Wednesday, December 17, 2025

Jakkur Aerodrome to halt flight training operations… ವಿಮಾನ ಹಾರಾಟ ತರಬೇತಿ ನಿಲ್ಲಿಸಲಿದೆ ಜಕ್ಕೂರು‌

Government Considers Shifting School Instead of Providing Infrastructure

Jakkur Aerodrome to halt flight training operations… ವಿಮಾನ ಹಾರಾಟ ತರಬೇತಿ ನಿಲ್ಲಿಸಲಿದೆ ಜಕ್ಕೂರು‌.



  •  * Maharaja’s original condition: Land to be used only for a training school
  •  * Plot to shut down the entire airfield due to pressure from lobbies
  •  * Demands arise to provide infrastructure and make it a model school

Kere Manjunath ಕೆರೆ ಮಂಜುನಾಥ್

Bengaluru: Despite the enthusiasm of thousands of youngsters to pursue aviation education, the government, instead of providing necessary facilities, is moving to shut down the aviation training school itself.

The Jakkur Aviation Training School, which was handed over to the Karnataka government by the Maharaja of Mysore with the specific condition that "only an aviation training school must be built," is now facing closure. In a move that violates the original intent and allegedly succumbs to the real estate lobby, the process of shifting the Jakkur school to Mysuru has commenced.

On November 29, 2025, the Department of Youth Empowerment and Sports wrote a letter to the Director General of Civil Aviation (DGCA) seeking permission to relocate the Government Flying Training School (GFTS) from Jakkur to Mysuru.

Historical Significance:

In 1948, the then Maharaja of Mysore acquired 218 acres of land in Jakkur and constructed the Jakkur Aerodrome. It was inaugurated in December 1948 by the then Prime Minister Jawaharlal Nehru. The Maharaja handed over the area to the state government specifically to establish a flight training school. Consequently, the Government Flying Training School (GFTS) was established on March 26, 1949. Hundreds of students trained here have become successful pilots. However, since 1997, the institution has been plagued by issues regarding maintenance, shortage of engineers, instructors, aircraft, and fuel. Despite repeated government promises over the years, these problems remain unresolved.

The 25-year-old promise to provide infrastructure for GFTS remains unfulfilled, and the school has now reached the brink of closure.

Expert Opinions:

"I do not understand why the government is relocating GFTS when Bengaluru offers all opportunities, including the scope to extend the runway up to 3,000 feet. If the government supports those dreaming of becoming pilots, hundreds can graduate from here," said Captain Murali Ramakrishna.

Captain Murali, an alumnus of GFTS who now operates three of his own aircraft from Jakkur, added, "There is no doubt that if infrastructure is provided, this can become the best aviation training center in the country. Instead of starting everything from scratch in Mysuru, it is more beneficial to enhance the existing facilities in Jakkur."

A Hub for Helicopters:

The Jakkur airfield is currently used by the Chief Minister and other state dignitaries for helicopter travel. Some private agencies also operate seven-seater aircraft from here. It is alleged that along with closing GFTS, there is a hidden agenda to completely stop all aircraft and helicopter operations from this site.

Currently, the construction of high-rise buildings is prohibited around the Jakkur Aerodrome, and orders have even been issued to demolish some existing large structures. It is suspected that the plan to shut down the airfield is driven by the interests of private builders and a lobby of IAS officers. There are reportedly plans to convert the Jakkur Aerodrome into a sports complex, golf course, or entertainment zone.

Benefit to Students:

Experts suggest that under the education schemes of the Social Welfare Department, pilot training can be provided to SC/ST students at GFTS. Given the high demand for pilot courses, the government could also generate significant revenue.

"Due to the lack of infrastructure for the past five to six years, nearly 75 students enrolled here have received no training. There is no system to provide even three months of continuous education in a two-year course. The government must take note of this and provide all necessary facilities," experts stated.

Would you like me to help you draft a formal petition or a social media post based on this translated report?


Also READ….. Jakkur Aerodrome to halt flight training operations ವಿಮಾನ ಹಾರಾಟ ತರಬೇತಿ ನಿಲ್ಲಿಸಲಿದೆ ಜಕ್ಕೂರು‌


ALSO READ… If the Flying School goes, the airbase will turn into a forest!…. ವೈಮಾನಿಕ ತರಬೇತಿ ಶಾಲೆ ಹೋದರೆ ಅರಣ್ಯವಾಗಲಿದೆ ವಾಯುನೆಲೆ!


ALSO READ….. Jakkur Aerodrome: Let it remain a green haven ಜಕ್ಕೂರು ವಾಯು ನೆಲೆ: ಹಸಿರು ನೆಲೆಯಾಗಿಯೇ ಉಳಿಯಲಿ

ಮೂಲಸೌಕರ್ಯ ಒದಗಿಸದ ಸರ್ಕಾರದಿಂದ, ಶಾಲೆ ಸ್ಥಳಾಂತರಿಸಲು ಚಿಂತನೆ

ವಿಮಾನ ಹಾರಾಟ ತರಬೇತಿ ನಿಲ್ಲಿಸಲಿದೆ ಜಕ್ಕೂರು‌

  • ತರಬೇತಿ ಶಾಲೆಗೆ ಮಾತ್ರ ಉಪಯೋಗಿಸಲು ಮಹಾರಾಜರ ಷರತ್ತು
  • ಲಾಬಿಗೆ ಮಣಿದು ವೈಮಾನಿಕ ಪ್ರದೇಶವನ್ನೇ ಮುಚ್ಚುವ ಹುನ್ನಾರ
  • ಮೂಲಸೌಕರ್ಯ ಕಲ್ಪಿಸಿ, ಮಾದರಿ ಶಾಲೆಯನ್ನಾಗಿಸಲು ಆಗ್ರಹ

Kere Manjunath ಕೆರೆ ಮಂಜುನಾಥ್

ಬೆಂಗಳೂರು: ವಿಮಾನ ಹಾರಿಸುವ ಶಿಕ್ಷಣ ಪಡೆಯುವ ಉತ್ಸಾಹ ಸಾವಿರಾರು ಯುವಕರಲ್ಲಿದ್ದರೂ ಅದನ್ನು ಪರಿಗಣಿಸಿ ಸೌಲಭ್ಯ ಕಲ್ಪಿಸಲು ಮುಂದಾಗದ ಸರ್ಕಾರ, ವೈಮಾನಿಕ ಶಿಕ್ಷಣ ನೀಡುವ ಶಾಲೆಯನ್ನೇ ಮುಚ್ಚಲು ಮುಂದಾಗಿದೆ.

‘ವೈಮಾನಿಕ ತರಬೇತಿ ಶಾಲೆಯನ್ನು ಮಾತ್ರ ನಿರ್ಮಿಸಬೇಕು’ ಎಂಬ ಷರತ್ತಿನೊಂದಿಗೆ ಮೈಸೂರು ಮಹಾರಾಜರು, ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಮೂಲ ಆಶಯಕ್ಕೇ ಧಕ್ಕೆ ತರುವಂತೆ ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿದು, ಜಕ್ಕೂರು ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶಕರಿಗೆ 2025ರ ನವೆಂಬರ್‌ 29ರಂದು ಪತ್ರ ಬರೆದು, ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಅನುಮತಿ ಕೋರಲಾಗಿದೆ.

