Saturday, February 7, 2026

Auctioning of Parappana Agrahara Jail, BMTC Buses, Metro Rail, and Police Properties… ಪರಪ್ಪನ ಅಗ್ರಹಾರ ಜೈಲು, ಬಿಎಂಟಿಸಿ ಬಸ್ಸು, ಮೆಟ್ರೊ ರೈಲು, ಪೊಲೀಸು ಆಸ್ತಿ ಹರಾಜು

Prestigious Schools, Colleges, Hotels, and Real Estate Firms Defaulting on Property Tax for Years

Auctioning of Parappana Agrahara Jail, BMTC Buses, Metro Rail, and Police Properties


Kere Manjunath ಕೆರೆ ಮಂಜುನಾಥ್ 

BENGALURU: The Greater Bengaluru Authority (GBA) is set to auction properties belonging to Parappana Agrahara Central Jail, BMTC, BMRCL, and the Police Department, which have failed to pay property taxes for several years.

Several central and state government departments owe crores of rupees in property tax arrears, and for the first time, the GBA has issued auction notices to them. Along with these, properties belonging to real estate firms, schools, colleges, hotels, IT-BT companies, and private citizens will also be auctioned.

Over 7,000 properties under the GBA jurisdiction have accumulated ₹437 crore in unpaid taxes over the years. To recover this, it has been decided to auction these assets. Auction notices have been issued to all defaulters, and Revenue Officers, Joint Commissioners, and Zonal Deputy Commissioners of the respective city corporations have been instructed to conduct the auction process on February 17.

Similar Process Last Year

A similar process to auction tax-defaulting properties took place in February 2025. At that time, 608 properties across eight zones of the then-BBMP were targeted to collect ₹30 crore. However, the process was halted as most owners paid their dues at the last minute.

"Those owing more than ₹2 lakh in property tax to the BBMP owe a total of approximately ₹390 crore. To avoid forced recovery measures like auctions, taxpayers must clear their dues," Munish Moudgil had stated then. Now, Moudgil himself has directed the auction of 7,000 identified properties.

Two Notices to Parappana Agrahara Jail

The Central Jail at Parappana Agrahara has defaulted on property taxes, leading to the issuance of two auction notices. The jail, spread across several survey numbers, owes ₹56.43 lakh in tax. The market value of this property is estimated at ₹1,774.09 crore. Additionally, the GBA is preparing to auction property worth ₹85.76 crore to recover another ₹15.10 lakh in arrears.

Major Institutions in Default

 * Bangalore Metropolitan Transport Corporation (BMTC)

 * Bangalore Metro Rail Corporation Limited (BMRCL)

 * Bangalore City Police Commissioner

 * Police Quarters, Shantinagar

 * DCP North, Yelahanka

 * District Armed Reserve Police, Rajarajeshwarinagar

 * Fire and Home Guards Department, Malleshwaram

 * Superintendent of Police Apartments, Yelahanka

 * Kirloskar Systems, Byatarayanapura

 * Karnataka Waqf Board, Gandhinagar

 * Karnataka Public Service Commission (KPSC), Sheshadri Road

 * Director of PU Board, Malleshwaram

 * Gundanjaneya Swamy Temple, Byatarayanapura

Properties in the Name of President and Governor to be Auctioned

A Department of Space property on 11th Cross, Malleshwaram, owes ₹11.38 lakh in tax. Since this property is registered in the President's name, the auction notice has been issued accordingly. The government value of this property is ₹16.96 crore.

Similarly, the Registrar of Cooperative Societies office on 3rd Cross, Malleshwaram, owes ₹44.55 lakh. This property, valued at ₹32.66 crore, is in the name of the Governor of Karnataka, and the notice has been issued in the Governor's name. Additionally, the GBA has decided to auction the Survey of India property in Bommanahalli for an arrears of ₹23.51 lakh.

Top Property Tax Defaulters

| Property Owner | Arrears |

| Chalet Hotels | ₹39.56 Crore |

| Gangadhar, Ramachandra, T. Anand, Manjunath | ₹16.92 Crore |

| BMRCL | ₹8.77 Crore |

| Rukmini Educational Charitable Trust | ₹8.17 Crore |

| Muthaiah, A.L., Annamalai | ₹8.15 Crore |

| MD, BMTC | ₹5.61 Crore |

| BMTC | ₹5.38 Crore |

| Bhupesh Reddy, Jayaram Reddy, Dayanand Reddy | ₹5.35 Crore |

| Brigade Foundation | ₹4.31 Crore |

| Baldwin Boys’ High School | ₹4.03 Crore |


Breakdown by City Corporation

| Corporation | Properties | Total Arrears |

| East | 1,615 | ₹119.90 Crore |

| West | 1,504 | ₹84.23 Crore |

| Central | 1,398 | ₹81.26 Crore |

| North | 1,156 | ₹79.83 Crore |

| South | 1,347 | ₹72.30 Crore |

| Total | 7,020 | ₹437.55 Crore |

 "Auction is the Final Step" – Munish Moudgil

> "Property owners have been given ample warnings. Demand notices and attachment orders have been issued, and daily SMS alerts have been sent for months. We even provided an opportunity to appeal these notices online via 'BBMP e-Nyaya'. Since these owners did not respond, we have taken the final step to auction the properties," said Munish Moudgil, Special Commissioner (Revenue), GBA.

He added that to avoid the auction, owners must pay the tax immediately and submit the receipt to the local Assistant Revenue Officer's office.


Greater Bengaluru Authority Violates Act ನಾಲ್ಕೇ ತಿಂಗಳಲ್ಲಿ ಜಿಬಿಎ ಕಾಯ್ದೆ ಉಲ್ಲಂಘನೆ 

Also Read>>>>>> Election preparations begin amidst high expectations and lingering doubts…. ನಿರೀಕ್ಷೆ, ಅನುಮಾನದ ನಡುವೆ ಚುನಾವಣೆ ತಯಾರಿ








Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಶಾಲಾ–ಕಾಲೇಜು, ಹೋಟೆಲ್‌, ರಿಯಲ್‌ ಎಸ್ಟೇಟ್‌ನ ಪ್ರತಿಷ್ಠಿತ ಸಂಸ್ಥೆಗಳು

ಪರಪ್ಪನ ಅಗ್ರಹಾರ ಜೈಲು, ಬಿಎಂಟಿಸಿ ಬಸ್ಸು, ಮೆಟ್ರೊ ರೈಲು, ಪೊಲೀಸು ಆಸ್ತಿ ಹರಾಜು

ಬೆಂಗಳೂರು: ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಬಿಎಂಟಿಸಿ, ಬಿಎಂಆರ್‌ಸಿಎಲ್‌, ಪೊಲೀಸ್‌ ಇಲಾಖೆಯ ಆಸ್ತಿಗಳನ್ನು ಹರಾಜು ಹಾಕಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಜ್ಜಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಇಲಾಖೆಗಳು ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಅವುಗಳ ಹರಾಜಿಗೆ ಮೊದಲ ಬಾರಿಗೆ ಜಿಬಿಎ ನೋಟಿಸ್‌ ಜಾರಿ ಮಾಡಿದೆ. ಇವುಗಳ ಜೊತೆಗೆ, ರಿಯಲ್‌ ಎಸ್ಟೇಟ್‌, ಶಾಲಾ–ಕಾಲೇಜು, ಹೋಟೆಲ್‌, ಐಟಿ–ಬಿಟಿ ಕಂಪನಿಗಳು ಸೇರಿದಂತೆ ನಾಗರಿಕರ ಆಸ್ತಿಗಳನ್ನೂ ಹರಾಜು ಮಾಡಲಿದೆ.

ಜಿಬಿಎ ವ್ಯಾಪ್ತಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಆಸ್ತಿಗಳಿಂದ ₹437 ಕೋಟಿ ತೆರಿಗೆ ಹಲವು ವರ್ಷಗಳಿಂದ ಬಾಕಿ ಇದೆ. ಇದನ್ನು ವಸೂಲಿ ಮಾಡಲು ಆ ಆಸ್ತಿಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ. ಎಲ್ಲ ಸುಸ್ತಿದಾರರಿಗೆ ಹರಾಜು ನೋಟಿಸ್‌ ಜಾರಿ ಮಾಡಲಾಗಿದ್ದು, ಆಯಾ ನಗರ ಪಾಲಿಕೆಗಳ ಕಂದಾಯ ಅಧಿಕಾರಿ, ಜಂಟಿ ಆಯುಕ್ತ, ವಲಯ ಉಪ ಆಯುಕ್ತರು ಫೆ.17ರಂದು ಹರಾಜು ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ.

ಕಳೆದ ವರ್ಷವೂ ಪ್ರಕ್ರಿಯೆ: ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಮಾಡುವ ಪ್ರಕ್ರಿಯೆ 2025ರ ಫೆಬ್ರುವರಿಯಲ್ಲೂ ನಡೆದಿತ್ತು. ಅಂದಿನ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ 608 ಆಸ್ತಿಗಳನ್ನು ಹರಾಜು ಮಾಡಿ ₹30 ಕೋಟಿ ತೆರಿಗೆಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆ ಸಂದರ್ಭದಲ್ಲಿ ಬಹುತೇಕರು ಆಸ್ತಿ ತೆರಿಗೆಯನ್ನು ಪಾವತಿಸಿದ್ದರಿಂದ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿತ್ತು. 

‘ಬಿಬಿಎಂಪಿ ವ್ಯಾಪ್ತಿಯಲ್ಲಿ ₹2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಇರಿಸಿಕೊಂಡಿರುವವರಿಂದ ಸುಮಾರು ₹390 ಕೋಟಿ ಪಾವತಿಯಾಗಬೇಕಿದೆ. ಹರಾಜಿನಂತಹ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸಲು ಆಸ್ತಿ ತೆರಿಗೆದಾರರು ಬಾಕಿ ಪಾವತಿಸಬೇಕು’ ಎಂದು ಮುನೀಶ್‌ ಮೌದ್ಗಿಲ್‌ ಆಗ ಹೇಳಿದ್ದರು. ಈಗ, ಏಳು ಸಾವಿರ ಆಸ್ತಿಗಳನ್ನು ಗುರುತಿಸಿ ಹರಾಜು ಪ್ರಕ್ರಿಯೆ ನಡೆಸಲು ಮುನೀಶ್‌ ಮೌದ್ಗಿಲ್‌ ಅವರೇ ಸೂಚಿಸಿದ್ದಾರೆ.

