Wednesday, January 4, 2023

Amrutha Halli Lake: ₹5 Crore Sewage Pit

Amrutha Halli Lake

₹4 crore from BBMP for redevelopment; Sewerage will not stop

Kere Manjunath, 4 January 2023

Bengaluru: The Amrutha Halli lake, which was developed three years ago by the Bengaluru Development Authority at a cost of ₹5 crore, is a garbage dump, and the BBMP has again proposed to develop it again at a cost of ₹4 crore.

After a lot of struggles by the locals, BDA decided to develop the Amrutha Halli lake in 2015. A few encroachments were left, a fence was put up, a bund was built, and a walking path was also developed. BDA made the lake an orphan after spending over ₹5 crore. Amrutha Halli lake, which was developed without preventing the flow of sewage water, became an unmaintained poisoning site.

For three years, the locals have been appealing for the cleaning of the lake, but no one, including the public representatives and officials, has listened. However, after the transfer of the lake from BDA to BBMP, the development project of Amrut Halli lake got started. Under the 15th finance plan, BBMP has taken up the development of the lake at a cost of ₹4 crore. In May 2022, although the project was technically approved, the work did not start.

After the development of Lake, BDA did nothing except cut the tape. Amrutha Halli Lake, contrary to its name, became another poison site. It became impossible to go to the lake without maintenance. The sewage water is flowing directly into the lake, and it is overflowing. The reed is full. Jayalakshmi, a local, complained that when the election comes, the lake is remembered.

BDA has developed many facilities including climbing, fencing, chain link. However, lakhs of rupees are being spent on the same facilities, i.e., removing fencing and putting up fencing again,' complained Rajesh.

The development of BDA was not right. Dirty was flowing. Again, handed over to BBMP and is being developed again. Now some work has started," said Devaraj Gowda, president of the Amrutnagar Residents' Welfare Association.

Work begins...

Earlier BDA had developed. But Amrutha Halli lake is now full of dirty. Throwing it out, we are installing a pipeline to prevent the flow of sewage water. The dewatering work has started, and we will finish the development work soon. The approval of DPR by Lake Development Authority was delayed. Hence, the start of work was also delayed," said Akshat, Assistant Executive Engineer, Lakes Department, BBMP.

Again ₹4.75 lakh for DPR

BDA had spent everything including the Detailed Project Report (DPR) to develop the Amrutha Halli Lake. But now BBMP has done DPR again. It cost ₹4.75 lakh including GST. But in this also no action has been taken to prevent sewage water from entering the lake.

Amrutha Halli has only one input. There is only sewage water in Rajakaluve coming from Sahakara Nagar. If this is prevented from coming, water will not flow into the lake from anywhere. Another flow is on the side of the lake, crossing it. Fencing was done by BDA. Doing the same thing again. Instead of spending crores of rupees again, a water treatment plant (STP) would have been enough. Apart from that, much attention has been paid to the beautification of the lake. I don't know how the lake development authority gave permission for this,' complained Kiran, a local.

BBMP going to spend like this...

  • 24 acres: Area of Amrutha Halli lake
  • ₹4 crore: Total amount sanctioned for lake development
  • ₹61.17 lakh: Lake roadside fencing, lake re-fencing
  • ₹54.46 lakh: U-shaped drain construction
  • ₹43.92 lakh: Regrading Diversion arrangement
  • ₹36.25 lakh: Formation of open Ground
  • ₹34.20 lakh: Dewatering and desilt the lake
  • ₹32.98 lakh: Silt trap construction
  • ₹26.71 lakh: Chain-link fencing
  • ₹21.69 lakh: Formation of Walkway Bund & Improvements bund
  • ₹16.86 lakh: Rock-fill embankment
  • ₹10 lakh: Construction of Inlet, Toilet, Drainage Development
  • ₹7.29 lakh: Drainage at the entrance

ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ;  

https://www.prajavani.net/district/bengaluru-city/amruthahalli-lake-five-crore-to-garbage-pit-1002987.html

Monday, January 2, 2023

Around Defence areas Building plans are not permitted


 Consent is also not available for renovation of old buildings under BBMP

Kere Manjunath, 2nd January 2023

Bengaluru: The no objection letter of the Defense Department has made it mandatory for any kind of building construction, reconstruction, including housing, in the areas around the defense areas in the city, which has put the citizens in trouble.

There are Defense Department areas at Hebbala, R.T.Nagar, Halasur, Banasawadi, Dommalur, Yelahanka Air Base, Jalahalli, Yelahanka.  BBMP is not allowing new construction plans in the area restricted by the edge of this area.

Many areas including Yelahanka, Jalahalli have been constructed with the permission of Grama Panchayat even before joining the BBMP.  Commercial buildings including residences, residential complexes are also approved under BBMP.  Certificate of Occupancy (OC) issued.  However, the plan is not giving permission for building construction in the plots in the same area.  Although there is a building next to it, it seems that the landlord has not constructed it.

The Deputy commissioner has instructed BDA, BBMP, BMRDA, Zilla Panchayat, BIAAPA, BMICAPA, Tehsildar of Urban District, Chikkabanavar, Hunasemaranahalli Municipality and Taluk Panchayats to obtain an no objection letter from the Defense Department before carrying out development work in the buffer zone of protected areas.

'Bangalore Municipal Corporation's Building Bye-laws - 2003 and Revised Master Plan - 2015 have not made any kind of amendments in the zoning regulations.  Thus, there are no rules to follow the instructions of the DC.  A letter has been written to inquire about it and detail the guidelines to be followed.  No information has been received so far,' said BBMP urban planning officials.

Urban planning officers of BBMP and zonal joint commissioners are saying that permission or no-objection letter (NOC) should be obtained from the defense department.  But, no one has the details of where to get it, which office, who to ask.  Citizens Ramesh, Ramakrishna, Venugopal and Bharat cried that the security guards would not let them in if asked where the Defense Department centers are.

If you follow the rules, it will be difficult...

We have built a house here for tens of years.  Plan approval is also obtained.  However, now the reconstruction plan is submitted for approval, BBMP is not giving consent.  A no-objection letter is required from the Defense Department.  There are four storied buildings around our house.  They have no restrictions.  Contractors for building construction, all materials have been advanced.  We are in a lot of trouble.  Pradeep of Yelahanka appealed to give quick relief.

No reply...

There is some hurdle in approving the plan of buildings around the area where the Defense Department has its centers.  The DC has directed to approve the plan only if there is an no objection letter from the Defense Department.  Some details including objections of citizens have been asked about this.  Girish, additional director of urban planning, BBMP, said that no clarification has come from the defense department.

Besides, certain guidelines have been issued including evacuation of tall buildings within a 5 km radius around the Yelahanka Air Training School runway.  All kinds of permission are obtained from the concerned departments and authorities and the buildings are constructed.  A letter was written to the director of Jakkur Airport Government Aviation Training School on 25th October, that clear details should be given on how to take action on these.  He said that there was no response from them.

Where are the restrictions?

There cannot be any construction within 10 meters of the compound of the Defense Department Centre.  The restriction is up to 100 meters from the compound of centers such as airfields.


ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ;

https://www.prajavani.net/district/bengaluru-city/no-building-map-around-defence-areas-is-agreed-in-bengaluru-1002432.html

Sunday, January 1, 2023

Bengaluru- The city of a thousand lakes – ಬೆಂಗಳೂರು: ಸಾವಿರ ಕೆರೆಗಳ ನಗರಿ


ಬೆಂಗಳೂರು: ಸಾವಿರ ಕೆರೆಗಳ ನಗರಿ 

ಗ್ರೀನ್‌ ಸಿಟಿ, ಉದ್ಯಾನನಗಳ ನಗರ, ಹವಾನಿಯಂತ್ರಿತ ನಗರ, ಸಿಲಿಕಾನ್‌ ಸಿಟಿ, ಐಟಿ ಸಿಟಿ ಎಂದು ಪ್ರಖ್ಯಾತವಾಗಿರುವ ಬೆಂಗಳೂರು, ಕೆರೆಗಳ ನಗರ ಅದರಲ್ಲೂ ಸಾವಿರ ಕೆರೆಗಳ ನಗರ ಎಂಬ ಪ್ರಸಿದ್ಧಿಯನ್ನೂ ಪಡೆದಿತ್ತು. ಆದರೆ, ಅಭಿವೃದ್ಧಿಯ ಭರಾಟೆಯಲ್ಲಿ ಹೊಸ ವ್ಯಾಖ್ಯಾನಗಳು ಅಪ್ಪಿಕೊಂಡ ಬೆಂದಕಾಳೂರು, ತನ್ನ ಮೂಲ ಸ್ವರೂಪಕ್ಕೇ ಕೊಳ್ಳಿ ಇಟ್ಟುಕೊಳ್ಳುತ್ತಾ ಸಾಗಿದೆ. ಅದಕ್ಕೇ ಅಂದು ಕುಡಿಯುವ ನೀರು ಕೊಟ್ಟ ಕೆರೆಗಳು ಇಂದು ಮನುಜನ ಮಾಲಿನ್ಯದ ತಾಣಗಳಾಗಿವೆ...

