Sunday, April 23, 2023

Karnataka Assembly Rewind-19: Mandate for B.S. Yeddyurappa, first BJP government in South

Karnataka Assembly Rewind-19: Mandate for B.S. Yeddyurappa, first BJP government in South


Kere Manjunath ಕೆರೆ ಮಂಜುನಾಥ್‌

For the first time in South India, the lotus of BJP blossomed. B.S. JDS's H.D. Kumaraswamy did not given power to Yeddyurappa and not kept his words. Taking full advantage of this, BJP, B.S. Yeddyurappa was portrayed as the next Chief Minister and got the mandate and came to power.
Even though the BJP did not get a clear majority, it succeeded in attracting independents to form the government for the first time in the state. As the BJP won 110 constituencies, three MLAs were required for a majority. The BJP rose to power by getting help from outsiders and making them ministers. B.S. Yeddyurappa assumed office as the Chief Minister on 30 May 2008.

The BJP government went ahead with 'Operation Kamala' to increase its strength. The other party wooed MLAs, empowered them and ensured that they would win the elections again. However, the BJP proved that it lacked experience in governance. Animosity arose among the legislators. The miners of Bellary first resisted the leader who brought him to power. The elders comforted him. However, The charge sheet was filed in the Lokayukta court in the denotify case against B.S. Yeddyurappa. Then inevitably B.S. Yeddyurappa had to resign. D.V.Sadananda Gowda, who is not even an MLA was made Chief Minister on 5 August 2011 on Yeddyurappa's recommendation. He was later elected to the Legislative Council.

D.V. Sadananda Gowda's rule lasted only 11 months. B.S.Yediyurappa's group opposed D.V. Sadanand Gowda stepped down from power. Again B.S. Yeddyurappa named the chief ministerial candidate and brought him to power. Jagdish Shettar of Hubballi-Dharwad Center became Chief Minister on 12th July 2012. Jagdish Shettar and K.G. Bopaiah was the speaker. Mallikarjuna Kharge and Siddaramaiah were the leaders of the opposition. After retirement of S.B. Patil, from November 2011 P. Omprakash was the secretary. A total of 178 days  proceedings were held in this thirteenth assembly. This is the lowest in the five-year assembly so far. The proceedings held at Suvarnasoudha in Belgaum is special for this period.

ವಿಧಾನಸಭೆ ಮೆಲುಕು-19: ಬಿ.ಎಸ್. ಯಡಿಯೂರಪ್ಪ ಅವರಿಗೆ ಜನಾದೇಶ, ದಕ್ಷಿಣದಲ್ಲಿ ಪ್ರಥಮ ಬಿಜೆಪಿ ಸರ್ಕಾರ

ಕೆರೆ ಮಂಜುನಾಥ್‌

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿಯ ಕಮಲ ಅರಳಿತು. ಬಿ.ಎಸ್. ಯಡಿಯೂರಪ್ಪ ಅವರಿಗೆ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ನೀಡಲಿಲ್ಲ, ಮಾತು ತಪ್ಪಿದ್ದರು. ಇದರ ಸಂಪೂರ್ಣ ಲಾಭ ಪಡೆದುಕೊಂಡ ಬಿಜೆಪಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿ ಜನಾದೇಶ ಪಡೆದು ಅಧಿಕಾರಕ್ಕೆ ಬಂತು.

