Showing posts with label Karnataka Assembly. Show all posts
Showing posts with label Karnataka Assembly. Show all posts

Sunday, April 23, 2023

Karnataka Assembly Rewind-19: Mandate for B.S. Yeddyurappa, first BJP government in South

Karnataka Assembly Rewind-19: Mandate for B.S. Yeddyurappa, first BJP government in South


Kere Manjunath ಕೆರೆ ಮಂಜುನಾಥ್‌

For the first time in South India, the lotus of BJP blossomed. B.S. JDS's H.D. Kumaraswamy did not given power to Yeddyurappa and not kept his words. Taking full advantage of this, BJP, B.S. Yeddyurappa was portrayed as the next Chief Minister and got the mandate and came to power.
Even though the BJP did not get a clear majority, it succeeded in attracting independents to form the government for the first time in the state. As the BJP won 110 constituencies, three MLAs were required for a majority. The BJP rose to power by getting help from outsiders and making them ministers. B.S. Yeddyurappa assumed office as the Chief Minister on 30 May 2008.

The BJP government went ahead with 'Operation Kamala' to increase its strength. The other party wooed MLAs, empowered them and ensured that they would win the elections again. However, the BJP proved that it lacked experience in governance. Animosity arose among the legislators. The miners of Bellary first resisted the leader who brought him to power. The elders comforted him. However, The charge sheet was filed in the Lokayukta court in the denotify case against B.S. Yeddyurappa. Then inevitably B.S. Yeddyurappa had to resign. D.V.Sadananda Gowda, who is not even an MLA was made Chief Minister on 5 August 2011 on Yeddyurappa's recommendation. He was later elected to the Legislative Council.

D.V. Sadananda Gowda's rule lasted only 11 months. B.S.Yediyurappa's group opposed D.V. Sadanand Gowda stepped down from power. Again B.S. Yeddyurappa named the chief ministerial candidate and brought him to power. Jagdish Shettar of Hubballi-Dharwad Center became Chief Minister on 12th July 2012. Jagdish Shettar and K.G. Bopaiah was the speaker. Mallikarjuna Kharge and Siddaramaiah were the leaders of the opposition. After retirement of S.B. Patil, from November 2011 P. Omprakash was the secretary. A total of 178 days  proceedings were held in this thirteenth assembly. This is the lowest in the five-year assembly so far. The proceedings held at Suvarnasoudha in Belgaum is special for this period.

ವಿಧಾನಸಭೆ ಮೆಲುಕು-19: ಬಿ.ಎಸ್. ಯಡಿಯೂರಪ್ಪ ಅವರಿಗೆ ಜನಾದೇಶ, ದಕ್ಷಿಣದಲ್ಲಿ ಪ್ರಥಮ ಬಿಜೆಪಿ ಸರ್ಕಾರ

ಕೆರೆ ಮಂಜುನಾಥ್‌

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿಯ ಕಮಲ ಅರಳಿತು. ಬಿ.ಎಸ್. ಯಡಿಯೂರಪ್ಪ ಅವರಿಗೆ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ನೀಡಲಿಲ್ಲ, ಮಾತು ತಪ್ಪಿದ್ದರು. ಇದರ ಸಂಪೂರ್ಣ ಲಾಭ ಪಡೆದುಕೊಂಡ ಬಿಜೆಪಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿ ಜನಾದೇಶ ಪಡೆದು ಅಧಿಕಾರಕ್ಕೆ ಬಂತು.

ಬಿಜೆಪಿಗೆ ಸ್ಪಷ್ಟ ಬಹುಮತ ಬಾರದಿದ್ದರೂ ಪಕ್ಷೇತರರನ್ನು ಸೆಳೆಯುವಲ್ಲಿ ಯಶಸಾಧಿಸಿದ್ದರಿಂದ ಪ್ರಥಮ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿತು. ಬಿಜೆಪಿ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಬಹುಮತಕ್ಕೆ ಮೂರು ಶಾಸಕರ ಅಗತ್ಯವಿತ್ತು. ಪಕ್ಷೇತರರ ನೆರವು ಪಡೆದುಕೊಂಡು ಅವರನ್ನು ಸಚಿವರಾಗಿ ಮಾಡುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರಿತು. ಬಿ.ಎಸ್. ಯಡಿಯೂರಪ್ಪ ಅವರು 2008ರ ಮೇ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಬಿಜೆಪಿ ಸರ್ಕಾರ ತನ ಬಲವನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ‘ಆಪರೇಷನ್ ಕಮಲ’ಕ್ಕೆ ಮುಂದಾಯಿತು. ಬೇರೆ ಪಕ್ಷ ಶಾಸಕರನ್ನು ಸೆಳೆದು ಅವರಿಗೆ ಅಧಿಕಾರ ನೀಡಿ, ಮತ್ತೆ ಚುನಾವಣೆಯಲ್ಲಿ ಅವರನ್ನು ತನ್ನ ತೆಕ್ಕೆಯಲ್ಲಿ ಜಯಸಾಧಿಸುವಂತೆ ನೋಡಿಕೊಂಡಿತು. ಇಷ್ಟಾದರೂ ಆಡಳಿತ ನಡೆಸುವಲ್ಲಿ ಅನುಭವವಿಲ್ಲದ್ದನ್ನು ಬಿಜೆಪಿ ಸಾಬೀತುಪಡಿಸಿತು. ಶಾಸಕರಲ್ಲಿ ವೈಮನಸ್ಯ ಉಂಟಾಯಿತು. ಅಧಿಕಾರಕ್ಕೆ ತಂದ ನಾಯಕನನ್ನೇ ಇಳಿಸಲು ಬಳ್ಳಾರಿಯ ಗಣಿ ಧಣಿಗಳು, ಪ್ರಥಮವಾಗಿ ಅವರ ವಿರುದ್ಧ ಪ್ರತಿರೋಧ ತೋರಿದರು. ವರಿಷ್ಠರು ಅವರನ್ನು ಸಂತೈಸಿದ್ದರು. ಆದರೆ, ಬಿ.ಎಸ್. ಯಡಿಯೂರಪ್ಪ ವಿರುದ್ಧ ಡಿನೋಟಿಫೈ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಯಿತು. ಆಗ ಅನಿವಾರ್ಯವಾಗಿ ಬಿ.ಎಸ್. ಯಡಿಯೂರಪ್ಪ ರಾಜಿನಾಮೆ ನೀಡಬೇಕಾಯಿತು. ಶಾಸಕರೂ ಆಗಿಲ್ಲದ ಡಿ.ವಿ. ಸದಾನಂದಗೌಡ ಅವರನ್ನು ಯಡಿಯೂರಪ್ಪನವರ ಶಿಫಾರಸಿನ ಮೇರೆಗೆ 2011ರ ಆಗಸ್ಟ್ 5ರಂದು ಮುಖ್ಯಮಂತ್ರಿ ಮಾಡಲಾಯಿತು. ನಂತರ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಯಿತು.

ಡಿ.ವಿ. ಸದಾನಂದಗೌಡರ ಆಡಳಿತ ನಡೆದದ್ದೂ 11 ತಿಂಗಳಷ್ಟೇ. ಬಿ.ಎಸ್.ಯಡಿಯೂರಪ್ಪ ಬಳಗದ ವಿರೋಧ ಕಟ್ಟಿಕೊಂಡ ಡಿ.ವಿ. ಸದಾನಂದಗೌಡ ಅಧಿಕಾರದಿಂದ ಕೆಳಗಿಳಿದರು. ಮತ್ತೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಭ್ಯರ್ಥಿ ಹೆಸರಿಸಿ ಅವರನ್ನೇ ಅಧಿಕಾರಕ್ಕೆ ತಂದರು. ಹುಬ್ಬಳ್ಳಿ-ಧಾರವಾಡ ಕೇಂದ್ರದ ಜಗದೀಶ್ ಶೆಟ್ಟರ್ 2012ರ ಜುಲೈ 12ರಂದು ಮುಖ್ಯಮಂತ್ರಿಯಾದರು. ಜಗದೀಶ್ ಶೆಟ್ಟರ್ ಹಾಗೂ ಕೆ.ಜಿ. ಬೋಪಯ್ಯ ಸ್ಪೀಕರ್ ಆಗಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದರು. ಎಸ್.ಬಿ. ಪಾಟೀಲ್ ನಿವೃತ್ತಿಯಾದ ನಂತರ 2011ರ ನವೆಂಬರ್‌ನಿಂದ ಪಿ. ಓಂಪ್ರಕಾಶ್ ಕಾರ್ಯದರ್ಶಿ ಆಗಿದ್ದಾರೆ. ಈ ಹದಿಮೂರನೇ ವಿಧಾನಸಭೆಯಲ್ಲಿ ಒಟ್ಟಾರೆ 178 ದಿನ ಕಲಾಪ ನಡೆಯಿತು. ಇದು ಐದು ವರ್ಷ ಅವಧಿಯ ಈವರೆಗಿನ ವಿಧಾನಸಭೆಯಲ್ಲಿ ಅತ್ಯಂತ ಕಡಿಮೆ. ಬೆಳಗಾವಿಯ ಸುವರ್ಣಸೌಧದಲ್ಲಿ ಕಲಾಪ ನಡೆದದ್ದು ಈ ಅವಧಿಯ ವಿಶೇಷ.


 

Saturday, April 22, 2023

Karnataka Assembly Rewind- 18: Two Alliances, Three Chief Ministers: Very unstable Vidhan Sabha, parties who do not keep their word

Karnataka Assembly Rewind-18: Two Alliances, Three Chief Ministers: Very unstable Vidhan Sabha, parties who do not keep their word

Kere Manjunath ಕೆರೆ ಮಂಜುನಾಥ್‌

It was a time when the state politics was very unstable. Even in the 12th Legislative Assembly, even though no one had a clear majority, he ruled the state for forty months with the alliance. In three and a half years of this assembly, agreement, trust was broken and it led to animosity.

SM Krishna calculation failed and the Congress could only become the second largest party in the 2004 elections. BJP won 79 seats. The Congress, which won 65 seats, entered into an alliance with the JD(S), which won 58 seats. As a result, Dharmasingh of the Congress took office as the 22nd Chief Minister of the state on 28 May 2004. Everything was fine till January 2006. Later, there was a misunderstanding about the alliance in the JDS and the support given to the Congress was withdrawn. A 20-20 government was formed as a result of an agreement between the JD(S) and the BJP.

JDS's H.D. Kumaraswamy became the Chief Minister on February 3, 2006. BJP's B.S. Yeddyurappa became the Deputy Chief Minister. By the end of 20 months in power, the alliance had soured. An environment was created where JDS did not give power to BJP as per the agreement. Once again, the situation was unstable, and President's rule was imposed from October 8 to November 12, 2007. JDS's H.D. Kumaraswamy announced his support to the BJP. Believing this, B.S. Yeddyurappa assumed office as the Chief Minister on 12 November 2007. Within a week, when it was time to prove the vote of confidence in the assembly, the JDS again withdraw the support. B.S. Yeddyurappa resigned after seven days as the shortest serving Chief Minister. The Legislative Assembly was dissolved and President's rule came into effect on November 11, 2007.

T.N. Chaturvedi and Rameshwar Thakur were the governors during this period. In the first 21 months B.S. Yeddyurappa was the Leader of the Opposition, While Dharmasingh, who stepped down as Chief Minister, was the Leader of the Opposition in the government for the next 20 months. K. Abhayachandra Jain and D.N. Jivaraj was the chief whip. T. Rajanna was the secretary. A total of 180 days of proceedings were held in the 12th Legislative Assembly. Apart from Vidhana Soudha, the session was held for five days in Belgaum.

ವಿಧಾನಸಭೆ ಮೆಲುಕು-18: ಎರಡು ಮೈತ್ರಿ, ಮೂವರು ಮುಖ್ಯಮಂತ್ರಿ: ಅತ್ಯಂತ ಅತಂತ್ರ ವಿಧಾನಸಭೆ, ಮಾತು ಉಳಿಸಿಕೊಳ್ಳದ ಪಕ್ಷಗಳು

 ಕೆರೆ ಮಂಜುನಾಥ್‌

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದ ಕಾಲವಿದು. 12ನೇ ವಿಧಾನಸಭೆಯಲ್ಲೂ ಯಾರಿಗೂ ಸ್ಪಷ್ಪಬಹುಮತ ಇಲ್ಲದಿದ್ದರೂ ಮೈತ್ರಿಯೊಂದಿಗೆ ನಲವತ್ತು ತಿಂಗಳು ರಾಜ್ಯಭಾರ ಮಾಡಿದರು. ಈ ವಿಧಾನಸಭೆಯ ಮೂರೂವರೆ ವರ್ಷದಲ್ಲಿ ಒಪ್ಪಂದ, ವಿಶ್ವಾಸ ಒಡೆದುಹೋಗಿ ವೈಮನಸ್ಯಕ್ಕೆ ಕಾರಣವಾಯಿತು.

