನಿರಾಜು, ಶಾಸಕ

ಯಾರು ಎಷ್ಟು ನಡೆದರು?
ಅರ್ಕಾವತಿ ಪುನಶ್ಚೇತನ ವೇದಿಕೆಯಡಿ ಆಯೋಜಿಸಲಾಗಿದ್ದ ಈ ಪಾದಯಾತ್ರೆ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ 106 ಕಿಮೀ ಹೆಜ್ಜೆ ಹಾಕಿತು. ಈ ಸಂಪೂರ್ಣ ನಾಲ್ಕು ದಿನ, ಒಂದು ನಿಮಿಷವೂ ವಾಹನ ಹತ್ತದೆ, ಸಂಪೂರ್ಣ ನಡಿಗೆಯಲ್ಲಿ ಪಾಲ್ಗೊಂಡಿದ್ದು ಶಾಸಕ ಎಸ್. ವಿಶ್ವನಾಥ್. ಪಾದಯಾತ್ರೆಯ ರೂವಾರಿ ಆಗಿದ್ದ ವಿಶ್ವನಾಥ್, ಭಾಷಣ ಮಾಡುವಾಗ ಮಾತ್ರ ಮೈಕ್‌ಗಾಗಿ ವಾಹನ ಹತ್ತಿದ್ದು ಬಿಟ್ಟರೆ, ಅಂತಿಮ ದಿನ ಬೆರಳ ಸಂದಿಯಲ್ಲಿ ರಕ್ತ ಸುರಿಯುತ್ತಿದ್ದರೂ 106 ಕಿಮೀ ದೂರವನ್ನು ನಡಿಗೆಯಲ್ಲೇ ಪೂರ್ಣಗೊಳಿಸಿದರು.
ವಿಶ್ವನಾಥ್ ಜತೆಗೆ ಪೂರ್ಣ ಪಾದಯಾತ್ರೆ ಸುಮಾರು 100 ಜನರು ಹೆಜ್ಜೆ ಹಾಕಿದರು. ಶಾಸಕ ಎಸ್. ಮುನಿರಾಜು ನಾಲ್ಕು ದಿನ ಬಹುತೇಕ (ಸುಮಾರು 80 ಕಿ.ಮೀ.) ಹೆಜ್ಜೆ ಹಾಕಿದರು. ನಾಗದಳ ತಂಡ ನಂದಿಬೆಟ್ಟದಿಂದ ದೊಡ್ಡಬಳ್ಳಾಪುರ (30 ಕಿಮೀ); ಪರಿಸರವಾದಿ ಮಹೇಶ್ ಭಟ್ 12 ಕಿಮೀ (ಹನಿಯೂರಿನಿಂದ ಹೆಸರಘಟ್ಟ); ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ತಂಡ 11 ಕಿಮೀ (ನಂದಿಬೆಟ್ಟದಿಂದ ಸೀಗೇಹಳ್ಳಿ ಗೇಟ್); ಸಚಿವ ಸುರೇಶ್ ಕುಮಾರ್ 8 ಕಿಮೀ (ನಂದಿಬೆಟ್ಟದಿಂದ ಕ್ರಾಸ್‌ವರೆಗೆ); ಸಚಿವ ಆರ್ ಅಶೋಕ್ 7 ಕಿಮೀ (ತರಬನಹಳ್ಳಿಯಿಂದ ರೈಲ್ವೆ ಸೇತುವೆ ಹೊಳೆ ಹಾಗೂ ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಸಚಿವ ರಾಮಚಂದ್ರಗೌಡ 6 ಕಿಮೀ (ರಾವುತ್ತನಹಳ್ಳಿಯಿಂದ ಸೊಂಡೆಕೊಪ್ಪ); ಶಾಸಕ ನರಸಿಂಹಸ್ವಾಮಿ ದೊಡ್ಡಬಳ್ಳಾಪುರದ ವೀರಾಪುರದವರೆಗೆ (ಸುಮಾರು 6 ಕಿಮೀ), ಸಂಸದ ಅನಂತಕುಮಾರ‍್, ಶಾಸಕರಾದ ರವಿಸುಬ್ರಹ್ಮಣ್ಯ ಹಾಗೂ ವಿಜಯಕುಮಾರ್ 5 ಕಿಮೀ (ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಶಾಸಕ ನಾಗರಾಜ್ 4 ಕಿಮೀ(ಸೊಂಡೆಕೊಪ್ಪದ ಸಮೀಪದಲ್ಲಿ). ಇವರಲ್ಲದೆ, ಯಲಹಂಕ, ದಾಸರಹಳ್ಳಿಯ ಮುಖಂಡರು ಹಾಗೂ ನೂರಾರು ಜನರು ದಿನಕ್ಕೆ ಹತ್ತಾರು ಕಿಮೀ ದೂರ ಪಾದಯಾತ್ರೆಯಲ್ಲಿ ಸಾಗಿದರು.

ಇತಿಹಾಸ ರಚನೆ
ಅರ್ಕಾವತಿ ನದಿ ಪುನಶ್ಚೇತನಕ್ಕೆ ಜನಪ್ರತಿನಿಧಿಗಳನ್ನು ಒಳಗೊಂಡ ನಾಲ್ಕು ದಿನಗಳ ಪಾದಯಾತ್ರೆ ಹೊಸ ಇತಿಹಾಸ ರಚಿಸಿತು. ನದಿ ಪುನಶ್ಚೇತನ ಹಾಗೂ ಸಂರಕ್ಷಣೆ ಬಗ್ಗೆ ಜನಜಾಗೃತಿಯ ಮೂಲ ಉದ್ದೇಶವನ್ನು ಹೊಂದಿದ್ದ ಪಾದಯಾತ್ರೆ, ಪಕ್ಷಾತೀತವಾಗಿ ಹೆಜ್ಜೆಹಾಕಿತ್ತು. ಸಚಿವರು ಹಾಗೂ ಶಾಸಕರು ಸೇರಿದಂತೆ ಪರಿಸರವಾದಿಗಳಾದ ಡಾ. ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್, ಮಹೇಶ್ ಭಟ್, ಸೀತಾರಾಂ, ಶಿವಮಲ್ಲು, ಕೆ.ಸಿ. ಶಿವರಾಂ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಅರ್ಕಾವತಿ ಪುನಶ್ಚೇತನ ಸಮಿತಿ, ನಾಗದಳ, ಕುಮುದ್ವತಿ ನೆಲ-ಜಲ ರಕ್ಷಣಾ ಸಮಿತಿ, ಅರ್ಕಾವತಿ ಜನಜಾಗೃತಿ ಸಮಿತಿ, ಜನಧ್ವನಿ, ಕರ್ನಾಟಕ ಸುರಕ್ಷಾ ಸೇನಾಪಡೆ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆಯ ಸಂದರ್ಭದಲ್ಲಿ ಮೂರು ದಿನ ಸುಗಮಸಂಗೀತದ ದಿಗ್ಗಜರಾದ ಡಾ. ಸಿ. ಅಶ್ವತ್ಥ್, ಡಾ. ಶಿವಮೊಗ್ಗ ಸುಬ್ಬಣ್ಣ, ವೈ.ಕೆ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ ತಂಡ ಪರಿಸರ ಗೀತೆಗಳ ಸುಧೆಹರಿಸಿ, ಪರಿಸರ-ನದಿ ಉಳಿಸುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಸಾರಿದ್ದು ಗಮನಾರ್ಹವಾಗಿತ್ತು.
ಈ ಹಿಂದೆ, 2007ರ ಜನವರಿಯಲ್ಲಿ ಹಲವು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಸೇರಿಕೊಂಡು ಕೆ.ಸಿ. ಶಿವರಾಂ ಸಂಘಟನೆಯಲ್ಲಿ ನಂದಿಬೆಟ್ಟದಿಂದ ಕನಕಪುರದ ಸಂಗಮದವರೆಗೆ 190 ಕಿಮೀ ದೂರವನ್ನು ಒಂಬತ್ತು ದಿನದಲ್ಲಿ ಪಾದಯಾತ್ರೆ ಮೂಲಕ ಕ್ರಮಿಸಿದ್ದರು.

ನಿರೀಕ್ಷೆಗೂ ಮೀರಿದ ಸ್ಪಂದನೆ, ಉನ್ನತ ಸಮಿತಿ ರಚನೆ

ಅರ್ಕಾವತಿ ಪಾದಯಾತ್ರೆ-ದಿನ-3: ಸೆಪ್ಟೆಂಬರ್ 5, 2009
ಅರ್ಕಾವತಿ ನದಿ ಪುನಶ್ಚೇತನ, ಜನಜಾಗೃತಿ ಪಾದಯಾತ್ರೆಗೆ ಮೂರನೇ ದಿನ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಜತೆಗೆ, ನದಿ ಪುನಶ್ಚೇತನಕ್ಕೆ ಮೂರು ಸಚಿವರನ್ನೊಳಗೊಂಡ ಸರಕಾರದ ಉನ್ನತ ಸಮಿತಿ ರಚನೆಗೂ ಮನ್ನಣೆ ಸಿಕ್ಕಿತು. ಸಾರಿಗೆ ಸಚಿವ ಆರ್. ಅಶೋಕ್ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಸಚಿವ ರಾಮಚಂದ್ರಗೌಡ ಅವರು ಪಾದಯಾತ್ರೆಯಲ್ಲಿ ಕೊಂಚದೂರ ಹೆಜ್ಜೆ ಹಾಕಿ ನದಿ ಪುನಶ್ಚೇತನಕ್ಕೆ ಸರಕಾರ ಕಂಕಣಬದ್ಧರಾಗಿರುವುದಾಗಿ ಪ್ರಕಟಿಸಿದ್ದು, ಶನಿವಾರದ ಪಾದಯಾತ್ರೆಯ ಹೈಲೈಟ್.
ಹೆಸರಘಟ್ಟದಿಂದ ಬೆಳಗ್ಗೆ 7.15ಕ್ಕೆ ಆರಂಭವಾದ ಮೂರನೇ ದಿನದಪಾದಯಾತ್ರೆಗೆ ತರಬನಹಳ್ಳಿಯಲ್ಲಿ ಊರ ಹಬ್ಬದ ಮೆರವಣಿಗೆ ಸೊಗಡಿನ ಸ್ವಾಗತ ದೊರೆಯಿತು. ಶಾಸಕರಾದ ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದಪಾದಯಾತ್ರೆಗೆಸಾರಿಗೆ ಸಚಿವ ಆರ್. ಅಶೋಕ್ ಸ್ವಾಗತಿಸಿ, ಕೊಂಚ ದೂರ ಹೆಜ್ಜೆ ಹಾಕಿದರು. ಅಲ್ಲದೆ, ಮಹಿಳೆಯರು ಹೊತ್ತುತಂದಿದ್ದ ಕಳಸದ ನೀರನ್ನು ಅರ್ಕಾವತಿ ನದಿ ಪಾತ್ರದಲ್ಲಿ ಸುರಿಯುವ ಮೂಲಕ ಪುನಶ್ಚೇತನದ ಶಪಥ ಮಾಡಿದರಲ್ಲದೆ, ಅದನ್ನೇ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ನಾಗರಿಕರಿಗೆ ಬೋಧಿಸಿದರು.
ತರಬನಹಳ್ಳಿಯಿಂದ ಹೆಗ್ಗಡದೇವನಪುರದವರೆಗೆ ಡೊಳ್ಳುಕುಣಿತ, ತಮಟೆ, ದೊಡ್ಡ ಮುಖವಾಡದ ಗೊಂಬೆಗಳು, ಪೂಜಾಕುಣಿತದೊಂದಿಗೆ ಸಾವಿರಾರು ಜನರು ಪ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸುಮಾರ 6 ಕಿಮೀ ದೂರ ನದಿ ಪಾತ್ರದಲ್ಲೇ ಪಾದಯಾತ್ರೆ ಸಾಗಿತು. ಮಾಕಳಿ ಮೂಲಕ, ರಾವುತ್ತನಹಳ್ಳಿ ಕ್ರಾಸ್ ಮೂಲಕ ಸೊಂಡೆಕೊಪ್ಪ ತಲುಪಿದ ಪಾದಯಾತ್ರಿಗಳಲ್ಲಿ ನದಿ ಪುನಶ್ಚೇತನ ಸಮಿತಿ ರಚನೆಯ ಸಂತಸ ನಡಿಗೆಯ ಉತ್ಸಾಹವನ್ನು ಮರೆಮಾಡಿತ್ತು. ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹಾಗೂ ಕಿಕ್ಕೇರಿ ಕೃಷ್ಣಮೂರ್ತಿ ತಂಡದ ಸುಗಮ ಸಂಗೀತ ಗಾಯನ, ಪರಿಸರ ರಕ್ಷಣೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪಾದಯಾತ್ರಿಗಳನ್ನುಪ್ರೇರೇಪಿಸಿತು.
ಮಾಕಳಿಯಲ್ಲಿ ಕೈಗಾರಿಕೆಗಳ ಬೆಂಬಲ
ಅರ್ಕಾವತಿ ನದಿ ಪಾತ್ರವನ್ನು ಉಳಿಸಿ, ಹರಿಸಲು ಹಾಗೂ ಒತ್ತುವರಿ ತೆರವು, ಮಾಲಿನ್ಯ ಬಿಡುವ ಕೈಗಾರಿಕೆಗಳನ್ನು ತೆರವುಗೊಳಿಸಲು ಅರ್ಕಾವತಿ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ಸೂಚಿಸಿದೆ.
ಪಾದಯಾತ್ರಿಗಳನ್ನು ಸ್ವಾಗತಿಸಲು ಸಂಘ ಮಾಕಳಿಯಲ್ಲಿ ಸಭೆ ಆಯೋಜಿಸಿತ್ತು. ನದಿ ಪಾತ್ರದ ಒಂದು ಕಿಮೀ ಆಸುಪಾಸು ಮಾಲಿನ್ಯ ಉಂಟು ಮಾಡದ ಕಾರ್ಖಾನೆ ಹಾಗೂ ಗಾರ್ಮೆಂಟ್ಸ್‌ಗಳನ್ನು ಉಳಿಸಿಕೊಳ್ಳಲು ಸಂಘ ಮನವಿ ಮಾಡತು. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ವಿಶ್ವನಾಥ್ ಭರವಸೆ ನೀಡಿದರು.
ವಿರೋಧ
ಸರಕಾರ 2003ರಲ್ಲಿ ಹೊರಡಿಸಿರುವ ಅಧಿಸೂಚನೆ ಪ್ರಕಾರ, ನದಿ ಪಾತ್ರದಿಂದ 1 ಕಿಮೀ ಆಸುಪಾಸು ಯಾವುದೇ ಕಾರ್ಖಾನೆಗಳಿರುವಂತಿಲ್ಲ. ಮಾಲಿನ್ಯ- ಮಾಲಿನ್ಯ ರಹಿತ ಕಾ ರ್ಖಾನೆಗಳೆಂದು ವಿಂಗಡಿಸಿಲ್ಲ. ಆದ್ದರಿಂದ ಎಲ್ಲ ಕೈಗಾರಿಕೆಗಳನ್ನು ತೆರವುಗೊಳಿಸಬೇಕು. ಯಾವ ಒತ್ತಡಕ್ಕೂ ಮಣಿಯಬಾರದು ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರು ಅಭಿಪ್ರಾಯಪಟ್ಟರು. ಕೈಗಾರಿಕೆಗಳು ಉಳಿಯಲು ಅನುವು ಮಾಡಿಕೊಟ್ಟರೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಏನೆಂದರು?
ಕಂದಾಯ ಸಚಿವ, ಜಲಮಂಡಳಿ ಸಚಿವ ಹಾಗೂ ನೀರಾವರಿ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿಯನ್ನು ಅರ್ಕಾವತಿ ನದಿ ಪುನಶ್ಚೇತನಕ್ಕೆ ರಚಿಸಲಾಗುತ್ತದೆ. ಮುಖ್ಯಮಂತ್ರಿ ಅವರು ಚೀನಾದಿಂದ ಬಂದಕೂಡಲೇ ಇದಕ್ಕೆ ಚಾಲನೆ ನೀಡಲಾಗುತ್ತದೆ. ಇದು ಕೇವಲ ಪಾದಯಾತ್ರೆ ಅಲ್ಲ, ಸರಕಾರದ ಹಣದ ಸದುಯೋಗ ಹಾಗೂ ಪರಿಸರ ಉಳಿಸುವ ಅರಿವನ್ನು ಜನರಲ್ಲಿ ಮೂಡಿಸುವ ಆಂದೋಲನ. ನದಿ-ಕೆರೆ ಒತ್ತುವರಿಯನ್ನು ಸರಕಾರ ಸಹಿಸುವುದಿಲ್ಲ. ಕೈಗಾರಿಕೆಗಳು ಸೇರಿದಂತೆ ಯಾರೇ ಒತ್ತುವರಿ ಮಾಡಿಕೊಂಡಿದ್ದರೂ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. -ಆರ್. ಅಶೋಕ್, ಸಾರಿಗೆ ಸಚಿವ