ಬಿಜೆಪಿಗೆ ಸ್ಪಷ್ಟ ಬಹುಮತ ಬಾರದಿದ್ದರೂ ಪಕ್ಷೇತರರನ್ನು ಸೆಳೆಯುವಲ್ಲಿ ಯಶಸಾಧಿಸಿದ್ದರಿಂದ ಪ್ರಥಮ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿತು. ಬಿಜೆಪಿ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಬಹುಮತಕ್ಕೆ ಮೂರು ಶಾಸಕರ ಅಗತ್ಯವಿತ್ತು. ಪಕ್ಷೇತರರ ನೆರವು ಪಡೆದುಕೊಂಡು ಅವರನ್ನು ಸಚಿವರಾಗಿ ಮಾಡುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರಿತು. ಬಿ.ಎಸ್. ಯಡಿಯೂರಪ್ಪ ಅವರು 2008ರ ಮೇ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಬಿಜೆಪಿ ಸರ್ಕಾರ ತನ ಬಲವನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ‘ಆಪರೇಷನ್ ಕಮಲ’ಕ್ಕೆ ಮುಂದಾಯಿತು. ಬೇರೆ ಪಕ್ಷ ಶಾಸಕರನ್ನು ಸೆಳೆದು ಅವರಿಗೆ ಅಧಿಕಾರ ನೀಡಿ, ಮತ್ತೆ ಚುನಾವಣೆಯಲ್ಲಿ ಅವರನ್ನು ತನ್ನ ತೆಕ್ಕೆಯಲ್ಲಿ ಜಯಸಾಧಿಸುವಂತೆ ನೋಡಿಕೊಂಡಿತು. ಇಷ್ಟಾದರೂ ಆಡಳಿತ ನಡೆಸುವಲ್ಲಿ ಅನುಭವವಿಲ್ಲದ್ದನ್ನು ಬಿಜೆಪಿ ಸಾಬೀತುಪಡಿಸಿತು. ಶಾಸಕರಲ್ಲಿ ವೈಮನಸ್ಯ ಉಂಟಾಯಿತು. ಅಧಿಕಾರಕ್ಕೆ ತಂದ ನಾಯಕನನ್ನೇ ಇಳಿಸಲು ಬಳ್ಳಾರಿಯ ಗಣಿ ಧಣಿಗಳು, ಪ್ರಥಮವಾಗಿ ಅವರ ವಿರುದ್ಧ ಪ್ರತಿರೋಧ ತೋರಿದರು. ವರಿಷ್ಠರು ಅವರನ್ನು ಸಂತೈಸಿದ್ದರು. ಆದರೆ, ಬಿ.ಎಸ್. ಯಡಿಯೂರಪ್ಪ ವಿರುದ್ಧ ಡಿನೋಟಿಫೈ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಯಿತು. ಆಗ ಅನಿವಾರ್ಯವಾಗಿ ಬಿ.ಎಸ್. ಯಡಿಯೂರಪ್ಪ ರಾಜಿನಾಮೆ ನೀಡಬೇಕಾಯಿತು. ಶಾಸಕರೂ ಆಗಿಲ್ಲದ ಡಿ.ವಿ. ಸದಾನಂದಗೌಡ ಅವರನ್ನು ಯಡಿಯೂರಪ್ಪನವರ ಶಿಫಾರಸಿನ ಮೇರೆಗೆ 2011ರ ಆಗಸ್ಟ್ 5ರಂದು ಮುಖ್ಯಮಂತ್ರಿ ಮಾಡಲಾಯಿತು. ನಂತರ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಯಿತು.

ಡಿ.ವಿ. ಸದಾನಂದಗೌಡರ ಆಡಳಿತ ನಡೆದದ್ದೂ 11 ತಿಂಗಳಷ್ಟೇ. ಬಿ.ಎಸ್.ಯಡಿಯೂರಪ್ಪ ಬಳಗದ ವಿರೋಧ ಕಟ್ಟಿಕೊಂಡ ಡಿ.ವಿ. ಸದಾನಂದಗೌಡ ಅಧಿಕಾರದಿಂದ ಕೆಳಗಿಳಿದರು. ಮತ್ತೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಭ್ಯರ್ಥಿ ಹೆಸರಿಸಿ ಅವರನ್ನೇ ಅಧಿಕಾರಕ್ಕೆ ತಂದರು. ಹುಬ್ಬಳ್ಳಿ-ಧಾರವಾಡ ಕೇಂದ್ರದ ಜಗದೀಶ್ ಶೆಟ್ಟರ್ 2012ರ ಜುಲೈ 12ರಂದು ಮುಖ್ಯಮಂತ್ರಿಯಾದರು. ಜಗದೀಶ್ ಶೆಟ್ಟರ್ ಹಾಗೂ ಕೆ.ಜಿ. ಬೋಪಯ್ಯ ಸ್ಪೀಕರ್ ಆಗಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದರು. ಎಸ್.ಬಿ. ಪಾಟೀಲ್ ನಿವೃತ್ತಿಯಾದ ನಂತರ 2011ರ ನವೆಂಬರ್‌ನಿಂದ ಪಿ. ಓಂಪ್ರಕಾಶ್ ಕಾರ್ಯದರ್ಶಿ ಆಗಿದ್ದಾರೆ. ಈ ಹದಿಮೂರನೇ ವಿಧಾನಸಭೆಯಲ್ಲಿ ಒಟ್ಟಾರೆ 178 ದಿನ ಕಲಾಪ ನಡೆಯಿತು. ಇದು ಐದು ವರ್ಷ ಅವಧಿಯ ಈವರೆಗಿನ ವಿಧಾನಸಭೆಯಲ್ಲಿ ಅತ್ಯಂತ ಕಡಿಮೆ. ಬೆಳಗಾವಿಯ ಸುವರ್ಣಸೌಧದಲ್ಲಿ ಕಲಾಪ ನಡೆದದ್ದು ಈ ಅವಧಿಯ ವಿಶೇಷ.


 

No comments:

Post a Comment