Friday, July 19, 2013

ಸರ್ಕಾರಿ ಭೂಮಿ ಒತ್ತು'ವರಿ'-1



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 15 -07-2013

ವಿಧಾನಸೌಧ ಕೊಳೆಮನೆ



 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:15 -07-2013

Wednesday, July 10, 2013

ಅನ್ನಭಾಗ್ಯ 2013: Annabhagya for the poor from today



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   10-07-2013

Annabhagya for the poor from today


Kere Manjunath ಕೆರೆ ಮಂಜುನಾಥ್‌

 Annabhagya for 5.7 crore people of the state from Wednesday... that means 93% people of the state will be eligible for the 'Annabhagya' scheme facility.

 5.7 crore people of the state will get food from Wednesday...
 That means 93% people of the state will be eligible for 'Annabhagya' scheme facility. As proposed by the Congress in its assembly election manifesto, the scheme of giving one kg of rice for one rupee will be officially launched on Wednesday. Siddaramaiah had announced the cheap rice scheme on the day he assumed office as Chief Minister. The project, which was supposed to start from June itself, is getting delayed by a month.
 Chief Minister Siddaramaiah will launch Annabhagya Yojana at Independence Park in Bengaluru on Wednesday. The scheme will be implemented from Wednesday in all parts of the state, and the respective fair price shops will be able to buy a kg of rice for Rs 1 from the time when rice is distributed.
 Antyodaya, below poverty line cardholders are the beneficiaries of Annabhagya Yojana. If there is one member, they will get 10 kg, if there are 2 members, 20 kg and if there are more than two members, they will get 30 kg of rice every month. Antyodaya card does not have member count. 35 kg of rice is given to that card every month. BPL, Antyodaya has a total of 98,35,701 cards and can buy rice under the scheme through 20,459 fair price shops.

Fully Geared: 

The Department of Food and Civil Supplies is fully geared up to distribute rice under the Annabhagya scheme. The district and taluk level officials have already been instructed to procure the rice required for this. Almost everyone has got rice. However, even in the 20459 fair price shops in the state, there is no guarantee that one rupee worth of rice will be available from Wednesday itself. Because in the existing system, one fair price shop distributes rice one day at a time. Hence monthly ration will be distributed from 10th to 30th. The cheap rice scheme was supposed to start from June itself. If the project had started then, the state government would have had to face the problem of rice shortage and procurement. Now, by implementing the scheme, management is being done without buying rice from outside. The rice in government stock, including 20 thousand metric tonnes of additional rice provided by the central government, will meet the requirement of 2.78 metric tonnes of rice for the month of July. Thus, there is no concept of purchase for Annabhagya Yojana in the month of July.

Purchase of Rice: 

In the month of August, purchase of rice will be necessary. For this, the government has already initiated the process of purchase from Chhattisgarh and the only thing that is pending is the signing of the agreement. Besides, it has also decided to purchase rice at competitive rates through tender. Moreover, the state government is also expected to receive more rice from the central government's food security notification. The state government has implemented the Annabhagya Yojana with an additional burden of around 4500 crores. Out of the required 2.78 metric tonnes of rice, the central government is providing 1.77 metric tonnes of rice. An additional 20 thousand metric tons of rice has been given this month. So this time there are indications that rice will be distributed without any kind of problem. However, the Annabhagya scheme will not be complete without the purchase of rice from August.

District wise details of Antyodaya and BPL cards

 District Antyodaya Bpl
 Bagalkot 46,673 2,64,180
 Bangalore City 30,116 6,91,411
 Bangalore Gr. 14,659 1,74,793
 Belgaum 83,361 6,48,853
 Bellary 63,912 3,03,517
 Bidar 40,811 2,45,534
 Bijapur 46,880 2,96,453
 Chamarajanagar 35,820 2,03,059
 Chikmagalur 22,922 1,99,140
 Chitradurga 43,574 2,98,022
 Chikkaballapur 28,775 2,39,584
 Dakshina Kannada 21,350 1,58,457
 Davangere 50,885 3,33,830
 Dharwad 30,407 2,78,816
 Gadag 29,553 1,72,797
 Gulbarga 63,717 4,04,599
 Hassan 23,795 3,63,412
 Haveri 47,882 2,61,407
 Kodagu 9,672 68,719
 Kolar 30,305 2,68,061
 Koppal 38,256 2,04,131
 Mandya 35,108 3,74,364
 Mysore 51,097 5,47,736
 Raichur 54,342 2,45,190
 Ramanagara 19,056 2,15,318
 Shimoga 38,717 2,69,569
 Tumkur 50,286 4,77,783
 Udupi 18,513 95,904
 Uttara Kannada 16,321 2,18,381
 Yadagiri 30,009 1,66,126

 There is no shortage of rice for Annabhagya Yojana. This scheme will start simultaneously in all the district centers of the state from July 10. I will officially launch the project at Independence Park in Bangalore.
 - Siddaramaiah, Chief Minister

 Rice is available in almost all fair price shops. However, in the existing system, one fair price shop distributes rice one day at a time. So, no one needs to worry. One kg of rice is available for one rupee from the July ration itself. This project is continuous.
 - Dinesh Gundurao, Minister of State for Food and Civil Supplies

Increased population

 Statistics prove that there are lakhs of bogus BPL cards in the state. The number of Antyodaya and BPL cards in the state is 98,35,701. The number of Above Poverty Line (APL) cards is 35,26,773. Annabhagya Yojana estimates that 5.7 crore people are beneficiaries. This does not include those on APL cards. According to the 2011 census, there are 6.11 crore people in the state. There are 5.7 crore people under BPL and Antyodaya. Are the people above that only 41 lakhs? There is no clear answer to this question. Genuine beneficiaries are eligible for 'Annabhagya' only when fake or bogus BPL cards are cancelled.

 Total BPL Cards:  87,00,740
 Cards with only one member:  3,60,200
 Cards with two members:  8,30,742
 A card with more than two members:  75,09,798
 Antyodaya cards:  11,34,96
10 kg rice per month per member 
card per month for two cards:  20 kg of rice
For a card higher than two:  30 kg of rice
To Antyodaya card:  35 kg of rice

Total beneficiaries are 5.7 crores
Rice required is 2,78,428 MT
4500 crore additional burden on the state government
Total Fair Price Shops 20,459

