Karnataka Assembly Rewind- 15: Vidhan Sabha Meluku-15: Janata Party Split, record win for Congress
Kere Manjunath ಕೆರೆ ಮಂಜುನಾಥ್
The
Janata Party itself, which was founded to oust the Congress party from
power, broke into many pieces. It was a clear advantage for the
Congress, which had been out of power for six years. In the elections
held in 1989, the Congress won a record 178 seats.
Congress
needed a 'mass leader' to reap the rewards of Janata Party's failure to
govern. In that case no one succeeded in this direction. Then Virendra
Patil was given the leadership of the state Congress. Virender Patil,
who promised people transport and water to every village, succeeded in
impressing them. On November 30, 1989, Virendra Patil assumed office as
the Chief Minister for the second time.
Virendra Patil, who came
to power when the economic situation of the state was in a very
difficult situation, curbed the excise lobby and increased the duty from
2% to 20% and brought more revenue to the treasury. This caused a lot
of animosity in his party. Furthermore, in October 1990 Virendra Patil
suffered a stroke. The then Prime Minister Rajiv Gandhi mercilessly
sacked Virendra Patil as Chief Minister. Then there was President's rule
for seven days. Congress chosen the S. Bangarappa as the leader of the
legislative party. Bangarappa assumed office as the Chief Minister on 17
October 1990.
Bangarappa became popular during his period
through worship, asylum and world projects. However, many allegations
came against him, including the classic computer scam. Then Bangarappa
lost the confidence of Congress MLAs and resigned on November 19, 1992.
Veerappamoily took office as Chief Minister. S. M.Krishna who was the
speaker for the first three years, was the Deputy Chief Minister for the
first time in the history of the state during the last two years of
this term.
Thus, there were three Chief Ministers during the
Ninth Legislative Assembly. Janata Dal D.B. Chandregowda, R.V. Deshpande
were the leader of the opposition. V.S. Kaujalagi was the speaker.
During this period, 251 days of proceedings were held. Bhanupratapsingh,
Khurshid Alankhan were the governors. On September 20, 1994, the Ninth
Legislative Assembly was dissolved.
