Karnataka Assembly Rewind- 8: Shivappa was the first opposition leader, Nijalingappa defeated, but become a CM
Kere Manjunath ಕೆರೆ ಮಂಜುನಾಥ್
Congress, which had held the helm of the state for two consecutive terms, planned to come to power for the third time. S.Nijalingappa who was demoted from the post of Chief Minister for lack of confidence, was again given the responsibility of leadership. Congress contested the 1962 elections under his leadership. In the elections held on February 19, the Congress won 138 seats out of 208 constituencies and came to power. However, S.Nijalingappa who was portrayed as the chief ministerial candidate lost in Hosdurga by a margin of 5709 votes. Thus, Shivalingappa Rudrappa Kanti became the sixth Chief Minister of State.
S.R. Kanti's chief ministership did not last long. Reluctantly resigned before the end of three months. Because, Bagalkote MLA B.T.Mural wants S. Nijalingappa to be the Chief Minister, resigned from his post. In the by-election held for that constituency, Nijalingappa and two others had submitted their nomination papers. Since the nomination papers of the other two were rejected, S. Nijalingappa was elected unopposed. As the previous plan of the Congress, S. Nijalingappa was made Chief Minister. The term of the third Legislative Assembly was from March 15, 1962 to February 28, 1967. S. Nijalingappa completed this term. Besides providing many facilities in the field of agriculture, industry, transport and irrigation, he brought innovation. Thus S. Nijalingappa was also known as the 'Builder of Modern Karnataka'.
For the first time in this term of the Assembly, the post of Leader of the Opposition was given. This post was made available to the Praja Socialist Party which had a strength of 20 members and S.Shivappa who was elected from Shravanabelagola, became the first opposition leader. B.Vaikuntha Baliga of Belthangadi Constituency became the speaker. G.S.Venkataramana Iyer who was also the Assembly Secretary in the previous period continued till 18 September 1965. Hanumanthappa became the secretary after him. The session of the Legislative Assembly lasted for a minimum of 59 days and a maximum of 98 days in a year for five years. A total of 365 days of proceedings were held in the third legislative session.
ವಿಧಾನಸಭೆ ಮೆಲುಕು-8: ಶಿವಪ್ಪ ಪ್ರಥಮ ಪ್ರತಿಪಕ್ಷ ನಾಯಕ, ನಿಜಲಿಂಗಪ್ಪ ಅವರಿಗೆ ಸೋಲು
ಕೆರೆ ಮಂಜುನಾಥ್
ರಾಜ್ಯದ ಆಡಳಿತ ಚುಕ್ಕಾಣಿಯನ್ನು ಸತತ ಎರಡು ಬಾರಿ ಹಿಡಿದುಕೊಂಡಿದ್ದ ಕಾಂಗ್ರೆಸ್, ಮೂರನೇ ಬಾರಿಗೂ ಅಧಿಕಾರಕ್ಕೆ ಬರಲು ಯೋಜನೆ ರೂಪಿಸಿತು. ವಿಶ್ವಾಸ ಇಲ್ಲ ಎಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಎಸ್. ನಿಜಲಿಂಗಪ್ಪ ಅವರಿಗೆ ಮತ್ತೆ ನಾಯಕತ್ವದ ಹೊಣೆ ಹೊರಿಸಲಾಯಿತು. ಅವರ ನೇತೃತ್ವದಲ್ಲಿ 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ನಡೆಸಿತು. ಫೆಬ್ರವರಿ 19ರಂದು ನಡೆದ ಚುನಾವಣೆಯಲ್ಲಿ 208 ಕ್ಷೇತ್ರಗಳಲ್ಲಿ ಕಾಂಗ್ರೆಸ್ 138 ಸ್ಥಾನಗಳನು ಗೆದ್ದು ಅಧಿಕಾರದ ಗದ್ದುಗೆಗೇರಿತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ 5709 ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ, ಶಿವಲಿಂಗಪ್ಪ ರುದ್ರಪ್ಪ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು.
ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಮೂರು ತಿಂಗಳು ಮುಗಿಯುವುದರೊಳಗೇ ಒಲ್ಲದ ಮನಸ್ಸಿನಿಂದ ರಾಜಿನಾಮೆ ನೀಡಿದರು. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ.ಟಿ. ಮುರಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್‌ನ ಹಿಂದಿನ ಯೋಜನೆಯಂತೆ ಎಸ್. ನಿಜಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ಧರಿಸಲಾಯಿತು. ಮೂರನೇ ವಿಧಾನಸಭೆಯ ಅವಧಿ 1962ರ ಮಾರ್ಚ್ 15ರಿಂದ 1967ರ ಫೆಬ್ರವರಿ 28. ಎಸ್. ನಿಜಲಿಂಗಪ್ಪ ಈ ಅವಧಿಯನ್ನು ಪೂರ್ಣಗೊಳಿಸಿದರು. ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹಲವು ಸೌಲಭ್ಯ ನೀಡುವ ಜತೆಗೆ ಹೊಸತನ ತಂದರು. ಹೀಗಾಗಿ ಎಸ್. ನಿಜಲಿಂಗಪ್ಪ ಅವರನು ‘ಆಧುನಿಕ ಕರ್ನಾಟಕದ ನಿರ್ಮಾತೃ’ ಎಂದೂ ಕರೆಯಲಾಗುತ್ತಿತ್ತು.
ವಿಧಾನಸಭೆಯ ಈ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಯಿತು. 20 ಸದಸ್ಯರ ಬಲ ಹೊಂದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಗೆ ಈ ಹುದ್ದೆ ಲಭ್ಯವಾಗಿ, ಶ್ರವಣಬೆಳಗೊಳದಿಂದ ಆಯ್ಕೆಯಾಗಿದ್ದ ಎಸ್. ಶಿವಪ್ಪ ಅವರು ಪ್ರಥಮ ಪ್ರತಿಪಕ್ಷ ನಾಯಕರಾದರು. ಬೆಳ್ತಂಗಡಿ ಕ್ಷೇತ್ರದ ಬಿ. ವೈಕುಂಠ ಬಾಳಿಗಾ ಅವರು ಸ್ಪೀಕರ್ ಆದರು. ಹಿಂದಿನ ಅವಧಿಯಲ್ಲೂ ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಜಿ.ಎಸ್. ವೆಂಕಟರಮಣ ಅಯ್ಯರ್ 1965ರ ಸೆಪ್ಟೆಂಬರ್ 18ರವರೆಗೆ ಮುಂದುವರಿದರು. ಅವರ ನಂತರ ಹನುಮಂತಪ್ಪ ಕಾರ್ಯದರ್ಶಿಯಾದರು. ವಿಧಾನಸಭೆ ಕಲಾಪ ಐದು ವರ್ಷಗಳಲ್ಲಿ ವರ್ಷಕ್ಕೆ ಕನಿಷ್ಠ ಎಂದರೆ 59 ದಿನ ಹಾಗೂ ಗರಿಷ್ಠ 98 ದಿನ ನಡೆಯಿತು. ಒಟ್ಟಾರೆ 365 ದಿನಗಳ ಕಲಾಪ ಮೂರನೇ ವಿಧಾನಸಭೆ ಅವಧಿಯಲ್ಲಿ ನಡೆಯಿತು.
No comments:
Post a Comment