ಬಡವರಿಗೆ ಇಂದಿನಿಂದ ಅನ್ನಭಾಗ್ಯ

ರಾಜ್ಯದ 5.7 ಕೋಟಿ ಜನರಿಗೆ ಬುಧವಾರದಿಂದ ಅನ್ನಭಾಗ್ಯ... ಅಂದರೆ ರಾಜ್ಯದ ಶೇ.93ರಷ್ಟು ಜನರು 'ಅನ್ನಭಾಗ್ಯ' ಯೋಜನೆ ಸೌಲಭ್ಯಕ್ಕೆ ಪಾತ್ರರಾಗಲಿದ್ದಾರೆ.
ರಾಜ್ಯದ 5.7 ಕೋಟಿ ಜನರಿಗೆ ಬುಧವಾರದಿಂದ ಅನ್ನಭಾಗ್ಯ...
ಅಂದರೆ ರಾಜ್ಯದ ಶೇ.93ರಷ್ಟು ಜನರು 'ಅನ್ನಭಾಗ್ಯ' ಯೋಜನೆ ಸೌಲಭ್ಯಕ್ಕೆ ಪಾತ್ರರಾಗಲಿದ್ದಾರೆ. ಕಾಂಗ್ರೆಸ್ ತನ್ನ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಯೋಜನೆಗೆ ಬುಧವಾರ ಅಧಿಕೃತ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯ ಅವರು ಅಗ್ಗದ ಅಕ್ಕಿ ಯೋಜನೆ ಪ್ರಕಟಿಸಿದ್ದರು. ಜೂನ್‌ನಿಂದಲೇ ಆರಂಭವಾಗಬೇಕಿದ್ದ ಈ ಯೋಜನೆ ಒಂದು ತಿಂಗಳ ತಡವಾಗಿ ಪ್ರಾರಂಭವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನ್ನಭಾಗ್ಯ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ರಾಜ್ಯದೆಲ್ಲೆಡೆಯೂ ಬುಧವಾರದಿಂದಲೇ ಯೋಜನೆ ಜಾರಿಗೆ ಬರಲಿದ್ದು, ಆಯಾ ನ್ಯಾಯಬೆಲೆ ಅಂಗಡಿಗಳು ಯಾವ ಕಾಲದಲ್ಲಿ ಅಕ್ಕಿ ವಿತರಿಸಲಾಗುತ್ತದೋ ಅಂದಿನಿಂದಲೇ 1ರು.ಗೆ ಒಂದು ಕೆಜಿ ಅಕ್ಕಿ ಖರೀದಿಸಬಹುದು.
ಅಂತ್ಯೋದಯ, ಬಡತನ ರೇಖೆಯಿಂದ ಕೆಳಗಿರುವ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು. ಒಬ್ಬ ಸದಸ್ಯರಿದ್ದರೆ 10 ಕೆಜಿ, 2 ಸದಸ್ಯರಿದ್ದರೆ 20 ಕೆಜಿ ಹಾಗೂ ಇಬ್ಬರಿಗಿಂತ ಹೆಚ್ಚಿನ ಸದಸ್ಯರಿದ್ದರೆ ಪ್ರತಿ ತಿಂಗಳು 30 ಕೆಜಿ ಅಕ್ಕಿ ಪಡೆಯಲಿದ್ದಾರೆ. ಅಂತ್ಯೋದಯ ಕಾರ್ಡ್‌ನಲ್ಲಿ ಸದಸ್ಯರ ಲೆಕ್ಕಾಚಾರ ಇಲ್ಲ. ಆ ಕಾರ್ಡ್‌ಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿ ನೀಡಲಾಗುತ್ತದೆ. ಬಿಪಿಎಲ್, ಅಂತ್ಯೋದಯದಲ್ಲಿ ಒಟ್ಟು 98,35,701 ಕಾರ್ಡ್‌ಗಳಿದ್ದು, 20,459 ನ್ಯಾಯಬೆಲೆ ಅಂಗಡಿಗಳ ಮೂಲಕ ಯೋಜನೆಯಡಿ ಅಕ್ಕಿ ಖರೀದಿಸಬಹುದು.
    
ಸಂಪೂರ್ಣ ಸಜ್ಜು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಪೂರ್ಣ ಸಜ್ಜಾಗಿದೆ. ಇದಕ್ಕೆ ಅಗತ್ಯವಿರುವ ಅಕ್ಕಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಡೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಬಹುತೇಕ ಎಲ್ಲರೂ ಅಕ್ಕಿಯನ್ನು ಪಡೆದುಕೊಂಡಿದ್ದಾರೆ. ಹೀಗಿದ್ದರೂ ರಾಜ್ಯದಲ್ಲಿರುವ 20459 ನ್ಯಾಯಬೆಲೆ ಅಂಗಡಿಗಳಲ್ಲೂ ಬುಧವಾರದಿಂದಲೇ ಒಂದು ರುಪಾಯಿ ಅಕ್ಕಿ ಸಿಗುತ್ತದೆ ಎಂಬ ಖಾತರಿ ಇಲ್ಲ. ಏಕೆಂದರೆ ಈವರೆಗೂ ಇರುವ ವ್ಯವಸ್ಥೆಯಲ್ಲಿ ಒಂದೊಂದು ನ್ಯಾಯಬೆಲೆ ಅಂಗಡಿಯವರು ಒಂದೊಂದು ದಿನ ಅಕ್ಕಿ ವಿತರಿಸುತ್ತಾರೆ. ಹೀಗಾಗಿ 10ನೇ ತಾರೀಖಿನಿಂದ ಹಿಡಿದು 30ರವರೆಗೂ ತಿಂಗಳ ಪಡಿತರ ವಿತರಣೆಯಾಗುತ್ತದೆ. ಅಗ್ಗದ ಅಕ್ಕಿ ಯೋಜನೆ ಜೂನ್‌ನಿಂದಲೇ ಪ್ರಾರಂಭವಾಗಬೇಕಿತ್ತು. ಆಗ ಯೋಜನೆ ಪ್ರಾರಂಭವಾಗಿದ್ದರೆ ಅಕ್ಕಿ ಕೊರತೆ ಹಾಗೂ ಖರೀದಿ ಸಮಸ್ಯೆಯನ್ನು ರಾಜ್ಯ ಸರ್ಕಾರ ಎದುರಿಸಬೇಕಾಗಿತ್ತು. ಈಗ ಯೋಜನೆ ಜಾರಿ ಮಾಡುವ ಮೂಲಕ ಹೊರಗಡೆಯಿಂದ ಅಕ್ಕಿ ಖರೀದಿ ಮಾಡದೆಯೇ ನಿರ್ವಹಣೆ ಮಾಡುತ್ತಿದೆ. ಸರ್ಕಾರದ ದಾಸ್ತಾನಿನಲ್ಲಿರುವ ಅಕ್ಕಿ, ಕೇಂದ್ರ ಸರ್ಕಾರ ನೀಡಿರುವ 20 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಸೇರಿದಂತೆ ಜುಲೈ ತಿಂಗಳಿಗೆ ಅಗತ್ಯ ವಿರುವ 2.78 ಮೆಟ್ರಿಕ್ ಟನ್ ಅಕ್ಕಿ ಸರಿಯಾಗುತ್ತದೆ. ಹೀಗಾಗಿ, ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಗೆ ಖರೀದಿಸುವ ಪ್ರಮೇಯವೇ ಇಲ್ಲ.

ಅಕ್ಕಿ ಖರೀದಿ: ಆಗಸ್ಟ್ ತಿಂಗಳಿನಲ್ಲಿ ಅಕ್ಕಿ ನೀಡುವ ಸಂದರ್ಭಕ್ಕೆ ಖರೀದಿ ಅಗತ್ಯವಾಗುತ್ತದೆ. ಇದಕ್ಕಾಗಿ ಛತ್ತೀಸ್‌ಗಢದಿಂದ ಖರೀದಿಸುವ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಚಾಲನೆ ನೀಡಿದ್ದು, ಒಪ್ಪಂದಕ್ಕೆ ಸಹಿ ಹಾಕುವುದಷ್ಟೇ ಬಾಕಿ ಉಳಿದಿದೆ. ಇದಲ್ಲದೆ, ಟೆಂಡರ್ ಮೂಲಕವೂ ಸ್ಪರ್ಧಾತ್ಮಕ ದರದಲ್ಲಿ ಅಕ್ಕಿ ಖರೀದಿಸಲು ನಿರ್ಧರಿಸಿದೆ. ಇದಲ್ಲದೆ, ಕೇಂದ್ರ ಸರ್ಕಾರದ ಆಹಾರ ಭದ್ರತೆ ಅಧಿಸೂಚನೆಯಿಂದಲೂ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಕ್ಕಿ ಬರುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಸುಮಾರು 4500 ಕೋಟಿ ಹೆಚ್ಚುವರಿ ಹೊರೆ ಹಾಕಿಕೊಂಡು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಅಗತ್ಯವಿರುವ 2.78 ಮೆಟ್ರಿಕ್ ಟನ್ ಅಕ್ಕಿಯಲ್ಲಿ ಕೇಂದ್ರ ಸರ್ಕಾರ 1.77 ಮೆಟ್ರಿಕ್ ಟನ್ ಅಕ್ಕಿ ನೀಡುತ್ತಿದೆ. ಈ ತಿಂಗಳು ಹೆಚ್ಚುವರಿಯಾಗಿ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ನೀಡಿದೆ. ಹೀಗಾಗಿ ಈ ಬಾರಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಅಕ್ಕಿ ವಿತರಣೆಯಾಗುವ ಲಕ್ಷಣಗಳಿವೆ. ಆದರೆ, ಆಗಸ್ಟ್‌ನಿಂದ ಅಕ್ಕಿ ಖರೀದಿಯಾಗದೆ ಅನ್ನಭಾಗ್ಯ ಯೋಜನೆ ಸಂಪೂರ್ಣಗೊಳ್ಳುವುದಿಲ್ಲ.

ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳ ಜಿಲ್ಲಾವಾರು ವಿವರ
ಜಿಲ್ಲೆ     ಅಂತ್ಯೋದಯ    ಬಿಪಿಎಲ್
ಬಾಗಲಕೋಟೆ     46,673    2,64,180
ಬೆಂಗಳೂರು ನಗರ    30,116    6,91,411
ಬೆಂಗಳೂರು ಗ್ರಾ.     14,659    1,74,793
ಬೆಳಗಾವಿ    83,361     6,48,853
ಬಳ್ಳಾರಿ     63,912     3,03,517
ಬೀದರ್    40,811    2,45,534
ಬಿಜಾಪುರ      46,880    2,96,453
ಚಾಮರಾಜನಗರ      35,820    2,03,059
ಚಿಕ್ಕಮಗಳೂರು     22,922     1,99,140
ಚಿತ್ರದುರ್ಗ     43,574    2,98,022
ಚಿಕ್ಕಬಳ್ಳಾಪುರ    28,775    2,39,584
ದಕ್ಷಿಣ ಕನ್ನಡ     21,350    1,58,457
ದಾವಣಗೆರೆ      50,885    3,33,830
ಧಾರವಾಡ      30,407    2,78,816
ಗದಗ      29,553    1,72,797
ಗುಲ್ಬರ್ಗಾ    63,717      4,04,599
ಹಾಸನ     23,795     3,63,412
ಹಾವೇರಿ    47,882     2,61,407
ಕೊಡಗು     9,672    68,719
ಕೋಲಾರ     30,305     2,68,061
ಕೊಪ್ಪಳ     38,256     2,04,131
ಮಂಡ್ಯ    35,108    3,74,364
ಮೈಸೂರು     51,097     5,47,736
ರಾಯಚೂರು     54,342    2,45,190
ರಾಮನಗರ     19,056     2,15,318
ಶಿವಮೊಗ್ಗ     38,717    2,69,569
ತುಮಕೂರು    50,286    4,77,783
ಉಡುಪಿ    18,513    95,904
ಉತ್ತರ ಕನ್ನಡ     16,321     2,18,381
ಯಾದಗಿರಿ     30,009    1,66,126

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಇಲ್ಲ. ಜುಲೈ 10ರಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಈ ಯೋಜನೆ ಆರಂಭಗೊಳ್ಳುತ್ತದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಯೋಜನೆಗೆ ನಾನು ಅಧಿಕೃತ ಚಾಲನೆ ನೀಡಲಿದ್ದೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಹುತೇಕ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಲಭ್ಯ. ಆದರೆ, ಈವರೆಗೂ ಇರುವ ವ್ಯವಸ್ಥೆಯಲ್ಲಿ ಒಂದೊಂದು ನ್ಯಾಯಬೆಲೆ ಅಂಗಡಿಯವರು ಒಂದೊಂದು ದಿನ ಅಕ್ಕಿ ವಿತರಿಸುತ್ತಾರೆ. ಹೀಗಾಗಿ, ಯಾರೂ ಆತಂಕ ಪಡಬೇಕಿಲ್ಲ. ಜುಲೈ ತಿಂಗಳ ಪಡಿತರದಿಂದಲೇ ಒಂದು ಕೆಜಿ ಅಕ್ಕಿ ಒಂದು ರುಪಾಯಿಗೆ ಸಿಗುತ್ತದೆ. ಈ ಯೋಜನೆ ನಿರಂತರ.
- ದಿನೇಶ್ ಗುಂಡೂರಾವ್, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ರಾಜ್ಯ ಸಚಿವ

ಹೆಚ್ಚಾಯ್ತು ಜನಸಂಖ್ಯೆ
ರಾಜ್ಯದಲ್ಲಿ ಲಕ್ಷಾಂತರ ಬೋಗಸ್ ಬಿಪಿಎಲ್ ಕಾರ್ಡ್‌ಗಳಿರುವುದನ್ನು ಅಂಕಿ- ಅಂಶಗಳೇ ಸ್ಪಷ್ಪಪಡಿಸುತ್ತವೆ. ರಾಜ್ಯದಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್‌ಕಾರ್ಡ್‌ಗಳ ಸಂಖ್ಯೆ 98,35,701. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕಾರ್ಡ್‌ಗಳ ಸಂಖ್ಯೆ 35,26,773. ಅನ್ನಭಾಗ್ಯ ಯೋಜನೆ ಅಂದಾಜಿನ ಪ್ರಕಾರ 5.7 ಕೋಟಿ ಜನರು ಫಲಾನುಭವಿಗಳು. ಇದರಲ್ಲಿ ಎಪಿಎಲ್ ಕಾರ್ಡ್‌ನಲ್ಲಿರುವವರು ಸೇರಿಲ್ಲ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿರುವ 6.11 ಕೋಟಿ ಜನರಿದ್ದಾರೆ. ಬಿಪಿಎಲ್ ಹಾಗೂ ಅಂತ್ಯೋದಯ ವ್ಯಾಪ್ತಿಯಲ್ಲೇ 5.7ಕೋಟಿ ಜನರಿದ್ದರೆ. ಇನ್ನು ಅದಕ್ಕಿಂತ ಮೇಲಿರುವ ಜನರು ಕೇವಲ 41 ಲಕ್ಷ ಮಾತ್ರವೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ನಕಲಿ ಅಥವಾ ಬೋಗಸ್ ಬಿಪಿಎಲ್ ಕಾರ್ಡ್‌ಗಳು ರದ್ದಾದಾಗ ಮಾತ್ರ 'ಅನ್ನಭಾಗ್ಯ'ಕ್ಕೆ ನೈಜ ಫಲಾನುಭವಿಗಳು ಅರ್ಹರಾಗುತ್ತಾರೆ.

