Saturday, January 3, 2026

Eco-Friendly Boating in 20 Bengaluru Lakes… ಬೆಂಗಳೂರು: 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್‌

Maheshwar Rao, the Chief Commissioner of the Greater Bengaluru Authority (GBA), has directed officials to initiate the first phase of an eco-friendly boating project across 20 lakes within the GBA jurisdiction. This project is a collaborative effort between the GBA and the Department of Tourism, aimed at transforming urban water bodies into sustainable public attraction centers.



Strategic Initiative: Eco-Friendly Boating to Transform 20 Bengaluru Lakes

Eco-Friendly Boating in 20 Bengaluru Lakes… ಬೆಂಗಳೂರು:  20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್‌

Key Directives for Sustainable Development

During a multi-departmental meeting held on Saturday, the Commissioner outlined several core mandates to ensure the ecological integrity of the city's lakes:

 * Zero-Emission Boating: The Commissioner strictly prohibited fuel-based motorboats. Instead, the plan mandates pollution-free, eco-friendly boating systems to protect the air and water quality.

 * Aquatic Life Protection: All recreational activities must adhere to a "zero-pollution" framework to ensure that the delicate aquatic ecosystems and biodiversity are not disturbed.

 * Nature-Based Solutions: Beyond recreation, the GBA will prioritize nature-based principles in all development projects, focusing on climate resilience and effective flood mitigation measures.

Biological Water Management: The Role of Ducks

In an innovative move toward natural water treatment, the Commissioner suggested exploring the introduction of ducks into these lakes.

 * Natural Aeration: Ducks act as biological aerators, helping to circulate oxygen and improve water quality naturally.

 * Tender-Based Maintenance: Officials have been asked to conduct a feasibility study on duck rearing. If viable, the maintenance and care of these birds will be outsourced through a formal legal tender process to ensure professional oversight.

Administrative Workflow and Revenue Generation

Executive Engineer Nitya provided insights into the operational roadmap and the economic benefits for local governance:

 * Selection Criteria: Only large-scale lakes capable of supporting ancillary infrastructure—such as parking facilities and food stalls—will be selected.

 * Approval Process: The GBA will first submit a curated list of lakes to the Karnataka Tank Conservation and Development Authority (KTCDA) for environmental clearance. Once approved, the project will be handed to the Tourism Department for execution.

 * Local Revenue: The project is designed to be self-sustaining. The Tourism Department or the operating vendors will pay a monthly or annual royalty (contribution) to the respective city corporations, creating a new revenue stream for urban maintenance.

Present at the Meeting: The meeting was attended by high-ranking officials including Special Commissioner R. Ramachandran, Chief Engineer Hemalatha, and Executive Engineer Nitya.


Also Read… Madiwala Lake: Machine Deployed to Remove Weeds…ಮಡಿವಾಳ ಕೆರೆ: ಕಳೆ ತೆಗೆಯಲು ಯಂತ್ರ

Also Read… Eco-Friendly Boating in 20 Bengaluru Lakes… ಬೆಂಗಳೂರು: 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್

Also read>>>>>>>>> Lakes number increased to 40 thousand… 40 ಸಾವಿರ ಕೆರೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಎಕರೆ ಒತ್ತುವರಿ


Lake Buffer zone reduce: Governor returns Bill to Government.., ಕೆರೆ ಬಫರ್ ವಲಯ ಕಡಿತ: ಮಸೂದೆಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ ರಾಜ್ಯಪಾಲರು

Notification to reduce Rajakaluve buffer zone… ರಾಜಕಾಲುವೆ ಬಫರ್‌ ಝೋನ್‌ ಕಡಿತಕ್ಕೆ ಅಧಿಸೂಚನೆ

ALSO Read….. *LAKES 30 out meter buffer zone will be reduced*; benefits real estate in urban areas *ಕೆರೆಗಳ ‘ಸಂರಕ್ಷಿತ ಪ್ರದೇಶ’ಕ್ಕೆ ಕಂಟಕ*

ALSO Read…. 172 water bodies under BBMP jurisdiction reduced to ‘protected areas’ *ಬೆಂಗಳೂರಿನಲ್ಲಿ 11 ಕೆರೆಗಷ್ಟೇ 30 ಮೀಟರ್‌ ಬಫರ್‌ ಝೋನ್‌!*

ALSO Read…. 42 km service road in Rajakaluve buffer zone ರಾಜಕಾಲುವೆ ಬಫರ್‌ ಝೋನ್‌ನಲ್ಲಿ 42 ಕಿ.ಮೀ ಸರ್ವಿಸ್‌ ರಸ್ತೆ

_First-of-its-kind Proposal in the Country for Scientific Modification of Buffer Zones: KTDCA _ *ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಬಫರ್‌ ಝೋನ್‌ ತಿದ್ದುಪಡಿ:ಕೆಟಿಸಿಡಿಎ*



ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಯೋಜನೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

ಬೆಂಗಳೂರು:  20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್‌

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿರುವ 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಬಿಎ ಮುಖ್ಯ ಆಯುಕ್ತ  ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಅವರು, ಕೆರೆಗಳನ್ನು ಸಾರ್ವಜನಿಕ ಆಕರ್ಷಣಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬೇಕು. ಈ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು ಎಂದರು.

