Tuesday, April 18, 2023

Karnataka Assembly Rewind- 12: First Non-Congress Chief Minister Ramakrishna Hegde

Karnataka Assembly Rewind- 12:  First Non-Congress Chief Minister Ramakrishna Hegde


Kere Manjunath ಕೆರೆ ಮಂಜುನಾಥ್‌

For the first time after independence, a non-Congress government came to power in the state. Apart from the first five-year period, the Congress government was in the state for 31 years. Janata Party and Devaraj Arasu Congress all came together and for the first time Congress lost the election. The major reason for the defeat in the state was the Congress government's strong preference for the pro-Kannada Gokak movement.

In the elections held on May 1, 1983, the Janata Party won 95 seats out of 224 constituencies. Congress got 82 seats. Thus, BJP, Left parties and 16 non-party MLAs joined hands with Janata Paksha. Ramakrishna Hegade assumed power as the first non-Congress chief minister, a man wanted by both in the rivalry between Okkaligas and Lingayats. The seventh Legislative Assembly came into existence on 10 March 1983.

In the 1984 Lok Sabha elections, Janata Party won only 4 seats out of 28 constituencies in the state. This led to a backlash and Chief Minister Ramakrishna Hegde, who felt that he had no moral right to be in power, decided to seek a new mandate. He appealed to the governor to dissolve the assembly. Thus, on 2 January 1985, the Seventh Legislative Assembly was dissolved. The non-Congress government came to power but did not complete its three-year term. The reason for this is Janata Paksha's decision to get a new mandate with a clear majority.

D.B.Chandra Gowda who had won from Tirthahalli in the seventh term of the Legislative Assembly was the speaker. Veerappa Moily of Indira Congress, which had won from Karkala, was the leader of the opposition. Bapu Gowda Darshanapura and K.G. Maheshwarappa was the chief whip during this period. K.S. Singrigowda was also the assembly secretary during this period. A total of 104 days were held in the two-year assembly. After Umashankar Dixit, Govinda Narayan and Ashok Nath Banerjee were the governors.  

ವಿಧಾನಸಭೆ ಮೆಲುಕು-12: ಪ್ರಥಮ ಕಾಂಗ್ರೆಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ

ಕೆರೆ ಮಂಜುನಾಥ್‌

ಸ್ವಾತಂತ್ರ್ಯಾನಂತರ ಪ್ರಥಮ ಬಾರಿಗೆ ಕಾಂಗ್ರೆಸೇತರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಪ್ರಥಮ ಐದು ವರ್ಷದ ಅವಧಿಯನ್ನು ಹೊರತುಪಡಿಸಿ ನಂತರ 31 ವರ್ಷ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿತ್ತು. ಜನತಾಪಕ್ಷ, ದೇವರಾಜ್ ಅರಸು ಕಾಂಗ್ರೆಸ್ ಎಲ್ಲರೂ ಒಟ್ಟುಗೂಡಿದ್ದರಿಂದ ಪ್ರಥಮ ಬಾರಿಗೆ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುವಂತಾಯಿತು. ಕನ್ನಡಪರವಾದ ಗೋಕಾಕ್ ಚಳವಳಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒಲವು ತೋರದ್ದು ರಾಜ್ಯದಲ್ಲಿ ಸೋಲು ಅನುಭವಿಸಲು ಪ್ರಮುಖ ಕಾರಣವಾಯಿತು.

1983ರ ಮೇ 1ರಂದು ನಡೆದ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ 95 ಸ್ಥಾನಗಳಿಸಿದ ಜನತಾಪಕ್ಷ ಪ್ರಥಮ ಸ್ಥಾನಪಡೆಯಿತು. ಕಾಂಗ್ರೆಸ್ 82 ಸ್ಥಾನಕ್ಕಿಳಿಯಿತು. ಹೀಗಾಗಿ, ಜನತಾಪಕ್ಷದೊಂದಿಗೆ ಬಿಜೆಪಿ, ಎಡಪಕ್ಷಗಳು ಹಾಗೂ 16 ಪಕ್ಷೇತರ ಶಾಸಕರು ಕೈಜೋಡಿಸಿದರು. ಒಕ್ಕಲಿಗ ಹಾಗೂ ಲಿಂಗಾಯತರ ನಡುವಿನ ಪೈಪೋಟಿ-ಗೊಂದಲದಲ್ಲಿ ಇಬ್ಬರಿಗೂ ಬೇಕಾದ ವ್ಯಕ್ತಿಯಾಗಿ, ಕಾಂಗ್ರೆಸೇತರ ಪ್ರಥಮ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಅಧಿಕಾರ ಸ್ವೀಕರಿಸಿದರು. ಏಳನೇ ವಿಧಾನಸಭೆ 1983ರ ಮಾರ್ಚ್ 10ರಂದು ಅಸ್ತಿತ್ವಕ್ಕೆ ಬಂದಿತ್ತು.