ಎಸ್.ಎಂ. ಕೃಷ್ಣ ಲೆಕ್ಕಾಚಾರ ವಿಫಲವಾಗಿ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಲು ಮಾತ್ರ ಸಾಧ್ಯವಾಯಿತು. ಬಿಜೆಪಿ 79 ಸ್ಥಾನ ಗಳಿಸಿತ್ತು. 65 ಸ್ಥಾನಗಳಿಸಿದ್ದ ಕಾಂಗ್ರೆಸ್ 58 ಸ್ಥಾನಗಳಿಸಿದ್ದ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು. ಇದರಿಂದ, ಕಾಂಗ್ರೆಸ್‌ನ ಧರ್ಮಸಿಂಗ್ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ 2004ರ ಮೇ 28ರಂದು ಅಧಿಕಾರ ಸ್ವೀಕರಿಸಿದರು. 2006ರ ಜನವರಿವರೆಗೆ ಎಲ್ಲವೂ ಸರಿ ಇತ್ತು. ನಂತರ ಜೆಡಿಎಸ್‌ನಲ್ಲಿ ಮೈತ್ರಿ ಬಗ್ಗೆ ಅಪಸ್ವರ ಎದ್ದು, ಕಾಂಗ್ರೆಸ್‌ಗೆ ನೀಡಿದ ಬೆಂಬಲ ವಾಪಸ್ ಪಡೆಯಿತು. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಪ್ಪಂದವಾಗಿ 20-20 ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ 2006ರ ಫೆಬ್ರವರಿ 3ರಂದು ಮುಖ್ಯಮಂತ್ರಿಯಾದರು. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. 20 ತಿಂಗಳ ಅಧಿಕಾರ ಮುಗಿಯುವ ಸಮಯದಲ್ಲಿ ಮೈತ್ರಿ ಹದಗೆಟ್ಟಿತು. ಒಪ್ಪಂದದಂತೆ ಬಿಜೆಪಿಗೆ ಜೆಡಿಎಸ್ ಅಧಿಕಾರ ನೀಡದಂತಹ ವಾತಾವರಣ ಸೃಷ್ಟಿಯಾಯಿತು. ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿ, 2007ರ ಅಕ್ಟೋಬರ್ 8ರಿಂದ ನವೆಂಬರ್ 12ರವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ಮಾತಿಗೆ ತಪ್ಪಿದಂತಾಗುತ್ತದೆ ಎಂದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಈ ಮಾತು ನಂಬಿದ ಬಿ.ಎಸ್. ಯಡಿಯೂರಪ್ಪ ಅವರು 2007ರ ನವೆಂಬರ್ 12ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಕಾಲ ಬಂದ ಒಂದೇ ವಾರದಲ್ಲಿ ಜೆಡಿಎಸ್ ಮತ್ತೆ ಕೈಕೊಟ್ಟಿತು. ಬಿ.ಎಸ್. ಯಡಿಯೂರಪ್ಪ ಅತ್ಯಂತ ಕನಿಷ್ಠ ಅವಧಿಯ ಮುಖ್ಯಮಂತ್ರಿಯಾಗಿ ಏಳು ದಿನಕ್ಕೇ ರಾಜಿನಾಮೆ ನೀಡಿದರು. ವಿಧಾನಸಭೆ ವಿಸರ್ಜನೆಯಾಗಿ 2007ರ ನವೆಂಬರ್ 11ರಿಂದ ರಾಷ್ಟ್ರಪತಿ ಆಡಳಿತ ಜಾರಿಯಾಯಿತು.

ಟಿ.ಎನ್. ಚತುರ್ವೇದಿ ಹಾಗೂ ರಾಮೇಶ್ವರ್ ಠಾಕೂರ್ ಈ ಅವಧಿಯಲ್ಲಿ ರಾಜ್ಯಪಾಲರಾಗಿದ್ದರು. ಪ್ರಥಮ 21 ತಿಂಗಳಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದರೆ, ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಧರ್ಮಸಿಂಗ್ ನಂತರದ 20 ತಿಂಗಳ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ಕೆ. ಅಭಯಚಂದ್ರ ಜೈನ್ ಹಾಗೂ ಡಿ.ಎನ್. ಜೀವರಾಜ್ ಮುಖ್ಯ ಸಚೇತಕರಾಗಿದ್ದರು. ಟಿ. ರಾಜಣ್ಣ ಕಾರ್ಯದರ್ಶಿಯಾಗಿದ್ದರು. 12ನೇ ವಿಧಾನಸಭೆಯಲ್ಲಿ ಒಟ್ಟು 180 ದಿನ ಕಲಾಪ ನಡೆಯಿತು. ವಿಧಾನಸೌಧದ ಹೊರತಾಗಿ ಬೆಳಗಾವಿಯಲ್ಲಿ ಐದು ದಿನ ಅಧಿವೇಶನ ನಡೆದಿದ್ದು ವಿಶೇಷ.


 

Friday, April 21, 2023

Karnataka Assembly Rewind- 17: 'Krishna-Panchajanya' resounded in the state- V.S. Rama Devi was the first woman governor

Karnataka Assembly Rewind- 17: 'Krishna-Panchajanya' resounded in the state- V.S. Rama Devi was the first woman governor

Kere Manjunath ಕೆರೆ ಮಂಜುನಾಥ್‌

In the state, Congress came to power with Panchajanya, which was sounded by S.M. Krishna. The Congress having found a strong leadership. Janata Parivar and Janata Dal split situation was used in a suitable way by congress. S.M. Krishna took over as the president of the Karnataka Pradesh Congress Committee, succeeded in bringing Congress to power in 1999.

The bifurcation of the Janata Dal and the crisis within them reached such a level that both the Janata Dal (Secular) and the Janata Dal (United) together won only 38 seats. BJP also took advantage of this and won 44 seats and became the opposition. Congress came to power by winning 132 seats. SM Krishna who had won from Maddur constituency, was sworn in as the 21st Chief Minister of the state on 11 October 1999.

SM Krishna brought about major changes in the power supply companies during his tenure as Chief Minister. Along with digitalization of land records land plan, many civic initiatives were implemented. A task force was formed on the concept of public-private partnership in the development of Bangalore. During this administration of Congress, Chief Minister S.M. Krishna had no resistance. To take advantage of this, the assembly was dissolved eight months earlier to get a new mandate.

V.S. Ramadevi served as the first woman Governor of the state from 2 December 1999 to 20 August 2002. Then T.N. Chaturvedi was the Governor. M.V. Venkatappa who had won by a Mulubagilu was the speaker. Jagdish Shettar from Hubballi Rural was the opposition leader. Raja Amareswara Naik and Appaji Nad Gowda were the chief whips during this period. Yakub Sharif and T. Rajanna was the secretary. The term of this eleventh assembly started on 11th October 1999 and ended with dissolution on 22nd July 1999. During this period, assembly proceedings were held for a total of 237 days. 

ವಿಧಾನಸಭೆ ಮೆಲುಕು-17: ರಾಜ್ಯದಲ್ಲಿ  ಮೊಳಗಿದ ‘ಕೃಷ್ಣ-ಪಾಂಚಜನ್ಯ’- ವಿ.ಎಸ್. ರಮಾದೇವಿ ಪ್ರಥಮ ಮಹಿಳಾ ರಾಜ್ಯಪಾಲರು

ಕೆರೆ ಮಂಜುನಾಥ್‌

ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಮೊಳಗಿಸಿದ ಪಾಂಚಜನ್ಯದಿಂದ ಕಾಂಗ್ರೆಸ್ ಅಧಿಕಾರದ ಗದ್ದುಗೆಗೇರಿತು. ಸದೃಢ ನಾಯಕತ್ವವನ್ನು ಕಂಡುಕೊಂಡ ಕಾಂಗ್ರೆಸ್, ಜನತಾಪರಿವಾರ ಹಾಗೂ ಜನತಾದಳದ ಹರಿದುಹಂಚಿ ಹೋದ ಪರಿಸ್ಥಿತಿಯನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಟ್ಟ ವಹಿಸಿಕೊಂಡ ಎಸ್.ಎಂ. ಕೃಷ್ಣ ಅವರು 1999ರಲ್ಲಿ ಕಾಂಗ್ರೆಸ್ ಅನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.

ಜನತಾದಳದ ಇಬ್ಭಾಗ ಹಾಗೂ ಅವರಲ್ಲಿನ ಬಿಕ್ಕಟ್ಟು ಎಷ್ಟು ಹೀನಾಯಸ್ಥಿತಿಗೆ ತಲುಪಿತೆಂದರೆ ಜನತಾದಳ (ಜಾತ್ಯತೀತ) ಹಾಗೂ ಜನತಾದಳ (ಸಂಯುಕ್ತ) ಎರಡೂ ಸೇರಿ 38 ಸ್ಥಾನಗಳಷ್ಟೇ ಪಡೆದವು. ಇದರ ಲಾಭವನ್ನು ಬಿಜೆಪಿಯೂ ಪಡೆದು 44 ಸ್ಥಾನಪಡೆದು ಪ್ರತಿಪಕ್ಷ ಸ್ಥಾನ ಅಲಂಕರಿಸಿತು. ಕಾಂಗ್ರೆಸ್ 132 ಸ್ಥಾನ ಗಳಿಸುವ ಮೂಲಕ ಅಧಿಕಾರಕ್ಕೇರಿತು. ಮದ್ದೂರು ಕ್ಷೇತ್ರದಿಂದ ಜಯಸಾಧಿಸಿದ್ದ ಎಸ್.ಎಂ. ಕೃಷ್ಣ ಅವರು 1999ರ ಅಕ್ಟೋಬರ್ 11ರಂದು ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದರು. ಭೂ ದಾಖಲೆಗಳ ಭೂಮಿ ಯೋಜನೆಯನ್ನು ಡಿಜಿಟಲೈಸೇಷನ್ ಮಾಡುವ ಜತೆಗೆ ಹಲವು ನಾಗರಿಕಸೇಹಿ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಬೆಂಗಳೂರಿನ ಅಭಿವೃದ್ಧಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪರಿಕಲ್ಪನೆಯಲ್ಲಿ ಒಂದು ಕಾರ್ಯಪಡೆಯನೇ ರಚಿಸಿದ್ದರು. ಕಾಂಗ್ರೆಸ್‌ನ ಈ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪ್ರತಿರೋಧವಿರಲಿಲ್ಲ. ಇದನ್ನು ಸದುಪಯೋಗಪಡಿಸಿಕೊಳ್ಳಲು ಎಂಟು ತಿಂಗಳ ಮುನ್ನವೇ ಹೊಸ ಜನಾದೇಶಪಡೆಯಲು ವಿಧಾನಸಭೆ ವಿಸರ್ಜಿಸಿದರು.

ವಿ.ಎಸ್. ರಮಾದೇವಿ ಅವರು ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರಾಗಿ 1999ರ ಡಿಸೆಂಬರ್ 2ರಿಂದ 2002ರ ಆಗಸ್ಟ್ 20ರವರೆಗೆ ಕಾರ್ಯನಿರ್ವಹಿಸಿದರು. ನಂತರ ಟಿ.ಎನ್. ಚತುರ್ವೇದಿ ರಾಜ್ಯಪಾಲರಾಗಿದ್ದರು. ಮುಳುಬಾಗಿಲಿನಿಂದ ಗೆದ್ದಿದ್ದ ಎಂ.ವಿ. ವೆಂಕಟಪ್ಪ ಅವರು ಸ್ಪೀಕರ್ ಆಗಿದ್ದರು. ಹುಬ್ಬಳ್ಳಿ ಗ್ರಾಮಾಂತರದ ಜಗದೀಶ್ ಶೆಟ್ಟರ್ ಪ್ರತಿಪಕ್ಷ ನಾಯಕರಾಗಿದ್ದರು. ರಾಜಾ ಅಮರೇಶ್ವರ ನಾಯಕ್, ಅಪ್ಪಾಜಿ ನಾಡಗೌಡ ಈ ಅವಧಿಯಲ್ಲಿ ಮುಖ್ಯ ಸಚೇತಕರಾಗದ್ದರು. ಯಾಕೂಬ್ ಷರೀಫ್ ಹಾಗೂ ಟಿ. ರಾಜಣ್ಣ ಕಾರ್ಯದರ್ಶಿಯಾಗಿದ್ದರು. ಈ ಹನ್ನೊಂದನೆ ವಿಧಾನಸಭೆ ಅವಧಿ 1999ರ ಅಕ್ಟೋಬರ್ 11ರಿಂದ ಆರಂಭಗೊಂಡು, 1999ರ ಜುಲೈ 22ರಂದು ವಿಸರ್ಜನೆಯಾಗುವುದರೊಂದಿಗೆ ಕೊನೆಗೊಂಡಿತು. ಈ ಅವಧಿಯಲ್ಲಿ ಒಟ್ಟು 237 ದಿನ ವಿಧಾನಸಭೆ ಕಲಾಪ ನಡೆದಿತ್ತು.


