Wednesday, December 3, 2025

Bengaluru: Changes to Names and Boundaries of 20 Wards… ಬೆಂಗಳೂರು 20 ವಾರ್ಡ್ ವ್ಯಾಪ್ತಿ, ಹೆಸರು ಬದಲು

Five City Corporations: Modifications to Final Notification

Bengaluru: Changes to Names and Boundaries of 20 Wards



Bengaluru: The Urban Development Department has issued a modification to the final notification regarding the wards of the five City Corporations falling under the Greater Bengaluru Area (GBA), changing the boundaries and names of certain wards.

A final notification finalizing 369 wards across the five City Corporations was originally issued on November 19. However, following objections raised by MLAs and the public, the government considered several requests, made necessary changes, and issued a fresh notification on December 1.

Details of Modifications by Corporation:

1. Bengaluru Central City Corporation:

 * Boundary Changes: The boundaries of Ward 15 (Indiranagar) and Ward 16 (New Thippasandra) have been modified.

2. Bengaluru North City Corporation:

 * Yelahanka Assembly Constituency:

   * Ward 1 (Raja Venkatappa Ward) renamed to Ward 3 (Chowdeshwari Ward).

   * Ward 2 (Akash Ward) renamed to Ward 2 (Aero City Ward).

   * Ward 3 (Yelahanka Old Town) renamed to Ward 1 (Raja Venkatappa Ward).

 * Sarvagnanagar Assembly Constituency:

   * Ward 31 (Kalya Nagar) corrected/renamed to Ward 31 (Kalyan Nagar).

3. Bengaluru South City Corporation:

 * Padmanabhanagar Assembly Constituency:

   * Ward 3 (Kumaraswamy Ward) renamed to Ward 3 (Yarab Nagar).

 * Boundary Changes: The boundaries of Ward 56 (Doresanipalya), Ward 60 (Bilekahalli), Ward 65 (Garvebhavipalya), and Ward 66 (Singasandra) have been altered.

4. Bengaluru East City Corporation:

 * K.R. Puram Assembly Constituency:

   * Ward 8 (T.C. Palya) renamed to Anandapura.

   * Ward 10 (Medahalli) renamed to Basavanapura.

   * Ward 11 (Basavanapura) renamed to Krishna Nagar.

   * Ward 12 (Chikka Devasandra) renamed to Devasandra.

   * Ward 13 (Devasandra) renamed to Rajarajeshwari Temple Ward.

 * Mahadevapura Assembly Constituency:

   * Ward 49 (Shivanasamudra Ward) renamed to Dodda Kannelli Ward.

5. Bengaluru West City Corporation:

 * Yeshwantpur Assembly Constituency:

   * Ward 19 (Kengeri) renamed to Shivanapalya.

   * Ward 20 (Hemmigepura) renamed to Kengeri Fort Ward.

   * Ward 21 (Mallasandra) renamed to Kengeri.

Summary of Changes

 * 14 Wards: Names have been changed.
 * 6 Wards: Boundaries have been modified.