ಕರ್ನಾಟಕ ರಾಜ್ಯದಲ್ಲಿ ದಶಕದ ಹಿಂದೆ 33 ಸಾವಿರ ಕೆರೆಗಳು ಇವೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತಿದ್ದವು. ಆದರೆ, ಈಗ ರಾಜ್ಯದಲ್ಲಿ ಒಟ್ಟು 40,521 ಕೆರೆಗಳಿವೆ. ಅಂದರೆ ಕೆರೆಗಳು ಕಳೆದುಹೋಗಿದ್ದವು. ಹುಡುಕುತ್ತಾ ಹೋದಂತೆ ಎಲ್ಲವೂ ಸಿಗುತ್ತಿವೆ. ಈಗಿರುವ 40 ಸಾವಿರ ಕೆರೆಗಳ ಒಟ್ಟು ವಿಸ್ತೀರ್ಣ 7 ಲಕ್ಷದ 52 ಸಾವಿರ ಎಕರೆ. ಅಪವಾದವೆಂದರೆ ಇದರಲ್ಲಿ 38 ಸಾವಿರ ಎಕರೆ ಒತ್ತುವರಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 837 ಕೆರೆಗಳಿವೆ ಎಂದು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲೇ ತಿಳಿಸಿದೆ. 837 ಕೆರೆಗಳ ಒಟ್ಟು ವಿಸ್ತೀರ್ಣ, 28,264 ಎಕರೆ. ಇದರಲ್ಲಿ 4551 ಎಕರೆ ಒತ್ತುವರಿಯಾಗಿದೆ. 2145 ಎಕರೆ ತೆರವಾಗಿದೆ. ಇನ್ನು ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಪ್ರಕಾರ ಈ 837 ಕೆರೆಗಳನ್ನು ಹೊರತುಪಡಿಸಿ, 171 ಕಲ್ಯಾಣಿ, ಕುಂಟೆ, ಗೋಕಟ್ಟೆ, ಕಟ್ಟೆಗಳಿವೆ. ಅಂದರೆ ಬೆಂಗಳೂರಿನಲ್ಲಿ 1008 ಜೀವಂತ ಜಲಮೂಲಗಳಿವೆ. ಅಭಿವೃದ್ಧಿ ಹೆಸರಿನಲ್ಲಿ ಮಣ್ಣು, ಕಟ್ಟಡಗಳಲ್ಲಿ ಮುಳುಗಿಹೋಗಿರುವ ನೂರಾರು ಕೆರೆಗಳು ಈ ಲೆಕ್ಕದಲ್ಲಿ ಇಲ್ಲ. ಅಂದರೆ, ಸಾವಿರ ಕೆರೆಗಳ ನಗರಿ ಬೆಂಗಳೂರು ಎಂಬುದು ಈಗಲೂ ಪ್ರಸ್ತುತವೇ... ಅದೇ ನಮ್ಮ ಹೆಮ್ಮೆ...

ಕಲುಷಿತ

ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ನೀಡಿರುವ ವರದಿಯಂತೆ ರಾಜ್ಯದಲ್ಲಿ 8,579 ಕೆರೆಗಳು ಕಲುಷಿತವಾಗಿವೆ. ಬೆಂಗಳೂರು ನಗರದಲ್ಲಿರುವ 837 ಕೆರೆಗಳೂ ಕಲುಷಿತ. ಅಂದರೆ ನಾವು ಕೆರೆಗಳನ್ನು ಎಷ್ಟು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದೇವೆ ಎಂಬುದು ಅರಿವಾಗುತ್ತದೆ.

ಏಷ್ಯಾದ ಯಾವುದೇ ನಗರ ಬೆಳೆಯದ ವೇಗದಲ್ಲಿ ಬೆಂಗಳೂರು ಬೆಳೆದಿದೆ, ಬೆಳೆಯುತ್ತಲೂ ಇದೆ. ಇಂತಹ ಅಭಿವೃದ್ಧಿ ವೇಗದಲ್ಲಿ ಪರಿಸರವನ್ನು ಲೆಕ್ಕಕ್ಕೆ ಇರಿಸಿಕೊಳ್ಳದ್ದೇ ಇಂದಿನ ಹವಾಮಾನ ವೈಪರೀತ್ಯದಂತ ಸಮಸ್ಯೆಗಳಿಗೆ ಪ್ರಮುಖ ಕಾರಣ. ಹವಾನಿಯಂತ್ರಿತ ನಗರ ಎಂಬ ಹೆಸರು ಬಂದಿದ್ದು ಸುಮ್ಮನೆ ಅಲ್ಲ. ಇಲ್ಲಿನ ಕೆರೆಗಳ ಪರಿಸರದಿಂದಲೇ ಈ ಪ್ರಖ್ಯಾತಿಯನ್ನು ನಗರ ಗಳಿಸಿದ್ದು. ಆದರೆ, ಇಂದು ಹೈಟೆಕ್‌ ಅಭಿವೃದ್ಧಿ ಕಂಡ ಕೆರೆಗಳೂ ಸೇರಿದಂತೆ ನಗರದ ಕೆರೆಗಳ ಬಳಿ ನಿಂತುಕೊಂಡರೆ ವಾಸನೆ ಸಹಿಸಲು ಸಾಧ್ಯವಿಲ್ಲದಂತಾಗಿದೆ. ಅಭಿವೃದ್ಧಿಯಾದ ಮೇಲೂ ಕೆರೆಗಳಲ್ಲಿ ಮಾಲಿನ್ಯ ದೂರವಾಗಿಲ್ಲ. ಒಳಚರಂಡಿಯ ಹೊಲಸು ಕೆರೆಗಳನ್ನು ಸೇರುವುದು ನಿಂತಿಲ್ಲ. ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿ ವಿಷಯದಲ್ಲಿ ಎದುರಿಸುತ್ತಿರುವ ಪ್ರಮುಖ ಅಂಶಗಳಲ್ಲಿ ಒಳಚರಂಡಿ ಕಲ್ಮಶಕ್ಕೇ ಪ್ರಥಮ ಸ್ಥಾನ.

ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಗೆ ಪ್ರಮುಖವಾಗಿ ತೊಡಕಾಗಿರುವುದು ಎರಡು ಅಂಶಗಳು. ಒಂದು ಒತ್ತುವರಿ, ಮತ್ತೊಂದು ಮಾಲಿನ್ಯ.

ಒತ್ತುವರಿ.. 

ಕೆರೆಗಳ ಅಭಿವೃದ್ಧಿಗೆ ಹಣವಿಲ್ಲ ಎಂಬ ಸಮಸ್ಯೆ ಇಲ್ಲ. 2009–10ನೇ ಸಾಲಿನಿಂದ ರಾಜ್ಯ ಸರ್ಕಾರ ಪ್ರತಿ ವರ್ಷವೂ ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿ ನೀಡುತ್ತಲೇ ಇದೆ. ಆದರೆ, ಕೆರೆಗಳ ಒತ್ತುವರಿ ಬೆಂಗಳೂರಿನಲ್ಲಿ ಸಹಜ ಎಂಬ ಮಾತಿದೆ. ಎಲ್ಲಿ ಕೆರೆ ಇದೆಯೋ ಅಲ್ಲೆಲ್ಲ ಒತ್ತುವರಿಯಾಗಿರುವುದು ಕಂಡುಬರುತ್ತದೆ. ಬೆಂಗಳೂರಿಗೆ ಪ್ರಥಮವಾಗಿ ಕುಡಿಯುವ ನೀರು ಕೊಟ್ಟ, ನಗರ ನಿರ್ಮಾತೃ ಕೆಂಪೇಗೌಡರು ಕಟ್ಟಿದ ಧರ್ಮಾಂಬುಧಿ ಕೆರೆಯನ್ನು ಸರ್ಕಾರವೇ ಒತ್ತುವರಿ ಮಾಡಿಕೊಂಡು ಬಸ್‌ ನಿಲ್ದಾಣ ಮಾಡಿದೆ. ಅದೇ ಇಂದಿನ ಮೆಜೆಸ್ಟಿಕ್‌. ಅದಾದ ಮೇಲೆ, ಫುಟ್‌ಬಾಲ್‌, ಹಾಕಿ, ಒಳಾಂಗಣ, ಕ್ಲಬ್‌, ರಸ್ತೆ, ಬಡಾವಣೆ ನಿರ್ಮಾಣಕ್ಕೆ ಹಲವು ಕೆರೆಗಳು ಮಾಯವಾದವು. ಇನ್ನು ಉಳಿದ ಕೆರೆಗಳಲ್ಲಿ ಅಲ್ಲಲ್ಲಿ ಖಾಸಗಿ ಒತ್ತುವರಿಯಾಗಿವೆ. ಇವುಗಳ ತೆರವು ಅಭಿವೃದ್ಧಿಗೆ ಹಿನ್ನಡೆಯಾಗಿದೆ. 