 

Karnataka Assembly Rewind- 16: Mandate for Janata Dal- Deve Gowda, JH Patel Chief Ministers, BS Yeddyurappa Leader of Opposition

Karnataka Assembly Rewind- 16: Mandate for Janata Dal- Deve Gowda, JH Patel Chief Ministers, BS Yeddyurappa Leader of Opposition

Kere Manjunath ಕೆರೆ ಮಂಜುನಾಥ್‌

The Congress had to suffer setbacks at the state and national levels due to Prime Minister Rajiv Gandhi's Bofors scam. Those who came out of the Janata Parivar formed the Janata Dal at the national level. Through this process, for the first time in the state, the Congress failed to win the assembly constituencies even as the opposition got the seat.

H.D.Deve Gowda who led the Janata Dal in the state had left his Holenarasipur constituency and contested in Ramanagara and won. Janata Dal came to power by winning 115 seats, H.D. Deve Gowda assumed office as the 19th Chief Minister of the state on 11 December 1994. Not even a year and a half had passed, on the call of Rashtriya Janata Dal, H.D. Deve Gowda moved into national politics and became the Prime Minister. Senior leader J.H. Patel had won from Channagiri constituency, became the Chief Minister on 31 May 1996. Siddaramaiah, who had won from Chamundeshwari constituency, became the Deputy Chief Minister.

J.H. Patel created seven new districts which had been lying dormant for a long time. He laid more emphasis on information technology and allowed foreign investment. He approved irrigation projects worth 4800 crores including Ghataprabha, Malaprabha, Vishvesvaraya canal modernization, Alamatti dam. A follower of Ramakrishna Hegde, J.H. Patel identified with Hegde's JDU when the Janata Dal split. Due to this confusion, Patel had recommended the dissolution of the assembly six months earlier.

The term of the Tenth Legislative Assembly began on 25th December 1994. Disbanded on 22 July 1999. Ramesh Kumar who had won from Srinivasapur was the speaker. B.S. Yeddyurappa was elected by BJP from Shikaripura, was the Leader of the Opposition. After December 1996, Congress's Mallikarjuna Kharge, who had won from Gurumatkal constituency came to this seat. Varade Gowda, who was elected from Channapatnam and Vasant Bangera, who won from Belthangadi, were the chief whips. NH Muttalageri, Yakub Sharif was the assembly secretary. A total of 235 days of proceedings were held in the tenth assembly.

ವಿಧಾನಸಭೆ ಮೆಲುಕು-16: ಜನತಾದಳಕ್ಕೆ ಜನಾದೇಶ- ದೇವೇಗೌಡ, ಪಟೇಲ್ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕ

ಕೆರೆ ಮಂಜುನಾಥ್‌

ಪ್ರಧಾನಿ ರಾಜೀವ್‌ಗಾಂಧಿಯವರ ಬೋಫೋರ್ಸ್ ಹಗರಣದಿಂದ ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ಜನತಾಪರಿವಾರದಿಂದ ಹೊರಬಂದವರು ಜನತಾದಳವನ್ನು ರಾಷ್ಟ್ರಮಟ್ಟದಲ್ಲಿ ಸ್ಥಾಪಿಸಿದರು. ಈ ಪ್ರಕ್ರಿಯೆಯಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಷ್ಟೂ ವಿಧಾನಸಭೆ ಕ್ಷೇತ್ರಗಳನ್ನು ಗೆಲ್ಲುವಲ್ಲಿ ವಿಫಲವಾಯಿತು.

ರಾಜ್ಯದಲ್ಲಿ ಜನತಾದಳವನ್ನು ಮುನ್ನಡೆಸಿದ್ದ ಎಚ್.ಡಿ. ದೇವೇಗೌಡ ತಮ್ಮ ಹೊಳೆನರಸೀಪುರ ಕ್ಷೇತ್ರ ಬಿಟ್ಟು ಹೊರಬಂದು ರಾಮನಗರದಲ್ಲಿ ಸ್ಪರ್ಧಿಸಿ ಜಯಿಸಿದ್ದರು. ಜನತಾದಳ 115 ಸ್ಥಾನ ಗಳಿಸುವ ಮೂಲಕ ಅಧಿಕಾರಕ್ಕೆ ಬಂದು, ಎಚ್.ಡಿ. ದೇವೇಗೌಡ ರಾಜ್ಯದ 19ನೇ ಮುಖ್ಯಮಂತ್ರಿಯಾಗಿ 1994ರ ಡಿಸೆಂಬರ್ 11ರಂದು ಅಧಿಕಾರ ಸ್ವೀಕರಿಸಿದರು. ಒಂದೂವರೆ ವರ್ಷವೂ ಕಳೆದಿರಲಿಲ್ಲ, ರಾಷ್ಟ್ರೀಯ ಜನತಾದಳದ ಕರೆ ಮೇರೆಗೆ ಎಚ್.ಡಿ. ದೇವೇಗೌಡ ರಾಷ್ಟ್ರಮಟ್ಟದ ರಾಜಕಾರಣಕ್ಕೆ ತೆರಳಿ ಪ್ರಧಾನಿಯಾದರು. ಚನ್ನಗಿರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಹಿರಿಯ ನಾಯಕ ಜೆ.ಎಚ್. ಪಟೇಲ್ ಅವರು 1996ರ ಮೇ 31ರಂದು ಮುಖ್ಯಮಂತ್ರಿಯಾದರು. ಚಾಮುಂಡೇಶ್ವರಿ ಕ್ಷೇತ್ರದಿಂದ ಜಯಿಸಿದ್ದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು.

ಜೆ.ಎಚ್. ಪಟೇಲ್ ಅವರು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಏಳು ಹೊಸ ಜಿಲ್ಲೆಗಳ ರಚನೆ ಮಾಡಿದರು. ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿ, ವಿದೇಶ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟರು. ಘಟಪ್ರಭ, ಮಲಪ್ರಭ, ವಿಶ್ವೇಶ್ವರಯ್ಯ ನಾಲೆ ಆಧುನೀಕರಣ, ಆಲಮಟ್ಟಿ ಅಣೆಕಟ್ಟು ಸೇರಿದಂತೆ 4800 ಕೋಟಿ ಮೌಲ್ಯದ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದ್ದರು. ರಾಮಕೃಷ್ಣ ಹೆಗಡೆಯವರ ಅನುಯಾಯಿಯಾಗಿದ್ದ ಜೆ.ಎಚ್. ಪಟೇಲ್ ಜನತಾದಳ ವಿಭಜನೆಯಾದಾಗ ಹೆಗಡೆಯವರ ಜೆಡಿಯುನಲ್ಲಿ ಗುರುತಿಸಿಕೊಂಡರು. ಈ ಗೊಂದಲದಿಂದ ಆರು ತಿಂಗಳಿಗೆ ಮುನ್ನ ವಿಧಾನಸಭೆ ವಿಸರ್ಜಿಸಲು ಪಟೇಲ್ ಶಿಫಾರಸು ಮಾಡಿದ್ದರು.

ಹತ್ತನೇ ವಿಧಾನಸಭೆಯ ಅವಧಿ 1994ರ ಡಿಸೆಂಬರ್ 25ರಂದು ಆರಂಭವಾಯಿತು. 1999ರ ಜುಲೈ 22ರಂದು ವಿಸರ್ಜನೆಯಾಯಿತು. ಶ್ರೀನಿವಾಸಪುರದಿಂದ ಗೆದ್ದಿದ್ದ ರಮೇಶ್‌ಕುಮಾರ್ ಸ್ಪೀಕರ್ ಆಗಿದ್ದರು. ಶಿಕಾರಿಪುರದಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದ ಬಿ.ಎಸ್. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದರು. 1996ರ ಡಿಸೆಂಬರ್ ನಂತರ ಗುರುಮಠಕಲ್ ಕ್ಷೇತ್ರದಿಂದ ಜಯಿಸಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಈ ಸ್ಥಾನಕ್ಕೆ ಬಂದರು. ಚನ್ನಪಟ್ಟಣದಿಂದ ಆಯ್ಕೆಯಾಗಿದ್ದ ವರದೇಗೌಡ, ಬೆಳ್ತಂಗಡಿಯಿಂದ ಜಯಿಸಿದ್ದ ವಸಂತ ಬಂಗೇರಾ ಮುಖ್ಯ ಸಚೇತಕರಾಗಿದ್ದರು. ಎನ್.ಎಚ್. ಮುತ್ತಲಗೇರಿ, ಯಾಕೂಬ್ ಷರೀಫ್ ವಿಧಾನಸಭೆ ಕಾರ್ಯದರ್ಶಿಯಾಗಿದ್ದರು. ಹತ್ತನೇ ವಿಧಾನಸಭೆಯಲ್ಲಿ ಒಟ್ಟು 235 ದಿನ ಕಲಾಪ ನಡೆಯಿತು.


 

Thursday, April 20, 2023

Karnataka Assembly Rewind- 15: Vidhan Sabha Meluku-15: Janata Party lost, record win for Congress

Karnataka Assembly Rewind- 15: Vidhan Sabha Meluku-15: Janata Party Split, record win for Congress


Kere Manjunath ಕೆರೆ ಮಂಜುನಾಥ್‌

The Janata Party itself, which was founded to oust the Congress party from power, broke into many pieces. It was a clear advantage for the Congress, which had been out of power for six years. In the elections held in 1989, the Congress won a record 178 seats.

Congress needed a 'mass leader' to reap the rewards of Janata Party's failure to govern. In that case no one succeeded in this direction. Then Virendra Patil was given the leadership of the state Congress. Virender Patil, who promised people transport and water to every village, succeeded in impressing them. On November 30, 1989, Virendra Patil assumed office as the Chief Minister for the second time.

Virendra Patil, who came to power when the economic situation of the state was in a very difficult situation, curbed the excise lobby and increased the duty from 2% to 20% and brought more revenue to the treasury. This caused a lot of animosity in his party. Furthermore, in October 1990 Virendra Patil suffered a stroke. The then Prime Minister Rajiv Gandhi mercilessly sacked Virendra Patil as Chief Minister. Then there was President's rule for seven days. Congress chosen the S. Bangarappa as the leader of the legislative party. Bangarappa assumed office as the Chief Minister on 17 October 1990.

Bangarappa became popular during his period through worship, asylum and world projects. However, many allegations came against him, including the classic computer scam. Then Bangarappa lost the confidence of Congress MLAs and resigned on November 19, 1992. Veerappamoily took office as Chief Minister. S. M.Krishna who was the speaker for the first three years, was the Deputy Chief Minister for the first time in the history of the state during the last two years of this term.

Thus, there were three Chief Ministers during the Ninth Legislative Assembly. Janata Dal D.B. Chandregowda, R.V. Deshpande were the leader of the opposition. V.S. Kaujalagi was the speaker. During this period, 251 days of proceedings were held. Bhanupratapsingh, Khurshid Alankhan were the governors. On September 20, 1994, the Ninth Legislative Assembly was dissolved.

ವಿಧಾನಸಭೆ ಮೆಲುಕು-15: ಜನತಾಪಕ್ಷ ಹೋಳು, ಕಾಂಗ್ರೆಸ್‌ಗೆ ದಾಖಲೆಯ ಗೆಲುವು

ಕೆರೆ ಮಂಜುನಾಥ್‌

ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲು ಸ್ಥಾಪನೆಯಾದ ಜನತಾ ಪಕ್ಷವೇ ಒಡೆದು ಹಲವು ಹೋಳಾಯಿತು. ಇದರ ಸ್ಪಷ್ಟ ಸದುಪಯೋಗವಾಗಿದ್ದು, ಆರು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಕಾಂಗ್ರೆಸ್‌ಗೆ. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಈವರೆಗೂ ದಾಖಲೆಯಾಗೇ ಉಳಿದಿರುವ 178 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.