Ward Distribution by Corporation and Assembly Constituency

1. Bengaluru Central City Corporation (63 Wards)

 * Chamarajpet: 10 Wards

 * Chickpet: 12 Wards

 * C.V. Raman Nagar: 13 Wards

 * Gandhinagar: 10 Wards

 * Shantinagar: 10 Wards

 * Shivajinagar: 8 Wards

2. Bengaluru North City Corporation (72 Wards)

 * Dasarahalli: 8 Wards

 * Pulakeshinagar: 11 Wards

 * Byatarayanapura: 7 Wards

 * Yelahanka: 14 Wards

 * Rajarajeshwarinagar: 5 Wards

 * Sarvagnanagar: 16 Wards

 * Hebbal: 11 Wards

3. Bengaluru South City Corporation (72 Wards)

 * Anekal: 1 Ward

 * Jayanagar: 10 Wards

 * Padmanabhanagar: 6 Wards

 * BTM Layout: 14 Wards

 * Bengaluru South: 19 Wards

 * Bommanahalli: 20 Wards

 * Mahadevapura: 1 Ward

 * Yeshwantpur: 1 Ward

4. Bengaluru East City Corporation (50 Wards)

 * K.R. Puram: 27 Wards

 * Mahadevapura: 23 Wards

5. Bengaluru West City Corporation (112 Wards)

 * Govindarajanagar: 13 Wards

 * Dasarahalli: 10 Wards

 * Padmanabhanagar: 8 Wards

 * Basavanagudi: 10 Wards

 * Malleshwaram: 10 Wards

 * Mahalakshmi Layout: 12 Wards

 * Yeshwantpur: 11 Wards

 * Rajarajeshwarinagar: 14 Wards

 * Rajajinagar: 11 Wards

 * Vijayanagar: 13 Wards


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..


ಐದು ನಗರ ಪಾಲಿಕೆ: ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಡು. ಬದಲಾದ ವಾರ್ಡ್ ಗಳ ವಿವರ ಇಲ್ಲಿದೆ 