  • ಒಟ್ಟು ಬಿಪಿಎಲ್ ಕಾರ್ಡ್‌ಗಳು: 87,00,740
  • ಒಬ್ಬರೇ ಸದಸ್ಯರಿರುವ ಕಾರ್ಡ್‌ಗಳು: 3,60,200
  • ಇಬ್ಬರು ಸದಸ್ಯರಿರುವ ಕಾರ್ಡ್‌ಗಳು:  8,30,742
  • ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ಕಾರ್ಡ್: 75,09,798
  • ಅಂತ್ಯೋದಯ ಕಾರ್ಡ್‌ಗಳು: 11,34,96
  • ಒಬ್ಬ ಸದಸ್ಯನ ಕಾರ್ಡ್‌ಗೆ ತಿಂಗಳಿಗೆ: 10 ಕೆಜಿ ಅಕ್ಕಿ
  • ಎರಡು ಕಾರ್ಡ್‌ಗೆ ತಿಂಗಳಿಗೆ: 20 ಕೆಜಿ ಅಕ್ಕಿ
  • ಎರಡಕ್ಕಿಂತ ಹೆಚ್ಚಿರುವ ಕಾರ್ಡ್‌ಗೆ: 30 ಕೆಜಿ ಅಕ್ಕಿ
  • ಅಂತ್ಯೋದಯ ಕಾರ್ಡ್‌ಗೆಳ:  35 ಕೆಜಿ ಅಕ್ಕಿ

ಒಟ್ಟು ಫಲಾನುಭವಿಗಳು   5.7 ಕೋಟಿ
ಅಗತ್ಯವಿರುವ ಅಕ್ಕಿ    2,78,428 ಮೆಟ್ರಿಕ್ ಟನ್
ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಹೊರೆ     4500 ಕೋಟಿ
ಒಟ್ಟು ನ್ಯಾಯಬೆಲೆ ಅಂಗಡಿಗಳು     20,459

ಬಿಡಿಎ ಅರ್ಕಾವತಿ ಬಡಾವಣೆ ಗೋಳು



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   09-07-2013

Wednesday, July 3, 2013

Sunday, May 6, 2012

ಗಣಿಕೀಕರಣದಲ್ಲೂ ಅಕ್ರಮದ ಧೂಳು


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   17-4-2012

ಜಿಐಎಸ್ ಆಧರಿತ ರೋಡ್ ಹಿಸ್ಟರಿಗೆ ಸಿದ್ಧತೆ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   16-4-2012

ಸಿರ್ಸಿ ಮೇಲುರಸ್ತೆ ದುರಸ್ತಿಗೆ ತಾಂತ್ರಿಕ ತೊಡಕು

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   13-4-2012

ಮತ ಮಾಪನಕೆ ಬರಗೆಟ್ಟ ರಾಜಕೀಯ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   10-4-2012

ಆಸ್ತಿಗಳ ಪಿಐಡಿ ಸಂಖ್ಯೆ ಕಂಪ್ಯೂಟರ್ ನಲ್ಲೇ ಲಾಕ್

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   9-4-2012

ಟೆಡರ್ ಶೂರ್ ನಿಂದ 45 ರಸ್ತೆಗಳು ಹೈಟೆಕ್

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   8-4-2012

ಮೆಟ್ರೋ ಮಂದಗತಿ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   5-4-2012

ಕೆರೆ ಒತ್ತುವರಿಯಲ್ಲಿ ಕೋಲಾರ ಪ್ರಥಮ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   3-4-2012

ಎರವಲು ಸಿಬ್ಬಂದಿ ತೆರವಾಗಿಲ್ಲ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   2-4-2012

Saturday, April 9, 2011

ಹೈಕೋರ್ಟ್ ಆದೇಶ: ಕೆರೆ ಸಂರಕ್ಷಣೆಗೆ ಅಭಯ

ಹೈಕೋರ್ಟ್ ಮಧ್ಯಪ್ರವೇಶದಿಂದ ನಗರದ ಕೆರೆಗಳಿಗೆ ಕೊನೆಗೂ ಶುಕ್ರದೆಸೆ ಆರಂಭವಾಗಿದೆ. ಕೊಳಕು, ಒತ್ತುವರಿ, ನಿರ್ಲಕ್ಷ್ಯದಿಂದ ನಲುಗಿಹೋಗಿರುವ ಕೆರೆಗಳ ಅಭಿವೃದ್ಧಿ ಮೂರು ವರ್ಷದಿಂದ ಬಹಳಷ್ಟು ಆಶ್ವಾಸನೆಗಳು ಬಂದಿದ್ದರೂ ಈಡೇರಿರಲಿಲ್ಲ. ಆದರೆ, ಈಗ ಹೈಕೋರ್ಟ್ ಸೂಚನೆಯಂತೆ ೧೮೩ ಕೆರೆಗಳು ಶುಚಿಯಾಗುವ ಲಕ್ಷಣಗಳಿವೆ.
ನಗರದಲ್ಲಿರುವ ಎಲ್ಲ ಕೆರೆಗಳನ್ನೂ ಅಭಿವೃದ್ಧಿ ಮಾಡುವುದಾಗಿ ಮೂರು ವರ್ಷದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರು, ಶಾಸಕರು ಹಾಗೂ ಒಂದು ವರ್ಷದಿಂದ ಮೇಯರ್, ಕಾರ್ಪೊರೇಟರ್‌ಗಳೂ ಹೇಳುತ್ತಿದ್ದಾರೆ. ಆದರೆ, ಈವರೆಗೆ ಒಂದೇ ಒಂದು ಕೆರೆ ಅಭಿವೃದ್ಧಿಯ ದಡ ಮುಟ್ಟಿಲ್ಲ. ಕಾಮಗಾರಿಗಳು ಇನ್ನೂ ಕುಂಟುತ್ತಲೇ ಇವೆ.
ಇನ್ನು, ಕೆರೆಗಳ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರವಂತೂ ಅಭಿವೃದ್ಧಿಯನ್ನೂ ಮಾಡುವುದಿಲ್ಲ, ಮಾಡುವವರಿಗೆ ಅದನ್ನು ನೀಡುವುದೂ ಇಲ್ಲ. ಎಲ್ಲಕ್ಕೂ ಅಡ್ಡಗಾಲು ಹಾಕುತ್ತಲೇ ಇರುತ್ತದೆ. ನಗರದ ಕೆರೆಗಳ ಅಭಿವೃದ್ಧಿಯನ್ನು ತಾನೇ ಮಾಡುತ್ತೇನೆ ಎಂದಿದ್ದ ಬಿಡಿಎ ಕೂಡ, ೧೧ ಕೆರೆ ಅಭಿವೃದ್ಧಿಯನ್ನು ಇನ್ನೂ ಮುಗಿಸಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ೨೦ ಕೆರೆ, ೨೫ ಕೆರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಲೇ ಇದೆ.
ಕಂದಾಯ ಇಲಾಖೆಯಿಂದ ನಗರ ವ್ಯಾಪ್ತಿಯ ಎಲ್ಲ ಕೆರೆಗಳ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡ ಬಿಬಿಎಂಪಿಯಂತೂ ಇತ್ತ ಗಮನವನ್ನೇ ಹರಿಸಿಲ್ಲ. ಸಾಲದ ಕೂಪದಲ್ಲಿರುವ ಪಾಲಿಕೆ ಕೆರೆಗೆ ಹಣ ಹಾಕಲು ಹಿಂದೇಟು ಹಾಕುತ್ತಿದೆ. ೧೭ ಕೆರೆಗಳು ಅಭಿವೃದ್ಧಿ ಕಾಣುತ್ತಿರುವ ಹಂತದಲ್ಲಿದ್ದರೂ, ಹಣ ಬಿಡುಗಡೆ ಮಾಡದೆ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ-ವಿಶೇಷ ಆಯುಕ್ತರು ಅಲೆಸುತ್ತಿದ್ದಾರೆ. ಹೀಗಾಗಿ, ನಗರದ ಕೆರೆಗಳ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ದಟ್ಟವಾಗುತ್ತಿತ್ತು. ರಾಜಕಾರಣಿಗಳಿಗೂ ಇದೇ ಬೇಕಿತ್ತು ಎಂದೆನಿಸುತ್ತದೆ. ಎಲ್ಲ ಕೆರೆಗಳು ಒಮ್ಮೆಲೆ ಅಭಿವೃದ್ಧಿಯಾದರೆ ಹೇಳಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ? ಅದಕ್ಕೇ ನಿಧಾನಗತಿಗೆ ಅಂಟಿಕೊಂಡು, ಒತ್ತುವರಿಗೆ ಉತ್ತೇಜನ ನೀಡುವಂತಿದೆ.
ಇದಕ್ಕೆಲ್ಲ ಹೈಕೋರ್ಟ್ ಸೂಕ್ತ ರೀತಿ ಚಾಟಿ ಏಟು ಬೀಸಿದೆ. ಮೂರು ತಿಂಗಳಲ್ಲಿ ನಗರದ ಎಲ್ಲ ಕೆರೆಗೆ ಗಡಿ ಗುರುತಿಸಿ, ಬೇಲಿ ಹಾಕಬೇಕು. ಹೂಳು ಎತ್ತಿ, ಒಳಚರಂಡಿ ನೀರು ಹರಿಯದಂತೆ ಶುಚಿಗೊಳಿಸಬೇಕು ಎಂದು ತಾಕೀತು ಮಾಡಿದೆ. ಅಲ್ಲದೆ, ಈ ಕಾರ್ಯದ ವರದಿಯನ್ನು ಹೈಕೋರ್ಟ್‌ಗೇ ಸಲ್ಲಿಸಬೇಕೆಂಬ ಸೂಚನೆ ಶ್ಲಾಘನೀಯ. ಇದರಿಂದಾದರೂ ಅಧಿಕಾರಿಗಳು ನಿರ್ಲಕ್ಷ್ಯಭಾವ ಬಿಟ್ಟು ಕೆಲಸ ಮಾಡುವ ಸಂಭವವಿದೆ. ಇದಕ್ಕೆಲ್ಲ ಮುಖ್ಯವಾಗಿ, ಕೆರೆಗೆ ಜಲಮೂಲವಾಗಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಒತ್ತುನೀಡಿರುವುದು. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು, ರಾಜಕಾಲುವೆ ಒತ್ತುವರಿ ತೆರವಾಗಿಲ್ಲ. ಇದೀಗ ಅದಕ್ಕೆ ಚಾಲನೆ ಸಿಗುವುದು ಜಲಮೂಲಕ್ಕೆ ಸಮಾಧಾನಕರ.
ಕೋಟ್ಯಂತರ ರೂ. ವೆಚ್ಚ ಮಾಡಿದ್ದರೂ ಒಳಚರಂಡಿ ನೀರಿನಲ್ಲೇ ಮುಳುಗಿರುವ ಕೆಂಪಾಂಬುಧಿ ಕೆರೆ.