‘ಕೆರೆಗಳನ್ನು ಆಕರ್ಷಣಾ ತಾಣಗಳಾಗಿ ಮಾಡುವುದರಿಂದ ನಾಗರಿಕರ ಒಡನಾಟ ಹೆಚ್ಚಾಗಲಿದೆ. ಕೆರೆಗಳಲ್ಲಿ ಇಂಧನ ಆಧಾರಿತ ಬೋಟಿಂಗ್ ವ್ಯವಸ್ಥೆಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಮಾಲಿನ್ಯರಹಿತ, ಪರಿಸರ ಸ್ನೇಹಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಯೋಜನೆ ರೂಪಿಸಬೇಕು. ಜೊತೆಗೆ ಜಲಚರ ಜೀವಜಾಲಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಶೂನ್ಯ ಮಾಲಿನ್ಯ ವ್ಯವಸ್ಥೆಯನ್ನು ರೂಪಿಸಬೇಕು’ ಎಂದು ಅವರು ನಿರ್ದೇಶನ ನೀಡಿದರು.

ಜಿಬಿಎ ವ್ಯಾಪ್ತಿಯ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಕೃತಿ ಆಧಾರಿತ ಹಾಗೂ ಪರಿಸರ ಸ್ನೇಹಿ ತತ್ವಗಳಿಗೆ ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ಸಾರ್ವಜನಿಕ ಆಕರ್ಷಣಾ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಪ್ರವಾಹ ನಿಯಂತ್ರಣ ಕ್ರಮಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಬಾತುಕೋಳಿಗಳು ನೀರಿನ ಸ್ವಾಭಾವಿಕ ‘ಏರೇಟರ್ಸ್’ ಹಾಗೂ ನೀರಿನ ಗುಣಮಟ್ಟದ ಸುಧಾರಣೆಗೆ ಸಹಕಾರಿಯಾಗಿವೆ. ಆದ್ದರಿಂದ ಕೆರೆಗಳಲ್ಲಿ ಬಾತುಕೋಳಿಗಳನ್ನು ಸಾಕುವ ಬಗ್ಗೆ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಅದು ಸಾಧ್ಯವಿದ್ದಲ್ಲಿ, ಬಾತುಕೋಳಿಗಳ ಪಾಲನೆ ಮತ್ತು ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಕಾನೂನಾತ್ಮಕತೆ ದೃಷ್ಟಿಯಿಂದ ಟೆಂಡರ್  ಮೂಲಕ ವಹಿಸಬೇಕು ಎಂದರು.

 

ನಗರ ಪಾಲಿಕೆಗಳು ಹಾಗೂ ಸಂಬಂಧಿತ ಸಂಸ್ಥೆಗಳು ಕೈಗೊಳ್ಳುವ ಎಲ್ಲಾ ಕಾರ್ಯಗಳು ಪ್ರಕೃತಿ ಆಧಾರಿತ ಮತ್ತು ಪರಿಸರ ಸ್ನೇಹಿ ತತ್ವಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿರಬೇಕು. ಇದರಿಂದ ದೀರ್ಘಕಾಲಿಕ ಪರಿಸರ ಸ್ಥಿರತೆ ಹಾಗೂ ಹವಾಮಾನ ಪ್ರತಿರೋಧ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದರು.

ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್,  ಮುಖ್ಯ ಎಂಜಿನಿಯರ್‌ ಹೇಮಲತಾ, ಕಾರ್ಯಪಾಲಕ ಎಂಜಿನಿಯರ್‌ ನಿತ್ಯಾ ಉಪಸ್ಥಿತರಿದ್ದರು.

ಪಾಲಿಕೆಗಳಿಗೆ ಆದಾಯ

‘ಬೋಟಿಂಗ್‌ ವ್ಯವಸ್ಥೆ ಕಲ್ಪಿಸುವ ಅನುಕೂಲಕರವಾಗಿರುವ ಕೆರೆಗಳನ್ನು ಪಟ್ಟಿ ಮಾಡಲಾಗುತ್ತದೆ. ಬೋಟಿಂಗ್‌ ವ್ಯವಸ್ಥೆಯಿದ್ದಾಗ ಸುತ್ತಮುತ್ತ ವಾಹನ ನಿಲುಗಡೆ, ತಿಂಡಿ–ತಿನುಸುಗಳ ಸೌಲಭ್ಯ ಇರಬೇಕು. ಇದಕ್ಕಾಗಿ ದೊಡ್ಡದಾದ ಕೆರೆಗಳನ್ನೇ ಗುರುತಿಸಬೇಕಾಗಿದೆ. ಜಿಬಿಎ ವತಿಯಿಂದ ಕೆರೆಗಳ ಪಟ್ಟಿ ತಯಾರಿಸಿ, ಯೋಜನೆಯನ್ನು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಟಿಸಿಡಿಎ) ಸಲ್ಲಿಸಲಾಗುತ್ತದೆ. ಅವರಿಂದ ಸಮ್ಮತಿ ದೊರೆತ ಮೇಲೆ ಅದನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಲಾಗುತ್ತದೆ’ ಎಂದು ಜಿಬಿಎ ಕಾರ್ಯಪಾಲಕ ಎಂಜಿನಿಯರ್‌ ನಿತ್ಯಾ ತಿಳಿಸಿದರು.

‘ಪ್ರವಾಸೋದ್ಯಮ ಇಲಾಖೆ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಪ್ರತಿಯೊಂದು ಕೆರೆಗೆ ಪ್ರತಿ ತಿಂಗಳು ಅಥವಾ ಪ್ರತಿ ವರ್ಷಕ್ಕೆ ವಂತಿಗೆಯನ್ನು ಆಯಾ ನಗರ ಪಾಲಿಕೆಗಳಿಗೆ ಪಾವತಿಸಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.

No comments:

Post a Comment