ಜನತಾ ಪಕ್ಷದ ಆಡಳಿತ ವೈಫಲ್ಯದ ಪ್ರತಿಫಲ ಪಡೆಯಲು ಕಾಂಗ್ರೆಸ್‌ಗೆ ‘ಮಾಸ್ ಲೀಡರ್’ನ ಅಗತ್ಯವಿತ್ತು. ಆ ಸಂದರ್ಭದಲ್ಲಿ ಈ ದಿಕ್ಕಿಯಲ್ಲಿ ಯಾರೂ ಯಶಸಾಧಿಸಲಿಲ್ಲ. ಆಗ ವೀರೇಂದ್ರ ಪಾಟೀಲ್ ಅವರಿಗೆ ರಾಜ್ಯ ಕಾಂಗ್ರೆಸ್‌ನ ನೇತೃತ್ವ ವಹಿಸಲಾಯಿತು. ಪ್ರತಿ ಹಳ್ಳಿಗೂ ಸಾರಿಗೆ ಮತ್ತು ನೀರು ಎಂಬ ಭರವಸೆಗಳನ್ನು ಜನರ ಮುಂದಿಟ್ಟಿದ್ದ ವೀರೇಂದ್ರ ಪಾಟೀಲ್, ಅವರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರು. 1989ರ ನವೆಂಬರ್ 30ರಂದು ವೀರೇಂದ್ರ ಪಾಟೀಲ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿದ್ದಾಗ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲ್, ಅಬಕಾರಿ ಲಾಬಿಗೆ ಅಂಕುಶ ಹಾಕಿ, ಶೇ.2ರಷ್ಟಿದ್ದ ಸುಂಕವನ್ನು ಶೇ.20ಕ್ಕೆ ಏರಿಸಿ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಿದರು. ಇದು ಅವರ ಪಕ್ಷದಲ್ಲೇ ಸಾಕಷ್ಟು ವೈಮನಸ್ಯಕ್ಕೆ ಕಾರಣವಾಯಿತು. ಇದಲ್ಲದೆ, 1990ರ ಅಕ್ಟೋಬರ್‌ನಲ್ಲಿ ವೀರೇಂದ್ರ ಪಾಟೀಲ್ ಅವರಿಗೆ ಪಾರ್ಶ್ವವಾಯು ಬಡಿಯಿತು. ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಅನುಕಂಪರಹಿತವಾಗಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಿದರು. ಆಗ ಏಳು ದಿನ ರಾಷ್ಟ್ರಪತಿ ಆಡಳಿತವಿತ್ತು. ಕಾಂಗ್ರೆಸ್ ಎಸ್. ಬಂಗಾರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರನಾಗಿ ಆರಿಸಿತು. 1990ರ ಅಕ್ಟೋಬರ್ 17ರಂದು ಮುಖ್ಯಮಂತ್ರಿಯಾಗಿ ಬಂಗಾರಪ್ಪ ಅಧಿಕಾರ ವಹಿಸಿಕೊಂಡರು.

ಬಂಗಾರಪ್ಪ ತಮ್ಮ ಅವಧಿಯಲ್ಲಿ ಆರಾಧನ, ಆಶ್ರಯ ಮತ್ತು ವಿಶ್ವ  ಯೋಜನೆಗಳ ಮೂಲಕ ಜನಪ್ರಿಯರಾದರು. ಆದರೆ, ಕ್ಲಾಸಿಕ್ ಕಂಪ್ಯೂಟರ್ ಹಗರಣ ಸೇರಿದಂತೆ ಸಾಕಷ್ಟು ಆರೋಪಗಳು ಇವರ ಮೇಲೆ ಬಂದರು. ಆಗ ಬಂಗಾರಪ್ಪ ಕಾಂಗ್ರೆಸ್ ಶಾಸಕರ ವಿಶ್ವಾಸ ಕಳೆದುಕೊಂಡು, 1992ರ ನವೆಂಬರ್ 19ರಂದು ರಾಜಿನಾಮೆ ನೀಡಿದರು. ವೀರಪ್ಪಮೊಯಿಲಿ ಅಂದೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪ್ರಥಮ ಮೂರು ವರ್ಷ ಸ್ಪೀಕರ್ ಆಗಿದ್ದ ಎಸ್.ಎಂ. ಕೃಷ್ಣ ಈ ಅವಧಿಯ ಕೊನೆಯ ಎರಡು ವರ್ಷ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉಪ ಮುಖ್ಯಮಂತ್ರಿಯಾಗಿದ್ದರು.

ಹೀಗಾಗಿ ಒಂಬತ್ತನೇ ವಿಧಾನಸಭೆ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಯಾಗಿದ್ದರು. ಜನತಾದಳದ ಡಿ.ಬಿ. ಚಂದ್ರೇಗೌಡ, ಆರ್.ವಿ. ದೇಶಪಾಂಡೆ ಪ್ರತಿಪಕ್ಷ ನಾಯಕರಾಗಿದ್ದರು. ವಿ.ಎಸ್. ಕೌಜಲಗಿ ಸ್ಪೀಕರ್ ಆಗಿದ್ದರು. ಈ ಅವಧಿಯಲ್ಲಿ 251 ದಿನ ಕಲಾಪ ನಡೆಯಿತು. ಭಾನುಪ್ರತಾಪ್‌ಸಿಂಗ್, ಖುರ್ಷಿದ್ ಆಲಂಖಾನ್ ರಾಜ್ಯಪಾಲರಾಗಿದ್ದರು. 1994ರ ಸೆಪ್ಟಂಬರ್ 20ರಂದು ಒಂಬತ್ತನೇ ವಿಧಾನಸಭೆ ವಿಸರ್ಜನೆಯಾಯಿತು.


Wednesday, April 19, 2023

Karnataka Assembly Rewind-14: Janata party: Bommai goverment dissoved

Karnataka Assembly Rewind-14: Two Chief Ministers Janata party, Bommai goverment dissoved

Kere Manjunath ಕೆರೆ ಮಂಜುನಾಥ್‌

Although the Janata Party benefited from Ramakrishna Hegde's popularity and discontent with the Congress, it could not complete its term in power with a clear majority. Besides this period saw two Chief Ministers, the Eighth Legislative Assembly was also dissolved.

S.R.Bommai who had won from Hubli rural constituency took over as Chief Minister on 13 August 1988 after the resignation of Ramakrishna Hegde. S.R. Bommai's tenure was only eight months. Even then, a split in the Janata appeared. Due to this split in the Janata Party and a large number of MLAs raising their voice against the government, there was a problem of confidence vote. S.R. Bommai asked for time to prove his vote of confidence in the assembly. However, the then Governor Venkatasubbaiah did not allow this and on April 21, 1989 dismissed the state government and dissolved the assembly.

This action was taken by S.R. Bommai had questioned in the Supreme Court. There was a lot of hearing and discussion in the Supreme Court about Article 356 of the Constitution and the central government was restricted from directly imposing that article. Since this was later, Bommai's authority ended there. President's rule was in effect from 21 April 1989 to 30 November 1989.

S.Bangarappa who won from Congress from Soraba  from March 18, 1985 to June 11, 1986 and K.S.Nagaratnamma who had won from Gundlupet was the Leader of the Opposition from 29 January 1987 to 21 April 1989. K.S. Nagaratnammawho made a record as the first speaker,  also created a record as the first leader of opposition in the assembly. Both of these are records so far. During the eighth assembly session, D.B. Chandra Gowda and B.G. Bankar was the speaker. Rajavardhan was the chief whip. Singrigowda and M. Inasappa was the secretary. A total of 222 days of proceedings were held in the eighth term of the Legislative Assembly. (Janata)  

ವಿಧಾನಸಭೆ ಮೆಲುಕು-14: ನೇಗಿಲು ಹೊತ್ತ ರೈತನಡಿಯೂ ಇಬ್ಬರು ಮುಖ್ಯಮಂತ್ರಿ, ಬೊಮ್ಮಾಯಿ ಸರ್ಕಾರ ವಜಾ

ಕೆರೆ ಮಂಜುನಾಥ್‌

ರಾಮಕೃಷ್ಣ ಹೆಗಡೆಯವರ ಜನಪ್ರಿಯತೆ, ಕಾಂಗ್ರೆಸ್ ಮೇಲಿನ ಅಸಮಾಧಾನದ ಲಾಭ ಜನತಾಪಕ್ಷಕ್ಕೆ ದೊರೆತರೂ, ಆ ಸ್ಪಷ್ಟ ಬಹುಮತದಿಂದ ಅಧಿಕಾರದ ಅವಧಿ ಪೂರೈಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಅವಧಿ ಇಬ್ಬರು ಮುಖ್ಯಮಂತ್ರಿಗಳನ್ನು ಕಂಡಿತಲ್ಲದೆ, ಎಂಟನೇ ವಿಧಾನಸಭೆ ಕೂಡ ವಿಸರ್ಜನೆಯಾಯಿತು.

ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಜಯಿಸಿದ್ದ ಎಸ್.ಆರ್. ಬೊಮ್ಮಾಯಿ ಅವರು ರಾಮಕೃಷ್ಣ ಹೆಗಡೆ ಅವರ ರಾಜಿನಾಮೆ ನಂತರ 1988ರ ಆಗಸ್ಟ್ 13ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಎಸ್.ಆರ್. ಬೊಮ್ಮಾಯಿ ಅವರ ಅಧಿಕಾರ ಅವಧಿ ಎಂಟು ತಿಂಗಳಷ್ಟೇ ಪೂರೈಸಿತ್ತು. ಆ ಸಂದರ್ಭಕ್ಕಾಗಲೇ ಜನತಾದಳ ಒಡಕು ಕಾಣಿಸಿಕೊಂಡಿತು. ಜನತಾಪಕ್ಷದ ಈ ಒಡಕು ಹಾಗೂ ಅಧಿಕ ಸಂಖ್ಯೆಯಲ್ಲಿ ಶಾಸಕರು ಸರ್ಕಾರದ ವಿರುದ್ಧವಾಗಿ ದನಿ ಎತ್ತಿದ್ದರಿಂದ ವಿಶ್ವಾಸಮತದ ತೊಡಕು ಉಂಟಾಯಿತು. ಎಸ್.ಆರ್. ಬೊಮ್ಮಾಯಿ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಸಮಯಾವಕಾಶ ಕೇಳಿದರು. ಆದರೆ, ಅಂದಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರು ಇದಕ್ಕೆ ಅವಕಾಶ ಮಾಡಿಕೊಡದೆ, 1989ರ ಏಪ್ರಿಲ್ 21ರಂದು ರಾಜ್ಯ ಸರ್ಕಾರವನ್ನು ವಜಾಗೊಳಿಸಿ, ವಿಧಾನಸಭೆ ವಿಸರ್ಜಿಸಿದರು.

ಈ ಕ್ರಮವನ್ನು ಎಸ್.ಆರ್. ಬೊಮ್ಮಾಯಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸಂವಿಧಾನದ 356ನೇ ವಿಧಿ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಸಾಕಷ್ಟು ವಿಚಾರಣೆ, ಚರ್ಚೆ ನಡೆದು ಆ ವಿಧಿಯನ್ನು ಕೇಂದ್ರ ಸರ್ಕಾರ ನೇರವಾಗಿ ಹೇರುವುದಕ್ಕೆ ನಿರ್ಬಂಧ ವಿಧಿಸಲಾಯಿತು. ಇದು ತದನಂತರವಾದ್ದರಿಂದ ಬೊಮ್ಮಾಯಿ ಅಧಿಕಾರ ಅಲ್ಲಿಗೆ ಮುಗಿದುಹೋಯಿತು. 1989ರ ಏಪ್ರಿಲ್ 21ರಿಂದ 1989ರ ನವೆಂಬರ್ 30ರವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು.

ಕಾಂಗ್ರೆಸ್‌ನಿಂದ ಸೊರಬದಿಂದ ಗೆಲುವು ಸಾಧಿಸಿದ್ದ ಎಸ್. ಬಂಗಾರಪ್ಪ 1985ರ ಮಾರ್ಚ್ 18ರಿಂದ 1986ರ ಜೂನ್ 11ರವರೆಗೆ ಹಾಗೂ ಗುಂಡ್ಲುಪೇಟೆಯಿಂದ ಜಯಿಸಿದ್ದ ಕೆ.ಎಸ್. ನಾಗರತ್ನಮ್ಮ 1987ರ ಜನವರಿ 29ರಿಂದ 1989ರ ಏಪ್ರಿಲ್ 21ರವರೆಗೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದರು. ಪ್ರಥಮ ಸ್ಪೀಕರ್ ಆಗಿ ದಾಖಲೆ ನಿರ್ಮಿಸಿದ್ದ ಕೆ.ಎಸ್. ನಾಗರತ್ನಮ್ಮ, ವಿಧಾನಸಭೆಯ ಪ್ರಥಮ ಪ್ರತಿಪಕ್ಷನಾಯಕಿಯೂ ಆಗಿ ದಾಖಲೆ ನಿರ್ಮಿಸಿದರು. ಈ ಎರಡೂ ಈವರೆಗೂ ದಾಖಲೆಯಾಗಿವೆ. ಎಂಟನೇ ವಿಧಾನಸಭೆ ಅವಧಿಯಲ್ಲಿ ಡಿ.ಬಿ. ಚಂದ್ರೇಗೌಡ ಹಾಗೂ ಬಿ.ಜಿ. ಬಣಕಾರ್ ಅವರು ಸ್ಪೀಕರ್ ಆಗಿದ್ದರು. ರಾಜವರ್ಧನ್ ಅವರು ಮುಖ್ಯ ಸಚೇತಕರಾಗಿದ್ದರು. ಸಿಂಗ್ರಿಗೌಡ ಹಾಗೂ ಎಂ. ಇನಾಸಪ್ಪ ಕಾರ್ಯದರ್ಶಿಯಾಗಿದ್ದರು. ಎಂಟನೇ ಅವಧಿಯ ವಿಧಾನಸಭೆಯಲ್ಲಿ ಒಟ್ಟು 222 ದಿನ ಕಲಾಪ ನಡೆಯಿತು.


