Sunday, January 11, 2026

Greater Bengaluru Authority Violates Act ನಾಲ್ಕೇ ತಿಂಗಳಲ್ಲಿ ಜಿಬಿಎ ಕಾಯ್ದೆ ಉಲ್ಲಂಘನೆ

Greater Bengaluru Authority Violates Act: Second Meeting Delayed Beyond Mandatory Deadline



Kere Manjunath ಕೆರೆ ಮಂಜುನಾಥ್

BENGALURU: Just four months after its inception, the Greater Bengaluru Authority (GBA) has come under scrutiny for violating its own governing statutes. Despite a clear legal mandate to hold periodic reviews, the Authority has failed to convene its second board meeting within the prescribed timeframe.

A Breach of Statutory Obligations

Under Section 12 of Chapter 3 of the Greater Bengaluru Governance Act (GBGA), the Chairperson of the GBA is required to convene a meeting at least once every three months.

The GBA was formally established on September 2, 2025, and held its inaugural meeting under the chairmanship of Chief Minister Siddaramaiah on October 10, 2025. According to the Act, the subsequent meeting should have taken place no later than January 10, 2026. However, as of today, no preparations for this mandatory session appear to be underway.

Stagnation Despite Structural Reforms

The first meeting focused on critical foundational steps, including the appointment of officials and the delegation of planning authority responsibilities. To further streamline governance, the GBGA was recently amended to include high-ranking officials—such as the Chief Secretary, the Additional Chief Secretary of Urban Development, and Finance Department representatives—as board members.

While these changes were intended to accelerate decision-making for Bengaluru’s urban development, critics argue that the structural reforms are meaningless if the board fails to meet.

Provisions for Leadership Absence

The Act provides clear alternatives to ensure continuity in governance. In the absence of the Chief Minister, the Vice-Chairperson—Deputy Chief Minister and Bengaluru Development Minister D.K. Shivakumar—is empowered to preside over the meetings. Furthermore, the law allows attending members to elect a temporary chair from among themselves to conduct business if both the Chair and Vice-Chair are unavailable.

Despite these provisions, neither the top leadership nor the council of ministers and MLAs have shown the necessary initiative to push for the meeting, leading to a direct violation of the Act. One city minister reportedly remarked, "The decision to hold the GBA meeting rests with the Deputy CM; after all, he is the minister-in-charge of Bengaluru."

Transparency Concerns

The GBA is also facing criticism for a lack of transparency. Clause 6 of Section 12 stipulates that minutes and summary notes of every meeting must be recorded and made available to the public within three days of the session.

More than three months after the initial meeting on October 10, 2025, no official records or decisions from that session have been released to the public.

 "The meeting should have been conducted. We will coordinate with the Chief Minister and Deputy Chief Minister to schedule the GBA meeting immediately."

 Maheshwar Rao, Chief Commissioner, GBA


Greater Bengaluru Authority Violates Act ನಾಲ್ಕೇ ತಿಂಗಳಲ್ಲಿ ಜಿಬಿಎ ಕಾಯ್ದೆ ಉಲ್ಲಂಘನೆ 








Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೂರು ತಿಂಗಳೊಳಗೆ ನಡೆಯದೆ ಎರಡನೇ ಜಿಬಿಎ ಸಭೆ

ನಾಲ್ಕೇ ತಿಂಗಳಲ್ಲಿ ಜಿಬಿಎ ಕಾಯ್ದೆ ಉಲ್ಲಂಘನೆ

Kere Manjunath ಕೆರೆ ಮಂಜುನಾಥ್

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿ ನಾಲ್ಕೇ ತಿಂಗಳಿಗೆ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದನ್ನು ಜಿಬಿಎ ಮರೆತುಹೋಗಿದೆ.

ಜಿಬಿಜಿಎಯ ಅಧ್ಯಾಯ–3ರ ಪ್ರಕರಣ 12ರ ಪ್ರಕಾರ, ‘ಜಿಬಿಎ ಅಧ್ಯಕ್ಷರು ಪ್ರತಿ ಮೂರು ತಿಂಗಳಿಗೆ ಕನಿಷ್ಠ ಒಂದು ಬಾರಿ ಜಿಬಿಎ ಸಭೆ ಕರೆಯಬೇಕು’. ಜಿಬಿಎಯ ಮೊದಲ ಸಭೆ 2025ರ ಅಕ್ಟೋಬರ್‌ 10ರಂದು ನಡೆದಿತ್ತು. 2026ರ ಜನವರಿ 10ರೊಳಗೆ ಕನಿಷ್ಠ ಒಂದು ಸಭೆಯನ್ನಾದರೂ ನಡೆಸಬೇಕಿತ್ತು. ಆದರೆ ಈ ಸಭೆ ಬಗ್ಗೆ ಇನ್ನೂ ತಯಾರಿಯೇ ನಡೆದಿಲ್ಲ.

2025ರ ಸೆಪ್ಟೆಂಬರ್‌ 2ರಂದು ರಚನೆಯಾದ ಜಿಬಿಎಯ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅ.10ರಂದು ನಡೆದಿದ್ದ ಮೊದಲ ಸಭೆಯಲ್ಲಿ, ಜಿಬಿಎಗೆ ಅಧಿಕಾರಿಗಳ ನೇಮಕ, ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ನೀಡಲಾಗಿತ್ತು. ತದ ನಂತರ ಜಿಬಿಎ ಸಭೆ ನಡೆದಿಲ್ಲ. ಮೂರು ತಿಂಗಳಿಗೆ ಕನಿಷ್ಠ ಒಂದು ಸಭೆ ನಡೆಯಬೇಕೆಂದು ಕಾಯ್ದೆಯಲ್ಲಿದೆ. ಅಂದರೆ, ನಗರ ಅಭಿವೃದ್ಧಿಗಾಗಿ ಒಂದಕ್ಕಿಂತ ಎಷ್ಟಾದರೂ ಸಭೆಯನ್ನು ನಡೆಸಬಹುದು. ಆದರೆ, ನಗರ ಅಭಿವೃದ್ಧಿಯ ಯೋಜನೆಗಳತ್ತ ರಾಜ್ಯದ ಚುಕ್ಕಾಣಿ ಹಿಡಿದಿದವರು ದೃಷ್ಟಿ ಹರಿಸಿಲ್ಲ.

ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಸೇರಿದಂತೆ ಹಲವು ಅಧಿಕಾರಿಗಳನ್ನು ಜಿಬಿಎ ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಜಿಬಿಜಿಎಗೆ ತಿದ್ದುಪಡಿಯನ್ನೂ ತರಲಾಗಿದೆ. ಇದರಿಂದ ಜಿಬಿಎ ಸಭೆಯಲ್ಲಿ ನಿರ್ಧಾರವಾಗುವ ವಿಷಯಗಳಿಗೆ ಹೆಚ್ಚಿನ ವೇಗ ಸಿಗುತ್ತದೆ ಎಂಬ ಉದ್ದೇಶವಿದೆ. ಆದರೆ, ಸಭೆಯೇ ನಡೆದೆ ಯಾವ ಉದ್ದೇಶವೂ ಈಡೇರುವಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಜಿಬಿಜಿಎಯಂತೆ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಜಿಬಿಎ ಉಪಾಧ್ಯಕ್ಷ ಸಭೆಯ ಅಧ್ಯಕ್ಷತೆಯನ್ನು ವಹಿಸಬಹುದು. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪದನಿಮಿತ್ತ ಜಿಬಿಎ ಉಪಾಧ್ಯಕ್ಷರಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಾದರೂ ಸಭೆ ನಡೆಸಬಹುದಿತ್ತು. ಇಲ್ಲದಿದ್ದರೆ, ಅವರಿಬ್ಬರ ಅನುಪಸ್ಥಿತಿಯಲ್ಲಿ ಜಿಬಿಎ ಸಭೆಯಲ್ಲಿ ಹಾಜರಿರುವ ಸದಸ್ಯರು ತಾವೇ ಇತರ ಸದಸ್ಯರೊಬ್ಬರನ್ನು ಆಯ್ಕೆ ಮಾಡಿ ಸಭೆಯ ಅಧ್ಯಕ್ಷರನ್ನಾಗಿ ಮಾಡಿ, ಕಲಾಪಗಳನ್ನು ನಡೆಸಬಹುದು.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರೇ ಜಿಬಿಎ ಸಭೆಗೆ ಮುಂದಾಗದಿರುವುದರಿಂದ ಕಾಯ್ದೆ ಉಲ್ಲಂಘನೆಯಾದರೂ ಸಚಿವರು, ಶಾಸಕರೂ ಸಭೆ ನಡೆಸುವ ಬಗ್ಗೆ ಹೆಚ್ಚಿನ ಒಲವು ತೋರಿಲ್ಲ. 

   ‘ಜಿಬಿಎ ಸಭೆ ನಡೆಸುವ ಬಗ್ಗೆ ಉಪ ಮುಖ್ಯಮಂತ್ರಿಯವರೇ ನಿರ್ಧರಿಸಬೇಕು. ಅವರೇ ಅಲ್ಲವೇ ಬೆಂಗಳೂರಿನ ಇನ್‌ಚಾರ್ಜ್‌’ ಎಂದು ನಗರದ ಸಚಿವರೊಬ್ಬರು ಪ್ರತಿಕ್ರಿಯಿಸಿದರು.  

 

ಸಾರ್ವಜನಿಕರಿಗೆ ಲಭ್ಯವಾಗದ ಮಾಹಿತಿ

2025ರ ಅಕ್ಟೋಬರ್‌ 10ರಂದು ನಡೆದ ಜಿಬಿಎಯ ಮೊದಲ ಸಭೆಯ ತೀರ್ಮಾನ ಹಾಗೂ ಸಂಕ್ಷಿಪ್ತ ಟಿಪ್ಪಣಿ ಸಾರ್ವಜನಿಕವಾಗಿ ಇನ್ನೂ ಲಭ್ಯವಾಗಿಲ್ಲ.

ಜಿಬಿಜಿಎ ಅಧ್ಯಾಯ–3ರ ಪ್ರಕರಣ– 12ರ 6ನೇ ಅಂಶದಂತೆ, ಜಿಬಿಎ ಸಭೆಯ ಎಲ್ಲ ತೀರ್ಮಾನಗಳು ಮತ್ತು ಸಂಕ್ಷಿಪ್ತ ಟಿಪ್ಪಣಿಗಳನ್ನು ದಾಖಲಿಸಬೇಕು. ಸಭೆಯ ಮುಗಿದ ಮೂರು ದಿನಗಳೊಳಗೆ ಅದನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಲಾಗಿದೆ. ಮೂರು ತಿಂಗಳಾದರೂ ಈ ಯಾವ ಮಾಹಿತಿಯೂ ಸಾರ್ವಜನಿಕವಾಗಿ ದೊರೆಯುತ್ತಿಲ್ಲ.

 

ಸಭೆ ಮಾಡಬೇಕಿತ್ತು, ಮುಖ್ಯಮಂತ್ರಿ– ಉಪ ಮುಖ್ಯಮಂತ್ರಿಯವರ ಸಮಯ ಪಡೆದು ಕೂಡಲೇ ಜಿಬಿಎ ಸಭೆ ನಡೆಸಲಾಗುತ್ತದೆ

ಮಹೇಶ್ವರ್‌ ರಾವ್‌, ಮುಖ್ಯ ಆಯುಕ್ತ, ಜಿಬಿಎ



 ಬಿಡಿಎಯಿಂದ ಯೋಜನಾ ಪ್ರಾಧಿಕಾರದ ಜವಾಬ್ದಾರಿ ಜಿಬಿಎಗೆ ಹಸ್ತಾಂತರ: ಡಿಸಿಎಂ ಡಿ.ಕೆ. ಶಿವಕುಮಾರ್

ಪಾಲಿಕೆ ಆಯುಕ್ತ, ಸ್ಥಾಯಿ ಸಮಿತಿ, ಮೇಯರ್‌ ವೆಚ್ಚದ ಮಿತಿ ಏರಿಕೆ

ಬೆಂಗಳೂರು: ‘ನಗರ ಪಾಲಿಕೆಗಳ ಆಯುಕ್ತರು, ಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ವೆಚ್ಚ ಮಿತಿಯನ್ನು ಹೆಚ್ಚಿಸಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ 2025ರ ಅಕ್ಟೋಬರ್ 10ರಂದು ನಡೆದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರ ಪಾಲಿಕೆಯ ವೆಚ್ಚದ ಮಿತಿಯನ್ನು ₹1 ಕೋಟಿಯಿಂದ ₹ 3 ಕೋಟಿಗೆ ಏರಿಸಲಾಗಿದೆ. ಸ್ಥಾಯಿ ಸಮಿತಿ ವೆಚ್ಚದ ಮಿತಿಯನ್ನು ₹3 ಕೋಟಿಯಿಂದ ₹5 ಕೋಟಿಗೆ  ಹಾಗೂ ಮೇಯರ್‌ ವೆಚ್ಚದ ಮಿತಿಯನ್ನು ₹5 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಲಾಗಿದೆ’ ಎಂದರು.

