Monday, April 24, 2023

Dr. Rajkumar Birthday- Fans Festival

 ನಿನದೆ ನೆನಪು ದಿನವೂ ಮನದಲ್ಲಿ

ರಾಜ್ಕುಮಾರ್ ಹುಟ್ಟುಹಬ್ಬ: ಅಭಿಮಾನಿಗಳ ಹಬ್ಬ

 ಕೆರೆ ಮಂಜುನಾಥ್

ಪ್ರತಿ ವರ್ಷದ ಏಪ್ರಿಲ್ 24ರಂದು ಕರ್ನಾಟಕದ ಜನತೆಗೆ ಹಬ್ಬದ ಸಂಭ್ರಮ. ಅಂದು ತಮ್ಮ ನೆಚ್ಚಿನ ರಾಜಣ್ಣನ ಹುಟ್ಟುಹಬ್ಬ. ಇದು ಕುಟುಂಬವೊಂದರ ಸಂಭ್ರಮವಾಗದೆ ಐದು ಕೋಟಿ ಕನ್ನಡಿಗರ ಆಚರಣೆಯ ದಿನ. ಕಳೆದ ವರ್ಷದಿಂದ ಆಚರಣೆಯಲ್ಲಿ ವಿಧಿಯ ಕೈವಾಡ ಮೆರೆದಿದೆ. ಇದನ್ನು ಮೆಟ್ಟಿ ನಿಂತಿರುವುದು ಅಭಿಮಾನಿ ದೇವರುಗಳು. ಆದ್ದರಿಂದಲೇ ಏಪ್ರಿಲ್ 24 ಸುವರ್ಣೋತ್ಸವದಲ್ಲೇ ಮುಳುಗುತ್ತದೆ.

ಸದಾಶಿವನಗರ ಕನ್ನಡ ಚಿತ್ರಾಭಿಮಾನಿಗಳ ಪಾಲಿಗೆ ಅಣ್ಣಾವ್ರ ಮನೆ ಇರುವ ಪ್ರದೇಶವೆಂದೇ ಪ್ರತೀತಿ. ರಾಜಣ್ಣನನ್ನು ಅಭಿಮಾನಿಗಳು ಸಂದರ್ಶಿಸುತ್ತಿದ್ದುದು ಇಲ್ಲೇ. ಇಲ್ಲಿ ನಿತ್ಯವೂ ಅಭಿನಮಾನಿ ದೇವರುಗಳು ಭಕ್ತನ ದರ್ಶನಕ್ಕೆ ಕಾಯುತ್ತಿದ್ದರು. ಏಪ್ರಿಲ್ ೨೪ರಂದು ಮಾತ್ರ ಇಡೀ ಪ್ರದೇಶ ಜನಸಾಗರದಲ್ಲಿ ಮುಳುಗುಹೋಗಿರುತ್ತಿತ್ತು. ಏಕೆಂದರೆ ಅಂದು ಭಕ್ತನ ಹುಟ್ಟುಹಬ್ಬ. ವರನಟ ಡಾ. ರಾಜ್ಕುಮಾರ್ ಜನ್ಮದಿನ.

ಸಾಮಾನ್ಯವಾಗಿ ಹುಟ್ಟುಹಬ್ಬ ಖಾಸಗಿ ಸಮಾರಂಭ. ಕುಟುಂಬದ ಸದಸ್ಯರು, ಆಪ್ತರು, ಸ್ನೇಹಿತರೊಂದಿಗೆ ಸಂಭ್ರಮಿಸುವ ದಿನ. ಆದರೆ, ರಾಜ್ಕುಮಾರ್ ಹುಟ್ಟುಹಬ್ಬ ಕಳೆದ ಐವತ್ತು ವರ್ಷಗಳಲ್ಲಿ ಖಾಸಗಿ ಎನಿಸಲೇ ಇಲ್ಲ. ರಾಜಣ್ಣ ಬೆಳ್ಳಿತೆರೆಗೆ ಕಾಲಿಟ್ಟಂದಿನಿಂದ ಅವರ ಹುಟ್ಟುಹಬ್ಬದ ಆಚರಣೆ ಅಭಿಮಾನಿಗಳ ಸ್ವತ್ತಾಯಿತು. ವರ್ಷದಿಂದ ವರ್ಷಕ್ಕೆ ಆಚರಣೆಯ ಸಂಭ್ರಮ ವೃದ್ಧಿಯಾಗುತ್ತಾ ಸಾಗಿತು.