 

Karnataka Assembly Rewind-13: Ramakrishna Hegde is the most popular Chief Minister

Karnataka Assembly Rewind-13: Ramakrishna Hegde is the most popular Chief Minister

Kere Manjunath ಕೆರೆ ಮಂಜುನಾಥ್‌

Ramakrishna Hegde, who was a popular Chief Minister, was rewarded for his thinking and clear stand. For the first time the people of the state gave a clear majority to the plowman. In order to win this vote of confidence, the seventh assembly was dissolved within three years. In the elections held in March 1985, the Janata Party won a clear majority by winning 139 seats. Ramakrishna Hegde assumed office as Chief Minister for the second time on March 8.

When Ramakrishna Hegde was the Chief Minister, the administration got a new charisma. New processes were also implemented in administrative reform for the people to get emphasis on many popular projects. State rights were positively established in the federal system. Besides giving more power to the local bodies, it also gave them responsibility. Karnataka was the first to legislate on panchayat raj, giving financial and administrative powers to local bodies in third-tier cities. Legislation establishing a Lokayukta body to eradicate corruption in administration was introduced during this period. Also, a Kannada Monitoring Committee was formed for the implementation of Kannada in the administration and its chairman was given cabinet rank.

Due to the efficient administration of Chief Minister Ramakrishna Hegde, he got great recognition and popularity. But when the Congress alleged that his own family was involved in transfer corruption, it was referred to the Lokayukta for investigation. Ramakrishna Hegde resigned as Chief Minister in 1986 when the High Court indicted the government over the management of the Arak bottling contract.

After three days, when everyone calmed down, he assumed office as Chief Minister for the third time on February 16. However, in August 1988, the case of telephone tapping of prominent politicians engulfed the entire state. Ramakrishna Hegde, who was responsible for this, resigned as Chief Minister on August 10. Then S.R. Bommai assumed power as the Chief Minister of the state. 

ವಿಧಾನಸಭೆ ಮೆಲುಕು-13: ರಾಮಕೃಷ್ಣ ಹೆಗಡೆ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ, ದೂರವಾಣಿ ಕದ್ದಾಲಿಕೆ - ರಾಜೀನಾಮೆ

ಕೆರೆ ಮಂಜುನಾಥ್‌

ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಆಲೋಚನೆ ಹಾಗೂ ಸ್ಪಷ್ಟ ನಿಲುವು ಪ್ರತಿಫಲ ನೀಡಿತ್ತು. ನೇಗಿಲು ಹೊತ್ತ ರೈತನಿಗೆ ರಾಜ್ಯದ ಜನತೆ ಪ್ರಥಮ ಬಾರಿಗೆ ಸ್ಪಷ್ಟ ಬಹುಮತ ನೀಡಿದ್ದರು. ಈ ವಿಶ್ವಾಸಮತ ಗಳಿಸಲೆಂದೇ ಏಳನೇ ವಿಧಾನಸಭೆಯಲ್ಲಿ ಮೂರು ವರ್ಷದೊಳಗೆ ವಿಸರ್ಜನೆ ಮಾಡಲಾಗಿತ್ತು. 1985ರ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಜನತಾಪಕ್ಷ 139 ಸ್ಥಾನಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿತ್ತು. ರಾಮಕೃಷ್ಣ ಹೆಗಡೆ ಮಾರ್ಚ್ 8ರಂದು ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದರು.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆಡಳಿತಕ್ಕೆ ಒಂದು ಹೊಸ ವರ್ಚಸ್ಸು ಸಿಕ್ಕಿತ್ತು. ಹಲವು ಜನಪರ ಯೋಜನೆಗಳಿಗೆ ಒತ್ತು ಸಿಗುವ ಜನತೆಗೆ, ಆಡಳಿತ ಸುಧಾರಣೆಯಲ್ಲಿ ಹೊಸ ಪ್ರಕ್ರಿಯೆಗಳೂ ಜಾರಿಯಾದವು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಕ್ಕುಗಳನ್ನು ಸಕಾರಾತ್ಮಕವಾಗಿ ಸ್ಥಾಪಿಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ನೀಡುವ ಜತೆಗೆ ಅವರಿಗೆ ಜವಾಬ್ದಾರಿ ನೀಡುವ ಕಾರ್ಯವೂ ಆಯಿತು. ಪಂಚಾಯತ್ ರಾಜ್ ಬಗ್ಗೆ ಶಾಸನ ರಚಿಸುವಲ್ಲಿ ಕರ್ನಾಟಕ ಪ್ರಥಮವಾಗಿ, ಮೂರನೇ ಸ್ತರದ ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಹಾಗೂ ಆಡಳಿತಾತ್ಮಕ ಶಕ್ತಿಯನ್ನು ನೀಡಲಾಗಿತ್ತು. ಆಡಳಿತದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಸಂಸ್ಥೆ ಸ್ಥಾಪಿಸುವ ಶಾಸನವನ್ನು ಈ ಅವಧಿಯಲ್ಲಿ ಪರಿಚಯಿಸಲಾಗಿತ್ತು. ಅಲ್ಲದೆ, ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಕನ್ನಡ ನಿಗಾ ಸಮಿತಿ ರಚಿಸಿ, ಅದರ ಅಧ್ಯಕ್ಷರಿಗೆ ಕ್ಯಾಬಿನೆಟ್ ರ್‍ಯಾಂಕ್ ನೀಡಲಾಗಿತ್ತು.

ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದಕ್ಷ ಆಡಳಿತದಿಂದ ಅವರಿಗೆ ಅತ್ಯದ್ಭುತ ಜನಮನ್ನಣೆ ಹಾಗೂ ಜನಪ್ರಿಯತೆ ಲಭ್ಯವಾಗಿತ್ತು. ಆದರೆ ಅವರದೇ ಕುಟುಂಬ ವರ್ಗಾವಣೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಕಾಂಗ್ರೆಸ್ ಆಪಾದಿಸಿದಾಗ ಅದನ್ನು ಲೋಕಾಯುಕ್ತ ತನಿಖೆಗೆ ನೀಡಿದ್ದರು. 1986ರಲ್ಲಿ ಅರಾಕ್ ಬಾಟ್ಲಿಂಗ್ ಗುತ್ತಿಗೆ ನಿರ್ವಹಣೆ ಬಗ್ಗೆ ಸರ್ಕಾರದ ಮೇಲೆ ಹೈಕೋರ್ಟ್ ದೋಷಾರೋಪಣೆ ಮಾಡಿದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಮೂರು ದಿನದ ನಂತರ ಎಲ್ಲರೂ ಸಮಾಧಾನಪಡಿಸಿದಾಗ ಮತ್ತೆ ಫೆಬ್ರವರಿ 16ರಂದು ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ಆದರೆ, 1988ರ ಆಗಸ್ಟ್‌ನಲ್ಲಿ ಪ್ರಮುಖ ರಾಜಕಾರಣಿಗಳ ದೂರವಾಣಿ ಕದ್ದಾಲಿಕೆ ಪ್ರಕರಣ ಇಡೀ ರಾಜ್ಯವನ್ನು ಆವರಿಸಿತು. ಇದರ ನೈತಿಕ ಜವಾಬ್ದಾರಿ ಹೊತ್ತ ರಾಮಕೃಷ್ಣ ಹೆಗಡೆ ಆಗಸ್ಟ್ 10ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆಗ ಎಸ್.ಆರ್. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.


 

 

Tuesday, April 18, 2023

Karnataka Assembly Rewind- 12: First Non-Congress Chief Minister Ramakrishna Hegde

Karnataka Assembly Rewind- 12:  First Non-Congress Chief Minister Ramakrishna Hegde


Kere Manjunath ಕೆರೆ ಮಂಜುನಾಥ್‌

For the first time after independence, a non-Congress government came to power in the state. Apart from the first five-year period, the Congress government was in the state for 31 years. Janata Party and Devaraj Arasu Congress all came together and for the first time Congress lost the election. The major reason for the defeat in the state was the Congress government's strong preference for the pro-Kannada Gokak movement.

In the elections held on May 1, 1983, the Janata Party won 95 seats out of 224 constituencies. Congress got 82 seats. Thus, BJP, Left parties and 16 non-party MLAs joined hands with Janata Paksha. Ramakrishna Hegade assumed power as the first non-Congress chief minister, a man wanted by both in the rivalry between Okkaligas and Lingayats. The seventh Legislative Assembly came into existence on 10 March 1983.

In the 1984 Lok Sabha elections, Janata Party won only 4 seats out of 28 constituencies in the state. This led to a backlash and Chief Minister Ramakrishna Hegde, who felt that he had no moral right to be in power, decided to seek a new mandate. He appealed to the governor to dissolve the assembly. Thus, on 2 January 1985, the Seventh Legislative Assembly was dissolved. The non-Congress government came to power but did not complete its three-year term. The reason for this is Janata Paksha's decision to get a new mandate with a clear majority.

D.B.Chandra Gowda who had won from Tirthahalli in the seventh term of the Legislative Assembly was the speaker. Veerappa Moily of Indira Congress, which had won from Karkala, was the leader of the opposition. Bapu Gowda Darshanapura and K.G. Maheshwarappa was the chief whip during this period. K.S. Singrigowda was also the assembly secretary during this period. A total of 104 days were held in the two-year assembly. After Umashankar Dixit, Govinda Narayan and Ashok Nath Banerjee were the governors.  

ವಿಧಾನಸಭೆ ಮೆಲುಕು-12: ಪ್ರಥಮ ಕಾಂಗ್ರೆಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ

ಕೆರೆ ಮಂಜುನಾಥ್‌

ಸ್ವಾತಂತ್ರ್ಯಾನಂತರ ಪ್ರಥಮ ಬಾರಿಗೆ ಕಾಂಗ್ರೆಸೇತರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಪ್ರಥಮ ಐದು ವರ್ಷದ ಅವಧಿಯನ್ನು ಹೊರತುಪಡಿಸಿ ನಂತರ 31 ವರ್ಷ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿತ್ತು. ಜನತಾಪಕ್ಷ, ದೇವರಾಜ್ ಅರಸು ಕಾಂಗ್ರೆಸ್ ಎಲ್ಲರೂ ಒಟ್ಟುಗೂಡಿದ್ದರಿಂದ ಪ್ರಥಮ ಬಾರಿಗೆ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುವಂತಾಯಿತು. ಕನ್ನಡಪರವಾದ ಗೋಕಾಕ್ ಚಳವಳಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒಲವು ತೋರದ್ದು ರಾಜ್ಯದಲ್ಲಿ ಸೋಲು ಅನುಭವಿಸಲು ಪ್ರಮುಖ ಕಾರಣವಾಯಿತು.

1983ರ ಮೇ 1ರಂದು ನಡೆದ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ 95 ಸ್ಥಾನಗಳಿಸಿದ ಜನತಾಪಕ್ಷ ಪ್ರಥಮ ಸ್ಥಾನಪಡೆಯಿತು. ಕಾಂಗ್ರೆಸ್ 82 ಸ್ಥಾನಕ್ಕಿಳಿಯಿತು. ಹೀಗಾಗಿ, ಜನತಾಪಕ್ಷದೊಂದಿಗೆ ಬಿಜೆಪಿ, ಎಡಪಕ್ಷಗಳು ಹಾಗೂ 16 ಪಕ್ಷೇತರ ಶಾಸಕರು ಕೈಜೋಡಿಸಿದರು. ಒಕ್ಕಲಿಗ ಹಾಗೂ ಲಿಂಗಾಯತರ ನಡುವಿನ ಪೈಪೋಟಿ-ಗೊಂದಲದಲ್ಲಿ ಇಬ್ಬರಿಗೂ ಬೇಕಾದ ವ್ಯಕ್ತಿಯಾಗಿ, ಕಾಂಗ್ರೆಸೇತರ ಪ್ರಥಮ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಅಧಿಕಾರ ಸ್ವೀಕರಿಸಿದರು. ಏಳನೇ ವಿಧಾನಸಭೆ 1983ರ ಮಾರ್ಚ್ 10ರಂದು ಅಸ್ತಿತ್ವಕ್ಕೆ ಬಂದಿತ್ತು.

