Karnataka Assembly Rewind-13: Ramakrishna Hegde is the most popular Chief Minister
Kere Manjunath ಕೆರೆ ಮಂಜುನಾಥ್
Ramakrishna
Hegde, who was a popular Chief Minister, was rewarded for his thinking
and clear stand. For the first time the people of the state gave a clear
majority to the plowman. In order to win this vote of confidence, the
seventh assembly was dissolved within three years. In the elections held
in March 1985, the Janata Party won a clear majority by winning 139
seats. Ramakrishna Hegde assumed office as Chief Minister for the second
time on March 8.
When Ramakrishna Hegde was the Chief Minister,
the administration got a new charisma. New processes were also
implemented in administrative reform for the people to get emphasis on
many popular projects. State rights were positively established in the
federal system. Besides giving more power to the local bodies, it also
gave them responsibility. Karnataka was the first to legislate on
panchayat raj, giving financial and administrative powers to local
bodies in third-tier cities. Legislation establishing a Lokayukta body
to eradicate corruption in administration was introduced during this
period. Also, a Kannada Monitoring Committee was formed for the
implementation of Kannada in the administration and its chairman was
given cabinet rank.
Due to the efficient administration of Chief
Minister Ramakrishna Hegde, he got great recognition and popularity. But
when the Congress alleged that his own family was involved in transfer
corruption, it was referred to the Lokayukta for investigation.
Ramakrishna Hegde resigned as Chief Minister in 1986 when the High Court
indicted the government over the management of the Arak bottling
contract.
After three days, when everyone calmed down, he assumed
office as Chief Minister for the third time on February 16. However, in
August 1988, the case of telephone tapping of prominent politicians engulfed
the entire state. Ramakrishna Hegde, who was responsible for this,
resigned as Chief Minister on August 10. Then S.R. Bommai assumed power
as the Chief Minister of the state.
ವಿಧಾನಸಭೆ ಮೆಲುಕು-13: ರಾಮಕೃಷ್ಣ ಹೆಗಡೆ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ, ದೂರವಾಣಿ ಕದ್ದಾಲಿಕೆ - ರಾಜೀನಾಮೆ
ಕೆರೆ ಮಂಜುನಾಥ್
ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಆಲೋಚನೆ ಹಾಗೂ ಸ್ಪಷ್ಟ ನಿಲುವು ಪ್ರತಿಫಲ ನೀಡಿತ್ತು. ನೇಗಿಲು ಹೊತ್ತ ರೈತನಿಗೆ ರಾಜ್ಯದ ಜನತೆ ಪ್ರಥಮ ಬಾರಿಗೆ ಸ್ಪಷ್ಟ ಬಹುಮತ ನೀಡಿದ್ದರು. ಈ ವಿಶ್ವಾಸಮತ ಗಳಿಸಲೆಂದೇ ಏಳನೇ ವಿಧಾನಸಭೆಯಲ್ಲಿ ಮೂರು ವರ್ಷದೊಳಗೆ ವಿಸರ್ಜನೆ ಮಾಡಲಾಗಿತ್ತು. 1985ರ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಜನತಾಪಕ್ಷ 139 ಸ್ಥಾನಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿತ್ತು. ರಾಮಕೃಷ್ಣ ಹೆಗಡೆ ಮಾರ್ಚ್ 8ರಂದು ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದರು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆಡಳಿತಕ್ಕೆ ಒಂದು ಹೊಸ ವರ್ಚಸ್ಸು ಸಿಕ್ಕಿತ್ತು. ಹಲವು ಜನಪರ ಯೋಜನೆಗಳಿಗೆ ಒತ್ತು ಸಿಗುವ ಜನತೆಗೆ, ಆಡಳಿತ ಸುಧಾರಣೆಯಲ್ಲಿ ಹೊಸ ಪ್ರಕ್ರಿಯೆಗಳೂ ಜಾರಿಯಾದವು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಕ್ಕುಗಳನ್ನು ಸಕಾರಾತ್ಮಕವಾಗಿ ಸ್ಥಾಪಿಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ನೀಡುವ ಜತೆಗೆ ಅವರಿಗೆ ಜವಾಬ್ದಾರಿ ನೀಡುವ ಕಾರ್ಯವೂ ಆಯಿತು. ಪಂಚಾಯತ್ ರಾಜ್ ಬಗ್ಗೆ ಶಾಸನ ರಚಿಸುವಲ್ಲಿ ಕರ್ನಾಟಕ ಪ್ರಥಮವಾಗಿ, ಮೂರನೇ ಸ್ತರದ ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಹಾಗೂ ಆಡಳಿತಾತ್ಮಕ ಶಕ್ತಿಯನ್ನು ನೀಡಲಾಗಿತ್ತು. ಆಡಳಿತದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಸಂಸ್ಥೆ ಸ್ಥಾಪಿಸುವ ಶಾಸನವನ್ನು ಈ ಅವಧಿಯಲ್ಲಿ ಪರಿಚಯಿಸಲಾಗಿತ್ತು. ಅಲ್ಲದೆ, ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಕನ್ನಡ ನಿಗಾ ಸಮಿತಿ ರಚಿಸಿ, ಅದರ ಅಧ್ಯಕ್ಷರಿಗೆ ಕ್ಯಾಬಿನೆಟ್ ರ್‍ಯಾಂಕ್ ನೀಡಲಾಗಿತ್ತು.
ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದಕ್ಷ ಆಡಳಿತದಿಂದ ಅವರಿಗೆ ಅತ್ಯದ್ಭುತ ಜನಮನ್ನಣೆ ಹಾಗೂ ಜನಪ್ರಿಯತೆ ಲಭ್ಯವಾಗಿತ್ತು. ಆದರೆ ಅವರದೇ ಕುಟುಂಬ ವರ್ಗಾವಣೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಕಾಂಗ್ರೆಸ್ ಆಪಾದಿಸಿದಾಗ ಅದನ್ನು ಲೋಕಾಯುಕ್ತ ತನಿಖೆಗೆ ನೀಡಿದ್ದರು. 1986ರಲ್ಲಿ ಅರಾಕ್ ಬಾಟ್ಲಿಂಗ್ ಗುತ್ತಿಗೆ ನಿರ್ವಹಣೆ ಬಗ್ಗೆ ಸರ್ಕಾರದ ಮೇಲೆ ಹೈಕೋರ್ಟ್ ದೋಷಾರೋಪಣೆ ಮಾಡಿದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಮೂರು ದಿನದ ನಂತರ ಎಲ್ಲರೂ ಸಮಾಧಾನಪಡಿಸಿದಾಗ ಮತ್ತೆ ಫೆಬ್ರವರಿ 16ರಂದು ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ಆದರೆ, 1988ರ ಆಗಸ್ಟ್‌ನಲ್ಲಿ ಪ್ರಮುಖ ರಾಜಕಾರಣಿಗಳ ದೂರವಾಣಿ ಕದ್ದಾಲಿಕೆ ಪ್ರಕರಣ ಇಡೀ ರಾಜ್ಯವನ್ನು ಆವರಿಸಿತು. ಇದರ ನೈತಿಕ ಜವಾಬ್ದಾರಿ ಹೊತ್ತ ರಾಮಕೃಷ್ಣ ಹೆಗಡೆ ಆಗಸ್ಟ್ 10ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆಗ ಎಸ್.ಆರ್. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
No comments:
Post a Comment