 

ಪರಪ್ಪನ ಅಗ್ರಹಾರ ಜೈಲಿಗೆ ಎರಡು ನೋಟಿಸ್‌

ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಆಸ್ತಿ ಹರಾಜಿಗೆ ಎರಡು ನೋಟಿಸ್‌ ಜಾರಿ ಮಾಡಲಾಗಿದೆ. ಪರಪ್ಪನ  ಅಗ್ರಹಾರದ ಹಲವು ಸರ್ವೆ ನಂಬರ್‌ಗಳಲ್ಲಿರುವ ಕೇಂದ್ರ ಕಾರಾಗೃಹ ₹56.43 ಲಕ್ಷ ತೆರಿಗೆ ಪಾವತಿಸಬೇಕಿದೆ. ಇದರ ಆಸ್ತಿ ಮೌಲ್ಯ ₹1,774.09 ಕೋಟಿ. ಇದಲ್ಲದೆ, ₹15.10 ಲಕ್ಷ ತೆರಿಗೆ ಬಾಕಿಗಾಗಿ, ₹85.76 ಕೋಟಿ ಮೌಲ್ಯದ ಆಸ್ತಿಯನ್ನು ಹರಾಜು ಮಾಡಲು ಜಿಬಿಎ ಸಜ್ಜಾಗಿದೆ.

 

ಬಾಕಿ ಉಳಿಸಿಕೊಂಡಿರುವ ಪ್ರಮುಖ ಸಂಸ್ಥೆಗಳು

* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)

* ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌)

* ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌

* ಪೊಲೀಸ್‌ ಕ್ವಾಟ್ರಸ್‌, ಶಾಂತಿನಗರ

* ಉಪ ಪೊಲೀಸ್ ಆಯುಕ್ತ– ಉತ್ತರ, ಯಲಹಂಕ

* ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಇಲಾಖೆ, ರಾಜರಾಜೇಶ್ವರಿನಗರ

* ಅಗ್ನಿಶಾಮಕ ಮತ್ತು ಗೃಹರಕ್ಷಕ ಇಲಾಖೆ, ಮಲ್ಲೇಶ್ವರ

* ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಅಪಾರ್ಟ್‌ಮೆಂಟ್‌, ಯಲಹಂಕ

* ಕಿರ್ಲೊಸ್ಕರ್‌ ಸಿಸ್ಟಮ್ಸ್‌, ಬ್ಯಾಟರಾಯನಪುರ

* ಕರ್ನಾಟಕ ವಕ್ಫ್‌ ಮಂಡಳಿ, ಎಸ್‌ಆರ್‌ಟಿ ರಸ್ತೆ, ಗಾಂಧಿನಗರ

* ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಶೇಷಾದ್ರಿ ರಸ್ತೆ

* ಪಿಯು ಬೋರ್ಡ್‌ ನಿರ್ದೇಶಕ, ಅರಮನೆ ನಗರ, ಮಲ್ಲೇಶ್ವರ

* ಗುಂಡಾಂಜನೇಯ ಸ್ವಾಮಿ ದೇವಸ್ಥಾನ, ಬ್ಯಾಟರಾಯನಪುರ

 

ರಾಷ್ಟ್ರಪತಿ, ರಾಜ್ಯಪಾಲರ ಹೆಸರಿನಲ್ಲಿರುವ ಆಸ್ತಿಗಳೂ ಹರಾಜು

ಮಲ್ಲೇಶ್ವರದ 11ನೇ ಅಡ್ಡರಸ್ತೆಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಆಸ್ತಿಯ ₹11.38 ಲಕ್ಷ ತೆರಿಗೆ ಬಾಕಿ ಇದೆ. ಈ ಆಸ್ತಿ ರಾಷ್ಟ್ರಪತಿಯವರ ಹೆಸರಿನಲ್ಲಿದ್ದು, ಇದನ್ನು ಹರಾಜು ಹಾಕಲು ಅವರ ಹೆಸರಿನಲ್ಲೇ ನೋಟಿಸ್‌ ಜಾರಿ ಮಾಡಲಾಗಿದೆ. ಈ ಆಸ್ತಿಯ ಸರ್ಕಾರಿ ಮೌಲ್ಯ ₹16.96 ಕೋಟಿ.

ಮಲ್ಲೇಶ್ವರದ 3ನೇ ಅಡ್ಡರಸ್ತೆಯಲ್ಲಿರುವ ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಕಚೇರಿಯಿರುವ ಆಸ್ತಿಯ ತೆರಿಗೆ ₹44.55 ಲಕ್ಷ ಬಾಕಿ ಇದ್ದು, ಅದರ ₹32.66 ಕೋಟಿ ಮೌಲ್ಯದ ಆಸ್ತಿಯನ್ನು ಹರಾಜು ಮಾಡಲಾಗುತ್ತಿದೆ. ಈ ಆಸ್ತಿ ಕರ್ನಾಟಕದ ರಾಜ್ಯಪಾಲರ ಹೆಸರಿನಲ್ಲಿದ್ದು, ಅವರ ಹೆಸರಿಗೇ ಹರಾಜು ನೋಟಿಸ್‌ ಜಾರಿಯಾಗಿದೆ.

ಬೊಮ್ಮನಹಳ್ಳಿಯಲ್ಲಿರುವ ಸರ್ವೆ ಆಫ್‌ ಇಂಡಿಯಾದ ಆಸ್ತಿಯ ತೆರಿಗೆ ₹23.51 ಲಕ್ಷ ಬಾಕಿ ಇದ್ದು, ಆಸ್ತಿಯನ್ನು ಹರಾಜು ಹಾಕಲು ಜಿಬಿಎ ನಿರ್ಧರಿಸಿದೆ.

 

ಅತಿಹೆಚ್ಚು ತೆರಿಗೆ ಬಾಕಿಯಿರುವ ಆಸ್ತಿಗಳು

ಆಸ್ತಿ ಮಾಲೀಕರು; ಬಾಕಿ

ಚಾಲೆಟ್‌ ಹೋಟೆಲ್ಸ್‌; ₹39.56 ಕೋಟಿ

ಗಂಗಾಧರ್, ರಾಮಚಂದ್ರ, ಟಿ. ಆನಂದ್‌, ಮಂಜುನಾಥ್‌; ₹16.92 ಕೋಟಿ

ಬಿಎಂಆರ್‌ಸಿಎಲ್‌; ₹8.77 ಕೋಟಿ

ರುಕ್ಮಿಣಿ ಎಜ್ಯುಕೇಷನಲ್‌ ಚಾರಿಟಬಲ್‌ ಟ್ರಸ್ಟ್‌; ₹8.17 ಕೋಟಿ

ಮುತ್ತಯ್ಯ, ಎ.ಎಲ್‌, ಅಣ್ಣಾಮಲೈ; ₹8.15 ಕೋಟಿ

ಎಂ.ಡಿ. ಬಿಎಂಟಿಸಿ; ₹5.61 ಕೋಟಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ; ₹5.38 ಕೋಟಿ

ಬೂಪೇಶ್‌ ರೆಡ್ಡಿ, ಜಯರಾಂ ರೆಡ್ಡಿ, ದಯಾನಂದ ರೆಡ್ಡಿ; ₹5.35 ಕೋಟಿ

ಬ್ರಿಗೇಡ್‌ ಫೌಂಡೇಷನ್; ₹4.31 ಕೋಟಿ

ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌; ₹4.03 ಕೋಟಿ

 

ಯಾವ ಪಾಲಿಕೆಯಲ್ಲಿ ಎಷ್ಟು ಆಸ್ತಿ ತೆರಿಗೆ ಬಾಕಿ?

ನಗರ ಪಾಲಿಕೆ;ಆಸ್ತಿಗಳು;ಒಟ್ಟು ಬಾಕಿ

ಪೂರ್ವ;1,615; ₹119.90 ಕೋಟಿ

ಪಶ್ಚಿಮ;1,504; ₹84.23 ಕೋಟಿ

ಕೇಂದ್ರ;1,398; ₹81.26 ಕೋಟಿ

ಉತ್ತರ;1,156; ₹79.83 ಕೋಟಿ

ದಕ್ಷಿಣ;1,347; ₹72.30 ಕೋಟಿ

ಒಟ್ಟು;7,020; ₹437.55 ಕೋಟಿ

 

ಹರಾಜು ಅಂತಿಮ ಹೆಜ್ಜೆ: ಮುನೀಶ್‌

‘ಆಸ್ತಿ ತೆರಿಗೆ ‍ಪಾವತಿಸಲು ಆಸ್ತಿ ಮಾಲೀಕರಿಗೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ. ಡಿಮ್ಯಾಂಡ್‌ ನೋಟಿಸ್‌, ಜಪ್ತಿ ಆದೇಶ, ಹಲವು ತಿಂಗಳಿಂದ ಪ್ರತಿದಿನ ಎಸ್‌ಎಂಎಸ್‌ ಕಳುಹಿಸಲಾಗಿದೆ. ಈ ನೋಟಿಸ್‌ಗಳ ವಿರುದ್ಧ ಆನ್‌ಲೈನ್‌ನಲ್ಲಿ (BBMP e-Nyaya) ಮೇಲ್ಮನವಿ ಸಲ್ಲಿಸಲೂ ಅವಕಾಶ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದ ಮಾಲೀಕರ ಆಸ್ತಿಗಳನ್ನು ಹರಾಜು ಮಾಡಲು ಅಂತಿಮ ಹೆಜ್ಜೆ ಇರಿಸಲಾಗಿದೆ’ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಹರಾಜು ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬೇಕಾದರೆ, ಮಾಲೀಕರು ಕೂಡಲೇ ತೆರಿಗೆಯನ್ನು ಪಾವತಿಸಿ, ಅದರ ಪ್ರತಿಯನ್ನು ಸ್ಥಳೀಯ  ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ತಲುಪಿಸಬೇಕು ಎಂದರು.

