Sunday, July 2, 2023

Gowri Shankar... who won KALINGA.. The KING COBRA MAN

Gowri Shankar... who won KALINGA.. The KING COBRA MAN

A snake means fear. But there should be no hatred. Malenadu people live with it. People of all parts should have the responsibility to preserve the biodiversity. The King Cobra in our state does not spit venom. Bites like other snakes. It is also true that its poison is very harsh, says Gowri Shankhar, who has discovered the species of King Cobra and received his doctorate....


Kere Manjunath ಕೆರೆ ಮಂಜುನಾಥ್

The Snake... immediately our legs moves back so far.. If King Cobra come accross... Wohh.. run like anything... But he has been traveling with the fearsome KALINGA Serpent for years. Two decades have passed in its life research. After learning the life course of KALINGA, he found out the varieties and presented it in the main thesis. For this he has a doctorate degree. The main reason for all this is Bite of KALINGA.


Yes, his name is Gowri Shankar, who has a passion for the environment, biodiversity and the life cycle of animals. At the beginning of this journey in 2005, he was bitten by a Kind Cobra (KALINGA) while trying to rescue three Cobra. It is surprising that he fought with death for three days and survived. In particular, there is no medicine for the bite of the King Cobra. The use of 'anti-venom' brought from Thailand did not help. When bitten by a Cobra, most of the venom does not enter the body. So after many treatment trials, Gowri Shankhar survived. After that the study of KALINGA'S 'DNA profile' started.

Gowri Shankar, the son of an army officer, was born, brought up,and educated in Bengaluru. However, he learned in his childhood to let out the snakes that were sneaking inside the house. Because he lived then in the outskirts of Bengaluru, K.R. Pura area, there were hundreds of snakes. Many types of snakes used to come to his house. They used to release them to remote areas without harming them. This gave birth to his dream of researching snakes. This work started, saving snakes at the age of 13. It was with such interest that his degree also became related to the environment. He was a teacher at Crocodile Bank, Madras. Later, as a conservationist, he helped establish the Agumbe Rainforest Research Centre. As an animal inspector in Karuna, he worked to prevent cruelty to animals. Later the journey moved to research.

He worked with Romulus Whitaker on the production stage of wildlife documentaries. He has been involved in the production of documentaries like 'The King and I', 'Secrets of the King Cobra', 'Asia's Deadliest Snake', 'One Million Snake Bites' and 'Wildest India'. In the forests of Western Ghats including Agumbe, he is protecting King Cobra' and it's eggs. In this situation, he was bitten by a KALINGA.



"Three King Cobra had to be rescued in Agumbe area. I had only one bag to put Kalinga. We put one and put the other in a sack. While putting the other snake in the small bag, the snake bit my hand from inside. It's not his fault, I wasn't aware. From there, my friend took me in a jeep to Manipal Hospital in Mangalore, which is 25 km away. It was known that there is no cure for the venom of the King Cobra. However, we had 'anti-venom' which was used in Thailand. It didn't help. I even asked let me to die, because from the terrible pain I suffered for three days. Doctors experimented with many different treatments. If bitten by a King Cobra, the elephant itself will die within 30 minutes. But, by the mercy of KALINGA, who inserted little amount of venom, I survived after a three-day long struggle. On that days of suffering, a dream was born that one should study about KALINGA, research the lifestyle. I have continued to do the same even today" says Gowri Shankhar with confidence.

Ph.D: 9 years penance

Gowri Shankhar explains how the Ph.D. story... A rattlesnake that eats a snake called Ophiphegus henna. KALINGA species was first classified in 1836. Scientific name was given in 1945. After this there was no further study. Thus, the research began. Wandered in the Western Ghats. I got admission for Ph.D in Sri Ramachandra Bhanja Deo University, Baripada, Odisha. I chose that university because of the large number of mentors. I went to Uppsala University in Sweden on an 'Erasmus Mundus' scholarship as a student exchange program. A review of the Kalinga snake from other parts was possible from the study there. After molecular taxonomy and DNA barcoding, the new technology made it possible to decipher the genetics and external body structure of the KALINGA. Thus, there are not one species, but four species of KALINGA in the world. That's why the anti-venom brought from Thailand for the venom of the KALINGA that bit me in Agumbe had no effect.



These KING COBRA are classified as Ophiphegus bangarus, found in eastern, northern India, the Andamans, southern China, Taiwan, the Indochinese Peninsula of central Thailand, and another in Indonesia, south-central Philippines. In addition, two other species are found in the Western Ghats region of India and the Luzon region in the northern part of the Philippines. Thus, the time taken to study the four species of KALINGA is about nine years. This penance, which started in 2014, has been realized to a point when he received his doctorate in May 2023. More studies and researches are going on. More surprises will unfold from this...

