Obtaining a certificate for the foundation is mandatory; responsibility of engineers, city planning officers
Guidelines to prevent building plan violations
Kere Manjunath ಕೆರೆ ಮಂಜುನಾಥ್
Rules for eviction of illegal buildings
Evacuation completed within 130 days
- After the complaint is received, the Assistant Executive Engineer (AEE); 3 days
- The Assistant Engineer should conduct a site inspection and submit a report to the AEE. Submission of the report supervised by the Assistant Director of Urban Planning (ADTP); 7 days
- AEE to conduct site visit with the help of ADTP and submit report; 15 days
- Submit proposal to Joint Commissioner for obtaining order as per GBGA Act; 7 days
- Joint Commissioner to allow the concerned AEE to issue order; 3 days
- Time allowed for Joint Director to obtain explanation from the owner of the building and conduct inquiry; 20 days
- Time for AEE to issue operation order after the order of Joint Commissioner; 5 days
- Time for Executive Engineer (EE) to seize the building, disconnect BESCOM, water board connection and submit the estimate for evacuation; 5 days
- Preparation of EE estimate for obtaining technical and administrative approval; 15 days
- Joint Commissioner/Implementation Task Force to issue eviction order; 15 days
- Time for AEE/ADTP to mark illegal building for eviction; 15 days
- Eviction operation by Implementation Task Force; 10 days
- Order by Joint Commissioner/AEE to Revenue Officer to bear the cost of eviction operation; 5 days
Implementation Task Force
ತಳಪಾಯಕ್ಕೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯ; ಎಂಜಿನಿಯರ್, ನಗರ ಯೋಜನೆ ಅಧಿಕಾರಿಗಳಿಗೆ ಜವಾಬ್ದಾರಿ
ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ ಮಾರ್ಗಸೂಚಿ
Kere Manjunath ಕೆರೆ ಮಂಜುನಾಥ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವನ್ನು ತಡೆಯಲು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆ (ಜಿಬಿಜಿಎ) ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಇದರ ಅನುಷ್ಠಾನ ಹಾಗೂ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನಿಗದಿಪಡಿಸಲಾಗಿದೆ.
ಜಿಬಿಜಿಎಯಂತೆ ನಗರ ಪಾಲಿಕೆಗಳ ಆಯುಕ್ತರು ಆದೇಶ ಹೊರಡಿಸಿದ್ದು, ಮಂಜೂರಾತಿ ನಕ್ಷೆಗಳ ಉಲ್ಲಂಘನೆ, ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಗೆ ಅನುಸರಿಸಬೇಕಾದ ಕಾರ್ಯ ವಿಧಾನ ಹಾಗೂ ಮಾರ್ಗಸೂಚಿಯನ್ನು ವಿವರಿಸಿದ್ದಾರೆ.
ನಗರ ಪಾಲಿಕೆಯ ಕೇಂದ್ರ ಕಚೇರಿ ಅಥವಾ ವಲಯ ಕಚೇರಿಯಿಂದ ಕಟ್ಟಡಕ್ಕೆ (ನೆಲ ಮತ್ತು ಮೂರು ಮಹಡಿಯ 15 ಮೀಟರ್‌ವರೆಗೆ) ನಕ್ಷೆ ಅನುಮೋದನೆಯಾದ ಮೇಲೆ, ನಿರ್ಮಾಣ ಆರಂಭಿಸುವ 30 ದಿನಗಳೊಳಗೆ ‘ತಳಪಾಯದ ಗಡಿರೇಖೆಯ ಗುರುತು’ (ಪ್ಲಿಂತ್ ಲೈನ್ ಮಾರ್ಕಿಂಗ್’) ಪಡೆಯಬೇಕು. ನಗರ ಯೋಜನೆ ವಿಭಾಗದ ನಗರ ಯೋಜಕರು/ ಸಹಾಯಕ ನಿರ್ದೇಶಕರು ಕಟ್ಟಡ ಮಾಲೀಕರು ಅಥವಾ ಅವರ ಪ್ರತಿನಿಧಿಗಳ ಮುಂದೆ ಗುರುತು ಮಾಡಿ, ತಳಪಾಯದ ಪ್ರಮಾಣ ಪತ್ರ ನೀಡಬೇಕು. ವಲಯ ಮಟ್ಟದ ಉಪ ನಿರ್ದೇಶಕರು ಇದನ್ನು ದೃಢೀಕರಿಸಿಕೊಳ್ಳಬೇಕು. ಬೃಹತ್ ಕಟ್ಟಡಗಳಿಗೆ ಕೇಂದ್ರ ಮಟ್ಟದಲ್ಲಿ ಜಂಟಿ ನಿರ್ದೇಶಕರಿಗೆ ಈ ಜವಾಬ್ದಾರಿ ವಹಿಸಲಾಗಿದೆ.