20 ವಾರ್ಡ್ ವ್ಯಾಪ್ತಿ, ಹೆಸರು ಬದಲು 

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ಗಳ ಅಂತಿಮ ಅಧಿಸೂಚನೆಗೆ ಮಾರ್ಪಾಟು ಮಾಡಿರುವ ನಗರಾಭಿವೃದ್ಧಿ ಇಲಾಖೆ, ಕೆಲವು
ವಾರ್ಡ್ ಗಳ ವ್ಯಾಪ್ತಿ ಹಾಗೂ ಹೆಸರನ್ನು ಬದಲಾಯಿಸಿ ಅಧಿಸೂಚಿಸಿದೆ.
ಐದು ನಗರ ಪಾಲಿಕೆಗಳ 369 ವಾರ್ಡ್ ಅಂತಿಮಗೊಳಿಸಿ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದರ ಬಗ್ಗೆ ಶಾಸಕರು ಹಾಗೂ ಸಾರ್ವಜನಿಕರಿಂದ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲಿ ಕೆಲವನ್ನು ಪರಿಗಣಿಸಿ, ಬದಲಾವಣೆ ಮಾಡಿ ಡಿ.1ರಂದು ಅಧಿಸೂಚನೆ ಹೊರಡಿಸಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 15- ಇಂದಿರಾನಗರ, 16- ನ್ಯೂ ತಿಪ್ಪಸಂದ್ರ ವಾರ್ಡ್ ಗಳ ಗಡಿಯನ್ನು ಮಾರ್ಪಡಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಯಲಹಂಕ ವಿಧಾನಸಭೆ ಕ್ಷೇತ್ರದ ವಾರ್ಡ್ 1 ರಾಜಾ ವೆಂಕಟಪ್ಪ ವಾರ್ಡ್ ಅನ್ನು ವಾರ್ಡ್ 3 ಚೌಡೇಶ್ವರಿ ವಾರ್ಡ್, ವಾರ್ಡ್ 2 ಆಕಾಶ್ ವಾರ್ಡ್ ಅನ್ನು ವಾರ್ಡ್ 2 ಏರೋ ಸಿಟಿ ವಾರ್ಡ್ ಹಾಗೂ ವಾರ್ಡ್ 3 ಯಲಹಂಕ ಓಲ್ಡ್ ಟೌನ್ ಅನ್ನು 
ವಾರ್ಡ್ 1 ರಾಜಾ ವೆಂಕಟಪ್ಪ ವಾರ್ಡ್ ಎಂದು ಬದಲಿಸಲಾಗಿದೆ. ಸರ್ವಜ್ಞ ನಗರ ವಿಧಾನಸಭೆ ಕ್ಷೇತ್ರದ ವಾರ್ಡ್ 31 ಕಲ್ಯ ನಗರ ವಾರ್ಡ್ ಅನ್ನಿ ವಾರ್ಡ್ 31 ಕಲ್ಯಾಣ ನಗರ ಎಂದು ಬದಲಿಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡ್ 3 ಕುಮಾರಸ್ವಾಮಿ ವಾರ್ಡ್ ಅನ್ನು ವಾರ್ಡ್ 3 ಯಾರಬ್ ನಗರ ಎಂದು ಬದಲಿಸಲಾಗಿದೆ. 56- ದೊರೆಸಾನಿಪಾಳ್ಯ, 60- ಬಿಳೇಕಹಳ್ಳಿ, 65- ಗಾರ್ವೆಬಾವಿ ಪಾಳ್ಯ, 66- ಸಿಂಗಸಂದ್ರ ವಾರ್ಡ್ ಗಳ ಗಡಿಯನ್ನು ಬದಲಾಯಿಸಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದ ವಾರ್ಡ್ 8- ಟಿ.ಸಿ. ಪಾಳ್ಯವನ್ನು ಆನಂದಪುರ, ವಾರ್ಡ್ 10- ಮೇಡಹಳ್ಳಿಯನ್ನು ಬಸವನಪುರ, ವಾರ್ಡ್ 11- ಬಸವನಪುರವನ್ನು ಕೃಷ್ಣನಗರ, ವಾರ್ಡ್ 12- ಚಿಕ್ಕ ದೇವಸಂದ್ರವನ್ನು ದೇವಸಂದ್ರ, ವಾರ್ಡ್ 13- ದೇವಸಂದ್ರವನ್ನು ರಾಜರಾಜೇಶ್ವರಿ ದೇವಸ್ಥಾನ ವಾರ್ಡ್ ಹಾಗೂ ಮಹದೇವಪುರ   
ವಿಧಾನಸಭೆ ಕ್ಷೇತ್ರದ ವಾರ್ಡ್ 49- ಶಿವನಸಮುದ್ರ ವಾರ್ಡ್ ಅನ್ನು ದೊಡ್ಡ ಕನ್ನೆಲ್ಲಿ ವಾರ್ಡ್ ಆಗಿ ಹೆಸರಿಸಲಾಗಿದೆ. 
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದ ವಾರ್ಡ್ 19- ಕೆಂಗೇರಿಯನ್ನು ಶಿವನಪಾಳ್ಯ, ವಾರ್ಡ್ 20- ಹೆಮ್ಮಿಗೆಪುರವನ್ನು ಕೆಂಗೇರಿ ಕೋಟೆ ವಾರ್ಡ್ ಹಾಗೂ ವಾರ್ಡ್ 21- ಮಲ್ಲಸಂದ್ರವನ್ನು ಕೆಂಗೇರಿಯಾಗಿ ಹೆಸರು
ಬದಲಿಸಿ ಅಧಿಸೂಚಿಸಲಾಗಿದೆ.


14 ವಾರ್ಡ್; ಹೆಸರು ಬದಲಾವಣೆ ಆಗಿರುವ ವಾರ್ಡ್ ಗಳು 
6 ವಾರ್ಡ್; ಗಡಿ ಬದಲಾವಣೆ ಆಗಿರುವ ವಾರ್ಡ್ ಗಳು 



ಬೆಂಗಳೂರು ಕೇಂದ್ರ ನಗರ ಪಾಲಿಕೆ; 63 ವಾರ್ಡ್‌

ವಿಧಾನಸಭೆ ಕ್ಷೇತ್ರ: ಚಾಮರಾಜಪೇಟೆ– 10 ವಾರ್ಡ್‌, ಚಿಕ್ಕಪೇಟೆ– 12 ವಾರ್ಡ್‌, ಸಿ.ವಿ. ರಾಮನ್‌ ನಗರ– 13 ವಾರ್ಡ್‌, ಗಾಂಧಿನಗರ– 10 ವಾರ್ಡ್‌, ಶಾಂತಿನಗರ– 10 ವಾರ್ಡ್‌, ಶಿವಾಜಿನಗರ– 8 ವಾರ್ಡ್‌.