1948ರಲ್ಲಿ ಜಕ್ಕೂರಿನ 218 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಅಂದಿನ ಮೈಸೂರು ಮಹಾರಾಜರು, 1948ರಲ್ಲಿ ಜಕ್ಕೂರು ಏರೊಡ್ರಮ್‌ ಅನ್ನು ನಿರ್ಮಿಸಿದರು. 1948ರ ಡಿಸೆಂಬರ್‌ನಲ್ಲಿ ಅಂದಿನ ಪ್ರಧಾನಿ ಜವಹರಲಾಲ್‌ ನೆಹರೂ ಅವರು ಈ ವೈಮಾನಿಕ ತಾಣವನ್ನು ಉದ್ಘಾಟಿಸಿದರು. ವೈಮಾನಿಕ ತರಬೇತಿ ಶಾಲೆಯನ್ನು ನಿರ್ಮಿಸಬೇಕೆಂಬ ಷರತ್ತಿನೊಂದಿಗೆ ರಾಜ್ಯ ಸರ್ಕಾರಕ್ಕೆ ಈ ಪ್ರದೇಶವನ್ನು ಮೈಸೂರು ಮಹಾರಾಜರು ಹಸ್ತಾಂತರ ಮಾಡಿದರು. 1949ರ ಮಾರ್ಚ್‌ 26ರಂದು ಸರ್ಕಾರಿ ವೈಮಾನಿಕ ತರಬೇತಿ ಶಾಲೆ (ಜಿಎಫ್‌ಟಿಎಸ್‌) ಅನ್ನು ಸ್ಥಾಪಿಸಲಾಯಿತು. ಈ ಶಾಲೆಯಲ್ಲಿ  ಶಿಕ್ಷಣ ಪಡೆದು ನೂರಾರು ವಿದ್ಯಾರ್ಥಿಗಳು ಪೈಲಟ್‌ಗಳಾಗಿದ್ದಾರೆ. 1997ರ ನಂತರ ಇದರ ನಿರ್ವಹಣೆ, ಎಂಜಿನಿಯರ್‌ಗಳು, ಬೋಧಕರು, ವಿಮಾನಗಳು, ಇಂಧನ ಸೇರಿದಂತೆ ಒಂದೊಂದೇ ಸಮಸ್ಯೆಗಳು ಉದ್ಭವಿಸಿದವು. ಇದನ್ನು ಸರಿಪಡಿಸುವ ಭರವಸೆ ಅಂದಿನಿಂದಲೂ ಸರ್ಕಾರ ನೀಡುತ್ತಲೇ ಬಂದಿವೆ.

ಜಿಎಫ್‌ಟಿಎಸ್‌ಗೆ ಮೂಲಸೌಕರ್ಯ ಒದಗಿಸುವ 25 ವರ್ಷಗಳ ಭರವಸೆ ಹಾಗೇ ಉಳಿದು, ಇದೀಗ ಅದನ್ನು ಮುಚ್ಚುವ ಹಂತಕ್ಕೆ ಬಂದಿದೆ. ಜಕ್ಕೂರಿನಲ್ಲಿರುವ ಈ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಯೋಜಿಸಲಾಗಿದೆ. 

‘ಬೆಂಗಳೂರಿನಲ್ಲಿ ಎಲ್ಲ ರೀತಿಯ ಅವಕಾಶಗಳು ಹಾಗೂ ರನ್‌ವೇಯನ್ನೇ 3000 ಅಡಿಯವರೆಗೆ ನಿರ್ಮಿಸಲು ಅವಕಾಶವಿದ್ದರೂ ಸರ್ಕಾರ, ಜಿಎಫ್‌ಟಿಎಸ್‌ ಏಕೆ ಸ್ಥಳಾಂತರಿಸುತ್ತಿದೆಯೋ ಗೊತ್ತಿಲ್ಲ. ಪೈಲಟ್‌ಗಳಾಗಬೇಕೆಂಬ ಕನಸು ಹೊತ್ತವರಿಗೆ ಸರ್ಕಾರ ಆಸರೆಯಾಗಿ ನಿಂತರೆ ನೂರಾರು ಪೈಲಟ್‌ಗಳು ಇಲ್ಲಿಂದ ಹೊರಬರುತ್ತದೆ’ ಎಂದು ಕ್ಯಾಪ್ಟನ್‌ ಮುರಳಿ ರಾಮಕೃಷ್ಣ ಹೇಳಿದರು.

ಮುರಳಿಯವರು ಜಿಎಫ್‌ಟಿಎಸ್‌ನಲ್ಲೇ ಕಲಿತು,  ಪೈಲಟ್‌ ಆಗಿ ಇದೀ ಅವರದ್ದೇ ಮೂರು ವಿಮಾನಗಳನ್ನು ಜಕ್ಕೂರು ವೈಮಾನಿಕ ಪ್ರದೇಶದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ‘ಜಿಎಫ್‌ಟಿಎಸ್‌ನಲ್ಲಿ ಎಲ್ಲ ರೀತಿಯ ಅವಕಾಶಗಳಿದ್ದೂ, ಮೂಲಸೌಕರ್ಯವನ್ನು ನೀಡಿದರೆ, ದೇಶದಲ್ಲೇ ಅತ್ಯುತ್ತಮ ವೈಮಾನಿಕ ತರಬೇತಿ ಕೇಂದ್ರವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ’ ಎಂದರು.

‘ಮೈಸೂರಿನಲ್ಲಿ ಎಲ್ಲವನ್ನೂ ಹೊಸದಾಗಿ ಮಾಡುವ ಬದಲು ಜಕ್ಕೂರಿನಲ್ಲೇ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

 

 

ಹೆಲಿಕಾಪ್ಟರ್‌ಗಳ ತಾಣ

ಜಕ್ಕೂರು ವೈಮಾನಿಕ ಪ್ರದೇಶದಿಂದಲೇ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಪ್ರಮುಖರು ಹೆಲಿಕಾಪ್ಟರ್‌ನಲ್ಲಿ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಕೆಲವು ಖಾಸಗಿ ಸಂಸ್ಥೆಗಳು ಏಳು ಆಸನ ವ್ಯವಸ್ಥೆಯುಳ್ಳ ವಿಮಾನವನ್ನು ಇಲ್ಲಿಂದಲೇ ಕಾರ್ಯಾಚರಣೆ ಮಾಡುತ್ತಿದ್ದಾರೆ. ಜಿಎಫ್‌ಟಿಎಸ್‌ ಮುಚ್ಚುವ ಜೊತೆಗೆ, ವಿಮಾನ, ಹೆಲಿಕಾಪ್ಟರ್‌ಗಳ ಹಾರಾಟವನ್ನೂ ಇಲ್ಲಿಂದ ಮುಕ್ತಗೊಳಿಸುವ ಹುನ್ನಾರ ನಡೆಸಲಾಗಿದೆ ಎನ್ನಲಾಗಿದೆ.

ಜಕ್ಕೂರು ವೈಮಾನಿಕ ಪ್ರದೇಶದ ಸುತ್ತಮುತ್ತ ಬೃಹತ್‌ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ. ಅಲ್ಲದೆ, ಈಗಿರುವ ಕೆಲವು ಬೃಹತ್‌ ಕಟ್ಟಡಗಳನ್ನು ತೆರವುಗೊಳಿಸಲೂ ಸೂಚಿಸಲಾಗಿದೆ. ಹೀಗಾಗಿ, ಜಿಎಫ್‌ಟಿಎಸ್‌ನೊಂದಿಗೆ ಜಕ್ಕೂರು ವೈಮಾನಿಕ ಪ್ರದೇಶವನ್ನೇ ಮುಚ್ಚಲು ಯೋಜಿಸಲಾಗಿದೆ. ಖಾಸಗಿ ಬಿಲ್ಡರ್‌ಗಳ ಒತ್ತಾಸೆ ಹಾಗೂ ಐಎಎಸ್‌ ಅಧಿಕಾರಿಗಳ ಲಾಬಿಯೂ ಇದಕ್ಕೆ ಕಾರಣ. ಜಕ್ಕೂರು ವೈಮಾನಿಕ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ, ಗಾಲ್ಫ್‌ ಕೋರ್ಸ್‌ ಸೇರಿದಂತೆ ಮನರಂಜನೆ ತಾಣ ನಿರ್ಮಿಸುವ ಯೋಜನೆಯನ್ನೂ ಹೊಂದಲಾಗಿದೆ ಎನ್ನಲಾಗಿದೆ.