ರಾಜ್ ಸದಾಶಿವನಗರಕ್ಕೆ ಬಂದು ನೆಲಸಿದ ಮೇಲಂತೂ ಜನ್ಮದಿನದ ಆಚರಣೆಗೆ ಹೊಸ ಮೆರುಗು ಬಂದಿತ್ತು. ಆಚರಣೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಉದ್ಯಾನನಗರಿ ಪ್ರತಿ ವರ್ಷದ ಏಪ್ರಿಲ್ 24ರಂದು ವಿಭಿನ್ನ ಬಗೆಯಲ್ಲಿ ಸಿಂಗಾರಗೊಳ್ಳುತ್ತಿತ್ತು. ಇದು ಬರೀ ಸಂಭ್ರಮಕ್ಕಷ್ಟೇ ಸೀಮಿತವಾಗಿರಲಿಲ್ಲ. ಸಾಮಾಜಿಕ ಕಾಳಜಿಯನ್ನು ಹೊಂದಿರುವ ಕಾರ್ಯಕ್ರಮವಾಗಿರುತ್ತಿತ್ತು.

ಅಭಿಮಾನಿ ದೇವರುಗಳು ಎಂದೇ ಅಭಿಮಾನಿಗಳನ್ನು ಅತ್ಯಂತ ಗೌರವದಿಂದ ಸಂಬೋಧಿಸುತ್ತಿದ್ದ ರಾಜ್, ಅವರೊಂದಿಗೆ ಜನ್ಮದಿನದಂದು ಬೆರೆತು ಹೋಗುತ್ತಿದ್ದರು. ಅಭಿಮಾನಿಗಳ ಹಾರ-ತುರಾಯಿಗಳಲ್ಲಿ ಮಿಂದು, ಕೇಕ್ ಸವಿಯನ್ನು ಇಡೀ ಜನಸಾಗರಕ್ಕೆ ಹಂಚುತ್ತಿದ್ದರು. ರಾಜಣ್ಣನನ್ನು ಅಂದು ನೋಡಿದರೆ ಜನ್ಮ ಪಾವನ ಎಂಬ ಅಭಿಮಾನಿಗಳ ಸಂಖ್ಯೆ ಲಕ್ಷಾಂತರ. ದರ್ಶನ ಭಾಗ್ಯದ ಸಾಧನೆಗಾಗಿ ಲಾಠಿ ರುಚಿಯನ್ನೂ ಸವಿದಿರುವ ದೇಹಗಳು ಸಾವಿರಾರು.

ರಾಜ್ ಬಂಗಲೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಜನಸಾಗರದ್ದೇ ಸೊಬಗಾದರೆ, ರಾಜಧಾನಿ ಸೇರಿದಂತೆ ಕನ್ನಡ ನಾಡಿನ 27 ಜಿಲ್ಲೆಗಳಲ್ಲೂ ಜನ್ಮದಿನದ ಸಂಭ್ರಮದ ರೀತಿಗೆ ಕೊನೆಯಿಲ್ಲ. ರಕ್ತದಾನ, ಅನ್ನಸಂತರ್ಪಣೆ, ಬಡವರಿಗೆ ಚಿಕಿತ್ಸೆ, ರೋಗಿಗಳಿಗೆ ಹಾಲು-ಹಣ್ಣು ಹಂಚುವ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯುತ್ತಿದ್ದವು.

ಹೀಗೆ ಹುಟ್ಟುಹಬ್ಬವೆಂದರೆ ಬರೀ ಪಾರ್ಟಿಯಲ್ಲ. ಹಾರ-ತೂರಾಯಿಯ ಎಸೆತ, ಕೇಕ್ ಕತ್ತರಿಸಿ ಬಾಯಿ ಚೆಪ್ಪರಿಸುವ ಆಚರಣೆಯಾಗಿರಿಲ್ಲ. ರಾಜಣ್ಣನ ಜನ್ಮದಿನವೆಂದರೆ ಕನ್ನಡ ಚಿತ್ರರಸಿಕರಿಗೆ ದೀಪಾವಳಿಯ ಸಂಭ್ರಮ. ರಾಜ್ ಎಂಬ ದಿವ್ಯಪ್ರಭೆಯಲ್ಲಿ ಮಿಂದೇಳುವ ಶುಭದಿನ.

ಇಂದು ಸದಾಶಿವನಗರದ ಬಂಗಲೆಯಲ್ಲಿ ಸಂಭ್ರಮವಿಲ್ಲ. ಹೊರಗಡೆ ಅಭಿಮಾನಿ ದೇವರುಗಳಿಗೆ ಭಕ್ತನ ದರ್ಶನ ಪಡೆಯುವ ಕಾತರವಿಲ್ಲ. ಏಕೆಂದರೆ ಬಂಗಲೆಯಲ್ಲಿ ಕನ್ನಡ ಕುವರನಿಲ್ಲ. ವರನಟನ ನಗುಮೊಗದ ನಮನ ಸ್ವೀಕರಿಸಲುದೇವರುಗಳಿಗೆ ಅದೃಷ್ಟವಿಲ್ಲ.