Over 400 KING COBRA were rescued..

During his Two decades of research, Gowri Shankhar has so far rescued more than 400 King Cobra and released them into safe havens. More than 50 King Cobra's nests have been monitored. He is also known as the 'King Cobra Man of India' due to the first experimental radiotelemetry study on KING COBRA.



Kalinga Center for Rainforest Ecology (KCRE)

Gowri Shankhar, along with his wife Sharmila, established the Kalinga Center for Rainforest Ecology (KCRE) in Agumbe in 2012 as his dream. He is making the locals aware that instead of killing snakes, they should be protected and also explaining their benefits. If you see a nest of KALINGA snakes, inform the forest department or our organization and they are creating awareness about protecting them. Not only this, KCRE also provides opportunities for students to conduct research on environment, animals and biodiversity.

Gowri Shankhar and his family live in 'Kalinga Mane' at Guddekere in Agumbe, Shimoga Tirthahalli Taluk. This is also a KCRE site.

Unforgettable three days...



"The three days spent with Kannada film superstar Puneeth Rajkumar and everyone's favorite Appu were the most memorable moments of life. 'Gandhada Gudi' - the camera was first started for this documentary at our Calling Center for Rainforest Ecology (KCRE). In the movie or documentry it comes in the middle. My friend Amogha introduced me to Puneet. He is very simple, cheerful. When he saw KALINGA he was also very afraid. He was standing on a three feet high board while shooting. Later, he asked a lot of questions out of interest. He sat and ate with us and washed the plate. He told all about his father, about the snake coiled in the film. Wow.. I have never met such a very simple and great person. For the first time, I have become a fan of a person..." while talking about Puneeth Rajkumar, there was pride in Gowri Shankhar's words, admiration in respectful words.


ಕಾಳಿಂಗನ ಗೆದ್ದ ಗೌರಿಶಂಕರ

ಹಾವು ಎಂದರೆ ಭಯ ಇರಬೇಕು. ಆದರೆ ದ್ವೇಷ ಇರಬಾರದು. ಮಲೆನಾಡಿನ ಜನ ಅದರೊಂದಿಗೇ ಜೀವನ ಸಾಗಿಸುತ್ತಾರೆ. ಅಲ್ಲೇ ಮಲಗಿದ್ದು, ಈಗ ಹೋಗಿ ಆಗಿರಬಹುದು... ಎನ್ನುವ ಅವರ ಮನೋಧೈರ್ಯದ ಜೊತೆಗೆ ಜೀವವೈವಿಧ್ಯವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲ ಭಾಗದ ಜನರಲ್ಲೂ ಇರಬೇಕು. ನಮ್ಮ ರಾಜ್ಯದಲ್ಲಿರುವ ಕಾಳಿಂಗ ಸರ್ಪ ವಿಷವನ್ನು ಉಗುಳುವುದಿಲ್ಲ. ಇತರೆ ಹಾವುಗಳಂತೆ ಕಚ್ಚುತ್ತದೆ. ಇದರ ವಿಷ ಅತ್ಯಂತ ಕಠೋರ ಎಂಬುದಂತೂ ಸತ್ಯ ಎನ್ನುತ್ತಾರೆ ಕಾಳಿಂಗ ಸರ್ಪಗಳ ಪ್ರಭೇದಗಳನ್ನು ಕಂಡುಹಿಡಿದು ಡಾಕ್ಟರೇಟ್‌ ಪಡೆದಿರುವ ಗೌರಿಶಂಕರ್‌....