Friday, January 30, 2026

BSWML Set for Financial Gains… ಕಸ ಗುತ್ತಿಗೆ: ಬಿಎಸ್‌ಡಬ್ಲ್ಯುಎಂಎಲ್‌ಗೆ ಆರ್ಥಿಕ ಲಾಭ

<script async src="https://pagead2.googlesyndication.com/pagead/js/adsbygoogle.js?client=ca-pub-7409631463752216"

     crossorigin="anonymous"></script>


 Waste Management Tender: BSWML Set for Financial Gains as 33-Package Process Nears Completion


BENGALURU: The Bengaluru Solid Waste Management Limited (BSWML) is expected to reap significant financial benefits as the tender process for 33 waste management packages across Greater Bengaluru enters its final stages.

The transition to a new waste management contract system, which has faced delays since 2022, is finally moving forward. Following High Court intervention, the original plan for 89 packages was consolidated into 33 packages. Once finalized, this move is projected to save BSWML hundreds of crores of rupees.

Shift from BBMP to BSWML

When the BBMP was overseeing the process, 89 packages were initially estimated at ₹541 crore. However, bids received at that time were 18% to 60% higher than the estimate, averaging a 43% increase. Due to technical issues and legal challenges by contractors, the government eventually decided to invite tenders for 33 consolidated packages.

Under the new Greater Bengaluru Area (GBA) structure:

 * 21 Assembly Constituencies have been assigned one package each.

 * 6 Major Constituencies (Bengaluru South, Dasarahalli, Mahadevapura, K.R. Puram, Yeshwanthpur, and R.R. Nagar) have been assigned two packages each.

Financial Breakdown

The new tender was estimated at ₹544.91 crore, and bids have come in at approximately ₹591 crore. According to BSWML sources, these bids are significantly lower than previous rounds and will include the deployment of modern, state-of-the-art waste collection vehicles.

  • | Estimated Tender Amount (33 Packages) | ₹544.91 Crore |
  • | Total Bid Amount from Contractors | ₹591 Crore |
  • | Current Expenditure (5 Municipal Corporations) | ₹586 Crore |
  • Long-term Savings and Modernization

While the bid is slightly higher than current spending, the contract price will remain fixed for seven years. A key efficiency clause (2.7.6) mandates that from the second year, contractors must phase out compactors. Instead, auto-tippers will transport waste directly to secondary processing units. This shift alone is expected to save BSWML roughly ₹110 crore in maintenance and operational costs.

Disputes in Five Packages

The finalization of five specific packages—Hebbal, Mahalakshmi Layout, Basavanagudi, Dasarahalli-2, and Mahadevapura-1—has hit a snag. Appeals have been filed with the Additional Chief Secretary of the Urban Development Department.

Complaints allege that some companies participated under two different names to secure multiple packages, potentially sidelining eligible contractors. Some officials suggest that these appeals are a tactic by certain contractors to delay the process and continue using old vehicles under the outdated system.

> "The tender for 33 packages across 27 constituencies is almost final. A few appeals have been filed, but we expect them to be resolved by the end of January. When an L1 bidder is fully qualified, they must be selected. Once implemented, these new packages will solve a major portion of the city's waste problems."

> — Karigowda, CEO of BSWML




ALSO read…. No Household Waste Collection if Not Segregated ವಿಂಗಡಿಸದಿದ್ದರೆ ಮನೆ ತ್ಯಾಜ್ಯ ಸಂಗ್ರಹವಿಲ್ಲ



89 ಪ್ಯಾಕೇಜ್‌ಗಳಿಂದ ವಿಧಾನಸಭೆ ಕ್ಷೇತ್ರವಾರು 33 ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಅಂತಿಮ 

ಕಸ ಗುತ್ತಿಗೆ: ಬಿಎಸ್‌ಡಬ್ಲ್ಯುಎಂಎಲ್‌ಗೆ ಆರ್ಥಿಕ ಲಾಭ

ಬೆಂಗಳೂರು: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಅಂತಿಮಗೊಳ್ಳುವ 33 ಪ್ಯಾಕೇಜ್‌ ಗುತ್ತಿಗೆಯಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ (ಬಿಎಸ್‌ಡಬ್ಲ್ಯುಎಂಎಲ್‌) ಆರ್ಥಿಕವಾಗಿ ಲಾಭವಾಗುವ ನಿರೀಕ್ಷೆ ಇದೆ.

2022ರಿಂದ ಹೊಸ ತ್ಯಾಜ್ಯ ಗುತ್ತಿಗೆ ನೀಡುವ ಪ್ರಕ್ರಿಯೆಯ ಅನುಷ್ಠಾನ ಹಲವು ಕಾರಣಗಳಿಂದ ವಿಳಂಬ ಗತಿಯಲ್ಲೇ ಇದೆ. ಹೈಕೋರ್ಟ್‌ ಮಧ್ಯಪ್ರವೇಶದಿಂದ 89 ಪ್ಯಾಕೇಜ್‌ ಈಗ 33 ಪ್ಯಾಕೇಜ್‌ಗಳಾಗಿದ್ದು, ಇದು ಅಂತಿಮವಾದರೆ ಬಿಎಸ್‌ಡಬ್ಲ್ಯುಎಂಎಲ್‌ಗೆ ನೂರಾರು ಕೋಟಿ ಉಳಿತಾಯವಾಗಲಿದೆ.

ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಅದರ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ 89 ಪ್ಯಾಕೇಜ್‌ ನಿಗದಿಪಡಿಸಿ, ₹541 ಕೋಟಿ ಟೆಂಡರ್ ಮೊತ್ತ ನಿಗದಿಪಡಿಲಾಗಿತ್ತು. ಇದಕ್ಕೆ ಬಿಡ್‌ ಸಲ್ಲಿಕೆಯಾದಾಗ, ಶೇಕಡ 18ರಿಂದ ಶೇ 60ರಷ್ಟು ಹೆಚ್ಚು ಮೊತ್ತಕ್ಕೆ ಬಿಡ್‌ ಆಗಿತ್ತು. ಸರಾಸರಿ ಶೇ 43ರಷ್ಟು ಹೆಚ್ಚಳವಾಗಿತ್ತು. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಗುತ್ತಿಗೆದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕೊನೆಗೆ, 33 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯುವುದಾಗಿ ಸರ್ಕಾರ ಹೇಳಿತ್ತು.

ಅದರಂತೆ, ಜಿಬಿಎ ವ್ಯಾಪ್ತಿಯ 27 ವಿಧಾನಸಭೆ ಕ್ಷೇತ್ರಗಳಲ್ಲಿ 21 ವಿಧಾನಸಭಾ ಕ್ಷೇತ್ರಗಳಿಗೆ ಒಂದು ಪ್ಯಾಕೇಜ್‌ ನಿಗದಿ ಪಡಿಸಲಾಗಿದೆ. ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಮಹದೇವಪುರ, ಕೆ.ಆರ್‌. ಪುರ, ಯಶವಂತಪುರ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ತಲಾ ಎರಡು ಪ್ಯಾಕೇಜ್‌ ನಿಗದಿಪಡಿಸಲಾಗಿದೆ. ಒಟ್ಟಾರೆ ₹544.91 ಕೋಟಿ ಎಂದು ಅಂದಾಜಿಸಿ ಟೆಂಡರ್‌ ಆಹ್ವಾನಿಸಲಾಯಿತು. ಸುಮಾರು ₹591 ಕೋಟಿಗೆ ಬಿಡ್‌ ಆಗಿದೆ. ಹೀಗಾಗಿ, ಕಳೆದ ಬಾರಿಗಿಂತ ಈ ಬಿಡ್‌ ಅತ್ಯಂತ ಕಡಿಮೆಯಾಗಿದ್ದು, ಅತ್ಯಾಧುನಿಕ ವಾಹನಗಳನ್ನು ಒಳಗೊಂಡು ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಬಿಎಸ್‌ಡಬ್ಲ್ಯುಎಂಎಲ್‌ ಮೂಲಗಳು ತಿಳಿಸಿವೆ.

ಒಂದು ಪ್ಯಾಕೇಜ್‌ನಲ್ಲಿ ಶೇ 23ರಷ್ಟು ಕಡಿಮೆ ಬಿಡ್‌ ದಾಖಲಾಗಿದ್ದರೆ, ಇನ್ನೊಂದು ಬಿಡ್‌ನಲ್ಲಿ ಶೇ 28ರಷ್ಟು ಅಧಿಕವಾಗಿ ಬಿಡ್‌ ಮಾಡಲಾಗಿದೆ. ಇಷ್ಟಾದರೂ, ಘನತ್ಯಾಜ್ಯ ವಿಲೇವಾರಿಗೆ ಪ್ರಸ್ತುತ ವೆಚ್ಚ ಮಾಡುತ್ತಿರುವ ಮೊತ್ತಕ್ಕಿಂತ ಕೆಲವೇ ಕೋಟಿ ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲದೆ, ಗುತ್ತಿಗೆ ಮೊತ್ತ ಏಳು ವರ್ಷ ಒಂದೇ ಇರಲಿದೆ. ಗುತ್ತಿಗೆ ಷರತ್ತಿನಂತೆ (2.7.6) ಎರಡನೇ ವರ್ಷದಿಂದ ಕಾಂಪ್ಯಾಕ್ಟರ್‌ ಬಳಕೆ ನಿಲ್ಲಿಸಿ, ಆಟೊ ಟಿಪ್ಪರ್‌ಗಳಿಂದ ಕಸ ನೇರವಾಗಿ ಎರಡನೇ ಹಂತದ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ತಲುಪಿಸಬೇಕು. ಹೀಗಾಗಿ, ಎರಡನೇ ವರ್ಷದಿಂದ, ಕಾಂಪ್ಯಾಕ್ಟರ್‌ಗಳನ್ನು ಬಳಸುವುದನ್ನು ನಿಲ್ಲಿಸಿದರೆ, ಅದರ ನಿರ್ವಹಣೆಯ ಸುಮಾರು ₹110 ಕೋಟಿ ಹಣವೂ ಬಿಎಸ್‌ಡಬ್ಲ್ಯುಎಂಎಲ್‌ಗೆ ಉಳಿಯಲಿದೆ. ಹೀಗಾಗಿ, ಹೊಸ ಪ್ಯಾಕೇಜ್‌ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎನ್ನಲಾಗಿದೆ.