ಆದರೇನಾಯಿತು, ಅಣ್ಣಾ ಎಂದಿಗೂ ಚಿರಂಜೀವಿ. ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಎಂದೂ ಚಿರಸ್ಥಾಯಿ. ಆಯಸ್ಸಿನಲ್ಲಿ ಬಹುತೇಕ ಹುಟ್ಟುಹಬ್ಬಗಳನ್ನು ಅಭಿಮಾನಿಗಳಿಗೇ ಸಮರ್ಪಿಸಿದ್ದ ರಾಜಣ್ಣನ ಹುಟ್ಟುಹಬ್ಬ, ಇಂದು, ಎಂದೂ ಅಭಿಮಾನಿಗಳದ್ದೇ. ಕನ್ನಡ ನಾಡಿನಲ್ಲಿ ಅಭಿಮಾನಿ ದೇವರುಗಳಿರುವವರೆಗೂ ರಾಜಣ್ಣದ ಜನ್ಮದಿನ ಸುವರ್ಣೋತ್ಸವವೇ...

(2007 -2009ರಲ್ಲಿ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)

Dr. Rajkumar Birthday- Fans Festival

Kere Manjunath ಕೆರೆ ಮಂಜುನಾಥ್

ninade nepu dinvu manadalli (Without you, the memory is in my mind every day)

Every year on 24th April, the people of Karnataka celebrate the festival. It was his favorite Rajanna's birthday. It is not a celebration of a family but a day of celebration for five crore Kannadigas. Fate has played a hand in this celebration since last year. Standing on it are the fan gods. That's why April 24 is immersed in the Golden Jubilee.

Sadashivnagar is believed to be the home of Annavra for Kannada movie fans. Fans are interviewing Rajanna here. Here the appreciative gods were always waiting for the devotee's darshan. Only on April 24, the entire area would have been submerged in a sea of people. Because that day is the devotee's birthday. Groom Dr. Rajkumar's birthday.

Usually a birthday is a private ceremony. A day to celebrate with family members, relatives and friends. However, Rajkumar's birthday has never been private in the past fifty years. Ever since Rajanna stepped on the silver screen, his birthday celebrations have become the property of fans. Year by year the excitement of the celebration increased.

Even after Raj came to Sadashivnagar, the birthday celebrations got a new glow. Always one step ahead in the celebration, Udyannagari was beautified in a different way on 24th April every year. It was not just a celebration. It was a program with social concern.

Raj, who used to address his fans as fan gods with utmost respect, used to mingle with them on birthdays. In garlands of fans, Mindu used to share the taste of cake to the entire crowd. If you see Rajanna then, the number of fans called Janma Pawan is millions. There are thousands of bodies who have tasted the taste of lathi for the achievement of darshan bhagya.

There is no end to the birthday celebrations in the 27 districts of Kannada, including the capital, if the roads around Raj Bungalow are crowded. Blood donation, food donation, treatment for the poor, distribution of milk and fruit to the sick were held across the state.

Thus a birthday is not just a party. Garland-throwing, cake-cutting and lip-smacking is not the ritual. Rajanna's birthday is a Diwali celebration for Kannada film lovers. An auspicious day that shines in the splendor of Raj.

Today there is no celebration in Sadashivnagar bungalow. Outside, the worshiping gods are not eager to get the darshan of the devotee. Because there is no Kannada kuvara in that bungalow. The 'gods' are not lucky enough to accept the groom's smiling nod.

Whatever happened, Anna was never immortal. Forever in the hearts of millions of fans. Rajanna's birthday, who had dedicated most of his birthdays to his fans, today is always his fans' birthday. As long as there are fan gods in Kannada, Rajanna's birthday is a golden celebration...
(Article published in Vijaya Karnataka in 2009)

The tireless nectar of Sachin!

The tireless nectar of Sachin!


Kere Manjunath ಕೆರೆ ಮಂಜುನಾಥ್

Have dreams of achievement….Success will follow…

For millions of young minds who aspire to play for Team India one day, the words of the 'Cricket God' matured over decades in cricket.