ಒಳಚರಂಡಿ ಕಲ್ಮಶ

ಬೆಂಗಳೂರಿನ 93 ಕೆರೆಗಳು ಸುಮಾರು ₹500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಂಡಿವೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೈಟೆಕ್‌ ಅಭಿವೃದ್ಧಿ ಕಂಡಿದ್ದರೂ, ಅದಕ್ಕೆ ಹರಿಯುವ ಒಳಚರಂಡಿ ನೀರಿಗೆ ತಡೆಹಾಕಲು ಸಾಧ್ಯವಾಗಿಲ್ಲ. ಬಿಡಬ್ಲ್ಯುಎಸ್‌ಎಸ್‌ಬಿ ಒಳಚರಂಡಿ ನೀರನ್ನು ರಾಜಕಾಲುವೆಯಲ್ಲೇ ಹರಿಸುತ್ತಿದೆ. ಇದು ಕೆರೆಗಳಿಗೆ ಹರಿಯುತ್ತಿದ್ದರೂ, ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಇದಕ್ಕೆ ತಡೆಹಾಕುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆಲವು ಕೆರೆಗಳ ಮಧ್ಯೆಯೇ ಒಳಚರಂಡಿ ನೀರಿನ ಪೈಪುಮಾರ್ಗ ಹಾದುಹೋಗುತ್ತಿದೆ.

ಕೈಗಾರಿಕೆ ತ್ಯಾಜ್ಯ

ಕೆರೆಗಳು ಕಸ, ದ್ರವ ತ್ಯಾಜ್ಯ ಹಾಗೂ ಕೈಗಾರಿಕೆ ತ್ಯಾಜ್ಯದ ಸಮಸ್ಯೆಯಿಂದ ಹೊರತಾಗಿಲ್ಲ. ನಾಗರಿಕರು ಎಸೆಯುವ ಕಸದ ಜೊತೆಗೆ ರಾಜಕಾಲುವೆಯಿಂದ ಪ್ಲಾಸ್ಟಿಕ್‌ ಸೇರಿದಂತೆ ಹಲವು ರೀತಿಯ ಕಸ ಸೇರಿಕೊಳ್ಳುತ್ತಿದೆ. ಇನ್ನು ಕೆರೆಗಳ ಪಕ್ಕದಲ್ಲೇ ಕಸ ವಿಂಗಡಣೆ ಮಾಡಿ ಕಾಂಪ್ಯಾಕ್ಟರ್‌ಗಳಿಗೆ ತುಂಬುವುದರಿಂದ ದ್ರವ ತ್ಯಾಜ್ಯ ಕೆರೆಗಳಿಗೆ ಹರಿಯುತ್ತಿದೆ. ಕೈಗಾರಿಕೆಗಳಿಂದ ಬರುವ ರಾಸಾಯನಿಕ ತ್ಯಾಜ್ಯ ಕೆರೆಗಳಿಗೇ ಹೋಗುತ್ತಿದೆ.

ಕೆರೆ ಮತ್ತು ಮಾಧ್ಯಮ..

ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯಲ್ಲಿ ಮಾಧ್ಯಮದ ಪಾತ್ರ ಮಹತ್ತರವಾಗಿಯೇ ಇದೆ ಎಂದು ಹೇಳಬೇಕು. ನಗರದಲ್ಲಿರುವ ಬಹುತೇಕ ಕೆರೆಗಳಿಗೆ ನಾಗರಿಕ ಸಂಘಗಳಿವೆ. ಇವುಗಳು ಕೆರೆ ರಕ್ಷಣೆ ಬಗ್ಗೆ ಹೋರಾಟ ಮಾಡುತ್ತಲೇ ಇರುತ್ತವೆ. ಇವರು ನೀಡುವ ಮಾಹಿತಿ, ಮಾಧ್ಯಮಗಳು ನಡೆಸುವ ತನಿಖೆಗಳಿಂದ ಹಲವು ವರದಿಗಳು ಪ್ರಕಟವಾಗುತ್ತಿವೆ. ಇವುಗಳಿಂದ ಹಲವು ಕೆರೆಗಳು ಉಳಿದಿವೆ ಎಂಬುದು ಸಂತಸದ ವಿಷಯ.

Friday, August 16, 2013

ಎಚ್ಚರ ಅಪಾರ್ಟ್ ಮೆಂಟ್!!!


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 16-08-2013

Saturday, August 10, 2013

ಒತ್ತುವರಿ ಸುಳಿಯಲ್ಲಿ 46 ಕೆರೆ

ಬೆಂಗಳೂರು ನಗರ ಜಿಲ್ಲೆಯ ತಹಸೀಲ್ದಾರರ ನಿರ್ಲಕ್ಷ್ಯದಿಂದ 46 ಕೆರೆಗಳು ಒತ್ತುವರಿಯ ಸುಳಿಯಲ್ಲೇ ನಲುಗುತ್ತಿವೆ. ಸಣ್ಣ ನೀರಾವರಿ ಇಲಾಖೆಯಿಂದ ಸಾಕಷ್ಟು ಬಾರಿ ಸರ್ವೆ ಕಾರ್ಯ ಹಾಗೂ ಒತ್ತುವರಿ ತೆರವಿಗೆ ಸೂಚನೆ ಬಂದಿದ್ದರೂ ಅದನ್ನು ತಹಸೀಲ್ದಾರರು ನಿರ್ವಹಿಸುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವರ್ಷದಲ್ಲಿ 12 ಸಾವಿರ ಕೆರೆಗಳ ಸರ್ವೆ ನಡೆಸಿ, ಅವುಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ವರ್ಷಗಳಿಂದ ಕೆರೆಗಳ ಸರ್ವೆ ನಡೆದಿಲ್ಲ. ಇದಕ್ಕೆ ಕಾರಣ ಕಂದಾಯ ಇಲಾಖೆ. ತಹಸೀಲ್ದಾರರೇ ಈ ಕೆರೆಗಳ ಸರ್ವೆ ನಡೆಸಬೇಕು. ಸರ್ವೆ ನಡೆದರೆ ಒತ್ತುವರಿ ತೆರವಾಗುತ್ತಲ್ಲ ಎಂಬ ದೂ(ದು)ರಾಲೋಚನೆಯಿಂದ ಕಡತ ಮುಂದುವರಿಯುತ್ತಲೇ ಇಲ್ಲ.
ರಾಜ್ಯದ 33 ಸಾವಿರ ಕೆರೆಗಳ ಬಹುತೇಕ ಕೆರೆಗಳ ಸ್ಥಿತಿಯೂ ಇದೇ ರೀತಿಯಲ್ಲಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ವೆ ತಡೆ ಪ್ರಭಾವ ಅತಿಯಾಗಿದೆ. ಇದಕ್ಕೆ ಇಲ್ಲಿನ ರಾಜಕಾರಣಿಗಳು ಹಾಗೂ ಭೂದಾಹಿಗಳೇ ಕಾರಣ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊರತಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 47 ಕೆರೆಗಳ ಒಳಪಡುತ್ತವೆ. ಇದರಲ್ಲಿ ಒಂದು ಕೆರೆಯನ್ನು ಬಿಡಿಎಗೆ ಹಸ್ತಾಂತರಿಸಲಾಗಿದೆ. ಉಳಿದ 46 ಕೆರೆಗಳನ್ನು ಐದಾರು ವರ್ಷಗಳಿಂದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಈವರೆಗೆ ಒಂದು ಕೆರೆಯ ಅಭಿವೃದ್ಧಿಯೂ ಪೂರ್ಣಗೊಂಡಿಲ್ಲ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 46 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿವೆ. ಇದರಲ್ಲಿ 39 ಕೆರೆಗಳು ಒತ್ತುವರಿಯಾಗಿವೆ. 148.49 ಹೆಕ್ಟೇರ್ (366 ಎಕರೆ) ಪ್ರದೇಶ ಒತ್ತುವರಿಯಾಗಿದೆ. 110.78 ಹೆಕ್ಟೇರ್ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದ್ದರೂ, ಕೆರೆಗಳಿಗೆ ಬೇಲಿ ಹಾಕುವ ಕಾರ್ಯ ಆಗಿಲ್ಲ. ಏಕೆಂದರೆ ಗಡಿ ಪ್ರದೇಶ ಗುರುತಾಗಿಲ್ಲ.
ಆನೇಕಲ್‌ನಲ್ಲೇ ಹೆಚ್ಚು: ಸಣ್ಣ ನೀರಾವರಿ ಇಲಾಖೆಗೆ ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲೇ 26 ಕೆರೆಗಳಿವೆ. ಈ ಕೆರೆಗಳ ಒಟ್ಟು ವಿಸ್ತೀರ್ಣ 1211.37 ಹೆಕ್ಟೇರ್ (2993 ಎಕರೆ). ಈ 26 ಕೆರೆಗಳ ಸರ್ವೆಯಲ್ಲೇ ಸಾಕಷ್ಟು ವಿಳಂಬವಾಗುತ್ತಿದೆ. ಕೆರೆಗಳ ಸರ್ವೆ ಕಾರ್ಯಕ್ಕೆ ಇಲಾಖೆ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದರೂ ಇನ್ನೂ ಸರ್ವೆ ಕಾರ್ಯ ನಡೆಸಿಲ್ಲ. ಹೀಗಾಗಿ ಬೇಲಿ ನಿರ್ಮಿಸುವ ಪ್ರಥಮ ಕಾರ್ಯವೂ ಆಗಿಲ್ಲ.
ಆನೇಕಲ್ ತಾಲೂಕಿನಲ್ಲಿ ಬಹುಮಹಡಿ ಕಟ್ಟಡಗಳು ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆ ಹೆಚ್ಚಿರುವುದರಿಂದ ಕೆರೆಗಳ ಒತ್ತುವರಿ ಅತಿಹೆಚ್ಚಾಗಿದೆ. ಇಲ್ಲಿ ಸರ್ವೆ ಮಾಡಿದರೆ ಸಾಕಷ್ಟು ಕಟ್ಟಡಗಳು ನೆಲಸಮವಾಗಬೇಕಾಗುತ್ತದೆ. ಇದನ್ನು ತಡೆಯುವ ದೃಷ್ಟಿಯಿಂದ ಪಟ್ಟಭದ್ರ ಹಿತಾಸಕ್ತಿಗಳು ತಹಸೀಲ್ದಾರರ ಮೇಲೆ ಪ್ರಭಾವ ಬೀರುತ್ತಿವೆ. ಇದಕ್ಕೆ ತಹಸೀಲ್ದಾರ್ ಮಣಿದಿದ್ದಾರೆ. ಅದಕ್ಕೇ ಕೆರೆಗಳ ಒತ್ತುವರಿ ಹಾಗೇ ಉಳಿದುಕೊಂಡಿದೆ ಎಂಬ ಆರೋಪ ಬಲವಾಗಿದೆ.