ಕಲುಷಿತ ನೀರನ್ನು ನದಿಗೆ ಬಿಡುವ ಕಾರ್ಖಾನೆಗಳು ಹಾಗೂ ನದಿಪಾತ್ರದಲ್ಲಿ ಬಡಾವಣೆ ನಿರ್ಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಖಾನೆಯನ್ನು ಬದಲಿಸಬಹುದು. ಆದೆ ನದಿಯನ್ನು, ಅದರ ಹರಿವನ್ನು ಬದಲಿಸಲು ಸಾಧ್ಯವಿಲ್ಲ. ಒತ್ತುವರಿ ತೆರವಿಗೆ ಯಾವ ಒತ್ತಡಕ್ಕೂ ಮಣಿಯುವುದಿಲ್ಲ. -ಎಸ್.ಆರ್. ವಿಶ್ವನಾಥ್, ಶಾಸಕ

ಪಾದಯಾತ್ರೆ ಹೆಜ್ಜೆಗಳು- ದಿನ-3
ಬೆಳಗ್ಗೆ 7.15: ಹೆಸರಘಟ್ಟದಿಂದ ಹೊರಟು ಐವರುಕಂಡ ಪುರದ ಮೂಲಕ ತಿರುಮಳಾಪುರ ಪ್ರವೇಶ. ಸ್ಥಳೀಯರಿಂದ ಹಸಿರುತೋರಣದ ಸ್ವಾಗತ.
9.30: ತರಬನಹಳ್ಳಿಯಲ್ಲಿ ಸಚಿವ ಆರ್. ಅಶೋಕ್ ಅವರಿಂದ ಸ್ವಾಗತ. ಊರಹಬ್ಬದ ಮೆರವಣಿಗೆಯಲ್ಲಿ ಪಾದಯಾತ್ರೆ ಹೆಜ್ಜೆ.
10.45: ಅಶೋಕ್ ಅವರಿಂದ ಅರ್ಕಾವತಿ ನದಿ ಪಾತ್ರಕ್ಕೆ ಕಳಸ ನೀರು ಸಮರ್ಪಣೆ. ಮೆರವಣಿಯಲ್ಲಿ ಮುನಿಯಯ್ಯನ ಪಾಳ್ಯ, ಆಲೂರಿಗೆ ಪ್ರವೇಶ. ಅಲ್ಲಿ ಸ್ವಾಗತ, ಜನಜಾಗೃತಿ ಸಭೆ.
12.30: ಹೆಗ್ಗಡದೇವನಪುರಕ್ಕೆ ಆಗಮನ. ನೃತ್ಯ ಹಾಗೂ ಡೊಳ್ಳು ಕುಣಿತದ ಸ್ವಾಗತ.
1.45: ಮಾಕಳಿಯಲ್ಲಿರುವ ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ್ದ ಭೀಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ.
2.00: ಅರ್ಕಾವತಿ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆಸಭೆ.
3.20: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮರದ ಕಾಲಿನ ಕುಣಿತ ಸ್ವಾಗತದೊಂದಿಗೆ ರಾವುತ್ತಹಳ್ಳಿ ಕ್ರಾಸ್ ಪ್ರವೇಶ.
4.30: ಶಿವಪುರದಲ್ಲಿ ಸ್ವಾಗತ ಸಭೆ.
5.20: ರಾವುತ್ತನಹಳ್ಳಿ ಪ್ರವೇಶ. ಗ್ರಾಮದಲ್ಲಿ ಸಭೆ. ಸಚಿವ ರಾಮಚಂದ್ರಗೌಡಪಾದಯಾತ್ರೆಗೆ ಸೇರ್ಪಡೆ.
6.00: ಸೊಂಡೆಕೊಪ್ಪ ಪ್ರವೇಶ. ಆದರ್ಶ ಸುಗಮಸಂಗೀತ ಅಕಾಡೆಮಿ ನೇತೃತ್ವದಲ್ಲಿ ವೈ.ಕೆ. ಮುದ್ದುಕೃಷ್ಣ ಅವರಿಂದ ಪರಿಸರಗೀತೆಗಳ ಗಾಯನ.

ಎರಡನೇ ದಿನ ಮುಗಿಲು ಮುಟ್ಟಿದ ಉತ್ಸಾಹ

ಅರ್ಕಾವತಿ ಪಾದಯಾತ್ರೆ-ದಿನ-2: ಸೆಪ್ಟೆಂಬರ್ 4, 2009
ಹಳ್ಳಿಗಳಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಅಲ್ಲಿನ ಬೀದಿಗಳಲ್ಲಿ ಸ್ವಾಗತ ಸಭೆ, ಮನವಿ ಮಾಡುವುದು ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮಾತ್ರ. ಆದರೆ, ಶುಕ್ರವಾರ ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ತಾಲೂಕು ಇದಕ್ಕೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸಿತ್ತು
ಈ ತಾಲೂಕುಗಳಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ಮುಖಂಡರ ಜಾತ್ರೆಯೇ ನಡೆದಿತ್ತು. ಆದರೆ ಇದು ಚುನಾವಣೆ ಪ್ರಚಾರ ಆಗಿರಲಿಲ್ಲ. ಅದಕ್ಕಿಂತ ಹೆಚ್ಚಿನ ಉತ್ಸಾಹವೂ ಇತ್ತು. ಏಕೆಂದರೆ ಪಕ್ಷಭೇದ ಮರೆತು ಜನಪ್ರತಿನಿಧಿಗಳು ಅರ್ಕಾವತಿ ನದಿ ಸಂರಕ್ಷಣೆಗೆ ಮನವಿ ಮಾಡುತ್ತಿದ್ದರು. ಅದರ ಅಗತ್ಯವನ್ನು ತಿಳಿಹೇಳಿದರು.
ಅರ್ಕಾವತಿ ನದಿ ಪುನಶ್ಚೇತನ ಹಾಗೂ ಸಂರಕ್ಷಣೆಯ ಜನಜಾಗೃತಿ ಪಾದಯಾತ್ರೆಗೆ ಶುಕ್ರವಾರ ವಿಭಿನ್ನ ರಂಗೇರಿತ್ತು. ಜನಪ್ರತಿನಿಧಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಅಷ್ಟೇಅಲ್ಲ, ಪಾದಯಾತ್ರಿಗಳ ಸಂಖ್ಯೆಯೂ ವೃದ್ದಿಸುತ್ತಾ ಹೋಯಿತು.
ಪಾದಯಾತ್ರೆಯ ಎರಡನೇ ದಿನ ದೊಡ್ಡಬಳ್ಳಾಪುರದ ಬಸವಭವನದಿಂದ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಆರಂಭವಾಯಿತು. ಅಲ್ಲಿಂದ ನಾಗರಕೆರೆ, ವೀರಾಪುರ, ಮಜರಾ ಹೊಸಹಳ್ಳಿ ಮೂಲಕ ಹನಿಯೂರು ಪ್ರವೇಶಿಸಿ, ಹೆಸರಘಟ್ಟ ತಲುಪಿತು.
ದೊಡ್ಡಬಳ್ಳಾಪುರದಲ್ಲಿ ಒಂದಷ್ಟು ದೂರ ಶಾಸಕ ನರಸಿಂಹಸ್ವಾಮಿ ಹೆಜ್ಜೆ ಹಾಕಿದರು. ನಾಗರಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ತಾವು ಬದ್ಧ ಎಂದು ಹೇಳಿದ್ದು ಗಮನಾರ್ಹವಾಗಿತ್ತ. ಈ ಕೆರೆ ಉಳಿವಿಗಾಗಿ ನಾಗದಳ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದೆ.
ಹನಿಯೂರು ತಲುಪಿದಾಗಲೇ ಪಾದಯಾತ್ರೆಗೆ ವಿಭಿನ್ನ ರೂಪ ದೊರೆತತ್ತು. ಪಾದಯಾತ್ರೆ ಹನಿಯೂರಿಗೆ ಆಗಮಿಸಿದಾಗ, ಮಾವಿನ ತೋರಣ, ಪೂರ್ಣಕುಂಭಗಳ ಮೂಲಕ ಹೂವಿನ ಮಳೆಯಲ್ಲಿ ಸ್ವಾಗತ ಕೋರಲಾಯಿತು. ಪರಿಸರವಾದಿ, ಕಲಾವಿದ ಸುರೇಶ್ ಹೆಬ್ಳೀಕರ್, ಶಾಸಕ ಎಸ್. ಮುನಿರಾಜು, ವಾಣಿಶ್ರೀ ವಿಶ್ವನಾಥ್, ಅರ್ಕಾವತಿ-ಕುಮುದ್ವತಿ ಪುನಶ್ಚೇತನ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಇಲ್ಲಿ ಪಾದಯಾತ್ರೆಗೆ ಸೇರಿಕೊಂಡರು. ವಿಶ್ವನಾಥ್ ಇವರೆಲ್ಲರೊಂದಿಗೆ ಸೇರಿಕೊಂಡು ಹನಿಯೂರು ಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿದರು.
ಬೆಂಗಳೂರು ಉತ್ತರ ತಾಲೂಕಿನಲ್ಲಿ ಪಾದಯಾತ್ರೆಗೆ ಅತ್ಯದ್ಭುತ ಸ್ವಾಗತ, ಪ್ರಶಂಸೆ ಹಾಗೂ ಭಾಗವಹಿಸುವಿಕೆ ಕಂಡುಬಂದಿತು. ಸಂಜೆ ಹೆಸರಘಟ್ಟ ಜಲಾಶಯದ ಹಿನ್ನೆಲೆಯಲ್ಲಿ, ಆದರ್ಶ ಸುಗಮಸಂಗೀತ ಅಕಾಡೆಮಿ ನೇತೃತ್ವದಲ್ಲಿ ಹಿರಿಯ ಗಾಯಕ ಡಾ. ಅಶ್ವತ್ಥ್ ಅವರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು.

ಏನೆಂದರು?
ನದಿ ಪುನಶ್ಚೇತನಕ್ಕೆ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಪಕ್ಷದವರು ಜತೆಗೂಡಿರುವುದು ರಾಷ್ಟ್ರದಲ್ಲೇ ಇದು ಪ್ರಥಮ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆ ರಾಜ್ಯಕ್ಕೇ ಮಾದರಿ. -ಸುರೇಶ್ ಹೆಬ್ಳೀಕರ್, ಕಲಾವಿದ, ಪರಿಸರವಾದಿ
ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ಕೆ ನಾನು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ. ಸದ್ಯ ನಡೆಯುತ್ತಿರುವ ಪಾದಯಾತ್ರೆಗೆ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂಧನೆ ಸಿಗದಿದ್ದರೆ, ಲಕ್ಷಾಂತರ ಜನರೊಂದಿಗೆ ವಿಧಾನಸೌಧಕ್ಕೆ ತೆರಳಿ ಅಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಅರ್ಕಾವತಿ ಉಳಿವಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ. -ಡಾ. ಸಿ. ಅಶ್ವತ್ಥ್, ಹಿರಿಯ ಗಾಯಕರು.

ಪಾದಯಾತ್ರೆ ಹೆಜ್ಜೆಗಳು- ದಿನ-2
ಬೆಳಗ್ಗೆ 7.15: ದೊಡ್ಡಬಳ್ಳಾಪುರದ ಬಸವಭವನದಿಂದ ಪ್ರಾರಂಭವಾಗಿ, ನಾಗರಕೆರೆಏರಿ ಮೂಲಕ ರೈಲು ನಿಲ್ದಾಣ.
9.15: ಬಾಶೆಟ್ಟಿಹಳ್ಳಿ ಸ್ಥಳೀಯರಿಂದ ಸ್ವಾಗತ. ವೀರಾಪುರಕ್ಕೆ ಪ್ರವೇಶ.
10.30: ವೀರಾಪುರದ ಆಂಜನೇಯ ದೇವಾಲಯದಲ್ಲಿ ಪೂಜೆ ಮತ್ತು ಜನಜಾಗೃತಿ ಸಭೆ.
11.05: ಜಿಂಕೆ ಬಚ್ಚಹಳ್ಳಿ, ದೊಡ್ಡ ತುಮಕೂರಿಗೆ ಪ್ರವೇಶ. ತಮಟೆ ಮೂಲಕ ಸ್ವಾಗತ. ಗ್ರಾ.ಪಂ. ಗ್ರಂಥಾಲಯದಲ್ಲಿ ಸಭೆ. ಕೆರೆ ಒತ್ತುವರಿ ತೆರವಿಗೆ ಪಣ.
1 ಗಂಟೆ: ಹನಿಯೂರಿನಲ್ಲಿ ಅದ್ಧೂರಿ ಸ್ವಾಗತ. ಪೂರ್ಣಕುಂಭ, ಹಸಿರುತೋರಣ ಹಾಗೂ ಪಟಾಕಿ ಮೂಲಕ ಸ್ವಾಗತ. ಹನಿಯೂರು ಕೆರೆಯಲ್ಲಿ ಗಂಗಾಪೂಜೆ.
3.45: ಸೊಣ್ಣೇನಹಳ್ಳಿ ಕ್ರಾಸ್‌ಗೆ ಆಗಮನ. ಜನಜಾಗೃತಿ ಸಭೆ. ನಂತರ ಸೀಡ್ ಫಾರ್ಮ್ ಮೂಲಕ ಬ್ಯಾತಕೆರೆ ಮೂಲಕ ಹೆಸರಘಟ್ಟ ಜಲಾಶಯಕ್ಕೆ ಆಗಮನ.
ಸಂಜೆ 6 ಗಂಟೆಗೆ ಡಾ. ಅಶ್ವತ್ಥ್ ಅವರಿಂದ ಸುಗಮಸಂಗೀತ.