 

ಬೆಂಗಳೂರು ಉತ್ತರ ನಗರ ಪಾಲಿಕೆ;72 ವಾರ್ಡ್‌

ವಿಧಾನಸಭೆ ಕ್ಷೇತ್ರ: ದಾಸರಹಳ್ಳಿ– 8 ವಾರ್ಡ್‌, ಪುಲಕೇಶಿನಗರ– 11 ವಾರ್ಡ್‌, ಬ್ಯಾಟರಾಯನಪುರ– 7 ವಾರ್ಡ್‌, ಯಲಹಂಕ– 14 ವಾರ್ಡ್‌, ರಾಜರಾಜೇಶ್ವರಿನಗರ– 5 ವಾರ್ಡ್‌, ಸರ್ವಜ್ಞನಗರ– 16 ವಾರ್ಡ್‌; ಹೆಬ್ಬಾಳ– 11 ವಾರ್ಡ್‌.

 

ಬೆಂಗಳೂರು ದಕ್ಷಿಣ ನಗರ ಪಾಲಿಕೆ; 72 ವಾರ್ಡ್‌‌

ವಿಧಾನ ಸಭೆ ಕ್ಷೇತ್ರ: ಆನೇಕಲ್‌– 1 ವಾರ್ಡ್‌, ಜಯನಗರ– 10 ವಾರ್ಡ್‌, ಪದ್ಮನಾಭನಗರ– 6 ವಾರ್ಡ್‌, ಬಿಟಿಎಂ ಲೇಔಟ್‌– 14 ವಾರ್ಡ್, ಬೆಂಗಳೂರು ದಕ್ಷಿಣ– 19 ವಾರ್ಡ್‌, ಬೊಮ್ಮನಹಳ್ಳಿ– 20 ವಾರ್ಡ್‌, ಮಹದೇವಪುರ– 1 ವಾರ್ಡ್‌, ಯಶವಂತಪುರ– 1 ವಾರ್ಡ್‌.

 

ಬೆಂಗಳೂರು ಪೂರ್ವ ನಗರ ಪಾಲಿಕೆ;50 ವಾರ್ಡ್‌

ವಿಧಾನಸಭೆ ಕ್ಷೇತ್ರ: ಕೆ.ಆರ್‌ ಪುರ– 27 ವಾರ್ಡ್‌, ಮಹದೇವಪುರ– 23 ವಾರ್ಡ್.

 

ಬೆಂಗಳೂರು ಪಶ್ಚಿಮ ನಗರ ಪಾಲಿಕೆ;112 ವಾರ್ಡ್‌

ವಿಧಾನಸಭೆ ಕ್ಷೇತ್ರ: ಗೋವಿಂದರಾಜನಗರ– 13 ವಾರ್ಡ್‌, ದಾಸರಹಳ್ಳಿ– 10 ವಾರ್ಡ್‌, ಪದ್ಮನಾಭನಗರ– 8 ವಾರ್ಡ್, ಬಸವನಗುಡಿ–10 ವಾರ್ಡ್, ಮಲ್ಲೇಶ್ವರ– 10 ವಾರ್ಡ್, ಮಹಾಲಕ್ಷ್ಮಿ ಲೇಔಟ್‌– 12 ವಾರ್ಡ್, ಯಶವಂಪುರ– 11 ವಾರ್ಡ್, ರಾಜರಾಜೇಶ್ವರಿನಗರ– 14 ವಾರ್ಡ್, ರಾಜಾಜಿನಗರ– 11 ವಾರ್ಡ್‌, ವಿಜಯನಗರ– 13 ವಾರ್ಡ್‌. 









No comments:

Post a Comment