‘ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ನಗರದ ಯೋಜನಾ ಪ್ರಾಧಿಕಾರದ ಜವಾಬ್ದಾರಿ, ಟಿಡಿಆರ್ ನೀಡುವ ಅಧಿಕಾರವನ್ನು ಜಿಬಿಎಗೆ ನೀಡಲಾಗಿದೆ. ಬಿಡಿಎಯ ಈ ಅಧಿಕಾರವನ್ನು ಜಿಬಿಎಗೆ ಹಸ್ತಾಂತರಿಸಲಾಗಿದೆ.

‘ಜಿಬಿಎ ಜಾರಿಗೆ ತರುವಲ್ಲಿ ಶ್ರಮಿಸಿದ ಬಿ.ಎಸ್. ಪಾಟೀಲ್, ರವಿಚಂದ್ರನ್, ಸಿದ್ದಯ್ಯ ಅವರನ್ನೊಳಗೊಂಡ ಸಮಿತಿಗೆ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಐಎಎಸ್‌ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಹಾಗೂ ಮಹೇಶ್ವರ್ ರಾವ್ ಅವರ ತಂಡದ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಲಾಗುತ್ತದೆ. ರಿಜ್ವಾನ್ ಅರ್ಷದ್ ಅವರ ನೇತೃತ್ವದ ಸಮಿತಿ, ಜಿಬಿಜಿಎ ಆಡಳಿತ ಕಾಯ್ದೆಗೆ ವಿಧಾನಸಭೆ ಹಾಗೂ ಪರಿಷತ್ ಸದಸ್ಯರು ಇದಕ್ಕೆ ಸಹಕಾರ ನೀಡಿದ್ದು, ಎಲ್ಲಾ ಪಕ್ಷದ ಶಾಸಕರಿಗೆ ಅಭಿನಂದಿಸುವ ನಿರ್ಣಯ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು. 

ಸರ್ಕಾರದ ಶ್ರೀರಕ್ಷೆ: ‘ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಗೆದ್ದರೂ ಸರ್ಕಾರದ ಶ್ರೀರಕ್ಷೆ ಸದಾ ಪಾಲಿಕೆ ಮೇಲೆ ಇರಬೇಕು. ಎಲ್ಲಾ ಸಂದರ್ಭಗಳಲ್ಲಿ ಅನುದಾನದ ನೆರವು ಇರಬೇಕು ಎಂದು ಮುಖ್ಯಮಂತ್ರಿಯವರನ್ನು ಜಿಬಿಎ ಅಧ್ಯಕ್ಷರನ್ನಾಗಿ ಮಾಡಿದ್ದೇವೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಎಲ್ಲಾ ಆಸ್ತಿ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸುಮಾರು ₹2 ಸಾವಿರ ಕೋಟಿ ಆದಾಯ ಹೆಚ್ಚಳದ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈ ವರ್ಷ ₹6,200 ಕೋಟಿ ಆದಾಯ ಬಂದಿದ್ದು, ದೆಹಲಿಯಲ್ಲಿ ಕೇವಲ ₹2 ಸಾವಿರ ಕೋಟಿ ಮಾತ್ರ ಆದಾಯವಿದೆ’ ಎಂದರು.

ಅನಿವಾರ್ಯ ಕಾರಣ: ಜಿಬಿಎ ಸದಸ್ಯರೇ ಸಭೆಗೆ ಬಂದಿಲ್ಲ ಎಂದು ಕೇಳಿದಾಗ, ‘ಸಚಿವ ಕೃಷ್ಣ ಬೈರೇಗೌಡರು ಹಾಸನದಲ್ಲಿ ಹಾಸನಾಂಬ ದೇವರ ದರ್ಶನ ಕಾರ್ಯಕ್ರಮದ ಉಸ್ತುವಾರಿಯಲ್ಲಿದ್ದಾರೆ. ಬೈರತಿ ಸುರೇಶ್ ಅವರಿಗೆ ಶಸ್ತ್ರಚಿಕಿತ್ಸೆಯಾಗಿದೆ. ಇನ್ನು ಕೆಲವರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಉಳಿದಂತೆ ವಿರೋಧ ಪಕ್ಷದವರು ಎಲ್ಲರೂ ಗೈರಾಗಿದ್ದಾರೆ’ ಎಂದು ತಿಳಿಸಿದರು.

ಜಿಬಿಎ ಸಭೆಗೆ ಹಾಜರಾದವರು: ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್ ಖಾನ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಶಾಸಕರಾದ ಎಂ. ಕೃಷ್ಣಪ್ಪ, ಎ.ಸಿ. ಶ್ರೀನಿವಾಸ್, ರಿಜ್ವಾನ್ ಅರ್ಷದ್, ಬಿ.ಶಿವಣ್ಣ, ಯತೀಂದ್ರ ಸಿದ್ದರಾಮಯ್ಯ, ಕೆ. ಗೋವಿಂದರಾಜು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಐದು ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಜಿ.ಎಸ್‌. ರಮೇಶ್, ಕೆ.ಎನ್‌. ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಡಾ.ಕೆ.ವಿ ರಾಜೇಂದ್ರ, ಬೆಸ್ಕಾಂ, ಬಿಡಿಎ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

ಮೊದಲ ಬಾರಿಗೆ ಸಿ.ಎಂ ನೇತೃತ್ವ

ಬೆಂಗಳೂರು ನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯ ವಿಷಯ, ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು.

ಬಿಬಿಎಂಪಿ ಕೌನ್ಸಿಲ್‌ ಸಭೆ ನಡೆಯುತ್ತಿದ್ದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲಿಕೆಗಳಿಗೆ ಸಂಬಂಧಿಸಿದಂತೆ ಎರಡು ಕಾರ್ಯಸೂಚಿ ಹಾಗೂ 11 ವಿಷಯಗಳ ಬಗ ವಿಷಯ, ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

‘ಮುಂಬೈ ಮಾದರಿಯಲ್ಲಿ ಕೊಳೆಗೇರಿ ಪುನಶ್ಚೇತನಕ್ಕೆ ಸಮಿತಿ’

ಬೆಂಗಳೂರು: ‘ಮುಂಬೈ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಬೇಕು’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಜಿಬಿಎ ಅಧಿಕಾರಿಗಳಿಗೆ ಸೂಚಿಸಿದರು.

ಜಿಬಿಎ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳೆಗೇರಿ ಪ್ರದೇಶಗಳಿದ್ದು, ಅವುಗಳ ಅಭಿವೃದ್ಧಿ ಆಗಬೇಕು ಎಂದು ವಿಷಯ ಪ್ರಸ್ತಾಪಿಸಿದಾಗ, ‘ಶಾಂತಿನಗರದಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದ್ದೆವು. ಅದು ಯಶಸ್ವಿಯಾಗಲಿಲ್ಲ. ಹೀಗಾಗಿ ಜನರು ಈ ವಿಚಾರದಲ್ಲಿ ಹಿಂಜರಿಯುತ್ತಾರೆ. ಅದಕ್ಕಾಗಿ ಈ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ’ ಎಂದು ತಿಳಿಸಿದರು.

‘ನಮ್ಮ ಕ್ಷೇತ್ರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಇದಕ್ಕೆ ಪರಿಹಾರ ಬೇಕು. ಇದನ್ನು ಜಿಬಿಎ ನಿಭಾಯಿಸುವುದೇ ಅಥವಾ ಪಾಲಿಕೆ ನಿಭಾಯಿಸುವುದೇ’ ಎಂದು ಶಾಸಕ ಎ.ಸಿ. ಶ್ರೀನಿವಾಸ್ ಅವರು ಕೇಳಿದಾಗ, ‘ಕಸ ವಿಲೇವಾರಿ ವಿಚಾರವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 33 ಪ್ಯಾಕೇಜ್ ಟೆಂಡರ್ ಕರೆಯಲಾಗುವುದು. ಕಸ ವಿಲೇವಾರಿ ಜವಾಬ್ದಾರಿ ಸ್ಥಳೀಯ ಪಾಲಿಕೆಗಳು ನಿಭಾಯಿಸಲಿವೆ. ಇದರ ಸಮನ್ವಯತೆಯನ್ನು ಜಿಬಿಎ ಪಾಲಿಸಲಿದೆ’ ಎಂದರು.

ಆನೇಕಲ್ ಶಾಸಕರು ತಮ್ಮ ಪ್ರದೇಶವನ್ನು ಜಿಬಿಎ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದಾಗ, ‘ಈಗ ಘೋಷಣೆ ಆಗಿರುವ ಜಿಬಿಎ ವ್ಯಾಪ್ತಿಯಲ್ಲಿ ಮೊದಲು ಚುನಾವಣೆ ಆಗಲಿದೆ. ನಂತರ ಎಲ್ಲೆಲ್ಲಿ ಅಭಿವೃದ್ಧಿ ಆಗಿದೆ ಆ ಜಾಗಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸಲು ಸಮಿತಿ ರಚಿಸಿ ಯಾವ ಪ್ರದೇಶ ಸೇರಿಸಬೇಕು ಎಂದು ತೀರ್ಮಾನ ಮಾಡಲಾಗುವುದು. ಚುನಾವಣೆ ನಂತರ ಈ ಪ್ರಕ್ರಿಯೆಗೆ ಕೈಹಾಕಲಾಗುವುದು’ ಎಂದು ಹೇಳಿದರು.

ಪರಿಷತ್ ಸದಸ್ಯ ಗೋವಿಂದರಾಜು ಅವರು, ‘ಬೀದಿ ವ್ಯಾಪಾರಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ’ ಎಂದು ಕೇಳಿದಾಗ, ‘30 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿಯಾಗಿದ್ದು, ಅವರಿಗೆ ನಾಲ್ಕು ರೀತಿಯ ವಾಹನ ನೀಡಲು ಸಿದ್ಧತೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಶಾಸಕ ರಿಜ್ವಾನ್ ಅರ್ಷದ್ ಅವರು, ‘ಅನಾಥ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಸಂಚಾರ ದಟ್ಟಣೆ ಹಾಗೂ ಕಸದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ನಗರದ ಹೊರಗೆ 10 ಎಕರೆ ಪ್ರದೇಶ ಗುರುತಿಸಿ ಅಲ್ಲಿ ಈ ವಾಹನಗಳನ್ನು ಸ್ಥಳಾಂತರ ಮಾಡಬೇಕು’ ಎಂದರು. ‘ಈ ಜಾಗಗಳನ್ನು ಗುರುತಿಸಿ ಅಲ್ಲಿ ಕಾಂಪೌಂಡ್ ಹಾಕಿ ವಾಹನಗಳನ್ನು ಸ್ಥಳಾಂತರಿಸಿ. ಆಗ ಆ ವಾಹನಗಳನ್ನು ಬೇರೆಯವರು ಕದಿಯಲು ಆಗುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

 

‘*ಲಾಲ್‌ಬಾಗ್ ಹಾಳು ಮಾಡಿದರೆ ನನ್ನ ತಲೆ ಒಡೆಯುತ್ತಾರೆ’

‘ಲಾಲ್‌ಬಾಗ್ ಹಾಳಾಗುವುದಿಲ್ಲ. ಅದನ್ನು ಹಾಳು ಮಾಡಿದರೆ ನನ್ನ ತಲೆ ಒಡೆದು ಹಾಕುತ್ತಾರೆ ಎಂಬುದು ನನಗೆ ಗೊತ್ತಿದೆ. ಸುರಂಗ ರಸ್ತೆ ಒಂದು ಮೂಲೆಯಲ್ಲಿ ಭೂಗರ್ಭದಲ್ಲಿ ಹೋಗುತ್ತದೆ. ಲಾಲ್‌ಬಾಗ್‌ಗೆ ಯಾವುದೇ ತೊಂದರೆಯಾಗುವುದಿಲ್ಲ, ತೊಂದರೆ ಮಾಡಲು ಆಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

‘ಉದ್ಯಾನದ ಒಂದು ಮೂಲೆಯಲ್ಲಿ ಕಲ್ಲು ಬಂಡೆಯಿದ್ದು ಅಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸುವಂತೆ ಯೋಜಿಸಲಾಗಿದೆ. ಆ ಪ್ರದೇಶವನ್ನು ನಾನು ವೀಕ್ಷಣೆ ಮಾಡುತ್ತೇನೆ. ಏನಾದರೂ ತೊಂದರೆಗಳು, ಬದಲಾವಣೆಗಳಿದ್ದರೆ ಅದನ್ನು ಮಾಡಿಕೊಳ್ಳೋಣ’ ಎಂದರು.