ವಿಧಾನಸಭೆ ಮೆಲುಕು-15: ಜನತಾಪಕ್ಷ ಹೋಳು, ಕಾಂಗ್ರೆಸ್‌ಗೆ ದಾಖಲೆಯ ಗೆಲುವು
ಕೆರೆ ಮಂಜುನಾಥ್
ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲು ಸ್ಥಾಪನೆಯಾದ ಜನತಾ ಪಕ್ಷವೇ ಒಡೆದು ಹಲವು ಹೋಳಾಯಿತು. ಇದರ ಸ್ಪಷ್ಟ ಸದುಪಯೋಗವಾಗಿದ್ದು, ಆರು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಕಾಂಗ್ರೆಸ್‌ಗೆ. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಈವರೆಗೂ ದಾಖಲೆಯಾಗೇ ಉಳಿದಿರುವ 178 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.
ಜನತಾ ಪಕ್ಷದ ಆಡಳಿತ ವೈಫಲ್ಯದ ಪ್ರತಿಫಲ ಪಡೆಯಲು ಕಾಂಗ್ರೆಸ್‌ಗೆ ‘ಮಾಸ್ ಲೀಡರ್’ನ ಅಗತ್ಯವಿತ್ತು. ಆ ಸಂದರ್ಭದಲ್ಲಿ ಈ ದಿಕ್ಕಿಯಲ್ಲಿ ಯಾರೂ ಯಶಸಾಧಿಸಲಿಲ್ಲ. ಆಗ ವೀರೇಂದ್ರ ಪಾಟೀಲ್ ಅವರಿಗೆ ರಾಜ್ಯ ಕಾಂಗ್ರೆಸ್‌ನ ನೇತೃತ್ವ ವಹಿಸಲಾಯಿತು. ಪ್ರತಿ ಹಳ್ಳಿಗೂ ಸಾರಿಗೆ ಮತ್ತು ನೀರು ಎಂಬ ಭರವಸೆಗಳನ್ನು ಜನರ ಮುಂದಿಟ್ಟಿದ್ದ ವೀರೇಂದ್ರ ಪಾಟೀಲ್, ಅವರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರು. 1989ರ ನವೆಂಬರ್ 30ರಂದು ವೀರೇಂದ್ರ ಪಾಟೀಲ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿದ್ದಾಗ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲ್, ಅಬಕಾರಿ ಲಾಬಿಗೆ ಅಂಕುಶ ಹಾಕಿ, ಶೇ.2ರಷ್ಟಿದ್ದ ಸುಂಕವನ್ನು ಶೇ.20ಕ್ಕೆ ಏರಿಸಿ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಿದರು. ಇದು ಅವರ ಪಕ್ಷದಲ್ಲೇ ಸಾಕಷ್ಟು ವೈಮನಸ್ಯಕ್ಕೆ ಕಾರಣವಾಯಿತು. ಇದಲ್ಲದೆ, 1990ರ ಅಕ್ಟೋಬರ್‌ನಲ್ಲಿ ವೀರೇಂದ್ರ ಪಾಟೀಲ್ ಅವರಿಗೆ ಪಾರ್ಶ್ವವಾಯು ಬಡಿಯಿತು. ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಅನುಕಂಪರಹಿತವಾಗಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಿದರು. ಆಗ ಏಳು ದಿನ ರಾಷ್ಟ್ರಪತಿ ಆಡಳಿತವಿತ್ತು. ಕಾಂಗ್ರೆಸ್ ಎಸ್. ಬಂಗಾರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರನಾಗಿ ಆರಿಸಿತು. 1990ರ ಅಕ್ಟೋಬರ್ 17ರಂದು ಮುಖ್ಯಮಂತ್ರಿಯಾಗಿ ಬಂಗಾರಪ್ಪ ಅಧಿಕಾರ ವಹಿಸಿಕೊಂಡರು.
ಬಂಗಾರಪ್ಪ ತಮ್ಮ ಅವಧಿಯಲ್ಲಿ ಆರಾಧನ, ಆಶ್ರಯ ಮತ್ತು ವಿಶ್ವ ಯೋಜನೆಗಳ ಮೂಲಕ ಜನಪ್ರಿಯರಾದರು. ಆದರೆ, ಕ್ಲಾಸಿಕ್ ಕಂಪ್ಯೂಟರ್ ಹಗರಣ ಸೇರಿದಂತೆ ಸಾಕಷ್ಟು ಆರೋಪಗಳು ಇವರ ಮೇಲೆ ಬಂದರು. ಆಗ ಬಂಗಾರಪ್ಪ ಕಾಂಗ್ರೆಸ್ ಶಾಸಕರ ವಿಶ್ವಾಸ ಕಳೆದುಕೊಂಡು, 1992ರ ನವೆಂಬರ್ 19ರಂದು ರಾಜಿನಾಮೆ ನೀಡಿದರು. ವೀರಪ್ಪಮೊಯಿಲಿ ಅಂದೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪ್ರಥಮ ಮೂರು ವರ್ಷ ಸ್ಪೀಕರ್ ಆಗಿದ್ದ ಎಸ್.ಎಂ. ಕೃಷ್ಣ ಈ ಅವಧಿಯ ಕೊನೆಯ ಎರಡು ವರ್ಷ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉಪ ಮುಖ್ಯಮಂತ್ರಿಯಾಗಿದ್ದರು.
ಹೀಗಾಗಿ ಒಂಬತ್ತನೇ ವಿಧಾನಸಭೆ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಯಾಗಿದ್ದರು. ಜನತಾದಳದ ಡಿ.ಬಿ. ಚಂದ್ರೇಗೌಡ, ಆರ್.ವಿ. ದೇಶಪಾಂಡೆ ಪ್ರತಿಪಕ್ಷ ನಾಯಕರಾಗಿದ್ದರು. ವಿ.ಎಸ್. ಕೌಜಲಗಿ ಸ್ಪೀಕರ್ ಆಗಿದ್ದರು. ಈ ಅವಧಿಯಲ್ಲಿ 251 ದಿನ ಕಲಾಪ ನಡೆಯಿತು. ಭಾನುಪ್ರತಾಪ್‌ಸಿಂಗ್, ಖುರ್ಷಿದ್ ಆಲಂಖಾನ್ ರಾಜ್ಯಪಾಲರಾಗಿದ್ದರು. 1994ರ ಸೆಪ್ಟಂಬರ್ 20ರಂದು ಒಂಬತ್ತನೇ ವಿಧಾನಸಭೆ ವಿಸರ್ಜನೆಯಾಯಿತು.
No comments:
Post a Comment