ಕೊನೆಗೂ ಗೆದ್ದ ವೆಂಕಟಸುಬ್ಬರಾವ್

ಜಯನಗರ ಟಿ ಬ್ಲಾಕ್‌ನಲ್ಲಿರುವ ಬೈರಸಂದ್ರ ಕೆರೆಯನ್ನು ಸರಕಾರಿ ಕೆರೆ ಎಂದು ಹೈಕೋರ್ಟ್ ತೀರ್ಪು ನೀಡುವವರೆಗೆ ಛಲ ಬಿಡದೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಗೆದ್ದಿದ್ದಾರೆ. ೨೦ ವರ್ಷದಿಂದ ಬೈರಸಂದ್ರ ಕೆರೆ ಉಳಿಸಲು ಆರ್‌ಬಿಐನ ಈ ನಿವೃತ್ತ ನೌಕರ ಸಾಕಷ್ಟು ಶ್ರಮಿಸಿದ್ದಾರೆ. ಈ ಕೆರೆಯನ್ನೇ ಅಡವಿಟ್ಟು, ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡಿದ್ದರು. ಅದನ್ನು ಮರುಪಾವತಿಸದೆ ಬ್ಯಾಂಕ್ ಕೆರೆಯನ್ನು ಹರಾಜು ಹಾಕಿತ್ತು. ಬಿಬಿಎಂಪಿ ಕೆರೆ ರಕ್ಷಣೆಯಲ್ಲಿ ಎಡವಿತ್ತು. ಇದನ್ನೆಲ್ಲ ನ್ಯಾಯಾಲಯದಲ್ಲಿ ಪ್ರಶ್ನಿಸಿ, ವರ್ಷಗಟ್ಟಲೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಪರಿಶ್ರಮಕ್ಕೆ ಹೈಕೋರ್ಟ್‌ನಲ್ಲಿ ಪ್ರತಿಫಲ ದೊರೆತಿದೆ. ಈ ಕೆರೆ ಸರಕಾರಿ ಕೆರೆ. ಇದನ್ನು ಯಾರೂ ಮಾರುವಂತಿಲ್ಲ, ಸಾಲ ನೀಡುವಂತಿಲ್ಲ, ಹರಾಜು ಹಾಕುವಂತಿಲ್ಲ. ಇದನ್ನು ಕೂಡಲೇ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿ ಮಾಡಿ ಎಂದು ಹೈಕೋರ್ಟ್ ನಿರ್ದೇಶಿಸಿರುವುದು ಒತ್ತುವರಿದಾರರಿಗೆ ಅಂಕುಶ ಹಾಕಿದಂತಾಗಿದೆ.
೪೩ರಲ್ಲಿ ನೀರಿಲ್ಲ, ೫೯ರಲ್ಲಿ ಮಾಲಿನ್ಯ
ಬಿಬಿಎಂಪಿಯೇ ಅಧಿಕೃತವಾಗಿ ಪ್ರಕಟಿಸಿರುವ ಪಟ್ಟಿಯಂತೆ ಬೆಂಗಳೂರಿನಲ್ಲಿ ೧೯೦ ಕೆರೆಗಳಿವೆ. ನೆನಪಿರಲಿ, ಇದರಲ್ಲಿ ಸಂಪೂರ್ಣವಾಗಿ ಒತ್ತುವರಿಯಾದ, ಬಸ್ ನಿಲ್ದಾಣ-ಆಟದ ಮೈದಾನಗಳಾಗಿ ಪರಿವರ್ತನೆಯಾಗದ ಕೆರೆಗಳು ಸೇರಿಲ್ಲ. ಈ ೧೯೦ ಕೆರೆಗಳನ್ನು ಅಭಿವೃದ್ಧಿಪಡಿಸಿ, ಜಲಮೂಲ ಹೆಚ್ಚಿಸಬಹುದಂತಹವು.
ನಗರದಲ್ಲಿ ಉಳಿದಿರುವ ೧೯೦ ಕೆರೆಗಳ ಪೈಕಿ ೪೩ ಕೆರೆಗಳಲ್ಲಿ ನೀರಿನ ಹರಿವಿಲ್ಲ. ೫೯ ಕೆರೆಗಳು ಕೊಳಕು. ಒಳಚರಂಡಿ ನೀರು ಹಾಗೂ ಮಾಲಿನ್ಯಯುಕ್ತವಾಗಿ ನಲುಗುತ್ತಿವೆ. ಅಲ್ಲದೆ, ಬಹುತೇಕ ಕೆರೆಗಳ ಗಡಿ ನಿರ್ಧಾರವಾಗಿಲ್ಲ. ಬೇಲಿ ಬಿಡಿ, ಒಂದು ಗುರುತನ್ನೂ ಹಾಕಿಲ್ಲ. ಒಂದಷ್ಟು ಒತ್ತಡ ಬಂದರೆ, ಆ ಕೆರೆಯತ್ತ ಇನ್ನೊಂದು ವರ್ಷ ತಿರುಗಿಯೂ ನೋಡುವುದಿಲ್ಲ. ಇಂಥ ಸಂದರ್ಭದಲ್ಲಿ, ಮೂರು ತಿಂಗಳ ಹೈಕೋರ್ಟ್ ಗಡುವು ಲಕ್ಷ್ಮಣರೇಖೆ. ನಗರ ಜನತೆಯ ಪಾಲಿಗೆ ಸಂತಸಸೂಚಕ.