 

=

ಬಿ–ಸ್ಮೈಲ್‌ ಕಾಮಗಾರಿಗಳಿಗೆ ಜಿಬಿಎ ಮುದ್ರೆ

ನಗರದಲ್ಲಿ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲು ಬೆಂಗಳೂರು ಸ್ಮಾರ್ಟ್
ಇನ್‌ಫ್ರಾಸ್ಟ್ರಕ್ಚರ್ ನಿಯಮಿತದ (ಬಿ-ಸ್ಮೈಲ್) ಯೋಜನೆಗಳಿಗೆ ಜಿಬಿಎ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಯೋಜನೆಗಳ ವಿವರ:

₹45,000 ಕೋಟಿ; ಎರಡು ಸುರಂಗ ರಸ್ತೆ

₹18,204 ಕೋಟಿ; 126.44 ಕಿ.ಮೀ ಉದ್ದದ 13 ಎತ್ತರಿಸಿದ ಕಾರಿಡಾರ್‌ಗಳು

₹9,000 ಕೋಟಿ; 40 ಕಿ.ಮೀ ಉದ್ದದ ಮೆಟ್ರೊ ಸಂಯೋಜಿತ ಡಬ್ಬಲ್ ಡೆಕರ್

₹3,000 ಕೋಟಿ; ರಾಜಕಾಲುವೆಗಳ ಪಕ್ಕದಲ್ಲಿ ಸುಮಾರು 380 ಕಿಮೀ ಉದ್ದ ಬಫರ್ ಸರ್ವಿಸ್‌ ರಸ್ತೆ

₹1,700 ಕೋಟಿ; 145.86 ಕಿ.ಮೀ ಉದ್ದದ ರಸ್ತೆಗಳಲ್ಲಿ ಸಮಗ್ರ ಅಭಿವೃದ್ಧಿ, ವೈಟ್ ಟಾಪಿಂಗ್

₹400 ಕೋಟಿ; ವಿಶ್ವದರ್ಜೆಯ 20.50 ಕಿ.ಮೀ ಐ.ಟಿ ಕಾರಿಡಾರ್ ಹೊರವರ್ತುಲ ರಸ್ತೆ

* ವಿವಿಧ ಇಲಾಖೆ/ಸಂಸ್ಥೆಗಳೊಂದಿಗೆ ಈಜಿಪುರ ಮೇಲ್ಸೇತುವೆ ಕಾಮಗಾರಿ, ಬೈಯಪ್ಪನಹಳ್ಳಿ ರೋಟರಿ ಕಾಮಗಾರಿ, ಹೈಡೆನ್ಸಿಟಿ ಕಾರಿಡಾರ್‌ ಕಾಮಗಾರಿಗಳು

 

ಜಿಬಿಎ ಸಭೆಯಲ್ಲಿ ಅನುಮೋದನೆಯಾದ ವಿಷಯಗಳು

* ಜಿಬಿಎ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಧಿಕಾರಿಗಳ ಸಮಿತಿ ರಚಿಸಲು ಮುಖ್ಯ ಆಯುಕ್ತರಿಗೆ ಅಧಿಕಾರ

* ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಮಹಾಯೋಜನೆ (ಮಾಸ್ಟರ್‌ ಪ್ಲಾನ್‌) ತಯಾರಿಕೆಯನ್ನು ಬಿಡಿಎಯಿಂದ ಜಿಬಿಎಗೆ ಹಸ್ತಾಂತರ

* ಜಿಬಿಎಯಿಂದ ಟಿಡಿಆರ್/ಡಿಆರ್‌ಸಿ ಹಾಗೂ ಬಳಕೆ ಪ್ರಮಾಣ ಪತ್ರಗಳ ವಿತರಣೆ

* ಎಲ್ಲಾ ನಗರ ಪಾಲಿಕೆಗಳು ತಮ್ಮ ಕರಡು ವಾರ್ಷಿಕ ಆಯವ್ಯಯವನ್ನು ಜಿಬಿಎ ಪರಿಶೀಲನೆಗೆ ಸಲ್ಲಿಸಬೇಕು. ಜಿಬಿಎ ಮೂಲಕ ಸರ್ಕಾರದ ಅನುಮೋದನೆಗೆ ಕಳುಹಿಸಬೇಕು

* ಬೆಸ್ಕಾಂ, ಜಲಮಂಡಳಿ, ಬಿಎಂಟಿಸಿ, ಬೆಂಗಳೂರು ಸಂಚಾರ ಪೊಲೀಸರು, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು ಐದು ನಗರ ಪಾಲಿಕೆಗಳು ಹಾಗೂ 10 ವಲಯಗಳಲ್ಲಿ ಪ್ರತಿಯೊಂದಕ್ಕೂ ಸಂಪರ್ಕ ಬಿಂದು ಅಧಿಕಾರಿಯನ್ನು (ಪಿಒಸಿ) ನೇಮಿಸಬೇಕು

* ಜಿಬಿಎ ಕಾರ್ಯಕಾರಿ ಸಮಿತಿ  ಕಾರ್ಯಕಾರಿ ಸಮಿತಿ, ಕೇಂದ್ರ ಸಂಯೋಜನಾ ಸಮಿತಿ ರಚನೆಗೆ ಅನುಮೋದನೆ

* ಐದು ನಗರ ಪಾಲಿಕೆಗಳ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ತಾತ್ಕಾಲಿಕ ಕಾರ್ಯಾಚರಣೆ ಸ್ಥಳಗಳಿಗೆ ಸಮ್ಮತಿ

* ಜಿಬಿಎ ಮುಖ್ಯ ಆಯುಕ್ತರು ಪ್ರತಿ ವರ್ಷ ಅಗತ್ಯ ಅನುಮೋದನೆ ಮತ್ತು ಅನುದಾನಗಳ ಬಿಡುಗಡೆ ಏಕೀಕೃತ ಬಜೆಟ್‌ ಅನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಜಿಬಿಎ ವತಿಯಿಂದ ಸರ್ಕಾರದ ಅನುದಾನಗಳನ್ನು ಕಾರ್ಯತಂತ್ರದ ಹೂಡಿಕೆ ಯೋಜನೆಯಲ್ಲಿ (ಎಸ್ಐಪಿ) ನಿರ್ವಹಣೆ. ಐದು ನಗರ ಪಾಲಿಕೆಗಳಿಗೆ ₹613.6 ಕೋಟಿ ವಿತರಣೆಗೆ ಅನುಮೋದನೆ

* ಜಿಬಿಎ ಮುಖ್ಯ ಆಯುಕ್ತರು ₹10 ಕೋಟಿವರೆಗಿನ ಯೋಜನಾಗಳಿಗೆ ಅನುಮೋದನೆ ನೀಡಲು ಸಮ್ಮತಿ

 

ಎಲ್ಲೆಲ್ಲಿ ನಗರ ಪಾಲಿಕೆಗಳ ಹೊಸ ಕಟ್ಟಡ

ಕೇಂದ್ರ ನಗರ ಪಾಲಿಕೆ; ಅನೆಕ್ಸ್‌–3 ಕಟ್ಟಡ, ಜಿಬಿಎ ಆವರಣ

ಪೂರ್ವ ನಗರ ಪಾಲಿಕೆ; ಮಹದೇವಪುರ ಹೊರ ವರ್ತುಲ ರಸ್ತೆ ( ಮೆಟ್ರೊ ನಿಲ್ದಾಣದ ಬಳಿ)

ಪಶ್ಚಿಮ ನಗರ ಪಾಲಿಕೆ; ವಿಜಯನಗರ ಬಿಡಿಎ ಸಂಕೀರ್ಣ (1.5 ಎಕರೆ) ಅಥವಾ ಅತಿಗುಪ್ಪೆ (3.5 ಎಕರೆ)

ಉತ್ತರ ನಗರ ಪಾಲಿಕೆ: ಚೊಕ್ಕನಹಳ್ಳಿ ಗ್ರಾಮ, ಸರ್ವೆ ನಂಬರ್ 75/4 (2 ಎಕರೆ)

ದಕ್ಷಿಣ ನಗರ ಪಾಲಿಕೆ; ಬನಶಂಕರಿ ಮೆಟ್ರೊ ನಿಲ್ದಾಣದ ಹತ್ತಿರ (3 ಎಕರೆ ಖಾಲಿ ಜಾಗ)

==

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಥಮ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ

ಸುಗಮ ಆಡಳಿತಕ್ಕೆ ಜಿಬಿಎ 

ಬೆಂಗಳೂರು: ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಮಸ್ತ ಜನರಿಗೆ ಸುಗಮ ಆಡಳಿತ, ಸಮರ್ಪಕ‌ ಅಭಿವೃದ್ಧಿಗಾಗಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಅಸ್ತಿತ್ವಕ್ಕೆ ಬಂದಿದೆ. ಅದರಡಿ ಐದು ನಗರ ಪಾಲಿಕೆಗಳು ರಚನೆಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ನಡೆದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ಜಿಬಿಎ ರಚನೆ ಹಿಂದಿನ‌ ಉದ್ದೇಶಗಳನ್ನು ಪ್ರಸ್ತಾಪಿಸಿ, ನಗರದ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ತಲುಪಿದೆ. ಒಂದು ಪಾಲಿಕೆಯಿಂದ ದೊಡ್ಡ ನಗರದ ಸಮರ್ಪಕ ಅಭಿವೃದ್ಧಿ ಬಹಳ ದೊಡ್ಡ ಸವಾಲು. ಈ ಚರ್ಚೆ ಹಲವು ವರ್ಷಗಳಿಂದ ಇದ್ದೇ ಇದೆ. ಒಂದಕ್ಕಿಂತ ಹೆಚ್ಚು ಪಾಲಿಕೆಗಳಿಂದ ಅಭಿವೃದ್ಧಿ ಸಾಧ್ಯ ಎನ್ನುವ ಕಾರಣಕ್ಕೆ, ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಸಮಿತಿ ರಚಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಈ ದಿಕ್ಕಿನಲ್ಲಿ ಗಮನಹರಿಸಲೇ ಇಲ್ಲ. ನಮ್ಮ ಸರ್ಕಾರವೇ ಪುನಃ ಅಧಿಕಾರಕ್ಕೆ ಬಂದ ಬಳಿಕ ಸಮಿತಿಯನ್ನು ಪುನರ್‌ ರಚಿಸಿ, ಅವರು ನೀಡಿದ ವರದಿಯಂತೆ ಮುಖ್ಯಮಂತ್ರಿ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ’ ಎಂದರು.