Kere Manjunath ಕೆರೆ ಮಂಜುನಾಥ್

ಹಾವು... ಎಂದ ಕೂಡಲೇ ಕಾಲು ಮಾರುದ್ದ ಹಿಂದೆ ಸರಿಯುತ್ತದೆ... ಇನ್ನು ಕಾಳಿಂಗ ಸರ್ಪ... ಎಂದರೆ, ಎಲ್ಲೆಂದರಲ್ಲಿ ಓಟ... ಅಷ್ಟು ಭಯ ಹುಟ್ಟಿಸುವ ಕಾಳಿಂಗ ಸರ್ಪ ಜೊತೆಯೇ ಇವರದ್ದು ವರ್ಷಾನು ಕಾಲದಿಂದ ಪಯಣ. ಅದರ ಜೀವನ ಸಂಶೋಧನೆಯಲ್ಲೇ ಎರಡು ದಶಕಗಳು ಉರುಳಿವೆ. ಕಾಳಿಂಗನ ಜೀವನಕ್ರಮ ಅರಿತು, ಪ್ರಭೇದಗಳನ್ನು ಶೋಧಿಸಿ ಅದನ್ನು ಪ್ರಧಾನ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಇದಕ್ಕಾಗಿ ಅವರಿಗೆ ಡಾಕ್ಟರೇಟ್‌ ಪದವಿ ಸಂದಿದೆ. ಇದಕ್ಕೆಲ್ಲ ಪ್ರಮುಖ ಕಾರಣ, ಕಾಳಿಂಗನ ಕಡಿತ.

ಹೌದು, ಪರಿಸರ, ಜೀವವೈವಿಧ್ಯ ಹಾಗೂ ಪ್ರಾಣಿಗಳ ಜೀವನಚಕ್ರವನ್ನು ಅರಿಯಬೇಕೆಂಬ ತುಡಿತ ಹೊಂದಿರುವ ಇವರ ಹೆಸರು ಗೌರಿಶಂಕರ್‌. 2005ರಲ್ಲಿ ಈ ಪಯಣದ ಆರಂಭದಲ್ಲಿದ್ದಾಗ, ಮೂರು ಕಾಳಿಂಗ ಸರ್ಪಗಳನ್ನು ರಕ್ಷಿಸುವ ಕಾರ್ಯದಲ್ಲಿ ಒಂದು ಕಾಳಿಂಗ ಸರ್ಪ ಇವರನ್ನು ಕಚ್ಚಿಬಿಟ್ಟಿತು. ಮರಣದೊಂದಿಗೆ ಮೂರು ದಿನ ಸೆಣಸಾಡಿ, ಜಯಸಾಧಿಸಿ ಬದುಕಿಬಂದಿದ್ದೇ ಆಶ್ಚರ್ಯಕರ. ಅದರಲ್ಲೂ ಕಾಳಿಂಗ ಸರ್ಪದ ಕಡಿತಕ್ಕೆ ಮದ್ದಿಲ್ಲ. ಥಾಯ್ಲೆಂಡ್‌ನಿಂದ ತಂದಿದ್ದ ‘ಆಂಟಿ–ವೆನಮ್‌’ಗಳ ಬಳಕೆಯೂ ಪ್ರಯೋಜನಕ್ಕೆ ಬರಲಿಲ್ಲ. ಕಾಳಿಂಗ ಕಚ್ಚಿದಾಗ ವಿಷದ ಪ್ರಮಾಣ ಹೆಚ್ಚಾಗಿ ದೇಹವನ್ನು ಪ್ರವೇಶಿಸಿರಲಿಲ್ಲ. ಆದ್ದರಿಂದ ಹಲವು ಚಿಕಿತ್ಸಾ ಪ್ರಯೋಗಗಳ ನಂತರ ಗೌರಿಶಂಕರ್‌ ಬದುಕುಳಿದರು. ಅದಾದ ನಂತರವೇ ಆರಂಭವಾಗಿದ್ದು ಕಾಳಿಂಗನ ‘ಡಿಎನ್‌ ಪ್ರೊಫೈಲ್‌’ ಅಧ್ಯಯನ.