ರಾಜ್ಯದಲ್ಲಿ ಹೊಸ ಇತಿಹಾಸ ರಚನೆ

ಅರ್ಕಾವತಿ ಪಾದಯಾತ್ರೆ-ದಿನ-1: ಸೆಪ್ಟೆಂಬರ್ 3, 2009
ರಾಜ್ಯದಲ್ಲಿ ನಂದಿಬೆಟ್ಟ ಮನೆಮಾತು. ಒಂದು ದಿನದ ಮೋಜಿನ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಪ್ರೇಮಿಗಳಿಗಂತೂ ನೆಚ್ಚಿನ ವಾತಾವರಣ. ವರ್ಷದ ಬಹುತೇಕ ದಿನ ಮಂಜಿನಿಂದ ತುಂಬಿರುವ ನಂದಿಬೆಟ್ಟ, ಜನಪ್ರತಿನಿಧಿಗಳು, ಪರಿಸರವಾದಿಗಳು ಹಾಗೂ ಪರಿಸರ ಪ್ರೇಮಿಗಳ ಸಮೂಹದಲ್ಲಿ ಗುರುವಾರ ಮಿಂದೆತ್ತಿತ್ತು. ಅಷ್ಟೇಅಲ್ಲ, ರಾಜ್ಯದಲ್ಲಿ ಹೊಸ ಇತಿಹಾಸ ರಚನೆಗೆ ಸಾಕ್ಷಿಯಾಯಿತು.
ಅರ್ಕಾವತಿ ನದಿ ಸಂರಕ್ಷಣೆ ವೇದಿಕೆ ಅರ್ಕಾವತಿ ನದಿ ಉಳಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ಚಿತ್ರಣ ನಂದಿಬೆಟ್ಟದಲ್ಲಿ ಅನಾವರಣಗೊಂಡಿದ್ದು ಹೀಗೆ.
ಅರ್ಕಾವತಿ ಉಗಮಸ್ಥಾನದಲ್ಲಿ ಮಂಜು ತುಂಬಿದ ವಾತಾವರಣದಲ್ಲೇ ಗುರುವಾರ ಬೆಳಗ್ಗೆ 6.30ರಿಂದ ಗಂಗಾಪೂಜೆ ಆರಂಭಗೊಂಡಿತ್ತು. ಸುಮಾರು ಎರಡು ಗಂಟೆ ನಡೆದ ಗಂಗಾಪೂಜೆಯ ಅಂತ್ಯದಲ್ಲಿ, ಶಾಸಕರಾದ ಎಸ್. ಆರ್. ವಿಶ್ವನಾಥ್, ಎಸ್. ಮುನಿರಾಜು ಹಾಗೂ ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಅರ್ಕಾವತಿಗೆ ಬಾಗಿನ ಅರ್ಪಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ 9.30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಿದರು.
ಸಚಿವ ಸುರೇಶ್ ಕುಮಾರ್ ಪಾದಯಾತ್ರೆಗೆ ಚಾಲನೆ ನೀಡಿದಷ್ಟೇ ಅಲ್ಲ, 'ಹರಿಯಲಿ ಹರಿಯಲಿ ಅರ್ಕಾವತಿ ಹರಿಯಲಿ', 'ಅರ್ಕಾವತಿ ನದಿ ಪುನಶ್ಚೇತನ ಶೀಘ್ರ ಆಗಲಿ', 'ಬೇಕೇ ಬೇಕು ಅರ್ಕಾವತಿ ಬೇಕು' ಎಂಬ ಘೋಷಣೆಗಳನ್ನು ಕೂಗಿ ಪಾದಯಾತ್ರಿಗಳನ್ನು ಉತ್ತೇಜಿಸುತ್ತ, ಅತ್ಯಂತ ಉತ್ಸಾಹದಿಂದ ಸುಮಾರು 8 ಕಿಮೀ ಪಾದಯಾತ್ರೆ ಮಾಡಿದರು. ನಂತರ ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಯಿತು.
ಪಕ್ಷಭೇಧ ಮರೆತು ರಾಜಕೀಯ ಮುಖಂಡರು, ಅರ್ಕಾವತಿ ಪುನಶ್ಚೇತನಕ್ಕೆ ರಚನೆಯಾಗಿರುವ ಸಂಘ-ಸಂಸ್ಥೆಗಳು, ಕರ್ನಾಟಕ ರಕ್ಷಾ ವೇದಿಕೆಯ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಘಟಕದ ಕಾರ್ಯಕರ್ತರು ಸೇರಿದಂತೆ ಅರ್ಕಾವತಿ ಉಗಮ ಸ್ಥಾನದಿಂದ ಸುಮಾರು 500ಕ್ಕೂ ಹೆಚ್ಚು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ನಂದಿಬೆಟ್ಟದ ರಸ್ತೆ ಸಂಪೂರ್ಣವಾಗಿ ಜನರಿಂದ ತುಂಬಿಹೋಗಿತ್ತು. ನಂದಿಬೆಟ್ಟದ ಇತಿಹಾಸದಲ್ಲೇ ಇಷ್ಟೊಂದು ಜನ ಸೇರಿದ್ದು ಇದೇ ಮೊದಲು ಎಂಬುದು ಸ್ಥಳೀಯರ ಮಾತಾಗಿತ್ತು.
ನದಿ ರಕ್ಷಣೆ-ಪುನಶ್ಚೇತನಕ್ಕಾಗಿ ಜನಪ್ರತಿನಿಧಿಗಳು, ಸಚಿವರು, ಪರಿಸರವಾದಿಗಳು ಒಂದುಗೂಡಿ ನಡೆಸಿದ ಪಾದಯಾತ್ರೆ ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ. ಇಂತಹ ಪ್ರಯತ್ನ ಕೆರೆ-ಕುಂಟೆ, ನದಿಗಳನ್ನು ಉಳಿಸಲು ಇತರೆ ಪ್ರದೇಶಗಳ ನಿವಾಸಿಗಳಿಗೆ ಮಾದರಿ.

ಯಾರು ಏನೆಂದರು?
ಮರಗಳನ್ನು ನೆಡಿ, ಕೆರೆಗಳನ್ನು ಕಟ್ಟಿ, ಪರಿಸರ ಬೆಳೆಸಿ ಎಂದು ಹಿಂದೆ ಹೇಳುತ್ತಿದ್ದರು. ಇಂದು, ಮರಗಳನ್ನು ಕಡಿ, ಕೆರೆಗಳನ್ನು ಮುಚ್ಚಿ, ನಿವೇಶನ ನಿರ್ಮಿಸಿ ಎಂದು ಇಂದು ಹೇಳುತ್ತಿದ್ದಾರೆ. ಬೆಂಗಳೂರಿನ ಜೀವನದಿ ಅರ್ಕಾವತಿ. ಈ ನದಿ ಉಳಿಸಿದರೆ, ಅಂತರ್ಜಲ ಹೆಚ್ಚಾಗುತ್ತದೆ. ಗ್ರಾಮಾಂತರ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅರ್ಕಾವತಿ ನದಿ ಉಳಿವಿಗೆ ಸರಕಾರ ಸರ್ವ ಪ್ರಯತ್ನವನ್ನೂ ಮಾಡಲಿದೆ. -ಸುರೇಶ್ ಕುಮಾರ್, ಕಾನೂನು ಸಚಿವ

ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ಪಕ್ಷಾತೀತವಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ. ಕಾವೇರಿ ಮುಗಿದ ಮೇಲೆ ಬೆಂಗಳೂರಿಗೆ ನೀರಿನ ಬರ ಉಂಟಾಗುತ್ತದೆ. ಅದನ್ನು ನೀಗಿಸಲು ಅರ್ಕಾವತಿ ನದಿಯನ್ನು ಹರಿಸಬೇಕು. ಇದರಿಂದ ಅಂತರ್ಜಲ ವೃದ್ದಿಯಾಗಲಿದ್ದು, ಕೆಲವೇ ನೂರು ಅಡಿಗಳಲ್ಲಿ ರೈತರಿಗೆ ಕೊಳವೆ ಬಾವಿಯಲ್ಲಿ ನೀರು ಸಿಗುತ್ತದೆ. ನದಿ ಸಂರಕ್ಷಣೆಗೆ ಸರಕಾರದಿಂದ ಸದ್ಯವೇ ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಈ ಉಗಮಸ್ಥಾನದಲ್ಲಿ ನಾವೆಲ್ಲ ಶಪಥ ಮಾಡೋಣ. -ಎಸ್.ಆರ್. ವಿಶ್ವನಾಥ್, ಶಾಸಕ

ಅರ್ಕಾವತಿ ನದಿ ಉಳಿದರೆ ರೈತರ ಬಾಳು ಬೆಳಗುತ್ತದೆ. ಕೃಷಿಗೆ ನೀರು ಹೆಚ್ಚಿನ ಮಟ್ಟದಲ್ಲಿ ಲಭ್ಯವಾಗುತ್ತದೆ. ಈಗಾಗಲೇ 1000 ಅಡಿ ಕೊರೆಯಲಾಗುತ್ತದೆ. ನದಿ ಪುನಶ್ಚೇತನವಾದರೆ 1500 ಅಡಿ ಕೊರೆಯಬೇಕಾಗುತ್ತದೆ. ಆಗ ಸಿಗುವ ನೀರು ವಿಷಮಯವಾಗಿರುತ್ತದೆ. ಆದ್ದರಿಂದ ನಾವೆಲ್ಲ ಎಚ್ಚೆತ್ತು ಒತ್ತುವರಿ ತೆರವುಗೊಳಿಸಿ, ಅರ್ಕಾವತಿ ಹರಿಸಬೇಕು. -ಎಸ್. ಮುನಿರಾಜು, ಶಾಸಕ

ಭೂಮಿ ತಾಯಿಯ ಚರ್ಮವನ್ನು ಸುಲಿಯುತ್ತಿದ್ದೇವೆ. ಮೇಲ್ಪದರವನ್ನು ಘಾಸಿಗೊಳಿಸಿ, ಅಂತರ್ಜಲಕ್ಕೆ ಪೆಟ್ಟು ನೀಡುತ್ತಿದ್ದೇವೆ. ಇದು ಹೀಗೆ ಮುಂದುವರಿದರೆ, ಕುಡಿಯಲು ನೀರಿಗಾಗಿ ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ, ಅರ್ಕಾವತಿ ನದಿ ಪುನಶ್ಚೇತನಗೊಳಿಸಿ, ಪರಿಸರ ಹಾಗೂ ಅಂತರ್ಜಲ ವೃದ್ಧಿಸಬೇಕಾದ್ದು ಅನಿವಾರ್ಯ. -ಡಾ. ಅ.ನ. ಯಲ್ಲಪ್ಪ ರೆಡ್ಡಿ

ಪಾದಯಾತ್ರೆ ಹೆಜ್ಜೆಗಳು- ದಿನ-1
ಬೆ. 6.30 ಗಂಟೆ: ಅರ್ಕಾವತಿ ಉಗಮಸ್ಥಾನದಿಂದ ಬೆಳಗ್ಗೆ 6.30ರಿಂದ ಗಂಗಾಪೂಜೆ. ಪಾದಯಾತ್ರೆ ನೆನಪಿಗೆ ಕಲ್ಲಿನ ಫಲಕ ಪ್ರತಿಷ್ಠಾಪನೆ.
10 ಗಂಟೆ: ಸಚಿವ ಸುರೇಶ್‌ಕುಮಾರ್ ಅವರಿಂದ ಪಾದಯಾತ್ರೆಗೆ ಚಾಲನೆ. ಸಚಿವರಿಂದ 8 ಕಿಮೀ ನಡಿಗೆ. ನಂತರ ಶಾಸಕರಾದ ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಕೆ.
11.30: ಹೆಗ್ಗಡಿ ಹಳ್ಳಿ ಕೆರೆಗೆ ಆಗಮನ. ಮಾರ್ಗಮಧ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ಘಟಕದ ಕಾರ್ಯಕರ್ತರಿಂದ ಪಾದಯಾತ್ರಿಗಳಿಗೆ ಸ್ವಾಗತ.
12.30 ಗಂಟೆ: ಸೀಗೇಹಳ್ಳಿ ಮೂಲಕ ಮೇಳೇಕೋಟೆಗೆ ಆಗಮನ. ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಂದ ಸ್ವಾಗತ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸಲು ನಿರ್ಧಾರ.
2.00 ಗಂಟೆ: ಲಿಂಗನಹಳ್ಳಿ ಕ್ರಾಸ್‌ನಲ್ಲಿ ಅದ್ಧೂರಿ ಸ್ವಾಗತ. ರಸ್ತೆಯ ಇಕ್ಕೆಲಗಳಲ್ಲಿ ಬಾಳೆಕಂಬ ಕಟ್ಟಿ, ಹೂಮಾಲೆ ಹಾಕಲಾಗಿತ್ತು. ಪಾದಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಸ್ಥಳೀಯರು, ನದಿ ಪುನಶ್ಚೇತನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
2.30 ಗಂಟೆ: ರಾಜಘಟ್ಟದಲ್ಲಿ ಗಾಂಧಿವಾದಿ ಶಂಕರಲಿಂಗೇಗೌಡರು ಸೈಕಲ್ ಮೇಲೆ ರಾಷ್ಟ್ರಧ್ವಜ ಹಾಗೂ ನಾಡ ಬಾವುಟವನ್ನು ಕಟ್ಟಿಕೊಂಡು ಬಂದು, ಪಾದಯಾತ್ರಿಗಳಿಗೆ ಸ್ವಾಗತ ಕೋರಿದರು. ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.
3.00 ಗಂಟೆ ರಾಜಘಟ್ಟದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪಾದಯಾತ್ರಿಗಳು, ಅಲ್ಲಿ ಭೋಜನ ಮುಗಿಸಿದರು.
ಸಂ. 5 ಗಂಟೆ: ತಿಮ್ಮಸಂದ್ರದ ಮೂಲಕ ದೊಡ್ಡಬಳ್ಳಾಪುರಕ್ಕೆ ಪಾದಯಾತ್ರೆ ಆಗಮಿಸಿತು. ನಂತರ ಆಸ್ಪತ್ರೆ ವೃತ್ತದಲ್ಲಿ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ನೇತೃತ್ವದಲ್ಲಿ ಡಾ. ಶಿವಮೊಗ್ಗ ಸುಬ್ಬಣ್ಣ ಅವರಿಂದ ಪರಿಸರ ಗೀತೆಗಳ ಗಾಯನ ಹಾಗೂ ಜನಪ್ರತಿನಿಧಿಗಳು ಮತ್ತು ಸ್ಥಳೀಯರೊಂದಿಗೆ ಸಂವಾದ ನಡೆಯಿತು.

Wednesday, September 2, 2009

ಅರ್ಕಾವತಿ ನದಿ ಜಾಗೃತಿಗೆ ಪಾದಯಾತ್ರೆ

ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಪುನಶ್ಚೇತನದ ಅಗತ್ಯ ಕುರಿತಂತೆ ನದಿ ಪಾತ್ರದಲ್ಲಿರುವ ಹಳ್ಳಿ ಹಾಗೂ ಪಟ್ಟಣಗಳ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ರಾಜಕೀಯ ಮುಖಂಡರು, ಪರಿಸರವಾದಿಗಳು, ಸ್ವಾಮೀಜಿಗಳು, ಸ್ಥಳೀಯ ಸಂಘ-ಸಂಸ್ಥೆಗಳು, ಅರ್ಕಾವತಿ ನದಿ ಪುನಶ್ಚೇತನಕ್ಕೆ ಈಗಾಗಲೇ ಸಾಕಷ್ಟು ಪ್ರಯತ್ನಪಡುತ್ತಿರುವ ಸಂಘಟನೆಗಳ ಕಾರ್ಯಕರ್ತರು ಸೆಪ್ಟೆಂಬರ 3ರಿಂದ 6ರವರೆಗೆ ನಂದಿಬೆಟ್ಟದ ಅರ್ಕಾವತಿ ಉಗಮಸ್ಥಾನದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಪಾದಯಾತ್ರೆ ಮಾಡಲಿದ್ದಾರೆ.

ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರಕಾರದಿಂದ ಒಂದು ಸಮಿತಿ ಅಥವಾ ಪ್ರಾಧಿಕಾರದ ರಚನೆ ಕುರಿತಂತೆ ಈಗಾಗಲೇ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಜತೆಗೆ, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿಯನ್ನೂ ನೀಡಲಾಗಿದೆ. ಇದು ನನಸಾಗುವ ಕಾಲ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ ಪಕ್ಷಭೇಧ ಮರೆತು ಜನಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಅದರಲ್ಲೂ ಆಡಳಿತ ಪಕ್ಷದ ಶಾಸಕರು ಸಕ್ರಿಯವಾಗಿರುವುದು ನದಿ ಪುನಶ್ಚೇತನದ ದಿಕ್ಕಿನತ್ತ ಮಹತ್ವದ ಹೆಜ್ಜೆಯಾಗಿದೆ.
ಶಾಸಕ ಎಸ್‌.ಆರ್‌. ವಿಶ್ವನಾಥ್‌ ಪಾದಯಾತ್ರೆ ಮಾಡುವುದಾಗಿ ಈ ಹಿಂದೆಯೇ ಹೇಳಿದ್ದರು. ಅರ್ಕಾವತಿ ನದಿ ಪುನಶ್ಚೇತನದ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಉಗಮಕ್ಷೇತ್ರದಿಂದ ಪಾದಯಾತ್ರೆ ಮಾಡುವುದಾಗಿ ‘ಅರ್ಕಾವತಿ ಏಕೀ ದುರ್ಗತಿ’ ಲೇಖನ ಮಾಲಿಕೆಗೆ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಶಾಸಕ ಎಸ್‌. ಮುನಿರಾಜು ಕೂಡ ಬೆಂಬಲ ನೀಡಿದ್ದರು. ಈ ಮಾತನ್ನು ಇವರಿಬ್ಬರೂ ಇದೀಗ ಪೂರೈಸಲು ಮುಂದಾಗಿದ್ದಾರೆ. ಜತೆಗೆ ದೊಡ್ಡಬಳ್ಳಾಪುರದ ಶಾಸಕ ನರಸಿಂಹಸ್ವಾಮಿ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹ. ದೊಡ್ಡಬಳ್ಳಾಪುರದ ಪ್ರಮುಖ ಕೆರೆ ಹಾಗೂ ಅರ್ಕಾವತಿ ಕ್ಷೇತ್ರದ ಜೀವಾಳ ನಾಗರಕೆರೆಯನ್ನು ಮುಚ್ಚಿ ಬಸ್‌ ನಿಲ್ದಾಣ ಮಾಡುವುದಾಗಿ ಹೇಳುತ್ತಿರುವ ನರಸಿಂಹಸ್ವಾಮಿ, ಪಾದಯಾತ್ರೆಯಲ್ಲಿರುತ್ತಾರಂತೆ. ಅಂದರೆ ನಾಗರಕೆರೆ ಕೆರೆಯಾಗಿಯೇ ಉಳಿದೀತೇ? ಈ ಪ್ರಶ್ನೆಯನ್ನು ಅವರನ್ನು ನೇರವಾಗಿ ಕೇಳಬೇಕಿದೆ, ಅದೇ ಪಾದಯಾತ್ರೆಯಲ್ಲಿ.
ನಾಲ್ಕು ದಿನಗಳ ಈ ಪಾದಯಾತ್ರೆ ಸಾಧ್ಯವಾಗುತ್ತಿರುವುದು ಎಸ್‌.ಆರ್‌. ವಿಶ್ವನಾಥ್‌ ಅವರ ಕಾಳಜಿಯಿಂದ. ಈ ಪಾದಯಾತ್ರೆಗೆ ಎಲ್ಲ ರೀತಿಯ ಸಂಘಟನೆಗೆ ಅವರೇ ಕಾರಣ. ಎಲ್ಲರನ್ನೂ ಒಂದುಗೂಡಿಸಿ ಪಕ್ಷಾತೀತವಾಗಿ, ರಾಜಕೀಯ ಸೇರಿಸದೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸರಕಾರ ಕೂಡಲೇ ಇತ್ತ ಗಮನಹರಿಸಿ ಕಾರ್ಯೋನ್ಮುಖವಾಗಬೇಕೆಂಬ ಉದ್ದೇಶದೊಂದಿಗೆ ಪಾದಯಾತ್ರೆ ಆಯೋಜಿಸಿದ್ದಾರೆ. ಇದಕ್ಕೆ ಎಲ್ಲ ವಲಯದ ಮುಖಂಡರೂ ಸೇರಿಕೊಂಡಿರುವುದು ಒಳ್ಳೆಯ ಬೆಳವಣಿಗೆ.
ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ, ಪರಿಸರ ರಕ್ಷಣೆ ಹೋರಾಟಗಾರ ಸುರೇಶ್‌ ಹೆಬ್ಳೀಕರ್‌ ಸೇರಿದಂತೆ ದೊಡ್ಡಬಳ್ಳಾಪುರದ ಹಲವು ಸಂಘಟನೆಗಳ ಮುಖಂಡರು ಈ ಪಾದಯಾತ್ರೆಯಲ್ಲಿರುತ್ತಾರೆ. ಅಲ್ಲದೆ, ಹಲವು ಮಠಗಳ ಸ್ವಾಮೀಜಿಗಳೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹವಾಗಿದೆ. ಅಷ್ಟೇ ಅಲ್ಲ, ಸುಗಮಸಂಗೀತ ಕ್ಷೇತ್ರದ ದಿಗ್ಗಜರೂ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷಕರ. ಈ ಪಾದಯಾತ್ರೆ ನಾನು ಸಂಪೂರ್ಣವಾಗಿ ಭಾಗವಹಿಸುತ್ತಿದ್ದು, ಸಮಗ್ರ ವಿವರವನ್ನು ನಿಮ್ಮ ಮುಂದಿಡಲಿದ್ದೇನೆ.
ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಅರ್ಕಾವತಿ ಕ್ಷೇತ್ರ (ಸೆ.೩)ದಲ್ಲಿ ಡಾ. ಶಿವಮೊಗ್ಗ ಸುಬ್ಬಣ್ಣ, ಹೆಸರಘಟ್ಟದಲ್ಲಿ (ಸೆ.೪) ಡಾ. ಸಿ. ಅಶ್ವತ್ಥ್‌ ಹಾಗೂ ಸೊಂಡೆಕೊಪ್ಪದಲ್ಲಿ (ಸೆ.೫) ವೈ.ಕೆ. ಮುದ್ದುಕೃಷ್ಣ ಅವರ ಜತೆ ಕಿಕ್ಕೇರಿ ಕೃಷ್ಣಮೂರ್ತಿ ಅವರ ತಂಡ ಸಂಜೆಯ ಸಮಯದಲ್ಲಿ ಸಂಗೀತ ಸುಧೆ ಹರಿಸಲಿದೆ.
ಅರ್ಕಾವತಿ ಉಗಮಸ್ಥಾನ ನಂದಿಬೆಟ್ಟದಿಂದ ಆರಂಭವಾಗುವ ಪಾದಯಾತ್ರೆ, ಹೆಗ್ಗಡಿಹಳ್ಳಿ, ಸೀಗೆಹಳ್ಳಿ, ಮೇಳೆಕೋಟೆ, ಬೀಡಿಕೆರೆ, ರಾಜಘಟ್ಟ, ತಿಮ್ಮಸಂದ್ರ, ದೊಡ್ಡಬಳ್ಳಾಪುರ ಡಿಕ್ರಾಸ್, ಅರ್ಕಾವತಿ ಕ್ಷೇತ್ರವನ್ನು ತಲುಪುತ್ತದೆ. ಮಾರನೆ ದಿನ ಅಂದರೆ ಸೆಪ್ಟೆಂಬರ‍್ ೪ರಂದು ಬೆಳಗ್ಗೆ ಅರ್ಕಾವತಿ ಕ್ಷೇತ್ರದಿಂದ ನಾಗರಕೆರೆ ಏರಿ ಮೂಲಕ ಸಾಗಿ, ಬಾಶೆಟ್ಟಿಹಳ್ಳಿ ಕ್ರಾಸ್‌, ವೀರಾಪುರ, ಚಿಕ್ಕ ತುಮಕೂರು, ಮಜರಾ ಹೊಸಹಳ್ಳಿ, ಜಿಂಕೆ ಬಚ್ಚಹಳ್ಳಿ, ದೊಡ್ಡ ತುಮಕೂರು, ಗೌಡಹಳ್ಳಿ, ಹನಿಯೂರು ಮೂಲಕ ಹೆಸರಘಟ್ಟ ಜಲಾಶಯ ತಲುಪಲಿದೆ. ಮುಂದಿನ ದಿನ ಅಂದರೆ ಸೆಪ್ಟೆಂಬರ‍್ ೫ರಂದು ಹೆಸರಘಟ್ಟದಿಂದ ತಿರುಮಲಾಪುರ, ಹೊರಳಿ ಚಿಕ್ಕನಹಳ್ಳಿ, ತಬರನಹಳ್ಳಿ, ಮುನಿಯಪ್ಪನಪಾಳ್ಯ, ಆಲೂರು, ಹೆಗ್ಗಡೆದೇವನಪುರ, ಮಾಕಳಿ, ಅಡಕಮಾರನಹಳ್ಳಿ ಗೇಟ್‌, ರಾವುತ್ತನಹಳ್ಳಿ ಕ್ರಾಸ್‌, ಗೌಡಹಲ್ಳಿ ಕಾಲನಿ, ರಾವುತ್ತನಹಳ್ಳಿ ಮೂಲಕ ಸೊಂಡೇಕೊಪ್ಪ ತಲುಪಲಿದೆ. ಕೊನೆಯ ದಿನ ಅಂದರೆ ಸೆಪ್ಟೆಂಬರ‍್ ೬ರಂದು ಸೊಂಡೇಕೊಪ್ಪದಿಂದ ಮಲ್ಲಸಂದ್ರ, ವರ್ತೂರು ಕೆರೆ, ಬೈಚನಗುಪ್ಪೆ ಗೇಟ್, ದೇವಮಾಚನಹಳ್ಳಿ, ಮಾರೇನಹಳ್ಳಿ, ಚೋಳನಾಯಕನಹಳ್ಳಿ ಮೂಲಕ ತಿಪ್ಪಗೊಂಡನಹಳ್ಳಿ ತಲುಪಲಿದೆ.
ಅರ್ಕಾವತಿ ಉಗಮಸ್ಥಾನದಿಂದ ಪಂಚಕಳಸಗಳಲ್ಲಿ ನೀರನ್ನು ತೆಗೆದುಕೊಂಡು ತಿಪ್ಪಗೊಂಡನಹಳ್ಳಿಯಲ್ಲಿ ಅದನ್ನು ಸಮರ್ಪಿಸಲಾಗುತ್ತದೆ. ಅರ್ಕಾವತಿಯನ್ನು ಹರಿಸುವ ಉದ್ದೇಶವನ್ನು ಇದು ಸಾರುತ್ತದೆ.
ಪರಿಸರ ಕಾಳಜಿಯುಳ್ಳ ಮನಸ್ಸುಳ್ಳ ಎಲ್ಲ ನಾಗರಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿ, ಜಾಗೃತಿ ಮೂಡಿಸಲಿ ಎಂಬುದೇ ಆಶಯ.

Tuesday, September 1, 2009

ಅಕ್ಷಯನಗರ ಕೆರೆಗೆ ನಾಗರಿಕರ ಕಟಾಕ್ಷ

ಬೆಂಗಳೂರಿನಲ್ಲಿ ಕೆರೆಗಳನ್ನು ಉಳಿಸಬೇಕೆಂದರೆ, ಅದರ ಅಭಿವೃದ್ಧಿ ಆಗಬೇಕೆಂದರೆ ಸರಕಾರವೇ ಮನಸ್ಸು ಮಾಡಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಮೊದಲು ಕೆಲಸ ಕೈಗೆತ್ತಿಕೊಳ್ಳಬೇಕು. ಇಂತಹ ಸ್ವಘೋಷಿತ ನಿಯಮವೇ ಜಾರಿಯಲ್ಲಿದೆ. ಆದರೆ, ಇದನ್ನು ತೊಡೆದು ಹಾಕುವ ಹಾಗೂ ಇತರೆ ಬಡಾವಣೆಯ ನಾಗರಿಕರಿಗೆ ಮಾದರಿ ಎನಿಸುವ ಕಾರ್ಯವನ್ನು ಅಕ್ಷಯನಗರದ ನಿವಾಸಿಗಳು ಕೈಗೆತ್ತಿಕೊಂಡಿದ್ದಾರೆ.
ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಅತ್ಯಂತ ಪ್ರಮುಖ. ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆರೆಗಳು ಅಭಿವೃದ್ಧಿ ಆಗಬೇಕು ಎಂಬುದೇ ಆಶಯ. ಆದರೆ, ಇಂದಿನ ಯಾಂತ್ರಿಕ ಬದುಕಿನಲ್ಲಿ ಅಂತಹ ಪ್ರಯತ್ನಕ್ಕೆ ಕೈಹಾಕುವವರು ವಿರಳ. ಇಂತಹ ಸಾಹಸವನ್ನು ಅಕ್ಷಯನಗರದ ನಿವಾಸಿಗಳು ಮಾಡುತ್ತಿದ್ದಾರೆ. ವಾರಾಂತ್ಯದಲ್ಲಿ ಶ್ರಮದಾನ ಮಾಡುವ ಮೂಲಕ ಕೆರೆಯನ್ನು ಶುಚಿಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಾವೇ ಹಣ ಒಟ್ಟುಗೂಡಿಸಿ, ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಬೇಗೂರು-ಜಿಗಣಿ ರಸ್ತೆಯಲ್ಲಿರುವ ಅಕ್ಷಯನಗರದಲ್ಲಿ ಸುಮಾರು 300 ಮನೆಗಳಿವೆ. 800 ಹೆಚ್ಚು ಖಾಲಿ ನಿವೇಶನಗಳೂ ಇವೆ. ಇವರೆಲ್ಲರೂ ಸೇರಿಕೊಂಡಿರುವ, ಅಕ್ಷಯನಗರ ನಿವಾಸಿಗಳು ಮತ್ತು ನಿವೇಶನ ಮಾಲೀಕರ ಕಲ್ಯಾಣ ಸಂಸ್ಥೆ ವತಿಯಿಂದ ಅಕ್ಷಯನಗರ ಕೆರೆಯನ್ನು ಉಳಿಸಲು ಅಕ್ಷಯನಗರ ಕೆರೆ ಅಭಿವೃದ್ಧಿ ಕಾರ್ಯಪಡೆ ರಚಿಸಿಕೊಂಡಿದ್ದಾರೆ. ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಮಾರ್ಗದರ್ಶನದಲ್ಲಿ ಕೆರೆ ಸಂರಕ್ಷಿಸುವ ಹಾಗೂ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಸುಮಾರು 4 ಎಕರೆ ಪ್ರದೇಶದಲ್ಲಿರುವ ಅಕ್ಷಯನಗರ ಕೆರೆ ಹೂಳು ಹಾಗೂ ಮಾಲಿನ್ಯ ತುಂಬಿಹೋಗಿದೆ. ಅಲ್ಲದೆ ರಾಜಕಾಲುವೆಗಳು ಮುಚ್ಚಿಹೋಗಿವೆ. ಇದರಿಂದ ಮಳೆ ನೀರು ಕೆರೆಗೆ ಹರಿದು ಬರುತ್ತಿಲ್ಲ. ಅಲ್ಲದೆ, ದಂಡೆ ಕೂಡ ದುರ್ಬಲವಾಗಿದ್ದು ನೀರು ನಿಲ್ಲುತ್ತಿಲ್ಲ. ಒಳಚರಂಡಿ ನೀರು ಇಲ್ಲಿಗೆ ಬಂದು ಸೇರುತ್ತಿದೆ. ಇದೆಲ್ಲವನ್ನು ಅರ್ಥೈಸಿಕೊಂಡಿರುವ ಈ ಕೆರೆ ಅಭಿವೃದ್ಧಿ ಕಾರ್ಯಪಡೆ, ಯಲ್ಲಪ್ಪರೆಡ್ಡಿ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿದೆ. ಪ್ರತಿ ಭಾನುವಾರ ಸ್ಥಳೀಯ ನಿವಾಸಿಗಳು ಅವರ ಮಕ್ಕಳೊಂದಿಗೆ ಒಂದು ಗಂಟೆಗಳ ಕಾಲ ಶ್ರಮದಾನದ ಮೂಲಕ ಕೆರೆಯನ್ನು ಶುಚಿಗೊಳಿಸುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್‌ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾದ ಪ್ರೊ. ಲಿಂಗರಾಜು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೆರೆ ಅಭಿವೃದ್ಧಿಗೆ ತಂತ್ರಜ್ಞಾನದ ಸಲಹೆ ನೀಡುತ್ತಿದ್ದಾರೆ.
ಕೆರೆಯನ್ನು ಅಭಿವೃದ್ಧಿಪಡಿಸಬೇಕಾದರೆ ಸ್ಥಳೀಯ ಜನಸಮೂದಾಯದ ಪಾಲುದಾರಿಕೆ ಹಾಗೂ ವಂತಿಕೆ ಪಡೆಯುವುದು ವಾಡಿಕೆ. ಇದನ್ನು ಸ್ವಯಂಪ್ರೇರಿತವಾಗಿ ನಿರ್ವಹಿಸುತ್ತಿರುವ ಅಕ್ಷಯನಗರದ ನಿವಾಸಿಗಳು, ಕೆಲವು ಲಕ್ಷಗಳನ್ನು ಇಲ್ಲಿನ ವಾಸಿಗಳು ಹಾಗೂ ಕೊಡುಗೆಯಿಂದ ಬಿಬಿಎಂಪಿಗೆ ನೀಡುವ ಪಣತೊಟ್ಟಿದ್ದಾರೆ. ಇವರ ಈ ಪ್ರಯತ್ನಕ್ಕೆ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರ ಬೆಂಬಲ ಇದ್ದು, ಅವರು ಸಹ ತಮ್ಮ ಶಾಸಕರ ನಿಧಿಯಿಂದ ಹಣವನ್ನು ನೀಡಲಿದ್ದಾರೆ.
ಶಾಸ್ತ್ರೀಯ ಸಂಗೀತ
ಅಕ್ಷಯನಗರ ಕೆರೆ ಅಭಿವೃದ್ಧಿಗೆ ಹಣ ಸಂಗ್ರಹಿಸಲು ಸ್ಥಳೀಯ ನಿವಾಸಿಗಳು ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಆಗಸ್ಟ್ ೩೦ರಂದು ಭಾನುವಾರ ಬೆಳಗ್ಗೆ ೧೦ಗಂಟೆಯಿಂದ ಅಕ್ಷಯನಗರದಲ್ಲಿರುವ ವೈದರಾಜ ಕಲ್ಯಾಣಭವನದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಒಂದು ಕೆರೆಯನ್ನು ಉಳಿಸಲು ಸ್ಥಳೀಯರ ಆಸಕ್ತಿ ಹಾಗೂ ಜವಾಬ್ದಾರಿ ಏನು ಎಂಬುದನ್ನು ಅಕ್ಷಯನಗರದ ನಿವಾಸಿಗಳು ತಿಳಿದುಕೊಂಡಿದ್ದಾರೆ. ಅದರಂತೆ, ಅಕ್ಷಯನಗರ ಕೆರೆಯನ್ನು ಉಳಿಸಲು ಅವರು ಕೇವಲ ಹೋರಾಟ ಮಾಡುತ್ತಿಲ್ಲ. ಬದಲಿಗೆ, ತಾವು ಏನು ಮಾಡಬಹುದು ಎಂಬುದನ್ನು ಅರಿತುಕೊಂಡು ಕಾರ್ಯಪ್ರವೃತರಾಗಿದ್ದಾರೆ. ಇಂತಹುದೇ ಸಂಘಟನೆಗಳು ಅಥವಾ ಕಾರ್ಯಪಡೆಗಳು ನಗರದ ಹಲವು ಬಡಾವಣೆಗಳಲ್ಲಿ ಹುಟ್ಟಿಕೊಂಡರೆ, ನಮ್ಮ ಕೆರೆಗಳು ಉಳಿಯುವುದಷ್ಟೇ ಅಲ್ಲ, ಅಭಿವೃದ್ಧಿ ಕಾಣುವಲ್ಲಿ ಸಂಶಯವಿಲ್ಲ.
ಕೆರೆ ಸಂರಕ್ಷಿಸುವ ಹಾಗೂ ಅಭಿವೃದ್ಧಿಪಡಿಸುವ ಕೆಲಸ ಸರಕಾರ ಅಥವಾ ಇಲಾಖೆಗಳದ್ದಷ್ಟೇ ಅಲ್ಲ. ಅವರೇ ಮಾಡಲಿ ಎಂದು ಕೈಕಟ್ಟಿ ಕುಳಿತರೆ, ಇನ್ನಷ್ಟು ಕೆರೆಗಳು ನೆಲಸಮವಾಗುತ್ತದೆ. ಅಕ್ಷಯನಗರದ ನಿವಾಸಿಗಳಂತೆ ಸ್ವಯಂಪ್ರೇರಿತವಾಗಿ ಕಾರ್ಯೋನ್ಮುಖವಾದರೆ, ಬೆಂಗಳೂರು ಮತ್ತೊಮ್ಮೆ ‘ಕೆರೆಗಳ ನಗರಿ’ ಎಂಬ ಖ್ಯಾತಿಗೆ ಪಾತ್ರವಾಗುತ್ತದೆ.

