Saturday, April 22, 2023

Karnataka Assembly Rewind- 18: Two Alliances, Three Chief Ministers: Very unstable Vidhan Sabha, parties who do not keep their word

Karnataka Assembly Rewind-18: Two Alliances, Three Chief Ministers: Very unstable Vidhan Sabha, parties who do not keep their word

Kere Manjunath ಕೆರೆ ಮಂಜುನಾಥ್‌

It was a time when the state politics was very unstable. Even in the 12th Legislative Assembly, even though no one had a clear majority, he ruled the state for forty months with the alliance. In three and a half years of this assembly, agreement, trust was broken and it led to animosity.

SM Krishna calculation failed and the Congress could only become the second largest party in the 2004 elections. BJP won 79 seats. The Congress, which won 65 seats, entered into an alliance with the JD(S), which won 58 seats. As a result, Dharmasingh of the Congress took office as the 22nd Chief Minister of the state on 28 May 2004. Everything was fine till January 2006. Later, there was a misunderstanding about the alliance in the JDS and the support given to the Congress was withdrawn. A 20-20 government was formed as a result of an agreement between the JD(S) and the BJP.

JDS's H.D. Kumaraswamy became the Chief Minister on February 3, 2006. BJP's B.S. Yeddyurappa became the Deputy Chief Minister. By the end of 20 months in power, the alliance had soured. An environment was created where JDS did not give power to BJP as per the agreement. Once again, the situation was unstable, and President's rule was imposed from October 8 to November 12, 2007. JDS's H.D. Kumaraswamy announced his support to the BJP. Believing this, B.S. Yeddyurappa assumed office as the Chief Minister on 12 November 2007. Within a week, when it was time to prove the vote of confidence in the assembly, the JDS again withdraw the support. B.S. Yeddyurappa resigned after seven days as the shortest serving Chief Minister. The Legislative Assembly was dissolved and President's rule came into effect on November 11, 2007.

T.N. Chaturvedi and Rameshwar Thakur were the governors during this period. In the first 21 months B.S. Yeddyurappa was the Leader of the Opposition, While Dharmasingh, who stepped down as Chief Minister, was the Leader of the Opposition in the government for the next 20 months. K. Abhayachandra Jain and D.N. Jivaraj was the chief whip. T. Rajanna was the secretary. A total of 180 days of proceedings were held in the 12th Legislative Assembly. Apart from Vidhana Soudha, the session was held for five days in Belgaum.

ವಿಧಾನಸಭೆ ಮೆಲುಕು-18: ಎರಡು ಮೈತ್ರಿ, ಮೂವರು ಮುಖ್ಯಮಂತ್ರಿ: ಅತ್ಯಂತ ಅತಂತ್ರ ವಿಧಾನಸಭೆ, ಮಾತು ಉಳಿಸಿಕೊಳ್ಳದ ಪಕ್ಷಗಳು

 ಕೆರೆ ಮಂಜುನಾಥ್‌

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದ ಕಾಲವಿದು. 12ನೇ ವಿಧಾನಸಭೆಯಲ್ಲೂ ಯಾರಿಗೂ ಸ್ಪಷ್ಪಬಹುಮತ ಇಲ್ಲದಿದ್ದರೂ ಮೈತ್ರಿಯೊಂದಿಗೆ ನಲವತ್ತು ತಿಂಗಳು ರಾಜ್ಯಭಾರ ಮಾಡಿದರು. ಈ ವಿಧಾನಸಭೆಯ ಮೂರೂವರೆ ವರ್ಷದಲ್ಲಿ ಒಪ್ಪಂದ, ವಿಶ್ವಾಸ ಒಡೆದುಹೋಗಿ ವೈಮನಸ್ಯಕ್ಕೆ ಕಾರಣವಾಯಿತು.