1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಜನತಾಪಕ್ಷ ಕೇವಲ 4 ಸ್ಥಾನಗಳನು ಮಾತ್ರ ಗೆದ್ದುಕೊಂಡಿತು. ಇದರಿಂದ ಹಿನ್ನಡೆ ಆಯಿತು ಹಾಗೂ ಅಧಿಕಾರದಲ್ಲಿರಲು ನೈತಿಕ ಹಕ್ಕಿರುವುದಿಲ್ಲ ಎಂದು ಭಾವಿಸಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ಹೊಸದಾಗಿ ಜನಾದೇಶ ಪಡೆಯಲು ನಿರ್ಧರಿಸಿದರು. ವಿಧಾನಸಭೆಯನ್ನು ವಿಸರ್ಜಿಸಲು ರಾಜ್ಯಪಾಲರಿಗೆ ಮನವಿ ಮಾಡಿಕೊಂಡರು. ಹೀಗಾಗಿ 1985ರ ಜನವರಿ 2ರಂದು ಏಳನೇ ವಿಧಾನಸಭೆ ವಿಸರ್ಜನೆಯಾಯಿತು. ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಮೂರು ವರ್ಷದ ಅವಧಿಯನ್ನೂ ಪೂರೈಸಲಿಲ್ಲ. ಇದಕ್ಕೆ ಕಾರಣ, ಹೊಸ ಜನಾದೇಶವನ್ನು ಸ್ಪಷ್ಟ ಬಹುಮತದೊಂದಿಗೆ ಪಡೆಯಬೇಕು ಎಂಬ ಜನತಾಪಕ್ಷದ ನಿರ್ಧಾರ.

ಏಳನೇ ಅವಧಿಯ ವಿಧಾನಸಭೆಯಲ್ಲಿ ತೀರ್ಥಹಳ್ಳಿಯಿಂದ ಗೆದ್ದಿದ್ದ ಡಿ.ಬಿ. ಚಂದ್ರೇಗೌಡ ಸ್ಪೀಕರ್ ಸ್ಥಾನಕ್ಕೇರಿದ್ದರು. ಕಾರ್ಕಳದಿಂದ ಗೆಲುವು ಸಾಧಿಸಿದ್ದ ಇಂದಿರಾ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ಪ್ರತಿಪಕ್ಷ ನಾಯಕರಾಗಿದ್ದರು. ಬಾಪುಗೌಡ ದರ್ಶನಾಪುರ ಹಾಗೂ ಕೆ.ಜಿ. ಮಹೇಶ್ವರಪ್ಪ ಅವರು ಈ ಅವಧಿಯಲ್ಲಿ ಮುಖ್ಯ ಸಚೇತಕರಾಗಿದ್ದರು. ಕೆ.ಎಸ್. ಸಿಂಗ್ರಿಗೌಡ ಈ ಅವಧಿಯಲ್ಲೂ ವಿಧಾನಸಭೆ ಕಾರ್ಯದರ್ಶಿಯಾಗಿದ್ದರು. ಎರಡು ವರ್ಷದ ವಿಧಾನಸಭೆಯಲ್ಲಿ ಒಟ್ಟಾರೆ 104 ದಿನ ಕಲಾಪ ನಡೆಯಿತು. ಉಮಾಶಂಕರ್ ದೀಕ್ಷಿತ್ ನಂತರ ಗೋವಿಂದನಾರಾಯಣ ಹಾಗೂ ಅಶೋಕ್ ನಾಥ್ ಬ್ಯಾನರ್ಜಿ ರಾಜ್ಯಪಾಲರಾಗಿದ್ದರು.


No comments:

Post a Comment