ಬೆಂ.ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳು
ಪೂರ್ವ ತಾಲೂಕು: ರಾಂಪುರ ಕೆರೆ, ಬಿದರಹಳ್ಳಿ ಕೆರೆ, ದೊಡ್ಡಗುಬ್ಬಿ ಕೆರೆ, ಕೊಡತಿ ಕೆರೆ, ಎಲೆಮಲ್ಲಪ್ಪಶೆಟ್ಟಿ ಕೆರೆ.
ಉತ್ತರ ತಾಲೂಕು: ಸಿಂಗನಾಯಕನಹಳ್ಳಿ ಕೆರೆ, ಬಾಗಲೂರು ಕೆರೆ, ದೊಡ್ಡಜಾಲ ಕೆರೆ, ಆಲೂರು ಕೆರೆ, ಬಂಡೆಕೊಡಗಿಹಳ್ಳಿ ಕೆರೆ, ಅಡ್ಡೆ ವಿಶ್ವನಾಥಪುರ ಕೆರೆ, ಮಹದೇವಕೊಡಿಗೆಹಳ್ಳಿ ಕೆರೆ, ಸೊಂಡೆಕೊಪ್ಪ ಕೆರೆ, ಕಾಚಕನಹಳ್ಳಿ ಕೆರೆ.
ದಕ್ಷಿಣ ತಾಲೂಕು: ಚಿಕ್ಕಲಿಂಗಶಾಸ್ತ್ರಿ ಕೆರೆ, ಗುಳಕಮಲೆ ಕೆರೆ, ವಡೇರಹಳ್ಳಿ ಕೆರೆ, ಊದಿಪಾಳ್ಯ ಕೆರೆ, ಅಗರ ಕೆರೆ.
ಆನೇಕಲ್ ತಾಲೂಕು:  ಮುತ್ತನಲ್ಲೂರು ಅಮಾನಿ ಕೆರೆ, ಕರ್ಪೂರ ಕೆರೆ, ಬಿದರಗುಪ್ಪೆ ಅಮಾನಿ ಕೆರೆ, ಮಾಯಸಂದ್ರ ದೊಡ್ಡ ಕೆರೆ, ಮುಗಳೂರು ಕೋಡಿ ಕೆರೆ, ಮರಸೂರು ದೊಡ್ಡ ಕೆರೆ, ಅರೆಹಳ್ಳಿ ದೊಡ್ಡ ಕೆರೆ, ಸರ್ಜಾಪುರ ಕೆರೆ, ಪಂಡಿತನ ಅಗ್ರಹಾರ ಕೆರೆ, ಬೊಮ್ಮಸಂದ್ರ ಕೆರೆ, ಗಟ್ಟಿಹಳ್ಳಿ ಬೊಮ್ಮನಕೆರೆ, ಹುಸ್ಕೂರು ಕೆರೆ, ಸಿಂಗೇನಹಳ್ಳಿ ಅಗ್ರಹಾರ ಕೆರೆ, ಸರ್ಜಾಪುರ ಚಿಕ್ಕಕೆರೆ, ಬೊಮ್ಮುಂಡಹಳ್ಳಿ ಕೆರೆ, ಹೆನ್ನಾಗರ ಅಮಾನಿ ಕೆರೆ, ಬ್ಯಾಟರಾಯನದೊಡ್ಡಿ ಕೆರೆ, ಹುಲಿಮಂಗಲ ಕೆರೆ, ಸಕಲವಾರ ಭುಜಂಗದಾಸನ ಕೆರೆ, ಬಿದರಿ ಅಮಾನಿ ಕೆರೆ, ಜಿಗಣಿ ದೊಡ್ಡ ಕೆರೆ, ಹಾರಗದ್ದೆ ದೊಡ್ಡ ಕೆರೆ, ಬಗ್ಗನದೊಡ್ಡಿ ಕೆರೆ, ಆನೇಕಲ್ ರಾಜನಕೆರೆ, ಆನೇಕಲ್ ದೊಡ್ಡಕೆರೆ, ಬಿದರಕೆರೆ ದೊಡ್ಡಕೆರೆ.

ಕೆರೆಗಳ
ಸರ್ವೆಗೆ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಸರ್ವೆ ನಡೆದ ಮೇಲೆ ಅವರೇ ಒತ್ತುವರಿ ತೆರವುಗೊಳಿಸಿಕೊಡಬೇಕು. ಕೆರೆಗಳಿಗೆ ಕಲುಷಿತ ನೀರು- ತ್ಯಾಜ್ಯ ಸೇರದಂತೆ ತಡೆಗಟ್ಟಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
- ಶಿವರಾಜ್ ಎಸ್. ತಂಗಡಗಿ, ಸಣ್ಣ ನೀರಾವರಿ ಸಚಿವ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 10-08-2013

Thursday, August 1, 2013

ಸರ್ಕಾರಿ ಭೂಮಿ ಒತ್ತು'ವರಿ'- ಓದುಗ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 01-08-2013

ಸರ್ಕಾರಿ ಭೂಮಿ ಒತ್ತು'ವರಿ'- ಓದುಗ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 31-07-2013

ಸರ್ಕಾರಿ ಭೂಮಿ ಒತ್ತು'ವರಿ'- ಡಿ.ವಿ. ಸದಾನಂದಗೌಡ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 30-07-2013

ಸರ್ಕಾರಿ ಭೂಮಿ ಒತ್ತು'ವರಿ'- ಓದುಗ


 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 30-07-2013

ಸರ್ಕಾರಿ ಭೂಮಿ ಒತ್ತು'ವರಿ'- ರಾಜ್ಯಪಾಲ


 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 28-07-2013

ಭೂಮಾಪಕರ ಮುಷ್ಕರ

ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 29-07-2013

ಭೂಮಾಪಕರ ಆಯ್ಕೆ

 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 28-07-2013

Friday, July 26, 2013

ಸರ್ಕಾರಿ ಭೂಮಿ ಒತ್ತು'ವರಿ'-10 ಎಚ್ .ಡಿ.ಕುಮಾರಸ್ವಾಮಿ ಸಂದರ್ಶನ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 24-07-2013

ಸರ್ಕಾರಿ ಭೂಮಿ ಒತ್ತು'ವರಿ': ಎಚ್ .ಡಿ. ಕುಮಾರಸ್ವಾಮಿ ಸಂದರ್ಶನ 

ರಾಜಕಾರಣಿಗಳಿಂದಲೇ ಭೂ ಕಬಳಿಕೆ!