ಸೇನಾಧಿಕಾರಿಯ ಮಗನಾದ ಗೌರಿಶಂಕರ್‌ ಹುಟ್ಟಿದ್ದು–ಬೆಳೆದ್ದು, ಕಲಿತದ್ದು–ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಆದರೆ, ಮನೆಯೊಳಗೆ ನುಸುಳುತ್ತಿದ್ದ ಹಾವುಗಳನ್ನು ಹೊರಗೆ ಬಿಡುವುದನ್ನು ಇವರು ಬಾಲ್ಯದಲ್ಲೇ ಕಲಿತರು. ಏಕೆಂದರೆ ಅವರು ಆಗ ವಾಸಿಸುತ್ತಿದ್ದ ಬೆಂಗಳೂರಿನ ಹೊರವಲಯದ ಕೆ.ಆರ್. ಪುರ ಪ್ರದೇಶದಲ್ಲಿ ಹಾವುಗಳು ನೂರಾರು ಸಂಖ್ಯೆಯಲ್ಲಿರುತ್ತಿದ್ದವು. ಅನೇಕ ರೀತಿಯ ಹಾವುಗಳ ಆಗಾಗ ಇವರಿದ್ದ ಮನೆಗೆ ಬಂದು ಸೇರಿಕೊಳ್ಳುತ್ತಿದ್ದವು. ಅವುಗಳಿಗೆ ಹಾನಿ ಮಾಡದೆ, ದೂರದ ಪ್ರದೇಶಕ್ಕೆ ಬಿಡುವುದನ್ನು ಮಾಡುತ್ತಿದ್ದರು. ಇದರಿಂದಲೇ ಅವರಿಗೆ ಹಾವುಗಳ ಬಗ್ಗೆ ಸಂಶೋಧನೆ ಮಾಡುವ ಕನಸು ಮೊಳಕೆಯೊಡೆಯಿತು. 13ನೇ ವಯಸ್ಸಿನಲ್ಲಿಯೇ ಹಾವುಗಳನ್ನು ರಕ್ಷಿಸುವ ಕಾಯಕ ಆರಂಭವಾಗಿತ್ತು. ಇಂತಹ ಆಸಕ್ತಿಯಿಂದಲೇ ಅವರ ಪದವಿ ಕೂಡ ಪರಿಸರಕ್ಕೆ ಸಂಬಂಧಿಸಿದ್ದೇ ಆಯಿತು. ಮದ್ರಾಸ್‌ನ ಕ್ರೊಕೊಡೈಲ್‌ ಬ್ಯಾಂಕ್‌ನಲ್ಲಿ ಶಿಕ್ಷಕರಾಗಿದ್ದರು. ನಂತರ, ಸಂರಕ್ಷಣಾಧಿಕಾರಿಯಾಗಿ ಆಗುಂಬೆ ರೈನ್‌ಫಾರೆಸ್ಟ್‌ ಸಂಶೋಧನಾ ಕೇಂದ್ರ ಸ್ಥಾಪಿಸಲು ನೆರವಾದರು. ಕರುಣಾದಲ್ಲಿ ಪ್ರಾಣಿಗಳ ಇನ್‌ಸ್ಪೆಕ್ಟರ್‌ ಆಗಿ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಕಾರ್ಯನಿರ್ವಹಿಸಿದರು. ನಂತರದ ಪಯಣ ಸಂಶೋಧನೆಯತ್ತಲೂ ಸಾಗಿತು.

ರೋಮುಲುಸ್‌ ವೈಟೇಕರ್ ಅವರಿಗೆ ವನ್ಯಜೀವಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಹಂತದಲ್ಲಿ ಕೆಲಸ ಮಾಡಿದರು. ‘ದ ಕಿಂಗ್‌ ಆ್ಯಂಡ್ ಐ’, ‘ಸೀಕ್ರೆಟ್ಸ್‌ ಆಫ್‌ ದ ಕಿಂಗ್‌ ಕೊಬ್ರಾ’, ‘ಏಷ್ಯಾಸ್‌ ಡೆಡ್ಲಿಯೆಸ್ಟ್‌ ಸ್ನೇಕ್‌’, ‘ಒನ್‌ ಮಿಲಿಯನ್‌ ಸ್ನೇಕ್‌ ಬೈಟ್ಸ್‌’ ಮತ್ತು ‘ವೈಲ್ಡೆಸ್ಟ್‌ ಇಂಡಿಯಾ’ ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಆಗುಂಬೆ ಸೇರಿದಂತೆ ಪಶ್ಚಿಮಘಟ್ಟದ ಕಾಡಿನಲ್ಲಿ ಕಾಳಿಂಗ ಸರ್ಪಗಳು ಅವುಗಳ ಮೊಟ್ಟೆಗಳನ್ನು ರಕ್ಷಿಸುವ ಕಾಯಕವನ್ನೂ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲೇ ಅವರನ್ನು ಕಾಳಿಂಗ ಕಚ್ಚಿದ್ದು.