‘ಕಸ ವಿಲೇವಾರಿ ಆಗಬೇಕು. ಪಾಲಿಕೆಗಳ ಆದಾಯ ಹೆಚ್ಚಳ ಆಗಬೇಕು. ಟ್ರಾಫಿಕ್ ದಟ್ಟಣೆ ನಿವಾರಣೆ ಆಗಬೇಕು. ನಗರವನ್ನು ಚೊಕ್ಕವಾಗಿಡಬೇಕು. ರಸ್ತೆ, ಚರಂಡಿ, ಪಾದಚಾರಿ ಮಾರ್ಗ, ಉದ್ಯಾನಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಮಾದರಿ ಪಾಲಿಕೆಗಳನ್ನಾಗಿ ರೂಪಿಸಬೇಕು ಎನ್ನುವ ಮಹತ್ತರ ಗುರಿ ಮತ್ತು ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ಜಿಬಿಎ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

‘ನಮ್ಮ ಗುರಿ ಮತ್ತು ಉದ್ದೇಶ ನೆರವೇರಲು ಜಲಮಂಡಳಿ, ಬಿಡಿಎ, ಬೆಸ್ಕಾಂ ಸೇರಿ ಎಲ್ಲಾ ಇಲಾಖೆಗಳು ಜಿಬಿಎ ಜೊತೆ ಪರಸ್ಪರ ಸಹಕಾರ, ಸಹಯೋಗವನ್ನು ಅತ್ಯಂತ ಕಡ್ಡಾಯವಾಗಿ ಆಚರಣೆಗೆ ತರಬೇಕು’ ಸೂಚಿಸಿದರು.

 

ಚರ್ಚೆ-ಸಂವಾದದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಅಧಿಕಾರ ವಿಕೇಂದ್ರೀಕರಣ, ಬೆಂಗಳೂರಿನ ಅಭಿವೃದ್ಧಿ ಒಲ್ಲದವರು ಸಭೆಯನ್ನು ವಿರೋಧಿಸುತ್ತಾರೆ

ಸಿದ್ದರಾಮಯ್ಯ, ಮುಖ್ಯಮಂತ್ರಿ

 

ಪಾಲಿಕೆ ಚುನಾವಣೆ ಬಹಿಷ್ಕರಿಸಲಿ: ‌ಡಿಕೆಶಿ

‘ಬಿಜೆಪಿಯವರು ಜಿಬಿಎ ವಿರುದ್ಧ ಪ್ರತಿಭಟಿಸುವುದೇ ಆದರೆ, ಅವರು ನಗರ ಪಾಲಿಕೆಗಳ  ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕರಿಸಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಬಿಎ ರದ್ದು ಮಾಡಲಾಗುವುದು, ಸಭೆಯ ಅಜೆಂಡಾವನ್ನೇ ತಿಳಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರಲ್ಲಾ’ ಎಂಬ ಸುದ್ದಿಗಾರರರು ಕೇಳಿದಾಗ, ‘ಅವರು ಏನಾದರೂ ಟೀಕೆ ಮಾಡಲಿ ನಾವು ನಮ್ಮ ಜನಪರ ಕೆಲಸ ಮುಂದುವರಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ಯಾವುದೇ ಬೇರೆ ಸರ್ಕಾರ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಭೂಸುಧಾರಣಾ ಕಾಯ್ದೆಯಿಂದ ಬ್ಯಾಂಕುಗಳ ರಾಷ್ಟ್ರೀಕರಣ, ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಶೈಕ್ಷಣಿಕ ಹಕ್ಕು ಸೇರಿದಂತೆ ಗ್ಯಾರಂಟಿ ಯೋಜನೆಗಳವರೆಗೂ ಕಾಂಗ್ರೆಸ್ ಸರ್ಕಾರಗಳ ತೀರ್ಮಾನವನ್ನು ಬದಲಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘ಮೊದಲ ಸಭೆಯಲ್ಲಿ ಅಜೆಂಡಾ ಇರುವುದಿಲ್ಲ. ಜಿಬಿಎ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ತೀರ್ಮಾನ ಮಾಡಲಾಗುತ್ತದೆ. ಆದರೆ, ಸಭೆಗೆ ಗೈರಾಗುವ ಮೂಲಕ ಬಿಜೆಪಿ ನಾಯಕರು ಬೆಂಗಳೂರು ನಗರದ ವಿರುದ್ಧವಾಗಿ ನಿಂತಿದ್ದಾರೆ. ಜನರು ಕೊಟ್ಟ ಅಧಿಕಾರಕ್ಕೆ ದ್ರೋಹ ಬಗೆದಿದ್ದಾರೆ. ಜನರ ಪರವಾಗಿ ಧ್ವನಿ ಎತ್ತುವುದಕ್ಕಿಂತ ಅವರಿಗೆ ರಾಜಕಾರಣ ಮುಖ್ಯವಾಗಿದೆ. ಅವರ ಈ ನಡೆಗೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದರು.

 

ಜಿಬಿಎ ವಿರುದ್ಧ ಕಾನೂನು ಹೋರಾಟ: ಆರ್.ಅಶೋಕ

ಬೆಂಗಳೂರು: ಬೆಂಗಳೂರಿಗೆ ಮಾರಕವಾದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಪಕ್ಷದ ಶಾಸಕರ ಜತೆಗೂಡಿ ಸಭೆಯನ್ನು ಬಹಿಷ್ಕರಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಈಗಾಗಲೇ ಕೌನ್ಸಿಲ್‌ನಲ್ಲಿ ಹೋರಾಟ ಮಾಡಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಹಾಕಿದ್ದೇವೆ’ ಎಂದರು.

‘ಇದು ಬೆಂಗಳೂರು ಜನಪ್ರತಿನಿಧಿಗಳ ಕತ್ತು ಹಿಸುಕುವ ಮತ್ತು ಕಾನೂನು ಬಾಹಿರ ಕ್ರಮವಾಗಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿರುವುದರಿಂದ, ಇಂತಹ ಸಭೆಗೆ ಹೋಗಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದಾಗಿ ಎಲ್ಲ ಐದು ಮಹಾನಗರಪಾಲಿಕೆಗಳು ನೆಗೆದು ಬಿದ್ದುಹೋಗಿವೆ. ಎಲ್ಲ ಅಧಿಕಾರಗಳನ್ನು ಕೇವಲ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಕೌನ್ಸಿಲ್‌ಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಇದು ಸಂವಿಧಾನ ವಿರೋಧವಾಗಿರುವುದರಿಂದ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ’ ಎಂದರು.

ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸೃಷ್ಟಿಸಿರುವ ಜಿಬಿಎ ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ಳುವ ಪ್ರಾಧಿಕಾರವಾಗಿದೆ ಎಂದು ಹೇಳಿದರು.

ಬಿಬಿಎಂಪಿ ಅಡಿಯಲ್ಲಿ ಚುನಾವಣೆ ಮಾಡಿದ್ದರೆ ಗೆಲ್ಲುವುದಿಲ್ಲ ಎಂಬ ಕಾರಣಕ್ಕೆ ಜಿಬಿಎ ಮಾಡಿದ್ದಾರೆ.  ಐದು ಪಾಲಿಕೆಗಳಲ್ಲಿ ಕನಿಷ್ಠ ಒಂದೆರಡಾದರೂ ಗೆಲ್ಲಬೇಕು ಎಂಬುದೇ ಅವರ ಉದ್ದೇಶ ಎಂದರು.


Friday, January 9, 2026

Draft Reservation for Wards of Five City Corporations Published… CENTRAL … ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ

 

Draft Reservation for Wards of Five City Corporations Published… CENTRAL



Bengaluru: Following the final notification of wards for the five city corporations under the GBA (Greater Bengaluru Area) jurisdiction, the Urban Development Department has issued a draft notification fixing the reservation for these wards.  

The final notification finalizing the 369 wards of the five city corporations was issued on November 19.  

The ward reservation for the Bengaluru CENTRAL City Corporation is as follows:


The ward-wise reservation for the newly established Bengaluru Central City Corporation. The corporation consists of 63 wards, and reservations are based on the 2011 Census.
Summary of Reservations
The numerical breakdown of reservations for the 63 wards is as follows:
| Category | Total Seats | Women Reserved (Included in Total) |
|---|---|---|
| Scheduled Caste (SC) | 11 | 5 |
| Scheduled Tribe (ST) | 4 | 2 |
| Backward Class "A" | 15 | 7 |
| Backward Class "B" | 1 | 0 |
| General | 32 | 16 |
| Total | 63 | 30 |

Ward-wise Reservation List
The following list details the reservation for each ward, organized by assembly constituency.

162 - Shivajinagar
| Ward No. | Ward Name | Reservation |
|---|---|---|
| 1 | Ramaswamy Palya | General (Women) |
| 2 | Jayamahal | Scheduled Caste |
| 3 | Vasanth Nagar | Backward Class "A" (Women) |
| 4 | Sampangirama Nagar | Backward Class "A" (Women) |
| 5 | Shivajinagar | General |
| 6 | Bharathi Nagar | General (Women) |
| 7 | K Kamaraj Ward | General (Women) |
| 8 | Halasuru | Scheduled Caste (Women) |
161 - C.V. Raman Nagar
| Ward No. | Ward Name | Reservation |
|---|---|---|
| 9 | Hoysala Nagara Central | Scheduled Caste |
| 10 | Cox Town | General |
| 11 | Old Baiyappanahalli | Scheduled Caste (Women) |
| 12 | Kasturi Nagar | Backward Class "B" |
| 13 | Krishnaiahnapalya | General (Women) |
| 14 | Nagavarapalya | Backward Class "A" |
| 15 | Indiranagar | General |
| 16 | New Thippasandra | General (Women) |
| 17 | Kaggadasapura | Backward Class "A" |
| 18 | G.M Palya | General (Women) |
| 19 | Jeevan Bhimanagar | Backward Class "A" |
| 20 | Kodihalli | General |
163 - Shantinagar
| Ward No. | Ward Name | Reservation |
|---|---|---|
| 21 | Konena Agrahara | General (Women) |
| 22 | Domluru | Backward Class "B" (Women) |
| 23 | Jogpalya | General (Women) |
| 24 | Agaram | Scheduled Caste |
| 25 | Ashokanagar | Backward Class "B" (Women) |
| 26 | Vannarpet | Scheduled Tribes |
| 27 | Ambedkarnagar | Scheduled Caste |
| 28 | Neelasandra | Backward Class "A" (Women) |
| 29 | Austin Town | Backward Class "A" |
| 30 | Vinayakanagar | General (Women) |
| 31 | Shanthinagar | Backward Class "B" |
169 - Chickpet
| Ward No. | Ward Name | Reservation |
|---|---|---|
| 32 | Silver Jubilee Park Ward | Scheduled Caste (Women) |
| 33 | Dharmaraya Swamy Temple Ward | General (Women) |
| 34 | D.V Gundappa Ward | General |
| 35 | Hombegowda Nagara | General |
| 36 | Someshwara Nagara | General |
| 37 | BHEL Ward | Backward Class "A" |
| 38 | Kanakanapalya | General (Women) |
| 39 | Venkat Reddy Nagara | General |
| 40 | Ashoka Pillar | General |
| 41 | V.V Puram | General (Women) |
| 42 | Sunkenahalli | General (Women) |
| 43 | Devaraj Urs Ward | General |
168 - Chamarajpet
| Ward No. | Ward Name | Reservation |
|---|---|---|
| 44 | Chamarajpet | General |
| 45 | K.R Market | Backward Class "A" |
| 46 | Cheluvadi Palya | Scheduled Caste (Women) |
| 47 | IPD Salappa Ward | Scheduled Caste (Women) |
| 48 | Azad Nagar | General |
| 49 | Kasturbha Nagar | Backward Class "A" (Women) |
| 50 | JJR Nagara | Backward Class "A" (Women) |
| 51 | Old Guddadahalli | General (Women) |
| 52 | Padarayanapura | General |
| 53 | Rayapuram | Scheduled Caste |
164 - Gandhinagara
| Ward No. | Ward Name | Reservation |
|---|---|---|
| 54 | Binnypete | General |
| 55 | Bhuvaneshwari Nagar | Backward Class "A" |
| 56 | Gopalpura | Backward Class "A" |
| 57 | Cottonpete | General |
| 58 | Chickpete | General (Women) |
| 59 | Nehru Nagar | Backward Class "A" (Women) |
| 60 | Seshadripuram | General (Women) |
| 61 | Dattatreya Ward | General |
| 62 | Swatantra Palya Ward | Scheduled Caste |
| 63 | Okalipuram | Backward Class "A" (Women) |









Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..


ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ 

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ಗಳ ಅಂತಿಮ ಅಧಿಸೂಚನೆಯಂತೆ ವಾರ್ಡ್ ಗಳಿಗೆ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ, ಕರಡು ಅಧಿಸೂಚನೆ ಹೊರಡಿಸಿದೆ.