ರಾಜಕಾರಣಿಗಳು, ಹಿಂಬಾಲಕರು, ಹಿತೈಷಿಗಳೂ ಎಲ್ಲರೂ ಫಲಾನುಭವಿಗಳು

Kere Manjunath ಕೆರೆ ಮಂಜುನಾಥ್ 

ವಿ. ಬಾಲಸುಬ್ರಮಣಿಯನ್ ಕಾರ್ಯಪಡೆ ವರದಿಯಂತೆ ಈಗಲಾದರೂ ಸರ್ಕಾರ ತತ್ , ಕ್ಷಣದಿಂದಲೇ ಒತ್ತುವರಿ ತೆರವುಗೊಳಿಸಬೇಕು ಎಂದು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ | ಬೆಂಗಳೂರು | ಜು.23 ರಾಜಕಾರಣಿಗಳು, ಅವರ ಹಿಂಬಾಲಕರು ಹಿತೈಷಿಗಳೂ ಸರ್ಕಾರಿ ಭೂ ಕಬಳಿಕೆಯಲ್ಲಿ ಇದ್ದಾರೆ. ಇದರಲ್ಲಿ ಪಕ್ಷ ಬೇಡ ಇಲ್ಲ. ಎಲ್ಲ ನಾಯಕರ ಜತೆ ಒಡನಾಟ ಇಟ್ಟುಕೊಂಡವರು ಭೂಮಿ ಕಬಳಿಸಿದ್ದಾರೆ. ಸರ್ಕಾರ ಸಮಯ ವ್ಯರ್ಥ ಮಾಡಬಾರದು. ಈ ನಿಟ್ಟಿನಲ್ಲಿ ಅತ್ಯಂತ ಕಠಿಣ ನಿರ್ಧಾರ ಮಾಡಬೇಕು.....
ನನ್ನ ಅವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು: ವಿಚಾರದಲ್ಲಿ ಯಾವುದೇ ಒತ್ತಡದ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ, 900) ಎಕರೆ ಭೂಮಿ ವಾಪಸ್ ಪಡೆಯಲಾ ಯಿತು. ನಂತರ ಬಂದ ಸರ್ಕಾರಗಳು ಸಹಿ ವರದಿಗಳತ್ತ ಗಮನಹರಿಸಲೇ ಇಲ್ಲ
ಸ್ವಾಮಿ ಅವರ ಸ್ಪಷ್ಟ ನುಡಿಗಳಿವು 'ಕನ್ನಡಪ್ರಭ' ರಾಜ ದಲ್ಲಿ ಪ್ರಕಟವಾದ ಒತ್ತು'ವು' ಲೇಖನಮಾಲೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಎಚ್‌.ಡಿ. ಕುಮಾ ರಸ್ವಾಮಿ, ಈಗಾಗಲೇ ಸಾಕಷ್ಟು ಸಮಯ ವ್ಯರ್ಥ ಆಗಿದೆ. ಎ.ಟಿ. ರಾಮಸ್ವಾಮಿ ಹಾಗೂ
ಸಂದರ್ಶನದ ಸಾರಾಂಶ: ನಾನು ಮುಖ್ಯ ಮಂತ್ರಿಯಾಗಿದ್ದಾಗ ಜಂಟಿ ಸದನ ಸಮಿತಿ ರಚನೆ ಮಾಡುವುದರಿಂದ ಏನೂ ಉಪಯೋ ಗಕ್ಕೆ ಬರುವುದಿಲ್ಲ ಎಂದಿದ್ದರು. ಆದರೂ ಸ್ಪೀಕರ್ ಅವರಿಗೆ ಸದನ ಸಮಿತಿ ರಚನೆ ಮಾಡಿ ಎಂದು ನಾನೇ ಹೇಳಿದೆ. ಎ.ಟಿ. ರಾಮ ಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಸದನ ಸಮಿತಿಯವರು ಕೊಟ್ಟ ಮಧ್ಯಂತರ ಏಕರೆ ಭೂಮಿ ವಾಪಸ್‌ ಪಡೆದುಕೊಳ್ಳಲು ಒತ್ತುವರಿ ತೆರವು ಮಾಡಲಾಯಿತು, ಸುಳ್ಳು ಅವರು
ಕಾರಣಕ್ಕೂ ರಾಜಿ ಇಲ್ಲ ಎಂದು ಹೇಳಿದ್ದೆ. ಇತರೆ ಸದನ ಸಮಿತಿಗಳಿಂತ ಅತ್ಯಂತ ಪರಿ
ಗಾಮಕಾರಿಯಾಗಿ ಕೆಲಸ ಮಾಡಿದೆ. ಜಂಟಿ
ಒತ್ತುವರಿ
ವಂತೆ ಸದನ ಸಮಿತಿ ಶಿಫಾರಸು ಮಾಡಿತ್ತು ಅದರಂತೆ ಕಾರ್ಯ ನಿರ್ವಹಿಸಿದೆ.
ಕಾಲಮಿತಿ ನಿಗದಿ ಮಾಡಿ: ಕಾಫಿ ಪ್ಲಾಂಟ ವರದಿ ಆಧಾರದ ಮೇಲೆ ಸುಮಾರು 9000 ‌ಗಳು ಸಾಕಷ್ಟು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಭೂಮಿ ಎಂಬುದಕ್ಕೆ ಅವಕಾಶ ಬೇಡ. ತೆರವುಗೊಳಿಸಬೇಕು. ಕಂದಾಯ ಭೂಮಿಯಲ್ಲಿ
• ಸಮಯ ವ್ಯರ್ಥ ಮಾಡದೆ
ಕೈಗೊಳ್ಳಲಿ: ಎಚ್‌ಡಿಕೆ
* ಒತ್ತು'ವರಿ' ಲೇಖನಮಾಲೆ ಬಗ್ಗೆ ವಿಧಾನಸಭೆ ವಿರೋಧ ಪಕ್ಷ ನಾಯಕ ಪ್ರಶಂಸೆ
ರುತ್ತಾರೆ. ಇದರಿಂದ ಪರಿಸರ ಉಳಿಸಿಕೊಂಡು ಭಾಗುತ್ತದೆ. ಅವರನ್ನು ಒಕ್ಕಲೆಬ್ಬಿಸಿ ಅಡಕೆ, ಕಾಫಿ, ಕಡಿಯುವುದು ಸರಿಯಲ್ಲ, ಇದಕ್ಕೊಂದು ಕಾಲ ಮಿತಿ ನಿಗದಿ ಮಾಡಿ, ಸದನಕ್ಕೆ ತರಬೇಕು, ಗಮನ ಕೊಡಲೇ ಇಲ್ಲ, ಮುಂದೆಯೂ ಇಂತಹದ್ದೇ ಸಕ್ರಮ ಆಗುತ್ತದೆ.
ವಣೆ ನಿರ್ಮಾಣ ಮಾಡುವ ಘೋಷಣೆ ಪ್ರತಿಪಕ್ಷ ನಾಯಕ ಎಚ್‌.ಡಿ. ಕುಮಾರ ಯಿತು, ಕಂದಾಯ ಭೂಮಿ ಒತ್ತುವರಿ ಜತೆಗೆ ಯಾರಿಗೂ ತೊಡಲು ಬರುವದಿಲ್ಲ. ಅದನ್ನು ಬಿಡಿಎಗೆ ಸ್ವಾಧೀನವೇ ಬೇಕಿಲ್ಲ: ಮಧ್ಯಮ ಮಾಡಿದೆ. ಇವತ್ತು ನಾವು ಪಿ. ಬಾಲಸುಬ್ರಮ ಬಾಕಿ ಉಳಿದಿರುವ ಬಡಾವಣೆಗಳಲ್ಲಿ ತತಕ್ಷ ನಯನ್ ಹಾಗೂ ಎಟಿ ರಾಮಸ್ವಾಮಿ ವರದಿ ನೋಡಿದರೆ, ಬೆಂಗಳೂರು ಹಾಗೂ ಸುತ್ತಮುತ್ತ
ಹಾಗೂ ಕೆಳ ಮಧ್ಯಮ ವರ್ಗದವರು ಅವರ ಜೀವನವೆಲ್ಲ ದುಡಿದರೂ ಒಂದು ನಿವೇಶನ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಅದಕ್ಕೊಂದು ದರ ನಿಗದಿ ಮಾಡಿ ವರ್ಷಕ್ಕೆ ಖರೀದಿಸಲು ಆಗುವುದಿಲ್ಲ. ಹೀಗಾಗಿ, ಈ ಬಡಾವಣೆ ನಿರ್ಮಿಸಲು ರೈತರ ಭೂಮಿ ಸ್ವಾರ್ಧಿ ಹಾಗೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಅಂತಹ ಇಷ್ಟು ಎಂದು ಹಣ ಸಂದಾಯ ಮಾಡಿಸಿಕೊಳ್ಳ ಒತ್ತುವರಿ ತೆರವು ಮಾಡಿದ ಭೂಮಿಯಲ್ಲಿ ನಪಡಿಸಿಕೊಳ್ಳುವ ಅಗತ್ಯವೇ ಇಲ್ಲ. ಸರ್ಕಾರಿ ಜಮೀನು ಗುತ್ತಿಗೆ ನೀಡಲಾಗಿದೆ. ಅವುಗಳ ವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳು ಬೇಕು. ಅವರು ಅಲ್ಲಿ ಉತ್ತಮವಾದ ಬೆಳೆ ಹಾಕಿ 700-800 ಎಕರೆ ಭೂಮಿಯನ್ನು ಬಿಡಿಎಗೆ ಭೂಮಿ ಒತ್ತುವರಿ ತೆರವುಗೊಳಿಸಿದ ಭೂಮಿ ಮೂಲ ಫೈಲೇ ಕಾಣೆ ಆಗುತ್ತಿವೆ.
ಕೆರೆ-ಕುಂಟೆಗಳ
ಒತ್ತುವರಿ ಮಾಡಿಕೊಂಡಿದ್ದರೆ,
ಯಲ್ಲೇ ವಸತಿ ಕಲ್ಪಿಸಬಹುದು. ಬಿಡಿಎಯಲ್ಲಿ 10 ವರ್ಷ 15 ವರ್ಷ ಬಡಾವ ರಚನೆ ಆಗುತ್ತಿಲ್ಲ. ಇಂದು ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವುದೇ ಡಿನೋಟಿಫೈಗೆ ಕಾರಣವಾಗಿದೆ, ಉದಾಹರಣೆ ಕೆಪೆಗೌಡ ಬಡಾವಣೆಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ 700- 8 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ನಂತರ ನೋಟಿಫೈ ಮಾಡಲಾಗುತ್ತದೆ. ಸ್ವಾಧೀ ನದ ಬಗ್ಗೆ ಸಂಶಯ ಮೂಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು,
ಮಂಜೂರು ಮಾಡಿದ. ಅಲ್ಲಿ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿ ಮನೆಗಳನ್ನು ನೀಡಿ ಎಂದು ಆದೇಶಿಸಿದ್ದೆ, ಆದರೆ ಯಾರೂ ಅತ್ತ
ಬಡಾವಣೆ ನಿರ್ಮಾಣ ಮಾಡಿ, ಬಿಎ ನಿವೇಶನಕ್ಕಾಗಿ ಬಡವರು ಅಥವಾ ನಿವೇಶನ ದಾರರು ಹಣ ಕಟ್ಟಿರುತ್ತಾರೆ. ಬಡಾವಣೆ
ನಿರ್ಮಾಣವಾಗದೆಯೇ ಹಂಚಿಕೆ ಮಾಡು 2007ರಲ್ಲಿ ಬೆಂಗಳೂರಿನಲ್ಲಿ ಐದು ಬಡಾ ತ್ತಾರೆ. ಹೀಗಾಗಿ ಎಲ್ಲ ಸೌಲಭ್ಯ ಮೊದಲೇ ಮಾಡಿ, ನಂತರ ಹಂಚಿಕೆ ಮಾಡಬೇಕು, ಈಗ ಣವೇ ಬಡಾವಣೆ ನಿರ್ಮಾಣ ಮಾಡಿ ನಿವೇ ಶನ ಹಂಚಿಕೆ ಮಾಡಬೇಕು. ಬೆಂಗಳೂರು