1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಜನತಾಪಕ್ಷ ಕೇವಲ 4 ಸ್ಥಾನಗಳನು ಮಾತ್ರ ಗೆದ್ದುಕೊಂಡಿತು. ಇದರಿಂದ ಹಿನ್ನಡೆ ಆಯಿತು ಹಾಗೂ ಅಧಿಕಾರದಲ್ಲಿರಲು ನೈತಿಕ ಹಕ್ಕಿರುವುದಿಲ್ಲ ಎಂದು ಭಾವಿಸಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ಹೊಸದಾಗಿ ಜನಾದೇಶ ಪಡೆಯಲು ನಿರ್ಧರಿಸಿದರು. ವಿಧಾನಸಭೆಯನ್ನು ವಿಸರ್ಜಿಸಲು ರಾಜ್ಯಪಾಲರಿಗೆ ಮನವಿ ಮಾಡಿಕೊಂಡರು. ಹೀಗಾಗಿ 1985ರ ಜನವರಿ 2ರಂದು ಏಳನೇ ವಿಧಾನಸಭೆ ವಿಸರ್ಜನೆಯಾಯಿತು. ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಮೂರು ವರ್ಷದ ಅವಧಿಯನ್ನೂ ಪೂರೈಸಲಿಲ್ಲ. ಇದಕ್ಕೆ ಕಾರಣ, ಹೊಸ ಜನಾದೇಶವನ್ನು ಸ್ಪಷ್ಟ ಬಹುಮತದೊಂದಿಗೆ ಪಡೆಯಬೇಕು ಎಂಬ ಜನತಾಪಕ್ಷದ ನಿರ್ಧಾರ.

ಏಳನೇ ಅವಧಿಯ ವಿಧಾನಸಭೆಯಲ್ಲಿ ತೀರ್ಥಹಳ್ಳಿಯಿಂದ ಗೆದ್ದಿದ್ದ ಡಿ.ಬಿ. ಚಂದ್ರೇಗೌಡ ಸ್ಪೀಕರ್ ಸ್ಥಾನಕ್ಕೇರಿದ್ದರು. ಕಾರ್ಕಳದಿಂದ ಗೆಲುವು ಸಾಧಿಸಿದ್ದ ಇಂದಿರಾ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ಪ್ರತಿಪಕ್ಷ ನಾಯಕರಾಗಿದ್ದರು. ಬಾಪುಗೌಡ ದರ್ಶನಾಪುರ ಹಾಗೂ ಕೆ.ಜಿ. ಮಹೇಶ್ವರಪ್ಪ ಅವರು ಈ ಅವಧಿಯಲ್ಲಿ ಮುಖ್ಯ ಸಚೇತಕರಾಗಿದ್ದರು. ಕೆ.ಎಸ್. ಸಿಂಗ್ರಿಗೌಡ ಈ ಅವಧಿಯಲ್ಲೂ ವಿಧಾನಸಭೆ ಕಾರ್ಯದರ್ಶಿಯಾಗಿದ್ದರು. ಎರಡು ವರ್ಷದ ವಿಧಾನಸಭೆಯಲ್ಲಿ ಒಟ್ಟಾರೆ 104 ದಿನ ಕಲಾಪ ನಡೆಯಿತು. ಉಮಾಶಂಕರ್ ದೀಕ್ಷಿತ್ ನಂತರ ಗೋವಿಂದನಾರಾಯಣ ಹಾಗೂ ಅಶೋಕ್ ನಾಥ್ ಬ್ಯಾನರ್ಜಿ ರಾಜ್ಯಪಾಲರಾಗಿದ್ದರು.


Monday, April 17, 2023

Karnataka Assembly Rewind- 11: Aras- Leader of Opposition

Karnataka Assembly Rewind- 11: Aras- Leader of Opposition, Gundurao CM as Chief Minister

Kere Manjunath ಕೆರೆ ಮಂಜುನಾಥ್‌

The Janata Party was a strong rival to Indira's Congress in the post-Emergency elections. Although it had a huge impact at the national level, the Indira Congress led by Devaraj Aras could not see defeat in the state. In 1978, Indira's Congress won 149 seats in the Assembly elections, which were expanded to 224 constituencies, and Devaraj Aras became the Chief Minister for the second time. Aras assumed power on 28 February 1978.

Janata Party won 59 seats and became the opposition. S.R.Bommai who had won from Hubli Rural Constituency became the leader of the opposition. He stepped down from this position on 17th July 1979. Because, due to the dispute between Devaraj Aras and Indira Gandhi, Aras was Indira's opponent. Some of those who won from Indira Congress on that occasion identified with Arasu. Janata Party  supported his government. With this support Arasu continued as Chief Minister. R.Gundurao had won in Somwarpet in Indira Congress became the Leader of the Opposition on 17 December 1979.

In the 1980 Lok Sabha elections, Indira Congress and Arasu Congress contested separately. The ruling Congress did not win a single seat. Indira's Congress won 27 out of 28 seats. Then Devaraja Aras stepped down as Chief Minister. R.Gundurao of Indira Congress became the Chief Minister on 12 January 1980. Devaraj Aras became the Leader of Opposition. The Gundurao regime was portrayed as a government favored by Indira Gandhi. Corruption of some ministers, Gokak movement, Naragunda, Nalagunda farmers' movements became a thorn in the side of the Gundurao government.

A. Lakshmeesagar of Janata Paksha was the Leader of Opposition during the final period. K.H.Ranganath who won from Hiriyur Constituency was the speaker. During the Sixth Legislative Assembly which was dissolved on June 8, 1983, T. Venkataswamy, M. Subbarao and K.S. Singrigowda worked as secretary. D.B. After Kalmankar became the First Whip (Chief Whip) in 1975, Manikarao Patil, B. Bhaskar Shetty was the whip.  

ವಿಧಾನಸಭೆ ಮೆಲುಕು-11: ಮುಖ್ಯಮಂತ್ರಿ- ಪ್ರತಿಪಕ್ಷ ನಾಯಕರಾಗಿ ಅರಸ್, ಗುಂಡೂರಾವ್ ಸಿಎಂ

ಕೆರೆ ಮಂಜುನಾಥ್‌

ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು ಜನತಾ ಪಕ್ಷ. ರಾಷ್ಟ್ರಮಟ್ಟದಲ್ಲಿ ಹೆಚ್ಚು ಪರಿಣಾಮ ಬೀರಿದರೂ, ರಾಜ್ಯದಲ್ಲಿ ದೇವರಾಜ್ ಅರಸ್ ನೇತೃತ್ವದ ಇಂದಿರಾ ಕಾಂಗ್ರೆಸ್‌ಗೆ ಸೋಲು ಕಾಣಿಸಲು ಸಾಧ್ಯವಾಗಲಿಲ್ಲ. 1978ರಲ್ಲಿ 224 ಕ್ಷೇತ್ರಗಳಿಗೆ ವಿಸ್ತರಣೆಯಾದ ವಿಧಾನಸಭೆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ 149 ಸ್ಥಾನ ಪಡೆದು, ದೇವರಾಜ್ ಅರಸ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. 1978ರ ಫೆಬ್ರವರಿ 28ರಂದು ಅರಸ್ ಅಧಿಕಾರ ಸ್ವೀಕರಿಸಿದರು.

ಜನತಾ ಪಕ್ಷ 59 ಸ್ಥಾನ ಗಳಿಸಿ ಪ್ರತಿಪಕ್ಷ ಸ್ಥಾನ ಅಲಂಕರಿಸಿತು. ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿದ್ದ ಎಸ್.ಆರ್. ಬೊಮ್ಮಾಯಿ ಪ್ರತಿಪಕ್ಷ ನಾಯಕರಾದರು. 1979ರ ಜುಲೈ 17ಕ್ಕೆ ಇವರು ಈ ಸ್ಥಾನದಿಂದ ಇಳಿದರು. ಏಕೆಂದರೆ, ದೇವರಾಜ್ ಅರಸ್ ಹಾಗೂ ಇಂದಿರಾಗಾಂಧಿ ನಡುವೆ ವಿವಾದದಿಂದ ಅರಸ್ ಅವರು ಇಂದಿರಾ ಎದುರಾಳಿಯಾಗಿದ್ದರು. ಆ ಸಂದರ್ಭದಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಗೆದ್ದವರಲ್ಲಿ ಕೆಲವರು ಅರಸು ಅವರೊಂದಿಗೆ ಗುರುತಿಸಿಕೊಂಡರು. ಜನತಾ ಪಕ್ಷ ಅರಸು ಅವರಿಗೆ ಬೆಂಬಲ ನೀಡಿತು. ಅವರ ಬೆಂಬಲದಿಂದ ಅರಸು ಮುಖ್ಯಮಂತ್ರಿಯಾಗಿ ಮುಂದುವರಿದರು. ಇಂದಿರಾ ಕಾಂಗ್ರೆಸ್‌ನಲ್ಲಿದ್ದ ಸೋಮವಾರಪೇಟೆಯಲ್ಲಿ ಜಯಿಸಿದ್ದ ಆರ್. ಗುಂಡೂರಾವ್ 1979ರ ಡಿಸೆಂಬರ್ 17ರಂದು ಪ್ರತಿಪಕ್ಷ ನಾಯಕರಾದರು.

1980ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಹಾಗೂ ಅರಸು ಕಾಂಗ್ರೆಸ್ ಎಂದು ಪ್ರತ್ಯೇಕವಾಗಿ ಅಭ್ಯರ್ಥಿಗಳು ಕಣಕ್ಕಿಳಿದರು. ಅರಸು ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಇಂದಿರಾ ಕಾಂಗ್ರೆಸ್ 28ರಲ್ಲಿ 27 ಸ್ಥಾನ ಗೆದ್ದುಕೊಂಡಿತು. ಆಗ ದೇವರಾಜ ಅರಸ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಇಂದಿರಾ ಕಾಂಗ್ರೆಸ್‌ನ ಆರ್. ಗುಂಡೂರಾವ್ 1980ರ ಜನವರಿ 12ರಂದು ಮುಖ್ಯಮಂತ್ರಿಯಾದರು. ದೇವರಾಜ್ ಅರಸ್ ಪ್ರತಿಪಕ್ಷ ನಾಯಕ ಸ್ಥಾನ ಅಲಂಕರಿಸಿದರು. ಗುಂಡೂರಾವ್ ಆಡಳಿತ ಇಂದಿರಾಗಾಂಧಿಯವರ ಕೃಪಾಪೋಷಿತ ಸರ್ಕಾರ ಎಂದೇ ಬಿಂಬಿತವಾಗಿತ್ತು. ಕೆಲವು ಸಚಿವರ ಭ್ರಷ್ಟಾಚಾರ, ಗೋಕಾಕ್ ಚಳವಳಿ, ನರಗುಂದ, ನವಲಗುಂದ ರೈತರ ಚಳವಳಿಗಳು ಗುಂಡೂರಾವ್ ಸರ್ಕಾರಕ್ಕೆ ಕಂಟಕವಾದವು.

ಅವಧಿಯ ಅಂತಿಮ ಸಮಯದಲ್ಲಿ ಜನತಾಪಕ್ಷದ ಎ.ಲಕ್ಷ್ಮೀಸಾಗರ್ ಪ್ರತಿಪಕ್ಷ ನಾಯಕರಾಗಿದ್ದರು. ಹಿರಿಯೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕೆ.ಎಚ್. ರಂಗನಾಥ್ ಸ್ಪೀಕರ್ ಆಗಿದ್ದರು. 1983ರ ಜೂನ್ 8ರಂದು ವಿಸರ್ಜನೆಯಾದ ಆರನೇ ವಿಧಾನಸಭೆ ಅವಧಿಯಲ್ಲಿ ಟಿ. ವೆಂಕಟಸ್ವಾಮಿ, ಎಂ. ಸುಬ್ಬರಾವ್ ಹಾಗೂ ಕೆ.ಎಸ್. ಸಿಂಗ್ರಿಗೌಡ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಡಿ.ಬಿ. ಕಲ್ಮಣಕರ್ ಅವರು 1975ರಲ್ಲಿ ಪ್ರಥಮ ವಿಪ್ (ಮುಖ್ಯ ಸಚೇತಕ)ರಾಗಿದ್ದ ನಂತರ ಈ  ಅವಧಿಯಲ್ಲಿ, ಮಾಣಿಕರಾವ್ ಪಾಟೀಲ್, ಬಿ. ಭಾಸ್ಕರ ಶೆಟ್ಟಿ ವಿಪ್ ಆಗಿದ್ದರು.