Saturday, August 22, 2009

Ganesha, a symbol of the environment ಪರಿಸರ ಗಣೇಶ

ಸಂಪ್ರದಾಯದ ಆಚರಣೆ; ವಾತಾವರಣದ ಆಲಂಗನೆ

ಆನೆಯ ಮುಖದ ಗಣಪ, ಪ್ರಕೃತಿಯ ಸಂಕೇತ. ಮಣ್ಣಿನಿಂದ ಮೂರ್ತಿಯನ್ನು ನಿರ್ಮಿಸಿ ಪೂಜಿಸಲಾಗುತ್ತದೆ. ವಿಸರ್ಜನೆ ಪ್ರಕ್ರಿಯೆ ಮೂಲಕ ಅದನ್ನು ಮತ್ತೆ ನಿಸರ್ಗಕ್ಕೆ ವಾಪಸ್ಸು ನೀಡಲಾಗುತ್ತದೆ. ಈ ಪರಿಕಲ್ಪನೆ ಪರಿಸರಕ್ಕೆ ಮನುಷ್ಯನಿಂದ ನಿಷ್ಠನಾಗಿರಬೇಕೆಂಬ ಪಾಠ. ಆದರೆ, ಜೀವನಶೈಲಿ ಹೊಸ ಸ್ತರಕ್ಕೆ ತಲುಪುತ್ತಿರುವಂತೆಯೇ, ಕೃತಕ, ಹಾನಿಕಾರಕ ಅಂಶಗಳ ಬಳಕೆ ಹೆಚ್ಚಾಗಿ, ಪ್ರಕೃತಿಗೆ ಆಘಾತ ನೀಡುತ್ತಿದ್ದಾನೆ ಮನುಷ್ಯ.

A celebration of tradition; Atmospheric friendly...

 Elephant-faced Ganapa, symbol of nature. An idol is made from clay and worshipped. It is returned back to nature through the process of excretion. This concept is a lesson for man to be loyal to the environment. But, as the lifestyle is reaching a new level, the use of artificial, harmful elements is increasingly causing shock to the nature.


ಗಣಪ ಎಲ್ಲರಿಗೂ ಪ್ರಿಯವಾದ ದೈವ. ಆತನನ್ನು ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಇದರಲ್ಲಿ ಪ್ರಮುಖವಾದದ್ದು ಮಣ್ಣು ಹಾಗೂ ಸಗಣಿ. ಅಂದರೆ, ಪ್ರಕೃತಿಗೆ ಸಹ್ಯವಾದ ಹಾಗೂ ಅದೊಂದಿಗೆ ಲೀನವಾಗುವ ಸಾಮಗ್ರಿ ಅಥವಾ ಪರಿಕರಗಳಿಂದಲೇ ಗಣಪನ ರಚನೆ ಆಗುತ್ತದೆ. ಅದಕ್ಕೆ ಮಾಡುವ ಪೂಜೆಯೇ ಶ್ರೇಷ್ಠ ಎನಿಸುತ್ತದೆ. ಪರಿಸರದ ಪ್ರತೀಕವಾಗಿರುವ ಗಣಪನನ್ನು ಇಂದಿನ ವೈಭವದ ಆಚರಣೆ ಹಾಗೂ ಮೂರ್ತಿ ಬಳಕೆಯಲ್ಲಿನ ಕೃತಕ ಬಣ್ಣ ಹಾಗೂ ರಾಸಾಯನಿಕಗಳು ಗಣೇಶನನ್ನು ಪರಿಸರವಿರೋಧಿಯನ್ನಾಗಿಸಲಾಗಿದೆ.
ಥರ್ಮಕೋಲ್, ಬಟ್ಟೆ, ಮರ, ಹುಲ್ಲು, ಸೆಣಬು, ಪ್ಲಾಸ್ಟರ್ ಆಫ್ ಪ್ಯಾರೀಸ್‌ನಂತಹ ವಸ್ತುಗಳಿಂದ ತಯಾರಿಸಿದ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ಪ್ಲಾಸ್ಟರ್ ಆಫ ಪ್ಯಾರೀಸ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಬಣ್ಣಗಳಲ್ಲಿರುವ ಸೀಸ, ಕ್ರೋಮಿಯಂ, ನಿಕಲ್, ಕ್ಯಾಡ್ಮಿಯಂ ಆರೋಗ್ಯಕ್ಕೆ ಹಾನಿಕಾರಕ. ಈ ಅಂಶಗಳು ನೀರು ಹಾಗೂ ಮಣ್ಣಿನಲ್ಲಿ ಬೆರೆಯುವುದರಿಂದ ಸಸ್ಯಸಂಕುಲ ಹಾಗೂ ಮನುಷ್ಯರ ಆರೋಗ್ಯದ ಮೇಲೆ ಹಾನಿ ಉಂಟು ಮಾಡುತ್ತವೆ. ಜಲಚರಗಳ ನಾಶಕ್ಕೂ ಇದು ನಾಂದಿಯಾಗುತ್ತದೆ.
ಜೇಡಿ ಮಣ್ಣು ಅಥವಾ ಮೃದುಮಣ್ಣಿನಿಂದ ತಯಾರಿಸಿರುವ ಗಣಪ ಮೂರ್ತಿ ಖರೀದಿ ಹಾಗೂ ಪೂಜಿಸುವುದು ಒಳಿತು. ಇಂತಹ ಮೂರ್ತಿಗಳ ವಿಸರ್ಜನೆಯಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ. ಪರಿಸರದಿಂದಲೇ ತೆಗೆದುಕೊಂಡ ಮಣ್ಣನ್ನು, ವಿಸರ್ಜನೆ ರೂಪದಲ್ಲಿ ಮರಳಿ ಅದಕ್ಕೇ ನೀಡಿದಂತಾಗುತ್ತದೆ. ಪರಿಸರವನ್ನು ಸ್ವಚ್ಛವಾಗಿಸಿಕೊಳ್ಳುವ ಪ್ರಯತ್ನ ಎಲ್ಲರದ್ದಾಗಬೇಕು.

ನೈಸರ್ಗಿಕ ಬಣ್ಣ ಇರಲಿ

ಗಣಪನ ಮೂರ್ತಿ ಮಣ್ಣಿನ ಬಣ್ಣದಲ್ಲಿದ್ದರೆ, ಅದನ್ನು ಸಿಂಗಾರದ ಮೂಲಕ ಹೆಚ್ಚಿನ ಮೆರುಗು ನೀಡಬಹುದು. ಬಣ್ಣ ಬೇಕೇಬೇಕು ಎಂಬಂತಾದರೆ, ನೈಸರ್ಗಿಕ ಬಣ್ಣಗಳನ್ನು ಬಳಸಬಹುದು. ಈ ರೀತಿಯ ಗಣಪತಿ ಮೂರ್ತಿಗಳು ನಗರದ ಹಲವು ಭಾಗಗಳಲ್ಲಿ ಲಭ್ಯವಾಗುತ್ತದೆ. ಆದ್ದರಿಂದ, ಪರಿಸರ ಸ್ನೇಹಿ ಬಣ್ಣಗಳಿರುವ ಮೂರ್ತಿಗಳನ್ನು ಪೂಜಿಸಿ ಆರಾಧಿಸಬಹುದು.
ಖರೀದಿದಾರರು ಪರಿಸರ ಸ್ನೇಹಿ ಅಥವಾ ಮಣ್ಣಿನ ಗಣಪನ ಮೂರ್ತಿಯಲ್ಲಿ ಆಸಕ್ತಿ ತೋರಿದರೆ, ಮಾರಾಟಗಾರರೂ ಪರಿಸರಸ್ನೇಹಿ ಮೂರ್ತಿಗಳಿಗೇ ಹೆಚ್ಚನ ಪ್ರಾಮುಖ್ಯ ತೋರುತ್ತಾರೆ. ಮಕ್ಕಳು ರಚ್ಚೆ ಹಿಡಿಯುತ್ತಾರೆ ಎಂದು ಬಣ್ಣದ ಗಣಪನನ್ನು ಕೊಳ್ಳುವವರಿದ್ದಾರೆ. ಅವರಿಗೆ ತಿಳಿ ಹೇಳಿ, ಪರಿಸರದ ಪ್ರಜ್ಞೆ ಮೂಡಿಸಿದರೆ, ಮಾಲಿನ್ಯರಹಿತ ಪರಿಸರವನ್ನು ನಿರ್ಮಿಸುವ ಭವಿಷ್ಯದ ಪ್ರಜೆಯನ್ನು ನಾವು ತಯಾರು ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು.

ಜಾಗೃತಿಗೆ ಆಂದೋಲನ

ಪರಿಸ್ನೇಹಿ ಗಣಪನನ್ನೇ ಪೂಜಿಸಿ. ಕೃತಕ ಬಣ್ಣದ ಮೂರ್ತಿಗಳ ಬಳಕೆ ಬೇಡ. ಇದರಿಂದ ಪರಿಸರಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ ಎಂದು ಸಾರಲು ಪರಿಸರಗಣಪತಿ.ನೆಟ್ ಎಂಬ ವೆಬ್‌ಸೈಟ್ ಅನಾವರಣಗೊಂಡಿದೆ. ಜನರಿಗೆ ಪರಿಸರ ಗಣಪತಿಯ ಅರಿವು ನೀಡುವ ಜತೆಗೆ, ಪರಿಸರಸ್ನೇಹಿ ಗಣಪನ ಮೂರ್ತಿಗಳು ಎಲ್ಲಿ ಸಿಗುತ್ತವೆ ಎಂಬ ಮಾಹಿತಿಯನ್ನೂ ಇದು ನೀಡುತ್ತದೆ. ಜತೆಗೆ, ಧಾರ್ಮಿಕ ಆಚರಣೆ ಹಾಗೂ ಪರಿಸರ ರಕ್ಷಣೆಯ ಬಗ್ಗೆ ಪ್ರಮುಖ ಸ್ವಾಮೀಜಿಗಳ ಅಭಿಪ್ರಾಯವನ್ನು ನೀಡಿದೆ. (ಇದರ ಕೆಲವು ಅಂಶಗಳು ಇಲ್ಲಿ ಪ್ರಕಟಿಸಲಾಗಿದೆ). ಕೃತಕ ಬಣ್ಣದ ಗಣಪನ ಮೂರ್ತಿಗಳಿಂದ ಪರಿಸರದ ಮೇಲೆ ಉಂಟಾಗುವ ಸವಿವರಗಳೂ ಈ ವೆಬ್‌ಸೈಟ್‌ನಲ್ಲಿವೆ.

