Friday, April 21, 2023

Karnataka Assembly Rewind- 17: 'Krishna-Panchajanya' resounded in the state- V.S. Rama Devi was the first woman governor

Karnataka Assembly Rewind- 17: 'Krishna-Panchajanya' resounded in the state- V.S. Rama Devi was the first woman governor

Kere Manjunath ಕೆರೆ ಮಂಜುನಾಥ್‌

In the state, Congress came to power with Panchajanya, which was sounded by S.M. Krishna. The Congress having found a strong leadership. Janata Parivar and Janata Dal split situation was used in a suitable way by congress. S.M. Krishna took over as the president of the Karnataka Pradesh Congress Committee, succeeded in bringing Congress to power in 1999.

The bifurcation of the Janata Dal and the crisis within them reached such a level that both the Janata Dal (Secular) and the Janata Dal (United) together won only 38 seats. BJP also took advantage of this and won 44 seats and became the opposition. Congress came to power by winning 132 seats. SM Krishna who had won from Maddur constituency, was sworn in as the 21st Chief Minister of the state on 11 October 1999.

SM Krishna brought about major changes in the power supply companies during his tenure as Chief Minister. Along with digitalization of land records land plan, many civic initiatives were implemented. A task force was formed on the concept of public-private partnership in the development of Bangalore. During this administration of Congress, Chief Minister S.M. Krishna had no resistance. To take advantage of this, the assembly was dissolved eight months earlier to get a new mandate.

V.S. Ramadevi served as the first woman Governor of the state from 2 December 1999 to 20 August 2002. Then T.N. Chaturvedi was the Governor. M.V. Venkatappa who had won by a Mulubagilu was the speaker. Jagdish Shettar from Hubballi Rural was the opposition leader. Raja Amareswara Naik and Appaji Nad Gowda were the chief whips during this period. Yakub Sharif and T. Rajanna was the secretary. The term of this eleventh assembly started on 11th October 1999 and ended with dissolution on 22nd July 1999. During this period, assembly proceedings were held for a total of 237 days. 

ವಿಧಾನಸಭೆ ಮೆಲುಕು-17: ರಾಜ್ಯದಲ್ಲಿ  ಮೊಳಗಿದ ‘ಕೃಷ್ಣ-ಪಾಂಚಜನ್ಯ’- ವಿ.ಎಸ್. ರಮಾದೇವಿ ಪ್ರಥಮ ಮಹಿಳಾ ರಾಜ್ಯಪಾಲರು

ಕೆರೆ ಮಂಜುನಾಥ್‌

ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಮೊಳಗಿಸಿದ ಪಾಂಚಜನ್ಯದಿಂದ ಕಾಂಗ್ರೆಸ್ ಅಧಿಕಾರದ ಗದ್ದುಗೆಗೇರಿತು. ಸದೃಢ ನಾಯಕತ್ವವನ್ನು ಕಂಡುಕೊಂಡ ಕಾಂಗ್ರೆಸ್, ಜನತಾಪರಿವಾರ ಹಾಗೂ ಜನತಾದಳದ ಹರಿದುಹಂಚಿ ಹೋದ ಪರಿಸ್ಥಿತಿಯನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಟ್ಟ ವಹಿಸಿಕೊಂಡ ಎಸ್.ಎಂ. ಕೃಷ್ಣ ಅವರು 1999ರಲ್ಲಿ ಕಾಂಗ್ರೆಸ್ ಅನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.