‘ಆಗುಂಬೆ ಪ್ರದೇಶದಲ್ಲಿ ಮೂರು ಕಾಳಿಂಗ ಸರ್ಪಗಳನ್ನು ರಕ್ಷಿಸಬೇಕಾಗಿತ್ತು. ಕಾಳಿಂಗನನ್ನು ಹಾಕಿಕೊಳ್ಳುವ ಒಂದೇ ಚೀಲ ನನ್ನ ಬಳಿ ಇತ್ತು. ಒಂದನ್ನು ಹಾಕಿ, ಮತ್ತೊಂದನ್ನು ಗೋಣಿಚೀಲದಲ್ಲಿ ಹಾಕಿದೆವು. ಇನ್ನೊಂದು ಸರ್ಪವನ್ನು ಚಿಕ್ಕಬ್ಯಾಗ್‌ಗೆ ಹಾಕುವ ಸಂದರ್ಭದಲ್ಲಿ ಒಳಗಿನಿಂದಲೇ ಕಾಳಿಂಗ ನನ್ನ ಕೈಗೆ ಕಚ್ಚಿಬಿಟ್ಟ. ತಪ್ಪು ಅವನದ್ದಲ್ಲ, ನಾನು ಜಾಗೃತನಾಗಿರಲಿಲ್ಲ. ಅಲ್ಲಿಂದ 25 ಕಿ.ಮೀ ದೂರದ ಮಂಗಳೂರಿನಲ್ಲಿರುವ ಮಣಿಪಾಲ್‌ ಆಸ್ಪತ್ರೆಗೆ ನನ್ನ ಸ್ನೇಹಿತ ಜೀಪ್‌ನಲ್ಲಿ ಕರೆದೊಯ್ದ. ಕಾಳಿಂಗ ಸರ್ಪದ ವಿಷಕ್ಕೆ ಮದ್ದಿಲ್ಲ ಎಂಬುದು ಗೊತ್ತಿತ್ತು. ಆದರೆ, ಥಾಯ್ಲೆಂಡ್‌ನಲ್ಲಿ ಬಳಸಲಾಗುತ್ತಿದ್ದ ‘ಆಂಟಿ ವೆನಮ್‌’ ನಮ್ಮಲ್ಲಿತ್ತು. ಅದು ಪ್ರಯೋಜನಕ್ಕೆ ಬರಲಿಲ್ಲ. ಮೂರು ದಿನ ಅನುಭವಿಸಿದ ಆ ಭಯಾಯನಕ ನೋವಿನಿಂದ ನನ್ನನ್ನು ಸಾಯಲು ಬಿಡಿ ಎಂದೂ ಕೇಳಿದ್ದ. ವೈದ್ಯರು ಚಿಕಿತ್ಸೆಯಲ್ಲಿ ಹಲವು ರೀತಿಯ ಪ್ರಯೋಗಗಳನ್ನು ಮಾಡಿದರು. ಕಾಳಿಂಗ ಸರ್ಪ ಕಚ್ಚಿದರೆ 30 ನಿಮಿಷದಲ್ಲಿ ಆನೆಯೇ ಸಾಯುತ್ತದೆ. ಆದರೆ, ಕಾಳಿಂಗನ ಕರುಣೆಯಿಂದ ಮೂರು ದಿನದ ದೀರ್ಘ ಹೋರಾಟದ ನಂತರ ಬದುಕುಳಿದೆ. ಆ ಯಾತನೆಯ ದಿನದಲ್ಲೇ ಕಾಳಿಂಗನ ಬಗ್ಗೆಯೇ ಅಧ್ಯಯನ ಮಾಡಬೇಕು, ಜೀವನಶೈಲಿ, ಕ್ರಮವನ್ನು ಸಂಶೋಧಿಸಬೇಕು ಎಂಬ ಕನಸು ಹುಟ್ಟಿದ್ದು. ಅದನ್ನೇ ಇಂದಿಗೂ ಮುಂದುವರಿಸಿದ್ದೇನೆ’ ಎಂದು ಗೌರಿಶಂಕರ್‌ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ.