ಸರ್ಕಾರಿ ಭೂಮಿ ಒತ್ತು'ವರಿ'- ವಿಧಾನಸಭೆ



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 24-07-2013

ಸರ್ಕಾರಿ ಭೂಮಿ ಒತ್ತು'ವರಿ'-9


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 23-07-2013

ಸರ್ಕಾರಿ ಭೂಮಿ ಒತ್ತು'ವರಿ'-8 ವಿ. ಬಾಲಸುಬ್ರಮಣಿಯನ್ ಸಂದರ್ಶನ



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 22-07-2013

ಭೂ ಒತ್ತುವರಿಗೆ ರಾಜಕಾರಣಿಗಳದ್ದೇ ಶ್ರೀರಕ್ಷೆ!

Kere Manjunath ಕೆರೆ ಮಂಜುನಾಥ್

ಬೆಂಗಳೂರು: ರಾಜಕಾರಣಿಗಳು, ಸರ್ಕಾರಿ ನೌಕರರು ಹಾಗೂ ಭೂಮಾಫಿಯಾದವರೇ ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಗೆ ಪ್ರಮುಖ ಕಾರಣೀಭೂತರು.

ರಾಜಕಾರಣಿಗಳು ಅವರು ಯಾವುದೇ ಪಕ್ಷವಾಗಿರಲಿ ಅವರೇ ಭೂ ಒತ್ತುವರಿಯ ಪ್ರಮುಖ ಪಾತ್ರಧಾರಿಗಳು. ಅವರ ಜತೆಗೆ ಭೂ ಮಾಫಿಯಾ. ಬೆಂಗಳೂರು, ಹುಬ್ಬಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಮಂಗಳೂರಲ್ಲಿ ಭೂಮಿ ಮೌಲ್ಯ ಬಹಳ ಇದೆ. ಭೂಮಾಫಿಯಾದವರು ರಾಜಕಾರಣಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಾರೆ. ಅಪಾರ್ಟ್‌ಮೆಂಟ್ ಕಟ್ಟಿಸುತ್ತಾರೆ. ಅದರಲ್ಲಿ ಒಂದೆರಡು ಫ್ಲ್ಯಾಟ್‌ಗಳು ಶಾಸಕರಿಗೇ ಕೊಟ್ಟುಬಿಡುತ್ತಾರೆ...

ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕಾರ್ಯಪಡೆಯ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಅವರ ನೇರ ನುಡಿಗಳಿವು. ಸರ್ಕಾರಿ ಭೂ ಒತ್ತುವರಿ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಒತ್ತು'ವರಿ' ಸರಣಿ ಕೆಲವರ ಕಣ್ಣನ್ನು ತೆರೆಸಿದೆ. ಅದರಂತೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣೂ ತೆರೆಯಬೇಕು ಎಂದು ವಿಶೇಷ ಸಂದರ್ಶನದಲ್ಲಿ ಆಶಿಸಿದ್ದಾರೆ.

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮತ್ತೊಂದು ಸದನ ಸಮಿತಿ ಬೇಡ. ಎ.ಟಿ. ರಾಮಸ್ವಾಮಿ ಜಂಟಿ ಸದನ ಸಮಿತಿ ವರದಿ ಅನುಷ್ಠಾನ ಸೇರಿದಂತೆ ರಾಜ್ಯದ ಎಲ್ಲೆಡೆ ಒತ್ತುವರಿ ತೆರವಿಗೆ ಕಾರ್ಯಪಡೆಯನ್ನೇ ರಚಿಸುತ್ತೇವೆ ಎಂದು 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ತಿಳಿಸಿದ್ದರು. ಆಗ, ಮುಖ್ಯಕಾರ್ಯದರ್ಶಿ ಕಾರ್ಯಪಡೆ ಅಧ್ಯಕ್ಷರಾಗಬೇಕಿತ್ತು. ಅವರು ಕಾರ್ಯಒತ್ತಡದಿಂದ ಬೇಡ ಎಂದರು. ಜಂಟಿ ಸದನ ಸಮಿತಿಗೆ ಸಲಹೆಗಾರನಾಗಿದ್ದ ನನ್ನನ್ನೇ ಅಧ್ಯಕ್ಷನಾಗು ಎಂದರು. ಸೀರಿಯಸ್ ಆಗಿದ್ದರೆ ಮಾತ್ರ ನಾನು ಒಪ್ಪುತ್ತೇನೆ. ಇಲ್ಲ ಅಂದ್ರೆ ಕಾರ್ಯಪಡೆ ಮಾಡಿ ಉಪಯೋಗವಿಲ್ಲ. ಹಿಂದಿನ ಕಾರ್ಯಪಡೆಗಳಂತೆ ಹಳತಾಗುತ್ತದೆ ಅಷ್ಟೇ ಎಂದೆ. ನನಗೇ ಸರ್ಕಾರಿ ಆದೇಶ ತಯಾರು ಮಾಡಲು ಹೇಳಿದರು. ಅದರಂತೆ ಕಾರ್ಯಪಡೆ ತಯಾರಾಯಿತು. ಆದರೆ, ಒಂದು ಕಡೆ ಕಾರ್ಯಪಡೆ ರಚಿಸಿದ ಸಿಎಂ , ಮತ್ತೊಂದು ಕಡೆ ಅದರ ಕೆಲಸ ನಿಲ್ಲಿಸಿದರು.

ಕಾರ್ಯಪಡೆ 19 ತಿಂಗಳು ಕೆಲಸ ಮಾಡಿತು. ಕಾಲಾವಧಿ ಕೊಟ್ಟಿರಲಿಲ್ಲ. ಸರ್ಕಾರಿ ಭೂಮಿ ಒತ್ತುವರಿ ತೆರವಾಗುವವರೆಗೂ ಕೆಲಸವಿತ್ತು. ಕಾರ್ಯಪಡೆ ಕೆಲಸ ಮಾಡುವಾಗ ಸರ್ಕಾರದ ಅನೇಕ ನ್ಯೂನತೆಗಳು ಕಂಡು ಬಂದವು.  