  • ₹544.91 ಕೋಟಿ;  33 ಪ್ಯಾಕೇಜ್‌ನಲ್ಲಿ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ನಲ್ಲಿದ್ದ ವಾರ್ಷಿಕ ಮೊತ್ತ
  • ₹591 ಕೋಟಿ: 33 ಪ್ಯಾಕೇಜ್‌ನಲ್ಲಿ ಗುತ್ತಿಗೆದಾರರ ಒಟ್ಟಾರೆ ಬಿಡ್‌
  • ₹586 ಕೋಟಿ: ಪ್ರಸ್ತುತ 5 ನಗರ ಪಾಲಿಕೆಯಲ್ಲಿ ವೆಚ್ಚವಾಗುತ್ತಿರುವ ಮೊತ್ತ


ಐದು ಪ್ಯಾಕೇಜ್‌ನಲ್ಲಷ್ಟೇ ಗೊಂದಲ!

ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್‌, ಬಸವನಗುಡಿ, ದಾಸರಹಳ್ಳಿ–2, ಮಹದೇವಪುರ–1 ಪ್ಯಾಕೇಜ್‌ಗಳನ್ನು ಅಂತಿಮಗೊಳಿಸುವಲ್ಲಿ ಗೊಂದಲ ಮೂಡಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಅಪೀಲು ಸಲ್ಲಿಸಲಾಗಿದೆ. ಒಂದೇ ಕಂಪನಿ ಎರಡು ಹೆಸರಿನಲ್ಲಿ ಎರಡು ಪ್ಯಾಕೇಜ್‌ಗಳಲ್ಲಿ ಭಾಗವಹಿಸಿದ್ದರೂ ಅದಕ್ಕೆ ಟೆಂಡರ್‌ ಪ್ರಕ್ರಿಯೆಯಲ್ಲಿ ಮನ್ನಣೆ ನೀಡಲಾಗಿದೆ. ಇದರಿಂದ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ದೂರು ಸಲ್ಲಿಸಲಾಗಿದೆ.

‘ಈ ಐದು ಪ್ಯಾಕೇಜ್‌ಗಳನ್ನು ಹೊರತುಪಡಿಸಿದರೆ ಉಳಿದ ಪ್ಯಾಕೇಜ್‌ಗಳು ಬಹುತೇಕ ಅಂತಿಮಗೊಂಡಿವೆ. ಕೆಲವು ಗುತ್ತಿಗೆದಾರರು ಅವರಿಗೆ ಅರ್ಹತೆ ಇಲ್ಲ ಎಂಬ ಅರಿವಿದ್ದರೂ ಸುಖಾಸುಮ್ಮನೆ ಅಪೀಲು ಸಲ್ಲಿಸಿ, 33 ಪ್ಯಾಕೇಜ್‌ ಅಂತಿಮಗೊಳ್ಳದಂತೆ ತಡೆಯಲು ಯತ್ನಿಸುತ್ತಿದ್ದಾರೆ. ಹೊಸ ವಾಹನಗಳನ್ನು ನಿಯೋಜಿಸದೆ, ಹಳೆಯ ವಾಹನಗಳಲ್ಲೇ ಹಳೇ ಪದ್ಧತಿಯಲ್ಲೇ ಗುತ್ತಿಗೆ ಮುಂದುವರಿಸುವ ಹುನ್ನಾರ ಅವರದ್ದಾಗಿದೆ’ ಎಂದು ಗುತ್ತಿಗೆದಾರರು ದೂರಿದರು.


ಬಹುತೇಕ ಅಂತಿಮ: ಕರೀಗೌಡ

‘27 ವಿಧಾನಸಭೆ ಕ್ಷೇತ್ರಗಳಿಗೆ 33 ಪ್ಯಾಕೇಜ್‌ಗಳ ಟೆಂಡರ್‌ ಬಹುತೇಕ ಅಂತಿಮಗೊಂಡಿದೆ. ಕೆಲವರು ಅಪೀಲು ಹಾಕಿಕೊಂಡಿದ್ದು, ಜನವರಿ ಅಂತ್ಯದೊಳಗೆ ಅವು ಇತ್ಯರ್ಥವಾಗಲಿವೆ. ಎಲ್‌1ಗೆ ಎಲ್ಲ ರೀತಿಯಲ್ಲಿಯೂ ಅರ್ಹತೆ ಇದ್ದಾಗ ಅವರನ್ನೇ ಆಯ್ಕೆ ಮಾಡಬೇಕು. ಆದರೂ, ಎಲ್‌2 ಅವರು ಅಪೀಲು ಹಾಕಿದ್ದಾರೆ, ಇವೆಲ್ಲ ನಿಲ್ಲುವುದಿಲ್ಲ. ಹೊಸ ಪ್ಯಾಕೇಜ್‌ಗಳು ಅನುಷ್ಠಾನಗೊಂಡರೆ ನಗರದಲ್ಲಿ ಕಸ ಸಮಸ್ಯೆ ಬಹುತೇಕ ಬಗೆಹರಿಯಲಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಸಿಇಒ ಕರೀಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

Saturday, January 24, 2026

GBA: ₹310 Crore for Upgrading Maternity Hospitals… ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ

Development by GBA as per IPHS-2022; Aiming to Complete Work Within 18 Months

GBA: ₹310 Crore for Upgrading Maternity Hospitals… ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ 


Kere Manjunath ಕೆರೆ ಮಂಜುನಾಥ್

Bengaluru: It has been decided to upgrade 21 maternity and referral hospitals across four municipal corporations under the Greater Bengaluru Authority (GBA) in accordance with the Indian Public Health Standards (IPHS-2022).

The project involves implementing medical equipment, medical gas pipelines, fire safety systems, electrical works, and other essential facilities. An investment of ₹310 crore is being made for this purpose.

The upgrade works for these 21 hospitals are slated for completion within 18 months. The Executive Engineer-4 of the GBA Project Implementation Division will oversee the project. GBA officials stated that a blueprint for construction has been prepared according to IPHS-2022 standards, and tenders have already been invited.

Terms and Conditions

  •  * Operational Readiness: All maternity-related equipment must be operational within eight weeks of supply.
  •  * Certifications: Equipment must hold ISO 9001 and ISO 13485 certifications.
  •  * Quality Standards: All products supplied must be certified by the Central Drugs Standard Control Organization (CDSCO). Imported equipment must carry European Commission (CE), US FDA, or BIS certifications, along with safety certificates.
  •  * Warranty: A mandatory two-year warranty period from the date the equipment becomes operational is required.

List of Hospitals Slated for Development

| Bengaluru Central | Halasuru Referral, Austin Town Maternity, Cox Town Maternity, Jayanagar Maternity, Thimmaiah Road Maternity, Magadi Road Maternity, Gavipura Guttahalli Maternity, H. Siddaiah Road Referral, Wilson Garden Maternity. |

| Bengaluru North | D.J. Halli Maternity, M.R. Palya Maternity, Yashwanthpura Hospital. |

| Bengaluru South | Tavarekere/Ejipura Maternity Hospital. |

| Bengaluru West | Nandini Layout Maternity, Srirampura Referral, Palace Guttahalli Maternity, Mudalapalya Maternity, M.C. Layout Multi-Specialty, N.R. Colony Maternity, Azad Nagar Maternity, Hosakerehalli Referral Hospital. 



ಐಪಿಎಚ್‌ಎಸ್‌–2022ರಂತೆ ಜಿಬಿಎಯಿಂದ ಅಭಿವೃದ್ಧಿ; 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ

ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ 

Kere Manjunath ಕೆರೆ ಮಂಜುನಾಥ್

ಬೆಂಗಳೂರು: ಜಿಬಿಎ ವ್ಯಾಪ್ತಿಯ ನಾಲ್ಕು ನಗರ ಪಾಲಿಕೆಗಳಲ್ಲಿರುವ 21 ಹೆರಿಗೆ ಹಾಗೂ ರೆಫರಲ್‌ ಆಸ್ಪತ್ರೆಗಳನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐಪಿಎಚ್‌ಎಸ್‌–2022) ಅನುಸಾರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.

ಹೆರಿಗೆ/ ರೆಫರಲ್‌ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣ, ವೈದ್ಯಕೀಯ ಗ್ಯಾಸ್ ಕೊಳವೆ ಮಾರ್ಗ, ಅಗ್ನಿಶಾಮಕ ವ್ಯವಸ್ಥೆ, ವಿದ್ಯುತ್‌ ಮತ್ತು ಇತರೆ ಅಗತ್ಯ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದಕ್ಕಾಗಿ ₹310 ಕೋಟಿ ವೆಚ್ಚ ಮಾಡಲಾಗುತ್ತಿದೆ.

21 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು 18 ತಿಂಗಳಲ್ಲಿ ತಿಂಗಳಲ್ಲಿ ಮುಗಿಸಲು ನಿರ್ಧರಿಸಲಾಗಿದೆ. ಜಿಬಿಎ ಯೋಜನಾ ಅನುಷ್ಠಾನ ವಿಭಾಗದ ಕಾರ್ಯಕಾರಿ ಎಂಜಿನಿಯರ್‌–4 ಅವರು ಯೋಜನೆಯನ್ನು ನಿರ್ವಹಿಸಲಿದ್ದಾರೆ.

ಐಪಿಎಚ್‌ಎಸ್‌–2022ನಂತೆ ಯಾವ ರೀತಿ ಕಟ್ಟಡ ನಿರ್ಮಾಣ ಮಾಡಬೇಕೆಂಬ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗಿದ್ದು, ಅದರಂತೆಯೇ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದರು.