Achievements in 23 years of cricket career are countless. A record holder in the history of cricket that no one can erase!. Even when he stepped on the pinnacle of centuries, the same personality remained the same. The feeling that so much has been achieved, there is much more to be achieved. Even though he is the god of cricket, he is the same ‘Vamana’ who demands the boon of admiration from the fans.

Sachin Ramesh Tendulkar is a household name of the whole country with many names like Sachin, Tendulkar, Kulla, Little Master and so on. Not only India, but the entire world will be shocked by the thunderbolt that is raging in the world of cricket. A lion that has broken through the cave of records of cricketers and has made a necklace around his neck.

Isn't all this colorful talk too much for Sachin? This question may arise in some people. There is no fate without questioning that this is the grand opening in front of his achievements. Achievement is in all fields. But it's not the path to add to the record pages of an unbreakable achievement that sweeps it all aside. More importantly, what resides in the hearts of millions is not written in the destiny of even one of the millions. It is no longer common for hundreds of crores of people to become the unanointed ruler of an empire. Not only that, his 23-year career in cricket has been nothing short of an Everest-climbing adventure with teammates without the slightest grudge.

This is why Sachin is close to everyone.

Seniors, peers, juniors... Sachin is great at mixing with everyone. Sachin, who is accustomed to having no one younger than him in the dressing room, shared the dressing room with Kapil, Azhar and Siddu in the first match, and today he is having the same cheerfulness with the youngsters of his cricketing age.

During the 2nd edition of IPL held in South Africa, the young players of the state B. Akhil was walking along the road with players of his age group. Someone who came running behind them put his hand on his shoulder and spoke. Those who turned around and saw who it was were in for a surprise. The hand of that motivating force rested on the shoulders of those who had watched him play since childhood and aspired to be like him. This is just one example of Sachin's simplicity.

‘Build dreams of achievement. If you pursue them, success will follow. Keep dreaming...’ Sachin's words are very motivating for the young minds who are now watching the cricket world with anxious eyes and who are just a few steps away from team India. There is no doubt that such a word will inspire so many crores of hearts. Only Sachin has such power.

Sachin's batting style does not need to be described. All these statistics are recorded in the pages of history. However, the perverted minds who want to walk home should be aware of the truth. Most of these talkers can't even hold a bat. They have no idea how decades of cricket can take away physical strength. What is the effort to cross three hundred in one innings? Even if he has practiced cricket for four or five years on the field without seeing consistent success, he ends up thinking that this is enough. Only Sachin was able to rock the field with physical ability for 23 consecutive years.

Sachin crossed the ocean and landed on the cricket ground while the fire of his father's pyre, which was his god, was lit. A few years ago, when he was struggling with batting failure, he was no longer in his hands, and even when he talked about the 'retired, unhappy' mind, which he had made a success, he asked them to walk home. Instead, the bat spoke. Then the same unhappy minds rejoiced. Even then Sachin did not mind. Such scenes have unfolded many times in Sachin's cricket career.

Should it be Bangladesh to get Sachin's century? There are also pessimists who wonder if this achievement was necessary against such a poor team. These minds say that he will score a century against Bangladesh as well. If this was possible, shouldn't every batsman who has ever played against Bangladesh score a century? Why couldn't it? If this century was Sachin's target, it should have been a long time since these centuries were crossed. This is evidenced by the numbers of Sachin's outs in the 90s.

Behind a successful person there are always words of discontented and hollow minds. The path of perseverance should be hardened by the words of these mockers or scoffers. Sachin has always handled it. The reason for that are his dreams of achievement. He never lets it be seen. Let him see those dreams twice as much. That is the elixir of cricket world.

Sachin now at 50...!

(Article written when Sachin Tendulkar, who is known as the 'God of Cricket', completed 100 centuries in international cricket, was in 'Kannada prabha' in March 2012...)

ಸಚಿನ್ ಎಂಬ ದಣಿವರಿಯದ ಅಮೃತ!

Kere Manjunath ಕೆರೆ ಮಂಜುನಾಥ್

ಸಾಧನೆಯ ಕನಸುಗಳಿರಲಿ.... ಯಶಸ್ಸು ಹಿಂಬಾಲಿಸುತ್ತದೆ...

ಟೀಂ ಇಂಡಿಯಾಗಾಗಿ ಒಂದಲ್ಲ ಒಂದು ದಿನ ನಾನೂ ಆಡಬೇಕು ಎಂದು ಹಾತೊರೆಯುತ್ತಿರುವ ಕೋಟ್ಯಂತರ ಯುವ ಮನಸ್ಸುಗಳಿಗೆ ಕ್ರಿಕೆಟ್ನಲ್ಲೇ ದಶಕಗಳ ಕಾಲ ಮಾಗಿದಕ್ರಿಕೆಟ್ ದೇವರಕಿವಿಮಾತಿದು.