 

Sunday, April 16, 2023

Karnataka Assembly Rewind- 9: Congress split, assembly dissolved

Karnataka Assembly Rewind- 9: Congress split, assembly dissolved

Kere Manjunath ಕೆರೆ ಮಂಜುನಾಥ್‌

Chief Minister S. Nijalingappa's term of the third assembly ended successfully. In this spirit, the Congress contested the 1967 elections under his leadership. Eight constituencies have increased this time. The Congress won 126 out of 216 constituencies and came to power for the fourth time in a row. S.Nijalingappa  who was elected unopposed in Shigagaon constituency himself became the Chief Minister for the third time. Through this, the fourth assembly came into existence on 15 March 1967. S.Nizhalingappa who was the Chief Minister for one year and two months  got the support of the National Congress.
S.Nijalingappa has to play an important role in national politics, resigned as Chief Minister. On May 29, 1968, the young leader Virendra Patil, who was in his cabinet, was made Chief Minister. In 1969 there was an uproar in the National Congress. This confusion often split the party. The Old Congress (O) led by Kamaraj, Morarji, Nijalingappa and the New Congress (R) led by Indira Gandhi came to be known. Chief Minister Virendra Patil identified with the old Congress on this occasion. The fourth Legislative Assembly was dissolved on April 14, 1971 due to confusion in the vote of confidence. President's rule was enforced. There was President's rule till March 20, 1972.
Jayachamarajendra Wodeyar was the Governor till May 4, 1964. From May 4, 1964 to April 2, 1965, S.M. Shringesh, from April 2, 1965 to May 13, 1967 V.V. Giri, 13th May 1967 to 30th August 1969 GS Pathak, 30th August 1969 to 30th August Somnath Iyer (Acting) Governor. Dharmaveera was the Governor from 23 October 1969 to 1 February 1972 and Mohanlal Sukhadia from 1 February 1972 to 1 January 1976.
Although there was a lot of confusion in the fourth assembly, the assembly continued for 226 days. S.Shivappa from Praja Socialist Party who was the leader of the opposition in the previous period  continued till December 22, 1970. Since the Congress was divided, H.Siddaveerappa identified with the new Congress, was the leader of the opposition till 14 April 1971. As Vaikuntha Baliga, who continued as Speaker during this period, died on June 6, 1968, S. D. Kotawale was elected as the speaker.

ವಿಧಾನಸಭೆ ಮೆಲುಕು-9: ಕಾಂಗ್ರೆಸ್ ಇಬ್ಭಾಗ, ವಿಧಾನಸಭೆ ವಿಸರ್ಜನೆ

ಕೆರೆ ಮಂಜುನಾಥ್‌

ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಧಿಕಾರದಲ್ಲೇ ಮೂರನೇ ವಿಧಾನಸಭೆ ಅವಧಿ ಮುಕ್ತಾಯವಾಯಿತು. ಇದೇ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಅವರ ನೇತೃತ್ವದಲ್ಲೇ 1967ರ ಚುನಾವಣೆಗೆ ಸ್ಪರ್ಧಿಸಿತ್ತು. ಈ ಬಾರಿ ಎಂಟು ಕ್ಷೇತ್ರಗಳು ಹೆಚ್ಚಾದವು. 216 ಕ್ಷೇತ್ರಗಳಲ್ಲಿ ಕಾಂಗ್ರೆಸ್ 126 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸತತ ನಾಲ್ಕನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಶಿಗ್ಗಾಂವ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾದ ಎಸ್. ನಿಜಲಿಂಗಪ್ಪ ಅವರೇ ಮೂರನೇ ಬಾರಿಗೆ ಮುಖ್ಯಮಂತ್ರಿಯಾದರು. ಈ ಮೂಲಕ 1967ರ ಮಾರ್ಚ್ 15ರಂದು ನಾಲ್ಕನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದಿತು. ಒಂದು ವರ್ಷ ಎರಡು ತಿಂಗಳು ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರಿಗೆ ರಾಷ್ಟ್ರೀಯ ಕಾಂಗ್ರೆಸ್‌ನ ಬುಲಾವ್ ಬಂದಿತ್ತು.

ರಾಷ್ಟ್ರರಾಜಕಾರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾದ್ದರಿಂದ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ತಮ್ಮ ಸಂಪುಟದಲ್ಲಿದ್ದ ಯುವ ನಾಯಕ ವೀರೇಂದ್ರ ಪಾಟೀಲ್‌ಗೆ 1968ರ ಮೇ 29ರಂದು ಮುಖ್ಯಮಂತ್ರಿ ಪಟ್ಟ ಕಟ್ಟಿದರು. 1969ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಗದ್ದಲ ಉಂಟಾಯಿತು. ಈ ಗೊಂದಲ ಹೆಚ್ಚಾಗಿ ಪಕ್ಷ ಇಬ್ಭಾಗವಾಯಿತು. ಕಾಮರಾಜ್, ಮೊರಾರ್ಜಿ, ನಿಜಲಿಂಗಪ್ಪ ನೇತೃತ್ವದ ಹಳೆಯ ಕಾಂಗ್ರೆಸ್ (ಓ) ಹಾಗೂ ಇಂದಿರಾಗಾಂಧಿ ನೇತೃತ್ವದ ಹೊಸ ಕಾಂಗ್ರೆಸ್ (ಆರ್) ಎಂದು ಹೆಸರಾಯಿತು. ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಈ ಸಂದರ್ಭದಲ್ಲಿ ಹಳೆಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರು. ವಿಶ್ವಾಸಮತದ ಗೊಂದಲ ಉಂಟಾಗಿ 1971ರ ಏಪ್ರಿಲ್ 14ರಂದು ನಾಲ್ಕನೇ ವಿಧಾನಸಭೆ ವಿಸರ್ಜನೆಯಾಯಿತು. ರಾಷ್ಟ್ರಪತಿ ಆಡಳಿತ ಜಾರಿಯಾಯಿತು. 1972ರ ಮಾರ್ಚ್ 20ರವರೆಗೆ ರಾಷ್ಟ್ರಪತಿ ಆಡಳಿತವಿತ್ತು.

ಜಯಚಾಮರಾಜೇಂದ್ರ ಒಡೆಯರ್ ಅವರು 1964ರ ಮೇ 4ರವರೆಗೆ ರಾಜ್ಯಪಾಲರಾಗಿದ್ದರು. 1964ರ ಮೇ 4ರಿಂದ 1965ರ ಏಪ್ರಿಲ್ 2ರವರೆಗೆ ಎಸ್.ಎಂ. ಶೃಂಗೇಶ್, 1965ರ ಏಪ್ರಿಲ್ 2ರಿಂದ 1967ರ ಮೇ 13ರವರೆಗೆ ವಿ.ವಿ. ಗಿರಿ, 1967ರ ಮೇ 13ರಿಂದ 1969ರ ಆಗಸ್ಟ್ 30ರವರೆಗ ಜಿ.ಎಸ್.ಪಾಠಕ್, 1969ರ ಆಗಸ್ಟ್ 30ರಿಂದ ಆಗಸ್ಟ್ 30ರವರೆಗೆ ಸೋಮನಾಥ್ ಅಯ್ಯರ್ (ಹಂಗಾಮಿ) ರಾಜ್ಯಪಾಲರಾಗಿದ್ದರು. ಧರ್ಮವೀರ ಅವರ 1969ರ ಅಕ್ಟೋಬರ್ 23ರಿಂದ 1972ರ ಫೆಬ್ರವರಿ 1ರವರೆಗೆ ಹಾಗೂ ಮೋಹನ್‌ಲಾಲ್ ಸುಖಾಡಿಯಾ ಅವರು 1972ರಿಂದ ಫೆಬ್ರವರಿ 1ರಿಂದ 1976ರ ಜನವರಿ 1ರವರೆಗೆ ರಾಜ್ಯಪಾಲರಾಗಿದ್ದರು.

ನಾಲ್ಕನೇ ವಿಧಾನಸಭೆಯಲ್ಲಿ ಸಾಕಷ್ಟು ಗೊಂದಲವಿದ್ದರೂ 226 ದಿನ ವಿಧಾನಸಭೆ ಕಲಾಪ ನಡೆಯಿತು. ಹಿಂದಿನ ಅವಧಿಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಎಸ್. ಶಿವಪ್ಪ ಅವರು 1970ರ ಡಿಸೆಂಬರ್ 22ರವರೆಗೂ ಮುಂದುವರಿದರು. ಕಾಂಗ್ರೆಸ್ ಇಬ್ಭಾಗವಾದ್ದರಿಂದ ಹೊಸ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡ ಎಚ್. ಸಿದ್ದವೀರಪ್ಪ 1971ರ ಏಪ್ರಿಲ್ 14ರವರೆಗೆ ಪ್ರತಿಪಕ್ಷ ನಾಯಕರಾಗಿದ್ದರು. ಈ ಅವಧಿಯಲ್ಲೂ ಸ್ಪೀಕರ್ ಆಗಿ ಮುಂದುವರಿದಿದ್ದ ವೈಕುಂಠ ಬಾಳಿಗಾ 1968ರ ಜೂನ್ 6ರಂದು ನಿಧನರಾಗಿದ್ದರಿಂದ, ಎಸ್. ಡಿ. ಕೋಟವಾಲೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.


 


Karnataka Assembly Rewind- 8: Shivappa was the first opposition leader

Karnataka Assembly Rewind- 8: Shivappa was the first opposition leader, Nijalingappa defeated, but become a CM


Kere Manjunath ಕೆರೆ ಮಂಜುನಾಥ್‌

Congress, which had held the helm of the state for two consecutive terms, planned to come to power for the third time.  S.Nijalingappa who was demoted from the post of Chief Minister for lack of confidence,  was again given the responsibility of leadership.  Congress contested the 1962 elections under his leadership.  In the elections held on February 19, the Congress won 138 seats out of 208 constituencies and came to power.  However, S.Nijalingappa who was portrayed as the chief ministerial candidate lost in Hosdurga by a margin of 5709 votes.  Thus, Shivalingappa Rudrappa Kanti became the sixth Chief Minister of  State.

 S.R.  Kanti's chief ministership did not last long.  Reluctantly resigned before the end of three months.  Because, Bagalkote MLA B.T.Mural wants  S. Nijalingappa to be the Chief Minister,  resigned from his post. In the by-election held for that constituency, Nijalingappa and two others had submitted their nomination papers.  Since the nomination papers of the other two were rejected, S.  Nijalingappa was elected unopposed.  As the previous plan of the Congress, S.  Nijalingappa was made Chief Minister.  The term of the third Legislative Assembly was from March 15, 1962 to February 28, 1967. S.  Nijalingappa completed this term.  Besides providing many facilities in the field of agriculture, industry, transport and irrigation, he brought innovation.  Thus S.  Nijalingappa was also known as the 'Builder of Modern Karnataka'.

For the first time in this term of the Assembly, the post of Leader of the Opposition was given. This post was made available to the Praja Socialist Party which had a strength of 20 members and S.Shivappa who was elected from Shravanabelagola,  became the first opposition leader. B.Vaikuntha Baliga of Belthangadi Constituency became the speaker. G.S.Venkataramana Iyer  who was also the Assembly Secretary in the previous period continued till 18 September 1965. Hanumanthappa became the secretary after him. The session of the Legislative Assembly lasted for a minimum of 59 days and a maximum of 98 days in a year for five years. A total of 365 days of proceedings were held in the third legislative session.