ಜನತಾದಳದ ಇಬ್ಭಾಗ ಹಾಗೂ ಅವರಲ್ಲಿನ ಬಿಕ್ಕಟ್ಟು ಎಷ್ಟು ಹೀನಾಯಸ್ಥಿತಿಗೆ ತಲುಪಿತೆಂದರೆ ಜನತಾದಳ (ಜಾತ್ಯತೀತ) ಹಾಗೂ ಜನತಾದಳ (ಸಂಯುಕ್ತ) ಎರಡೂ ಸೇರಿ 38 ಸ್ಥಾನಗಳಷ್ಟೇ ಪಡೆದವು. ಇದರ ಲಾಭವನ್ನು ಬಿಜೆಪಿಯೂ ಪಡೆದು 44 ಸ್ಥಾನಪಡೆದು ಪ್ರತಿಪಕ್ಷ ಸ್ಥಾನ ಅಲಂಕರಿಸಿತು. ಕಾಂಗ್ರೆಸ್ 132 ಸ್ಥಾನ ಗಳಿಸುವ ಮೂಲಕ ಅಧಿಕಾರಕ್ಕೇರಿತು. ಮದ್ದೂರು ಕ್ಷೇತ್ರದಿಂದ ಜಯಸಾಧಿಸಿದ್ದ ಎಸ್.ಎಂ. ಕೃಷ್ಣ ಅವರು 1999ರ ಅಕ್ಟೋಬರ್ 11ರಂದು ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದರು. ಭೂ ದಾಖಲೆಗಳ ಭೂಮಿ ಯೋಜನೆಯನ್ನು ಡಿಜಿಟಲೈಸೇಷನ್ ಮಾಡುವ ಜತೆಗೆ ಹಲವು ನಾಗರಿಕಸೇಹಿ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಬೆಂಗಳೂರಿನ ಅಭಿವೃದ್ಧಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪರಿಕಲ್ಪನೆಯಲ್ಲಿ ಒಂದು ಕಾರ್ಯಪಡೆಯನೇ ರಚಿಸಿದ್ದರು. ಕಾಂಗ್ರೆಸ್‌ನ ಈ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪ್ರತಿರೋಧವಿರಲಿಲ್ಲ. ಇದನ್ನು ಸದುಪಯೋಗಪಡಿಸಿಕೊಳ್ಳಲು ಎಂಟು ತಿಂಗಳ ಮುನ್ನವೇ ಹೊಸ ಜನಾದೇಶಪಡೆಯಲು ವಿಧಾನಸಭೆ ವಿಸರ್ಜಿಸಿದರು.

ವಿ.ಎಸ್. ರಮಾದೇವಿ ಅವರು ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರಾಗಿ 1999ರ ಡಿಸೆಂಬರ್ 2ರಿಂದ 2002ರ ಆಗಸ್ಟ್ 20ರವರೆಗೆ ಕಾರ್ಯನಿರ್ವಹಿಸಿದರು. ನಂತರ ಟಿ.ಎನ್. ಚತುರ್ವೇದಿ ರಾಜ್ಯಪಾಲರಾಗಿದ್ದರು. ಮುಳುಬಾಗಿಲಿನಿಂದ ಗೆದ್ದಿದ್ದ ಎಂ.ವಿ. ವೆಂಕಟಪ್ಪ ಅವರು ಸ್ಪೀಕರ್ ಆಗಿದ್ದರು. ಹುಬ್ಬಳ್ಳಿ ಗ್ರಾಮಾಂತರದ ಜಗದೀಶ್ ಶೆಟ್ಟರ್ ಪ್ರತಿಪಕ್ಷ ನಾಯಕರಾಗಿದ್ದರು. ರಾಜಾ ಅಮರೇಶ್ವರ ನಾಯಕ್, ಅಪ್ಪಾಜಿ ನಾಡಗೌಡ ಈ ಅವಧಿಯಲ್ಲಿ ಮುಖ್ಯ ಸಚೇತಕರಾಗದ್ದರು. ಯಾಕೂಬ್ ಷರೀಫ್ ಹಾಗೂ ಟಿ. ರಾಜಣ್ಣ ಕಾರ್ಯದರ್ಶಿಯಾಗಿದ್ದರು. ಈ ಹನ್ನೊಂದನೆ ವಿಧಾನಸಭೆ ಅವಧಿ 1999ರ ಅಕ್ಟೋಬರ್ 11ರಿಂದ ಆರಂಭಗೊಂಡು, 1999ರ ಜುಲೈ 22ರಂದು ವಿಸರ್ಜನೆಯಾಗುವುದರೊಂದಿಗೆ ಕೊನೆಗೊಂಡಿತು. ಈ ಅವಧಿಯಲ್ಲಿ ಒಟ್ಟು 237 ದಿನ ವಿಧಾನಸಭೆ ಕಲಾಪ ನಡೆದಿತ್ತು.


 

No comments:

Post a Comment