ಪಿಎಚ್‌ಡಿ: 9 ವರ್ಷಗಳ ತಪಸ್ಸು

ಪಿಎಚ್‌.ಡಿ ಹೇಗಾಯಿತು ಎಂಬುದನ್ನು ಗೌರಿಶಂಕರ್‌ ಹೀಗೆ ವಿವರಿಸುತ್ತಾರೆ... ಒಫಿಫೀಗುಸ್‌ ಹೆನ್ನ ಎಂದು ಕರೆಯಲಾಗುವ ಹಾವನ್ನೇ ತಿನ್ನುವ ಹಾವು ಕಾಳಿಂಗ. ಪ್ರಥಮವಾಗಿ 1836ರಲ್ಲಿ ಕಾಳಿಂಗ ಪ್ರಭೇದವನ್ನು ವರ್ಗೀಕರಿಸಲಾಗಿತ್ತು. 1945ರಲ್ಲಿ ವೈಜ್ಞಾನಿಕ ಹೆಸರು ನೀಡಲಾಯಿತು. ಇದಾದ ನಂತರ ಹೆಚ್ಚಿನ ಅಧ್ಯಯನ ನಡೆದಿರಲಿಲ್ಲ. ಹೀಗಾಗಿ, ಸಂಶೋಧನೆ ಆರಂಭವಾಯಿತು. ಪಶ್ಚಿಮ ಘಟ್ಟಗಳಲ್ಲಿ ಓಡಾಡಿದೆ. ಒಡಿಸ್ಸಾದ ಬರಿಪಾಡದಲ್ಲಿರುವ ಶ್ರೀರಾಮಚಂದ್ರ ಭಂಜ ಡಿಯೊ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡಲು ಪ್ರವೇಶ ಪಡೆದೆ. ಮಾರ್ಗದರ್ಶಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಆ ವಿವಿ ಆಯ್ಕೆ ಮಾಡಿಕೊಂಡೆ. ವಿದ್ಯಾರ್ಥಿಗಳ ವಿನಿಮಯದ ಕಾರ್ಯಕ್ರಮದಲ್ಲಿ ‘ಎರಾಸ್ಮಸ್‌ ಮುಂಡಸ್‌’ ಸ್ಕಾಲರ್‌ಶಿಪ್‌ ಸ್ವೀಡನ್‌ನ ಉಪ್ಪಸಲ ವಿಶ್ವವಿದ್ಯಾಲಯಕ್ಕೆ ಹೋದೆ. ಅಲ್ಲಿನ ಅಧ್ಯಯನದಿಂದ ಬೇರೆ ಭಾಗದ ಕಾಳಿಂಗ ಸರ್ಪದ ವಿಮರ್ಶೆ ಸಾಧ್ಯವಾಯಿತು. ಮಾಲಿಕ್ಯುಲರ್‌ ಟಾಕ್ಸೊನೊಮಿ ಮತ್ತು ಡಿಎನ್‌ಎ ಬಾರ್‌ಕೋಡಿಂಗ್‌ನಂತರ ಹೊಸ ತಂತ್ರಜ್ಞಾನದಿಂದ ಕಾಳಿಂಗ ಸರ್ಪದ ಅನುವಂಶಿಕ ಮತ್ತು ಹೊರ ದೇಹದ ರಚನೆಯನ್ನು ಅರ್ಥೈಸಲು ಸಾಧ್ಯವಾಯಿತು. ಹೀಗಾಗಿ, ಪ್ರಪಂಚದಲ್ಲಿ ಒಂದು ಪ್ರಭೇದವಲ್ಲ, ನಾಲ್ಕು ಪ್ರಭೇದದ ಕಾಳಿಂಗ ಸರ್ಪಗಳಿವೆ. ಅದಕ್ಕೇ ನನಗೆ ಆಗುಂಬೆಯಲ್ಲಿ ಕಚ್ಚಿದ ಕಾಳಿಂಗನ ವಿಷಕ್ಕೆ ಥಾಯ್ಲೆಂಡ್‌ನಿಂದ ತಂದ ಆಂಟಿ ವೆನಮ್‌ ಪರಿಣಾಮ ಬೀರಲಿಲ್ಲ.

ಪೂರ್ವ, ಉತ್ತರ ಭಾರತ, ಅಂಡಮಾನ್‌, ದಕ್ಷಿಣ ಚೀನ, ತೈವಾನ್‌, ಥಾಯ್ಲೆಂಡ್‌ನ ಕೇಂದ್ರಭಾಗದ ಇಂಡೊಚೈನೀಸ್‌ ಪೆನಿಸುಲದಲ್ಲಿ ಒಂದು ಪ್ರಭೇದವಿದ್ದರೆ, ಮತ್ತೊಂದು ಇಂಡೊನೇಷ್ಯಾ, ದಕ್ಷಿಣ–ಕೇಂದ್ರಭಾಗದ ಫಿಲಿಪೀನ್ಸ್‌ನಲ್ಲಿ ಕಂಡುಬರುವ ಈ ಕಾಳಿಂಗ ಸರ್ಪಗಳನ್ನು ಒಫಿಫೀಗುಸ್‌ ಬಂಗಾರಸ್‌ ಎಂದು ವರ್ಗೀಕರಿಸಲಾಗಿದೆ. ಇದಲ್ಲದೆ, ಇನ್ನೆರಡು ಪ್ರಭೇದಗಳು ಭಾರತದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಫಿಲಿಪೀನ್ಸ್‌ನ ಉತ್ತರ ಭಾಗದ ಲೂಜಾನ್‌ ಪ್ರದೇಶದಲ್ಲಿವೆ. ಹೀಗೆ, ಕಾಳಿಂಗ ಸರ್ಪ ನಾಲ್ಕು ಪ್ರಭೇದದಲ್ಲಿದೆ ಎಂಬ ಅಧ್ಯಯನಕ್ಕೆ ತೆಗೆದುಕೊಂಡ ಸಮಯ ಸುಮಾರು ಒಂಬತ್ತು ವರ್ಷ. 2014ರಲ್ಲಿ ಆರಂಭವಾದ ಈ ತಪಸ್ಸು, 2023ರ ಮೇನಲ್ಲಿ ಡಾಕ್ಟರೇಟ್‌ ಪ‍ಡೆದಾಗ ಒಂದು ಹಂತಕ್ಕೆ ಸಾಕಾರಗೊಂಡಿದೆ. ಇನ್ನಷ್ಟು ‌ಅಧ್ಯಯನ, ಸಂಶೋಧನೆಗಳು ನಡೆಯುತ್ತಿವೆ. ಇದರಿಂದ ಇನ್ನಷ್ಟು ಅಚ್ಚರಿಗಳು ತೆರೆದುಕೊಳ್ಳಲಿವೆ...