ಏನೇನು ಷರತ್ತು: ಹೆರಿಗೆಗೆ ಸಂಬಂಧಿಸಿದ ಎಲ್ಲ ರಿತಿಯ ಉಪಕರಣಗಳು ಆಸ್ಪತ್ರೆ ಸರಬರಾಜಾದ ಎಂಟು ವಾರದಲ್ಲಿ ಕಾರ್ಯಾಚರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಇದಕ್ಕೆಲ್ಲ ಐಎಸ್‌ಒ 9001 ಮತ್ತು ಐಎಸ್‌ಒ 13485 ಪ್ರಮಾಣ ಪತ್ರವಿರಬೇಕು.

ಆಸ್ಪತ್ರೆಗಳಿಗೆ ಒದಗಿಸುವ ಎಲ್ಲ ಉತ್ಪನ್ನಗಳು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಪ್ರಮಾಣಪತ್ರ ಹೊಂದಿರುವ ಉಪಕರಣಗಳನ್ನೇ ಬಳಸಬೇಕು. ಉಪಕರಣಗಳನ್ನು ಆಮದು ಮಾಡಿಕೊಂಡರೆ, ಯುರೋಪಿಯನ್‌ ಕಮಿಷನ್‌/ ಎಫ್‌ಡಿಎ (ಯುಎಸ್‌)/ ಬಿಐಎಸ್‌/ ಪ್ರಮಾಣ ಪತ್ರವನ್ನು ಹೊಂದಿರಬೇಕು. ಸುರಕ್ಷತಾ ಪ್ರಮಾಣ ಪತ್ರವನ್ನೂ ಒಳಗೊಂಡಿರಬೇಕು. ಉಪಕರಣಗಳು ಕಾರ್ಯಾರಂಭಿಸಿದ ದಿನದಿಂದ ಎರಡು ವರ್ಷ ವಾರಂಟಿ ಅವಧಿಯೂ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ.

 

ಎಲ್ಲಿ, ಯಾವ ಆಸ್ಪತ್ರೆಗಳು ಅಭಿವೃದ್ಧಿ

ಬೆಂಗಳೂರು ಕೇಂದ್ರ ನಗರ ಪಾಲಿಕೆ: ಹಲಸೂರು ರೆಫರಲ್‌ ಆಸ್ಪತ್ರೆ, ಆಸ್ಟಿನ್‌ ಟೌನ್‌ ಹೆರಿಗೆ ಆಸ್ಪತ್ರೆ, ಕಾಕ್ಸ್‌ ಟೌನ್‌ ಹೆರಿಗೆ ಆಸ್ಪತ್ರೆ, ಜಯನಗರ ಹೆರಿಗೆ ಆಸ್ಪತ್ರೆ, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ, ಮಾಗಡಿ ರಸ್ತೆ ಹೆರಿಗೆ ಆಸ್ಪತ್ರೆ, ಗವಿಪುರ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆ, ಎಚ್‌. ಸಿದ್ದಯ್ಯ ರಸ್ತೆ ರೆಫರಲ್‌ ಆಸ್ಪತ್ರೆ, ವಿಲ್ಸನ್‌ ಗಾರ್ಡನ್‌ ಹೆರಿಗೆ ಆಸ್ಪತ್ರೆ.

ಬೆಂಗಳೂರು ಉತ್ತರ ನಗರ ಪಾಲಿಕೆ: ಡಿ.ಜೆ. ಹಳ್ಳಿ ಹೆರಿಗೆ ಆಸ್ಪತ್ರೆ, ಎಂ.ಆರ್‌. ಪಾಳ್ಯ ಹೆರಿಗೆ ಆಸ್ಪತ್ರೆ, ಯಶವಂತಪುರ ಆಸ್ಪತ್ರೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ: ತಾವರೆಕೆರೆ/ ಈಜಿಪುರ ಹೆರಿಗೆ ಆಸ್ಪತ್ರೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ನಂದಿನಿ ಲೇಔಟ್‌ ಹೆರಿಗೆ ಆಸ್ಪತ್ರೆ, ಶ್ರೀರಾಮಪುರ ರೆಫರಲ್‌ ಆಸ್ಪತ್ರೆ, ಪ್ಯಾಲೇಸ್‌ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆ, ಮೂಡಲಪಾಳ್ಯ ಹೆರಿಗೆ ಆಸ್ಪತ್ರೆ, ಎಂ.ಸಿ. ಲೇಔಟ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎನ್‌.ಆರ್‌. ಕಾಲೊನಿ ಹೆರಿಗೆ ಆಸ್ಪತ್ರೆ, ಆಜಾದ್‌ನಗರ ಹೆರಿಗೆ ಆಸ್ಪತ್ರೆ, ಹೊಸಕೆರೆಹಳ್ಳಿ ರೆಫರಲ್‌ ಆಸ್ಪತ್ರೆ.

Thursday, January 22, 2026

₹244 Crore Funding Cut for BSWML… ಬಿಎಸ್‌ಡಬ್ಲ್ಯುಎಂಎಲ್‌ಗೆ ₹244 ಕೋಟಿ ಅನುದಾನ ಕತ್ತರಿ

Shortfall in Property Tax Collection Across 5 City Corporations; Urban Department Issued Order to Transfer ₹382.72 Crore by End of March 2026

₹244 Crore Funding Cut for BSWML



Bengaluru: Due to a shortfall in tax collection and resources across five city corporations under the Greater Bengaluru Authority (GBA), the funding for Bengaluru Solid Waste Management Limited (BSWML) has been slashed by ₹244 crore.

In the budget presented during the tenure of the BBMP, the allocation for solid waste collection and transportation will now see a 16% reduction. While funds were being paid correctly when the BBMP was a single entity, fund transfers to BSWML have stalled since the individual city corporations came into existence.

Since the five city corporations have failed to pay the dues to BSWML so far, the Urban Development Department (UDD) has issued an order. It directs that ₹100 crore be transferred from the GBA’s property tax collection account at Canara Bank to the five city corporations, which must then immediately transfer those funds to BSWML.

Urgency in Fund Release

The Chief Commissioner of the GBA submitted a proposal to the Urban Development Department stating that it is essential for the city corporations to release necessary funds to BSWML on time. He suggested that user fees and cesses collected from waste generators should be transferred. Accordingly, an order was issued on January 20, instructing the five city corporations to immediately transfer ₹88.68 crore to BSWML.

BSWML is responsible for waste collection, transportation, processing, and landfill management within the jurisdictions of these five corporations. To safeguard public health and comply with periodic directives from the Supreme Court, High Court, and the National Green Tribunal, adhering to the Solid Waste Management Rules–2016 is a mandatory responsibility for both the corporations and BSWML. The GBA Commissioner noted in the proposal that funds must be released promptly to ensure that ongoing contracts, development/maintenance works, and waste management for the upcoming financial year are not hindered.

Despite these orders from the Urban Development Department, the total allocation for BSWML for the current financial year has been reduced. Experts suggest this may negatively impact the establishment of processing plants and dry waste collection centers.

The Financial Breakdown

  • | Funds reserved for BSWML in the 2025–26 BBMP Budget | ₹1,500 Crore |
  • | Funds transferred to BSWML while BBMP was in existence | ₹872.63 Crore |
  • | Balance amount pending for BSWML in the current fiscal year | ₹627.37 Crore |
  • | Total amount to be transferred from 5 corporations to BSWML | ₹382.72 Crore |

Bills Unpaid Since August

BSWML has not paid bills to contractors managing solid waste since August 2025. While the BBMP covered the costs of waste collection, transport, and disposal from January to July 2025, no funds have been released by the new corporations since then. The GBA Chief Commissioner’s proposal to the Urban Development Department explicitly mentions that despite letters requesting funds for bills from August to November 2025, the corporations have failed to release the money.

> "I do not have complete information regarding the budget cut; I will review the Urban Development Department’s order."

> — Kareegowda, CEO, BSWML


Greater Bengaluru Authority Violates Act ನಾಲ್ಕೇ ತಿಂಗಳಲ್ಲಿ ಜಿಬಿಎ ಕಾಯ್ದೆ ಉಲ್ಲಂಘನೆ 

Also Read>>>>>> Election preparations begin amidst high expectations and lingering doubts…. ನಿರೀಕ್ಷೆ, ಅನುಮಾನದ ನಡುವೆ ಚುನಾವಣೆ ತಯಾರಿ








Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



5 ನಗರ ಪಾಲಿಕೆಗಳಲ್ಲಿ ಆಸ್ತಿ ಸಂಗ್ರಹದಲ್ಲಿ ಕೊರತೆ; ಮಾರ್ಚ್‌ ಅಂತ್ಯಕ್ಕೆ ₹382.72 ಕೋಟಿ ವರ್ಗಾಹಿಸಲು ಆದೇಶ

ಬಿಎಸ್‌ಡಬ್ಲ್ಯುಎಂಎಲ್‌ಗೆ ₹244 ಕೋಟಿ ಅನುದಾನ ಕತ್ತರಿ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ತೆರಿಗೆ ಸಂಗ್ರಹ ಹಾಗೂ ಸಂಪನ್ಮೂಲ ಕೊರತೆಯಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಅನುದಾನದಲ್ಲಿ ₹244 ಕೋಟಿಗೆ ಕತ್ತರಿ ಬಿದ್ದಿದೆ.

ಬಿಬಿಎಂಪಿ ಅಸ್ತಿತ್ವದಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ, ಘನತ್ಯಾಜ್ಯ ಸಂಗ್ರಹ, ಸಾಗಣೆಗೆ ಮೀಸಲಿರಿಸಲಾಗಿದ್ದ ಅನುದಾನದಲ್ಲಿ ಶೇ 16ರಷ್ಟು ಮೊತ್ತ ಕಡಿತವಾಗಲಿದೆ. ಬಿಬಿಎಂಪಿ ಇದ್ದಾಗ ಅನುದಾನ ಸರಿಯಾಗಿ ಪಾವತಿಯಾಗಿತ್ತು. ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಾಗಿನಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ಅನುದಾನ ವರ್ಗಾವಣೆ ಆಗಿಲ್ಲ.