Sunday, September 26, 2010

ತಿಪ್ಪಗೊಂಡನಹಳ್ಳಿಗೆ 3, ಹೆಸರಘಟ್ಟಕ್ಕೆ 6 ಅಡಿ ನೀರು

ನಗರ ಹಾಗೂ ಸುತ್ತಮುತ್ತ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕೆಲವು ಭಾಗಗಳಲ್ಲಿ ಸಮಸ್ಯೆ ಎದುರಾಗಿ ಬೇಸರಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ನಗರಕ್ಕೆ ಜಲಮೂಲವಾಗಿರುವ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಸಂತಸ ಮೂಡಿಸಿದೆ.
ಹೆಸರಘಟ್ಟ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 129.5 ಮಳೆ ಸುರಿದಿದ್ದು, ಶನಿವಾರವೂ ಮಳೆಯಾಗಿತ್ತು. ನೀರಿನ ಹರಿವು ಹೆಚ್ಚಾದ್ದರಿಂದ, ಹೆಸರಘಟ್ಟ ಅಣೆಕಟ್ಟೆಯಲ್ಲಿ 6 ಅಡಿ ನೀರು ತುಂಬಿದೆ. ಅರ್ಕಾವತಿ ನದಿಯ ಹರಿವನ್ನೇ ಅವಲಂಬಿಸಿರುವ ಹೆಸರಘಟ್ಟ ಜಲಾಶಯಕ್ಕೆ ಇದೀಗ ಸುತ್ತಮುತ್ತಲಿನಿಂದ ಮಾತ್ರ ನೀರು ಹರಿದಿರುವುದರಿಂದ 6 ಅಡಿ ತುಂಬಿದೆ. ಇನ್ನೊಂದೆರಡು ದಿನ ಮಳೆ ಹೀಗೆ ಮುಂದುವರಿದರೆ, 10 ಅಡಿ ನೀರು ಸಂಗ್ರಹವಾಗಿ ದಾಖಲೆಯಾಗುವ ಸಾಧ್ಯತೆ ಇದೆ.
ಹೆಸರಘಟ್ಟದಲ್ಲಿ 6 ಅಡಿ ನೀರು ಬಂದಿರುವುದರಿಂದ ಆ ನೀರನ್ನು ಸರಬರಾಜು ಮಾಡಲು ಸಾಧ್ಯವೇನೂ ಇಲ್ಲ. ಆದರೆ, ಈ ಅಣೆಕಟ್ಟೆ ನೀರು ಇಲ್ಲದೆ ಸೊರಗುತ್ತಿದ್ದ ಸಂದರ್ಭದಲ್ಲಿ ಒಂದೇ ದಿನ ಸುಮಾರು ನಾಲ್ಕು ಅಡಿ ನೀರು ಬಂದಿರುವುದು ಸಂತಸಕರ ಎಂದು ಅಣೆಕಟ್ಟೆ ವ್ಯಾಪ್ತಿಯ ನೇತೃತ್ವ ವಹಿಸಿರುವ ಜಲಮಂಡಳಿಯ ಮುಖ್ಯ ಎಂಜಿನಿಯರ್ (ನಿರ್ವಹಣೆ) ಟಿ. ವೆಂಕಟರಾಜು ತಿಳಿಸಿದರು.
ಬೆಂಗಳೂರಿನ ಪಶ್ಚಿಮ ಭಾಗಕ್ಕೆ ಕುಡಿಯುವ ನೀರು ಒದಗಿಸುವ ತಿಪ್ಪಗೊಂಡನಹಳ್ಳಿಗೆ ಜಲಾಶಯಕ್ಕೆ ಶುಕ್ರವಾರ ಒಂದೇ ರಾತ್ರಿ ಸುಮಾರು ಮೂರು ಅಡಿ ನೀರು ಬಂದಿದೆ. ಶುಕ್ರವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಶಿವಗಂಗೆಯಲ್ಲಿ ಹುಟ್ಟುವ ಅರ್ಕಾವತಿಯ ಉಪನದಿ ಕುಮುದ್ವತಿ ಹರಿವು ಹೆಚ್ಚಾಗಿ ಈ ಸಂಗ್ರಹ ಸಾಧ್ಯವಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ ಸೆ.24 ರಂದು 13.6 ನೀರಿತ್ತು. ಸೆ.26 ಬೆಳಗ್ಗೆ ಈ ಮಟ್ಟ 13.6 ಅಡಿಗೆ ಹೆಚ್ಚಿದೆ. ಶಿವಗಂಗೆ ಸುತ್ತಮುತ್ತ ಮಳೆ ಹೆಚ್ಚಾದ್ದರಿಂದ ನೀರು ಹರಿವು ಹೆಚ್ಚಾಗಿದೆ. ಪ್ರತಿ ದಿನ 18 ದಶಲಕ್ಷ ಲೀಟರ್ ನೀರು ಇಲ್ಲಿಂದ ಪೂರೈಕೆಯಾಗುತ್ತಿದೆ. ವರುಣನ ಕೃಪೆ ಇದ್ದು ಮುಂದಿನ ಒಂದು ವಾರ ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಜಲಾಶಯಕ್ಕೆ ಇನ್ನಷ್ಟು ನೀರು ಬರುತ್ತದೆ. ಇದರಿಂದ ನಗರಕ್ಕೆ ಹೆಚ್ಚಿನ ನೀರು ಪೂರೈಸಬಹುದಾಗಿದೆ ಎಂದು ತಿಪ್ಪಗೊಂಡನಹಳ್ಳಿ ಜಲಾಶಯದ ನೇತೃತ್ವ ವಹಿಸಿರುವ ಜಲಮಂಡಳಿಯ ಅಪರ ಮುಖ್ಯ ಎಂಜಿನಿಯರ್ ರೂಪ್‌ಕುಮಾರ್ ತಿಳಿಸಿದರು.
ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯಗಳ ಜಲಮೂಲ ಅರ್ಕಾವತಿ ನದಿ. ಈ ನದಿ ಹರಿಸುವ ಪ್ರಯತ್ನ ಆರಂಭವಾಗಿದ್ದರೂ ಅದಕ್ಕೊಂದು ನಿರ್ದಿಷ್ಟ ರೂಪ ನೀಡುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಶಾಸಕ ಮುನಿರಾಜು ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೆ ಪಾದಯಾತ್ರೆ ಮಾಡಿ ನದಿ ಹರಿಸಲು, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ಸಂಸದ ಅನಂತಕುಮಾರ್ ಸೇರಿದಂತೆ ಸಚಿವರಾದ ಆರ್. ಅಶೋಕ್, ಸುರೇಶ್‌ಕುಮಾರ್ ಶಹಭ್ಬಾಸ್‌ಗಿರಿ ನೀಡಿ, ನದಿ ಪುನಶ್ಚೇತನದ ಭರವಸೆ ನೀಡಿದ್ದರು. ಆದರೆ ಈ ಪ್ರಕ್ರಿಯೆಯಲ್ಲ ಮುಗಿದು ಒಂದು ವರ್ಷವಾದರೂ ಈವರೆಗೆ ಯಾರೂ ನಿರ್ದಿಷ್ಟ ಹೆಜ್ಜೆ ಇರಿಸಿ ಕಾರ್ಯನಿರ್ವಹಿಸದಿರುವುದು ಶೋಚನೀಯ.