ಕಂದಾಯ ಇಲಾಖೆ ಕಾರ್ಯದರ್ಶಿಯವರೇ ಅಕ್ರಮವಾಗಿ ಭೂ ವಿನಿಮಯ, ಹರಾಜು ಮಾಡಿದ್ದರು. ಇದೆಲ್ಲವನ್ನೂ ನಮೂದಿಸಿ ವರದಿ ನೀಡುವುದಕ್ಕೆ ಮುನ್ನವೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆಗ ಅಂದಿನ ಪ್ರಧಾನ ಕಾರ್ಯದರ್ಶಿ ಮಧು ಕ್ರಮಕ್ಕೆ ಮುಂದಾದರು. ಪ್ರತಿಯೊಂದು ಫೈಲೂ ಕಂದಾಯ ಸಚಿವರಿಗೆ ಹೋಗಬೇಕು. ಆಗ ಕಂದಾಯ ಸಚಿವರಾಗಿದ್ದ ಕರುಣಾಕರ ರೆಡ್ಡಿ 'ಬಹಳ ತೊಂದರೆ ಬರ್ತಾ ಇದೆ' ಅಂತ ಹೇಳಿ ಈ ಕಾರ್ಯಪಡೇನೇ ಬೇಡ ಅಂತ ಹೇಳಿ ಜುಲೈ 4, 2011ರಂದು ತೆಗೆದುಹಾಕಿಬಿಟ್ಟರು. ಇದು ತಪ್ಪು. ರಾಜ್ಯದಲ್ಲಿ ಒಟ್ಟು 17 ಕಾರ್ಯಪಡೆಗಳಿವೆ. ಭೂ ಒತ್ತುವರಿ ತೆರವು ಕಾರ್ಯಪಡೆಯನ್ನು ಮಾತ್ರ ತೆಗೆದುಹಾಕಲಾಯಿತು. ಈ ಬಗ್ಗೆ ಎಲ್ಲರಿಗೂ ಪತ್ರ ಬರೆದಿದ್ದೇವೆ. ಆದರೆ ಏನೂ ಆಗಿಲ್ಲ.

ಕಾರ್ಯಪಡೆ ಕಾಲಾವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಗುರುತಿಸಿದೆವು. ಎಷ್ಟು ಜಮೀನು, ಯಾವ ಜಿಲ್ಲೆ, ತಾಲೂಕು, ಗ್ರಾಮದಲ್ಲಿ ಒತ್ತುವರಿ ಎಷ್ಟು, ಯಾರು ಮಾಡಿದ್ದಾರೆ, ಸರ್ವೆ ನಂಬರ್ ಸಹಿತ ವಿವರ ತಯಾರು ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ಒಂದರಂತೆ 10 ಸಂಪುಟಗಳ ವರದಿ ನೀಡಿದ್ದೇವೆ. 11 ಲಕ್ಷಕ್ಕೂ ಅಧಿಕ ಎಕರೆ ಭೂ ಒತ್ತುವರಿಯಾಗಿದೆ.

15 ಲಕ್ಷ ಜನರು ಭೂಕಬಳಿಕೆದಾರರು. ಇದು 2011ರ ಜೂನ್ ಅಂತ್ಯದ ಲೆಕ್ಕಾಚಾರ. ಈ ಒತ್ತುವರಿಯ ಮೌಲ್ಯ ಕಾಮನ್ ವೆಲ್ತ್, 2ಜಿ ಸ್ಪೆಕ್ಟ್ರಮ್, ಬಳ್ಳಾರಿ ಗಣಿ ಹಗರಣದ ಮೊತ್ತ ಒಟ್ಟು ಸೇರಿಸಿದರೂ ಸರಿ ಹೊಂದುವುದಿಲ್ಲ. ಈಗ ಸರ್ವೆ ಮಾಡಿದರೆ ನಮ್ಮ ವರದಿಗಿಂತ ದುಪ್ಪಟ್ಟು, ಮೂರು ಪಟ್ಟು ಹೆಚ್ಚು ಒತ್ತುವರಿ ಬಹಿರಂಗವಾಗಬಹುದು.

ಕಾಫಿ ತೋಟಗಳಲ್ಲೇ ಅತಿ ಹೆಚ್ಚು: ಅರಣ್ಯ ಒತ್ತುವರಿಯಲ್ಲಿ ಪ್ರಮುಖವಾಗಿರುವುದು ಪಶ್ಚಿಮ ಘಟ್ಟ. ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗ, ಕೊಡಗು, ಹಾಸನ ಐದಾರು ಜಿಲ್ಲೆಗಳಲ್ಲಿನ ಕಾಫಿ ತೋಟಗಳಲ್ಲೇ ಅತಿ ಹೆಚ್ಚು. ಕೊಪ್ಪದಲ್ಲಿ ದೊಡ್ಡ ಕಾಫಿ ತೋಟ ಮಾಡಿರುವವರು 10-20ರಿಂದ 200 ಎಕರೆವರೆಗೂ ಒತ್ತುವರಿ ಮಾಡಿದ್ದಾರೆ.

ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. 15 ದಿನ ಅವಧಿಯಿರುವ ನೋಟಿಸ್‌ನ ನಂತರವೂ ಉತ್ತರ ಬಂದಿಲ್ಲ, ಅಂತಿಮ ಆದೇಶವೂ ಆಗಿಲ್ಲ. ಜಿಲ್ಲಾಧಿಕಾರಿ ಎಲ್ಲರಿಗೂ ನೋಟೀಸ್ ನೀಡಿದಾಗ 2010ರಲ್ಲಿ ಸಂಸದರಾಗಿದ್ದ ಸದಾನಂದಗೌಡ, ಕಾಫಿ ತೋಟದವರೊಂದಿಗೆ ಬಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಅರ್ಧ, ಒಂದು ಎಕರೆ ಒತ್ತುವರಿ ಮಾಡಿಕೊಂಡವರಿಗೂ ನೋಟೀಸ್ ನೀಡಿ, ಬಹಳ ತೊಂದರೆ ಕೊಡುತ್ತಿದ್ದಾರೆ ಎಂದಿದ್ದರು. ಅರ್ಧ, ಒಂದು ಎಕರೆಯಲ್ಲಿ ಯಾರೂ ಕಾಫಿ ತೋಟ ಮಾಡುವುದಿಲ್ಲ. ಅಂತಹವರ ಹೆಸರು ಹೇಳಿಕೊಂಡ ಬಂದವರೊಂದಿಗೆ ಬಂದ ಸದಾನಂದಗೌಡ, ಮುಖ್ಯಮಂತ್ರಿ ಮೇಲೆ ಪ್ರಭಾವ ಬೀರಿ ಜಿಲ್ಲಾಧಿಕಾರಿಯವರು ಶಾಶ್ವತ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ಸೂಚನೆ ನೀಡಿಸಿದರು.

ಇದೇ ಕಾನೂನುಬಾಹಿರ. ಸರ್ಕಾರಿ ಭೂ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿ ಅಥವಾ ಅರಣ್ಯಾಧಿಕಾರಿ ನೋಟಿಸ್ ನೀಡಿದ ಮೇಲೆ ಅದನ್ನು ನ್ಯಾಯಾಲಯ ಮಾತ್ರ ತಡೆಯಬಹುದು. ಇದೇ ಮಾನದಂಡವಾಗಿ ಇಡೀ ರಾಜ್ಯದಲ್ಲಿ ಒತ್ತುವರಿ ತೆರವು ನಿಂತುಹೋಯಿತು.

ಅವರಿಂದ ಅಕ್ರಮ, ಇಲ್ಲೇ ಬಂದು ಮಾತನಾಡಲಿ!