 

ವಿದ್ಯಾರ್ಥಿಗಳಿಗೆ ಅನುಕೂಲ

‘ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಶಿಕ್ಷಣ ಯೋಜನೆಯಡಿ ಪೈಲಟ್‌ ಶಿಕ್ಷಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಜಿಎಫ್‌ಟಿಎಸ್‌ನಲ್ಲಿ ನೀಡಬಹುದು. ಅಲ್ಲದೆ, ಪೈಲಟ್‌ ಕೋರ್ಸ್‌ಗೆ ಸಾಕಷ್ಟು ಬೇಡಿಕೆ ಇರುವುದರಿಂದ ಸರ್ಕಾರ ಲಾಭವನ್ನೂ ಗಳಿಸಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟರು.

‘ಜಿಎಫ್‌ಟಿಎಸ್‌ನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂದು ಐದಾರು ವರ್ಷಗಳಿಂದ, ಇಲ್ಲಿರುವ ಸುಮಾರು 75 ವಿದ್ಯಾರ್ಥಿಗಳಿಗೆ ತರಬೇತಿಯನ್ನೇ ನೀಡಲಾಗುತ್ತಿಲ್ಲ. ಎರಡು ವರ್ಷದ ಕೋರ್ಸ್‌ನಲ್ಲಿ ಮೂರು ತಿಂಗಳು ಸತತವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಇಲ್ಲಿಲ್ಲ. ಇದನ್ನು ಸರ್ಕಾರ ಪರಿಗಣಿಸಿ, ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕು’ ಎಂದಿದ್ದಾರೆ.

Punishment for Feeding Pigeons… ಪಾರಿವಾಳಗಳಿಗೆ ಆಹಾರ ನೀಡಿದರೆ ಶಿಕ್ಷೆ

Punishment for Feeding Pigeons



Bengaluru: Due to the spread of diseases from pigeons, the BBMP (GBA) has banned feeding them in public places. Pigeons should only be fed at locations identified by the BBMP and during specified times. The Urban Development Department has issued an order stating that legal action should be taken and fines imposed on violators by registering cases under sections 270, 271, and 272 of the Bharatiya Nyaya Sanhita (BNS).

According to this, those who violate the rules and feed pigeons will be booked for negligence causing the spread of infectious diseases. They may face a fine and imprisonment for up to six months.

Key Regulations

 * No person shall feed or encourage the feeding of pigeons in areas that cause public nuisance or health risks.

 * Feeding is allowed only in designated areas subject to specific conditions.

 * Certain NGOs must take responsibility for the maintenance of these designated areas and ensure compliance with the directives.

Health Risks Cited

The Health Department stated that unregulated feeding in public places causes birds to gather in large numbers, leading to excessive droppings and serious health issues. Droppings and feathers from pigeons are increasing the risk of respiratory illnesses such as Hypersensitivity Pneumonitis and other lung diseases.

Expert medical opinions and reports suggest that contact with pigeon droppings and feathers can cause severe and sometimes irreversible lung damage. This risk is particularly high for vulnerable groups such as children, the elderly, and those with pre-existing respiratory problems.

Awareness Measures

In light of the health impacts caused by pigeon droppings and feathers, city corporations have been instructed to conduct awareness programs for the general public regarding this issue.



Full Order as follows:

No. HEW 548 CGE 2025.

GOVERNMENT OF KARNATAKA

Karnataka Government Secretariat,

Vikasa Soudha,

Dr. B.R. Ambedkar Veedhi,

Bengalooru, Dated: 16-12-2025.

U.0. NOTE

Sub:- Regulation and Prohibition of Feeding Pigeons in Public Places in the Interest of Public Health

1. It has been brought to the notice of the Health Dept that uncontrolled feeding of pigeons in public places is resulting in large congregations of birds, excessive droppings and serious health concerns. particularly respiratory illnesses linked to prolonged exposure to pigeon droppings and feathers such as hypersensitivity pneumonitis and other lung diseases.

2. The expert medical opinion and reports indicate that such exposure may lead to severe and sometimes irreversible lung damage, especially among vulnerable groups including children, the elderly

and persons with pre-existing respiratory conditions.

3. The Hon'ble High court of Bombay has issued directions to the Greater Mumbai corporation in WP No (905) WP No (L) 2119 of 2025 in similar matter and consequently, the Greater Mumbai Corporation has prescribed regulatory measures to prevent nuisance, safeguard public health, seal pigeon-feeding enclosures (kabutarkhanas).

4. The following provisions of law are available to control the said nuisance:

a. Following sections of the Bharathiya Nyaya Samihitha 2023:

i. 270. Public nuisance.-A person is guilty of a public

nuisance who does any act or is guilty of an illegal

omission which causes anyy common injury. danger or annoyance to the public or to the people in general who dwell or occupy property in the vicinity, or which must necessarily cause injury. obstruction, danger or annoyance to persons who may have occasion to use any public right but a common nuisance is not excused on the ground that it causes some convenience or advantage.

ii. 271. Negligent act likely to spread infection of disease dangerous to life.-Whoever unlawfully or negligently does any act which is, and which he knows or has reason to believe to be, likely to spread the infection of anydisease dangerous to life, shall be punished with imprisonment of either description for a term which may

extend to six months, or with fine, or with both.

iii. 272. Malignant act likely to spread infection of disease dangerous to life.-Whoever malignantly does any act

which is, and which he knows or has reason to believe to be, likely to spread the infection of 81 any disease dangerous to life, shall be punished with imprisonment of either description for a term which may extend to two years, or with fine, or with both."

a. The following sections are also available to GBA and Corporations:

i. Section 251 of the Greater Bengaluru Authority Act, 2025: the Greater Bengaluru Authority shall ensure proper sanitation, prevent the spread of dangerous disease and undertake such measures necessary to maintain the standards to public health.

ii. Section 401 of the Karnataka Municipal Corporations Act 1976: the state Government has power to declare any epidemic, endemic, or infectious disease as dangerous disease.

iii. Section 58 (17) &section 59 (4) (5) (23): it is obligatory on the part of the municipal corporation to take suitable measure to mitigate the causes of dangerous disease.

4. In this background, the Urban development department is

requested to issue suitable directions in exercise of the powers conferred by section 19 read with section 111 of the Greater Bengaluru Authority Act, 2025 and section 360 of the Karnataka Municipal corporations Act, 1976 to the commissioner, the Greater Bengaluru Authority and the Commissioners and chief officers of other municipal corporations. These directions could be as follows: -

5. The commissioner, the Greater Bengaluru Authority and the Commissioners and chief oficers of other municipal corporations shall take necessary action to mitigate the causes of dangerous

disease spread by pigeon and enforce following guidelines in their respective jurisdiction, namely:

a. No person shall feed pigeons or cause pigeons to be fed in any of the areas which may cause nuisance or health hazard to the public.

b. The pigeon feeding shall be permitted only in designated areas in a controlled manner, with following conditions:

i. The designated areas may be selected in consultationwith stakeholders.

ii. The responsibility for upkeep of the designated areas and compliance to the directions shall be taken up by some charitable organization or an NG0.

ii. The feeding in designated areas shall be permitted only for some limited hours in the day.

c. Authorized Officers of the Local authorities shall issue on-the-spot warnings and may impose fines for violation of this order, or lodge complaint to prosecute under section 271 and

272 of Bharathiya Nyaya Samihitha 2023.

d. The local authority shall conduct public awareness campaigns, including display of signboards, banners and digital messages, explaining:

i. The health hazards associated with pigeon droppings and

feathers.

ii. The content of regulatory directions and the penalties for violations.

iii. Alternative humane methods of bird conservation that do

not endanger public health.

Therefore, the Urban Development Department is requested to issue the above directions to The Greater Bengaluru Authority and all Municipal Corporations to take immediate steps to implement this. (Approved by the Hon'ble HFW Minister)



ಪಾರಿವಾಳಗಳಿಗೆ ಆಹಾರ ನೀಡಿದರೆ ಶಿಕ್ಷೆ 

ಬೆಂಗಳೂರು: ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ
ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಜಿಬಿಎ ನಿಷೇಧಿಸಿದೆ.
ಜಿಬಿಎ ಗುರುತಿಸಿರುವ ಸ್ಥಳದಲ್ಲಿ ಮಾತ್ರ ನಿಗದಿತ ಸಮಯದಲ್ಲಿ ಪಾರಿವಾಳಗಳಿಗೆ ಆಹಾರ ನೀಡಬೇಕು. ಇದನ್ನು ಉಲ್ಲಂಘಿಸವರ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) 270,  271 ಮತ್ತು 271 ರಂತೆ ಪ್ರಕರಣ ದಾಖಲಿಸಿ, ದಂಡ ಹಾಕುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿ, ಆದೇಶ ಹೊರಡಿಸಿದೆ.
ಇದರಂತೆ, ನಿಯಮ ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ನೀಡಿದವರಿಗೆ, ಸಾಂಕ್ರಾಮಿಕ ರೋಗ ಹರಡಿದ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗುತ್ತದೆ. ಅವರಿಗೆ ದಂಡ ಹಾಗೂ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಯಾವುದೇ ವ್ಯಕ್ತಿಯು ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯದ ಅಪಾಯವನ್ನು ಉಂಟುಮಾಡುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರವನ್ನು ನೀಡಬಾರದು ಅಥವಾ ಆಹಾರವನ್ನು ನೀಡಲು ಪ್ರೇರೇಪಿಸಬಾರದು.
ಪಾರಿವಾಳಗಳಿಗೆ ಆಹಾರವನ್ನು ನೀಡುವುದನ್ನು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಷರತ್ತುಗಳೊಂದಿಗೆ ಅನುಮತಿಸಲಾಗುತ್ತದೆ. ನಿಗದಿಪಡಿಸಿದ ಪ್ರದೇಶಗಳ ನಿರ್ವಹಣೆ ಮತ್ತು ನಿರ್ದೇಶನಗಳ ಅನುಸರಣೆಯ ಜವಾಬ್ದಾರಿಯನ್ನು ಕೆಲವು ಎನ್‌ಜಿಓ ವಹಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಅನಿಯಂತ್ರಿತವಾಗಿ ಆಹಾರ ನೀಡುವುದರಿಂದ ಪಕ್ಷಿಗಳು ದೊಡ್ಡ ಪ್ರಮಾಣದಲ್ಲಿ ಗುಂಪು ಸೇರುತ್ತಿದ್ದು, ಅತಿಯಾದ ಹಿಕ್ಕೆಗಳು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು  ಉಂಟಾಗುತ್ತಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳಿಂದ ಶ್ವಾಸಕೋಶದ ಕಾಯಿಲೆಗಳಾದ ಅತಿಸಂವೇದನಾ ನ್ಯುಮೋನಿಟಿಸ್ ಮತ್ತು ಇತರ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿವೆ.

ತಜ್ಞರ ವೈದ್ಯಕೀಯ ಅಭಿಪ್ರಾಯ ಮತ್ತು ವರದಿಗಳು ಸೂಚಿಸುವಂತೆ,ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳ ಸಂಪರ್ಕದಿಂದ ತೀವ್ರವಾದ ಮತ್ತು ಕೆಲವೊಮ್ಮೆ ಸರಿಪಡಿಸಲಾಗದ ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಉಸಿರಾಟದ ಸಮಸ್ಯೆ ಇರುವವರಂತಹ ದುರ್ಬಲ ಗುಂಪುಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ.

ಹೀಗಾಗಿ, ಪಾರಿವಾಳಗಳ ಹಿಕ್ಕೆಗಳು ಮತ್ತು ಗರಿಗಳಿಂದ ಆರೋಗ್ಯದ ಪರಿಣಾಮ ಬೀರುತ್ತಿರುವುದರಿಂದ  
ನಗರ ಪಾಲಿಕೆಗಳು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.

Sunday, December 14, 2025

700 Nominated Members for the 5 Corporations… 5 ನಗರ ಪಾಲಿಕೆಗಳಿಗೆ 700 ನಾಮ ನಿರ್ದೇಶಿತ ಸದಸ್ಯರು

Nominated Members for Five City Corporations

One Non-Voting Member for Every 20,000 People in the Five City Corporations

700 Nominated Members for the 5 Corporations



Kere Manjunath ಕೆರೆ ಮಂಜುನಾಥ್

Bengaluru: While the elections for the city corporations remain uncertain, the government is moving to appoint over 700 nominated members to the five city corporations.

In the BBMP (Bruhat Bengaluru Mahanagara Palike), the term of the elected representatives had ended and elections had not been held for five years. On September 2, 2025, the BBMP ceased to exist, and the Greater Bengaluru Authority (GBA) came into force as per the Greater Bengaluru Administration Act–2024. The five city corporations were also formed on the same day.

Although the ward delimitation for the five city corporations has been finalized, the reservation has not yet been fixed. In this context, the government is proceeding to amend the Greater Bengaluru Administration Act to appoint nominated members until the city corporation elections are held. As a result, there will be over 300 more nominated corporators than the total number of elected corporators.

During the term of the BBMP, there were 198 elected corporators and 20 nominated members.

The bill was introduced in the Legislative Assembly session currently underway in Suvarna Vidhana Soudha, Belagavi, on December 12. There is an allegation that the move to appoint nominated members when there are no elected representatives is anti-constitutional.

An amendment bill has been introduced to amend Section 30 of the Greater Bengaluru Administration Act and add a fifth provision. The provision states: 'The State Government shall nominate, as an additional member to a specified City Corporation, a minimum of one person for every 20,000 population, who is ordinarily a resident in the local area comprised in the Greater Bengaluru Area, until elections are held for that local area.' 'Such a nominated person shall not have the right to vote in the City Corporation,' the proposed amendment states.

The Urban Development Department issued the final notification on November 19, finalizing 369 wards across the five city corporations. Even after this, a notification was issued changing the boundaries and names of 20 wards. The process of preparing the electoral rolls for the elections is underway, and it is said that the elections will be held in February. However, the government's current process of amending the Act to appoint nominated members has raised doubts that the elections will not be held anytime soon.

Deputy Chief Minister D.K. Shivakumar has the intention of merging the municipal councils, town panchayats, and some village panchayats surrounding the city into the Greater Bengaluru Area. The elected representatives also desire the same. The term of the elected members of these local bodies has mostly ended, and it is expected that the local bodies whose term has ended will be merged into the GBA.

If new areas are merged, their wards must be redrawn and included in the city corporations within three months. This means that no election-related processes will take place for three months. It is stated that this will effectively postpone the city corporation elections by another six months.

1.4 Crore: Estimated population in the city

700: Nominated members, calculated at one per 20,000 population

Voters in the Five City Corporations

 * West City Corporation: 26,69,573

 * North City Corporation: 17,92,900

 * South City Corporation: 16,27,807

 * Central City Corporation: 14,57,065

 * East City Corporation : 8,55,445


Unconstitutional: Padmanabha Reddy

'The move to appoint over 600 nominated members, at one for every 20,000 population, is contrary to the Constitution. The Constitution does not allow for nominating corporators for all wards instead of holding mandatory elections,' said Padmanabha Reddy, former Leader of the Opposition in the BBMP.

'The fundamental principle governing municipalities established by the 74th Constitutional Amendment Act, 1992 (Part IXA) is the direct election of representatives for all wards. Article 243R(1) explicitly states this. Appointing nominated members until the city corporation elections bypasses the very spirit of the Constitution. This directly contradicts a key democratic structure,' he said.

'Even though the government has no scope to nominate members instead of holding elections for the new city corporation wards, the move to do so by amending the Act is a violation of the 74th Constitutional Amendment. Therefore, the amendment bill, which is a murder of democracy, must be withdrawn,' he urged.


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



ಐದೂ ನಗರ ಪಾಲಿಕೆಗಳಲ್ಲಿ ಪ್ರತಿ 20 ಸಾವಿರ ಜನರಿಗೊಬ್ಬ ಮತದಾನ ಹಕ್ಕಿಲ್ಲದ ಸದಸ್ಯ

5 ನಗರ ಪಾಲಿಕೆಗಳಿಗೆ 700 ನಾಮ ನಿರ್ದೇಶಿತ ಸದಸ್ಯರು

Kere Manjunath ಕೆರೆ ಮಂಜುನಾಥ್

ಬೆಂಗಳೂರು: ನಗರ ಪಾಲಿಕೆಗಳ ಚುನಾವಣೆಯ ಅನಿಶ್ಚಿತತೆಯಲ್ಲಿರುವ ಸಂದರ್ಭದಲ್ಲಿ ಐದೂ ನಗರ ಪಾಲಿಕೆಗಳಿಗೆ 650ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ.

ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದು ಐದು ವರ್ಷ ಚುನಾವಣೆ ನಡೆಸಿರಲಿಲ್ಲ. 2025ರ ಸೆಪ್ಟೆಂಬರ್‌ 2ರಂದು ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು, ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರಂತೆ  ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಸ್ತಿತ್ವಕ್ಕೆ ಬಂದಿತು. ಅದೇ ದಿನ ಐದು ನಗರ ಪಾಲಿಕೆಗಳೂ ರಚನೆಯಾದವು. 

ಐದೂ ನಗರ ಪಾಲಿಕೆಗಳಿಗೆ ವಾರ್ಡ್‌ಗಳ ಮರುವಿಂಗಡಣೆ ಅಂತಿಮವಾಗಿದ್ದರೂ, ಇನ್ನೂ ಮೀಸಲಾತಿಯನ್ನು ನಿಗದಿ ಮಾಡಿಲ್ಲ. ಈ ಸಂದರ್ಭದಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಗೆ ತಿದ್ದುಪಡಿ ತಂದು, ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೂ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಮುಂದಾಗಿದೆ. ಇದರಿಂದ, ಒಟ್ಟಾರೆ ಚುನಾಯಿತ ಕಾರ್ಪೊರೇಟರ್‌ಗಳಿಗಿಂತ 300ಕ್ಕೂ ಹೆಚ್ಚು ನಾಮ ನಿರ್ದೇಶಿತ ಕಾರ್ಪೊರೇಟರ್‌ಗಳೇ ಇರಲಿದ್ದಾರೆ.

ಬಿಬಿಎಂಪಿಯ ಅವಧಿಯಲ್ಲಿ 198 ಚುನಾಯಿತ ಕಾರ್ಪೊರೇಟರ್‌ಗಳಿದ್ದರೆ,  20 ನಾಮ ನಿರ್ದೇಶಿತ ಸದಸ್ಯರಿದ್ದರು.

ಬೆಳಗಾವಿಯ ಸುವರ್ಣ ವಿಧಾನಸೌಭದಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಮ ಸೂದೆಯನ್ನು ಡಿ.12ರಂದು ಮಂಡಿಸಲಾಗಿದೆ. ಚುನಾಯಿತ ಸದಸ್ಯರಿಲ್ಲದ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲು ಹೊರಟಿರುವುದು ಸಂವಿಧಾನ ವಿರೋಧಿ ಎಂಬ ಆರೋಪ ವ್ಯಕ್ತವಾಗಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯ ಪ್ರಕರಣ 30ರಕ್ಕೆ ತಿದ್ದುಪಡಿ ತಂದು, ಐದನೇ ಅಂಶವನ್ನು ಸೇರಿಸಲು ಮಸೂದೆ ಮಂಡಿಸಲಾಗಿದೆ. ‘ಗ್ರೇಟರ್‌ ಬೆಂಗಳೂರು ಪ್ರದೇಶಕ್ಕೆ ಸೇರಿದಂಥ ಸ್ಥಳೀಯ ಪ್ರದೇಶದಲ್ಲಿ ಸಾಮಾನ್ಯ ನಿವಾಸಿಯನ್ನು ಆ ಸ್ಥಳೀಯ ಪ್ರದೇಶಕ್ಕೆ ಚುನಾವಣೆ ನಡೆಸುವವರೆಗೆ ಪ್ರತಿ 20 ಸಾವಿರ ಜನಸಂಖ್ಯೆಗೆ ಕನಿಷ್ಠ ಒಬ್ಬ ವ್ಯಕ್ತಿಯಂತೆ ಆ ನಿರ್ದಿಷ್ಟಿ ನಗರ ಪಾಲಿಕೆಗೆ ಹೆಚ್ಚುವರಿ ಸದಸ್ಯನಾಗಿ ನಾಮ ನಿರ್ದೇಶಿಸತಕ್ಕದ್ದು’. ‘ ಅಂಥ ನಾಮ ನಿರ್ದೇಶಿತ ವ್ಯಕ್ತಿಯು ನಗರ ಪಾಲಿಕೆಯಲ್ಲಿ ಮತದಾನ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ’ ಎಂದು ತಿದ್ದುಪಡಿ ತರುವ ಅಂಶಗಳಲ್ಲಿ ಹೇಳಲಾಗಿದೆ.

ಐದು ನಗರ ಪಾಲಿಕೆಗಳಲ್ಲಿ 369 ವಾರ್ಡ್‌ಗಳನ್ನು ಅಂತಿಮಗೊಳಿಸಿ ನವೆಂಬರ್‌ 19ರಂದು ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದಾದ ನಂತರವೂ, 20 ವಾರ್ಡ್‌ಗಳ ಗಡಿ ಮತ್ತು ಹೆಸರು ಬದಲಾಯಿಸಿ ಅಧಿಸೂಚಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರುವರಿಯಲ್ಲಿ ಚುನಾವಣೆ ನಡೆಸುವುದಾಗಿ ಹೇಳಲಾಗುತ್ತದೆ. ಆದರೆ, ಇದೀಗ ಕಾಯ್ದೆಗೆ ತಿದ್ದುಪಡಿ ತಂದು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಸರ್ಕಾರದ ಪ್ರಕ್ರಿಯೆಯಿಂದ ಚುನಾವಣೆ ಸದ್ಯಕ್ಕೆ ನಡೆಯುವುದಿಲ್ಲ ಎಂಬ ಸಂಶಯ ಮೂಡಿದೆ.

ನಗರದ ಸುತ್ತಲಿನ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಕೆಲವು ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರು ಪ್ರದೇಶದಕ್ಕೆ ಸೇರಿಸಿಕೊಳ್ಳಬೇಕೆಂಬ ಉದ್ದೇಶ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗಿದೆ. ಜನಪ್ರತಿನಿಧಿಗಳೂ ಅದನ್ನೇ ಬಯಸುತ್ತಿದ್ದಾರೆ. ಆ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಅವಧಿ ಈಗಾಗಲೇ ಬಹುತೇಕ ಮುಗಿದ್ದು, ಯಾವ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದೆಯೋ ಅವುಗಳನ್ನು ಜಿಬಿಎಗೆ ಸೇರಿಸಿಕೊಳ್ಳುವ ನಿರೀಕ್ಷೆ ಇದೆ. 

ಹೊಸ ಪ್ರದೇಶಗಳು ಸೇರಿಕೊಂಡರೆ ಮೂರು ತಿಂಗಳಲ್ಲಿ ಅವುಗಳ ವಾರ್ಡ್‌ಗಳನ್ನು ಮರು ವಿಂಗಡಿಸಿ,  ನಗರ ಪಾಲಿಕೆಗಳಿಗೆ ಸೇರಿಸಬೇಕು. ಅಂದರೆ, ಮೂರು ತಿಂಗಳು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳೂ ನಡೆಯುವುದಿಲ್ಲ. ನಗರ ಪಾಲಿಕೆಗಳ ಚುನಾವಣೆ ಇನ್ನಾರು ತಿಂಗಳು ಮುಂದಕ್ಕೆ ಹೋದದಂತಾಗುತ್ತದೆ ಎಂದು ಹೇಳಲಾಗಿದೆ.

 

 

1.4 ಕೋಟಿ; ನಗರದಲ್ಲಿರುವ ಅಂದಾಜು ಜನಸಂಖ್ಯೆ

700; ಪ್ರತಿ 20 ಸಾವಿರ ಜನಸಂಖ್ಯೆಯಂತೆ ನಾಮ ನಿರ್ದೇಶಿತ ಸದಸ್ಯರು

 

ಐದು ನಗರ ಪಾಲಿಕೆಯಲ್ಲಿರುವ ಮತದಾರರು

ಪಶ್ಚಿಮ ನಗರ ಪಾಲಿಕೆ; 26,69,573

ಉತ್ತರ ನಗರ ಪಾಲಿಕೆ; 17,92,900

ದಕ್ಷಿಣ ನಗರ ಪಾಲಿಕೆ; 16,27,807

ಕೇಂದ್ರ ನಗರ ಪಾಲಿಕೆ; 14,57,065

ಪೂರ್ವ ನಗರ ಪಾಲಿಕೆ; 8,55,445

 

ಸಂವಿಧಾನ ಬಾಹಿರ: ಪದ್ಮನಾಭ ರೆಡ್ಡಿ

‘ಪ್ರತಿ 20 ಸಾವಿರ ಜನಸಂಖ್ಯೆಗೆ 600ಕ್ಕೂ ಹೆಚ್ಚು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಹೊರಟಿರುವುದು, ಸಂವಿಧಾನಕ್ಕೆ ವಿರುದ್ಧವಾದುದು. ಕಡ್ಡಾಯ ಚುನಾವಣೆಗಳನ್ನು ನಡೆಸುವ ಬದಲು ಎಲ್ಲ ವಾರ್ಡ್‌ಗಳಿಗೆ ಕಾರ್ಪೊರೇಟರ್‌ಗಳನ್ನು ನಾಮ ನಿರ್ದೇಶನ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದು ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳಿದರು.

‘74ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ, 1992 (ಭಾಗ 11ಎ)ದಿಂದ ಸ್ಥಾಪಿಸಲಾದ ಪುರಸಭೆಗಳನ್ನು ನಿಯಂತ್ರಿಸುವ ಮೂಲಭೂತ ತತ್ವ ಎಂದರೆ ಎಲ್ಲ ವಾರ್ಡ್‌ ಪ್ರತಿನಿಧಿಗಳಿಗೆ ನೇರ ಚುನಾವಣೆ ನಡೆಸುವುದು.  ಆರ್ಟಿಕಲ್‌ 243ಆರ್ (1) ಇದನ್ನು ಸ್ಪಷ್ಟವಾಗಿ ಹೇಳುತ್ತದೆ.  ನಗರ ಪಾಲಿಕೆಗಳಿಗೆ ಚುನಾವಣೆವರೆಗೆ ನಾಮನಿರ್ದೇಶನ ಸದಸ್ಯರನ್ನು ಮಾಡುವುದು ಸಂವಿಧಾನದ ಆಶಯವನ್ನೇ ಬೈಪಾಸ್‌ ಮಾಡಿದಂತಾಗುತ್ತದೆ. ಇದು ಪ್ರಮುಖ ಪ್ರಜಾಪ್ರಭುತ್ವ ರಚನೆಯನ್ನು ನೇರವಾಗಿ ವಿರೋಧಿಸುತ್ತದೆ’ ಎಂದರು.

‘ನಗರ ಪಾಲಿಕೆಗಳ ಹೊಸ ವಾರ್ಡ್‌ಗಳಿಗೆ ಚುನಾವಣೆ ಮಾಡದೆ, ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಯಾವುದೇ ಅವಕಾಶ ಇಲ್ಲದಿದ್ದರೂ, ಕಾಯ್ದೆ ತಿದ್ದುಪಡಿ ಮಾಡಿ ಅದನ್ನು ಮಾಡಲು ಹೊರಟಿರುವುದು ಸಂವಿಧಾನ 74ನೇ ತಿದ್ದುಪಡಿಯ ಉಲ್ಲಂಘನೆಯಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ತಿದ್ದುಪಡಿ ಮಸೂದೆಯನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.


ಜಿಬಿಎಗೆ ಸೇರಿಕೊಳ್ಳುವ ಪಂಚಾಯಿತಿ ಪ್ರದೇಶಗಳಿಗೆ ನೇಮಕ: ನಗರಾಭಿವೃದ್ಧಿ ಇಲಾಖೆ 

ನಾಮನಿರ್ದೇಶನ: ಹೊಸ ಪ್ರದೇಶಕ್ಕೆ ಮಾತ್ರ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಹೊಸದಾಗಿ ಸೇರ್ಪಡೆಯಾಗುವ ಪಂಚಾಯಿತಿ ಅಥವಾ ಸ್ಥಳೀಯ ಪ್ರಾಧಿಕಾರಗಳಿಗೆ ಮಾತ್ರ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.

ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಮಸೂದೆ - 2025 ರಲ್ಲಿ ಪ್ರಕರಣ 30ಕ್ಕೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯಂತೆ, 

ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಸೇರ್ಪಡಿಸಲಾಗುವ ಸ್ಥಳಿಯ ಪ್ರದೇಶದ ಸಾಮಾನ್ಯ ನಿವಾಸಿಯನ್ನು ಪ್ರತಿ 20 ಸಾವಿರ ಜನ ಸಂಖ್ಯೆಗೆ ಕನಿಷ್ಟ ಒಬ್ಬ ವ್ಯಕ್ತಿಯಂತೆ ಆ ನಿರ್ದಿಷ್ಟ ನಗರ ಪಾಲಿಕೆಗೆ ಹೆಚ್ಚುವರಿ ಸದಸ್ಯನಾಗಿ ನಾಮ ನಿರ್ದೇಶನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅಂತಹ ನಾಮ ನಿರ್ದೇಶಿತ ವ್ಯಕ್ತಿಯು ಚುನಾಯಿತ ಪ್ರತಿನಿಧಿಯಾಗಿಲ್ಲದ ಕಾರಣ ಆ ನಗರ ಪಾಲಿಕೆಯಲ್ಲಿ ಮತದಾನ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ ಹಾಗೂ ಆ ಸ್ಥಳೀಯ ಪ್ರದೇಶಕ್ಕೆ ಚುನಾವಣೆ ನಡೆಸುವವರೆವಿಗೆ ಮಾತ್ರ ನಾಮ ನಿರ್ದೇಶಿತ ಸದಸ್ಯನಾಗಿ ಮುಂದುವರೆಯಲು ಅವಕಾಶವಿರುತ್ತದೆ.

ಯಾವುದಾದರೂ ಪಂಚಾಯಿತಿ ಪ್ರದೇಶದ ಭಾಗವನ್ನು ಚಿಕ್ಕ ನಗರ ಪ್ರದೇಶದಲ್ಲಿ ವಿಲೀನಗೊಳಿಸಿದ ಸಂದರ್ಭದಲ್ಲಿ, ಮುನಿಸಿಪಲ್ ಕೌನ್ಸಿಲ್ ಅನ್ನು ಪುನ‌ರ್ ರಚಿಸುವವರೆವಿಗೆ ಅಂತಹ ಪ್ರದೇಶದ ಸಾಮಾನ್ಯ ನಿವಾಸಿಯಾಗಿರುವ ವ್ಯಕ್ತಿಯನ್ನು ಹೆಚ್ಚುವರಿ ಕೌನ್ಸಿಲರ್ ಆಗಿ ಸರ್ಕಾರವು ನಾಮ ನಿರ್ದೇಶನಗೊಳಿಸುವ ಬಗ್ಗೆ ಕರ್ನಾಟಕ ಮುನಿಸಿಪಾಲಿಟಿ ಅಧಿನಿಯಮ, 1964ರ ಪ್ರಕರಣ 360 (ಡಿ) ರಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಗರ ಪಾಲಿಕೆಗಳ ವಾರ್ಡ್‌ಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರವು ಬದ್ದವಾಗಿದೆ. ಒಟ್ಟು 369 ವಾರ್ಡ್‌ಗಳ ಪುನರ್ ವಿಂಗಡಣೆಯನ್ನು ಮಾಡಲಾಗಿದೆ. ಈ ರೀತಿ 369 ವಾರ್ಡ್‌ಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.


Friday, December 12, 2025

Bengaluru’s Waste for Cement Factory… ಸಿಮೆಂಟ್‌ ಕಾರ್ಖಾನೆಗೆ ನಗರದ ಕಸ

🚚 300 to 350 Tonnes of Low-Value Plastic Sent Daily to Factory in Kadapa, Andhra Pradesh

City's Waste for Cement Factory


Bengaluru: Create image of The Bengaluru Solid Waste Management Limited (BSWML) has decided to supply 300 to 350 tonnes of 'Low Value Plastic' (LVP) daily from the city to a cement factory in Kadapa, Andhra Pradesh.

Dalmia Cements Limited, Kadapa, has requested the supply of Low Value Plastic for the operation of their cement factory unit. The plastic waste needs to be supplied daily starting from December 15. Several other cement factories have also shown interest. Hence, there is a need to further increase the rate of waste segregation in the city. This waste will be used by them as fuel in the factory, said BSWML CEO Karigowda.

Initially, 18 tonnes were being sent in four compactors to the Waste-to-Energy plant in Bidadi. Now, 300 to 350 tonnes of LVP are being disposed of daily in 60-70 compactors. 11.99 lakh tonnes were disposed of in October and 67.26 lakh tonnes in November. This has reduced the waste being sent to the landfill by 302 compactors, he informed.

He appealed, "If citizens scientifically segregate and dispose of solid waste, we can maintain our surrounding environment as beautiful and clean, and prevent damage to nature. Therefore, instead of dumping waste in unauthorized areas, citizens should segregate wet, dry, and domestic hazardous sanitary waste and hand it over to the garbage vehicles."

₹1,000 Profit Per Tonne: Karigowda

"By providing LVP to the cement factory, they will provide 'Extended Producer Responsibility' (EPR) to BSWML. We can sell this to companies that use plastic, including soft drink manufacturers. We expect a profit of ₹1,000 per tonne," said BSWML CEO Karigowda.

"Companies that use plastic have the responsibility to process it. Even if they don't do it directly, they can fulfill their responsibility by purchasing the EPR from those who have acquired it. We can use EPR like TDR (Transferable Development Rights) for buildings," he added.

"We will have to spend ₹1,000 per tonne to transport the waste to Kadapa. Tenders have been invited for the use of large compactors for this. Loading and unloading are the responsibility of the cement company. This means 300 to 350 tonnes of waste from our city is taken out and processed daily," he informed.

♻️ Dry Waste Collection Centers in Every Ward

There is a plan to establish dry waste collection centers in every ward to collect dry waste within those areas, and tenders have been invited from private entities for this purpose.

Tenders have been invited from waste pickers/waste pickers' associations/Self-Help Groups, NGOs, and C&T contractors. They must run and manage the dry waste collection centers for a period of five years, informed BSWML CEO Karigowda.

"They can establish the dry waste collection centers on Corporation (city council) land. The rent has been fixed from ₹25,000 to ₹1 lakh. Citizens who bring dry waste to these centers will sell it to them (the operators). The center operators will sell the segregated and recyclable materials. The remaining waste will be delivered by us to the Waste-to-Energy or cement factory units," he concluded.


ALSO READ…. Waste Lights Up Thousands of Homes…. ಕಸದಿಂದ ಸಾವಿರಾರು ಮನೆಗಳಿಗೆ ಬೆಳಕು

ಆಂಧ್ರಪ್ರದೇಶದ ಕಡಪದಲ್ಲಿರುವ ಕಾರ್ಖಾನೆಗೆ ಪ್ರತಿನಿತ್ಯ 300ರಿಂದ 350 ಟನ್‌ ಕಳಪೆ ಪ್ಯಾಸ್ಟಿಕ್‌ ರವಾನೆ

ಸಿಮೆಂಟ್‌ ಕಾರ್ಖಾನೆಗೆ ನಗರದ ಕಸ

ಬೆಂಗಳೂರು: ಆಂಧ್ರಪ್ರದೇಶದ ಕಡಪದಲ್ಲಿರುವ ಸಿಮೆಂಟ್‌ ಕಾರ್ಖಾನೆಗೆ ನಗರದಿಂದ ಪ್ರತಿನಿತ್ಯ 300ರಿಂದ 350 ಟನ್‌ ‘ಲೋ ವ್ಯಾಲ್ಯೂ ಪ್ಲಾಸ್ಟಿಕ್‌’ (ಎಲ್‌ವಿಪಿ) ಅನ್ನು ಸರಬರಾಜು ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ನಿರ್ಧರಿಸಿದೆ.

ಕಡಪದಲ್ಲಿರುವ ದಾಲ್ಮಿಯಾ ಸಿಮೆಂಟ್ಸ್‌ ಲಿಮಿಟೆಡ್‌ ಸಿಮೆಂಟ್‌ ಕಾರ್ಖಾನೆಯ ಘಟಕದ ಕಾರ್ಯನಿರ್ವಹಣೆಗೆ ಕಡಿಮೆ ಮೌಲ್ಯದ ಪ್ಲಾಸ್ಟಿಕ್‌ ಸರಬರಾಜು ಮಾಡಲು ಕೋರಿದೆ. ಡಿ.15ರಿಂದ ಪ್ರತಿನಿತ್ಯವೂ ಪ್ಲಾಸ್ಟಿಕ್‌ ತ್ಯಾಜ್ಯ ಒದಗಿಸಬೇಕಾಗಿದೆ. ಇನ್ನೂ ಹಲವು ಸಿಮೆಂಟ್‌ ಕಾರ್ಖಾನೆಗಳೂ ಆಸಕ್ತಿ ತೋರಿವೆ.  ಹೀಗಾಗಿ, ನಗರದಲ್ಲಿ ತ್ಯಾಜ್ಯ ವಿಂಗಡಣೆಯ ಪ್ರಮಾಣವನ್ನು ಇನ್ನು ಹೆಚ್ಚಿಸುವ ಅಗತ್ಯವಿದೆ. ಈ ತ್ಯಾಜ್ಯವನ್ನು ಅವರು ಇಂಧನವಾಗಿ ಕಾರ್ಖಾನೆಯಲ್ಲಿ ಬಳಸಲಿದ್ದಾರೆ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಸಿಇಒ ಕರೀಗೌಡ ತಿಳಿಸಿದರು.

ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಘಟಕಕ್ಕೆ ಆರಂಭದಲ್ಲಿ 18 ಟನ್‌ ಅನ್ನು ನಾಲ್ಕು ಕಾಂಪ್ಯಾಕ್ಟರ್‌ಗಳಲ್ಲಿ ಕಳುಹಿಸಲಾಗುತ್ತಿತ್ತು. ಇದೀಗೆ 60–70 ಕಾಂಪ್ಯಾಕ್ಟರ್‌ಗಳಲ್ಲಿ 300ರಿಂದ 350 ಟನ್‌ ಎಲ್‌ವಿಪಿ ಅನ್ನು ನಿತ್ಯ ವಿಲೇವಾರಿ ಮಾಡಲಾಗುತ್ತಿದೆ. ಅಕ್ಟೋಬರ್‌ನಲ್ಲಿ 11.99 ಲಕ್ಷ ಟನ್‌, ನವೆಂಬರ್‌ನಲ್ಲಿ 67.26 ಲಕ್ಷ ಟನ್‌ ವಿಲೇವಾರಿ ಮಾಡಲಾಗಿದೆ. ಇದರಿಂದ ಭೂಭರ್ತಿ ಪ್ರದೇಶಕ್ಕೆ ಕಳುಹಿಸಲಾಗುತ್ತಿದ್ದ 302 ಕಾಂಪ್ಯಾಕ್ಟರ್‌ಗಳ ತ್ಯಾಜ್ಯ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

‘ನಾಗರಿಕರು ವೈಜ್ಞಾನಿಕವಾಗಿ ಘನತ್ಯಾಜ್ಯ ವಿಂಗಡಣೆ ಮಾಡಿ ವಿಲೇವಾರಿ ಮಾಡಿದಲ್ಲಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುಂದರ ಮತ್ತು ಸ್ವಚ್ಛವಾಗಿ ಕಾಪಾಡಿಕೊಂಡು ಪ್ರಕೃತಿಯ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಬಹುದಾಗಿದೆ. ಆದ್ದರಿಂದ, ಅನಧಿಕೃತ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುರಿಯದೆ, ಹಸಿ, ಒಣ ತ್ಯಾಜ್ಯ ಮತ್ತು ಗೃಹ ಹಾನಿಕಾರ ನೈರ್ಮಲ್ಯ ತ್ಯಾಜ್ಯವನ್ನು ವಿಂಗಡಿಸಿ ಕಸದ ವಾಹನಗಳಿಗೆ ನೀಡಬೇಕು’ ಎಂದ ಮನವಿ ಮಾಡಿದರು.

 

ಟನ್‌ಗೆ ₹1 ಸಾವಿರ ಲಾಭ: ಕರೀಗೌಡ

‘ಸಿಮೆಂಟ್ ಕಾರ್ಖಾನೆಗೆ ಎಲ್‌ವಿಪಿ ನೀಡುವುದರಿಂದ ಅವರು ನಮಗೆ ‘ಎಕ್ಸ್‌ಟೆನ್‌ಡೆಂಡ್‌ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ’ (ಇಪಿಆರ್‌) ಅನ್ನು ಬಿಎಸ್‌ಡಬ್ಲ್ಯುಎಂಎಲ್‌ಗೆ ನೀಡಲಿದ್ದಾರೆ. ಇದನ್ನು ತಂಪುಪಾನೀಯ ಸೇರಿದಂತೆ ಪ್ಲಾಸ್ಟಿಕ್‌ ಬಳಸುವ ಕಂಪನಿಗಳಿಗೆ ನಾವು ಮಾರಾಟ ಮಾಡಿಕೊಳ್ಳಬಹುದು. ಪ್ರತಿ ಟನ್‌ಗೆ ₹1 ಸಾವಿರ ಲಾಭ ಬರುವ ನಿರೀಕ್ಷೆ ಇದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ಹೇಳಿದರು.

‘ಪ್ಲಾಸ್ಟಿಕ್‌ ಬಳಸುವ ಕಂಪನಿಗಳಿಗೆ ಅವುಗಳನ್ನು ಸಂಸ್ಕರಿಸುವ ಜವಾಬ್ದಾರಿಯೂ ಇರುತ್ತದೆ. ಅದನ್ನು ಅವರು ನೇರವಾಗಿ ಮಾಡದಿದ್ದರೂ, ಇಪಿಆರ್‌ ಪಡೆದವರಿಂದ ಅದನ್ನು ಖರೀದಿಸಿ ಜವಾಬ್ದಾರಿ ನಿರ್ವಹಿಸಬಹುದು. ಕಟ್ಟಡಗಳ ಟಿಡಿಆರ್‌ನಂತೆ ನಾವು ಇಪಿಆರ್‌ ಅನ್ನು ಬಳಸಬಹುದು’ ಎಂದರು.

‘ಕಡಪಗೆ ನಾವು ತ್ಯಾಜ್ಯವನ್ನು ಸಾಗಿಸಲು ಪ್ರತಿ ಟನ್‌ಗೆ ₹1 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಬೃಹತ್‌ ಕಾಂಪ್ಯಾಕ್ಟರ್‌ಗಳನ್ನು ಬಳಸಲು ಇದಕ್ಕಾಗಿ ಟೆಂಡರ್‌ ಕರೆಯಲಾಗಿದೆ. ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಸಿಮೆಂಟ್‌ ಕಂಪನಿಯವರದ್ದೇ ಆಗಿದೆ. ನಮ್ಮ ನಗರದಿಂದ ಪ್ರತಿನಿತ್ಯ 300ರಿಂದ 350 ಟನ್‌ ತ್ಯಾಜ್ಯ ಹೊರಗೆ ಹೋಗಿ, ಸಂಸ್ಕರಣೆಯಾಗುತ್ತದೆ’ ಎಂದು ಮಾಹಿತಿ ನೀಡಿದರು.


ಪ್ರತಿ ವಾರ್ಡ್‌ನಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರ

ಒಣ ತ್ಯಾಜ್ಯವನ್ನು ಆಯಾ ಪ್ರದೇಶಗಳಲ್ಲಿಯೇ ಸಂಗ್ರಹಿಸುವ ಕೇಂದ್ರಗಳನ್ನು ಪ್ರತಿ ವಾರ್ಡ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಖಾಸಗಿಯವರಿಂದ ಟೆಂಡರ್ ಆಹ್ವಾನಿಸಲಾಗಿದೆ.

ತ್ಯಾಜ್ಯ ಆಯುವವರು/ ತ್ಯಾಜ್ಯ ಆಯುವವರ ಸಂಘಟನೆಗಳು/ ಸ್ವಸಹಾಯ ಗುಂಪು, ಎನ್‌ಜಿಒ, ಸಿಆ್ಯಂಡ್‌ಟಿ ಗುತ್ತಿಗೆದಾರರಿಂದ ಟೆಂಡರ್‌ ಆಹ್ವಾನಿಸಲಾಗಿದೆ. ಅವರು ಐದು ವರ್ಷದ ಅವಧಿಗೆ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ನಡೆಸಿ, ನಿರ್ವಹಣೆ ಮಾಡಬೇಕು ಎಂದು ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ತಿಳಿಸಿದರು.

‘ನಗರ ಪಾಲಿಕೆಗಳ ಜಾಗದಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಅವರು ಸ್ಥಾಪಿಸಿಕೊಳ್ಳಬಹುದು. ₹25 ಸಾವಿರದಿಂದ ₹1 ಲಕ್ಷದವರೆಗೆ ಬಾಡಿಗೆ ನಿಗದಿಪಡಿಸಲಾಗಿದೆ. ಈ ಕೇಂದ್ರಗಳಲ್ಲಿ ನಾಗರಿಕರು ಒಣ ತ್ಯಾಜ್ಯ ತಂದು ಕೊಟ್ಟರೆ ಅವರು ಖರೀದಿಸುತ್ತಾರೆ. ಇಲ್ಲಿ ವಿಂಗಡನೆ ಮಾಡಿ ಮರುಬಳಕೆ ಮಾಡುವುದನ್ನು ಕೇಂದ್ರದವರು ಮಾರಾಟ ಮಾಡಿಕೊಳ್ಳುತ್ತಾರೆ. ಉಳಿದ್ದನ್ನು ನಾವು, ವಿದ್ಯುತ್‌ ಅಥವಾ ಸಿಮೆಂಟ್‌ ಕಾರ್ಖಾನೆ ಘಟಕಗಳಿಗೆ ತಲುಪಿಸುತ್ತೇವೆ’ ಎಂದು ಹೇಳಿದರು.