Saturday, May 29, 2010

ಅರ್ಕಾವತಿ ನದಿ ಪಾತ್ರ ಶುಚಿಗೆ ಮುಹೂರ್ತ

ಎಲ್ಲ ಒತ್ತುವರಿ ತೆರವುಗೊಳಿಸಲು ಜಲಮಂಡಲಿ ಸಚಿವರ ಕಟ್ಟಪ್ಟಣೆ
ಅರ್ಕಾವತಿ ನದಿ ಪಾತ್ರದ ಶುಚಿ ಕಾರ್ಯ ಕೂಡಲೇ ಪ್ರಾರಂಭ ಮಾಡಿ ನೀರು ಹರಿವಿಗೆ ತಡೆಯಾಗಿರುವ ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕೆಂದು ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಪ್ಪಣೆ ಮಾಡಿದ್ದಾರೆ. ಸೋಮವಾರದಿಂದ ಕಾಲುವೆ ಶುಚಿ ಆರಂಭವಾಗಲಿದೆ.
ನಂದಿಬೆಟ್ಟದ ತಪ್ಪಲಿನಿಂದ ಹೆಸರಘಟ್ಟ-ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ನದಿ ಪಾತ್ರದಲ್ಲಿರುವ ಹೂಳು, ಗಿಡ-ಮರಗಳನ್ನು ಗುರುವಾರದಿಂದಲೇ ತೆರವುಗೊಳಿಸಬೇಕು. ಕಾಲುವೆ ಒತ್ತುವರಿಯ ಕಟ್ಟಡ ಅಥವಾ ಇನ್ಯಾವುದೇ ರೀತಿಯ ತಡೆ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಗರ-ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರ ಈ ಮಳೆಗಾಲದಲ್ಲಿ ಕಾಣಬೇಕು. ಎಲ್ಲಿಯೂ ಒತ್ತುವರಿ ಉಳಿಸಬಾರದು. ಇದಕ್ಕೆ ಸಕ್ರಿಯ ಕಾಮಗಾರಿ ಕೂಡಲೇ ಆರಂಭವಾಗಬೇಕಾದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಕಾವೇರಿ ಜಲನಿಗಮ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭ ಇಲಾಖೆ, ನಗರ-ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿದ್ದು, ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿ ತತ್‌ಕ್ಷಣದಿಂದ ಕಾರ್ಯ ಆರಂಭಿಸಿದ್ದು, ನದಿಪಾತ್ರ ಸಮೀಕ್ಷೆ ನಡೆದಿದೆ. ಸೋಮವಾರದಿಂದ ಶುಚಿ ಕಾರ್ಯ ಆರಂಭವಾಗಲಿದೆ.
ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅರ್ಕಾವತಿ ನದಿ ಪುನಶ್ಚೇತನ ಪಾದಯಾತ್ರೆ ಉದ್ಘಾಟಿಸಿದ್ದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರಿಗೆ ಭವಿಷ್ಯದಲ್ಲಿ ನೀರುಣಿಸುವ ದೂರದೃಷ್ಟಿಯ ಯೋಜನೆಯಡಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಅರ್ಕಾವತಿ ನದಿ ಮೂಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಒಂದಷ್ಟು ದೂರ ನಡೆದಿದ್ದ ಸುರೇಶ್ ಕುಮಾರ್, ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿಲ್ಲ. ಅದರ ಹರಿವು ವಿಮುಖವಾಗಿದೆ. ಅದನ್ನು ಸುಸ್ಥಿತಿಗೆ ತಂದು ನದಿ ಹರಿಯುವಂತೆ ಮಾಡಬೇಕು. ಈ ಮಳೆಗಾಲದಲ್ಲಿ ನದಿ ಪಾತ್ರ ಕಾಣುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ ಪಾತ್ರ ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳನ್ನೂ ತೆರವುಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಾಗ, ೭೯ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮಂಡಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
“ಅರ್ಕಾವತಿ ನದಿ ಪುನಶ್ಚೇತನಕ್ಕೆ ನಾವು ಬದ್ಧರಾಗಿದ್ದೇವೆ. ಒತ್ತುವರಿಯನ್ನು ಸಂಪೂರ್ಣ ರೀತಿಯಲ್ಲಿ ತೆರವುಗೊಳಿಸಲು ಹಾಗೂ ಸಮಗ್ರ ರೀತಿಯಲ್ಲಿ ಕಾಮಗಾರಿ ನಡೆಸಲು ಕೆಲವು ಅಧಿಕಾರಗಳ ಅಗತ್ಯವಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರಿಂದ ಒಪ್ಪಿಗೆ ಪಡೆದು ಸಮಗ್ರವಾಗಿ ಕಾಮಗಾರಿ ಆರಂಭಿಸಲಿದ್ದೇವೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಅರ್ಕಾವತಿ ನದಿ ಪಾತ್ರವನ್ನು ಶುಚಿಗೊಳಿಸುವ ಯೋಜನೆ ನಮ್ಮದಾಗಿದೆ."
-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಲಮಂಡಲಿ, ವಸತಿ ಸಚಿವರು