ಐದು ನಗರ ಪಾಲಿಕೆಗಳಿಂದ ಬಿಎಸ್‌ಡಬ್ಲ್ಯುಎಂಎಲ್‌ ನೀಡಬೇಕಾಗಿರುವ ಹಣವನ್ನು ಈವರೆಗೆ ಪಾವತಿಸಿಲ್ಲವಾದ್ದರಿಂದ, ಜಿಬಿಎಯ ಕೆನರಾ ಬ್ಯಾಂಕ್‌ನಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ತೆರೆಯಲಾಗಿರುವ ಖಾತೆಯಿಂದ ₹100 ಕೋಟಿಯನ್ನು ಐದು ನಗರ ಪಾಲಿಕೆಗಳಿಗೆ ವರ್ಗಾಯಿಸಿ, ಐದು ನಗರ ಪಾಲಿಕೆಗಳಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ತಕ್ಷಣವೇ ವರ್ಗಾಯಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ಜಿಬಿಎ ಮುಖ್ಯ ಆಯುಕ್ತರು ಬಿಎಸ್‌ಡಬ್ಲ್ಯುಎಂಎಲ್‌ಗೆ ನಗರ ಪಾಲಿಕೆಗಳಿಂದ ಸಕಾಲದಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡುವುದು ಅತ್ಯವಶ್ಯ. ಆದ್ದರಿಂದ ತ್ಯಾಜ್ಯ ಉತ್ಪಾದಕರಿಂದ ಸಂಗ್ರಹಿಸುವ ಬಳಕೆದಾರ ಶುಲ್ಕ ಹಾಗೂ ಉಪಕರಗಳನ್ನು ವರ್ಗಾಯಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ, ಜ.20ರಂದು ಆದೇಶ ಹೊರಡಿಸಲಾಗಿದ್ದು, ಐದು ನಗರ ಪಾಲಿಕೆಗಳು ಕೂಡಲೇ ₹88.68 ಕೋಟಿಯನ್ನು ಬಿಎಸ್‌ಡಬ್ಲ್ಯುಎಂಎಲ್‌ ವರ್ಗಾಯಿಸುವಂತೆ ಸೂಚಿಸಲಾಗಿದೆ.

ಬಿಎಸ್‌ಡಬ್ಲ್ಯುಎಂಎಲ್‌ ವತಿಯಿಂದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಸದ ಸಂಗ್ರಹ ಸಾಗಣೆ, ಸಂಸ್ಕರಣೆ, ಕಸದ ಭೂಭರ್ತಿ ಘಟಕ ನಿರ್ವಹಣೆ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಸುಪ್ರೀಂ ಕೋರ್ಟ್‌, ಹೈಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಲಕಾಲಕ್ಕೆ ಹೊರಡಿಸಿರುವ ನಿರ್ದೇಶನಗಳನ್ನು ಪಾಲಿಸಬೇಕು. ಘನತ್ಯಾಜ್ಯ ನಿರ್ವಹಣಾ ನಿಯಮಗಳು– 2016 ಅನ್ನು ಪಾಲಿಸುವುದು ಐದು ನಗರ ಪಾಲಿಕೆಗಳು, ಬಿಎಸ್‌ಡಬ್ಲ್ಯುಎಂಎಲ್‌ ಜವಾಬ್ದಾರಿಯಾಗಿದೆ. ಬಿಎಸ್‌ಡಬ್ಲ್ಯುಎಂಎಲ್‌ ಪ್ರಸ್ತುತ ಚಾಲ್ತಿಯಲ್ಲಿರುವ ಗುತ್ತಿಗೆ, ಅಭಿವೃದ್ಧಿ/ ನಿರ್ವಹಣಾ ಕಾಮಗಾರಿಗಳು ಹಾಗೂ ಮುಂಬರುವ ಆರ್ಥಿಕ ವರ್ಷದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ತೊಂದರೆಯಾಗದಂತೆ ಅಗತ್ಯ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು ಎಂದು ಜಿಬಿಎ ಆಯುಕ್ತರು ಪ್ರಸ್ತಾವದಲ್ಲಿ ತಿಳಿಸಿದ್ದಾರೆ.

ಇಷ್ಟೆಲ್ಲ ಪ್ರಸ್ತಾವದ ನಂತರ ಹಣ ಪಾವತಿಸಲು ಐದು ನಗರ ಪಾಲಿಕೆಗಳಿಗೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದರೂ, ಬಿಎಸ್‌ಡಬ್ಲ್ಯುಎಂಎಲ್‌ಗೆ ಪ್ರಸಕ್ತ ಆರ್ಥಿಕ ಮೀಸಲಿರಿಸಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದರಿಂದ ಸಂಸ್ಕರಣೆ ಘಟಕ ಸೇರಿದಂತೆ ಒಣತ್ಯಾಜ್ಯ ಸಂಗ್ರಹ ಘಟಕಗಳ ಸ್ಥಾಪನೆಗೆ ತೊಂದರೆಯಾಗಲಿದೆ ಎನ್ನಲಾಗಿದೆ.

 

  • ₹1,500 ಕೋಟಿ; 2025–26ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಬಿಎಸ್‌ಡಬ್ಲ್ಯುಎಂಎಲ್‌ಗೆ ಮೀಸಲಿರಿಸಿದ್ದ ಅನುದಾನ
  • ₹872.63 ಕೋಟಿ; ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಬಿಎಸ್‌ಡಬ್ಲ್ಯುಎಂಎಲ್‌ಗೆ ವರ್ಗಾವಣೆಯಾದ ಹಣ
  • ₹627.37 ಕೋಟಿ; ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಎಸ್‌ಡಬ್ಲ್ಯುಎಂಎಲ್‌ಗೆ ಬಾಕಿ ಇರುವ ಹಣ
  • ₹382.72 ಕೋಟಿ; ಐದು ನಗರ ಪಾಲಿಕೆಗಳಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ವರ್ಗಾವಣೆಯಾಗುವ ಮೊತ್ತ

 

ಆಗಸ್ಟ್‌ನಿಂದ ಬಿಲ್‌ ಪಾವತಿಸಿಲ್ಲ

ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ 2025ರ ಆಗಸ್ಟ್‌ನಿಂದ ಬಿಎಸ್‌ಡಬ್ಲ್ಯುಎಂಎಲ್‌ ಬಿಲ್‌ ಪಾವತಿ ಮಾಡಿಲ್ಲ. ಘನತ್ಯಾಜ್ಯ ಸಂಗ್ರಹ, ಸಾಗಣೆ, ವಿಲೇವಾರಿಗೆ ಸಂಬಂಧಿಸಿದಂತೆ 2025ರ ಜನವರಿಯಿಂದ ಜುಲೈವರೆಗಿನ ವೆಚ್ಚವನ್ನು ಬಿಬಿಎಂಪಿ ಭರಿಸಿದೆ. ಆಗಸ್ಟ್‌ನಿಂದ ನವೆಂಬರ್‌ 2025ರವರೆಗೆ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಣೆ ಬಿಲ್ಲುಗಳ ಪಾವತಿಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಬಿಎಸ್‌ಡಬ್ಲ್ಯುಎಂಎಲ್‌, ಐದು ನಗರ ಪಾಲಿಕೆಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ, ಪಾಲಿಕೆಗಳ ವತಿಯಿಂದ ಅನುದಾನ ಬಿಡುಗಡೆ ಆಗಿಲ್ಲ ಎಂದು ನಗರಾಭಿವೃದ್ಧಿಗೆ ಇಲಾಖೆಗೆ ಜಿಬಿಎ ಮುಖ್ಯ ಆಯುಕ್ತರು ಸಲ್ಲಿಸುವ ಪ್ರಸ್ತಾವದಲ್ಲೇ ನಮೂದಾಗಿದೆ.

 

ಅನುದಾನ ಕಡಿತವಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ, ನಗರಾಭಿವೃದ್ಧಿ ಆದೇಶವನ್ನು ಪರಿಶೀಲಿಸುತ್ತೇನೆ

ಕರೀಗೌಡ, ಸಿಇಒ, ಬಿಎಸ್‌ಡಬ್ಲ್ಯುಎಂಎಲ್‌

Monday, January 19, 2026

Ballot Papers to be used for GBA’s 5 City Corporation Elections… ಜಿಬಿಎ: ನಗರ ಪಾಲಿಕೆಗಳ ಪಾಲಿಕೆ ಚುನಾವಣೆಗೆ ಬ್ಯಾಲಟ್‌ ಪೇಪರ್‌

Elections for Five City Corporations After 2026 May 25

Ballot Papers to be used for GBA’s 5 City Corporation Elections



BENGALURU: The State Election Commissioner, G.S. Sangreshi, announced that ballot papers will be used instead of Electronic Voting Machines (EVMs) for the upcoming elections of the five city corporations under the Greater Bengaluru Authority (GBA).

While releasing the draft voters' list on Monday, the Commissioner explained that according to the rules of the Greater Bengaluru Governance Act (GBGA), the commission has the discretion to conduct elections using either EVMs or ballot papers. Exercising this power, the commission has decided to proceed with ballot papers for all five corporations.

Responding to media queries, he clarified: "The State Election Commission is an autonomous body and does not function under anyone's subordination. Ballot papers are being used as per the law. There was no instruction from the government; this is entirely the decision of the Election Commission."

Election Timeline & Voter Registration

The elections for the 369 wards across the five city corporations will be held after May 25 and are scheduled to be completed by June 30, 2026, in accordance with Supreme Court orders.

 * Voter List Verification: Citizens are encouraged to check if their names are on the draft list. Anyone aged 18 and above is eligible to apply for inclusion.

 * Draft Basis: The current list is based on data as of October 1, 2025.

 * Door-to-Door Verification: Booth Level Officers (BLOs) will visit homes from January 20 to February 3 to verify details and accept claims or objections.

 * Disposal of Claims: Objections will be processed between February 4 and February 18.

 * Final List: The final voters' list will be published on March 16.