ಮಂಜೂರಾದ ನಕ್ಷೆ ಮತ್ತು ದಾಖಲೆಗಳನ್ನು ವಲಯ ಮತ್ತು ಕೇಂದ್ರ ಕಚೇರಿಯ ನಗರ ಯೋಜಕರು ಸಂಬಂಧಪಟ್ಟ ವಾರ್ಡ್‌ಗಳಿಗೆ ಮಾಹಿತಿ ನೀಡಿ, ಅಂತರ್ಜಾಲದಲ್ಲಿ ಪ್ರಕಟಿಸಬೇಕು. ವಾರ್ಡ್‌ಗಳ ಕಿರಿಯ/ ಸಹಾಯಕ ಎಂಜಿನಿಯರ್‌ಗಳು, ನಗರ ಯೋಜಕರು ಕಟ್ಟಡ ನಿರ್ಮಾಣದ ತಪಾಸಣೆಯನ್ನು ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್‌ನಲ್ಲಿ ಕೈಗೊಳ್ಳಬೇಕು. ಜಂಟಿ ನಿರ್ದೇಶಕರು/ ಉಪ ನಿರ್ದೇಶಕರೂ ತಪಾಸಣೆಯನ್ನು ನಡೆಸಿ ಮೇಲಧಿಕಾರಿಗಳಿಗೆ ವರದಿ ನೀಡಬೇಕು. ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದ ನಂತರ ಉಲ್ಲಂಘನೆ ಕಂಡು ಬಂದರೆ, ಆದನ್ನು ಉಪ ವಿಭಾಗದ ಸಹಾಯಕ ಎಂಜಿನಿಯರ್ ಅವರಿಗೆ ವರದಿ ಸಲ್ಲಿಸಬೇಕು. ನಿಯಮದ ಪ್ರಕಾರ ಅವರು ಕ್ರಮ ಕೈಗೊಳ್ಳಬೇಕು.
ಅಕ್ರಮ ಕಟ್ಟಡ ತೆರವಿಗೆ ನಿಯಮ
ಕಟ್ಟಡ ನಕ್ಷೆ ಪಡೆಯದೆ ನಿರ್ಮಿಸಿರುವ ಕಟ್ಟಡಗಳು, ನಕ್ಷೆ ಪಡೆದರೂ ಅದನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳು, ಹೆಚ್ಚುವರಿ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಅನಧಿಕೃತ ಕಟ್ಟಟಗಳ ತೆರವಿಗೆ, ಸಮಯ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ತೆರವು ಕಾರ್ಯಾಚರಣೆಗೆ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಅನುಷ್ಠಾನ ಕಾರ್ಯಪಡೆಯನ್ನೂ ರಚಿಸಲಾಗಿದೆ.
ಪ್ರತಿಯೊಬ್ಬ ಅಧಿಕಾರಿಗಳೂ ಅವರಿಗೆ ನಿಗದಿಯಾದ ಸಮಯದಲ್ಲಿ ಕ್ರಮ ಕೈಗೊಳ್ಳದಿದ್ದರೆ ಅವರ ಮೇಲೆ ಶಿಸ್ತುಕ್ರಮವಾಗಲಿದೆ. ಸುಪ್ರೀಂ ಕೋರ್ಟ್ ಆದೇಶ ಹಾಗೂ ಜಿಬಿಬಿಎಯಲ್ಲಿರುವ ಎಲ್ಲ ಅವಕಾಶವನ್ನು ಉಪಯೋಗಿಸಿಕೊಂಡು, ಯಾವ ರೀತಿ ನೋಟಿಸ್ ಜಾರಿ ಮಾಡಬೇಕು ಎಂಬುದನ್ನೂ ವಿವರಿಸಲಾಗಿದೆ. ಇದರಿಂದ ಅಕ್ರಮ– ಅನಧಿಕೃತ ಕಟ್ಟಡಗಳ ತೆರವಿಗೆ ನ್ಯಾಯಾಲಯದಿಂದ ‘ಸ್ಟೇ’ ಆದೇಶ ಸಿಗದಂತೆ ಪ್ರಕ್ರಿಯೆ ನಡೆಸಲು ಸಹಕಾರಿಯಾಗಲಿದೆ ಎಂದು ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.
ಅನಧಿಕೃತ ಕಟ್ಟಡ ತೆರವು ಹಾಗೂ ನಕ್ಷೆ ಉಲ್ಲಂಘಿಸುವ ನಿರ್ಮಾಣ ತಡೆಯಲು ಕಾಯ್ದೆ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ
ರಾಜೇಂದ್ರ ಚೋಳನ್, ಆಯುಕ್ತ, ಬೆಂಗಳೂರು ಕೇಂದ್ರ ನಗರ ಪಾಲಿಕೆ
130 ದಿನಗಳಲ್ಲಿ ತೆರವು ಪೂರ್ಣ
ದೂರು ಸ್ವೀಕರಿಸಿದ ದಿನದಿಂದ 130 ದಿನಗಳಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ನಗರ ಪಾಲಿಕೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ, ಆಯಾ ದಿನಗಳೊಳಗೆ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.