Thursday, May 6, 2010

ಅರ್ಕಾವತಿ ಹರಿಸಲು ಯಲಹಂಕ ಕೆರೆ ಆಸರೆ

ಬೆಂಗಳೂರಿನ ಜೀವನದಿ ಅರ್ಕಾವತಿ ಹರಿಸುವ ಕಾರ್ಯಕ್ಕೆ ಮೇ 20 ನಂತರ ಚಾಲನೆ ದೊರೆಯಲಿದ್ದು, ಸಾಹಸಕ್ಕೆ ಯಲಹಂಕ ಕೆರೆ ಆಸರೆಯಾಗಲಿದೆ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಜೀವನದಿ ಅರ್ಕಾವತಿ ಹೊಳೆ ಹರಿಸಲು ಯಲಹಂಕ ಕೆರೆಯಿಂದ ನೀರು ಪಂಪ್ ಮಾಡುವ ಕಾರ್ಯಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುತ್ತದೆ. ಸುಮಾರು 300 ಎಕರೆ ವಿಸ್ತೀರ್ಣದಲ್ಲಿರುವ ಯಲಹಂಕ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಈ ನೀರನ್ನು ನದಿ ಹರಿಸಲು ಬಳಸಿಕೊಳ್ಳುವ ಯೋಜನೆ ರೂಪುಗೊಳ್ಳುತ್ತಿದೆ.
ಅರ್ಕಾವತಿ ನದಿಯನ್ನು ಹರಿಸುವ ಪ್ರಮುಖವಾದ ಯೋಜನೆ ಜಲಮಂಡಳಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಾಕಷ್ಟು ಆಸಕ್ತಿ ವಹಿಸಿ ರೂಪಿಸುತ್ತಿದ್ದಾರೆ. ಅದಕ್ಕಾಗಿ ಅಗತ್ಯ ಸಂಪನ್ಮೂಲದ ನೆರವೂ ಸರಕಾರದಿಂದ ಒದಗಿಸುವ ಭರವಸೆ ನೀಡಿದ್ದಾರೆ. ಮೊದಲ ಹಂತದಲ್ಲಿ ನೀರು ಪಂಪ್ ಮಾಡುವ ಕಾರ್ಯಕ್ಕೆ ಈ ತಿಂಗಳೇ ಚಾಲನೆ ನೀಡುವ ಗುರಿ ಹೊಂದಿದ್ದಾರೆ.
ಅರ್ಕಾವತಿ ನದಿಗೆ ನಂದಿಬೆಟ್ಟ ಮೂಲದಿಂದಲೂ ತಡೆ ಇದೆ. ಮೂಲದಿಂದಲೇ ಕಾಲುವೆಯನ್ನು ಸರಿಪಡಿಸುವ ಯೋಜನೆ ರೂಪುಗೊಂಡಿದ್ದು, ನದಿ ಪುನಶ್ಚೇತನಕ್ಕೆ ಸಮಿತಿ ರಚನೆಯಾಗಿ ನಾಲ್ಕು ತಿಂಗಳು ಕಳೆದಿದೆ. ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿದ್ದ ಈ ಸಮಿತಿ ಇದೀಗ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿದೆ. ನದಿ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದು, ಇದಕ್ಕಾಗಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆಗಳು ಆರಂಭವಾಗಿವೆ.
ನಂದಿಬೆಟ್ಟದಿಂದ ದೊಡ್ಡಬಳ್ಳಾಪುರದ ನಾಗರಕೆರೆವರೆಗೆ ನದಿ ಹರಿಸುವ ಅಲ್ಪಮಟ್ಟಿಗಿದೆ. ಈ ಕೆರೆ ತುಂಬಿಸಿ ಮುಂದಿನ ಕಾಲುವೆಗಳಲ್ಲಿ ನೀರು ಹರಿಸುವ ಯೋಜನೆ ರೂಪುಗೊಂಡಿದೆ. ಇದಕ್ಕಾಗಿ ಬೆಂಗಳೂರು ಉತ್ತರದಲ್ಲಿರುವ ಯಲಹಂಕ ಕೆರೆಯನ್ನು ಆಯ್ದುಕೊಳ್ಳಲಾಗಿದೆ. ಇಲ್ಲಿಂದ ನೀರನ್ನು ನಾಗರಕೆರೆಗೆ ಪಂಪ್ ಮಾಡುವ ಯೋಜನೆ ಇದಾಗಿದೆ. ಈ ಮೂಲಕ ಹೆಸರಘಟ್ಟ ಕೆರೆಗೆ ನೀರು ಹರಿಸುವ ಸಾಹಸ ಮಾಡಲಾಗುತ್ತಿದೆ. ನೀರು ಸಂಸ್ಕರಣೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಸಮಯದಲ್ಲಿ, ಅಂತರ್ಜಲ ಕುಸಿತ ದೊಡ್ಡ ಆತಂಕವಾಗಿದೆ. ಆದ್ದರಿಂದ, ನದಿ ಹರಿಸುವ ಮೂಲಕ ಅಂತರ್ಜಲ ಮಟ್ಟ ಏರಿಸುವ ಉದ್ದೇಶವಿದೆ.
ಯಲಹಂಕದಂತಹ ಬೃಹತ್ ಕೆರೆಯನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂತಹ ದೊಡ್ಡ ಕೆರೆ ಬೆಂಗಳೂರಿನ ಪಕ್ಕದಲ್ಲೇ ಇದ್ದರೂ ನಾವು ನೀರಿಗಾಗಿ ಪರಿತಪಿಸುತ್ತಿದ್ದೇವೆ. ಇಂತಹ ಕೆರೆಗಳನ್ನು ನೀರು ಪೂರೈಕೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಬಳಸಿಕೊಳ್ಳಬಾರದೇಕೆ ಎಂದು ಜಲಮಂಡಳಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಕುತೂಹಲದಿಂದ ಕೇಳಿದ್ದಾರೆ. ಈ ಬಗ್ಗೆ ಜಲಮಂಡಳಿ ಸಾಕಷ್ಟು ಯೋಜನೆ ರೂಪಿಸುತ್ತಿದ್ದು, ಈ ನೀರನ್ನು ನಾಗರಕೆರೆಗೆ ಪಂಪ್ ಮಾಡುವ ಯೋಜನೆ ಸಿದ್ಧವಾಗುತ್ತಿದೆ. ಶಾಸಕ ಎಸ್.ಆರ್. ವಿಶ್ವನಾಥ್ ಅರ್ಕಾವತಿ ನದಿ ಹರಿಸಬೇಕೆಂದು ಪಟ್ಟು ಹಿಡಿದ್ದಾರೆ. ಆದ್ದರಿಂದ ಮೊದಲ ಹೆಜ್ಜೆಯಾಗಿ ಯಲಹಂಕ ಕೆರೆಯ ನೀರನ್ನೇ ಅರ್ಕಾವತಿ ಹೊಳೆಗೆ ಹರಿಸಲಾಗುತ್ತಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.
ಅರ್ಕಾವತಿ ನದಿ ಪುನಶ್ಚೇತನ ಸಮಿತಿ ಪ್ರಥಮ ಸಭೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದ ಕೂಡಲೇ ನಡೆಯಲಿದ್ದು, ಈ ಸಭೆಯಲ್ಲೇ ಯಲಹಂಕ ಕೆರೆಯಿಂದ ನೀರು ಹರಿಸುವ ಯೋಜನೆಗೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಅಲ್ಲದೆ, ಪುನಶ್ಚೇತನಕ್ಕೆ ಅಗತ್ಯವಾದ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳುವುದಾಗಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಈ ವರ್ಷದ ಮಳೆಗಾಲದಲ್ಲಿ ನಂದಿಬೆಟ್ಟದಿಂದ ನದಿ ಕಾಲುವೆಗಳನ್ನು ಸುಗಮಗೊಳಿಸುವ ಕಾರ್ಯ ನಡೆಯಲಿದೆ. ಮಳೆಗಾಲದಲ್ಲಿ ನೀರು ಹರಿಯಲು ಇರುವ ತಡೆಯನ್ನು ಗುರುತಿಸಿ, ಅದನ್ನು ನಿವಾರಿಸುವ ಯೋಜನೆ ರೂಪಿಸಲಾಗುತ್ತದೆ. ನಂದಿಯಿಂದ ಹೆಸರಘಟ್ಟದವರೆಗೆ ಅರ್ಕಾವತಿ ಹರಿದರೆ, ಅಲ್ಲಿಂದ ತಿಪ್ಪಗೊಂಡನಹಳ್ಳಿವರೆಗೆ ಕಾಲುವೆ ಹಾಗೂ ಸ್ವಚ್ಛತೆ ನಿರ್ವಹಿಸುವ ಜವಾಬ್ದಾರಿ ಹೊರಲು ಜಲಮಂಡಳಿ ಸಿದ್ಧವಿದೆ. ಈ ದಿಸೆಯಲ್ಲೇ ಕಾರ್ಯಪ್ರಗತಿಯಾಗಲಿದೆ.
ಅರ್ಕಾವತಿ ನದಿ ಪುನಶ್ಚೇತನದಿಂದ ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ರೈತರಿಗೆ ನೀರಿನ ಸೆಲೆ ಸಿಗಲಿದೆಯಲ್ಲದೆ, ಅಂತರ್ಜಲ ಹೆಚ್ಚಾಗುವುದರಿಂದ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಏರಲಿದೆ. ಅಲ್ಲದೆ, ಹೆಸರಘಟ್ಟ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಿದರೆ ಬೆಂಗಳೂರು ನಿವಾಸಿಗಳಿಗೆ ಕುಡಿಯುವ ನೀರು ಸಿಗುತ್ತದೆ. ಅರ್ಕಾವತಿ ನದಿ ಪುನಶ್ಚೇತನ ಕಾರ್ಯ ಶೀಘ್ರ ಆಗಲಿ ಎಂಬುದೇ ಆಶಯ.