Digital Access & Helplines

The ward-wise draft list is available in PDF format on the official GBA website: https://gba.karnataka.gov.in/home.

Corporation-wise Helplines:

 * Bengaluru Central: 080-22975803

 * Bengaluru North: 080-22975936

 * Bengaluru South: 9480685704

 * Bengaluru East: 9480685706

 * Bengaluru West: 9480685703

Required Application Forms

As per the Greater Bengaluru Governance (Registration of Electors) Rules, 2025, citizens can submit the following forms to Electoral Registration Officers (ERO) or BLOs:

 * Form 4: Addition of name to the list.

 * Form 5: Objection to the inclusion of a name.

 * Form 6: Correction of existing details.

 * Form 7: Change of address/location.

 * Form 8: Deletion of a name.


Voter Statistics at a Glance

| Category | Total (All 5 Corps) |

| Total Voters | 88,91,411 |

| Male Voters | 45,69,193 |

| Female Voters | 43,20,583 |

| Others | 1,635 |

| Polling Stations | 8,044 |


Breakdown by Corporation:

1. Bengaluru Central (52 Wards)

 * Total Voters: 14,25,483 (Male: 7,26,352 | Female: 6,98,828)

 * Polling Stations: 1,305

 * Highest Voters: Padarayanapura (Ward 52) – 32,898

 * Lowest Voters: Indiranagar (Ward 15) – 15,407

2. Bengaluru North

 * Total Voters: 19,54,206 (Male: 9,94,310 | Female: 9,59,515)

 * Polling Stations: 1,716

 * Highest Voters: Sampigehalli (Ward 20) – 45,892

 * Lowest Voters: Jalahalli (Ward 60) – 16,968

3. Bengaluru South

 * Total Voters: 17,44,270 (Male: 9,03,182 | Female: 8,40,863)

 * Polling Stations: 1,614

 * Highest Voters: Subramanyapura (Ward 51) – 49,518

 * Lowest Voters: Jayanagar East (Ward 11) – 14,454

4. Bengaluru East

 * Total Voters: 10,41,738 (Male: 5,49,313 | Female: 4,92,167)

 * Polling Stations: 916

 * Highest Voters: Kalkere (Ward 6) – 35,678

 * Lowest Voters: Kothur (Ward 16) – 10,926

5. Bengaluru West

 * Total Voters: 27,25,714 (Male: 13,96,036 | Female: 13,29,210)

 * Polling Stations: 2,493

 * Highest Voters: Rajarajeshwari Nagar (Ward 23) – 49,530

 * Lowest Voters: Nelagadaranahalli (Ward 3) – 15,059



Final Voters' List on March 30

Bengaluru, January 24, 2026: The State Election Commission has revised the schedule for preparing ward-wise voters' lists for the general elections of five city corporations. It has decided to publish the final voters' list on March 30 instead of March 15.

During a meeting of District Election Officers held after the publication of the draft voters' list (Jan 19), it was suggested that it would be more appropriate to adopt the currently available Assembly voters' list to prepare the ward-wise lists for city corporations. This is because the existing forms for adding, deleting, or objecting to names in the Assembly list differ from the Greater Bengaluru Administration voter registration rules.

According to the Election Commission's circular, the revised schedule has been set to prepare ward-wise lists by adopting Rule 30 of the Greater Bengaluru Administration Rules, 2025, as per the opinions of political party representatives and GBA officials.

Revised Schedule:

| Booth Level Officers (BLO) to identify voters in the draft list | Jan 22 – Jan 31 |

| Verification of ward-wise lists with Assembly lists and checking for duplicates | Feb 1 – Feb 9 |

| Preparation of Supplementary List–1 | Feb 10 – Feb 17 |

| E-roll preparation | Feb 18 – Feb 22 |

| Printing of the final checklist | Feb 23 – Feb 27 |

| Verification of the checklist | Feb 28 – Mar 4 |

| Matrix implementation in the software | Mar 5 – Mar 9 |

| Printing of E-rolls | Mar 12 – Mar 16 |

| Receipt of final voters' lists from printers | Mar 17 – Mar 29 |

| Publication of the Final Voters' List | March 30 |


Greater Bengaluru Authority Violates Act ನಾಲ್ಕೇ ತಿಂಗಳಲ್ಲಿ ಜಿಬಿಎ ಕಾಯ್ದೆ ಉಲ್ಲಂಘನೆ 

Also Read>>>>>> Election preparations begin amidst high expectations and lingering doubts…. ನಿರೀಕ್ಷೆ, ಅನುಮಾನದ ನಡುವೆ ಚುನಾವಣೆ ತಯಾರಿ








Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..




ಮಾರ್ಚ್‌ 30ಕ್ಕೆ ಮತದಾರರ ಅಂತಿಮ ಪಟ್ಟಿ

ಬೆಂಗಳೂರು, 24 ಜನವರಿ 2026: ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವ ವೇಳಾಪಟ್ಟಿಯನ್ನು ಮತ್ತೆ ಪರಿಷ್ಕರಿಸಿರುವ ರಾಜ್ಯ ಚುನಾವಣಾ ಆಯೋಗ, ಮಾರ್ಚ್‌ 15ರ ಬದಲು ಮಾರ್ಚ್‌ 30ರಂದು ಮತದಾರ ಅಂತಿಮ ಪಟ್ಟಿ ಪ್ರಕಟಿಸಲು ನಿರ್ಧರಿಸಿದೆ.

ಈಗಾಗಲೇ ಚಾಲ್ತಿಯಲ್ಲಿರುವ ವಿಧಾನಸಭೆ  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದುಹಾಕಲು ಹಾಗೂ ಆಕ್ಷೇಪಣೆಗೆ ನಮೂನೆಗಳಿದ್ದು, ಗ್ರೇಟರ್‌ ಬೆಂಗಳೂರು ಆಡಳಿತ  ಮತದಾರರ ನೋಂದಣಿ ನಿಯಮಗಳಿಗಿಂತ ಭಿನ್ನವಾಗಿವೆ. ಹೀಗಾಗಿ, ತತ್ಕಾಲದಲ್ಲಿ ಲಭ್ಯವಿರುವ ವಿಧಾನಸಭೆ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು, ನಗರ ಪಾಲಿಕೆಗಳಿಗೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವುದು ಸೂಕ್ತ ಎಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ (ಜ.19) ನಂತರ ನಡೆದ ಜಿಲ್ಲಾ ಚುನಾವಣಾಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. 

ರಾಜಕೀಯ ಪಕ್ಷಗಳು ಪ್ರತಿನಿಧಿಗಳೂ, ಜಿಬಿಎ ಅಧಕಾರಿಗಳ ಅಭಿಪ್ರಾಯದಂತೆ ‘ಗ್ರೇಟರ್‌ ಬೆಂಗಳೂರು ಆಡಳಿತ ನಿಯಮ– 2025ರ ನಿಯಮ 30 ಅನ್ನು ಯಥಾವತ್ತಾಗಿ ಅಳವಡಿಸಿಕೊಂಡು ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಸುತ್ತೋಲೆ ತಿಳಿಸಿದೆ.

ವೇಳಾಪಟ್ಟಿ: ಮತದಾರರ ಕರಡು ಪಟ್ಟಿಯಲ್ಲಿರುವ ಮತದಾರರನ್ನು ಜ.22ರಿಂದ 31ರವರೆಗೆ ಮತಗಟ್ಟೆ ಅಧಿಕಾರಿಗಳು ಗುರುತಿಸುವುದು. ಪುನರಾವರ್ತನೆ ಮತ್ತು ವಿಧಾನಸಭೆ ವಾರು ಮತದಾರರ ಪಟ್ಟಿಯೊಂದಿಗೆ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಫೆಬ್ರುವರಿ 1ರಿಂದ 9ರವರೆಗೆ ತಾಳೆ ಮಾಡುವುದು. ಫೆ.10ರಿಂದ 17ರವರೆಗೆ ಪೂರಕ ಪಟ್ಟಿ–1 ಸಿದ್ಧಪಡಿಸುವುದು, ಫೆಬ್ರುವರಿ 18ರಿಂದ 22ರವರೆಗೆ ಇ–ರೋಲ್‌ ತಯಾರಿಕೆ, ಫೆ.23ರಿಂದ ಫೆ.27ರವರೆಗೆ ಅಂತಿಮ ಚೆಕ್‌ಲಿಸ್ಟ್‌ ಮುದ್ರಣ, ಫೆ.28ರಿಂದ ಮಾರ್ಚ್‌ 4ರವರೆಗೆ ಚೆಕ್‌ಲಿಸ್ಟ್‌ ಪರಿಶೀಲನೆ, ಮಾರ್ಚ್‌ 5ರಿಂದ 9ರವರೆಗೆ ಸಾಫ್ಟ್‌ವೇರ್‌ನಲ್ಲಿ ಮ್ಯಾಟ್ರಿಕ್ಸ್ ಅಳವಡಿಕೆ, ಮಾರ್ಚ್‌ 12ರಿಂದ 16ರವರೆಗೆ ಇ–ರೋಲ್‌ ಮುದ್ರಣ, ಮಾರ್ಚ್ 17ರಿಂದ 29ರವರೆಗೆ ಅಂತಿಮ ಮತದಾರರ ಪಟ್ಟಿಯನ್ನು ಮುದ್ರಕರಿಂದ ಪಡೆಯುವುದು, ಮಾರ್ಚ್‌ 30ರಂದು ಅಂತಿಮ ಮತದಾರರ ಪಟ್ಟಿಯನ್ನು  ಪ್ರಕಟಿಸುವುದು.