ಧಾರ್ಮಿಕ ಆಚರಣೆ

ಪಾರ್ವತಿಸುತ ಗಣೇಶನ ಹುಟ್ಟು ಹಾಗೂ ಆತನ ಮರುಜನ್ಮದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆನೆಯ ಮುಖದಿಂದ ಮತ್ತೆ ಪ್ರಾಣ ಪಡೆದ ಗಣಪನಿಗೆ ಈಶ್ವರ ಅಗ್ರಪೂಜೆಯ ವರವನ್ನೂ ಪ್ರಸಾದಿಸಿದ. ಇಂತಹ ಗಣಪನನ್ನು ಆದಿಕಾಲದಿಂದಲೂ ಪೂಜಿಸುತ್ತಿದ್ದೇವೆ. ಗಣಪನನ್ನು ನಿಸರ್ಗಪ್ರಿಯ, ಪ್ರಾಣಿಕುಲದ ಸಂರಕ್ಷಕ ಎಂದೇ ಋಷಿಮುನಿಗಳು ಭಾವಿಸಿ, ಆರಾಧಿಸುತ್ತಿದ್ದರು. ಅದಕ್ಕೇ, ಹೊಂಡ, ಕೆರೆಯ ದಡದಲ್ಲಿ ಸಿಗುವ ಜೇಡಿ ಮಣ್ಣು ಅಥವಾ ಮೃದುವಾಗಿರುವ ಮಣ್ಣಿನಲ್ಲಿ ಗಣೇಶನ ಮೂರ್ತಿ ತಯಾರಿಸಿ, ಪೂಜೆ ಸಲ್ಲಿಸುತ್ತಿದ್ದರು.
ಕೆರೆಯಿಂದ ಮಣ್ಣನ್ನು ತೆಗದು, ಮೂರ್ತಿ ಮಾಡಿ, ಪೂಜಿಸಿ, ಮತ್ತೆ ಕೆರೆಗೇ ಆ ಮೂರ್ತಿಯನ್ನು ಬಿಡುವ ಪರಿಕಲ್ಪನೆ ಪ್ರಕೃತಿ ಪೂಜೆಯೇ ಆಗಿತ್ತು. ಅದಕ್ಕೇ ಯಾವುದೇ ಕೃತಕವಾದದ್ದು ಸೇರಿಸುತ್ತಿರಲಿಲ್ಲ. ಬಣ್ಣವೂ ಇರಲಿಲ್ಲ. ಕೇವಲ ಮಣ್ಣಿನಿಂದ ತಯಾರಿಸಿದ ಗಣಪನ ಮೂರ್ತಿಯೇ ಪೂಜೆಗೆ ಶ್ರೇಷ್ಠ ಎಂಬುದು ನಮ್ಮ ಆಚರಣೆಗಳಿಂದ ತಿಳಿದುಬರುತ್ತದೆ.
ಅದೆಷ್ಟೇ ದೊಡ್ಡ ಗಣಪ ಮೂರ್ತಿಯನ್ನು ಕೂರಿಸಲಿ ಪೂಜಿಸಲಿ. ತಾಮ್ರ, ಬೆಳ್ಳಿ, ಚಿನ್ನದಲ್ಲಾದರೂ ಗಣಪನ ಮೂರ್ತಿ ಇರಲಿ. ಇವೆಲ್ಲದಕ್ಕೆ ಮುಂಚೆ ಸಗಣಿಯಲ್ಲಿ ಮಾಡಿದ, ಗರಿಕೆಯಿಂದ ಕೂಡಿದ ಗಣಪನಿಗೆ ಪೂಜೆ ಆಗಲೇಬೇಕು. ಇದನ್ನು ಪಿಲ್ಲಾರಿ ಗಣಪನೆಂದೂ ಕರೆಯಲಾಗುತ್ತದೆ. ಈ ಗಣಪನಿಗೆ ಪೂಜೆ ಸಲ್ಲಿಸಿದರೆ ಮಾತ್ರ, ಪೂಜೆ ಸಾರ್ಥಕ್ಯವಾದಂತೆ.
ಸಗಣಿ ತಾಯಿ ಸ್ವರ್ಣಗೌರಿಯಂತೆ. ಲೋಕದಲ್ಲಿ ಅತ್ಯಂತ ಪವಿತ್ರದ್ದು ಸಗಣಿ. ಇದರಲ್ಲಿ ಗರಿಕೆಯನ್ನು ಇಟ್ಟು ಗಣಪನ ಮೂರ್ತಿ ರಚಿಸಲಾಗುತ್ತದೆ. ಗರಿಕೆ ಅಂದರೆ ಹುಲ್ಲು ಆನೆಗೆ ಅತ್ಯಂತ ಇಷ್ಟವಾದ ಆಹಾರ. ಅಂದರೆ, ತಾಯಿ ಹಾಗೂ ಮುಖವಾಗಿರುವ ಆನೆ ಆಹಾರದೊಂದಿಗೆ ಪಿಲ್ಲಾರಿ ಗಣಪನ ರಚನೆ ಅರ್ಥಪೂರ್ಣವಾದದ್ದು. ಅದಕ್ಕೇ ಇದು ಶ್ರೇಷ್ಠ. ಎಲ್ಲ ಪೂಜೆಗಳಲ್ಲಿ ಅಗ್ರಪೂಜೆ ಆಗುವುದು ಪಿಲ್ಲಾರಿ ಗಣಪನಿಗೇ. ಕೆಲ ಭಾಗದಲ್ಲಿ ಅಕ್ಷತೆ ಹಾಗೂ ಜೇಡಿ ಮಣ್ಣಿನಲ್ಲೂ ಗಣಪನನ್ನು ರಚಿಸಿ ಪೂಜಿಸಲಾಗುತ್ತದೆ.
ಗಣಪನಿಗೆ ಪರಿಸರವೆಂದರೆ ಎಷ್ಟು ಪ್ರೇಮ ಎಂಬುದು ಈ ಆಚರಣೆಗಳಿಂದಲೇ ತಿಳಿದು ಬರುತ್ತದೆ. ಆದ್ದರಿಂದ, ಕೃತಕ ಬಣ್ಣಗಳು ಹಾಗೂ ವಿಷಕಾರಕ ಅಂಶಗಳ ಗಣಪನ ಮೂರ್ತಿಯನ್ನು ತ್ಯಜಿಸುವುದು ಸೂಕ್ತ.

ಸ್ವಾಮೀಜಿಗಳು ಏನು ಹೇಳುತ್ತಾರೆ?

ಗಣಪತಿಯ ಪೂಜೆಯನ್ನು ಧಾರ್ಮಿಕವಾಗಿ ಹೆಚ್ಚಿನ ಕಾಳಜಿಯಿಂದ ನಿರ್ವಹಿಸಬೇಕು. ಮೂರ್ತಿಗಳನ್ನು ಶುದ್ಧ ನೀರಿನಲ್ಲಿ ವಿಸರ್ಜಿಸಬೇಕು. ಮಾಲಿನ್ಯ ಉಂಟು ಮಾಡುವ ಪೈಂಟ್‌ಗಳನ್ನು ವರ್ಜಿಸಬೇಕು. ಪರಿಸರ, ನೆರೆಹೊರೆಗೆ ಅನಾನುಕೂಲವಾಗದಂತೆ ಪೂಜೆ ಮಾಡಬೇಕು.

  •  -ಸ್ವಾಮಿ ಬ್ರಹ್ಮಾನಂದಜಿ, ಚಿನ್ಮಯ ಮಿಷನ್, ಬೆಂಗಳೂರು

  • ಮೂರ್ತಿಯ ಬಣ್ಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡದೆ, ಸಕಲ ಪಾಪ ಪರಿಹಾರ ಮಾಡಿ, ಐಶ್ವರ್ಯ ಕೊಡುವ ಸಾಕ್ಷಾತ್ ಲಕ್ಷ್ಮಿಯ ಅಂಶವಿರುವ ಮಣ್ಣಿನ ಮೂರ್ತಿಯನ್ನೇ ಪೂಜಿಸಬೇಕು. ಪರಿಸರಕ್ಕೆ ಹಾನಿ ಇಲ್ಲದ ಬಣ್ಣಗಳನ್ನು ಮಾತ್ರ ಬಳಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.

  • -ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಮಠ

ಆನೆಯ ಬಣ್ಣ ಒಂದೇ ಅಗಿರುತ್ತದೆ. ಅದು ಸ್ವಾಭಾವಿಕ ಬಣ್ಣ. ಗಣಪತಿ ಮೂರ್ತಿಯ ಬಣ್ಣವೂ ಕೂಡ ನೈಸರ್ಗಿಕವಾಗಿರಬೇಕು. ಹಾನಿಕಾರ ಬಣ್ಣಗಳನ್ನು ಉಪಯೋಗಿಸುವುದರಿಂದ ತಾಯಿ ಗಂಗಾಭವಾನಿಯನ್ನು ಮಾಲಿನ್ಯ ಮಾಡಿದಂತಾಗುತ್ತದೆ. ಪೂಜೆ ಮಾಡುವಾಗ ಗಣಪತಿ ಮನಸ್ಸಿನಲ್ಲಿರಬೇಕು. ಪರಿಸರಕ್ಕೆ ಹಾನಿ ಮಾಡಬಾರದು.
  • -ಶ್ರೀ ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್

ಭಾರತದ ಧಾರ್ಮಿಕ, ಸಂಸ್ಕೃತಿ ಹಾಗೂ ಸಂಪ್ರದಾಯದ ದೇಶ. ಗಣಪತಿ ಹಬ್ಬದಂತಹ ಆಚರಣೆಗಳ ಮೂಲಕ ಮುಂದಿನ ಜನಾಂಗಕ್ಕೆ ಅದನ್ನು ಪಸರಿಸಬೇಕು. ಆದ್ದರಿಂದ ನಮ್ಮ ಸಂಪ್ರದಾಯದಂತೆ ಮಣ್ಣಿನ ಮೂರ್ತಿಯನ್ನೇ ಪೂಜಿಸಬೇಕು. ಬಣ್ಣದ ಮೂರ್ತಿಗಳ ಮೂಲಕ ನೀರಿನ ಮೂಲಗಳಿಗೆ ರಾಸಾಯನಿಕ ಬಿಡಬಾರದು.
  • -ಶ್ರೀ ಡಾ. ಶಿವಮೂರ್ತಿ ಮುರುಘ ಶರಣರು, ಶ್ರೀ ಮುರುಘ ಮಠ

ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ವಿಷಕಾರಕ ರಾಸಾಯನಿಕಯುಕ್ತ ಪೈಂಟ್ ಬಳಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ನಮ್ಮ ಸಂಪ್ರದಾಯದಂತೆ ಕೆರೆಗಳ ದಡದ ಮಣ್ಣಿನಿಂದ ಮೂರ್ತಿಗಳನ್ನು ತಯಾರಿಸಬೇಕು. ಬಣ್ಣ ಬೇಕೆಂದೇ ಆದರೆ, ತರಕಾರಿ ಮೂಲದಿಂದ ತಯಾರಾದ ಬಣ್ಣಗಳನ್ನು ಬಳಸಬೇಕು.
  • -ಸ್ವಾಮಿ ಹರ್ಷಾನಂದಜಿ, ಶ್ರೀ ರಾಮಕೃಷ್ಣ ಮಠ, ಬೆಂಗಳೂರು

ಪರಿಸರಕ್ಕೆ ಹಾನಿಯಾಗುವ ವಿಷಕಾರಿ ಪೇಯಿಂಟ್‌ಗಳನ್ನು ಗಣಪತಿ ಮೂರ್ತಿ ತಯಾರಿಕೆಯಲ್ಲಿ ಬಳಸಬಾರದು. ಗಣಪತಿ ಪೂಜೆಯನ್ನು ಪರಿಸರ ಕಾಳಜಿಯೊಂದಿಗೆ ಮಾಡಬೇಕು. ಸಂಸ್ಕೃತಿ ಮತ್ತು ಧಾರ್ಮಿಕ ಪ್ರಕಾರಗಳು ಶಾಸ್ತ್ರೋಕ್ತವಾಗಿ ಪುರಾಣದಲ್ಲಿದ್ದಂತೆ ನಿರ್ವಹಿಸಬೇಕು.
  • -ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠ

ಗಣಪತಿ ಕೃಷಿಯ ದೇವತೆ. ಎರಡು ದೊಡ್ಡ ಕಿವಿಗಳು ಮೊರದಾಕಾರದ ಗುದ್ದಲಿಯ ಪ್ರತೀಕ. ಉದ್ದನೆಯ ದಂತ- ನೇಗಿಲು ಹಾಗೂ ಸೊಂಡಿಲು ನೀರಾವರಿಯ ಪ್ರತೀಕ. ಆದ್ದರಿಂದ ಪರಿಸರ ಸ್ನೇಹಿ ಮೂರ್ತಿಗಳನ್ನೇ ಪೂಜಿಸಬೇಕು. ಆಗಮಗಳ ಪ್ರಕಾರ ದೊಡ್ಡ ಮೂರ್ತಿಗಳನ್ನು ಪೂಜಿಸಬಾರದು. ಮಣ್ಣಿನ ಮೂರ್ತಿಗಳೇ ಶ್ರೇಷ್ಠ.
  • -ಶತವಧಾನಿ ಡಾ. ಆರ್. ಗಣೇಶ್

Ganesha, a symbol of the environment


Ganapa is the beloved deity of all. He is worshiped in many forms. The most important of these are soil and dung. That is, Ganapan is made of materials or accessories that are compatible with nature and merge with it. Worshiping it is great. Today's lavish worship of Ganesha, a symbol of the environment, and the use of artificial colors and chemicals in idols have made Ganesha anti-environmental.

 Idols made of materials like thermocol, cloth, wood, grass, jute, plaster of paris are insoluble in water. Plaster of paris causes cancer. Lead, chromium, nickel, cadmium in paints are harmful to health. These elements mix in water and soil and cause damage to flora and human health. It also leads to the destruction of aquatic life.
 It is good to buy and worship Ganapa idol made of clay or soft clay. The discharge of such idols does not harm the environment. Soil taken from the environment is returned to it in the form of discharge. Everyone should try to keep the environment clean.

Let the color be natural

 If the Ganapa Murti is earthen in colour, it can be given extra polish by painting. If color is desired, natural colors can be used. These types of Ganpati idols are available in many parts of the city. Therefore, idols with eco-friendly colors can be worshiped.
 While buyers are interested in eco-friendly or clay Ganapan idols, sellers are also giving more importance to eco-friendly idols. There are people who buy colored Ganapan because children will catch it. Let them know that if we create environmental awareness, we will prepare the future citizen who will build a pollution free environment. Everyone should be active in this regard.

 A movement for awareness

 Worship Lord Ganapa, the friend. Do not use artificially colored idols. A website called parisaraganapathi.net has been launched to show that this is causing a lot of damage to the environment. Apart from making people aware of Eco Ganesha, it also provides information on where to get eco-friendly Ganesha idols. In addition, it provides the views of prominent Swamijis on religious practices and environmental protection. (Some aspects of this are published here). This website also has details on the environmental impact of artificial colored Ganesha idols.

 Religious practice

Everyone knows about the birth of Lord Ganesha and his rebirth. Lord Ganesha also granted the boon of agrapuja to Ganap, who regained his life from the elephant's face. We have been worshiping such Ganesha since ancient times. Sages used to worship Ganapa as nature lover and savior of animals. That's why they used to make an idol of Lord Ganesha in clay or soft soil found on the banks of pits, lakes and worship.
The concept of taking soil from the lake, making an idol, worshiping it, and then leaving the idol in the lake itself was Prakriti Puja. Nothing artificial was added to it. There was no color. It is known from our practices that only the idol of Ganapa made of clay is best for worship.
 Let's worship the same big idol of Ganapa. Let there be an idol of Ganap in copper, silver or gold. Before all this, worship should be done to Lord Ganesha made in dung and filled with garike. It is also known as Pillari Ganapan. Only if worship is offered to this Ganesha, then the worship is worthwhile.
 Dung mother is like Svarangauri. Dung is the most sacred thing in the world. An idol of Ganapan is created by putting a garike in it. Grass is the favorite food of elephants. That is, the structure of Pillari Ganapa with elephant food as mother and face is meaningful. That's why it's great. Pillari Ganapan is the most important of all the pujas. In some parts Ganapa is created and worshiped in clay and clay.
 It is only through these rituals that Ganapa gets to know how much he loves the environment. Therefore, it is advisable to avoid Ganapana Murti with artificial colors and toxic elements.