23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಸಾಧನೆಗಳು ಲೆಕ್ಕಕ್ಕಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಅಳಿಸಲಾರದಂತಹ ದಾಖಲೆಗಳ ಸರದಾರನೀತ. ಶತಕಗಳ ಶತಕದ ಶಿಖರವನೇ ಮೆಟ್ಟಿ ನಿಂತ ಕ್ಷಣದಲ್ಲೂ ಅದೇ ಧರೆಗಪ್ಪಿಯೇ ನಿಂತ ವ್ಯಕ್ತಿತ್ವ. ಸಾಧಿಸಿದ್ದು ಇಷ್ಟು, ಸಾಧಿಸಬೇಕಿರುವುದು ಬಹಳಷ್ಟಿದೆ ಎಂಬ ಭಾವ. ಕ್ರಿಕೆಟ್ ಆರಾಧ್ಯದೈವವಾಗಿದ್ದರೂ ಅಭಿಮಾನಿಗಳಿಂದ ಅಭಿಮಾನದ ವರ ಬೇಡುವ ಅದೇ ವಾಮನ.

ಸಚಿನ್, ತೆಂಡೂಲ್ಕರ್, ಕುಳ್ಳ, ಲಿಟ್ಲ್ ಮಾಸ್ಟರ್ ಹೀಗೆ ನಾನಾ ಹೆಸರಿನಲ್ಲಿ ಇಡೀ ದೇಶದ ಮನೆಮಾತು ಸಚಿನ್ ರಮೇಶ್ ತೆಂಡೂಲ್ಕರ್. ಭಾರತ ಮಾತ್ರವಲ್ಲ, ಇಡೀ ವಿಶ್ವವೇ ನಿಬ್ಬೆರರಾಗುವಂತೆ ಕ್ರಿಕೆಟ್ ಲೋಕದಲ್ಲಿ ರಾರಾಜಿಸುತ್ತಿರುವ ಸಿಡಿಲಮರಿ. ಕ್ರಿಕೆಟ್ ಕಲಿಗಳ ದಾಖಲೆಗಳ ಗುಹೆಹೊಕ್ಕು ಎಲ್ಲವನೂ ಭೇದಿಸಿ, ತನ ಕುತ್ತಿಗೆ ಸುತ್ತಲಿನ ಹಾರವನಾಗಿಸಿಕೊಂಡಿರುವ ಸಿಂಹದಮರಿ.

ಸಚಿನ್ಗೆ ಇಷ್ಟೆಲ್ಲಾ ಬಣ್ಣನೆಯ ಮಾತು ಹೆಚ್ಚಾಯಿತಲ್ಲವೇ? ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಆತ ಮಾಡಿರುವ ಸಾಧನೆಯ ಮುಂದೆ ಇದೇನು ಮಹಾಬಿಡಿ ಎಂದು ಮರುಪ್ರಶ್ನೆ ಹಾಕದೆ ವಿಧಿ ಇಲ್ಲ. ಸಾಧನೆ ಎಂಬುದು ಎಲ್ಲ ಕ್ಷೇತ್ರದಲ್ಲೂ ಇರುತ್ತದೆ. ಆದರೆ ಯಾರೂ ಮುರಿಯಲಾಗದ ಸಾಧನೆ ಇತಿಹಾದ ದಾಖಲೆ ಪುಟಗಳನ್ನು ಸೇರಿಸುವ ಹಾದಿ ಸಾಗುವುದಿದೆಯಲ್ಲ ಅದು ಎಲ್ಲವನ್ನೂ ಬದಿಗೆ ಸರಿಸುತ್ತದೆ. ಅದಕ್ಕಿಂತ ಮುಖ್ಯವಾಗಿ ಕೋಟ್ಯಂತರ ಹೃದಯಗಳಲ್ಲಿ ವಿರಾಜಮಾನವಾಗಿರುವುದು ಕೋಟಿಗಳಲ್ಲಿ ಒಬ್ಬನ ನಸೀಬಿನಲ್ಲೂ ಬರೆದಿರುವುದಿಲ್ಲ. ಇನ್ನು ನೂರಾರು ಕೋಟಿ ಜನರ ಹೃದಯ ಸಾಮ್ರಾಜ್ಯದ ಅನಭಿಷಿಕ್ತ ದೊರೆಯಾಗಿ ಮೆರೆಯುವುದು ಸಾಮಾನ್ಯದ ಮಾತಲ್ಲ. ಅದೊಂದೇ ಅಲ್ಲ, 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಸಹ ಆಟಗಾರರೊಂದಿಗೆ ಸಣ್ಣದೊಂದು ಮನಸ್ತಾಪವಿಲ್ಲದೆ ಸಾಗಿ ಬಂದಿರುವುದು ಎವೆರೆಸ್ಟ್ ಏರಿದ ಸಾಹಸಕ್ಕಿಂತ ಕಡಿಮೆಯಾದದ್ದೇನೂ ಅಲ್ಲ.