Greater Bengaluru Authority Violates Act ನಾಲ್ಕೇ ತಿಂಗಳಲ್ಲಿ ಜಿಬಿಎ ಕಾಯ್ದೆ ಉಲ್ಲಂಘನೆ 

Also Read>>>>>> Election preparations begin amidst high expectations and lingering doubts…. ನಿರೀಕ್ಷೆ, ಅನುಮಾನದ ನಡುವೆ ಚುನಾವಣೆ ತಯಾರಿ








Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



    ಮೇ 25ರ ನಂತರ ಐದು ನಗರ ಪಾಲಿಕೆಗಳಿಗೆ ಚುನಾವಣೆ

    ಜಿಬಿಎ: ನಗರ ಪಾಲಿಕೆಗಳ ಪಾಲಿಕೆ ಚುನಾವಣೆಗೆ ಬ್ಯಾಲಟ್‌ ಪೇಪರ್‌

    ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯಲ್ಲಿ ಮತದಾನಕ್ಕೆ ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಬದಲು ಮತ ಪತ್ರ (ಬ್ಯಾಲಟ್‌ ಪೇಪರ್) ಬಳಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್ ಸಂಗ್ರೇಶಿ ತಿಳಿಸಿದರು.

    ನಗರ ಪಾಲಿಕೆಗಳ ವ್ಯಾಪ್ತಿಯ ಮತದಾರರ ಕರಡು ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ (ಜಿಬಿಜಿಎ) ಇರುವ ನಿಯಮಗಳಂತೆ ಇವಿಎಂ ಅಥವಾ ಮತ ಪತ್ರದಲ್ಲಿ ಚುನಾವಣೆ ನಡೆಸಬಹುದಾಗಿದೆ. ಆ ಅಧಿಕಾರವನ್ನು ಬಳಸಿ ಮತ ಪತ್ರದಲ್ಲಿ ಐದೂ ನಗರ ಪಾಲಿಕೆಗಳ ಚುನಾವಣೆ ನಡೆಸಲಾಗುತ್ತದೆ ಎಂದರು.

    ‘ರಾಜ್ಯ ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಯಾರ ಅಧೀನಕ್ಕೂ ಬರುವುದಿಲ್ಲ. ಕಾಯ್ದೆಯಲ್ಲಿರುವಂತೆ ಮತ ಪತ್ರ ಬಳಸಲಾಗುತ್ತದೆ. ಸರ್ಕಾರದ ಯಾವ ಸೂಚನೆಯೂ ಇಲ್ಲ. ಇದು ಸಂಪೂರ್ಣ ಚುನಾವಣಾ ಆಯೋಗದ ನಿರ್ಧಾರ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ಜಿಇಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಜೂನ್ 30ರೊಳಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ತಿಳಿಸಿದರು.

    ಐದು ನಗರ ಪಾಲಿಕೆಗಳ 369 ವಾರ್ಡ್‌ಗಳ ಮತದಾರರ ಕರಡು ಪಟ್ಟಿಯನ್ನು ಮಂಗಳವಾರ ಪ್ರಕಟಿಸಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ಆದೇಶದಂತೆ 2026ರ ಜೂನ್‌ 30ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಯಲಿದೆ’ ಎಂದರು.

    ‘ಮತದಾರರ ಕರಡು ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು, ಹೆಸರಿಲ್ಲದಿದ್ದರೆ ಕೂಡಲೇ ನಮೂನೆಯ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವ ಅವಕಾಶವಿದೆ. 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬಹುದು’ ಎಂದು ತಿಳಿಸಿದರು.

    2025ರ ಅಕ್ಟೋಬರ್‌ 1ರ ಮಾಹಿತಿಯಂತೆ ಮತದಾರ ಕರಡು ಪಟ್ಟಿಯನ್ನು ತಯಾರಿಸಲಾಗಿದೆ. ಜ.20ರಿಂದ ಫೆಬ್ರುವರಿ 3ರವರೆಗೆ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿಯು ಫೆ.4ರಿಂದ 18ರವರೆಗೆ ನಡೆಯಲಿದ್ದು, ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

    ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿ: ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ (https://gba.karnataka.gov.in/home) ಪಿಡಿಎಫ್‌ನಲ್ಲಿ ಪ್ರಕಟಿಸಲಾಗಿದೆ. ಅದನ್ನು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿ ಸ್ಥಾಪಿಸಲಾಗಿದ್ದು, ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದರು.

     

    ನಗರ ಪಾಲಿಕೆವಾರು ಮತಪಟ್ಟಿ ಸಹಾಯವಾಣಿ:

    ಬೆಂಗಳೂರು ಕೇಂದ್ರ : 080-22975803

    ಬೆಂಗಳೂರು ಉತ್ತರ : 080-22975936

    ‌ಬೆಂಗಳೂರು ದಕ್ಷಿಣ : 9480685704

    ಬೆಂಗಳೂರು ಪೂರ್ವ : 9480685706

    ಬೆಂಗಳೂರು ಪಶ್ಚಿಮ : 9480685703

     

    *ನಮೂನೆಗಳ (ಫಾರಂ) ಮೂಲಕ ಅರ್ಜಿ ಸಲ್ಲಿಕೆ:*
    *ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025* ರಂತೆ ವಾರ್ಡ್ವಾರು ಮತದಾರರ ಪಟ್ಟಿ ಸಿದ್ಧತೆಗೆ, ಆಯೋಗದಿಂದ ನೇಮಕಗೊಂಡ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿ / ಬಿ.ಎಲ್.ಓ ಅವರ ಬಳಿ ನಿಗಧಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.
    1. *ನಮೂನೆ–4* : ಮತದಾರರ ಹೆಸರು ಸೇರ್ಪಡೆಗೆ
    2. *ನಮೂನೆ–5* : ಹೆಸರು ಸೇರ್ಪಡೆಗೆ ಆಕ್ಷೇಪಣೆ
    3. *ನಮೂನೆ–6* : ಹೆಸರು ತಿದ್ದುಪಡಿಗೆ
    4. *ನಮೂನೆ–7* : ಸ್ಥಳ ಬದಲಾವಣೆಗೆ
    5. *ನಮೂನೆ–8* : ಹೆಸರು ತೆಗೆದುಹಾಕಲು

     

     

     

    88,91,411; ಐದು ನಗರ ಪಾಲಿಕೆಯಲ್ಲಿರುವ ಒಟ್ಟು ಮತದಾರರು

    45,69,193; ಪುರುಷ ಮತದಾರರು

    43,20,583; ಮಹಿಳಾ ಮತದಾರರು

    1,635; ಇತರೆ

    8,044; ಮತಗಟ್ಟೆಗಳು

     

    14,25,483; ಕೇಂದ್ರ ನಗರ ಪಾಲಿಕೆಯಲ್ಲಿರುವ ಒಟ್ಟು ಮತದಾರರು

    7,26,352; ಪುರುಷರು

    6,98,828; ಮಹಿಳೆಯರು

    303; ಇತರೆ

    1,305; ಮತಗಟ್ಟೆಗಳು

    32,898; ವಾರ್ಡ್‌– 52 ಪಾದರಾಯನಪುರದಲ್ಲಿ ಅತಿಹೆಚ್ಚು ಮತದಾರರು

    15,407; ವಾರ್ಡ್‌–15 ಇಂದಿರಾನಗರದಲ್ಲಿ ಅತಿಕಡಿಮೆ ಮತದಾರರು

     

    19,54,206; ಉತ್ತರ ನಗರ ಪಾಲಿಕೆಯಲ್ಲಿರುವ ಒಟ್ಟು ಮತದಾರರು

    9,94,310; ಪುರುಷರು

    9,59,515; ಮಹಿಳೆಯರು

    381; ಇತರೆ

    1,716; ಮತಗಟ್ಟೆಗಳು

    45,892; ವಾರ್ಡ್‌– 20 ಸಂಪಿಗೆಹಳ್ಳಿಯಲ್ಲಿ ಅತಿಹೆಚ್ಚು ಮತದಾರರು

    16,968; ವಾರ್ಡ್‌–60  ಜಾಲಹಳ್ಳಿಯಲ್ಲಿ ಅತಿಕಡಿಮೆ ಮತದಾರರು

     

     

    17,44,270; ದಕ್ಷಿಣ ನಗರ ಪಾಲಿಕೆಯಲ್ಲಿರುವ ಒಟ್ಟು ಮತದಾರರು

    9,03,182; ಪುರುಷರು

    8,40,863; ಮಹಿಳೆಯರು

    225; ಇತರೆ

    1,614; ಮತಗಟ್ಟೆಗಳು

    49,518; ವಾರ್ಡ್‌– 51 ಸುಬ್ರಹ್ಮಣ್ಯಪುರದಲ್ಲಿ ಅತಿಹೆಚ್ಚು ಮತದಾರರು

    14,454; ವಾರ್ಡ್‌–11 ಜಯನಗರ ಪೂರ್ವದಲ್ಲಿ ಅತಿಕಡಿಮೆ ಮತದಾರರು

     

    10,41,738; ಪೂರ್ವ ನಗರ ಪಾಲಿಕೆಯಲ್ಲಿರುವ ಒಟ್ಟು ಮತದಾರರು

    5,49,313; ಪುರುಷರು

    4,92,167; ಮಹಿಳೆಯರು

    258; ಇತರೆ

    916; ಮತಗಟ್ಟೆಗಳು

    35.678; ವಾರ್ಡ್‌– 6 ಕಲ್ಕೆರೆಯಲ್ಲಿ ಅತಿಹೆಚ್ಚು ಮತದಾರರು

    10,926; ವಾರ್ಡ್‌–16 ಕೊತ್ತೂರುನಲ್ಲಿ ಅತಿಕಡಿಮೆ ಮತದಾರರು

     

    27,25,714; ಪಶ್ಚಿಮ ನಗರ ಪಾಲಿಕೆಯಲ್ಲಿರುವ ಒಟ್ಟು ಮತದಾರರು

    13,96,036; ಪುರುಷರು

    13,29,210; ಮಹಿಳೆಯರು

    468; ಇತರೆ

    2493; ಮತಗಟ್ಟೆಗಳು

    49,530; ವಾರ್ಡ್‌– 23 ರಾಜರಾಜೇಶ್ವರಿನಗರದಲ್ಲಿ ಅತಿಹೆಚ್ಚು ಮತದಾರರು

    15,059; ವಾರ್ಡ್‌–3 ನೆಲಗದರನಹಳ್ಳಿಯಲ್ಲಿ ಅತಿಕಡಿಮೆ ಮತದಾರರು