What do Swamijis say?

 The worship of Ganapati should be religiously performed with great care. Idols should be dissolved in pure water. Polluting paints should be avoided. Puja should be done without inconveniencing the environment and the neighborhood.
  •  -Swami Brahmanandaji, Chinmaya Mission, Bangalore

 Without giving too much representation to the color of the idol, one should worship only the clay idol which has the element of Lakshmi, the one who atones all sins and gives wealth. Only environmentally friendly colors should be used. Environmental protection is our responsibility.
  •  -Sri Vishveshwatheertha Swamiji, Sri Pejavara Math

 The color of the elephant is the same. It is a natural color. The color of Ganapati idol should also be natural. Using harmful dyes pollutes mother Ganga Bhavani. Ganapati should be kept in mind while worshiping. Do not harm the environment.
  •  -Sri Sri Ravi Shankar Guruji, Art of Living

 India is a country of religion, culture and tradition. It should be spread to the next generation through rituals like Ganapati festival. Therefore, according to our tradition, the clay idol should be worshipped. Chemicals should not be released into water sources through colored idols.
  •  - Mr. Dr. Shivamurthy Muruga Sharanaru, Sri Muruga Math

The use of toxic chemical paint in the manufacture of Ganapati idols harms the environment. According to our tradition, idols should be made from the mud of the banks of the lakes. If color is desired, dyes prepared from vegetable sources should be used.
  •  -Swami Harshanandaji, Sri Ramakrishna Math, Bangalore

 Toxic paints which harm the environment should not be used in making Ganapati idol. Ganapati Puja should be done with environmental concern. Culture and religious forms should be maintained ritualistically as in Purana.
  •  -Sri Balagangadharnath Swamiji, Sri Adichunchanagiri Math

 Ganapati is the goddess of agriculture. The two large ears symbolize the hoe. A long tooth-plough and a trunk symbolize irrigation. Therefore environment friendly idols should be worshipped. According to Agamas big idols should not be worshipped. Clay idols are the best.
  •  - Shatavadhani Dr. R. Ganesh

Thursday, August 20, 2009

Color Ganesha: A loophole for the environment ಬಣ್ಣದ ಗಣಪ: ಪರಿಸರಕ್ಕೆ ಲೋಪ

ಚಿನ್ನ ಮಿಶ್ರಿತ ಹಳದಿ ಬಣ್ಣದ ಕಿರೀಟ, ಕೆಂಪುಬಣ್ಣದ ಧೋತಿ, ಹಸಿರು ಅಥವಾ ನೀಲಿ ಬಣ್ಣದ ಶಲ್ಯ, ಕಿವಿಗೆ ಗುಲಾಬಿ ರಂಗು, ಸೊಂಡಲಿಗೆ ಕೆಂಪುಮಿಶ್ರತ ಗುಲಾಬಿ ಬಣ್ಣ, ವಾಹನ ಇಲಿಗೆ ಕಪ್ಪು ಬಣ್ಣ... ಗೊತ್ತಾಯಿತಲ್ಲಾ? ಇಷ್ಟೆಲ್ಲ ಹೇಳಿದ ಮೇಲೆ ಗಣೇಶ ಮೂರ್ತಿ ಬಗ್ಗೆ ಮಾತನಾಡುತ್ತಿರುವುದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂತಹ ಗಣಪ ಮೂರ್ತಿ ಆನಂದ ನೀಡುತ್ತಾನೆ ಎಂಬುದೇನೋ ನಿಜ. ಆದರೆ, ಈ ಮೂರ್ತಿಯಿಂದಲೇ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ತಿಳಿದಿದೆಯೇ?

Kere Manjunath ಕೆರೆ ಮಂಜುನಾಥ್ 

Yellow color crown mixed with gold, red color dhoti, green or blue color shalya, pink color for ears, reddish pink color for trunk, black color for vahan rat... do you know? Having said all this, it is needless to say that we are talking about Ganesha idol. It is true that such a Ganesha idol gives pleasure. But, do you know that this idol itself has bad effects on health?



ಗಣೇಶ ಬಂದ, ಕಾಯಿ-ಕಡುಬು ತಿಂದ. ಚಿಕ್ಕ ಕೆರೆಗೆ ಬಿದ್ದ, ದೊಡ್ಡ ಕೆರೇಲಿ ಎದ್ದ... ಇದು ಗಣಪನ ಬಗ್ಗೆ ಹಾಡಿಕೊಳ್ಳುವ ಪದ... ಇಂದು ನ್ನು ಬದಲಿಸಬೇಕಿದೆ...

Ganesha came and ate the nut-cake. Fell into a small lake, rose up into a big lake... This is the song about Ganesha... It needs to be changed today...

ಬಣ್ಣ ತುಂಬಿದ ಗಣೇಶ ಬಂದ, ಪ್ಲಾಸ್ಟಿಕ್ ಕಟ್ಟಿಕೊಂಡು ಕೆರೆಗೆ ಬಿದ್ದ, ಬಣ್ಣದ ವಿಷ ನೀರಿಗೆ ಬಿಟ್ಟ, ಆರೋಗ್ಯಕ್ಕೆ ಪೆಟ್ಟು ಕೊಟ್ಟ...
ಹೀಗೆ ಹಾಡಿಕೊಳ್ಳಬೇಕಾದ ಪರಿಸ್ಥಿತಿ ಬೆಂಗಳೂರಿಗರದ್ದಾಗಿದೆ. ಏಕೆಂದರೆ, ಬೆಂಗಳೂರಿನಲ್ಲಿ ಉಳಿದಿರುವ ಕೆರೆಗಳು ಕಡಿಮೆ. ಅದರಲ್ಲಿ ವಿಷಕಾರಕ ಬಣ್ಣವನ್ನು ಹೊಂದಿರುವ ಗಣಪನ ಮೂರ್ತಿ ವಿಸರ್ಜನೆ ಆದ ಮೇಲೆ, ಆ ವಿಷ ನೀರಿನ ಮೂಲಕ ಅಂತರ್ಜಲ ಸೇರುತ್ತದೆ. ಬೋರ್‌ವೆಲ್ ಮೂಲಕ ಮನೆಯನ್ನೂ ಸೇರುತ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಹತ್ತಾರು ರೋಗಗಳನ್ನು ತರುತ್ತದೆ. ಜತೆಗೆ ಪರಿಸರ ಮಾಲಿನ್ಯವನ್ನೂ ಹೆಚ್ಚಾಗುತ್ತದೆ.
ಮಕ್ಕಳಿಗೆ ಅತ್ಯಂತ ಪ್ರಿಯವಾದ ಗಣಪ, ಎಲ್ಲ ವಯೋಮಾನದವರಿಂದಲೂ ಪೂಜಿತ. ಗಣಪತಿ ಹಬ್ಬದಲ್ಲಿ ಲಕ್ಷಾಂತರ ಮೂರ್ತಿಗಳಿಗೆ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಲ್ಲಿ ಬಹುತೇಕ ಮೂರ್ತಿಗಳು ನಳನಳಿಸುತ್ತಲೇ ಇರುತ್ತವೆ. ಈ ಮಿನುಗಿಗೆ ಕಾರಣ ಹತ್ತಾರು ಬಣ್ಣಗಳು. ನೈಸರ್ಗಿಕ ಬಣ್ಣಗಳ ಹೊರತಾಗಿ ಕೃತಕ ಬಣ್ಣಗಳನ್ನು ಮೂರ್ತಿಯಲ್ಲಿ ಬಳಸಲಾಗಿರುತ್ತದೆ. ಇದರಿಂದ ಪರಿಸರ ಮಾಲಿನ್ಯಗೊಳ್ಳುತ್ತದೆ. ಮಾಲಿನ್ಯದಲ್ಲೂ ಈ ರಾಸಾಯನಿಕ ಅಂಶಗಳು ಸೇರಿಕೊಂಡು, ನೀರು, ಗಾಳಿ ಮೂಲಕ ಮನುಷ್ಯ ಮತ್ತು ಸಸ್ಯ ಸಂತತಿಗೆ ಸೇರಿಕೊಳ್ಳುತ್ತಿವೆ. ಈ ವಿಷಕಾರಕ ಅಂಶ ಮಾನವನಲ್ಲಿ ಹಲವು ಬಗೆಯ ರೋಗಗಳನ್ನು ತರುತ್ತದಲ್ಲದೆ, ಗಿಡ-ಮರಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ.
ಹಿಂದಿನ ಕಾಲದಲ್ಲಿ ಜೇಡಿಮಣ್ಣಿನಿಂದ ತಯಾರಿಸಲಾದ ಗಣಪತಿಯನ್ನು ಪೂಜಿಸಲಾಗುತ್ತಿತ್ತು. ಜೀವನಶೈಲಿ ಬದಲಾದಂತೆ ಹೈಟೆಕ್ ಟಚ್ ನೀಡಲಾಯಿತು. ಅದಕ್ಕೇ ಮಣ್ಣಿನ ಗಣಪತಿಗೆ ಬಣ್ಣ ನೀಡಲಾಯಿತು. ಇದರಲ್ಲಿನ ರಾಸಾಯನಿಕ ಅಂಶಗಳ ಬಗ್ಗೆ ಕಾಳಜಿ ವಹಿಸಲಿಲ್ಲ. ಈ ಗಣಪತಿ ಮೂರ್ತಿಗಳೇ ಹೆಚ್ಚಾಗಿ ಪೂಜಿತಗೊಂಡು, ವಿಸರ್ಜನೆ ಆಗುತ್ತಿರುವುದರಿಂದ ಕಳೆದ ವರ್ಷಗಳಲ್ಲಿ ರಾಸಾಯನಿಕ ಅಂಶ ಅಂತರ್ಜಲದಲ್ಲಿ ಹೆಚ್ಚಾಗುತ್ತಿದೆ. ಇದು ಪರಿಸರಗಣಪತಿ.ನೆಟ್ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.
ಇಂದಿನ ದಿನಗಳಲ್ಲಿ ಮೂರ್ತಿಗಳ ತಯಾರಿಕೆಯಲ್ಲಿ ನಾರು, ಹುಲ್ಲು, ಬಟ್ಟೆ, ಕಾಗದ, ಮರ, ಥರ್ಮಕೋಲ್, ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸಲಾಗುತ್ತಿದೆ. ಇವುಗಳ ಜತೆಗೆ ಅತ್ಯಂತ ಹಾನಿಕಾರಕ ಕೃತಕ ಬಣ್ಣಗಳನ್ನೂ ಉಪಯೋಗಿಸಲಾಗುತ್ತಿದೆ. ಇದರಲ್ಲಿ ಬಹುತೇಕ ಸಾಮಗ್ರಿಗಳು ನೀರಿನಲ್ಲಿ ಕರಗುವುದಿಲ್ಲ. ಬದಲಿಗೆ ಕೆರೆ ಅಥವಾ ಹೊಂಡದಲ್ಲಿ ಮಾಲಿನ್ಯ ಸೃಷ್ಟಿ ಮಾಡುತ್ತವೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ಕೃತಕ ಬಣ್ಣಗಳು ವಿಷಕಾರಕ ರಾಸಾಯನಿಕ ಅಂಶಗಳನ್ನು ನೀರಿಗೆ ಬಿಡುಗಡೆ ಮಾಡುತ್ತವೆ.
ಸ್ಯಾಂಕಿ ಕೆರೆಯಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ವಿಸರ್ಜನೆ ಆಗುವ ಮೂರ್ತಿಗಳ ಬಗ್ಗೆ ಪಿ. ಮಂಜುನಾಥ್, ಪ್ರಮೋದ್ ಸುಬ್ಬರಾವ್ ಹಾಗೂ ಹರೀಶ್ ಭಟ್ ಎಂಬುವವರು ಅಧ್ಯಯನ ಮಾಡಿದ್ದಾರೆ. ಬಣ್ಣದ ಮೂರ್ತಿಗಳಿಂದ ಪರಿಸರಕ್ಕೆ ಆಗುತ್ತಿರುವ ತೊಂದರೆಯನ್ನು ಸವಿಸ್ತಾರವಾಗಿ ತೆರೆದಿಟ್ಟಿದ್ದಾರೆ. ಪರಿಸರಗಣಪ.ನೆಟ್ ಎಂಬ ವೆಬ್‌ಸೈಟ್‌ನಲ್ಲಿ ಬಣ್ಣದ ಗಣಪನಿಂದ ಪರಿಸರಕ್ಕೆ ಹಾನಿ ಹಾಗೂ ಅದರ ಅನುಕೂಲದ ಬಗ್ಗೆ ವಿವರಿಸಿದ್ದಾರೆ. ಬಣ್ಣದ ಗಣಪನ ಮೂರ್ತಿ ಪೂಜೆಯಿಂದ ದೂರಾಗಿ, ನೈಸರ್ಗಿಕ ಬಣ್ಣ ಹೊಂದಿರುವ ಅಥವಾ ಮಣ್ಣಿನ ಮೂರ್ತಿಯನ್ನು ಉಪಯೋಗಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಇದಾಗಿದೆ. ಇದರ ಬಗ್ಗೆ ಹಲವು ಮಠದ ಸ್ವಾಮೀಜಿಗಳ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ.
ಸುಮಾರು ೨ ಅಡಿ ಎತ್ತರದ ಬಣ್ಣದ ಗಣಪನ ಮೂರ್ತಿ ಎರಡು ಗ್ರಾಂ ಸೀಸ ಬಿಡುಗಡೆ ಮಾಡುತ್ತದೆ. ಹಾಗಾದರೆ, ೨ ಅಡಿಗೂ ಹೆಚ್ಚಿರುವ ೫.೧ ಲಕ್ಷ ಮೂರ್ತಿಗಳಿಂದ ಕೆರೆಗೆ ಹಾಗೂ ಪರಿಸರಕ್ಕೆ ಅದೆಷ್ಟು ಸೀಸ ಬಿಡುಗಡೆ ಆಗಬಹುದು. ಅಂತರ್ಜಲ ಹಾಗೂ ಆರೋಗ್ಯದ ಮೇಲೆ ಇನ್ನೆಷ್ಟು ಪರಿಣಾಮ ಬೀರಬಹುದು? ಒಮ್ಮೆ ಆಲೋಚಿಸಿ.