ವಿಧಾನಸಭೆ ಮೆಲುಕು-8: ಶಿವಪ್ಪ ಪ್ರಥಮ ಪ್ರತಿಪಕ್ಷ ನಾಯಕ, ನಿಜಲಿಂಗಪ್ಪ ಅವರಿಗೆ ಸೋಲು

ಕೆರೆ ಮಂಜುನಾಥ್‌

ರಾಜ್ಯದ ಆಡಳಿತ ಚುಕ್ಕಾಣಿಯನ್ನು ಸತತ ಎರಡು ಬಾರಿ ಹಿಡಿದುಕೊಂಡಿದ್ದ ಕಾಂಗ್ರೆಸ್, ಮೂರನೇ ಬಾರಿಗೂ ಅಧಿಕಾರಕ್ಕೆ ಬರಲು ಯೋಜನೆ ರೂಪಿಸಿತು. ವಿಶ್ವಾಸ ಇಲ್ಲ ಎಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಎಸ್. ನಿಜಲಿಂಗಪ್ಪ ಅವರಿಗೆ ಮತ್ತೆ ನಾಯಕತ್ವದ ಹೊಣೆ ಹೊರಿಸಲಾಯಿತು. ಅವರ ನೇತೃತ್ವದಲ್ಲಿ 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ನಡೆಸಿತು. ಫೆಬ್ರವರಿ 19ರಂದು ನಡೆದ ಚುನಾವಣೆಯಲ್ಲಿ 208 ಕ್ಷೇತ್ರಗಳಲ್ಲಿ ಕಾಂಗ್ರೆಸ್ 138 ಸ್ಥಾನಗಳನು ಗೆದ್ದು ಅಧಿಕಾರದ ಗದ್ದುಗೆಗೇರಿತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ 5709 ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ, ಶಿವಲಿಂಗಪ್ಪ ರುದ್ರಪ್ಪ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು.

ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಮೂರು ತಿಂಗಳು ಮುಗಿಯುವುದರೊಳಗೇ ಒಲ್ಲದ ಮನಸ್ಸಿನಿಂದ ರಾಜಿನಾಮೆ ನೀಡಿದರು. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ.ಟಿ. ಮುರಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್‌ನ ಹಿಂದಿನ ಯೋಜನೆಯಂತೆ ಎಸ್. ನಿಜಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ಧರಿಸಲಾಯಿತು. ಮೂರನೇ ವಿಧಾನಸಭೆಯ ಅವಧಿ 1962ರ ಮಾರ್ಚ್ 15ರಿಂದ 1967ರ ಫೆಬ್ರವರಿ 28. ಎಸ್. ನಿಜಲಿಂಗಪ್ಪ ಈ ಅವಧಿಯನ್ನು ಪೂರ್ಣಗೊಳಿಸಿದರು. ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹಲವು ಸೌಲಭ್ಯ ನೀಡುವ ಜತೆಗೆ ಹೊಸತನ ತಂದರು. ಹೀಗಾಗಿ ಎಸ್. ನಿಜಲಿಂಗಪ್ಪ ಅವರನು ‘ಆಧುನಿಕ ಕರ್ನಾಟಕದ ನಿರ್ಮಾತೃ’ ಎಂದೂ ಕರೆಯಲಾಗುತ್ತಿತ್ತು.

ವಿಧಾನಸಭೆಯ ಈ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಯಿತು. 20 ಸದಸ್ಯರ ಬಲ ಹೊಂದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಗೆ ಈ ಹುದ್ದೆ ಲಭ್ಯವಾಗಿ, ಶ್ರವಣಬೆಳಗೊಳದಿಂದ ಆಯ್ಕೆಯಾಗಿದ್ದ ಎಸ್. ಶಿವಪ್ಪ ಅವರು ಪ್ರಥಮ ಪ್ರತಿಪಕ್ಷ ನಾಯಕರಾದರು. ಬೆಳ್ತಂಗಡಿ ಕ್ಷೇತ್ರದ ಬಿ. ವೈಕುಂಠ ಬಾಳಿಗಾ ಅವರು ಸ್ಪೀಕರ್ ಆದರು. ಹಿಂದಿನ ಅವಧಿಯಲ್ಲೂ ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಜಿ.ಎಸ್. ವೆಂಕಟರಮಣ ಅಯ್ಯರ್ 1965ರ ಸೆಪ್ಟೆಂಬರ್ 18ರವರೆಗೆ ಮುಂದುವರಿದರು. ಅವರ ನಂತರ ಹನುಮಂತಪ್ಪ ಕಾರ್ಯದರ್ಶಿಯಾದರು. ವಿಧಾನಸಭೆ ಕಲಾಪ ಐದು ವರ್ಷಗಳಲ್ಲಿ ವರ್ಷಕ್ಕೆ ಕನಿಷ್ಠ ಎಂದರೆ 59 ದಿನ ಹಾಗೂ ಗರಿಷ್ಠ 98 ದಿನ ನಡೆಯಿತು. ಒಟ್ಟಾರೆ 365 ದಿನಗಳ ಕಲಾಪ ಮೂರನೇ ವಿಧಾನಸಭೆ ಅವಧಿಯಲ್ಲಿ ನಡೆಯಿತು.


 

Saturday, April 15, 2023

Karnataka Assembly Rewind-7: Two chief ministers in the second term

Karnataka Assembly Rewind-7: Two chief ministers in the second term


Kere Manjunath ಕೆರೆ ಮಂಜುನಾಥ್‌

 The second election to the state assembly was held on February 25, 1957.  In the first election, 99 candidates were elected in 80 constituencies.  In the second election, 208 candidates won in 179 constituencies.  Two candidates had a chance to win in large constituencies.  Out of these 208 candidates, Congress won 150 seats.  S.Nijalingappa won from Molakalmuru constituency, which is described as the builder of modern Karnataka,  continued as Chief Minister.  The term of the second assembly was from 10 June 1957 to 1 March 1962.  But S.Nijalingappa who completed one and a half years  resigned as Chief Minister.

Among the Congress MLAs,  Discontent with S.Nijalingappa's leadership erupted.  They were forced to prove their trustworthiness.  In this case S.  Nijalingappa resigned as Chief Minister.  Jamkhandi Constituency MLA B.D.  Jatti assumed office as Chief Minister on 16 May 1958. The cabinet led by   B.D. Jatti successfully completed the task.  In 1954 H.  Siddaiah, then Honnali's H.S.  Rudrappa and Hunagunda's S.R.  Kanthi finished this term as speaker.  GS  Venkataramana Iyer himself was the assembly secretary during this period as well.  Jayachamarajendra Wodeyar was appointed as the first Governor of the state in 1956.  Wodeyar was appointed as the Governor on 1st November 1956 after the state integration.

 The Second Legislative Assembly had extended the days of its sessions.  269 ​​days session was held during the first assembly period.  In the second period this number went up to 375.  All these events took place in Vidhansouda.  At the end of the previous term i.e. on December 19, 1956, the first session was held in the newly constructed Vidhana Soudha.  It was limited to 10 days only.  The entire proceedings of the Second Legislative Assembly were held in Vidhana soudha.

ವಿಧಾನಸಭೆ ಮೆಲುಕು-7: ಎರಡನೇ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿ

ಕೆರೆ ಮಂಜುನಾಥ್‌

ರಾಜ್ಯ ವಿಧಾನಸಭೆಗೆ ಎರಡನೇ ಚುನಾವಣೆ 1957ರ ಫೆಬ್ರವರಿ 25ರಂದು ನಡೆಯಿತು. ಮೊದಲ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ 99 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಎರಡನೇ ಚುನಾವಣೆಯಲ್ಲಿ 179 ಕ್ಷೇತ್ರಗಳಲ್ಲಿ 208 ಅಭ್ಯರ್ಥಿಗಳು ಗೆಲುವು ಸಾಧಿಸಿದರು. ದೊಡ್ಡ ಕ್ಷೇತ್ರಗಳಲ್ಲಿ ಎರಡು ಅಭ್ಯರ್ಥಿಗಳು ಗೆಲ್ಲುವ ಅವಕಾಶವಿತ್ತು. ಈ 208 ಅಭ್ಯರ್ಥಿಗಳಲ್ಲಿ 150 ಸ್ಥಾನಗಳನು ಗೆಲ್ಲುವ ಮೂಲಕ ಕಾಂಗ್ರೆಸ್ ಬಹುಮತ ಸಾಧಿಸಿತು. ಆಧುನಿಕ ಕರ್ನಾಟಕದ ನಿರ್ಮಾತೃ ಎಂದೇ ಬಣ್ಣಿಸಲಾದ ಮೊಳಕಾಲ್ಮೂರು ಕ್ಷೇತ್ರದಿಂದ ವಿಜಯ ಸಾಧಿಸಿ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿ ಮುಂದುವರಿದರು. ಎರಡನೇ ವಿಧಾನಸಭೆಯ ಅವಧಿ 1957ರ ಜೂನ್ 10ರಿಂದ 1962ರ ಮಾರ್ಚ್ 1ರವರೆಗಿತ್ತು. ಆದರೆ ಒಂದೂವರೆ ವರ್ಷ ಮುಗಿಸಿದ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ಕಾಂಗ್ರೆಸ್ ಶಾಸಕರಲ್ಲಿ ಎಸ್. ನಿಜಲಿಂಗಪ್ಪ ನಾಯಕತ್ವದ ಬಗ್ಗೆ ಅಸಮಾಧಾನ ಭುಗಿಲೆದ್ದಿತು. ಅವರು ತಮ್ಮ ವಿಶ್ವಾಸಮತವನ್ನು ಸಾಬೀತುಪಡಿಸಬೇಕು ಎಂಬ ಒತ್ತಾಯ ಎದುರಾಯಿತು. ಈ ಸಂದರ್ಭದಲ್ಲಿ ಎಸ್. ನಿಜಲಿಂಗಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಜಮಖಂಡಿ ಕ್ಷೇತ್ರದ ಶಾಸಕ ಬಿ.ಡಿ. ಜತ್ತಿ ಮುಖ್ಯಮಂತ್ರಿಯಾಗಿ 1958ರ ಮೇ 16ರಂದು ಅಧಿಕಾರ ಸ್ವೀಕರಿಸಿದರು. ಎರಡನೇ ವಿಧಾನಸಭೆಯ ಅವಧಿಯನ್ನು ಬಿ.ಡಿ. ಜತ್ತಿ ನೇತೃತ್ವದ ಸಚಿವ ಸಂಪುಟ ಯಶಸ್ವಿಯಾಗಿ ಪೂರೈಸಿತು. 1954ರಲ್ಲಿ ಎಚ್. ಸಿದ್ದಯ್ಯ ನಂತರ ಹೊನ್ನಾಳಿಯ ಎಚ್.ಎಸ್. ರುದ್ರಪ್ಪ ಹಾಗೂ ಹುನಗುಂದದ ಎಸ್.ಆರ್. ಕಂಠಿ ಸ್ಪೀಕರ್ ಆಗಿ ಈ ಅವಧಿ ಮುಗಿಸಿದರು. ಜಿ.ಎಸ್. ವೆಂಕಟರಮಣ ಅಯ್ಯರ್ ಅವರೇ ಈ ಅವಧಿಯಲ್ಲೂ ವಿಧಾನಸಭೆ ಕಾರ್ಯದರ್ಶಿಯಾಗಿದ್ದರು. ರಾಜ್ಯದ ಪ್ರಥಮ ರಾಜ್ಯಪಾಲರಾಗಿ 1956ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ನೇಮಕವಾಗಿದ್ದರು. ರಾಜ್ಯ ಏಕೀಕರಣದ ನಂತರ ಅಂದರೆ 1956ರ ನವೆಂಬರ್ 1ರಂದು ಒಡೆಯರ್ ಅವರನು ರಾಜ್ಯಪಾಲರನಾಗಿ ನೇಮಿಸಲಾಗಿತ್ತು.

ಎರಡನೇ ವಿಧಾನಸಭೆ ತನ್ನ ಅಧಿವೇಶನಗಳ ದಿನವನ್ನು ಹೆಚ್ಚಿಸಿಕೊಂಡಿತ್ತು. ಪ್ರಥಮ ವಿಧಾನಸಭೆ ಅವಧಿಯಲ್ಲಿ 269 ದಿನ ಅಧಿವೇಶನ ನಡೆದಿತ್ತು. ಎರಡನೇ ಅವಧಿಯಲ್ಲಿ ಈ ಸಂಖ್ಯೆ 375ಕ್ಕೆ ಮುಟ್ಟಿತು. ವಿಧಾನಸೌಧದಲ್ಲಿ ಈ ಎಲ್ಲ ಕಲಾಪಗಳು ನಡೆದವು. ಹಿಂದಿನ ಅವಧಿಯ ಅಂತ್ಯದಲ್ಲಿ ಅಂದರೆ 1956ರ ಡಿಸೆಂಬರ್ 19ರಂದು ಹೊಸದಾಗಿ ನಿರ್ಮಾಣಗೊಂಡಿದ್ದ ವಿಧಾನಸೌಧದಲ್ಲಿ ಪ್ರಥಮ ಅಧಿವೇಶನ ನಡೆದಿತ್ತು. ಅದು ಕೇವಲ 10 ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಎರಡನೇ ವಿಧಾನಸಭೆಯ ಸಂಪೂರ್ಣ ಕಲಾಪಗಳು  ವಿಧಾನಸೌಧದಲ್ಲೇ ನಡೆದವು.