ಎಸ್.ಎಂ. ಕೃಷ್ಣ ಲೆಕ್ಕಾಚಾರ ವಿಫಲವಾಗಿ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಲು ಮಾತ್ರ ಸಾಧ್ಯವಾಯಿತು. ಬಿಜೆಪಿ 79 ಸ್ಥಾನ ಗಳಿಸಿತ್ತು. 65 ಸ್ಥಾನಗಳಿಸಿದ್ದ ಕಾಂಗ್ರೆಸ್ 58 ಸ್ಥಾನಗಳಿಸಿದ್ದ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು. ಇದರಿಂದ, ಕಾಂಗ್ರೆಸ್‌ನ ಧರ್ಮಸಿಂಗ್ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ 2004ರ ಮೇ 28ರಂದು ಅಧಿಕಾರ ಸ್ವೀಕರಿಸಿದರು. 2006ರ ಜನವರಿವರೆಗೆ ಎಲ್ಲವೂ ಸರಿ ಇತ್ತು. ನಂತರ ಜೆಡಿಎಸ್‌ನಲ್ಲಿ ಮೈತ್ರಿ ಬಗ್ಗೆ ಅಪಸ್ವರ ಎದ್ದು, ಕಾಂಗ್ರೆಸ್‌ಗೆ ನೀಡಿದ ಬೆಂಬಲ ವಾಪಸ್ ಪಡೆಯಿತು. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಪ್ಪಂದವಾಗಿ 20-20 ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ 2006ರ ಫೆಬ್ರವರಿ 3ರಂದು ಮುಖ್ಯಮಂತ್ರಿಯಾದರು. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. 20 ತಿಂಗಳ ಅಧಿಕಾರ ಮುಗಿಯುವ ಸಮಯದಲ್ಲಿ ಮೈತ್ರಿ ಹದಗೆಟ್ಟಿತು. ಒಪ್ಪಂದದಂತೆ ಬಿಜೆಪಿಗೆ ಜೆಡಿಎಸ್ ಅಧಿಕಾರ ನೀಡದಂತಹ ವಾತಾವರಣ ಸೃಷ್ಟಿಯಾಯಿತು. ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿ, 2007ರ ಅಕ್ಟೋಬರ್ 8ರಿಂದ ನವೆಂಬರ್ 12ರವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ಮಾತಿಗೆ ತಪ್ಪಿದಂತಾಗುತ್ತದೆ ಎಂದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಈ ಮಾತು ನಂಬಿದ ಬಿ.ಎಸ್. ಯಡಿಯೂರಪ್ಪ ಅವರು 2007ರ ನವೆಂಬರ್ 12ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಕಾಲ ಬಂದ ಒಂದೇ ವಾರದಲ್ಲಿ ಜೆಡಿಎಸ್ ಮತ್ತೆ ಕೈಕೊಟ್ಟಿತು. ಬಿ.ಎಸ್. ಯಡಿಯೂರಪ್ಪ ಅತ್ಯಂತ ಕನಿಷ್ಠ ಅವಧಿಯ ಮುಖ್ಯಮಂತ್ರಿಯಾಗಿ ಏಳು ದಿನಕ್ಕೇ ರಾಜಿನಾಮೆ ನೀಡಿದರು. ವಿಧಾನಸಭೆ ವಿಸರ್ಜನೆಯಾಗಿ 2007ರ ನವೆಂಬರ್ 11ರಿಂದ ರಾಷ್ಟ್ರಪತಿ ಆಡಳಿತ ಜಾರಿಯಾಯಿತು.

ಟಿ.ಎನ್. ಚತುರ್ವೇದಿ ಹಾಗೂ ರಾಮೇಶ್ವರ್ ಠಾಕೂರ್ ಈ ಅವಧಿಯಲ್ಲಿ ರಾಜ್ಯಪಾಲರಾಗಿದ್ದರು. ಪ್ರಥಮ 21 ತಿಂಗಳಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದರೆ, ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಧರ್ಮಸಿಂಗ್ ನಂತರದ 20 ತಿಂಗಳ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ಕೆ. ಅಭಯಚಂದ್ರ ಜೈನ್ ಹಾಗೂ ಡಿ.ಎನ್. ಜೀವರಾಜ್ ಮುಖ್ಯ ಸಚೇತಕರಾಗಿದ್ದರು. ಟಿ. ರಾಜಣ್ಣ ಕಾರ್ಯದರ್ಶಿಯಾಗಿದ್ದರು. 12ನೇ ವಿಧಾನಸಭೆಯಲ್ಲಿ ಒಟ್ಟು 180 ದಿನ ಕಲಾಪ ನಡೆಯಿತು. ವಿಧಾನಸೌಧದ ಹೊರತಾಗಿ ಬೆಳಗಾವಿಯಲ್ಲಿ ಐದು ದಿನ ಅಧಿವೇಶನ ನಡೆದಿದ್ದು ವಿಶೇಷ.


 

No comments:

Post a Comment