ಸಚಿನ್ ಎಲ್ಲರಿಗೂ ಹತ್ತಿರವಾಗುವುದೇ ಕಾರಣಕ್ಕಾಗಿ.

ಹಿರಿಯರು, ಸಮಾನ ವಯಸ್ಕರು, ಕಿರಿಯರು... ಎಲ್ಲರೊಂದಿಗೂ ಸಚಿನ್ ಬೆರೆತುಕೊಂಡಿದ್ದು ಹಿರಿಮೆಯೇ. ಡ್ರೆಸ್ಸಿಂಗ್ ರೂಂನಲ್ಲಿ ತನಗಿಂತ ಕಿರಿಯರಿಲ್ಲ ಎಂಬುದನ್ನು ರೂಢಿಯಲ್ಲಿರಿಸಿಕೊಂಡಿರುವ ಸಚಿನ್, ಅಂದು ಪ್ರಥಮ ಪಂದ್ಯದಲ್ಲಿ ಕಪಿಲ್, ಅಜರ್, ಸಿದ್ದು ಅವರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು, ಇಂದು ತನ್ನ ಕ್ರಿಕೆಟ್ ಜೀವನ ಅವಧಿಯಷ್ಟು ವಯಸ್ಸಿನ ಯುವಕರೊಂದಿಗೂ ಅದೇ ಉಲ್ಲಾಸದಿಂದ ನಡೆದುಕೊಳ್ಳುತ್ತಿರುವ ಸಹೃದಯಿ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ 2ನೇ ಆವೃತ್ತಿ ಸಂದರ್ಭದಲ್ಲಿ, ಯುವ ಆಟಗಾರರಾದ ರಾಜ್ಯದ ಬಿ. ಅಖಿಲ್ ತನ್ನ ವಯೋಮಾನದ ಆಟಗಾರರೊಂದಿಗೆ ರಸ್ತೆಯಲ್ಲಿ ನಡೆದುಹೋಗುತ್ತಿದ್ದರು. ಅವರ ಹಿಂದೆ ಓಡೋಡಿ ಬಂದವನೊಬ್ಬ ಹೆಗಲ ಮೇಲೆ ಕೈಹಾಕಿ ಮಾತಿಗೆಳೆದ. ಯಾರೆಂದು ತಿರುಗಿ ನೋಡಿದವರಿಗೆ, ಅಚ್ಚರಿ ಎದುರಾಗಿತ್ತು. ಚಿಕ್ಕಂದಿನಿಂದ ಆತನ ಆಟ ನೋಡಿ, ಅವನಂತಾಗಲು ಹಂಬಲಿಸಿದವರ ಹೆಗಲ ಮೇಲೆ ಪ್ರೇರಕ ಶಕ್ತಿಯ ಕೈ ಇತ್ತು. ಇದು ಸಚಿನ್ ಸರಳತೆಗೆ ಕೇವಲ ಒಂದು ಉದಾಹರಣೆಯಷ್ಟೇ.

ಸಾಧನೆಯ ಕನಸುಗಳನ್ನು ಕಟ್ಟಿಕೊಳ್ಳಿ. ಅವುಗಳ ಬೆನತ್ತಿ ಹೋದರೆ, ಯಶಸ್ಸು ತಾನಾಗಿಯೇ ಒಲಿಯುತ್ತದೆ. ಕೀಪ್ ಡ್ರೀಮಿಂಗ್...’ ಕ್ರಿಕೆಟ್ ಜಗತ್ತನು ಇದೀಗ ತಾನೇ ನಿಬ್ಬೆರಗು ಕಣ್ಣಿನಿಂದ ನೋಡುತ್ತಿರುವ ಹಾಗೂ ಟೀಂ ಇಂಡಿಯಾಗೆ ಇನೇನು ಕೆಲವೇ ಮೆಟ್ಟಿಲುಗಳ ಸಮೀಪವಿರುವ ಯುವ ಮನಗಳಿಗೆ ಶತಕಗಳ ಶತಕ ಮೈಲುಗಲ್ಲು ಮೆಟ್ಟಿನಿಂತ ಸಚಿನ್ ಮಾತುಗಳು ಅತ್ಯಂತ ಪ್ರೇರಣಾತ್ಮಕ. ಇಂತಹ ಒಂದು ಮಾತು ಅದೆಷ್ಟೋ ಕೋಟಿ ಮನಕ್ಕೆ ಉತ್ಸಾಹ ಚಿಲುಮೆಯಾಗುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಶಕ್ತಿ ಇರುವುದು ಕೇವಲ ಸಚಿನ್ಗೆ ಮಾತ್ರ.