ಗಣೇಶನಿಂದ ಮಾತ್ರ ಮಾಲಿನ್ಯವೇ?
ಬೆಂಗಳೂರಿನಲ್ಲಿ ಕೆರೆಗಳು ಒಳಚರಂಡಿ ನೀರಿನಿಂದ ಮಾಲಿನ್ಯಗೊಂಡಿವೆ. ಅಲ್ಲಿ ಕೈ ಇಡಲೂ ಸಾಧ್ಯವಿಲ್ಲ. ವರ್ಷದ ಒಂದು ದಿನ ಗಣೆಶನ ಮೂರ್ತಿಗಳನ್ನು ಬಿಟ್ಟರೆ ಏನಾಗುತ್ತದೆ? ಎಂಬ ಪ್ರಶ್ನೆ ಕೇಳುವವರಿಗೇನು ಕಡಿಮೆ ಇಲ್ಲ. ಇದು ನೀವು ಯಾವ ರೀತಿಯ ಗಣಪನ ಮೂರ್ತಿ ಪೂಜಿಸಿ, ವಿಸರ್ಜಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.
ಕೇವಲ ಮಣ್ಣಿನಿಂದ ತಯಾರಾದ ಮೂರ್ತಿಗಳಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಕೃತಕ ಬಣ್ಣಗಳಿಂದ ಕೂಡಿದ, ಪ್ಲಾಸ್ಟರ್ ಆಫ್ ಪ್ಯಾರೀಸ್, ಹುಲ್ಲು, ಬಟ್ಟೆ, ಮರದಿಂದ ತಯಾರಿಸಿ ಮೂರ್ತಿಗಳು ಕೆರೆಗಳಲ್ಲಿ ಕರಗುವುದಿಲ್ಲ. ರಾಸಾಯನಿಕ ಅಂಶಗಳನ್ನು ನೀರಿಗೆ ಬಿಡುವುದಲ್ಲದೆ, ಮಾಲಿನ್ಯವನ್ನೂ ಸೃಷ್ಟಿಸುತ್ತದೆ. ಇದನ್ನು ಕಾಣಬೇಕೆಂದರೆ, ಮೂರ್ತಿ ವಿಸರ್ಜನೆಯ ಕೆಲವು ದಿನಗಳ ಬಳಿಕ ಕೆರೆಗಳ ಬಳಿಗೆ ಹೋಗಬೇಕು. ಅಲ್ಲಿ, ದಂಡೆಯ ಮೇಲೆ ಮೂರ್ತಿ ಅವಶೇಷಗಳು ಕಾಣುತ್ತಿರುತ್ತವೆ. ಈ ಮೂರ್ತಿಯನ್ನೇ ನಾವು ಪೂಜಿಸಿದ್ದು ಎಂಬ ಆತಂಕ ಮೂಡುತ್ತದೆ. ಆದ್ದರಿಂದ ಪರಿಸರಸ್ನೇಹಿ ಗಣೇಶನ ಮೂರ್ತಿ ಪೂಜಿಸುವುದು, ವಿಸರ್ಜಿಸುವುದು ನಮ್ಮ ಆಚರಣೆ. ಅದನ್ನು ಮರೆತಿದ್ದೇವೆ. ಆದ್ದರಿಂದ ಮಾಲಿನ್ಯಕ್ಕೆ ಕರೆ ನೀಡುತ್ತಿದ್ದೇವೆ.

Also read....Ganesha, a symbol of the environment ಪರಿಸರ ಗಣೇಶ 

ಪ್ರತಿ ವರ್ಷ ೬ ಲಕ್ಷ ಮೂರ್ತಿ ತಯಾರಿ
  • ಬೆಂಗಳೂರಿನಲ್ಲಿ ಪ್ರತಿ ವರ್ಷ ಅಂದರೆ ಗಣೇಶನ ಹಬ್ಬಕ್ಕಾಗಿ ಸುಮಾರು ೬ ಲಕ್ಷಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿ ಶೇ.೮೦ರಷ್ಟು ಸಣ್ಣ ಮತ್ತು ಮಧ್ಯಮ ಗಾತ್ರದ ಮೂರ್ತಿಗಳು. ತಯಾರಾದ ಮೂರ್ತಿಗಳಲ್ಲಿ ಶೇ.೮೫ರಷ್ಟು ಮಾರಾಟವಾಗುತ್ತದೆ. ಅಂದರೆ, ಪ್ರತಿ ವರ್ಷ ಸುಮಾರು ೫.೧ ಲಕ್ಷ ಮೂರ್ತಿಗಳು ಬಿಕರಿಯಾಗುತ್ತವೆ.
  • ಸಣ್ಣ ಮತ್ತು ಮಧ್ಯಮ ಗಾತ್ರದ ಮೂರ್ತಿಗಳಿಗೆ ಹೊರತಾಗಿ ಶೇ.೫ರಷ್ಟು ದೊಡ್ಡ ಮೂರ್ತಿಗಳಿಗೆ ಬೇಡಿಕೆ ಇದೆ. ಅಂದರೆ ಸುಮಾರು ೩೬ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊಡ್ಡಗಾತ್ರದ ಮೂರ್ತಿಗಳು ಮಾರಾಟವಾಗುತ್ತವೆ. ಜತೆಗೆ ವಿಭಿನ್ನ ಮೂರ್ತಿಗಳು ಸುಮಾರು ೫ ಸಾವಿರ. ಅಂದರೆ ಒಟ್ಟಾರೆ ಸುಮಾರು ೫.೫೧ ಲಕ್ಷ ಮೂರ್ತಿಗಳು ನಗರದಲ್ಲಿ ಮಾರಾಟವಾಗುತ್ತವೆ.
  • ಒಟ್ಟಾರೆ ಮಾರಾಟವಾದ ಗಣೇಶ ಮೂರ್ತಿಗಳಲ್ಲಿ ಶೇ. ೯೮ರಷ್ಟನ್ನು ವಿಸರ್ಜಿಸಲಾಗುತ್ತದೆ. ಅಂದರೆ ಪ್ರತಿ ವರ್ಷ ೫,೩೩,೯೮೦ ಮೂರ್ತಿಗಳು ವಿಸರ್ಜನೆ ಆಗುತ್ತವೆ.
ಯಾವ ಬಣ್ಣದಲ್ಲಿ ಯಾವ ರಾಸಾಯನಿಕ?
  • ಸಿಂಥೆಟಿಕ್ ಪೈಂಟ್ಸ್ ಎಂದು ಕರೆಯಲಾಗುವ ಕೃತಕ ಬಣ್ಣಗಳಲ್ಲಿ ಕ್ರೋಮಿಯಂ, ಲೀಡ್ (ಸೀಸ), ನಿಕೆಲ್, ಕ್ಯಾಡ್ಮಿಯಂ, ಮ್ಯಾಂಗನೀಸ್ ಹಾಗೂ ಜಿಂಕ್ (ಸತುವು) ಲೋಹಗಳಿರುತ್ತವೆ. ಇವು ಅತ್ಯಂತ ಹಾನಿಕಾರ. ಇವುಗಳನ್ನು ಮೂರ್ತಿ ರಚನೆ ವೇಳೆ ಬಳಸಲಾಗುತ್ತದೆ.
  • ಕಿರೀಟಕ್ಕೆ ಬಳಸುವ ಚಿನ್ನದ ಬಣ್ಣದಲ್ಲಿ ಕ್ರೋಮಿಯಂ ಪ್ರಕಾರಕ್ಕೆ ಸೇರಿದ್ದು. ಹಸಿರು, ಹಳದಿ ಬಣ್ಣಗಳು ಸೀಸ ಮತ್ತು ಸೀಸದ ಅಂಶಗಳನ್ನು ಹೊಂದಿರುತ್ತವೆ. ಈ ಎಲ್ಲವೂ ವಿಷಕಾರಕ ರಾಸಾಯನಿಕಗಳಾಗಿದ್ದು, ಸಸ್ಯ, ಪ್ರಾಣಿ ಮತ್ತು ಮಾನವರಿಗೆ ಹಾನಿ ಉಂಟು ಮಾಡುತ್ತವೆ.
ಎಷ್ಟು ಸೀಸ ಬಿಡುಗಡೆ?
ಕೃತಕ ಬಣ್ಣಗಳನ್ನು ಬಳಸಿರುವ ೨ ಕೆ.ಜಿ. ತೂಕದ ಗಣಪತಿ ಮೂರ್ತಿ ೨ ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿನ ಸೀಸವನ್ನು ಬಿಡುಗಡೆ ಮಾಡುತ್ತದೆ. ಯಾವ ಬಣ್ಣ ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎಂಬುದರ ಮೇಲೆ ಯಾವ ರಾಸಾಯನಿಕ ಅಂಶ ಬಿಡುಗಡೆ ಆಗುತ್ತದೆ ಎಂಬುದನ್ನು ಅಂದಾಜು ಮಾಡಬಹುದು.

ಯಾವ ರಾಸಾಯನಿಕ? ಏನು ಪರಿಣಾಮ?
ಸೀಸ: ಮಾನವನ ಆರೋಗ್ಯಕ್ಕೆ ಇದರ ಅಗತ್ಯವೇ ಇಲ್ಲ.
ರಕ್ತದಲ್ಲಿ ಸೀಸ ಲೋಹದ ಪ್ರಮಾಣ ಹೆಚ್ಚಾದರೆ ಆರೋಗ್ಯಕ್ಕೆ ತೀವ್ರ ಆಘಾತ.
ನರಮಂಡಲಕ್ಕೆ ಹಾನಿ. ಅಲ್ಲದೆ, ಮೂತ್ರ ಜನಕಾಂಗ ರೋಗ, ಹೃದ್ರೋಗ ಸಂಭವ. ಸಂತಾನಶಕ್ತಿ ಮೇಲೆ ಪರಿಣಾಮ.
ಕ್ರೋಮಿಯಂ: ನೀರಿನಲ್ಲಿ ಇದರ ಗರಿಷ್ಠ ಪಾಲು ಪ್ರತಿ ಲೀಟರ್‌ಗೆ ೦.೦೫ ಮಿಲಿಗ್ರಾಂ.
ಹೆಚ್ಚಿನ ಕ್ರೋಮಿಯಂ ದೇಹಕ್ಕೆ ಹೋದರೆ ಡಿಎನ್‌ಎಗೆ ಹಾನಿ.
ಶ್ವಾಸಕೋಶ, ಮೂತ್ರ ಜನಕಾಂಗ ಮತ್ತು ರಕ್ತಕಣಗಳನ್ನು ನಷ್ಟ ಮಾಡುತ್ತದೆ. ಚರ್ಮ ರೋಗವೂ ಉಂಟಾಗುತ್ತದೆ.
ಕ್ಯಾಡ್ಮಿಯಂ: ಮಾನವ ದೇಹಕ್ಕೆ ಯಾವುದೇ ಪ್ರಯೋಜನ ಇಲ್ಲ.
ಇದನ್ನು ಕನಿಷ್ಠ ಪ್ರಮಾಣದಲ್ಲಿ ತೆಗೆದುಕೊಂಡರು ಅತ್ಯಂತ ವಿಷಕಾರಕ.
ನೀರು, ಗಾಳಿ ಮತ್ತು ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಮೂಳೆ ಮೃದುತ್ವ ರೋಗ ಬರುತ್ತದೆ. ಮೂತ್ರ ಜನಕಾಂಗದ ವೈಫಲ್ಯವೂ ಉಂಟಾಗುತ್ತದೆ.
ಮ್ಯಾಂಗನೀಸ್: ಅತ್ಯಂತ ವಿಷಕಾರಕವಾಗಿದ್ದು, ಮಕ್ಕಳಲ್ಲಿ ಬಲಹೀನತೆ ಮತ್ತು ಮಾನಸಿಕ ವೈಕಲ್ಯ ಉಂಟಾಗುತ್ತದೆ.
ಪಾರ್ಕಿನ್‌ಸನ್‌ಗೆ ಸಮಾನಾಂತರವಾಗಿರುವ ‘ಮ್ಯಾಂಗ್ನೀಸಮ್’ ರೋಗ ಬರುತ್ತದೆ.
ನಿಕೆಲ್: ಇದು ದೇಹದಲ್ಲಿ ಸಾಮಾನ್ಯವಾಗಿ ಇರುತ್ತದೆ.
ಇದನ್ನು ೦.೦೫ ಎಂಜಿ/ಸಿಎಂ೩ ಪ್ರಮಾಣಕ್ಕಿಂತ ಹೆಚ್ಚು ಸೇವಿಸಬಾರದು.
ಚರ್ಮದ ತುರಿಕೆ ಉಂಟಾಗಿ, ಚರ್ಮ ರೋಗ ಉಂಟಾಗುತ್ತದೆ.

Color Ganesha: A loophole for the environment

Ganesha came full of color, wrapped in plastic and fell into the lake, released color poison into the water, hurt health...

 Bengaluru's situation has to be sung like this. Because there are few remaining lakes in Bangalore. After the Ganapan Murti, which has a poisonous color in it, is discharged, the poisonous water enters the ground water. It is also connected to the house through a borewell. It not only affects health but also brings dozens of diseases. In addition, environmental pollution also increases.

 Ganapa, most loved by children, is worshiped by people of all ages. During Ganapati festival, lakhs of idols are offered special pooja in homes and public places. In this, most of the idols continue to mourn. The reason for this glitter is dozens of colors. Apart from natural colors, artificial colors are used in idols. This pollutes the environment. These chemical elements are also included in the pollution and are being added to the human and plant species through water, air. This poisonous substance not only causes many diseases in humans but also has the ability to destroy plants and trees.

 Ganapati made of clay was worshiped in earlier times. A high-tech touch was given as the lifestyle changed. That is why the clay Ganapati was given color. Didn't care about the chemical elements in it. As these Ganesha idols are mostly worshiped and discharged, the chemical content in the ground water has been increasing in recent years. This is revealed by a study conducted by Ecoganapati.net. 

Nowadays fiber, grass, cloth, paper, wood, thermocol, plaster of Paris are used in making idols. Along with these, very harmful artificial colors are also being used. Most of these materials are insoluble in water. Instead they create pollution in the lake or pond. Plaster of Paris and artificial colors release toxic chemicals into the water.

 About the idols that are dissolved during the Ganesha festival in Sanki lake. Manjunath, Pramod Subbarao and Harish Bhatt have studied. The problem caused to the environment by colored idols has been revealed in detail. On the website called ecoganapa.net, he has explained about the harm to the environment and its benefits due to colored ganapas. The aim is to create awareness about the use of natural colored or clay idols instead of worshiping colored Ganapan idols. He has collected the opinion of many Swamijis about this.

 A painted idol of Ganapan about 2 feet tall emits two grams of lead. So, from 5.1 lakh idols that are more than 2 feet, that much lead can be released into the lake and the environment. How much more can it affect groundwater and health? Think once.

Pollution only by Ganesha?

 Lakes in Bangalore are polluted with sewage water. Can't even lay hands there. What happens if Ganesha idols are left for one day of the year? There is no shortage of people asking this question. It depends on what kind of Ganapa idol you worship and dissolve.

 There is no harm to the environment with idols made only from clay. Idols made of artificial colors, plaster of Paris, grass, cloth, wood do not dissolve in lakes. It not only releases chemical elements into the water but also creates pollution. To see this, one has to go to the lakes a few days after the idol is dissolved. There, idol remains are seen on the bank. There is concern that we have worshiped this idol. Therefore, it is our ritual to worship and dissolve the idol of eco-friendly Ganesha. We forgot that. So we are calling for pollution.

 Eco-friendly Ganap, traditional details tomorrow...

6 lakh idols are prepared every year

 More than 6 lakh idols are made in Bangalore every year for the festival of Ganesha. 80% of which are small and medium size idols. 85% of the idols produced are sold. That is, about 5.1 lakh idols are sold every year.

 Apart from small and medium size idols, there is a demand of 5% for big idols. That means more than 36 thousand large size idols are sold. In addition, there are about 5 thousand different idols. That means a total of 5.51 lakh idols are sold in the city.

 Percentage of Ganesha idols sold overall. 98% will be dissolved. That means 5,33,980 idols are dissolved every year.

Which chemical in which color?

 Artificial colors called synthetic paints contain chromium, lead, nickel, cadmium, manganese and zinc metals. These are very harmful. These are used during idol creation.

 The gold color used for the crown belongs to the chromium type. Green, yellow colors contain lead and lead elements. All these are toxic chemicals that harm plants, animals and humans.

 How much lead release?

 2 kg with artificial colors. A Ganapati idol weighing 2 grams or more releases lead. Which chemical is released can be estimated based on which dye is used and how much is used.

 What chemical? What effect?

  •  Lead: Not essential to human health.

 If the amount of lead metal increases in the blood, it is a serious shock to health.

 Damage to the nervous system. Also, incidence of genitourinary disease, heart disease. Effect on fertility.

  •  Chromium: Its maximum content in water is 0.05 milligrams per liter.

 Too much chromium in the body can damage DNA.

 Loses the lungs, urinary tract and blood cells. Skin disease also occurs.

 Cadmium: No benefit to the human body.

 It is highly toxic when taken in small doses.

 High levels in water, air and soil can lead to osteoporosis. Urogenital failure also occurs.

  •  Manganese: Highly toxic, causes weakness and mental retardation in children.

 Parallel to Parkinson's comes 'manganism' disease.

  •  Nickel: It is normally present in the body.

 It should not be consumed more than 0.05 mg/cm3.

 Itchy skin causes skin disease.