ಐದು ನಗರ ಪಾಲಿಕೆಗಳ 369 ವಾರ್ಡ್ ಅಂತಿಮಗೊಳಿಸಿ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

 

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಾರ್ಡ್ ಗಳ ಮೀಸಲಾತಿ ಹೀಗಿದೆ…



ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕರಡು ವಾರ್ಡ್
ಮೀಸಲಾತಿಯ ಸಾಂಖ್ಯಿಕ ವಿವರ
63 ವಾರ್ಡ್‌ಗಳ ವರ್ಗವಾರು ಮೀಸಲಾತಿ ವಿವರ ಹೀಗಿದೆ:
| ವರ್ಗ | ಒಟ್ಟು ಸ್ಥಾನಗಳು | ಮಹಿಳೆಯರಿಗೆ ಮೀಸಲು (ಒಟ್ಟು ಸ್ಥಾನಗಳಲ್ಲಿ ಸೇರಿದೆ) |
|---|---|---|
| ಅನುಸೂಚಿತ ಜಾತಿ (SC) | 11 | 5 |
| ಅನುಸೂಚಿತ ಪಂಗಡ (ST) | 4 | 2 |
| ಹಿಂದುಳಿದ ವರ್ಗ "ಅ" (BC-A) | 15 | 7 |
| ಹಿಂದುಳಿದ ವರ್ಗ "ಬ" (BC-B) | 1 | 0 |
| ಸಾಮಾನ್ಯ (General) | 32 | 16 |
| ಒಟ್ಟು | 63 | 30 |

ವಾರ್ಡ್‌ವಾರು ಮೀಸಲಾತಿ ಪಟ್ಟಿ (ವಿಧಾನಸಭಾ ಕ್ಷೇತ್ರವಾರು)

162 - ಶಿವಾಜಿನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 1 | ರಾಮಸ್ವಾಮಿ ಪಾಳ್ಯ | ಸಾಮಾನ್ಯ (ಮಹಿಳೆ) |
| 2 | ಜಯಮಹಲ್ | ಅನುಸೂಚಿತ ಜಾತಿ |
| 3 | ವಸಂತ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 4 | ಸಂಪಂಗಿರಾಮ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 5 | ಶಿವಾಜಿನಗರ | ಸಾಮಾನ್ಯ |
| 6 | ಭಾರತಿ ನಗರ | ಸಾಮಾನ್ಯ (ಮಹಿಳೆ) |
| 7 | ಕೆ. ಕಾಮರಾಜ್ ವಾರ್ಡ್ | ಸಾಮಾನ್ಯ (ಮಹಿಳೆ) |
| 8 | ಹಲಸೂರು | ಅನುಸೂಚಿತ ಜಾತಿ (ಮಹಿಳೆ) |
161 - ಸಿ.ವಿ. ರಾಮನ್ ನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 9 | ಹೊಯ್ಸಳ ನಗರ ಕೇಂದ್ರ | ಅನುಸೂಚಿತ ಜಾತಿ |
| 10 | ಕಾಕ್ಸ್ ಟೌನ್ | ಸಾಮಾನ್ಯ |
| 11 | ಹಳೆ ಬೈಯಪ್ಪನಹಳ್ಳಿ | ಅನುಸೂಚಿತ ಜಾತಿ (ಮಹಿಳೆ) |
| 12 | ಕಸ್ತೂರಿ ನಗರ | ಹಿಂದುಳಿದ ವರ್ಗ "ಬ" |
| 13 | ಕೃಷ್ಣಯ್ಯನಪಾಳ್ಯ | ಸಾಮಾನ್ಯ (ಮಹಿಳೆ) |
| 14 | ನಾಗವಾರಪಾಳ್ಯ | ಹಿಂದುಳಿದ ವರ್ಗ "ಅ" |
| 15 | ಇಂದಿರಾನಗರ | ಸಾಮಾನ್ಯ |
| 16 | ಹೊಸ ತಿಪ್ಪಸಂದ್ರ | ಸಾಮಾನ್ಯ (ಮಹಿಳೆ) |
| 17 | ಕಗ್ಗದಾಸಪುರ | ಹಿಂದುಳಿದ ವರ್ಗ "ಅ" |
| 18 | ಜಿ.ಎಂ ಪಾಳ್ಯ | ಸಾಮಾನ್ಯ (ಮಹಿಳೆ) |
| 19 | ಜೀವನ್ ಭೀಮಾನಗರ | ಹಿಂದುಳಿದ ವರ್ಗ "ಅ" |
| 20 | ಕೋಡಿಹಳ್ಳಿ | ಸಾಮಾನ್ಯ |
163 - ಶಾಂತಿನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 21 | ಕೋನೇನ ಅಗ್ರಹಾರ | ಸಾಮಾನ್ಯ (ಮಹಿಳೆ) |
| 22 | ಡೊಮ್ಲೂರು | ಹಿಂದುಳಿದ ವರ್ಗ "ಬ" (ಮಹಿಳೆ) |
| 23 | ಜೋಗುಪಾಳ್ಯ | ಸಾಮಾನ್ಯ (ಮಹಿಳೆ) |
| 24 | ಅಗರಂ | ಅನುಸೂಚಿತ ಜಾತಿ |
| 25 | ಅಶೋಕನಗರ | ಹಿಂದುಳಿದ ವರ್ಗ "ಬ" (ಮಹಿಳೆ) |
| 26 | ವನ್ನಾರಪೇಟೆ | ಅನುಸೂಚಿತ ಪಂಗಡ |
| 27 | ಅಂಬೇಡ್ಕರ್ ನಗರ | ಅನುಸೂಚಿತ ಜಾತಿ |
| 28 | ನೀಲಸಂದ್ರ | ಹಿಂದುಳಿದ ವರ್ಗ "ಅ" (ಮಹಿಳೆ) |
| 29 | ಆಸ್ಟಿನ್ ಟೌನ್ | ಹಿಂದುಳಿದ ವರ್ಗ "ಅ" |
| 30 | ವಿನಾಯಕನಗರ | ಸಾಮಾನ್ಯ (ಮಹಿಳೆ) |
| 31 | ಶಾಂತಿನಗರ | ಹಿಂದುಳಿದ ವರ್ಗ "ಬ" |
169 - ಚಿಕ್ಕಪೇಟೆ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 32 | ಸಿಲ್ವರ್ ಜುಬಿಲಿ ಪಾರ್ಕ್ ವಾರ್ಡ್ | ಅನುಸೂಚಿತ ಜಾತಿ (ಮಹಿಳೆ) |
| 33 | ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್ | ಸಾಮಾನ್ಯ (ಮಹಿಳೆ) |
| 34 | ಡಿ.ವಿ ಗುಂಡಪ್ಪ ವಾರ್ಡ್ | ಸಾಮಾನ್ಯ |
| 35 | ಹೊಂಬೇಗೌಡ ನಗರ | ಸಾಮಾನ್ಯ |
| 36 | ಸೋಮೇಶ್ವರ ನಗರ | ಸಾಮಾನ್ಯ |
| 37 | ಬಿಹೆಚ್‌ಇಎಲ್ ವಾರ್ಡ್ | ಹಿಂದುಳಿದ ವರ್ಗ "ಅ" |
| 38 | ಕನಕನಪಾಳ್ಯ | ಸಾಮಾನ್ಯ (ಮಹಿಳೆ) |
| 39 | ವೆಂಕಟರೆಡ್ಡಿ ನಗರ | ಸಾಮಾನ್ಯ |
| 40 | ಅಶೋಕ ಪಿಲ್ಲರ್ | ಸಾಮಾನ್ಯ |
| 41 | ವಿ.ವಿ ಪುರಂ | ಸಾಮಾನ್ಯ (ಮಹಿಳೆ) |
| 42 | ಸುಂಕೇನಹಳ್ಳಿ | ಸಾಮಾನ್ಯ (ಮಹಿಳೆ) |
| 43 | ದೇವರಾಜ ಅರಸು ವಾರ್ಡ್ | ಸಾಮಾನ್ಯ |
168 - ಚಾಮರಾಜಪೇಟೆ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 44 | ಚಾಮರಾಜಪೇಟೆ | ಸಾಮಾನ್ಯ |
| 45 | ಕೆ.ಆರ್ ಮಾರುಕಟ್ಟೆ | ಹಿಂದುಳಿದ ವರ್ಗ "ಅ" |
| 46 | ಚಲುವಾದಿಪಾಳ್ಯ | ಅನುಸೂಚಿತ ಜಾತಿ (ಮಹಿಳೆ) |
| 47 | ಐಪಿಡಿ ಸಾಲಪ್ಪ ವಾರ್ಡ್ | ಅನುಸೂಚಿತ ಜಾತಿ (ಮಹಿಳೆ) |
| 48 | ಆಜಾದ್ ನಗರ | ಸಾಮಾನ್ಯ |
| 49 | ಕಸ್ತೂರಬಾ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 50 | ಜೆ.ಜೆ.ಆರ್ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 51 | ಹಳೆ ಗುಡ್ಡದಹಳ್ಳಿ | ಸಾಮಾನ್ಯ (ಮಹಿಳೆ) |
| 52 | ಪಾದರಾಯನಪುರ | ಸಾಮಾನ್ಯ |
| 53 | ರಾಯಪುರಂ | ಅನುಸೂಚಿತ ಜಾತಿ |
164 - ಗಾಂಧಿನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 54 | ಬಿನ್ನಿಪೇಟೆ | ಸಾಮಾನ್ಯ |
| 55 | ಭುವನೇಶ್ವರಿ ನಗರ | ಹಿಂದುಳಿದ ವರ್ಗ "ಅ" |
| 56 | ಗೋಪಾಲಪುರ | ಹಿಂದುಳಿದ ವರ್ಗ "ಅ" |
| 57 | ಹತ್ತಿಪೇಟೆ (ಕಾಟನ್ ಪೇಟೆ) | ಸಾಮಾನ್ಯ |
| 58 | ಚಿಕ್ಕಪೇಟೆ | ಸಾಮಾನ್ಯ (ಮಹಿಳೆ) |
| 59 | ನೆಹರೂ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 60 | ಶೇಷಾದ್ರಿಪುರಂ | ಸಾಮಾನ್ಯ (ಮಹಿಳೆ) |
| 61 | ದತ್ತಾತ್ರೇಯ ವಾರ್ಡ್ | ಸಾಮಾನ್ಯ |
| 62 | ಸ್ವತಂತ್ರಪಾಳ್ಯ ವಾರ್ಡ್ | ಅನುಸೂಚಿತ ಜಾತಿ |
| 63 | ಓಕಳಿಪುರಂ | ಹಿಂದುಳಿದ ವರ್ಗ "ಅ" (ಮಹಿಳೆ) |

Draft Reservation for Wards of Five City Corporations Published… WEST … ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ

 

Draft Reservation for Wards of Five City Corporations Published… WEST



Bengaluru: Following the final notification of wards for the five city corporations under the GBA (Greater Bengaluru Area) jurisdiction, the Urban Development Department has issued a draft notification fixing the reservation for these wards.  

The final notification finalizing the 369 wards of the five city corporations was issued on November 19.  