ಸರ್ವೆಗೆ ಹೋಗಿದ್ದಾಗ ರಮೇಶ್‌ಕುಮಾರ್ ಎಲ್ಲಿ ಎಂದೆ. ಅವರು ಒಳಗೆ ಕೂತುಕೊಂಡಿದ್ದರು. ಸುಮಾರು 20 ಜನ ಅಧಿಕಾರಿಗಳು ಹೋಗಿದ್ದೆವು. ಅವರು ನಿಮ್ಮನ್ನೇ ಒಳಗೆ ಕರೀತಿದ್ದಾರೆ ಎಂದರು. ಕಾನೂನು ಮುರಿದವರು ಅವರು. ಅವರೇನಾದರೂ ಹೇಳೋದು ಇದ್ರೆ ಅವರು ನಮ್ಮ ಮುಂದೆ ಬಂದು ಹೇಳಬೇಕು. ನಾವು ಒಳಗೆ ಹೋಗಿ ಅವರ ಹತ್ತಿರ ಮಾತನಾಡುವುದಿಲ್ಲ ಎಂದಿದ್ದೆ. 60 ಎಕರೆ ಅರಣ್ಯ ಭೂಮಿ ಒತ್ತುವರಿ ಬಗ್ಗೆ ಅರಣ್ಯ ಇಲಾಖೆ ಸಾಕಷ್ಟು ನೋಟಿಸ್ ಕೊಟ್ಟಿತ್ತು. ಏನೂ ಆಗಿರಲಿಲ್ಲ. ಕೋಲಾರಕ್ಕೆ ಒಳ್ಳೆ ಡಿಸಿಎಫ್ ಬಂದರು. ರತನ್‌ಕುಮಾರ್ ಎಂಬ ಉತ್ತರ ಭಾರತ ಮೂಲದ ಅಧಿಕಾರಿ. ಒತ್ತುವರಿಯನ್ನು ಗಂಭೀರವಾಗಿ ತೆಗೆದುಕೊಂಡರು. ಇದನ್ನು ತೆರವುಗೊಳಿಸಿ ಎಂದು ನೋಟಿಸ್ ನೀಡಿದರು. ಅಪೀಲ್ ಹೋದರು. ರಾಜಕೀಯದ ಪ್ರಭಾವದಿಂದ ಎರಡು ವರ್ಷ ವಿಚಾರಣೆ ನಡೆಯದಂತೆ ನೋಡಿಕೊಂಡರು. ಪ್ರಾಂತೀಯ ಆಯುಕ್ತರ ಒಂದು ಮೀಟಿಂಗ್‌ನಲ್ಲಿ ಡಿಸಿಎಫ್ ರತನ್‌ಕುಮಾರ್ 'ದೊಡ್ಡದೊಡ್ಡವರು ಇದ್ದಾರೆ. ನಾವು ತೆರವು ಮಾಡಲು ಆಗುತ್ತಿಲ್ಲ. ಜಂಟಿ ಸರ್ವೆ ಮಾಡಬೇಕು. ಅದಕ್ಕೆ ಬಿಡುತ್ತಿಲ್ಲ. ನೀವೇ ಬನ್ನಿ' ಎಂದರು. ಆಗ ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿದ್ದೆವು. ಪೊಲೀಸರ ಸಹಾಯ ಪಡೆದುಕೊಂಡು ಗೇಟ್ ತೆರೆದು ಒಳಗೆ ಹೋದೆವು. ಕಂದಾಯ-ಅರಣ್ಯ ಇಲಾಖೆ ಪ್ರಕ್ರಿಯೆಯಂತೆ ಜಂಟಿ ಸರ್ವೆ ಆಯಿತು. ಅರಣ್ಯ ಭೂಮಿ ಇದೆ ಎಂಬುದು ಆಗಲೂ ಗೊತ್ತಾಯಿತು. ಆ ಒಳ್ಳೆ ಡಿಸಿಎಫ್ ವರ್ಗಾಯಿಸಿಬಿಟ್ಟರು. ಬೇರೆ ಯಾರೋ ಬಂದಿದ್ದಾರೆ. ಅವರೇನು ಕೆಲಸ ಮಾಡುತ್ತಿಲ್ಲ. ಈಗ ಸಿದ್ದರಾಮಯ್ಯ ಬಂದ ಮೇಲೆ ಏನು ಮಾಡುತ್ತಾರೆ ನೋಡಬೇಕು. ರಮೇಶ್‌ಕುಮಾರ್ ಕಾಂಗ್ರೆಸ್ ಎಂಎಲ್‌ಎ ಬೇರೆ. ರಮೇಶ್‌ಕುಮಾರ್ ಒಂದು ಸಲ ಆಫೀಸ್‌ಗೆ ಬಂದಿದ್ರು. ನಾನು ಸುಮಾರು 20 ಜನ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡುತ್ತಿದ್ದೆ. ಈ ಮೀಟಿಂಗ್ ಮಧ್ಯಾಹ್ನ 3 ಗಂಟೆವರೆಗೂ ಆಗುತ್ತದೆ. ಈಗ ಬಂದರೆ ಹೇಗೆ? ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಬರಲಿ ಎಂದು ಹೇಳಿದ್ದೆ ಅಷ್ಟೇ. ಆಮೇಲೆ ಹೋದವರು ನಂತರ ಬರಲೇ ಇಲ್ಲ. ನಿಜವಾಗಿ ಆದದ್ದು ಇಷ್ಟೇ.

ಶಾಶ್ವತ ಸಮಿತಿ ಇರಲಿ

ಸರ್ಕಾರಿ ಭೂಮಿ ಉಳಿಸಿಕೊಳ್ಳುವ ಉದ್ದೇಶವಿದ್ದರೆ ವಿಧಾನಮಂಡಲದಲ್ಲಿರುವ ಲೆಕ್ಕಪತ್ರ ಸಮಿತಿಯಂತೆ ಶಾಶ್ವತ ಸಮಿತಿ ರಚಿಸಬೇಕು. ಎಲ್ಲ ಪಕ್ಷದವರೂ ಸಮಿತಿಯಲ್ಲಿ ಇರುವುದರಿಂದ ಒಂದು ರೀತಿ ನ್ಯಾಯ ಸಿಗುತ್ತದೆ. ಆದರೆ, ರಮೇಶ್‌ಕುಮಾರ್ ಅವರಂತಹವರೇ ಸದಸ್ಯರಾದರೆ ಏನೂ ಆಗುವುದಿಲ್ಲ. ಇದೆಲ್ಲಕ್ಕಿಂತ ಮೊದಲು ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಅವರಿಗಿರುವ ತಡೆ ಆದೇಶ ತೆರವುಗೊಳಿಸಬೇಕು. ಎಲ್ಲ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು.

ಮ್ಯಾನೇಜ್ ಮಾಡ್ತಾರೆ?

ಕೋಲಾರದ ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ಪರಿಶೀಲನೆಗೆ ಹೋಗುವ ದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಿದ್ದ ಹತ್ತಾರು ಅಡ್ವೈಸರ್‌ಗಳಲ್ಲಿ ಒಬ್ಬರಾಗಿ ಕಾನೂನು ಸಲಹೆಗಾರ ದಿವಾಕರ್ ನನಗೆ ಫೋನ್ ಮಾಡಿದ್ದರು. 'ಸಾರ್ ತಾವೆಲ್ಲ ಯಾಕೆ ಹೋಗಬೇಕು. ನೀವೆಲ್ಲ ಅತ್ಯಂತ ಸೀನಿಯರ್ ಆಫೀಸರ್ಸ್ ಹೋಗೋದು ಬೇಡ. ಲೋಕಲ್ ಆಫೀಸರ್‌ಗಳೇ ಮ್ಯಾನೇಜ್ ಮಾಡುತ್ತಾರೆ' ಎಂದರು. ನೋಡ್ರಿ, ಲೋಕಲ್ ಆಫೀಸ್‌ನಲ್ಲಿ ಏನೂ ಆಗುತ್ತಿಲ್ಲ ಅಂತಾನೇ ನಾವು ಹೋಗುತ್ತಿರುವುದು ಎಂದೆ. 'ಅದಲ್ಲ ಸಾರ್, ಲಾ ಆ್ಯಂಡ್ ಆರ್ಡರ್ ಪ್ರಾಬ್ಲಂ ಆಗಬಹುದೇನೋ?' ಎಂದರು. ನನ್ನ ಜತೆ ಜಿಲ್ಲಾಧಿಕಾರಿ ಇದ್ದಾರೆ, ಎಸ್ಪಿ ಇದ್ದಾರೆ. ಏನಾದ್ರೂ ಆದರೆ ನೋಡಿಕೊಳ್ಳುತ್ತಾರೆ ಬಿಡಿ ಎಂದೆ.

ಯಾರ್ಯಾರಿಗೋ ಜಮೀನು

ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಅಥವಾ ಭೂಮಿ ಇಲ್ಲದವರಿಗೆ ಸಕ್ರಮದಲ್ಲಿ ಭೂಮಿ ನೀಡಲಾಗುತ್ತದೆ. ಅಂದು ಶಾಸಕರಾಗಿದ್ದ ಜೀವರಾಜ್ ಚಿಕ್ಕಮಗಳೂರಿನಲ್ಲಿ ಈ ಸಮಿತಿ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಯಾರ್ಯಾರಿಗೋ ಭೂಮಿ ಕೊಟ್ಟಿದ್ದಾರೆ. ಪರಿಶಿಷ್ಟರ ಹೆಸರಿನಲ್ಲಿ ಗೌಡರು, ಲಿಂಗಾಯತರಿಗೆಲ್ಲ ಕೊಟ್ಟಿದ್ದಾರೆ. ಇಂತಹ 122 ಪ್ರಕರಣಗಳಿವೆ. ಲೋಕಾಯುಕ್ತರೂ ಇದರ ಬಗ್ಗೆ ಕಾರ್ಯಪಡೆಯಿಂದ ವರದಿ ಕೇಳಿದ್ದರು. ನಾವು ನೀಡಿದ್ದೆವು. ಹಾಸನದ ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ಅವರೂ ಇದೇ ರೀತಿ ಮಾಡಿದ್ದಾರೆ.

ಸರ್ಕಾರಿ ಭೂಮಿ ಒತ್ತು'ವರಿ'-7


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 21-07-2013

ಸರ್ಕಾರಿ ಭೂಮಿ ಒತ್ತು'ವರಿ'-6


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 20-07-2013

Friday, July 19, 2013