- ದೂರು ಸ್ವೀಕಾರವಾದ ನಂತರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ);3 ದಿನ
- ಸಹಾಯಕ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಎಇಇಗೆ ವರದಿ ಸಲ್ಲಿಸಬೇಕು. ನಗರ ಯೋಜನೆ ಸಹಾಯಕ ನಿರ್ದೇಶಕರು (ಎಡಿಟಿಪಿ) ನಿಗಾವಹಿಸಿದ ವರದಿ ಸಲ್ಲಿಕೆ; 7 ದಿನ
- ಎಡಿಟಿಪಿ ಅವರ ಸಹಾಯದೊಂದಿಗೆ ಎಇಇ ಸ್ಥಳ ಮಹಜರು ಮಾಡಿ ವರದಿ ಸಲ್ಲಿಕೆ;15 ದಿನ
- ಜಿಬಿಜಿಎ ಕಾಯ್ದೆಯಂತೆ ಆದೇಶ ಪಡೆಯಲು ಜಂಟಿ ಆಯುಕ್ತರಿಗೆ ಪ್ರಸ್ತಾವ ಸಲ್ಲಿಕೆ; 7 ದಿನ
- ಜಂಟಿ ಆಯುಕ್ತರು ಸಂಬಂಧಿತ ಎಇಇ ಅವರಿಗೆ ಆದೇಶ ನೀಡಲು ಅನುಮತಿ; 3 ದಿನ
- ಕಟ್ಟಡದ ಮಾಲೀಕರಿಂದ ವಿವರಣೆ ಪಡೆದು, ವಿಚಾರಣೆ ನಡೆಸಲು ಜಂಟಿ ನಿರ್ದೇಶಕರಿಗೆ ಇರುವ ಅವಧಿ;20 ದಿನ
- ಜಂಟಿ ಆಯುಕ್ತರ ಆದೇಶದ ನಂತರ ಕಾರ್ಯಾಚರಣೆ ಆದೇಶ ಹೊರಡಿಸಲು ಎಇಇಗೆ ಸಮಯ;5 ದಿನ
- ಕಟ್ಟಡವನ್ನು ಜಪ್ತಿ ಮಾಡಿ, ಬೆಸ್ಕಾಂ, ಜಲಮಂಡಳಿ ಸಂಪರ್ಕವನ್ನು ಕಡಿತಗೊಳಿಸಿ, ತೆರವಿನ ಅಂದಾಜು ಪಟ್ಟಿ ಸಲ್ಲಿಸಲು ಕಾರ್ಯಪಾಲಕ ಎಂಜಿನಿಯರ್‌ಗೆ (ಇಇ) ಸಮಯ; 5 ದಿನ
- ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯಲು ಇಇ ಅಂದಾಜು ಪಟ್ಟಿ ತಯಾರಿಕೆ;15 ದಿನ
- ಜಂಟಿ ಆಯುಕ್ತ/ ಅನುಷ್ಠಾನ ಕಾರ್ಯಪಡೆಯಿಂದ ತೆರವು ಆದೇಶ ನೀಡಲು;15 ದಿನ
- ಅಕ್ರಮ ಕಟ್ಟಡದ ತೆರವಿಗೆ ಗುರುತು ಮಾಡುವುದು ಎಇಇ/ಎಡಿಟಿಪಿಗೆ ಸಮಯ;15 ದಿನ
- ಅನುಷ್ಠಾನ ಕಾರ್ಯಪಡೆಯಿಂದ ತೆರವು ಕಾರ್ಯಾಚರಣೆ;10 ದಿನ
- ತೆರವು ಕಾರ್ಯಾಚರಣೆಯ ವೆಚ್ಚವನ್ನು ಭರಿಸಿಕೊಳ್ಳಲು ಜಂಟಿ ಆಯುಕ್ತರು/ ಎಇಇ ಅವರಿಂದ ಕಂದಾಯ ಅಧಿಕಾರಿಗೆ ಆದೇಶ;5 ದಿನ
ಅನುಷ್ಠಾನ ಕಾರ್ಯಪಡೆ
ಅಧ್ಯಕ್ಷ– ನಗರ ಪಾಲಿಕೆ ವಲಯದ ಜಂಟಿ ಆಯುಕ್ತ; ಸದಸ್ಯರು– ನಗರ ಯೋಜನೆ ಜಂಟಿ ನಿರ್ದೇಶಕ, ಉಪ ನಿರ್ದೇಶಕ, ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಂದಾಯ ಅಧಿಕಾರಿ, ಬಿಎಂಟಿಎಫ್ ಡಿಎಸ್‌ಪಿ ಹಾಗೂ ಸಂಚಾಲಕ– ಸಹಾಯಕ ಕಾರ್ಯಪಾಲಕ ಎಂಜಿನಿಯರ್.

No comments:
Post a Comment