Sunday, September 17, 2023

Rajakaluve Encroachment: Opportunity for Citizens to File Complaints

Rajakaluve Encroachment: Opportunity for Citizens to File Complaints

Kere Manjunath ಕೆರೆ ಮಂಜುನಾಥ್ 

 Bengaluru: If Rajkaluve encroachment under BBMP is under the notice of the citizens, the Corporation has allowed to provide the information within 20th September.

 As instructed by the High Court, BBMP is taking action to identify the encroachment of major waterways (Rajkaluve).  Chief Engineer Prahlad, who is also the chief engineer of the large water canal department, said that nine executive engineers have been given responsibility and the public can also provide information about encroachments.

 Public participation in identifying encroachments/encroachments in primary and secondary level canals will help in identifying more encroachments.  Clearing these will allow rainwater to flow easily and prevent flood damage.  Therefore, the information can be sent to the Executive Engineers of the respective divisions by 2 PM on September 20.  It has been said that the list of functionaries has been made according to the assembly constituencies.




ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ...

ರಾಜಕಾಲುವೆ ಒತ್ತುವರಿ: ದೂರು ಸಲ್ಲಿಸಲು ನಾಗರಿಕರಿಗೆ ಅವಕಾಶ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ನಾಗರಿಕರ ಗಮನದಲ್ಲಿದ್ದರೆ ಅದರ ಮಾಹಿತಿಯನ್ನು ಸೆ.20ರೊಳಗೆ ಒದಗಿಸಲು ಪಾಲಿಕೆ ಅವಕಾಶ ನೀಡಿದೆ.

ಹೈಕೋರ್ಟ್‌ ಸೂಚನೆಯಂತೆ ಬೃಹತ್ ನೀರುಗಾಲುವೆಗಳ (ರಾಜಕಾಲುವೆ) ಒತ್ತುವರಿಯನ್ನು ಗುರುತಿಸಲು ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಒಂಬತ್ತು ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಜವಾಬ್ದಾರಿ ವಹಿಸಿದ್ದು, ಸಾರ್ವಜನಿಕರೂ ಒತ್ತುವರಿಗಳ ಬಗ್ಗೆ ಮಾಹಿತಿ ನೀಡಬಹುದು ಎಂದು ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಕೂಡ ಆಗಿರುವ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದ್ದಾರೆ.

ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ರಾಜಕಾಲುವೆಗಳಲ್ಲಿ ಒತ್ತುವರಿಗಳನ್ನು/ಅತಿಕ್ರಮಣಗಳನ್ನು ಗುರುತಿಸಲು ಸಾರ್ವಜನಿಕರು ಕೈಜೋಡಿಸಿದಲ್ಲಿ ಹೆಚ್ಚಿನ ಒತ್ತುವರಿಗಳನ್ನು ಗುರುತಿಸುವಲ್ಲಿ ಸಹಕಾರಿಯಾಗುತ್ತದೆ. ಇವುಗಳನ್ನು ತೆರವು ಮಾಡುವುದರಿಂದ ಮಳೆನೀರು ಸರಾಗವಾಗಿ ಹರಿದು ಪ್ರವಾಹ ಹಾನಿಯನ್ನು ತಡೆಗಟ್ಟಬಹುದಾಗಿರುತ್ತದೆ. ಆದ್ದರಿಂದ, ಸೆ.20ರ ಮಧ್ಯಾಹ್ನ 2ರವರೆಗೆ ಮಾಹಿತಿಯನ್ನು ಆಯಾ ಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಕಳುಹಿಸಬಹುದು. ವಿಧಾನಸಭೆ ಕ್ಷೇತ್ರವಾರು ಕಾರ್ಯಪಾಲಕರ ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.



No comments:

Post a Comment