ಸಚಿನ್ ಬ್ಯಾಟಿಂಗ್ ವೈಖರಿಯ ಬಣ್ಣನೆಯ ಅಗತ್ಯವೇ ಇಲ್ಲ. ಅದಕ್ಕೆಲ್ಲ ಅಂಕಿ-ಅಂಶಗಳೇ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಆದರೆ, ಮುಗಿಯಿತಲ್ಲ ನೂರರ ನೂರು, ಇನ್ನು ಮನೆಗೆ ನಡೆಯಲಿ ಎಂಬ ವಿಕೃತ ಮನಸ್ಸುಗಳಿಗೆ ಸತ್ಯಾಂಶದ ಅರಿವಾಗಲೇಬೇಕು. ಮಾತಾಡುವ ಬಹುತೇಕರಿಗೆ ಬ್ಯಾಟ್ ಕೂಡ ಹಿಡಿಯಲು ಬರುವುದಿಲ್ಲ. ದಶಕಗಳ ಕ್ರಿಕೆಟ್ ದೈಹಿಕ ಶಕ್ತಿಯನ್ನು ಯಾವ ಪರಿ ಕಸಿದುಕೊಳ್ಳುತ್ತದೆ ಎಂಬ ಸಣ್ಣ ಸುಳಿವೂ ಇವರಿಗಿರುವುದಿಲ್ಲ. ಇನ್ನು ಒಂದು ಇನಿಂಗ್ಸ್ನಲ್ಲಿ ಮೂರಂಕಿ ನೂರು ದಾಟುವ ಪರಿಶ್ರಮವೇನು ಗೊತ್ತು. ಕ್ರಿಕೆಟ್ ವೃತ್ತಿಯನಾಗಿಸಿಕೊಂಡೂ ನಾಲ್ಕೈದು ವರ್ಷ ಮೈದಾನದಲ್ಲಿ ಕಸರತ್ತು ಮಾಡಿದವನೂ ಸತತ ಯಶ ಕಾಣದೆ ಇಷ್ಟು ಸಾಕು ಎಂದು ಕೈಮುಗಿಯುತ್ತಾನೆ. 23 ವರ್ಷ ಸತತವಾಗ ದೈಹಿಕ ಕ್ಷಮತೆಯೊಂದಿಗೆ ಮೈದಾನದಲ್ಲಿ ಘೀಳಿಡಲು ಸಾಧ್ಯವಾಗಿದ್ದು ಸಚಿನ್ಗೆ ಮಾತ್ರ.

ತನ ಪಾಲಿನ ದೈವವೇ ಆಗಿದ್ದ ಅಪ್ಪನ ಚಿತೆಯ ಅಗ್ನಿಯ ಕಾವು ಆರದ ಹೊತ್ತಿನಲ್ಲಿ ಸಾಗರ ದಾಟಿ ಕ್ರಿಕೆಟ್ ಮೈದಾನಕ್ಕಿಳಿದ್ದ ಸಚಿನ್. ಕೆಲವೇ ವರ್ಷಗಳ ಹಿಂದೆ ಬ್ಯಾಟಿಂಗ್ ವೈಫಲ್ಯದ ಸತತವಾಗಿ ಕಾಡಿದ್ದಾಗ ಇನ್ನು ಅವನ ಕೈಯಲ್ಲಾಗುವುದಿಲ್ಲ, ಮನೆಗೆ ನಡಿಯಲಿ ಎಂದು ಶಸ್ತ್ರಾಸ್ತ್ರ ಮೂಲೆಗಿಟ್ಟು ಮಾತೇ ಸಾಧನೆಯನಾಗಿಸಿಕೊಂಡನಿವೃತ್ತ, ಅತೃಪ್ತಮನಗಳು ಬಾಯಿಗೆ ಬಂದಂತೆ ಮಾತಾಡಿದಾಗಲೂ ಸಚಿನ್ ತುಟಿ ಪ್ರತ್ಯುತ್ತರಕ್ಕೆ ಬಿಚ್ಚಿಕೊಳ್ಳಲ್ಲ. ಬದಲಿಗೆ, ಬ್ಯಾಟ್ ಮಾತನಾಡಿತು. ಆಗ ಅದೇ ಅತೃಪ್ತ ಮನಗಳು ಕೊಂಡಾಡಿದವು. ಆಗಲೂ ಸಚಿನ್ಗೆ ಇದಾವುದೂ ತಲೆಗೇರಲಿಲ್ಲ. ಇಂತಹ ದೃಶ್ಯಗಳು ಸಚಿನ್ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಬಾರಿ ಅನಾವರಣಗೊಂಡಿದೆ.