400ಕ್ಕೂ ಹೆಚ್ಚು ಕಾಳಿಂಗ ಸರ್ಪ ರಕ್ಷಣೆ

ಗೌರಿಶಂಕರ್‌ ಅವರು ತಮ್ಮ ಮೂರು ದಶಕಗಳ ಸಂಶೋಧನಾ ಸಂದರ್ಭದಲ್ಲಿ ಈವರೆಗೆ 400ಕ್ಕೂ ಕಾಳಿಂಗ ಸರ್ಪಗಳನ್ನು ರಕ್ಷಿಸಿ, ಸುರಕ್ಷತಾ ತಾಣಗಳಿಗೆ ಬಿಟ್ಟಿದ್ದಾರೆ. 50ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ಗೂಡುಗಳನ್ನು ನಿಗಾವಹಿಸಿದ್ದಾರೆ. ಕಾಳಿಂಗ ಸರ್ಪಗಳ ಮೇಲಿನ ಪ್ರಥಮ ಪ್ರಯೋಗವಾದ ರೇಡಿಯೊ ಟೆಲಿಮೇಟರಿ ಅಧ್ಯಯನದಿಂದ ಇವರನ್ನು ‘ಕಿಂಗ್‌ ಕೊಬ್ರಾ ಮ್ಯಾನ್‌ ಆಫ್‌ ಇಂಡಿಯಾ’ ಎಂದೂ ಕರೆಯಲಾಗುತ್ತದೆ.

ಗೌರಿಶಂಕರ್‌ ತಮ್ಮ ಕನಸಿನಂತೆ ಆಗುಂಬೆಯಲ್ಲಿ ಕಾಳಿಂಗ ಸೆಂಟರ್‌ ಫಾರ್‌ ರೈನ್‌ಫಾರೆಸ್ಟ್‌ ಎಕೊಲಜಿ (ಕೆಸಿಆರ್‌ಇ) ಅನ್ನು ತಮ್ಮ ಪತ್ನಿ ಶರ್ಮಿಳಾ ಅವರೊಂದಿಗೆ 2012ರಲ್ಲಿ ಸ್ಥಾಪಿಸಿದ್ದಾರೆ. ಹಾವುಗಳನ್ನು ಸಾಯಿಸುವ ಬದಲು ಅವುಗಳನ್ನು ರಕ್ಷಿಸಬೇಕು ಎಂದು ಸ್ಥಳೀಯರಿಗೆ ಅರಿವು ಮೂಡಿಸುವ ಜೊತೆಗೆ ಅವುಗಳಿಂದಾಗುವ ಪ್ರಯೋಜನವನ್ನೂ ವಿವರಿಸುತ್ತಿದ್ದಾರೆ. ಕಾಳಿಂಗ ಸರ್ಪಗಳ ಗೂಡು ಕಂಡರೆ ಅರಣ್ಯ ಇಲಾಖೆ ಅಥವಾ ತಮ್ಮ ಸಂಸ್ಥೆ ತಿಳಿಸಿ, ಅವುಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟೇ ಅಲ್ಲ, ಪರಿಸರ, ಪ್ರಾಣಿಗಳು, ಜೀವವೈವಿಧ್ಯದ ಬಗ್ಗೆ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಕೆಸಿಆರ್‌ಇ ಅವಕಾಶ ಕಲ್ಪಿಸುತ್ತಿದೆ.