The ward reservation for the Bengaluru WEST City Corporation is as follows:


The draft ward-wise reservation for the Bengaluru West City Corporation, organized by Assembly Constituency.
Bengaluru West City Corporation Draft Reservation

153 - Yeshvanthapura
| Ward No. | Ward Name | Reservation |
|---|---|---|
| 11 | Dodda Bidarakallu | General |
| 12 | Andrahalli | Scheduled Tribes |
| 13 | Nada Prabhu Kempegowda Nagara | General |
| 14 | Herohalli | Backward Class "A" (Women) |
| 15 | Byadarahalli | Backward Class "A" |
| 16 | Ullal | General |
| 17 | Nagadevanahalli | General (Women) |
| 18 | Kengal Hanumanthaiah West | General |
| 19 | Shivanapalya | General (Women) |
| 20 | Kengeri Kote Ward | Backward Class "A" |
| 21 | Kengeri | Backward Class "A" (Women) |

154 - Rajarajeshwari Nagar
| Ward No. | Ward Name | Reservation |
|---|---|---|
| 22 | Bangarappa Nagara | General |
| 23 | Rajarajeshwari Nagara | Backward Class "B" |
| 24 | Jnana Bharathi Ward | General (Women) |
| 25 | Vinayaka Layout | Backward Class "A" (Women) |
| 26 | Mallathahalli | Backward Class "A" (Women) |
| 27 | Srigandada Kaval | Backward Class "A" |
| 28 | Kottegepalya | General |
| 29 | Chowdeshwari Nagar | General |
| 30 | Kempegowda Layout | General (Women) |
| 31 | Freedom Fighter Ward | General |
| 32 | Laggere | General |
| 33 | Lakshmi Devi Nagar | Scheduled Caste |
| 34 | Peenya | Scheduled Caste (Women) |
| 35 | Goraguntepalya | Scheduled Caste (Women) |

155 - Dasarahalli
| Ward No. | Ward Name | Reservation |
|---|---|---|
| 1 | Nagasandra | General |
| 2 | Chokkasandra | Backward Class "A" |
| 3 | Nelagadaranahalli | General (Women) |
| 4 | Parvathi Nagar | General |
| 5 | Rajeshwarinagar | General (Women) |
| 6 | Shivapura | Scheduled Caste |
| 7 | Rajagopala Nagara | General |
| 8 | Hegganahalli | General |
| 9 | Srigandhanagar | General (Women) |
| 10 | Sunkadakatte | General (Women) |

156 - Mahalakshmi Layout
| Ward No. | Ward Name | Reservation |
|---|---|---|
| 36 | Nalwadi Krishnaraja Wadiyar Ward | Scheduled Caste |
| 37 | Dr. Puneeth Rajkumar Ward | General |
| 38 | Nandini Layout | Backward Class "A" |
| 39 | Jai Maruthi Nagar | General (Women) |
| 40 | Mahalakshmipuram | General |
| 41 | Nagapura | General |
| 42 | Raja Mayura Varma Ward | General (Women) |
| 43 | Kethamaranahalli | General (Women) |
| 44 | Shankar Mutt | Backward Class "A" |
| 45 | Shakthi Ganapathi Nagara | Backward Class "A" (Women) |
| 46 | Kamalanagara | General (Women) |
| 47 | Vrishabhavathi Nagar | General (Women) |

157 - Malleshwaram
| Ward No. | Ward Name | Reservation |
|---|---|---|
| 48 | Mathikere | General (Women) |
| 49 | Aramane Nagara | Backward Class "A" |
| 50 | Sadashiva Nagara | General |
| 51 | Rajamahal | Backward Class "B" |
| 52 | Kodandarampura | General (Women) |
| 53 | Malleshwaram | Backward Class "A" |
| 54 | Subedarpalya | General (Women) |
| 55 | Subramanyanagara | General (Women) |
| 56 | Gayathri Nagara | General |
| 57 | Kuvempu Ward | General (Women) |

165 - Rajajinagar
| Ward No. | Ward Name | Reservation |
|---|---|---|
| 58 | Dayanand Nagara | Scheduled Caste (Women) |
| 59 | Bandi Reddy Circle Ward | Scheduled Caste |
| 60 | Prakash Nagara | Backward Class "A" (Women) |
| 61 | Da.Ra. Bendre Ward | Backward Class "B" |
| 62 | Rama Mandira | General (Women) |
| 63 | Rajajinagara | General |
| 64 | Shivanagara | General |
| 65 | Manjunath Nagara | Backward Class "A" |
| 66 | Sane Guruvana Halli | Backward Class "A" |
| 67 | Basaveshwara Nagara | General (Women) |
| 68 | Kamakshipalya | General |

166 - Govindrajnagar
| Ward No. | Ward Name | Reservation |
|---|---|---|
| 69 | Agrahara Dasarahalli | General |
| 70 | Dr. Rajkumar Ward | General |
| 71 | Thimmenahalli | Backward Class "A" |
| 72 | Kaveripura | General (Women) |
| 73 | Dr. Vishnuvardhan Ward | Backward Class "A" (Women) |
| 74 | Pattegar Palya | General |
| 75 | Marenahalli West | Backward Class "A" (Women) |
| 76 | Moodalapalya | Backward Class "A" (Women) |
| 77 | Maruthi Mandira Ward | Backward Class "B" (Women) |
| 78 | Anubhava Nagara | Backward Class "A" (Women) |
| 79 | Nagarbhavi | General |
| 80 | Chandra Layout | Backward Class "A" |
| 81 | Nayanda Halli | Scheduled Caste |

167 - Vijayanagar
| Ward No. | Ward Name | Reservation |
|---|---|---|
| 82 | Attigupe | Backward Class "A" |
| 83 | Hampi Nagar | Backward Class "B" |
| 84 | Hosahalli | Backward Class "A" |
| 85 | Adi Chunchanagiri Ward | General (Women) |
| 86 | Vidyaranyanagara | Backward Class "A" (Women) |
| 87 | K.P Agrahara | Backward Class "A" (Women) |
| 88 | Sangolli Rayanna Ward | Scheduled Tribes (Women) |
| 89 | Bapuji Nagara | Backward Class "A" |
| 90 | Krishnadevaraya Ward | Scheduled Caste (Women) |
| 91 | Gali Anjaneya Temple Ward | General (Women) |
| 92 | Muneshwara Block | General (Women) |
| 93 | Avalahalli | Backward Class "A" (Women) |
| 94 | Deepanjali Nagara | General |

170 - Basavanagudi
| Ward No. | Ward Name | Reservation |
|---|---|---|
| 95 | Swamy Vivekananda Ward | General |
| 96 | Kathriguppe | General (Women) |
| 97 | Srinivasa Nagara | General (Women) |
| 98 | Ashoka Nagara | General (Women) |
| 99 | T.R Shamanna Nagar | General |
| 100 | Srinagar | Backward Class "B" (Women) |
| 101 | Kempambudhi Ward | General |
| 102 | Hanumanthanagar | General (Women) |
| 103 | N.R Colony | General |
| 104 | Thyagarajnagar | General (Women) |

171 - Padmanabanagar
| Ward No. | Ward Name | Reservation |
|---|---|---|
| 105 | Yediyuru | Backward Class "B" (Women) |
| 106 | Devagiri Temple Ward | General (Women) |
| 107 | Dharmagiri Ward | General (Women) |
| 108 | Ganesh Mandira Ward | Backward Class "A" (Women) |
| 109 | Kamakya Layout | Backward Class "A" (Women) |
| 110 | Chikkalasandra | General |
| 111 | Ittamadu | General (Women) |
| 112 | Hosakerehalli | General |









Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..


ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ 

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ಗಳ ಅಂತಿಮ ಅಧಿಸೂಚನೆಯಂತೆ ವಾರ್ಡ್ ಗಳಿಗೆ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ, ಕರಡು ಅಧಿಸೂಚನೆ ಹೊರಡಿಸಿದೆ.

ಐದು ನಗರ ಪಾಲಿಕೆಗಳ 369 ವಾರ್ಡ್ ಅಂತಿಮಗೊಳಿಸಿ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

 

ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಗಳ ಮೀಸಲಾತಿ ಹೀಗಿದೆ…



ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಕರಡು ವಾರ್ಡ್ ಮೀಸಲಾತಿಯ ವಿಧಾನಸಭಾ ಕ್ಷೇತ್ರವಾರು ವಿವರಗಳು ಇಲ್ಲಿವೆ:

153 - ಯಶವಂತಪುರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 11 | ದೊಡ್ಡ ಬಿದರಕಲ್ಲು | ಸಾಮಾನ್ಯ |
| 12 | ಅಂದ್ರಹಳ್ಳಿ | ಅನುಸೂಚಿತ ಪಂಗಡ |
| 13 | ನಾಡ ಪ್ರಭು ಕೆಂಪೇಗೌಡ ನಗರ | ಸಾಮಾನ್ಯ |
| 14 | ಹೆರೋಹಳ್ಳಿ | ಹಿಂದುಳಿದ ವರ್ಗ "ಅ" (ಮಹಿಳೆ) |
| 15 | ಬ್ಯಾಡರಹಳ್ಳಿ | ಹಿಂದುಳಿದ ವರ್ಗ "ಅ" |
| 16 | ಉಲ್ಲಾಳ | ಸಾಮಾನ್ಯ |
| 17 | ನಾಗದೇವನಹಳ್ಳಿ | ಸಾಮಾನ್ಯ (ಮಹಿಳೆ) |
| 18 | ಕೆಂಗಲ್ ಹನುಮಂತಯ್ಯ ಪಶ್ಚಿಮ | ಸಾಮಾನ್ಯ |
| 19 | ಶಿವನಪಾಳ್ಯ | ಸಾಮಾನ್ಯ (ಮಹಿಳೆ) |
| 20 | ಕೆಂಗೇರಿ ಕೋಟೆ ವಾರ್ಡ್ | ಹಿಂದುಳಿದ ವರ್ಗ "ಅ" |
| 21 | ಕೆಂಗೇರಿ | ಹಿಂದುಳಿದ ವರ್ಗ "ಅ" (ಮಹಿಳೆ) |
154 - ರಾಜರಾಜೇಶ್ವರಿ ನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 22 | ಬಂಗಾರಪ್ಪ ನಗರ | ಸಾಮಾನ್ಯ |
| 23 | ರಾಜರಾಜೇಶ್ವರಿ ನಗರ | ಹಿಂದುಳಿದ ವರ್ಗ "ಬ" |
| 24 | ಜ್ಞಾನ ಭಾರತಿ ವಾರ್ಡ್ | ಸಾಮಾನ್ಯ (ಮಹಿಳೆ) |
| 25 | ವಿನಾಯಕ ಲೇಔಟ್ | ಹಿಂದುಳಿದ ವರ್ಗ "ಅ" (ಮಹಿಳೆ) |
| 26 | ಮಲ್ಲತ್ತಹಳ್ಳಿ | ಹಿಂದುಳಿದ ವರ್ಗ "ಅ" (ಮಹಿಳೆ) |
| 27 | ಶ್ರೀಗಂಧದ ಕಾವಲ್ | ಹಿಂದುಳಿದ ವರ್ಗ "ಅ" |
| 28 | ಕೊಟ್ಟಿಗೆಪಾಳ್ಯ | ಸಾಮಾನ್ಯ |
| 29 | ಚೌಡೇಶ್ವರಿ ನಗರ | ಸಾಮಾನ್ಯ |
| 30 | ಕೆಂಪೇಗೌಡ ಬಡಾವಣೆ | ಸಾಮಾನ್ಯ (ಮಹಿಳೆ) |
| 31 | ಫ್ರೀಡಂ ಫೈಟರ್ ವಾರ್ಡ್ | ಸಾಮಾನ್ಯ |
| 32 | ಲಗೈರೆ | ಸಾಮಾನ್ಯ |
| 33 | ಲಕ್ಷ್ಮಿ ದೇವಿ ನಗರ | ಅನುಸೂಚಿತ ಜಾತಿ |
| 34 | ಪೀಣ್ಯ | ಅನುಸೂಚಿತ ಜಾತಿ (ಮಹಿಳೆ) |
| 35 | ಗೋರಗುಂಟೆಪಾಳ್ಯ | ಅನುಸೂಚಿತ ಜಾತಿ (ಮಹಿಳೆ) |
155 - ದಾಸರಹಳ್ಳಿ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 1 | ನಾಗಸಂದ್ರ | ಸಾಮಾನ್ಯ |
| 2 | ಚೊಕ್ಕಸಂದ್ರ | ಹಿಂದುಳಿದ ವರ್ಗ "ಅ" |
| 3 | ನೆಲಗದರನಹಳ್ಳಿ | ಸಾಮಾನ್ಯ (ಮಹಿಳೆ) |
| 4 | ಪಾರ್ವತಿ ನಗರ | ಸಾಮಾನ್ಯ |
| 5 | ರಾಜೇಶ್ವರಿನಗರ | ಸಾಮಾನ್ಯ (ಮಹಿಳೆ) |
| 6 | ಶಿವಪುರ | ಅನುಸೂಚಿತ ಜಾತಿ |
| 7 | ರಾಜಗೋಪಾಲ ನಗರ | ಸಾಮಾನ್ಯ |
| 8 | ಹೆಗ್ಗನಹಳ್ಳಿ | ಸಾಮಾನ್ಯ |
| 9 | ಶ್ರೀಗಂಧನಗರ | ಸಾಮಾನ್ಯ (ಮಹಿಳೆ) |
| 10 | ಸುಂಕದಕಟ್ಟೆ | ಸಾಮಾನ್ಯ (ಮಹಿಳೆ) |
156 - ಮಹಾಲಕ್ಷ್ಮೀ ಲೇಔಟ್
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 36 | ನಾಲ್ವಡಿ ಕೃಷ್ಣರಾಜ ಒಡೆಯರ್ ವಾರ್ಡ್ | ಅನುಸೂಚಿತ ಜಾತಿ |
| 37 | ಡಾ. ಪುನೀತ್ ರಾಜ್‌ಕುಮಾರ್ ವಾರ್ಡ್ | ಸಾಮಾನ್ಯ |
| 38 | ನಂದಿನಿ ಲೇಔಟ್ | ಹಿಂದುಳಿದ ವರ್ಗ "ಅ" |
| 39 | ಜೈ ಮಾರುತಿ ನಗರ | ಸಾಮಾನ್ಯ (ಮಹಿಳೆ) |
| 40 | ಮಹಾಲಕ್ಷ್ಮಿಪುರಂ | ಸಾಮಾನ್ಯ |
| 41 | ನಾಗಪುರ | ಸಾಮಾನ್ಯ |
| 42 | ರಾಜ ಮಯೂರ ವರ್ಮ ವಾರ್ಡ್ | ಸಾಮಾನ್ಯ (ಮಹಿಳೆ) |
| 43 | ಕೇತಮಾರನಹಳ್ಳಿ | ಸಾಮಾನ್ಯ (ಮಹಿಳೆ) |
| 44 | ಶಂಕರ ಮಠ | ಹಿಂದುಳಿದ ವರ್ಗ "ಅ" |
| 45 | ಶಕ್ತಿ ಗಣಪತಿ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 46 | ಕಮಲಾನಗರ | ಸಾಮಾನ್ಯ (ಮಹಿಳೆ) |
| 47 | ವೃಷಭಾವತಿ ನಗರ | ಸಾಮಾನ್ಯ (ಮಹಿಳೆ) |
157 - ಮಲ್ಲೇಶ್ವರಂ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 48 | ಮತ್ತಿಕೆರೆ | ಸಾಮಾನ್ಯ (ಮಹಿಳೆ) |
| 49 | ಅರಮನೆ ನಗರ | ಹಿಂದುಳಿದ ವರ್ಗ "ಅ" |
| 50 | ಸದಾಶಿವ ನಗರ | ಸಾಮಾನ್ಯ |
| 51 | ರಾಜಮಹಲ್ | ಹಿಂದುಳಿದ ವರ್ಗ "ಬ" |
| 52 | ಕೋದಂಡರಾಮಪುರ | ಸಾಮಾನ್ಯ (ಮಹಿಳೆ) |
| 53 | ಮಲ್ಲೇಶ್ವರಂ | ಹಿಂದುಳಿದ ವರ್ಗ "ಅ" |
| 54 | ಸುಬೇದಾರಪಾಳ್ಯ | ಸಾಮಾನ್ಯ (ಮಹಿಳೆ) |
| 55 | ಸುಬ್ರಹ್ಮಣ್ಯನಗರ | ಸಾಮಾನ್ಯ (ಮಹಿಳೆ) |
| 56 | ಗಾಯತ್ರಿ ನಗರ | ಸಾಮಾನ್ಯ |
| 57 | ಕುವೆಂಪು ವಾರ್ಡ್ | ಸಾಮಾನ್ಯ (ಮಹಿಳೆ) |
165 - ರಾಜಾಜಿನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 58 | ದಯಾನಂದ ನಗರ | ಅನುಸೂಚಿತ ಜಾತಿ (ಮಹಿಳೆ) |
| 59 | ಬಂಡಿ ರೆಡ್ಡಿ ವೃತ್ತ ವಾರ್ಡ್ | ಅನುಸೂಚಿತ ಜಾತಿ |
| 60 | ಪ್ರಕಾಶ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 61 | ದ.ರಾ.ಬೇಂದ್ರೆ ವಾರ್ಡ್ | ಹಿಂದುಳಿದ ವರ್ಗ "ಬ" |
| 62 | ರಾಮ ಮಂದಿರ | ಸಾಮಾನ್ಯ (ಮಹಿಳೆ) |
| 63 | ರಾಜಾಜಿನಗರ | ಸಾಮಾನ್ಯ |
| 64 | ಶಿವನಗರ | ಸಾಮಾನ್ಯ |
| 65 | ಮಂಜುನಾಥ್ ನಗರ | ಹಿಂದುಳಿದ ವರ್ಗ "ಅ" |
| 66 | ಸಾಣೆ ಗುರುವನ ಹಳ್ಳಿ | ಹಿಂದುಳಿದ ವರ್ಗ "ಅ" |
| 67 | ಬಸವೇಶ್ವರ ನಗರ | ಸಾಮಾನ್ಯ (ಮಹಿಳೆ) |
| 68 | ಕಾಮಾಕ್ಷಿಪಾಳ್ಯ | ಸಾಮಾನ್ಯ |

166 - ಗೋವಿಂದರಾಜನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 69 | ಅಗ್ರಹಾರ ದಾಸರಹಳ್ಳಿ | ಸಾಮಾನ್ಯ |
| 70 | ಡಾ. ರಾಜ್‌ಕುಮಾರ್ ವಾರ್ಡ್ | ಸಾಮಾನ್ಯ |
| 71 | ತಿಮ್ಮೇನಹಳ್ಳಿ | ಹಿಂದುಳಿದ ವರ್ಗ "ಅ" |
| 72 | ಕಾವೇರಿಪುರ | ಸಾಮಾನ್ಯ (ಮಹಿಳೆ) |
| 73 | ಡಾ. ವಿಷ್ಣುವರ್ಧನ್ ವಾರ್ಡ್ | ಹಿಂದುಳಿದ ವರ್ಗ "ಅ" (ಮಹಿಳೆ) |
| 74 | ಪಟೆಗಾರ್ ಪಾಳ್ಯ | ಸಾಮಾನ್ಯ |
| 75 | ಮಾರೇನಹಳ್ಳಿ ಪಶ್ಚಿಮ | ಹಿಂದುಳಿದ ವರ್ಗ "ಅ" (ಮಹಿಳೆ) |
| 76 | ಮೂಡಲಪಾಳ್ಯ | ಹಿಂದುಳಿದ ವರ್ಗ "ಅ" (ಮಹಿಳೆ) |
| 77 | ಮಾರುತಿ ಮಂದಿರ ವಾರ್ಡ್ | ಹಿಂದುಳಿದ ವರ್ಗ "ಬ" (ಮಹಿಳೆ) |
| 78 | ಅನುಭವ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 79 | ನಾಗರಭಾವಿ | ಸಾಮಾನ್ಯ |
| 80 | ಚಂದ್ರ ಲೇಔಟ್ | ಹಿಂದುಳಿದ ವರ್ಗ "ಅ" |
| 81 | ನಾಯಂಡ ಹಳ್ಳಿ | ಅನುಸೂಚಿತ ಜಾತಿ 

167 - ವಿಜಯನಗರ

| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 82 | ಅತ್ತಿಗುಪ್ಪೆ | ಹಿಂದುಳಿದ ವರ್ಗ "ಅ" |
| 83 | ಹಂಪಿ ನಗರ | ಹಿಂದುಳಿದ ವರ್ಗ "ಬ" |
| 84 | ಹೊಸಹಳ್ಳಿ | ಹಿಂದುಳಿದ ವರ್ಗ "ಅ" |
| 85 | ಆದಿ ಚುಂಚನಗಿರಿ ವಾರ್ಡ್ | ಸಾಮಾನ್ಯ (ಮಹಿಳೆ) |
| 86 | ವಿದ್ಯಾರಣ್ಯನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 87 | ಕೆ.ಪಿ. ಅಗ್ರಹಾರ | ಹಿಂದುಳಿದ ವರ್ಗ "ಅ" (ಮಹಿಳೆ) |
| 88 | ಸಂಗೊಳ್ಳಿ ರಾಯಣ್ಣ ವಾರ್ಡ್ | ಅನುಸೂಚಿತ ಪಂಗಡ (ಮಹಿಳೆ) |
| 89 | ಬಾಪೂಜಿ ನಗರ | ಹಿಂದುಳಿದ ವರ್ಗ "ಅ" |
| 90 | ಕೃಷ್ಣದೇವರಾಯ ವಾರ್ಡ್ | ಅನುಸೂಚಿತ ಜಾತಿ (ಮಹಿಳೆ) |
| 91 | ಗಾಳಿ ಆಂಜನೇಯ ದೇವಸ್ಥಾನ ವಾರ್ಡ್ | ಸಾಮಾನ್ಯ (ಮಹಿಳೆ) |
| 92 | ಮುನೇಶ್ವರ ಬ್ಲಾಕ್ | ಸಾಮಾನ್ಯ (ಮಹಿಳೆ) |
| 93 | ಆವಲಹಳ್ಳಿ | ಹಿಂದುಳಿದ ವರ್ಗ "ಅ" (ಮಹಿಳೆ) |
| 94 | ದೀಪಾಂಜಲಿ ನಗರ | ಸಾಮಾನ್ಯ |

170 - ಬಸವನಗುಡಿ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 95 | ಸ್ವಾಮಿ ವಿವೇಕಾನಂದ ವಾರ್ಡ್ | ಸಾಮಾನ್ಯ |
| 96 | ಕತ್ರಿಗುಪ್ಪೆ | ಸಾಮಾನ್ಯ (ಮಹಿಳೆ) |
| 97 | ಶ್ರೀನಿವಾಸ ನಗರ | ಸಾಮಾನ್ಯ (ಮಹಿಳೆ) |
| 98 | ಅಶೋಕ ನಗರ | ಸಾಮಾನ್ಯ (ಮಹಿಳೆ) |
| 99 | ಟಿ.ಆರ್.ಶಾಮಣ್ಣ ನಗರ | ಸಾಮಾನ್ಯ |
| 100 | ಶ್ರೀನಗರ | ಹಿಂದುಳಿದ ವರ್ಗ "ಬ" (ಮಹಿಳೆ) |
| 101 | ಕೆಂಪಾಂಬುಧಿ ವಾರ್ಡ್ | ಸಾಮಾನ್ಯ |
| 102 | ಹನುಮಂತನಗರ | ಸಾಮಾನ್ಯ (ಮಹಿಳೆ) |
| 103 | ಎನ್.ಆರ್. ಕಾಲೋನಿ | ಸಾಮಾನ್ಯ |
| 104 | ತ್ಯಾಗರಾಜನಗರ | ಸಾಮಾನ್ಯ (ಮಹಿಳೆ) |

171 - ಪದ್ಮನಾಭನಗರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ |
|---|---|---|
| 105 | ಯಡಿಯೂರು | ಹಿಂದುಳಿದ ವರ್ಗ "ಬ" (ಮಹಿಳೆ) |
| 106 | ದೇವಗಿರಿ ದೇವಸ್ಥಾನ ವಾರ್ಡ್ | ಸಾಮಾನ್ಯ (ಮಹಿಳೆ) |
| 107 | ಧರ್ಮಗಿರಿ ವಾರ್ಡ್ | ಸಾಮಾನ್ಯ (ಮಹಿಳೆ) |
| 108 | ಗಣೇಶ್ ಮಂದಿರಾ ವಾರ್ಡ್ | ಹಿಂದುಳಿದ ವರ್ಗ "ಅ" (ಮಹಿಳೆ) |
| 109 | ಕಾಮಕ್ಯ ಲೇಔಟ್ | ಹಿಂದುಳಿದ ವರ್ಗ "ಅ" (ಮಹಿಳೆ) |
| 110 | ಚಿಕ್ಕಲ್ಲಸಂದ್ರ | ಸಾಮಾನ್ಯ |
| 111 | ಇಟ್ಟಮಡು | ಸಾಮಾನ್ಯ (ಮಹಿಳೆ) |
| 112 | ಹೊಸಕೆರೆಹಳ್ಳಿ | ಸಾಮಾನ್ಯ |

Draft Reservation for Wards of Five City Corporations Published… EAST ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ

 

Draft Reservation for Wards of Five City Corporations Published… EAST 



Bengaluru: Following the final notification of wards for the five city corporations under the GBA (Greater Bengaluru Area) jurisdiction, the Urban Development Department has issued a draft notification fixing the reservation for these wards.  

The final notification finalizing the 369 wards of the five city corporations was issued on November 19.  

The ward reservation for the Bengaluru EAST City Corporation is as follows:


The ward-wise reservation table for the Bengaluru East City Corporation, organized by Assembly Constituency as specified in the document:
Assembly Constituency: 151-K.R. Pura
| Ward No. | Ward Name | Reservation Category |
|---|---|---|
| 1 | K Narayanapura | General (Women) |
| 2 | Horamavu | Backward Class "A" |
| 3 | Chellakere | General (Women) |
| 4 | Babusab Palya | Backward Class "B" (Women) |
| 5 | Hoysala Nagara East | Backward Class "A" (Women) |
| 6 | Kalkere | General |
| 7 | K Chennasandra | Scheduled Tribes |
| 8 | Anandapura | General |
| 9 | Bhattarahalli | General |
| 10 | Basavanapura | General |
| 11 | Krishnanagar | General |
| 12 | Devasandra | General |
| 13 | Rajarajeshwari Temple Ward | Backward Class "A" |
| 14 | K.R Pura | Backward Class "A" |
| 15 | Ramamurthy Nagara | Scheduled Caste |
| 16 | Kotthur | General |
| 17 | Vijinapura | Scheduled Caste (Women) |
| 18 | Dooravaninagar | General (Women) |
| 19 | K.S. Nissar Ahmed Ward | Backward Class "A" |
| 20 | A Narayanapura | Scheduled Caste (Women) |
| 21 | Uday Nagar | General (Women) |
| 22 | Mahadevapura | Backward Class "A" (Women) |
| 23 | Sangama Ward | General (Women) |
| 24 | Vignananagara | General |
| 25 | L.B Shastri Nagar | Backward Class "A" (Women) |
| 26 | Jagadish Nagar | Scheduled Caste |
| 27 | Vibhootipura | General (Women) |

Assembly Constituency: 174-Mahadevapura
| Ward No. | Ward Name | Reservation Category |
|---|---|---|
| 28 | Byrathi | Backward Class "A" (Women) |
| 29 | Hoodi | General |
| 30 | Belathur | Scheduled Caste |
| 31 | Kadugodi | General |
| 32 | Channasandra | General |
| 33 | S.M Krishna Ward | Backward Class "A" |
| 34 | Kaveri Nagara | Scheduled Caste |
| 35 | Garudachar Palya | Backward Class "B" |
| 36 | Bharath Aikya Ward | General (Women) |
| 37 | Kundalahalli | Backward Class "B" |
| 38 | Whitefield | Backward Class "A" |
| 39 | Hagaduru | General (Women) |
| 40 | Varthur | Backward Class "A" (Women) |
| 41 | Munnenkolalu | General (Women) |
| 42 | Priyadarshini Ward | General (Women) |
| 43 | Dodda Nekkundi | General |
| 44 | Ashwath Nagar | General (Women) |
| 45 | Marathahalli | Backward Class "A" (Women) |
| 46 | Yamalur | General (Women) |
| 47 | Bellanduru | Backward Class "A" (Women) |
| 48 | Panathur | Scheduled Caste (Women) |
| 49 | Doddakannelli Ward | General (Women) |
| 50 | Gunjur | Backward Class "A" |









Draft Reservation for Wards of Five City Corporations Published… NORTH… *ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ* The ward reservation for the *Bengaluru North City Corporation* is here…


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..



ಐದು ನಗರ ಪಾಲಿಕೆಗಳ ವಾರ್ಡ್ ಗಳ ಕರಡು ಮೀಸಲಾತಿ ಪ್ರಕಟ 

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ಗಳ ಅಂತಿಮ ಅಧಿಸೂಚನೆಯಂತೆ ವಾರ್ಡ್ ಗಳಿಗೆ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ, ಕರಡು ಅಧಿಸೂಚನೆ ಹೊರಡಿಸಿದೆ.

ಐದು ನಗರ ಪಾಲಿಕೆಗಳ 369 ವಾರ್ಡ್ ಅಂತಿಮಗೊಳಿಸಿ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

 

ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಗಳ ಮೀಸಲಾತಿ ಹೀಗಿದೆ…



ಬೆಂಗಳೂರು ಪೂರ್ವ ನಗರ ಪಾಲಿಕೆಯ ಕರಡು ವಾರ್ಡ್‌ವಾರು ಮೀಸಲಾತಿಯ ಪಟ್ಟಿ ಈ ಕೆಳಗಿನಂತಿದೆ:
ವಿಧಾನಸಭಾ ಕ್ಷೇತ್ರ: 151-ಕೆ.ಆರ್. ಪುರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ ವರ್ಗ |
|---|---|---|
| 1 | ಕೆ ನಾರಾಯಣಪುರ | ಸಾಮಾನ್ಯ (ಮಹಿಳೆ) |
| 2 | ಹೊರಮಾವು | ಹಿಂದುಳಿದ ವರ್ಗ "ಅ" |
| 3 | ಚೆಲ್ಲಕೆರೆ | ಸಾಮಾನ್ಯ (ಮಹಿಳೆ) |
| 4 | ಬಾಬುಸಾಬ್ ಪಾಳ್ಯ | ಹಿಂದುಳಿದ ವರ್ಗ "ಬ" (ಮಹಿಳೆ) |
| 5 | ಹೊಯ್ಸಳ ನಗರ ಪೂರ್ವ | ಹಿಂದುಳಿದ ವರ್ಗ "ಅ" (ಮಹಿಳೆ) |
| 6 | ಕಲ್ಕೆರೆ | ಸಾಮಾನ್ಯ |
| 7 | ಕೆ ಚೆನ್ನಸಂದ್ರ | ಅನುಸೂಚಿತ ಪಂಗಡ |
| 8 | ಆನಂದಪುರ | ಸಾಮಾನ್ಯ |
| 9 | ಭಟ್ಟರಹಳ್ಳಿ | ಸಾಮಾನ್ಯ |
| 10 | ಬಸವನಪುರ | ಸಾಮಾನ್ಯ |
| 11 | ಕೃಷ್ಣನಗರ | ಸಾಮಾನ್ಯ |
| 12 | ದೇವಸಂದ್ರ | ಸಾಮಾನ್ಯ |
| 13 | ರಾಜರಾಜೇಶ್ವರಿ ದೇವಸ್ಥಾನ ವಾರ್ಡ್ | ಹಿಂದುಳಿದ ವರ್ಗ "ಅ" |
| 14 | ಕೆ.ಆರ್ ಪುರ | ಹಿಂದುಳಿದ ವರ್ಗ "ಅ" |
| 15 | ರಾಮಮೂರ್ತಿ ನಗರ | ಅನುಸೂಚಿತ ಜಾತಿ |
| 16 | ಕೊತ್ತೂರು | ಸಾಮಾನ್ಯ |
| 17 | ವಿಜಿನಾಪುರ | ಅನುಸೂಚಿತ ಜಾತಿ (ಮಹಿಳೆ) |
| 18 | ದೂರವಾಣಿನಗರ | ಸಾಮಾನ್ಯ (ಮಹಿಳೆ) |
| 19 | ಕೆ. ಎಸ್. ನಿಸಾರ್ ಅಹಮದ್ ವಾರ್ಡ್ | ಹಿಂದುಳಿದ ವರ್ಗ "ಅ" |
| 20 | ಎ ನಾರಾಯಣಪುರ | ಅನುಸೂಚಿತ ಜಾತಿ (ಮಹಿಳೆ) |
| 21 | ಉದಯ್ ನಗರ | ಸಾಮಾನ್ಯ (ಮಹಿಳೆ) |
| 22 | ಮಹದೇವಪುರ | ಹಿಂದುಳಿದ ವರ್ಗ "ಅ" (ಮಹಿಳೆ) |
| 23 | ಸಂಗಮ ವಾರ್ಡ್ | ಸಾಮಾನ್ಯ (ಮಹಿಳೆ) |
| 24 | ವಿಜ್ಞಾನನಗರ | ಸಾಮಾನ್ಯ |
| 25 | ಎಲ್.ಬಿ.ಶಾಸ್ತ್ರಿ ನಗರ | ಹಿಂದುಳಿದ ವರ್ಗ "ಅ" (ಮಹಿಳೆ) |
| 26 | ಜಗದೀಶ್ ನಗರ | ಅನುಸೂಚಿತ ಜಾತಿ |
| 27 | ವಿಭೂತಿಪುರ | ಸಾಮಾನ್ಯ (ಮಹಿಳೆ) |
ವಿಧಾನಸಭಾ ಕ್ಷೇತ್ರ: 174-ಮಹದೇವಪುರ
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಮೀಸಲಾತಿ ವರ್ಗ |
|---|---|---|
| 28 | ಬೈರತಿ | ಹಿಂದುಳಿದ ವರ್ಗ "ಅ" (ಮಹಿಳೆ) |
| 29 | ಹೂಡಿ | ಸಾಮಾನ್ಯ |
| 30 | ಬೆಳತ್ತೂರು | ಅನುಸೂಚಿತ ಜಾತಿ |
| 31 | ಕಾಡುಗೋಡಿ | ಸಾಮಾನ್ಯ |
| 32 | ಚನ್ನಸಂದ್ರ | ಸಾಮಾನ್ಯ |
| 33 | ಎಸ್.ಎಂ ಕೃಷ್ಣ ವಾರ್ಡ್ | ಹಿಂದುಳಿದ ವರ್ಗ "ಅ" |
| 34 | ಕಾವೇರಿ ನಗರ | ಅನುಸೂಚಿತ ಜಾತಿ |
| 35 | ಗರುಡಾಚಾರ್ ಪಾಳ್ಯ | ಹಿಂದುಳಿದ ವರ್ಗ "ಬ" |
| 36 | ಭಾರತ್ ಐಕ್ಯ ವಾರ್ಡ್ | ಸಾಮಾನ್ಯ (ಮಹಿಳೆ) |
| 37 | ಕುಂದಲಹಳ್ಳಿ | ಹಿಂದುಳಿದ ವರ್ಗ "ಬ" |
| 38 | ವೈಟ್‌ಫೀಲ್ಡ್ | ಹಿಂದುಳಿದ ವರ್ಗ "ಅ" |
| 39 | ಹಗದೂರು | ಸಾಮಾನ್ಯ (ಮಹಿಳೆ) |
| 40 | ವರ್ತೂರು | ಹಿಂದುಳಿದ ವರ್ಗ "ಅ" (ಮಹಿಳೆ) |
| 41 | ಮುನ್ನೇನಕೊಳಲು | ಸಾಮಾನ್ಯ |
| 42 | ಪ್ರಿಯದರ್ಶಿನಿ ವಾರ್ಡ್ | ಸಾಮಾನ್ಯ (ಮಹಿಳೆ) |
| 43 | ದೊಡ್ಡ ನೆಕ್ಕುಂದಿ | ಸಾಮಾನ್ಯ |
| 44 | ಅಶ್ವಥ್ ನಗರ | ಸಾಮಾನ್ಯ (ಮಹಿಳೆ) |
| 45 | ಮಾರತಹಳ್ಳಿ | ಹಿಂದುಳಿದ ವರ್ಗ "ಅ" (ಮಹಿಳೆ) |
| 46 | ಯಮಲೂರು | ಸಾಮಾನ್ಯ (ಮಹಿಳೆ) |
| 47 | ಬೆಳ್ಳಂದೂರು | ಹಿಂದುಳಿದ ವರ್ಗ "ಅ" (ಮಹಿಳೆ) |
| 48 | ಪಣತ್ತೂರು | ಅನುಸೂಚಿತ ಜಾತಿ (ಮಹಿಳೆ) |
| 49 | ದೊಡ್ಡಕನ್ನೆಲ್ಲಿ ವಾರ್ಡ್ | ಸಾಮಾನ್ಯ (ಮಹಿಳೆ) |
| 50 | ಗುಂಜೂರು | ಹಿಂದುಳಿದ ವರ್ಗ "ಅ" |