ಸಚಿನ್ ಶತಕಗಳ ಶತಕ ಬರಲು ಬಾಂಗ್ಲಾದೇಶವೇ ಆಗಬೇಕಿತ್ತಾ? ಇಂತಹ ಕಳಪೆ ಟೀಮ್ ಎದುರು ಸಾಧನೆ ಬೇಕಿತ್ತಾ ಎಂದು ಪ್ರಶಿಸುವ ಕುಹಕ ಮನಸುಗಳೂ ಇವೆ. ಬಾಂಗ್ಲಾದೇಶದ ಮೇಲೂ ತಾನೂ ಸೆಂಚುರಿ ಬಾರಿಸುತ್ತೇನೆ ಎಂದೂ ಮನಗಳು ಬಾಯಿಬಡಿಸುತ್ತವೆ. ಇದು ಸಾಧ್ಯ ಎಂದಾಗಿದ್ದರೆ, ಈವರೆಗೆ ಬಾಂಗ್ಲಾದೇಶದ ವಿರುದ್ಧ ಆಡಿದ ಪ್ರತಿಯೊಬ್ಬ ಬ್ಯಾಟ್ಸ್ಮನ್ ಕೂಡ ಶತಕ ಬಾರಿಸಬೇಕಿತ್ತಲ್ಲವೇ? ಅದು ಏಕೆ ಸಾಧ್ಯವಾಗಲಿಲ್ಲ. ಇನು ಶತಕವೇ ಸಚಿನ್ ಗುರಿಯಾಗಿದ್ದರೆ, ಶತಕಗಳ ಶತಕಗಳನು ದಾಟಿ ಅದೆಷ್ಟೋ ಕಾಲವಾಗಬೇಕಿತ್ತು. ಇದಕ್ಕೆ 90ರ ಆಸುಪಾಸಿನಲ್ಲಿ ಸಚಿನ್ ಔಟ್ ಆಗಿರುವ ಸಂಖ್ಯೆಗಳೇ ಸಾಕ್ಷಿ.

ಯಶಸ್ಸಿನ ವ್ಯಕ್ತಿಯ ಹಿಂದೆ ಅತೃಪ್ತ, ಕುಹಕ ಮನಗಳ ಮಾತುಗಳು ಎಂದೂ ಸುಳಿದಾಡುತ್ತಿರುತ್ತವೆ. ತೆಗಳಿಕೆ ಅಥವಾ ಹೀಯಾಳಿಸುವವರ ಮಾತುಗಳಿಂದಲೇ ಪರಿಶ್ರಮದ ಹಾದಿ ಗಟ್ಟಿಯಾಗಬೇಕು. ಅದನು ಸದಾ ನಿಭಾಯಿಸಿರುವುದು ಸಚಿನ್. ಅದಕ್ಕೆ ಕಾರಣ, ಆತನ ಸಾಧನೆಯ ಕನಸುಗಳು. ಅದನು ಕಾಣುವುದನ್ನು ಆತ ಎಂದೂ ಬಿಡುವುದಿಲ್ಲ. ಕನಸುಗಳನ್ನು ಇನ್ನೊಂದಷ್ಟು ದುಪ್ಪಟ್ಟಾಗಿ ಆತ ಕಾಣುವಂತಾಗಲಿ. ಅದು ಕ್ರಿಕೆಟ್ ಜಗತ್ತಿನ ಪಾಲಿನ ಅಮೃತ.

ಸಚಿನ್ ಗೆ ಇದೀಗ 50...!

 

(‘ಕ್ರಿಕೆಟ್ ದೇವರು’ ಎಂದೇ ಖ್ಯಾತಿಗಳಿಸಿರುವ ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಶತಕಗಳನ್ನು ಪೂರೈಸಿದಾಗ
2012ರ ಮಾರ್ಚ್ ನಲ್ಲಿ ‘ಕನ್ನಡ ಪ್ರಭ’ದಲ್ಲಿದ್ದಾಗ ಬರೆದ ಲೇಖನ...)