ಶಿವಮೊಗ್ಗ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆಯ ಗುಡ್ಡೇಕೆರೆಯಲ್ಲಿರುವ ‘ಕಾಳಿಂಗ ಮನೆ’ಯಲ್ಲಿ ಗೌರಿಶಂಕರ್‌ ಹಾಗೂ ಕುಟುಂಬದ ವಾಸ. ಇದು ಕೆಸಿಆರ್‌ಇ ತಾಣವೂ ಹೌದು.

ಅವಿಸ್ಮರಣೀಯ ಆ ಮೂರು ದಿನ...

ಕನ್ನಡ ಚಿತ್ರರಂಗದ ಮೇರುನಟ ಪುನೀತ್‌ ರಾಜ್‌ಕುಮಾರ್‌, ಎಲ್ಲರ ಮೆಚ್ಚಿನ ಅಪ್ಪು ಅವರೊಂದಿಗೆ ಕಳೆದ ಮೂರು ದಿನ ಜೀವನದ ಅತ್ಯಂತ ಅವಿಸ್ಮರಣೀಯ ಸಮಯ. ‘ಗಂಧದ ಗುಡಿ’– ಸಾಕ್ಷ್ಯಚಿತ್ರಕ್ಕಾಗಿ ಕ್ಯಾಮೆರಾ ಚಾಲನೆಯಾಗಿದ್ದು ನಮ್ಮ ಕಾಳಿಂಗ್ ಸೆಂಟರ್‌ ಫಾರ್ ರೈನ್‌ಫಾರೆಸ್ಟ್‌ ಎಕೊಲಾಜಿಯಲ್ಲೇ (ಕೆಸಿಆರ್‌ಇ). ಚಿತ್ರದಲ್ಲಿ ಅದು ಮಧ್ಯದಲ್ಲಿ ಬರುತ್ತದೆ. ನನ್ನ ಗೆಳೆಯ ಅಮೋಘ ಅವರು ಪುನೀತ್‌ ಅವರನ್ನು ಪರಿಚಯ ಮಾಡಿಸಿದರು. ಅವರು ತುಂಬಾ ಸರಳ, ಹಸನ್ಮುಖಿ. ನಮ್ಮ ಕಾಳಿಂಗ ಸರ್ಪ ಕಂಡಾಂಗಲಂತೂ ತುಂಬಾ ಭಯ ಪಟ್ಟಿದ್ದರು. ಕಾಳಿಂಗನ ಶೂಟಿಂಗ್‌ ಮಾಡುವಾಗ ಮೂರು ಅಡಿ ಎತ್ತರ ಹಲಗೆ ಮೇಲೆ ನಿಂತಿದ್ದರು. ನಂತರ, ಆಸಕ್ತಿಯಿಂದ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ನಮ್ಮೊಂದಿಗೆ ಕುಳಿತು ಊಟ ಮಾಡಿದರು, ತಿಂದ ತಟ್ಟೆಯನ್ನು ತೊಳೆದರು. ತಮ್ಮ ತಂದೆಯವರ ಬಗ್ಗೆ, ಚಿತ್ರದಲ್ಲಿ ಹಾವು ಸುತ್ತಿಕೊಂಡ ಬಗ್ಗೆಯ ಸನ್ನಿವೇಶವನ್ನೆಲ್ಲ ಹೇಳಿದರು. ವಾಹ್‌.. ಇಂತಹ ಅತ್ಯಂತ ಸರಳ ಹಾಗೂ ಮಹಾನ್‌ ವ್ಯಕ್ತಿಯನ್ನು ನಾನು ಭೇಟಿಯೇ ಮಾಡಿರಲಿಲ್ಲ. ನಾನು ಪ್ರಥಮ ಬಾರಿಗೆ ಒಬ್ಬ ವ್ಯಕ್ತಿಯ ಅಭಿಮಾನಿಯಾಗಿಬಿಟ್ಟಿದ್ದೇನೆ... ಎಂದು ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಹೇಳುವಾಗ ಗೌರಿಶಂಕರ್‌ ಮಾತಿನಲ್ಲಿ ಹೆಮ್ಮೆ ಇತ್ತು, ಗೌರವಪೂರ್ವಕ ಮಾತುಗಳಲ್ಲಿ ಅಭಿಮಾನವಿತ್ತು.

ಕಾಳಿಂಗನ ಗೆದ್ದ ಗೌರಿಶಂಕರ...




1 comment: