Thursday, December 11, 2025

New Tech for Bengaluru Flyovers/Corridors … ಎಲಿವೇಟೆಟ್‌ ಕಾರಿಡಾರ್‌ / ಮೇಲ್ಸೇತುವೆಗೆ ಯುಎಚ್‌ಪಿಎಫ್‌ಆರ್‌ಸಿ


🌉 New Tech for Bengaluru Flyovers/Corridors

 * More durable than traditional concrete models.

 * Fiber-steel usage prevents cracks.

 * 20% cost-saving in Maharashtra.

 * Three to four times more expensive for B-SMiLE.

B-SMiLE: Experts Consent to Using New Technology for Flyovers/Corridors
Elevated Corridor to use UHPFRC

Kere Manjunath ಕೆರೆ ಮಂಜುನಾಥ್

Bengaluru: It has been decided to adopt 'Ultra High Performance Fiber Reinforced Concrete' (UHPFRC) for the construction of 13 proposed elevated corridors/flyovers within the GBA (Greater Bengaluru Area) limits, facilitating long-lasting and faster construction.

Instead of the Pressed Concrete (PSC) girder system adopted for the Ejipura flyover construction, which has been ongoing for many years, the Bruhat Bengaluru Mahanagara Palike's (BBMP) Technical Advisory Committee (TAC), chaired by R.K. Jaigopal, has approved the implementation of this new technology in the elevated corridors/flyovers being built by B-SMiLE (Bengaluru Smart Infrastructure Limited).

UHPFRC is superior in quality and strength compared to PSC or RCC (Reinforced Cement Concrete) and will facilitate faster construction. Unlike the traditional model, this new system requires no maintenance. The flyovers, built with steel and fiber, are expected to last more than 120 years. A flyover in Latur, Maharashtra, has been constructed using this same technology.

A UHPFRC segment will weigh 7 tonnes, while a traditional concrete segment weighs 32 tonnes. Previously, UHPFRC was only used in Germany and China, requiring materials to be imported for manufacturing here. However, under 'Make in India,' several companies have established production units in India. Silica Sand and Quartz companies in Bikaner, Rajasthan, have UHPFRC production facilities. Therefore, the Technical Advisory Committee has agreed to use UHPFRC, considering it more suitable than the traditional concrete model.

While Maharashtra has stated that UHPFRC results in a 25% saving in money and 20% saving in time, B-SMiLE has stated that it would cost three to four times more.

| Proposed Elevated Corridors/Flyovers | 13 |

| Total Length | 123.71 km |

| Total Estimated Cost | ₹23,567 Crore |


Flyover to the Expressway!

The Technical Advisory Committee (TAC) has suggested extending the Nayandahalli Junction flyover all the way to the Mysuru Expressway.

During the review of the project to construct an elevated corridor from Sirsi Circle to Nayandahalli, the TAC recommended, "To solve the traffic congestion at Nayandahalli, Kengeri, and near NICE Road on Mysuru Road, a flyover should be built from Nayandahalli Junction flyover up to Sri Panchamukhi Ganesha Temple, where the Mysuru Expressway begins."

TAC Advice Not Considered!

The Technical Advisory Committee (TAC) consented to the elevated corridor from Sarjapur to Silk Board but opined that an elevated corridor from Old Madras Road to Sarjapur is not necessary, as a flyover already exists in Domlur and work on the Ejipura flyover is in progress.

However, this segment has also been included in the proposal submitted to the Urban Development Department.

It was stated before the Technical Advisory Committee that Ratnakar Reddy (Infra Support) had not provided the estimates for four elevated corridors. The proposal was submitted for project approval with the committee's opinion report, without discussing all details, including the DPR (Detailed Project Report), thoroughly with the TAC.

When contacted for information regarding this, B.S. Prahlad, the Technical Director of B-SMiLE and a TAC member, did not respond.


| Elevated Corridor from Ragigudda 7th Main Road Junction, via Marenhalli Main Road and Pipeline Road, to Nice Road at Thalaghattapura on Kanakapura Road | 17.07 km | ₹2,745 Crore |

| Separate Flyover from Konanakunte Cross on Kanakapura Road to Banashankari | 1.51 km | ₹251.3 Crore |

| Flyover from Adyar Ananda Bhavan to Raghuvana Halli on Kanakapura Road | 0.93 km | ₹218.8 Crore |

| Elevated Corridor from Minerva Circle to Hudson Circle – Flyover connecting Sangolli Rayanna Circle – Nrupatunga Road – K.R. Circle (with a loop to Vidhana Soudha) | 5.57 km | ₹588 Crore |

| Elevated Corridor from Shule Circle to St. John's Hospital – via Hosur Road to Anepalya Junction – Adegodi Junction | 5.30 km | ₹726 Crore |

| Elevated Corridor from Old Madras Road to Swami Vivekananda Metro Station – via Silk Board Junction, Hosur Road to Indiranagar – Domlur – Madiwala | 9.80 km | ₹1,202 Crore |

| Elevated Corridor from Sirsi Circle to Nayandahalli on Mysuru Road | 3.5 km | ₹655 Crore |

| Split Flyover at MEI Junction on Tumakuru Road | 1.10 km | ₹57.85 Crore |

| Elevated Corridor from Yeshwantpur Mathikere Cross – IISC – Mekhri Circle – Jayamahal – St. John’s Church Road – Ulsoor Lake – Old Madras Road – K.R. Puram | 27.98 km | ₹5,666 Crore |

| Elevated Corridor from Nagawara Junction to Ramakrishna Hegde Nagar Junction – Sampigehalli – Tirumenahalli – Bellahalli Junction – Bagalur Main Road | 19.9 km | ₹4,477 Crore |

| Elevated Corridor from Assaye Road – Hennur Main Road to Bagalur Junction | 26.7 km | ₹6,344 Crore |

| Elevated Corridor from West of Chord Road, via Nandini Layout Pipeline Road, to Outer Ring Road | 2.85 km | ₹489.90 Crore |

| Elevated Corridor from Yelahanka New Town to Kempegowda International Airport | 1.50 km | ₹147.10 Crore 



ALSO READ…. ₹54 thousand crore for smooth traffic in the city

ಸಾಂಪ್ರದಾಯಿಕ ಕಾಂಕ್ರೀಟ್‌ ಮಾದರಿಗಿಂತ ಹೆಚ್ಚು ಬಾಳಿಕೆ

ಫೈಬರ್- ಉಕ್ಕು ಬಳಕೆಯಿಂದ ಬಿರುಕು ಬರೊಲ್ಲ 

ಮಹಾರಾಷ್ಟ್ರದಲ್ಲಿ ಶೇ 20ರಷ್ಟು ಮಿತವ್ಯಯಿ

ಬಿ–ಸ್ಮೈಲ್‌ನಲ್ಲಿ ಮೂರ್ನಾಲ್ಕು ಪಟ್ಟು ದುಬಾರಿ


 

ಬಿ–ಸ್ಮೈಲ್‌: ಮೇಲ್ಸೇತುವೆ/ಕಾರಿಡಾರ್‌ಗೆ ಹೊಸ ತಂತ್ರಜ್ಞಾನ ಬಳಸಲು ತಜ್ಞರ ಸಮ್ಮತಿ

ಎಲಿವೇಟೆಟ್‌ ಕಾರಿಡಾರ್‌ / ಮೇಲ್ಸೇತುವೆಗೆ ಯುಎಚ್‌ಪಿಎಫ್‌ಆರ್‌ಸಿ

Kere Manjunath ಕೆರೆ ಮಂಜುನಾಥ್

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 13 ಎಲಿವೇಟೆಡ್‌ ಕಾರಿಡಾರ್‌/ ಮೇಲ್ಸೇತುವೆ ನಿರ್ಮಾಣದಲ್ಲಿ ದೀರ್ಘಬಾಳಿಕೆ ಹಾಗೂ ವೇಗವಾದ ಕಾಮಗಾರಿಗೆ ಅನುವಾಗುವ ‘ಅಲ್ಟ್ರಾ ಹೈ ಪರ್ಫಾಮನ್ಸ್‌ ಫೈಬರ್‌ ರಿ-ಇನ್‌ಫೋರ್ಸ್ಡ್‌ ಕಾಂಕ್ರೀಟ್‌’ (ಯುಎಚ್‌ಪಿಎಫ್‌ಆರ್‌ಸಿ) ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಹಲವು ವರ್ಷಗಳಿಂದ ನಡೆಯುತ್ತಿರುವ ಈಜಿಪುರ ಮೇಲ್ಸೇತುವೆ ನಿರ್ಮಾಣದಲ್ಲಿ ಅಳವಡಿಸಿಕೊಂಡಿರುವ ಪ‍್ರೆಸ್ಡ್‌ ಕಾಂಕ್ರೀಟ್‌ (ಪಿಎಸ್‌ಸಿ) ಗ್ರಿರ್ಡರ್‌ ವ್ಯವಸ್ಥೆಯ ಬದಲಿಗೆ, ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿ–ಸ್ಮೈಲ್‌) ನಿರ್ಮಿಸುವ ಎಲಿವೇಟೆಡ್‌ ಕಾರಿಡಾರ್‌/ ಮೇಲ್ಸೇತುವೆಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಆರ್‌.ಕೆ. ಜೈಗೋಪಾಲ್‌ ಅಧ್ಯಕ್ಷತೆಯ ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅನುಮೋದನೆ ನೀಡಿದೆ.

ಪಿಎಸ್‌ಸಿ ಅಥವಾ ಆರ್‌ಸಿಸಿಗಿಂತ ಯುಎಚ್‌ಪಿಎಫ್‌ಆರ್‌ಸಿ ಗುಣಮಟ್ಟ, ಶಕ್ತಿಯುತವಾಗಿದ್ದು, ವೇಗದ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಸಾಂಪ್ರದಾಯಿಕ ಮಾದರಿಯಂತೆ ಈ ಹೊಸ ವ್ಯವಸ್ಥೆಯಲ್ಲಿ ನಿರ್ವಹಣೆಯ ಅಗತ್ಯ ಇರುವುದಿಲ್ಲ. ಉಕ್ಕು ಮತ್ತು ಫೈಬರ್‌ನಿಂದ ನಿರ್ಮಾಣವಾಗುವ ಮೇಲ್ಸೇತುವೆ 120ಕ್ಕೂ ಹೆಚ್ಚು ವರ್ಷ ಬಾಳಿಕೆ ಬರಲಿದೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ಈ ತಂತ್ರಜ್ಞಾನದಿಂದಲೇ ಮೇಲ್ಸೇತುವೆ ನಿರ್ಮಿಸಲಾಗಿದೆ.

ಯುಎಚ್‌ಪಿಎಫ್‌ಆರ್‌ಸಿ ಸೆಗ್‌ಮೆಂಟ್‌ 7 ಟನ್‌ ತೂಕವಿರಲಿದ್ದು, ಸಾಂಪ್ರದಾಯಿಕ ಕಾಂಕ್ರೀಟ್‌ ಸೆಗ್‌ಮೆಂಟ್‌ 32 ಟನ್‌ ಇರುತ್ತದೆ. ಈ ಮೊದಲು ಜರ್ಮನಿ ಹಾಗೂ ಚೀನಾದಲ್ಲಿ ಮಾತ್ರ ಯುಎಚ್‌ಪಿಎಫ್‌ಆರ್‌ಸಿ ಬಳಸಲಾಗುತ್ತಿತ್ತು. ಇಲ್ಲಿ ತಯಾರಾಬೇಕಿದ್ದರೆ, ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ‘ಮೇಕ್‌ ಇನ್‌ ಇಂಡಿಯಾ’ದಡಿ ಹಲವು ಸಂಸ್ಥೆಗಳು ಭಾರತದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿವೆ. ರಾಜಸ್ಥಾನದ ಬಿಕೇನರ್‌ನಲ್ಲಿ ಸಿಲಿಕಾ ಸ್ಯಾಂಡ್‌ ಮತ್ತು ಕ್ವಾರ್ಟ್ಜ್‌ ಸಂಸ್ಥೆಗಳು ಯುಎಚ್‌ಪಿಎಫ್‌ಆರ್‌ಸಿ ಉತ್ಪಾದನಾ ಸೌಲಭ್ಯ ಒಂದಿವೆ. ಹೀಗಾಗಿ, ಸಾಂಪ್ರದಾಯಿಕ ಕಾಂಕ್ರೀಟ್‌ ಮಾದರಿಗಿಂತ ಹೆಚ್ಚು ಸೂಕ್ತವಾಗಿರುವ ಯುಎಚ್‌ಪಿಎಫ್‌ಆರ್‌ ಸಿ ಅನ್ನು ಬಳಸಿಕೊಳ್ಳಲು ತಾಂತ್ರಿಕ ಸಲಹಾ ಸಮಿತಿ ಸಮ್ಮತಿಸಿದೆ.

ಯುಎಚ್‌ಪಿಎಫ್‌ಆರ್‌ಸಿಯಿಂದ ಶೇ 25ರಷ್ಟು ಹಣ ಹಾಗೂ ಶೇ 20ರಷ್ಟು ಸಮಯ ಉಳಿತಾಯವಾಗುತ್ತದೆ ಎಂದು ಮಹಾರಾಷ್ಟ್ರ ಹೇಳಿದ್ದರೆ, ಬಿ–ಸ್ಮೈಲ್‌ ಮೂರ್ನಾಲ್ಕು ಪಟ್ಟು ಹೆಚ್ಚು ವೆಚ್ಚವಾಗುತ್ತದೆ ಎಂದಿದೆ.

 

13; ಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್‌/ ಮೇಲ್ಸೇತುವೆ ನಿರ್ಮಾಣ

123.71 ಕಿ.ಮೀ; ಒಟ್ಟಾರೆ ಉದ್ದ

₹23,567 ಕೋಟಿ; ಒಟ್ಟು ಅಂದಾಜು ವೆಚ್ಚ

 

ಎಕ್ಸ್‌ಪ್ರೆಸ್‌ ವೇವರೆಗೆ ಮೇಲ್ಸೇತುವೆ!

ನಾಯಂಡಹಳ್ಳಿ ಜಂಕ್ಷನ್‌ ಮೇಲ್ಸೇತುವೆಯನ್ನು ಮೈಸೂರು ಎಕ್ಸ್‌ಪ್ರೆಸ್‌ ವೇವರೆಗೆ ವಿಸ್ತರಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಲಹೆ ನೀಡಿದೆ.

ಸಿರ್ಸಿ ವೃತ್ತದಿಂದ ನಾಯಂಡಹಳ್ಳಿವರೆಗೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಯೋಜನೆಯ ಪರಾಮರ್ಶೆ ಸಂದರ್ಭದಲ್ಲಿ, ‘ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ, ಕೆಂಗೇರಿ, ನೈಸ್‌ ರಸ್ತೆ ಬಳಿಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ಪರಿಹರಿಸಲು ನಾಯಂಡಹಳ್ಳಿ ಜಂಕ್ಷನ್‌ ಮೇಲ್ಸೇತುವೆಯಿಂದ ಮೈಸೂರು ಎಕ್ಸ್‌ಪ್ರೆಸ್‌ ವೇ ಆರಂಭವಾಗುವ ಶ್ರೀ ಪಂಚಮುಖಿ ಗಣೇಶ ದೇವಸ್ಥಾನದವರೆಗೆ ಮೇಲ್ಸೇತುವೆ ನಿರ್ಮಿಸಬೇಕು’ ಎಂದು ಸಲಹೆ ನೀಡಲಾಗಿದೆ.

 

ಟಿಎಸಿ ಸಲಹೆ ಪರಿಗಣಿಸಿಲ್ಲ!

ಸರ್ಜಾಪುರದಿಂದ ಸಿಲ್ಕ್ ಬೋರ್ಡ್‌ವರೆಗಿನ ಎಲಿವೇಟೆಡ್‌ ಕಾರಿಡಾರ್‌ಗೆ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಮ್ಮತಿ ನೀಡಿದ್ದು, ‘ದೊಮ್ಮಲೂರಿನಲ್ಲಿ ಮೇಲ್ಸೇತುವೆ ಇದ್ದು, ಈಜಿಪುರದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹಳೆಮದ್ರಾಸ್‌ ರಸ್ತೆಯಿಂದ ಸರ್ಜಾಪುರದವರೆಗಿನ ಎಲಿವೇಟೆಡ್‌ ಕಾರಿಡಾರ್ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಆದರೂ, ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿರುವ ಪ್ರಸ್ತಾವದಲ್ಲಿ ಅದನ್ನೂ ಸೇರಿಸಲಾಗಿದೆ.

ನಾಲ್ಕು ಎಲಿವೇಟೆಡ್‌ ಕಾರಿಡಾರ್‌ಗಳ ಅಂದಾಜು ಪಟ್ಟಿಯನ್ನು ರತ್ನಾಕರ ರೆಡ್ಡಿ (ಇನ್‌ಫ್ರಾ ಸಪೋರ್ಟ್‌) ಅವರು ನೀಡಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಮುಂದೆ ಹೇಳಲಾಗಿದೆ. ಡಿಪಿಆರ್‌ ಸೇರಿದಂತೆ ಎಲ್ಲ ಮಾಹಿತಿಯನ್ನು ಟಿಎಸಿ ಮುಂದೆ ವಿವರವಾಗಿ ಚರ್ಚೆ ನಡೆಸದೆ, ಸಮಿತಿಯ ಅಭಿಪ್ರಾಯ ವರದಿಯೊಂದಿಗೆ ಯೋಜನೆಗೆ ಅನುಮತಿ ಪ‍ಡೆಯಲು ಪ್ರಸ್ತಾವ ಸಲ್ಲಿಸಲಾಗಿದೆ.

ಈ ಬಗ್ಗೆ ಮಾಹಿತಿ ಪಡೆಯಲು, ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಬಿ–ಸ್ಮೈಲ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್‌. ಪ್ರಹ್ಲಾದ್‌ ಅವರನ್ನು ಸಂಪರ್ಕಿಸಿದಾಗ, ಅವರು ಪ್ರತಿಕ್ರಿಯಿಸಲಿಲ್ಲ.


 

ಎಲ್ಲೆಲ್ಲಿ ಮೇಲ್ಸೇತುವೆ/ ಎಲಿವೇಟೆಡ್‌ ಕಾರಿಡಾರ್‌?

  • ರಾಗಿಗುಡ್ಡ 7ನೇ ಮುಖ್ಯರಸ್ತೆ ಜಂಕ್ಷನ್‌ನ ಮಾರೇನಹಳ್ಳಿ ಮುಖ್ಯರಸ್ತೆಯಿಂದ ಪೈಪ್‌ಲೈನ್‌ ರಸ್ತೆ ಮೂಲಕ  ಕನಕಪುರ ರಸ್ತೆಯ ತಲಘಟ್ಟಪುರದ ನೈಸ್‌ ರಸ್ತೆವರೆಗೆ ಎಲಿವೇಟೆಡ್‌ ಕಾರಿಡಾರ್‌;17.07 ಕಿ.ಮೀ;₹2,745 ಕೋಟಿ
  • ಕೋಣನಕುಂಟೆ ಕ್ರಾಸ್‌ನಿಂದ ಕನಕಪುರ ರಸ್ತೆ–ಬನಶಂಕರಿಗೆ ಪ್ರತ್ಯೇಕ ಮೇಲ್ಸೇತುವೆ;1.51 ಕಿ.ಮೀ;₹251.3 ಕೋಟಿ
  • ಅಡ್ಯಾರ್‌ ಆನಂದ ಭವನದಿಂದ ಕನಕಪುರ ರಸ್ತೆಯ ರಘುವನಹಳ್ಳಿವರೆಗೆ ಮೇಲ್ಸೇತುವೆ;0.93 ಕಿ.ಮೀ; ₹218.8 ಕೋಟಿ
  • ಮಿನರ್ವಾ ವೃತ್ತದಿಂದ ಹಡ್ಸನ್‌ ವೃತ್ತದವರೆಗೆ ಎಲಿವೇಟೆಡ್‌ ಕಾರಿಡಾರ್‌– ಸಂಗೊಳ್ಳಿ ರಾಯಣ್ಣ ವೃತ್ತ– ನೃಪತುಂಗ ರಸ್ತೆ– ಕೆ.ಆರ್‌. ವೃತ್ತದವರೆಗೆ (ವಿಧಾನಸೌಧಕ್ಕೆ ಲೂಪ್‌ ಇರುವ) ಮೇಲ್ಸೇತುವೆ; 5.57 ಕಿ.ಮೀ;₹588 ಕೋಟಿ
  • ಶೂಲೆ ವೃತ್ತದಿಂದ ಸೇಂಟ್‌ಜಾನ್ಸ್‌ ಆಸ್ಪತ್ರೆ– ಹೊಸೂರು ರಸ್ತೆ ಮೂಲಕ ಆನೆಪಾಳ್ಯ ಜಂಕ್ಷನ್‌– ಆಡುಗೋಡಿ ಜಂಕ್ಷನ್‌ವರೆಗೆ ಎಲಿವೇಟೆಡ್‌ ಕಾರಿಡಾರ್‌; 5.30 ಕಿ.ಮೀ; ₹726 ಕೋಟಿ
  • ಹಳೆ ಮದ್ರಾಸ್‌ ರಸ್ತೆಯಿಂದ ಸ್ವಾಮಿ ವಿವೇಕಾನಂದ ಮೆಟ್ರೊ ನಿಲ್ದಾಣ– ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಹೊಸೂರು ರಸ್ತೆ ಮೂಲಕ ಇಂದಿರಾನಗರ– ದೊಮ್ಮಲೂರು– ಮಡಿವಾಳಕ್ಕೆ ಎಲಿವೇಟೆಡ್‌ ಕಾರಿಡಾರ್‌; 9.80 ಕಿ.ಮೀ; ₹1,202 ಕೋಟಿ
  • ಸಿರ್ಸಿ ವೃತ್ತದಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೆ ಎಲಿವೇಟೆಡ್‌ ಕಾರಿಡಾರ್‌;3.5 ಕಿ.ಮೀ; ₹655 ಕೋಟಿ
  • ತುಮಕೂರು ರಸ್ತೆಯ ಎಂಇಐ ಜಂಕ್ಷನ್‌ನಲ್ಲಿ ಸ್ಪ್ಲಿಟ್‌ ಮೇಲ್ಸೇತುವೆ;1.10 ಕಿ.ಮೀ; ₹57.85 ಕೋಟಿ
  • ಯಶವಂತಪುರ ಮತ್ತಿಕೆರೆ ಕ್ರಾಸ್‌ನಿಂದ ಐಐಎಸ್‌ಸಿ–ಮೇಖ್ರಿ ವೃತ್ತ– ಜಯಮಹಲ್‌– ಸೇಂಟ್‌ ಜಾನ್‌ ಚರ್ಚ್‌ ರಸ್ತೆ– ಹಲಸೂರು ಕೆರೆ– ಹಳೆ ಮದ್ರಾಸ್‌ ರಸ್ತೆ– ಕೆ.ಆರ್‌. ಪುರದವರೆಗೆ ಎಲಿವೇಟೆಡ್‌ ಕಾರಿಡಾರ್‌;  27.98 ಕಿ.ಮೀ;₹5,666 ಕೋಟಿ
  • ನಾಗವಾರ ಜಂಕ್ಷನ್‌ನಿಂದ ರಾಮಕೃಷ್ಣ ಹೆಗಡೆ ನಗರ ಜಂಕ್ಷನ್‌– ಸಂಪಿಗೆಹಳ್ಳಿ– ತಿರುಮೇನಹಳ್ಳಿ– ಬೆಳ್ಳಹಳ್ಳಿ ಜಂಕ್ಷನ್‌– ಬಾಗಲೂರು ಮುಖ್ಯರಸ್ತೆವರೆಗೆ ಎಲಿವೇಟೆಡ್‌ ಕಾರಿಡಾರ್‌;19.9 ಕಿ.ಮೀ; ₹4,477 ಕೋಟಿ
  • ಅಸ್ಸೆ ರಸ್ತೆ– ಹೆಣ್ಣೂರು ಮುಖ್ಯರಸ್ತೆ– ಬಾಗಲೂರು ಜಂಕ್ಷನ್‌ವರೆಗೆ ಎಲಿವೇಟೆಡ್‌ ಕಾರಿಡಾರ್‌; 26.7 ಕಿ.ಮೀ;₹6,344 ಕೋಟಿ
  • ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಿಂದ ನಂದಿನಿ ಲೇಔಟ್‌ ಪೈಪ್‌ಲೈನ್‌ ರಸ್ತೆ ಮೂಲಕ ಹೊರ ವರ್ತುಲ ರಸ್ತೆಗೆ ಎಲಿವೇಟೆಡ್‌ ಕಾರಿಡಾರ್‌; 2.85 ಕಿ.ಮೀ; ₹489.90 ಕೋಟಿ
  • ಯಲಹಂಕ ನ್ಯೂಟೌನ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಲಿವೇಟೆಡ್‌ ಕಾರಿಡಾರ್‌; 1.50 ಕಿ.ಮೀ; ₹147.10 ಕೋಟಿ


'₹ 180 crore PF default :Take Decision in 60 Days'… ‘ಪಿಎಫ್‌: 60 ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಿ’

 High Court Directs State Government on BBMP Civic Workers' Provident Fund

'₹ 180 crore PF default :Take Decision in 60 Days'

Bengaluru: The High Court has ordered the State Government to "positively review and take an appropriate decision within 60 days" on a petition seeking action against waste management contractors who failed to remit the Provident Fund (PF) of six thousand civic workers for five and a half years.

The single-judge bench of Justice Suraj Govindaraj issued the order on Tuesday, while hearing the writ petition filed by S.N. Balasubramaniyam, General Secretary of the 'Bengaluru Mahanagara Swachhata Mathu Lari Malikarara Mathu Guttigedarara Sangha' (Bengaluru City Cleanliness, Lorry Owners and Contractors Association).

During the hearing, the bench accepted the arguments presented by the petitioner’s High Court advocate P. Prasanna Kumar and directed the Secretary of the Urban Development Department to "examine the representation submitted by the petitioners on November 12, 2025, from a positive point of view."

Prajavani Report: 'BBMP Loses ₹180 Crore to PF'

A special report was published in 'Prajavani' on November 11, under the headline, 'PF: BBMP Loses ₹180 Crore'. The report detailed that the contractors who had undertaken garbage collection, disposal, and management in the city from January 2011 to July 2017 received full payments from the BBMP. Despite this, they did not remit the PF installments of the contract-based civic workers. Taking action on this, the Employees' Provident Fund Organisation (EPFO) recovered the full amount of the installments from the BBMP, which is the original employer.

The EPFO attached more than ₹90 crore in the BBMP's account. This ₹90 crore had already been paid by the BBMP to the waste contractors. Thus, the detailed report stated that the BBMP (Greater Bengaluru Area) incurred a loss of ₹180 crore.

Association Secretary Expresses Frustration

S.N. Balasubramaniyam, General Secretary of the Bengaluru City Cleanliness, Lorry Owners and Contractors Association, had stated, "I wrote a letter to Deputy Chief Minister D.K. Shivakumar, who calls the waste disposal contractors a mafia, as well as to the Chief Minister, the BBMP Chief Commissioner, and the BSWML CEO, requesting that criminal cases be filed against the 'defaulting contractors' who violated the law by not paying PF and obstructed the social security of the civic workers, but they have taken no action."

BSWML has delayed the finalization of the tendering process because the defaulting contractors, who failed to pay the PF, are also included in the tenders for 33 packages of waste disposal.



ಜಿಬಿಎ ಪೌರ ಕಾರ್ಮಿಕರ ಭವಿಷ್ಯ ನಿಧಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

‘ಪಿಎಫ್‌: 60 ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಿ’

ಬೆಂಗಳೂರು: ‘ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರು ಆರು ಸಾವಿರ ಪೌರಕಾರ್ಮಿಕರ ಐದೂವರೆ ವರ್ಷದ ಭವಿಷ್ಯ ನಿಧಿ (ಪಿಎಫ್‌) ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಲ್ಲಿಸಲಾಗಿರುವ ಮನವಿಯನ್ನು 60 ದಿನಗಳ ಒಳಗಾಗಿ ಸಕಾರಾತ್ಮಕವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಕುರಿತಂತೆ, ‘ಬೆಂಗಳೂರು ಮಹಾನಗರ ಸ್ವಚ್ಛತಾ ಮತ್ತು ಲಾರಿ ಮಾಲಿಕರ ಹಾಗೂ ಗುತ್ತಿಗೆದಾರರ ಸಂಘ’ದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಬಾಲಸುಬ್ರಮಣಿಯಂ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್ ಮಂಡಿಸಿದ ವಾದವನ್ನು ಮಾಡಿದ ನ್ಯಾಯಪೀಠ, ‘ಅರ್ಜಿದಾರರು ತಮಗೆ 2025ರ ನವೆಂಬರ್ 12ರಂದು ಸಲ್ಲಿಸಿರುವ ಮನವಿಯನ್ನು ಧನಾತ್ಮಕ ದೃಷ್ಟಿಕೋನದಲ್ಲಿ ಪರಾಮರ್ಶಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಆದೇಶಿಸಿದೆ.

ಪ್ರಜಾವಾಣಿಯಲ್ಲಿ ವರದಿ: ‘ಪಿಎಫ್‌: ಜಿಬಿಎಗೆ ₹180 ಕೋಟಿ ನಷ್ಟ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ನವೆಂಬರ್ 11ರಂದು ವಿಶೇಷ ವರದಿ ಪ್ರಕಟವಾಗಿತ್ತು. 2011ರ ಜನವರಿಯಿಂದ 2017ರ ಜುಲೈವರೆಗೆ ನಗರದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ, ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದ್ದ ಗುತ್ತಿಗೆದಾರರು, ಬಿಬಿಎಂಪಿಯಿಂದ ಸಂಪೂರ್ಣ ಹಣ ಪಡೆದುಕೊಂಡಿದ್ದಾರೆ. ಹಾಗಿದ್ದರೂ ಗುತ್ತಿಗೆ ಆಧಾರದಲ್ಲಿದ್ದ ಪೌರಕಾರ್ಮಿಕರ ಪಿಎಫ್‌ ಕಂತನ್ನು ಪಾವತಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಂಡಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌) ಮೂಲ ಉದ್ಯೋಗದಾತನಾಗಿರುವ ಬಿಬಿಎಂಪಿಯಿಂದಲೇ ಕಂತಿನ ಪೂರ್ಣ ಮೊತ್ತವನ್ನು ವಸೂಲಿ ಮಾಡಿದೆ.

ಬಿಬಿಎಂಪಿಯ ಖಾತೆಯಲ್ಲಿ ₹90 ಕೋಟಿಗೂ ಹೆಚ್ಚು ಮೊತ್ತ ಜಪ್ತಿ ಇಪಿಎಫ್‌ ಮಾಡಿಕೊಂಡಿದೆ. ₹90 ಕೋಟಿಯನ್ನು ಬಿಬಿಎಂಪಿ ತ್ಯಾಜ್ಯ ಗುತ್ತಿಗೆದಾರರಿಗೆ ಪಾವತಿಸಿತ್ತು. ಹೀಗಾಗಿ, ₹180 ಕೋಟಿ ಬಿಬಿಎಂಪಿಗೆ (ಜಿಬಿಎ) ನಷ್ಟವಾಗಿದೆ ಎಂಬ ಸವಿವರ ವರದಿ ಪ್ರಕಟವಾಗಿತ್ತು.

 ‘ಪಿಎಫ್‌ ಪಾವತಿಸದೆ ಕಾನೂನು ಉಲ್ಲಂಘಿಸಿ, ಪೌರ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಅಡ್ಡಿಯಾಗಿರುವ ‘ಡಿಫಾಲ್ಟ್‌ ಗುತ್ತಿಗೆದಾರರ’ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಕಸ ವಿಲೇವಾರಿ ಗುತ್ತಿಗೆದಾರರನ್ನು ಮಾಫಿಯಾ ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ, ಜಿಬಿಎ ಮುಖ್ಯ ಆಯುಕ್ತರು, ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಅವರಿಗೆ ಪತ್ರ ಬರೆದಿದ್ದರೂ ಅವರು ಕ್ರಮ ಕೈಗೊಂಡಿಲ್ಲ’ ಎಂದು ಬೆಂಗಳೂರು ನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು–ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ಹೇಳಿದ್ದರು.

ಪಿಎಫ್‌ ಪಾವತಿಸದೆ ಡಿಫಾಲ್ಟ್‌ ಆಗಿರುವ ಗುತ್ತಿಗೆದಾರರು 33 ಪ್ಯಾಕೇಜ್‌ನ ತ್ಯಾಜ್ಯ ವಿಲೇವಾರಿಯ ಟೆಂಡರ್‌ನಲ್ಲಿರುವುದರಿಂದ ಪ್ರಕ್ರಿಯೆ ಪೂರ್ಣಗೊಳಿಸುವುದನ್ನು ಬಿಎಸ್‌ಡಬ್ಲ್ಯುಎಂಎಲ್‌ ವಿಳಂಬಗೊಳಿಸಿದೆ.

Wednesday, December 10, 2025

Premium Floor Area Ratio: Up to 60% More Building Area Allowed… ಪಿಎಫ್‌ಎಆರ್‌: ಹೆಚ್ಚುವರಿ ಅಂತಸ್ತಿಗೆ ಅಸ್ತು

 📰 Premium Floor Area Ratio: Up to 60% More Building Area Allowed… 

PFAR: Approval for Additional Floors

Bengaluru: The implementation of Premium FAR (Floor Area Ratio) , which allows the construction of up to 16 floors instead of 10 by paying an additional fee, has been implemented across all five city municipal corporations under the GBA (Greater Bengaluru Area) limit.

Landowners, developers, and builders who wish to utilize PFAR must pay a fee equivalent to 28% of the guidance value of the site.

An amendment has been made to Section 13-E of the 'Karnataka Town and Country Planning Act – 2015', incorporating Rule 11 (detailing fees for allowing PFAR) into the Zonal Regulations of the revised Master Plan – 2015 for Premium FAR. A draft notification was issued on January 4, 2025. The Urban Development Department issued the final notification on April 4. However, it was stayed by the court. The High Court dismissed the lawsuit on December 5, and the GBA has now implemented PFAR.

Builders can obtain PFAR based on the road facing the site. Additionally, they can construct even more floors by utilizing Transferable Development Rights (TDR/DCR). The TDR and PFAR allocation are determined by the area of the site.

An additional 28% of the guidance value must be paid as a fee for each extra floor constructed. The fee must be paid and the plan approved at the time of applying for building construction permission. The processes will be automatically handled by the existing EODB (Ease of Doing Business) software. This allows for the construction of additional floors beyond the FAR allocated for the building site area. Premium FAR is permitted as per the Zonal Regulations of the approved Master Plan of the Competent Authority that grants permission for building construction.

What is Premium FAR?

Premium FAR is the provision that allows owners of a site with a 9-meter to 12-meter road to build one more floor if they have already constructed five floors. Setbacks and parking areas must be provided corresponding to the additional floors. As the road width increases, the extent of the Premium FAR also increases.

‘25% Discount on Setbacks for Existing Buildings’

"Buildings already constructed in the city can also avail of Premium FAR. They are provided a 25% discount on setbacks," informed Girish, Additional Director of the City Planning Division, GBA.

"Building owners who wish to construct additional floors must have the corresponding setback. After calculating with the 25% discount, they will be informed how many floors they can build through Premium FAR. However, the parking facility must adhere strictly to the regulations," he provided as information.

"For buildings above 16 floors, the setback is uniform. If the parking facility meets the requirement, they can avail of 60% Premium FAR," he added.

  • Expectation of ₹2,000 Crore Annually from Premium FAR
  •  * Little benefit for building owners of a 60x40 feet site
  •  * Advantageous for large buildings, developers, and builders




ಪ್ರೀಮಿಯಂ ಫ್ಲೋರ್‌ ಏರಿಯಾ ರೇಷಿಯೊದಿಂದ ಶೇ 60ರಷ್ಟು ಹೆಚ್ಚು ಕಟ್ಟಡಕ್ಕೆ ಅವಕಾಶ

ಪಿಎಫ್‌ಎಆರ್‌: ಹೆಚ್ಚುವರಿ ಅಂತಸ್ತಿಗೆ ಅಸ್ತು

ಬೆಂಗಳೂರು: ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ 10ರ ಬದಲು 16 ಅಂತಸ್ತು ನಿರ್ಮಿಸಿಕೊಳ್ಳುವ ಪ್ರೀಮಿಯಂ ಎಫ್‌ಎಎಆರ್‌ (ಫ್ಲೋರ್‌ ಏರಿಯಾ ರೇಷಿಯೊ) ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಜಾರಿಯಾಗಿದೆ.

ಭೂ ಮಾಲೀಕರು,  ಅಭಿವೃದ್ಧಿದಾರರು ಮತ್ತು ನಿರ್ಮಾಣದಾರರು ಪಿಎಫ್‌ಎಆರ್‌ ಅನ್ನು ಬಳಸಿಕೊಳ್ಳಲು ನಿವೇಶನದ ಮಾರ್ಗಸೂಚಿಯ ಶೇ 28ರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ –2015’ರ ಸೆಕ್ಷನ್‌ 13–ಇಗೆ ತಿದ್ದುಪಡಿ ತರಲಾಗಿದ್ದು, ಪ್ರೀಮಿಯಂ ಎಫ್‌ಎಆರ್‌ಗಾಗಿ ಪರಿಷ್ಕೃತ ಮಾಸ್ಟರ್‌ ಪ್ಲಾನ್‌–2015ರ ವಲಯ ನಿಯಮಗಳಿಗೆ 11 ಅನ್ನು (ಪಿಎಫ್‌ಎಆರ್‌ ಅನುಮತಿಸಲು ಶುಲ್ಕಗಳ ವಿವರ)  ಸೇರ್ಪಡೆ ಮಾಡಲಾಗಿತ್ತು.  2025ರ ಜನವರಿ 4ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು.  ಏಪ್ರಿಲ್‌ 4ರಂದು ಅಂತಿಮ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಹೊರಡಿಸಿತ್ತು. ಆದರೆ, ನ್ಯಾಯಾಲಯದಲ್ಲಿ ಅದಕ್ಕೆ ತಡೆಯಾಗಿತ್ತು. ಹೈಕೋರ್ಟ್‌ ದಾವೆಯನ್ನು ಡಿ.5ರಂದು ವಜಾಗೊಳಿಸಿದ್ದು, ಜಿಬಿಎ ಪಿಎಫ್‌ಎಆರ್‌ ಅನ್ನು ಅನುಷ್ಠಾನಗೊಳಿಸಿದೆ.

ಕಟ್ಟಡ ನಿರ್ಮಿಸುವವರು ನಿವೇಶನದ ಎದುರಿನ ರಸ್ತೆಯ ಆಧಾರದಲ್ಲಿ ಪಿಎಫ್‌ಎಆರ್‌ ಪಡೆದುಕೊಳ್ಳಬಹುದು. ಇದರ ಜೊತೆಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನೂ (ಟಿಡಿಆರ್‌/ ಡಿಸಿಆರ್) ಬಳಸಿಕೊಂಡು ಇನ್ನಷ್ಟು ಹೆಚ್ಚಿನ ಅಂತಸ್ತುಗಳನ್ನು ನಿರ್ಮಿಸಬಹುದಾಗಿದೆ. ನಿವೇಶನದ ವಿಸ್ತೀರ್ಣದ ಮೇರೆಗೆ ಟಿಡಿಆರ್‌, ಪಿಎಫ್ಎಆರ್‌ ನಿಗದಿಯಾಗುತ್ತದೆ.

ಪ್ರತಿ ಅಂತಸ್ತನ್ನು ಹೆಚ್ಚುವರಿಯಾಗಿ ನಿರ್ಮಿಸಲು ಶೇ 28ರಷ್ಟು ಮಾರ್ಗಸೂಚಿ ದರವನ್ನು ಶುಲ್ಕವನ್ನಾಗಿ ಪಾವತಿಸಬೇಕಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಶುಲ್ಕ ಪಾವತಿಸಿ, ನಕ್ಷೆಗೆ ಮಂಜೂರಾತಿ ಪಡೆದುಕೊಳ್ಳಬೇಕು. ಈಗಾಗಲೇ ಲಭ್ಯವಿರುವ ಇಒಡಿಬಿ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಪ್ರಕ್ರಿಯೆಗಳು ನಡೆಯಲಿವೆ. ಈ ಮೂಲಕ ಕಟ್ಟಡದ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು. ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದ ಅನುಮೋದಿತ ಮಾಸ್ಟರ್‌ ಪ್ಲಾನ್‌ನ ವಲಯ ನಿಯಮಗಳ ಅನ್ವಯವೇ ಪ್ರೀಮಿಯಂ ಎಫ್‌ಎಆರ್‌ಗೆ ಅನುಮತಿ ನೀಡಲಾಗುತ್ತದೆ.

 

ಏನಿದು ಪ್ರೀಮಿಯಂ ಎಫ್‌ಎಆರ್‌?

ಒಂಬತ್ತು ಮೀಟರ್‌ನಿಂದ 12 ಮೀಟರ್‌ವರೆಗೆ ರಸ್ತೆ ಇರುವ ನಿವೇಶನದಲ್ಲಿ ಐದು ಅಂತಸ್ತುಗಳನ್ನು ಕಟ್ಟಿದ್ದರೆ, ಅವರಿಗೆ ಇನ್ನೂ ಒಂದು ಅಂತಸ್ತು ಕಟ್ಟಿಕೊಳ್ಳಲು ಅವಕಾಶ ನೀಡುವುದೇ ಪ್ರೀಮಿಯಂ ಎಫ್‌ಎಆರ್‌. ಹೆಚ್ಚುವರಿ ಅಂತಸ್ತುಗಳಿಗೆ ಅನುಗುಣವಾಗಿ ಸೆಟ್‌ಬ್ಯಾಕ್‌ ಹಾಗೂ ಪಾರ್ಕಿಂಗ್‌ ಪ್ರದೇಶವನ್ನು ಬಿಡಬೇಕಾಗುತ್ತದೆ. ರಸ್ತೆಯ ಅಗಲ ಹೆಚ್ಚಾಗುತ್ತಿದ್ದಂತೆಯೇ ಪ್ರೀಮಿಯಂ ಎಫ್‌ಎಆರ್‌ ಪ್ರಮಾಣವೂ ಅಧಿಕವಾಗುತ್ತದೆ.

 

‘ಹಾಲಿ ಕಟ್ಟಡಗಳಿಗೆ ಶೇ 25ರಷ್ಟು ರಿಯಾಯಿತಿ’

‘ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳೂ ಪ್ರೀಮಿಯಂ ಎಫ್ಎಆರ್‌ ಪಡೆದುಕೊಳ್ಳಬಹುದು. ಅವರಿಗೆ ಸೆಟ್‌ಬ್ಯಾಕ್‌ನಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತದೆ’ ಎಂದು ಜಿಬಿಎ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಗಿರೀಶ್‌ ತಿಳಿಸಿದರು.

‘ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಲು ಬಯಸುವ ಕಟ್ಟಡದ ಮಾಲೀಕರು, ಅದಕ್ಕೆ ಅನುಗುಣವಾದ ಸೆಟ್‌ಬ್ಯಾಕ್‌ ಅನ್ನು ಹೊಂದಿರಬೇಕು. ಶೇ 25ರಷ್ಟು ರಿಯಾಯಿತಿ ನೀಡಿ ಲೆಕ್ಕಾಚಾರ ಮಾಡಿ ಅವರು ಎಷ್ಟು ಅಂತಸ್ತುಗಳನ್ನು ಪ್ರೀಮಿಯಂ ಎಫ್‌ಎಆರ್‌ ಮೂಲಕ ನಿರ್ಮಿಸಬಹುದು ಎಂಬುದನ್ನು ತಿಳಿಸಲಾಗುತ್ತದೆ. ಆದರೆ, ಪಾರ್ಕಿಂಗ್‌ ಸೌಲಭ್ಯ ಮಾತ್ರ ನಿಯಮಗಳಂತೆಯೇ ಇರಬೇಕು’ ಎಂದು ಮಾಹಿತಿ ನೀಡಿದರು.

‘16 ಅಂತಸ್ತಿನ ಮೇಲಿನ ಕಟ್ಟಡಗಳಿಗೆ ಸೆಟ್‌ಬ್ಯಾಕ್ ಒಂದೇ ರೀತಿಯಲ್ಲಿದೆ. ಪಾರ್ಕಿಂಗ್‌ ಸೌಲಭ್ಯ ಅಗತ್ಯಕ್ಕನುಸಾರವಾಗಿದ್ದರೆ, ಅವರು ಶೇ 60ರಷ್ಟು ಪ್ರೀಮಿಯಂ ಎಫ್‌ಎಆರ್‌ ಪಡೆದುಕೊಳ್ಳಬಹುದು’ ಎಂದರು.

 

ಪ್ರೀಮಿಯಂ ಎಫ್‌ಎಆರ್‌ನಿಂದ ವಾರ್ಷಿಕ ₹2,000 ಕೋಟಿ ನಿರೀಕ್ಷೆ

60x40 ಅಡಿ ನಿವೇಶನದ ಕಟ್ಟಡ ಮಾಲೀಕರಿಗೆ ಹೆಚ್ಚಿನ ಪ್ರಯೋಜನವಿಲ್ಲ

ಬೃಹತ್‌ ಕಟ್ಟಡ, ಡೆವಲಪರ್‌, ನಿರ್ಮಾಣದಾರರಿಗೆ ಅನುಕೂಲ



*Opportunity to Avail Premium FAR Within GBA Limits

With the objective of ensuring efficient and optimal utilisation of high-value land within Bengaluru city limits, provisions have been made under Section 18(B) of the KTCP Act, 1961 and Rule 37(E) of the Planning Authority Rules to allow the use of Premium FAR (Floor Area Ratio) in addition to the basic FAR.

Under Section 13(E) of the KTCP Act, 1961, amendments have been introduced to the zoning regulations of the RMP-2015 by inserting Chapter 11 titled “Premium F.A.R Granted by Levy of Premium Charges,” and a notification to this effect was issued on 02.04.2025.

As detailed in the attached schedule, applicants may obtain additional FAR (Premium FAR) beyond the basic FAR by considering the prevailing guidance value. Charges applicable as per the guidance value must be calculated and paid to avail the additional FAR.

As per the schedule, by paying the prescribed charges, applicants may obtain Premium FAR up to 0.4 (40%) of the basic FAR. Further, an additional 0.2 (20%) of the basic FAR may be availed through TDR, allowing a total maximum additional FAR of 0.6 (60%) over the basic FAR.

Some parties had filed petitions challenging this amendment before the Hon’ble High Court in WP No. 6347/2025 and WP No. 11201/2025. However, on 05.12.2025, the Hon’ble High Court dismissed these petitions and delivered a verdict in favour of the Greater Bengaluru Authority. Consequently, going forward, the public, landowners, developers and builders may avail Premium FAR as per the following procedure:

* Developers and owners may prepare building plans including the proposed Premium FAR and submit them for approval when seeking building permission.

* At the time of intimating payment of building plan approval fees, the respective city corporation will calculate the charges applicable to the Premium FAR area and inform the applicant to pay the Premium FAR charges along with the basic FAR fees.

* Upon payment of all applicable charges to the city corporation, building plan approval will be granted, permitting construction utilising both the basic FAR and the Premium FAR.

* This is a simple and already operational process. The  software system has been updated accordingly, enabling all stakeholders to make use of the facility.

* The Greater Bengaluru Authority anticipates an annual revenue of approximately ₹2,000 crore from the five city corporations through the implementation of Premium FAR.

*The detailed press release and schedule are attached for further information.*

Monday, December 8, 2025

'Blue-Green' concept for Bangalore CITY Corporation buildings… ಬೆಂಗಳೂರು ನಗರ ಪಾಲಿಕೆ ಕಟ್ಟಡಗಳಿಗೆ ‘ನೀಲಿ–ಹಸಿರು’ ಪರಿಕಲ್ಪ‍ನೆ

📰 GBA Plans Four New Buildings; Tender Issued for DPR

'Blue-Green' concept for Bangalore CITY Corporation buildings



Kere Manjunath ಕೆರೆ ಮಂಜುನಾಥ್

The Greater Bengaluru Authority (GBA) has decided to construct four new city corporation buildings based on the 'Blue-Green Building Concept'.

The aim is to construct sustainable and eco-friendly buildings that prioritize water management and minimize harm to nature.

Out of the five newly formed city corporations, the Central City Corporation will be housed in the Annex-3 building on the GBA Head Office premises. For the remaining four city corporations, sites have been allocated with the intention of constructing new, uniform buildings.

Deputy Chief Minister D.K. Shivakumar had previously announced that designs and logos for the new city corporation buildings would be invited from citizens and young architects, but this was not executed. Consequently, the GBA has invited tenders to prepare a Detailed Project Report (DPR), including the architectural design and all necessary systems for the buildings under the 'Blue-Green Concept'.

💧🌱 What is the Blue-Green Concept?

The Blue-Green concept combines strategies for sustainable water management (Blue) and urban ecology/sustainability (Green).

Blue (Water Management)

The Blue component focuses on sustainable water management strategies. 

 * Sustainable Water Management: Goals must be set for sustainable water management projects, including rainwater harvesting and reuse systems.

 * Wastewater Management: Systems should be developed to capture and treat sewage water, allowing it to be used for groundwater recharge and flood control.

 * Greywater Treatment: Wastewater treatment and reuse, specifically incorporating a 'Greywater' treatment plant on the building premises for uses like gardening.

 * Blue Roofs: Installing 'Blue Roofs' to temporarily store rainwater before slowly releasing it into the drainage system or collecting it in ponds or other storage units.

Green (Ecology and Sustainability)

The Green component focuses on ecological enhancement and energy efficiency. 

 * Cooling and Biodiversity: Installing green roofs for cooling the building through evapotranspiration, and building living walls to enhance biodiversity.

 * Air Quality and Carbon Reduction: Promoting urban afforestation and growing plants/trees along roads to reduce carbon and improve air quality.

 * Natural Water Treatment: Constructing wetlands and phytoremediation areas for natural water treatment.

 * Local Plantings: Planting drought-tolerant, native species to reduce the need for artificial irrigation.

 * Solar Energy: Installing solar energy production panels.

📍 Locations of the City Corporation Buildings

| City Corporation | Location |

| East City Corporation | Survey No. 1, Basavapura Village, Mahadevapura |

| West City Corporation | Near Nagarabhavi Circle, Chandra Layout |

| North City Corporation | Survey No. 75/4, Chokkanahalli Village |

| South City Corporation | Vacant land behind Banashankari Metro Station, Kanakapura Road |

🏢 Building Details and DPR Timeline

 * Plot Size: 75,000 square feet for each corporation building.

 * Facilities: Council hall, offices for Revenue, Engineering, Health, Infrastructure, and Quality Control departments, cabins, auditoriums, waiting areas, IT unit, record room, integrated control room, library, parking, cafeteria, and other ancillary facilities.

  •  * DPR Preparation Timeline (Total Time: 60 Days):
  •    * Day 10: Submission of the Initial Report of the DPR.
  •    * Day 40: Submission of the Feasibility Report with Architectural Design.
  •    * Day 55: Final DPR ready with design and drawings.
  •    * Day 60: Bidding documents for the building construction contract are prepared.




ಜಿಬಿಎ ವತಿಯಿಂದ ನಾಲ್ಕು ಕಟ್ಟಡಗಳ ನಿರ್ಮಾಣ; ಡಿಪಿಆರ್‌ ತಯಾರಿಸಲು ಟೆಂಡರ್‌

ಬೆಂಗಳೂರು ನಗರ ಪಾಲಿಕೆ ಕಟ್ಟಡಗಳಿಗೆ ‘ನೀಲಿ–ಹಸಿರು’ ಪರಿಕಲ್ಪ‍ನೆ

Kere Manjunath ಕೆರೆ ಮಂಜುನಾಥ್

ಬೆಂಗಳೂರು: ನಾಲ್ಕು ನಗರ ಪಾಲಿಕೆಗಳ ಹೊಸ ಕಟ್ಟಡಗಳನ್ನು ‘ನೀಲಿ–ಹಸಿರು ಕಟ್ಟಡ ಪರಿಕಲ್ಪನೆ’ಯಲ್ಲಿ ನಿರ್ಮಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.

ನೀರಿನ ನಿರ್ವಹಣೆ ಮತ್ತು ಪ್ರಕೃತಿಗೆ ಹಾನಿಕಾರವಾಗದಂತೆ ಸುಸ್ಥಿರ ರೀತಿಯಲ್ಲಿ ಪರಿಸರಸ್ನೇಹಿಯಾಗಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಹೊಸದಾಗಿ ರಚನೆಯಾಗಿರುವ ಐದು ನಗರ ಪಾಲಿಕೆಗಳಲ್ಲಿ ಕೇಂದ್ರ ನಗರ ಪಾಲಿಕೆ, ಜಿಬಿಎ ಕೇಂದ್ರ ಕಚೇರಿ ಆವರಣದಲ್ಲಿ ಅನೆಕ್ಸ್‌–3 ಕಟ್ಟಡವನ್ನು ನೀಡಲಾಗುತ್ತಿದೆ. ಇನ್ನುಳಿದ ನಾಲ್ಕು ನಗರ ಪಾಲಿಕೆಗಳಿಗೆ ಹೊಸದಾಗಿ ಕಟ್ಟಡಗಳನ್ನು ಏಕ ರೂಪದಲ್ಲಿ ನಿರ್ಮಿಸುವ ಉದ್ದೇಶದಿಂದ, ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಹೊಸ ನಗರ ಪಾಲಿಕೆಗಳ ಕಟ್ಟಡ ವಿನ್ಯಾಸ ಹಾಗೂ ಲೊಗೊಗಳನ್ನು ನಾಗರಿಕರು, ಯುವ ವಾಸ್ತುಶಿಲ್ಪಿಗಳಿಂದ ಆಹ್ವಾನಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಅದು ಕಾರ್ಯಗತವಾಗಲಿಲ್ಲ. ಅಂತಿಮವಾಗಿ, ಜಿಬಿಎ ‘ನೀಲಿ–ಹಸಿರು ಪರಿಕಲ್ಪನೆಯಲ್ಲಿ’ ಕಟ್ಟಡಗಳನ್ನು ನಿರ್ಮಿಸಲು ವಿನ್ಯಾಸ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಒಳಗೊಂಡ ಕಟ್ಟಡ ನಕ್ಷೆ– ಡಿಪಿಆರ್‌ ರಚಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್‌ ಆಹ್ವಾನಿಸಿದೆ.

 

ಏನಿದು ನೀಲಿ–ಹಸಿರು?

ನೀಲಿ: ಸುಸ್ಥಿರ ನೀರು ನಿರ್ವಹಣೆಯ ಯೋಜನೆಗಳತ್ತ ಗುರಿ ಹೊಂದಬೇಕು. ಇದರಲ್ಲಿ ಮಳೆ ನೀರು ಸಂಗ್ರಹ, ಅದರ ಮರು ಬಳಕೆಯ ವ್ಯವಸ್ಥೆಗಳಿರಬೇಕು. ಒಳಚರಂಡಿ ನೀರನ್ನು ಹಿಡಿದಿಟ್ಟು, ಅದನ್ನು ಸಂಸ್ಕರಿಸಿ ಅಂತರ್ಜಲ ಮರುಪೂರಣಗೊಳಿಸುವ ಜೊತೆಗೆ ಪ್ರವಾಹ ನಿಯಂತ್ರಕವನ್ನಾಗಿಸುವ ವ್ಯವಸ್ಥೆ ರೂಪಿಸಬೇಕು. ತ್ಯಾಜ್ಯನೀರು ಸಂಸ್ಕರಣೆ, ಅದರ ಬಳಕೆಗಾಗಿ ಕಟ್ಟಡದ ಆವರಣದಲ್ಲೇ ‘ಗ್ರೇ–ವಾಟರ್‌’ ಸಂಸ್ಕರಣೆ ಘಟಕವಿರಬೇಕು. ಅದನ್ನು ಉದ್ಯಾನ ಸೇರಿದಂತೆ ಇತರೆ ಉಪಯೋಗಕ್ಕೆ ಬಳಸಬೇಕು. ‘ಬ್ಲೂ– ರೂಫ್‌’ಗಳನ್ನು ಸ್ಥಾಪಿಸುವ ಮೂಲಕ ಮಳೆ ನೀರನ್ನು ತಾತ್ಕಾಲಿಕವಾಗಿ ಸಂಗ್ರಹಿಸಿ, ಒಳಚರಂಡಿ ವ್ಯವಸ್ಥೆಗೆ ಬಿಡುವ ಮುನ್ನ ಕೊಳ ಅಥವಾ ಇತರೆ ಸಂಗ್ರಹ ಘಟಕಗಳಲ್ಲಿ ಸಂಗ್ರಹಿಸಬೇಕು.

ಹಸಿರು: ಹಸಿರು ಚಾವಣಿಗಳನ್ನು ಅಳವಡಿಸಿ, ಬಾಷ್ಪೀಕರಣದ ಮೂಲಕ ಕಟ್ಟಡವನ್ನು ತಂಪಾಗಿಸುವ ಹಾಗೂ ಜೀವವೈವಿಧ್ಯವನ್ನು ವೃದ್ಧಿಸುವ ಜೀವಂತ ಗೋಡೆಗಳನ್ನು ನಿರ್ಮಿಸಬೇಕು. ಕಾರ್ಬನ್‌ ಕಡಿತಗೊಳಿಸಲು, ವಾಯುಗುಣಮಟ್ಟ ಉತ್ತಮವಾಗಿಸಲು ನಗರ ಅರಣ್ಯೀಕರಣ ಹಾಗೂ ರಸ್ತೆಗಳಲ್ಲಿ ಗಿಡ–ಮರಗಳನ್ನು ಬೆಳೆಸಬೇಕು. ನೈಸರ್ಗಿಕವಾಗಿ ನೀರನ್ನು ಸಂಸ್ಕರಿಸುವ ಜೌಗು ಪ್ರದೆಶ ಹಾಗೂ ಸಸ್ಯಕ್ಷೇತ್ರವನ್ನು ನಿರ್ಮಿಸಬೇಕು. ಬರ–ಸಹಿಷ್ಣು, ಸ್ಥಳೀಯ ಸಸ್ಯಗಳನ್ನು ನೆಟ್ಟು ಕೃತಕ ನೀರಾವರಿಯ ಅಗತ್ಯ ಪೂರೈಸಬೇಕು. ಸೌರಶಕ್ತಿ ಉತ್ಪಾದನೆಯ ಪ್ಯಾನಲ್‌ಗಳನ್ನು ಅಳವಡಿಸಬೇಕು.

 

ಎಲ್ಲೆಲ್ಲಿ ನಗರ ಪಾಲಿಕೆ ಕಟ್ಟಡ?

ಪೂರ್ವ ನಗರ ಪಾಲಿಕೆ; ಬಸವಪುರ ಗ್ರಾಮದ ಸರ್ವೆ ನಂ.1, ಮಹದೇವಪುರ

ಪಶ್ಚಿಮ ನಗರ ಪಾಲಿಕೆ; ನಾಗರಬಾವಿ ವೃತ್ತದ ಸಮೀಪ, ಚಂದ್ರಾ ಲೇಔಟ್‌

ಉತ್ತರ ನಗರ ಪಾಲಿಕೆ; ಚೊಕ್ಕನಹಳ್ಳಿ ಗ್ರಾಮದ ಸರ್ವೆ ನಂ. 75/4

ದಕ್ಷಿಣ ನಗರ ಪಾಲಿಕೆ; ಬನಶಂಕರಿ ಮೆಟ್ರೊ ನಿಲ್ದಾಣದ ಹಿಂಭಾಗದಲ್ಲಿರುವ ಖಾಲಿ ಜಾಗ, ಕನಕಪುರ ರಸ್ತೆ

 

75,000 ಚದರಡಿ: ಪ್ರತಿ ಪಾಲಿಕೆ ಕಟ್ಟಡದ ನಿವೇಶನ

ಸೌಲಭ್ಯಗಳು: ಕೌನ್ಸಿಲ್‌ ಸಭಾಂಗಣ, ಕಂದಾಯ, ಎಂಜಿನಿಯರಿಂಗ್‌, ಆರೋಗ್ಯ, ಮೂಲಸೌಕರ್ಯ, ಗುಣಮಟ್ಟ ನಿಯಂತ್ರಣ ವಿಭಾಗದ ಕಚೇರಿಗಳು, ಕ್ಯಾಬಿನ್‌ಗಳು, ಸಭಾಂಗಣಗಳು, ನಿರೀಕ್ಷಣಾ ತಾಣ, ಐಟಿ ಘಟಕ, ದಾಖಲೆ ಕೊಠಡಿ, ಸಮಗ್ರ ನಿಯಂತ್ರಣ ಕೊಠಡಿ, ಗ್ರಂಥಾಲಯ, ವಾಹನ ನಿಲುಗಡೆ, ಕೆಫೆಟೇರಿಯಾ ಸೇರಿದಂತೆ ಪೂರಕ ಸೌಲಭ್ಯಗಳು


  • 60 ದಿನ: ಡಿಪಿಆರ್‌ ತಯಾರಿಸಲು ನೀಡಲಾಗುವ ಒಟ್ಟು ಸಮಯ
  • 10ನೇ ದಿನ: ಡಿಪಿಆರ್‌ನ ಆರಂಭಿಕ ವರದಿ ಸಲ್ಲಿಕೆ
  • 40ನೇ ದಿನ; ವಾಸ್ತುಶಿಲ್ಪದೊಂದಿಗೆ ಕಾರ್ಯಸಾಧ್ಯತಾ ವರದಿ
  • 55ನೇ ದಿನ; ವಿನ್ಯಾಶ, ಡ್ರಾಯಿಂಗ್‌ ಜೊತೆಗೆ ಡಿಪಿಆರ್‌ ಸಜ್ಜು
  • 60ನೇ ದಿನ; ಕಟ್ಟಡ ನಿರ್ಮಾಣ ಗುತ್ತಿಗೆಗೆ ಬಿಡ್ಡಿಂಗ್‌ ದಾಖಲೆ ಸಿದ್ಧ


Sunday, December 7, 2025

₹4808 Crore to be Spent on Roads in Six Months…. ರಸ್ತೆಗೆ ಆರು ತಿಂಗಳಲ್ಲಿ ₹4,808 ಕೋಟಿ ವೆಚ್ಚ

2,008 km of Road Development by May End 2026: Tushar Giri Nath

₹4808 Crore to be Spent on Roads in Six Months



Bengaluru: More than 2,000 km of roads within the GBA (Greater Bengaluru Area) limits will be developed to the highest standard by the end of May 2026.

Over ₹4,000 crore is being spent on White Topping, asphaltation, High-Density Corridors, and the development of major and sub-major roads. All these works will be completed by the end of May 2026, informed Tushar Giri Nath, Additional Chief Secretary of the Urban Development Department, at a press conference on Saturday.

White Topping work is underway at a cost of ₹1,700 crore, and 157.39 \text{ km} of roads will be white-topped by March. 392.39 \text{ km} of roads will be asphalted by the end of January 2026, at a cost of ₹694 crore. The 78.98 \text{ km} High-Density Corridor project, costing ₹273 crore, will also be completed by the end of January 2026, he said.

He stated that the works on 701.12 \text{ km} of major and sub-major roads, including Bituminous Concrete, desilting of drains, construction of shoulder drains, and repair of footpaths, will be completed by the end of May 2026 at a cost of ₹1,241 crore.

He also mentioned that similar works (Bituminous Concrete, drain desilting, shoulder drain construction, and footpath repair) on 678.93 \text{ km} of ward roads will be completed by the end of May 2026 at a cost of ₹900 crore.

No White Topping for MG Road: It was initially decided to develop MG Road, which sees very heavy traffic, using the White Topping method. However, due to increased traffic density, the traffic police are not granting permission. Therefore, Tushar Giri Nath said they are considering asphaltation instead.

 * 157.39  km} of roads for White Topping

 * 392.39 km} of roads for Asphaltation

 * 78.98 km} for High-Density Corridor development

 * 701.12 km} of major/sub-major roads for Bituminous Concrete

 * 678.93 \text{ km} of ward roads for Bituminous Concrete


Property Tax Collection (in Lakhs)

| City Corporation  | Demand | Collection | Arrears |

| Central  | 1,27,377.55 | 67,992.77 | 59,384.78 |

| East  | 1,67,345.67 | 95,207.86 | 72,137.81 |

| North  | 1,24,233.30 | 60,522.39 | 63,710.91 |

| South Zone | 1,22,884.92 | 68,041.56 | 54,843.36 |

| West  | 1,28,158.57 | 69,901.96 | 58,256.61 |

| Total | 6,70,000 | 3,61,666.54 | 3,08,333.46 |

🏛️ 10 Khata Seva Kendras in the City

Tushar Giri Nath, Additional Chief Secretary of the Urban Development Department, announced that 10 Khata Seva Kendras (Khata Service Centers), similar to Passport Seva Kendras, will be launched in the city for applying for e-Khata, new Khata, and conversion from B-Khata to A-Khata.

He informed the press conference that one Khata Seva Kendra will be established in each of the 10 zones within the five City Corporations under the GBA.

The service centers will handle all tasks related to Khata, including application submission for e-Khata, new Khata applications, applications for converting B-Khata properties to A-Khata, and Khata distribution.

Property owners can apply for e-Khata through Bengaluru One centers and over a thousand private entities, or they can apply directly online themselves. Despite this, only 8.21 \text{ lakh} property owners have applied so far, and 8.16 \text{ lakh} owners have received their Khata. About 10 \text{ lakh} more owners have not yet come forward to apply. The service centers will start operating within three months, he said.

Khata applications from property owners cannot be rejected unnecessarily. Rejected applications will be re-examined by a 25-member monitoring team. If it is proven that an application was rejected unnecessarily, strict action will be taken against the staff of the Revenue Department, he warned.

3,000 Applications for A-Khata

So far, 3,252 applications have been submitted for converting B-Khata properties to A-Khata. He said that 98% of these owners have not provided the required map/sketch documents. The Khata will be issued after the GBA creates the sketch and generates the necessary documents.

₹1,500 Crore: The case against Premium FAR (Floor Area Ratio) has been dismissed by the court. Therefore, Munish Moudgil stated that its implementation is expected to generate an annual collection of ₹2,000 crore.

No Pothole-Free Guarantee: Tushar Giri Nath

"A guarantee of pothole-free roads in the city cannot be given at the moment," said Tushar Giri Nath. "For that to happen, waste disposal, the Water Board's pipeline system, and the stormwater drain system need to be properly managed. That is not possible at present," he said.

In response to a reporter's question on whether the thousands of crores being invested in road development would eliminate the pothole problem in Bengaluru in the future, he replied, "No expenditure was made on the development of major and sub-major roads for six or seven years. Now, the expenditure is being made."

From April 2025 until now, 22,539 potholes on major and sub-major roads have been filled at a cost of ₹18 crore. Potholes on ward roads have been filled at a cost of ₹45 crore, Tushar Giri Nath informed.

Would you like me to summarize the key highlights of the road development plan?




2026ರ ಮೇ ಅಂತ್ಯಕ್ಕೆ 2,008 ಕಿ.ಮೀ ರಸ್ತೆ ಅಭಿವೃದ್ಧಿ: ತುಷಾರ್‌ ಗಿರಿನಾಥ್‌

ರಸ್ತೆಗೆ ಆರು ತಿಂಗಳಲ್ಲಿ ₹4,808 ಕೋಟಿ ವೆಚ್ಚ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ 2026ರ ಮೇ ಅಂತ್ಯಕ್ಕೆ ಎರಡು ಸಾವಿರಕ್ಕೂ ಹೆಚ್ಚು ಕಿ.ಮೀ ಉದ್ದ ರಸ್ತೆಗಳು ಅತ್ಯುನ್ನತ ದರ್ಜೆಯಲ್ಲಿ ಅಭಿವೃದ್ಧಿಯಾಗಲಿವೆ.

ವೈಟ್‌ ಪಾಟಿಂಗ್‌, ಡಾಂಬರೀಕರಣ, ಹೈಡೆನ್ಸಿಟಿ ಕಾರಿಡಾರ್‌, ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹4 ಸಾವಿರಕ್ಕೂ ಹೆಚ್ಚು ಹಣ ವ್ಯಯಿಸಲಾಗುತ್ತಿದೆ. ಈ ಕಾಮಗಾರಿಗಳೆಲ್ಲ 2026ರ ಮೇ ಅಂತ್ಯಕ್ಕೆ ಮುಗಿಯಲಿವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

₹1700 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್‌ನೊಳಗೆ 157.39 ಕಿ.ಮೀ ರಸ್ತೆ ವೈಟ್‌ ಟಾಪಿಂಗ್‌ ಆಗಲಿದೆ.  ₹694 ಕೋಟಿ ವೆಚ್ಚದಲ್ಲಿ 392.39 ಕಿ.ಮೀ ರಸ್ತೆಯನ್ನು 2026ರ ಜನವರಿ ಅಂತ್ಯಕ್ಕೆ ಡಾಂಬರೀಕರಣ ಮಾಡಲಾಗುತ್ತಿದೆ. ₹273 ಕೋಟಿ ವೆಚ್ಚದ 78.98 ಕಿ.ಮೀ ಹೈಡೆನ್ಸಿಟಿ ಕಾರಿಡಾರ್‌ ಕಾಮಗಾರಿಯೂ 2026 ಜನವರಿ ಅಂತ್ಯಕ್ಕೆ ಮುಗಿಯಲಿದೆ ಎಂದರು.

701.12 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿಗೆ ಬಿಟುಮಿನಸ್‌ ಕಾಂಕ್ರೀಟ್‌, ಚರಂಡಿ ಹೂಳು ತೆಗೆಯುವುದು, ಶೋಲ್ಡರ್‌ ಡ್ರೈನ್‌ ನಿರ್ಮಾಣ, ಪಾದಚಾರಿ ಮಾರ್ಗ ದುರಸ್ತಿ ಕಾಮಗಾರಿಗಳನ್ನು ₹1,241 ಕೋಟಿ ವೆಚ್ಚದಲ್ಲಿ 2026ರ ಮೇ ಅಂತ್ಯಕ್ಕೆ ಮುಗಿಸಲಾಗುವುದು ಎಂದು ತಿಳಿಸಿದರು.

 678.93  ಕಿ.ಮೀ ಉದ್ದ ವಾರ್ಡ್‌ ರಸ್ತೆಗಳಿಗೆ ಬಿಟುಮಿನಸ್‌ ಕಾಂಕ್ರೀಟ್‌, ಚರಂಡಿ ಹೂಳು ತೆಗೆಯುವುದು, ಶೋಲ್ಡರ್‌ ಡ್ರೈನ್‌ ನಿರ್ಮಾಣ, ಪಾದಚಾರಿ ಮಾರ್ಗ ದುರಸ್ತಿ ಕಾಮಗಾರಿಗಳನ್ನು ₹900 ಕೋಟಿ ವೆಚ್ಚದಲ್ಲಿ 2026ರ ಮೇ ಅಂತ್ಯಕ್ಕೆ ಮುಗಿಸಲಾಗುವುದು ಎಂದರು.

ಎಂಜಿ ರಸ್ತೆಗೆ ವೈಟ್‌ಟಾಪಿಂಗ್ ಇಲ್ಲ: ಅತಿ ಹೆಚ್ಚು ವಾಹನ ಸಂಚಾರವಿರುವ ಎಂ.ಜಿ.ರಸ್ತೆಯನ್ನು ವೈಟ್‌ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಸಂಚಾರಿ ಪೊಲೀಸರು ಅವಕಾಶ ನೀಡುತ್ತಿಲ್ಲ. ಹೀಗಾಗಿ, ಡಾಂಬರೀಕರಣ ಮಾಡುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

 

157.39 ಕಿ.ಮೀ ರಸ್ತೆಗೆ ವೈಟ್‌ ಟಾಪಿಂಗ್‌

392.39 ಕಿ.ಮೀ ರಸ್ತೆಗೆ ಡಾಂಬರೀಕರಣ

78.98 ಕಿ.ಮೀ ಹೈಡೆನ್ಸಿಟಿ ಕಾರಿಡಾರ್‌ ಅಭಿವೃದ್ಧಿ

701.12 ಕಿ.ಮೀ ಮುಖ್ಯ–ಉಪ ಮುಖ್ಯ ರಸ್ತೆಗಳಿಗೆ ಬಿಟುಮಿನಸ್‌ ಕಾಂಕ್ರೀಟ್‌

678.93  ಕಿ.ಮೀ ವಾರ್ಡ್‌ ರಸ್ತೆಗಳಿಗೆ ಬಿಟುಮಿನಸ್‌ ಕಾಂಕ್ರೀಟ್‌

 

 

ಆಸ್ತಿ ಸಂಗ್ರಹ

ನಗರ ಪಾಲಿಕೆ; ಬೇಡಿಕೆ;ಸಂಗ್ರಹ; ಬಾಕಿ

ಕೇಂದ್ರ ನಗರ ಪಾಲಿಕೆ; 1,27,377.55 67,992.77 59,384.78
ಪೂರ್ವ ನಗರ ಪಾಲಿಕೆ 1,67,345.67 95,207.86 72,137.81
ಉತ್ತರ ನಗರ ಪಾಲಿಕೆ; 1,24,233.30 60,522.39 63,710.91
ದಕ್ಷಿಣ ನಗರ ಪಾಲಿಕೆ; 1,22,884.92 68,041.56 54,843.36
ಪಶ್ಚಿಮ ನಗರ ಪಾಲಿಕೆ; 1,28,158.57 69,901.96 58,256.61
ಒಟ್ಟು;  6,70,000 3,61,666.54 3,08,333.46

   

ನಗರದಲ್ಲಿ 10 ಖಾತಾ ಸೇವಾ ಕೇಂದ್ರ

ಇ– ಖಾತಾ, ಹೊಸ ಖಾತಾ, ಬಿ ಖಾತಾದಿಂದ ಎ ಖಾತಾಗೆ ಅರ್ಜಿ ಸಲ್ಲಿಸಲು ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಮಾದರಿಯಲ್ಲಿ ನಗರದಲ್ಲಿ 10 ಖಾತಾ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆ ವ್ಯಾಪ್ತಿಯ 10 ವಲಯದಲ್ಲಿ ತಲಾ ಒಂದು ಖಾತಾ ಸೇವಾ ಕೇಂದ್ರ ಆರಂಭಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೇವಾ ಕೇಂದ್ರದಲ್ಲಿ ಇ- ಖಾತಾ ಅರ್ಜಿ ಸಲ್ಲಿಕೆ, ಹೊಸ ಖಾತಾ ಅರ್ಜಿ ಹಾಗೂ ಬಿ ಖಾತಾ ಆಸ್ತಿಗೆ ಎ ಖಾತಾ ಪಡೆಯುವುದಕ್ಕೆ ಅರ್ಜಿ ಸಲ್ಲಿಕೆ, ಖಾತಾ ವಿತರಣೆ ಸಂಬಂಧಿಸಿದಂತೆ ಎಲ್ಲ ಕಾರ್ಯಗಳನ್ನು ಖಾತಾ ಸೇವಾ ಕೇಂದ್ರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಒನ್‌ ಕೇಂದ್ರ ಹಾಗೂ ಒಂದು ಸಾವಿರಕ್ಕೂ ಅಧಿಕ ಖಾಸಗಿ ವ್ಯಕ್ತಿಗಳು ಇ–ಖಾತಾಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅದರೊಂದಿಗೆ ಸ್ವಯಂ ಪ್ರೇರಿತರಾಗಿ ಆಸ್ತಿ ಮಾಲೀಕರೇ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೂ, ಈವರೆಗೆ 8.21 ಲಕ್ಷ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಿ, 8.16 ಲಕ್ಷ ಆಸ್ತಿ ಮಾಲೀಕರು ಖಾತಾ ಪಡೆದುಕೊಂಡಿದ್ದಾರೆ. ಇನ್ನೂ ಸುಮಾರು 10 ಲಕ್ಷ ಮಾಲೀಕರು ಅರ್ಜಿ ಹಾಕಲು ಮುಂದಾಗಿಲ್ಲ. ಸೇವಾ ಕೇಂದ್ರ ಮೂರು ತಿಂಗಳಲ್ಲಿ ಆರಂಭವಾಗಲಿದೆ  ಎಂದು ಹೇಳಿದರು.

ಆಸ್ತಿ ಮಾಲೀಕರ ಖಾತಾ ಅರ್ಜಿಗಳನ್ನು ಅನಗತ್ಯವಾಗಿ ತಿರಸ್ಕರಿಸುವಂತಿಲ್ಲ. ತಿರಸ್ಕರಿಸಿದ ಅರ್ಜಿಗಳನ್ನು, 25 ಜನರ ಕಣ್ಗಾವಲು ತಂಡ ಮರು ಪರಿಶೀಲಿಸಲಿದೆ. ಅನಗತ್ಯವಾಗಿ ಅರ್ಜಿ ತಿರಸ್ಕರಿಸಿರುವುದು ಸಾಬೀತಾದರೆ, ಕಂದಾಯ ವಿಭಾಗದ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

 

ಎ ಖಾತಾಗೆ 3 ಸಾವಿರ ಅರ್ಜಿ

ಬಿ ಖಾತಾ ಆಸ್ತಿಗಳಿಗೆ ಎ ಖಾತಾ ವಿತರಿಸುವಂತೆ ಈವರೆಗೆ 3,252 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಶೇ 98ರಷ್ಟು ಮಾಲೀಕರು ನಕ್ಷೆಯ ದಾಖಲೆ ನೀಡಿಲ್ಲ. ಜಿಬಿಎಯಿಂದ ನಕ್ಷೆ ರಚಿಸಿ, ದಾಖಲೆ ಸೃಷ್ಟಿಸಿ ಖಾತಾ ನೀಡಲಾಗುವುದು ಎಂದು ಹೇಳಿದರು.

₹1,500 ಕೋಟಿ: ಪ್ರೀಮಿಯಂ ಎಫ್‌ಎಆರ್‌ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿದೆ. ಹೀಗಾಗಿ, ಅದರ ಅನುಷ್ಠಾನದಿಂದ, ವಾರ್ಷಿಕವಾಗಿ ₹2,000 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು.

 

ಗುಂಡಿಮುಕ್ತ ಭರವಸೆ ಇಲ್ಲ: ತುಷಾರ್‌ ಗಿರಿನಾಥ್‌

‘ನಗರದಲ್ಲಿ ಗುಂಡಿಮುಕ್ತ ರಸ್ತೆಯ ಭರವಸೆಯನ್ನು ಸದ್ಯಕ್ಕೆ ನೀಡಲಾಗುವುದಿಲ್ಲ. ಅದಾಗಬೇಕಾದರೆ, ಕಸ ವಿಲೇವಾರಿ, ಜಲಮಂಡಳಿಯ ಕೊಳವೆ ವ್ಯವಸ್ಥೆ, ನೀರು ಗಾಲುವೆ ವ್ಯವಸ್ಥಿತವಾಗಿರಬೇಕಾಗಿದೆ. ಅದು ಸದ್ಯಕ್ಕೆ ಸಾಧ್ಯವಿಲ್ಲ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.‌

ಸಾವಿರಾರು ಕೋಟಿ ರಸ್ತೆ ಅಭಿವೃದ್ಧಿ ಹೂಡಿಕೆ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆ ಇರುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಆರೇಳು ವರ್ಷದಿಂದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಯಾವುದೇ ವೆಚ್ಚ ಮಾಡಿಲ್ಲ. ಇದೀಗ ವೆಚ್ಚ ಮಾಡಲಾಗುತ್ತಿದೆ’ ಎಂದರು.

2025ರ ಏಪ್ರಿಲ್‌ನಿಂದ ಇಲ್ಲಿಯವರೆಗೆ, ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ 22,539 ರಸ್ತೆ ಗುಂಡಿಗಳನ್ನು ₹18 ಕೋಟಿ ವೆಚ್ಚದಲ್ಲಿ ಮುಚ್ಚಲಾಗಿದೆ. ₹45 ಕೋಟಿ ವೆಚ್ಚದಲ್ಲಿ ವಾರ್ಡ್‌ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.

 

Friday, December 5, 2025

Twin Tunnel Road Construction by BDA… ಬಿಡಿಎಯಿಂದ ಅವಳಿ ಸುರಂಗ ರಸ್ತೆಗೆ ನಿರ್ಮಾಣ

₹2,215 Crore to Manage Traffic Congestion at Hebbal

Twin Tunnel Road Construction by BDA



Bengaluru: The Cabinet has given administrative approval for the construction of a three-lane twin tunnel road and a supporting elevated corridor to manage traffic congestion from the Hebbal Junction to Mekhri Circle.

The tunnel road will be built using the 'cut-and-cover' method from the Hebbal flyover up to the Veterinary College. Furthermore, Minister H.K. Patil stated that the Cabinet has approved the construction of an elevated corridor, which will connect to the tunnel road with up-and-down ramps, to be financed entirely through the resources of the Bengaluru Development Authority (BDA).

The Detailed Project Report (DPR) for the tunnel road was prepared by the ROADIC corporation under the aegis of the Bengaluru Smart Infrastructure Limited (B-SMILE). The BDA Commissioner had requested the government, stating, 'The BDA is ready to construct the tunnel road at the Hebbal Junction using its own resources. Since experienced BDA engineers are already managing the Hebbal flyover work, if they are also entrusted with the tunnel road work, all projects can be completed within the stipulated time.'

Acceding to this request, the Government assigned the tunnel road project, which was originally to be executed by B-SMILE, to the BDA. Consequently, the government will not need to provide the annual grant of ₹4,000 crore for this project. The BDA has thus been approved to construct the tunnel road as per the DPR finalized by B-SMILE.

In the tunnel road proposal, the BDA Commissioner explained, 'We had requested 26,000 square meters of land from the campus of the Karnataka Veterinary, Animal, and Fisheries Sciences University (KVAFSU). The University did not agree but permitted the tunnel road to pass underneath its campus. Therefore, the land will be utilized for the tunnel road and subsequently restored to its original condition.'

 ₹10,000 Crore Collection by March 2026

The Commissioner further explained that the BDA is financially sound and will collect ₹10,000 crore by the end of March 2026, which includes:

 * ₹4,500 crore from the auction of residential sites and corner sites.

 * ₹1,500 crore from application deposits for the Shivaram Karanth Layout.

 * ₹1,000 crore from the auction of flats, villas, and CA sites.

 * ₹3,000 crore from the implementation of 38(D) for unauthorized constructions.

The Commissioner has also detailed the financial expenditure, stating the BDA is prepared to bear ₹2,215 crore for the tunnel road in installments from the 4th Quarter of 2025–26 to the 3rd Quarter of 2027–28. This cost includes:

 * ₹333 crore for statutory fees.

 * ₹190 crore for GST.

 * ₹25 crore for land acquisition, as the tunnel road passes through government land.

 * ₹35 crore for utility shifting.

 Project Key Statistics

|| 2.2 km | Length | The length of the three-lane tunnel road from the Hebbal flyover area to the Veterinary College within the GKVK campus. |

| 1.70 km | Length | The length of the two-lane, two-way elevated corridor. |

| ₹2,215 crore | Total Cost | The full cost of the tunnel road and elevated corridor project. |

| ₹1,490 crore | Cost | The cost of constructing the tunnel road. |

| ₹725 crore | Cost | The cost of constructing the elevated corridor. |

| 24 months | Deadline | The deadline for completing the tunnel road construction work. |


ALSO READ…. TUNNEL road: USE of 6 acres inside Lalbagh ಸುರಂಗ ರಸ್ತೆ: ಲಾಲ್‌ಬಾಗ್‌ ಒಳಗೆ 6 ಎಕರೆ ಬಳಕೆ

Also READ… Tunnel Road: ‘Shaft’ inside Lalbagh *ಸುರಂಗ ರಸ್ತೆ: ಲಾಲ್‌ಬಾಗ್‌ನೊಳಗೆ ‘ಶಾಫ್ಟ್‌’*

ALSO READ ….. Tunnel road: Groundwater, borewells are being eroded…. *ಸುರಂಗ ರಸ್ತೆ: ಅಂತರ್ಜಲ, ಕೊಳವೆಬಾವಿಗೆ ಕುತ್ತು*

Also read…. Tunnel road: THREAT to Hebbal, Sankey Lake *ಸುರಂಗ ರಸ್ತೆ: ಹೆಬ್ಬಾಳ, ಸ್ಯಾಂಕಿ ಕೆರೆಗೆ ಕಂಟಕ*

Twin Tunnel… https://keremanju.blogspot.com/2025/07/bengaluru-tender-for-twin-tunnel-road.html

Tunnel not a solution for Traffic….

TUNNEL 19 Rupees Toll per KM… 

https://keremanju.blogspot.com/2025/07/tunnel-road-19-per-km-50-reduction-in.html

TUNNEL NOT RAISED FROM DOR…. https://keremanju.blogspot.com/2025/03/bbmp-tunnel-road-not-raised-from-dpr.html

East West Corridor Twin Tube Tunnel…. https://keremanju.blogspot.com/2025/02/dpr-for-twin-tube-east-west-tunnel-road.html

TUNNEL ₹750 crore Per KM… https://keremanju.blogspot.com/2024/11/tunnel-road-750-crore-per-km-tender-in.html

22 Thousand crores for 50 KM TUNNEL…. https://keremanju.blogspot.com/2023/07/22-thousand-crore-for-50-km-tunnel.html



ಹೆಬ್ಬಾಳದಲ್ಲಿ ವಾಹನ ದಟ್ಟಣೆ ನಿರ್ವಹಣೆಗೆ ₹2,215 ಕೋಟಿ ವೆಚ್ಚ

ಬಿಡಿಎಯಿಂದ ಅವಳಿ ಸುರಂಗ ರಸ್ತೆಗೆ ನಿರ್ಮಾಣ

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ವಾಹನ ದಟ್ಟಣೆಯನ್ನು ನಿರ್ವಹಣೆ ಮಾಡಲು ಮೂರು ಪಥದ ಅವಳಿ ಸುರಂಗ ರಸ್ತೆ, ಅದಕ್ಕೆ ಪೂರಕವಾಗಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಹೆಬ್ಬಾಳ ಮೇಲ್ಸೇತುವೆಯಿಂದ ಪಶುವೈದ್ಯ ಕಾಲೇಜಿನವರೆಗೆ ಸುರಂಗ ರಸ್ತೆಯನ್ನು ‘ಕಟ್‌ ಆ್ಯಂಡ್‌ ಕವರ್’ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಅಲ್ಲದೆ, ಇದಕ್ಕೆ ಸಂಪರ್ಕವಾಗುವಮತೆ ಮೇಲ್ಮುಖ–ಕೆಳಮುಖ ರ‍್ಯಾಂಪ್‌ನೊಂದಿಗೆ ಎಲಿವೇಟೆಡ್‌ ಕಾರಿಡಾರ್‌ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಂಪನ್ಮೂಲದಿಂದಲೇ ನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ನಿಯಮಿತ (ಬಿ–ಸ್ಮೈಲ್‌) ವತಿಯಿಂದ ಈ ಸುರಂಗ ರಸ್ತೆಯನ್ನು ನಿರ್ಮಿಸಲು, ರೋಡಿಕ್‌ ಸಂಸ್ಥೆಯಿಂದ  ವಿಸ್ತೃತ ಯೋಜನಾ ವರದಿಯನ್ನೂ (ಡಿಪಿಆರ್) ತಯಾರಿಸಲಾಗಿತ್ತು. ‘ಹೆಬ್ಬಾಳ ಜಂಕ್ಷನ್‌ನಲ್ಲಿ ಸುರಂಗ ರಸ್ತೆಯನ್ನು ಬಿಡಿಎ ಸಂಪನ್ಮೂಲದಿಂದ ನಿರ್ಮಿಸಲು ಸಿದ್ಧವಿದೆ. ಬಿಡಿಎಯಲ್ಲಿ ನುರಿತ ಎಂಜಿನಿಯರ್‌ಗಳು, ಹೆಬ್ಬಾಳದ ಮೇಲ್ಸೇತುವೆ ಕಾಮಗಾರಿಯನ್ನು ನಡೆಸುತ್ತಿದ್ದು, ಸುರಂಗ ರಸ್ತೆಯ ಕಾಮಗಾರಿಯನ್ನೂ ವಹಿಸಿದರೆ ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ದೆ’ ಎಂದು ಬಿಡಿಎ ಆಯುಕ್ತರು ಸರ್ಕಾರಕ್ಕೆ ಕೇಳಿಕೊಂಡಿದ್ದರು.

ಅದನ್ನು ಮನ್ನಿಸಿದ ಸರ್ಕಾರ, ಜಿಬಿಎಯ ಬಿ–ಸ್ಮೈಲ್‌ ನಿರ್ವಹಿಸಬೇಕಿದ್ದ ಸುರಂಗ ರಸ್ತೆಯನ್ನು ಬಿಡಿಎಗೆ ವಹಿಸಿತ್ತು. ಇದರಿಂದ ಸರ್ಕಾರ ವರ್ಷಕ್ಕೆ ನೀಡಲಾಗುವ ₹4 ಸಾವಿರ ಕೋಟಿ ಅನುದಾನ ಇದಕ್ಕೆ ನೀಡುವಂತಿಲ್ಲ. ಹೀಗಾಗಿ, ಬಿ–ಸ್ಮೈಲ್‌ ಅಂತಿಮಗೊಳಿಸಿರುವ ಡಿಪಿಆರ್‌ನಂತೆಯೇ ಸುರಂಗ ರಸ್ತೆ ನಿರ್ಮಿಸಲು ಬಿಡಿಎಗೆ ಅನುಮೋದನೆ ನೀಡಿದೆ.

‘ಕರ್ನಾಟಕ ಪಶುವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು) ಆವರಣದ 26 ಸಾವಿರ ಚದರ ಮೀಟರ್ ಭೂಮಿಯನ್ನು ನೀಡಲು ಕೋರಲಾಗಿತ್ತು. ಅದಕ್ಕೆ ವಿಶ್ವವಿದ್ಯಾಲಯ ಒಪ್ಪಿಲ್ಲ. ಆದರೆ, ಅದರ ಆವರಣ ಕೆಳಭಾಗದಲ್ಲಿ ಸುರಂಗ ರಸ್ತೆ ಸಾಗಲು ಸಮ್ಮತಿ ನೀಡಿದೆ. ಹೀಗಾಗಿ, ಸುರಂಗ ರಸ್ತೆಗಾಗಿ ಅಲ್ಲಿನ ಜಾಗವನ್ನು ಬಳಸಿಕೊಂಡು ನಂತರ ಅದನ್ನು ಈಗಿರುವಂತೆಯೇ ಬಿಟ್ಟುಕೊಡಲಾಗುತ್ತದೆ’ ಎಂದು ಬಿಡಿಎ ಆಯುಕ್ತರು ಸುರಂಗ ರಸ್ತೆ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

 

₹10 ಸಾವಿರ ಕೋಟಿ ಸಂಗ್ರಹ

ಬಿಡಿಎ ಆರ್ಥಿಕವಾಗಿ ಸಬಲವಾಗಿದ್ದು, ವಸತಿ– ಮೂಲೆ ನಿವೇಶನಗಳ ಹರಾಜಿನಿಂದ ₹4,500 ಕೋಟಿ, ಶಿವರಾಮಕಾರಂತ ಬಡಾವಣೆಯ ಅರ್ಜಿ ಠೇವಣಿಯಿಂದ ₹1,500 ಕೋಟಿ,  ಫ್ಲ್ಯಾಟ್‌, ವಿಲ್ಲಾ, ಸಿಎ ನಿವೇಶನ ಹರಾಜಿನಿಂದ ₹1,000 ಕೋಟಿ ಹಾಗೂ ಅನಧಿಕೃತ ನಿರ್ಮಾಣಗಳಿಗೆ 38(ಡಿ) ಅನುಷ್ಠಾನದಿಂದ ₹3,000 ಕೋಟಿ ಸೇರಿದಂತೆ  2026ರ ಮಾರ್ಚ್‌ ಅಂತ್ಯಕ್ಕೆ ₹10 ಸಾವಿರ ಕೋಟಿ ಸಂಗ್ರಹಿಸಲಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

2025–25ರ 4ನೇ ತ್ರೈಮಾಸಿಕದಿಂದ 2027–28ನ ಮೂರನೇ ತ್ರೈಮಾಸಿಕದವರೆಗೆ ಕಂತಿನಲ್ಲಿ ಸುರಂಗ ರಸ್ತೆಗೆ ₹2,215 ಕೋಟಿ ಭರಿಸಲು ಸಿದ್ಧವಿದೆ ಎಂದು ಆರ್ಥಿಕ ವೆಚ್ಚವನ್ನೂ ವಿವರವಾಗಿ ನೀಡಿದ್ದಾರೆ. ಇದರಲ್ಲಿ, ₹333 ಕೋಟಿ ಶಾಸನಬದ್ಧ ಶುಲ್ಕ, ₹190 ಕೋಟಿ ಜಿಎಸ್‌ಟಿ,  ಸರ್ಕಾರಿ ಜಮೀನಿನಲ್ಲಿ ಸುರಂಗ ರಸ್ತೆ ಸಾಗುವುದರಿಂದ ಭೂಸ್ವಾಧೀನಕ್ಕೆ ₹25 ಕೋಟಿ ಹಾಗೂ ಯುಟಿಲಿಟಿ ಸೌಲಭ್ಯವನ್ನು ಬದಲಾಯಿಸಲು ₹35 ಕೋಟಿ ಸೇರಿದೆ.

 

2.2 ಕಿ.ಮೀ;  ಹೆಬ್ಬಾಳ ಮೇಲ್ಸೇತುವೆ ಪ್ರದೇಶದಿಂದ ಜಿಕೆವಿಕೆ ಆವರಣದೊಳಗೆ ಪಶು ಕಾಲೇಜುವರೆಗೆ ಮೂರು ಪಥದ ಸುರಂಗ ರಸ್ತೆ ಉದ್ದ

1.70 ಕಿ.ಮೀ; ಎರಡು ಪಥದ ಎರಡು ಹಾದಿಯ ಎಲಿವೇಟೆಡ್‌ ಕಾರಿಡಾರ್‌ನ ಉದ್ದ

₹2,215 ಕೋಟಿ; ಸುರಂಗ ರಸ್ತೆ– ಎಲಿವೇಟೆಡ್‌ ಕಾರಿಡಾರ್‌ನ ಪೂರ್ಣ ವೆಚ್ಚ

₹1,490 ಕೋಟಿ; ಸುರಂಗ ರಸ್ತೆ ನಿರ್ಮಾಣಕ್ಕಾಗುವ  ವೆಚ್ಚ

₹725 ಕೋಟಿ; ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣದ ವೆಚ್ಚ

24 ತಿಂಗಳು; ಸುರಂಗ ರಸ್ತೆ ಕಾಮಗಾರಿ ಮುಗಿಯಬೇಕಾದ ಗಡುವು



ಪ್ರಸ್ತಾವಿತ ಮಾರ್ಗ ಮತ್ತು ವಿನ್ಯಾಸದ ವಿವರಗಳು

1. ಅವಳಿ ಸುರಂಗ ರಸ್ತೆ (Twin Tunnel Road)

ಮಾರ್ಗ: ಈ ಮೂರು-ಪಥದ ಅವಳಿ ಸುರಂಗ ರಸ್ತೆಯು ಹೆಬ್ಬಾಳ ಮೇಲ್ಸೇತುವೆ (Flyover) ಪ್ರದೇಶದಿಂದ ಆರಂಭವಾಗಿ ಪಶುವೈದ್ಯ ಕಾಲೇಜಿನವರೆಗೆ (Veterinary College) ಸಾಗುತ್ತದೆ. ಈ ಮಾರ್ಗವು ಹೆಬ್ಬಾಳ ಜಂಕ್ಷನ್‌ನಿಂದ ಮೇಕ್ರಿ ವೃತ್ತದ ಕಡೆಗೆ ದಟ್ಟಣೆಯನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

ಉದ್ದ: ಸುರಂಗ ರಸ್ತೆಯು 2.2 ಕಿ.ಮೀ ಉದ್ದವಿದೆ.

ವಿನ್ಯಾಸ ಮತ್ತು ನಿರ್ಮಾಣ:

• ಇದು ಮೂರು ಪಥಗಳನ್ನು (Three-lane) ಹೊಂದಿರುವ ಅವಳಿ ಸುರಂಗ ರಸ್ತೆಯಾಗಿದೆ (ಪ್ರತಿ ದಿಕ್ಕಿಗೆ ಒಂದು ಪ್ರತ್ಯೇಕ ಸುರಂಗ).

• ಇದನ್ನು ಸಾಮಾನ್ಯವಾಗಿ ನೆಲದ ಮೇಲ್ಮೈಯನ್ನು ಅಗೆದು, ಸುರಂಗವನ್ನು ನಿರ್ಮಿಸಿ, ನಂತರ ಮತ್ತೆ ಮುಚ್ಚುವ ‘ಕಟ್‌ ಆ್ಯಂಡ್‌ ಕವರ್’ (Cut-and-Cover) ಮಾದರಿಯಲ್ಲಿ ನಿರ್ಮಿಸಲಾಗುತ್ತದೆ.

ವಿಶೇಷ ವಿನ್ಯಾಸ: ಸುರಂಗದ ಒಂದು ಭಾಗವು ಕರ್ನಾಟಕ ಪಶುವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (KVAFSU) ಆವರಣದ ಕೆಳಭಾಗದಲ್ಲಿ ಹಾದುಹೋಗುತ್ತದೆ. ಇದಕ್ಕಾಗಿ ವಿವಿಯು ತನ್ನ ಜಾಗವನ್ನು ಬಳಸಲು ಸಮ್ಮತಿ ನೀಡಿದ್ದು, ಕಾಮಗಾರಿ ನಂತರ ಜಾಗವನ್ನು ಮೂಲ ಸ್ಥಿತಿಗೆ ತರಲಾಗುತ್ತದೆ.

2. ಎಲಿವೇಟೆಡ್ ಕಾರಿಡಾರ್ (Elevated Corridor)

ಮಾರ್ಗ ಮತ್ತು ಸಂಪರ್ಕ: ಸುರಂಗ ರಸ್ತೆಗೆ ಪೂರಕವಾಗಿ ಎಲಿವೇಟೆಡ್‌ ಕಾರಿಡಾರ್‌ ಅನ್ನು ನಿರ್ಮಿಸಲಾಗುತ್ತದೆ. ಇದು ಸುರಂಗ ರಸ್ತೆಯೊಂದಿಗೆ ಸಂಪರ್ಕ ಕಲ್ಪಿಸಲು ಮೇಲ್ಮುಖ ಮತ್ತು ಕೆಳಮುಖ ರ್‍ಯಾಂಪ್‌ಗಳನ್ನು (Upward and Downward Ramps) ಹೊಂದಿರುತ್ತದೆ.

ಉದ್ದ: ಎಲಿವೇಟೆಡ್‌ ಕಾರಿಡಾರ್‌ನ ಉದ್ದವು 1.70 ಕಿ.ಮೀ ಇದೆ.

ವಿನ್ಯಾಸ: ಇದು ಎರಡು ಪಥದ (Two-lane), ಎರಡು ಹಾದಿಯ ಎಲಿವೇಟೆಡ್ ಕಾರಿಡಾರ್ ಆಗಿದೆ.

ಸಂಕ್ಷಿಪ್ತವಾಗಿ, ಈ ಯೋಜನೆ ಹೆಬ್ಬಾಳ ಜಂಕ್ಷನ್‌ನಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಮೇಲ್ಸೇತುವೆಯಿಂದ ಬರುವ ವಾಹನಗಳನ್ನು ಸುರಂಗದ ಮೂಲಕ ಮತ್ತು ಎಲಿವೇಟೆಡ್ ಕಾರಿಡಾರ್ ಮೂಲಕ ನಗರಕ್ಕೆ ಸುಗಮವಾಗಿ ಹರಿಯಲು ಅನುವು ಮಾಡಿಕೊಡುತ್ತದೆ.


Thursday, December 4, 2025

Integrated e-Khata System in the GBA limits… ‌ಇ–ಖಾತಾದಲ್ಲಿ ಯುಪಿಒಆರ್‌ ಮಾಹಿತಿ

Integrated e-Khata System in the GBA limits



Bengaluru,: We have integrated city survey UPOR property maps along with drone Over-View with GBA ekhata.

Now ekhata has

1. All owner information

2. ⁠All property details

3. ⁠Property photo

4. ⁠Owner photo

5. ⁠GPS of property 

6. ⁠Digital map of property and it’s location image 

7. ⁠Property tax details and usage details

8. ⁠BESCOM meter no

9. ⁠Document no based on which property ownership acquired.

The work done in UPOR in Bangalore over about 2-years integrated with ekhata thanks to Revenue Dept.

We depend on accurate GPS of ekhata to connect with correct UPOR map and image. It’s a painstaking work. Issued about 1-Lakh Integrated ekhatas and continuing to do more daily. 

About 9 Lakh Final ekhatas issued and daily about 2500 are getting issued with avg waiting time of about 2-days.

Munish Moudgil, Spl Comm (Rev & IT), GBA.


Also Read…. The Faceless, Contactless & ONLINE eKhata System of Bengaluru City… ಫೇಸ್‌ಲೆಸ್‌, ಸಂಪರ್ಕರಹಿತ, ಆನ್‌ಲೈನ್‌ ಇ–ಖಾತಾ

Also read …. Integrated e-Khata System in the GBA limits ಇ–ಖಾತಾದಲ್ಲಿ ಯುಪಿಒಆರ್‌ ಮಾಹಿತಿ


ಜಿಬಿಎ ವ್ಯಾಪ್ತಿಯಲ್ಲಿ ಇಂಟಿಗ್ರೇಟೆಡ್ ಇ-ಖಾತಾ ವ್ಯವಸ್ಥೆ: ಮುನೀಶ್ ಮೌದ್ಗಿಲ್

‌ಇ–ಖಾತಾದಲ್ಲಿ ಯುಪಿಒಆರ್‌ ಮಾಹಿತಿ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿನ ಆಸ್ತಿಗಳ ಇ–ಖಾತಾದಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆಗಳನ್ನು (ಯುಪಿಒಆರ್‌) ಅಳವಡಿಸುವ ‘ಇಂಟಿಗ್ರೇಟೆಡ್ ಇ-ಖಾತಾ ವ್ಯವಸ್ಥೆ’ಯನ್ನು ಜಾರಿ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ನಗರ ಸಮೀಕ್ಷೆಯಲ್ಲಿ ಯುಪಿಒಆರ್‌ನಲ್ಲಿ ಆಸ್ತಿ ನಕ್ಷೆಗಳು, ಡ್ರೋನ್ ಮೂಲಕ ಪಡೆದುಕೊಂಡ ಓವರ್-ವ್ಯೂ ಚಿತ್ರಗಳನ್ನು ಜಿಬಿಎ ನೀಡುತ್ತಿರುವ ಇ-ಖಾತಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ನಗರದಲ್ಲಿ ಸುಮಾರು ಎರಡು ವರ್ಷಗಳಿಂದ ಯುಪಿಒಆರ್‌ ಯೋಜನೆಯಡಿ ನಿರ್ವಹಿಸಲಾಗಿರುವ ಕಾರ್ಯವನ್ನು ಇ-ಖಾತಾ ವ್ಯವಸ್ಥೆಗೆ  ಸಂಯೋಜಿಸಿರುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಕೆಲಸ ಶ್ಲಾಘನಾರ್ಹ ಎಂದರು.

ಇ-ಖಾತಾದಲ್ಲಿರುವ ನಿಖರ ಜಿಪಿಎಸ್‌ ಮಾಹಿತಿ, ಯುಪಿಒಆರ್ ನಕ್ಷೆ ಮತ್ತು ಚಿತ್ರಗಳನ್ನು ಜೋಡಿಸುವುದು ಅತ್ಯಂತ ಪ್ರಮುಖವಾಗಿದೆ. ಈಗಾಗಲೇ ಸುಮಾರು ಒಂದು ಲಕ್ಷ ಸಂಯೋಜಿತ ಇ-ಖಾತಾಗಳನ್ನು ನೀಡಲಾಗಿದ್ದು, ಪ್ರತಿದಿನವೂ ಈ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 9 ಲಕ್ಷ ಅಂತಿಮ ಇ-ಖಾತಾಗಳು ನೀಡಲಾಗಿದ್ದು, ಪ್ರತಿದಿನ ಸರಾಸರಿ 2,500 ಇ-ಖಾತಾಗಳನ್ನು ನೀಡಲಾಗುತ್ತಿದೆ. ಸರಾಸರಿ ನಿರೀಕ್ಷಾ ಅವಧಿ ಸುಮಾರು 2 ದಿನಗಳಾಗಿದೆ ಎಂದು ಮಾಹಿತಿ ನೀಡಿದರು.

ಇ-ಖಾತಾದಲ್ಲಿ ಲಭ್ಯವಿರುವ ಮಾಹಿತಿ

ಮಾಲೀಕರ ವಿವರ

ಆಸ್ತಿಯ ಎಲ್ಲ ವಿವರ

ಆಸ್ತಿಯ ಚಿತ್ರ

ಮಾಲೀಕರ ಚಿತ್ರ

ಆಸ್ತಿಯ ಜಿಪಿಎಸ್‌ ಅಂಕಿಗಳು

ಆಸ್ತಿಯ ಡಿಜಿಟಲ್ ಮ್ಯಾಪ್, ಸ್ಥಳದ ಚಿತ್ರ

ಆಸ್ತಿಯ ತೆರಿಗೆ, ಬಳಕೆ ವಿವರ

ಬೆಸ್ಕಾಂ ಮೀಟರ್ ಸಂಖ್ಯೆ

ಆಸ್ತಿ ಮಾಲೀಕತ್ವ ಪಡೆದಿರುವ ದಾಖಲೆ ಸಂಖ್ಯೆ


Illegal ‘B Khata’ Registration: Six Officials Suspended…. ಅಕ್ರಮ ಬಿ ಖಾತಾ: ಆರು ಮಂದಿ ಅಮಾನತು

Dereliction of Duty Established: Bommanahalli Sub-division Officials

Illegal ‘B Khata’ Registration: Six Officials Suspended



Bengaluru: The Chief Commissioner of the Greater Bengaluru Authority (GBA) has suspended six staff members from the Revenue Department of the Bengaluru South City Corporation for the illegal registration of ‘B Khatas’.

According to a report submitted by the Joint Commissioner of Bommanahalli, the six officials granted ‘B Khatas’ to applicants who had submitted nothing more than a simple affidavit alongside their applications, bypassing required protocols. Consequently, they have been suspended from service on grounds of grave dereliction of duty. For the purpose of salary disbursement during the inquiry, they have been administratively attached to posts in other municipal corporations.
Acting on a complaint filed by Mr. M. Mohan Babu, the Joint Commissioner conducted an investigation which substantiated that unauthorized ‘B Khatas’ were issued for lands located in the Begur Hobli of Bengaluru South Taluk.

Suspended Officials:

 * Narasimhalu: Assistant Revenue Officer, Begur Sub-division.
 * Bhagyashree: Second Division Assistant (SDA).
 * Balalingaraju: Second Division Assistant (SDA).
 * Shantesh: Deputy Revenue Officer, Bommanahalli Division.
 * Suresh: Assessor, Ward 192.
 * Hemanth Kumar: Assessor.

Details of the Illegal ‘B Khata’ Issuances:

 * Naganathapura Village: ‘B Khata’ issued for 49 sites within 1 Acre 35 Guntas of land in Survey No. 31/2, belonging to Sanskriti Developers.
 * Basavanapura Village: ‘B Khata’ issued for 37 individual sites within 10.12 Guntas of land in Survey No. 48/3, belonging to Rito Vilo Fernandes and others.
 * Begur Village: ‘B Khata’ issued for 52 individual sites within 2 Acres 11 Guntas of land in Survey No. 5/52/53, belonging to Kamalamma and others.
Over 40,000 Illegal ‘A Khatas’
In July 2023, the then Special Commissioner (Finance), Jayaram Raipura, detected that ‘A Khatas’ had been illegally issued for over 40,000 properties within the BBMP (Bruhat Bengaluru Mahanagara Palike) limits.
Investigations revealed that properties eligible only for ‘B Khata’ were issued ‘A Khatas’ by illegally collecting betterment charges and manipulating ‘R Code 130’ within the ‘IFMS’ software. Between 2015 and 2023, a total of ₹898.70 crore was collected across 45,133 cases. Of these, 90% were deemed to be illegal.
Following these findings, Mr. Jayaram was transferred. Although instructions were issued to submit a report to the Special Commissioner (Revenue) to initiate action regarding the illegal ‘A Khatas’, no action has been taken to date.
Would you like me to summarize the specific differences between 'A Khata' and 'B Khata' mentioned in this context?



ALSO READ… BbMp: Cancellation of 'A' Khata for one lakh property!



ಬೊಮ್ಮನಹಳ್ಳಿ ಉಪ ವಿಭಾಗದ ಅಧಿಕಾರಿಗಳಿಂದ ಕರ್ತವ್ಯಲೋಪ ಸಾಬೀತು

ಅಕ್ರಮ ಬಿ ಖಾತಾ: ಆರು ಮಂದಿ ಅಮಾನತು

ಬೆಂಗಳೂರು: ಅಕ್ರಮವಾಗಿ ಬಿ ಖಾತಾ ನೋಂದಣಿ ಮಾಡಿದ್ದ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಕಂದಾಯ ವಿಭಾಗದ ಆರು ಸಿಬ್ಬಂದಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಅಮಾನತುಗೊಳಿಸಿದ್ದಾರೆ.

ಬೊಮ್ಮನಹಳ್ಳಿ ಜಂಟಿ ಆಯುಕ್ತರು ಸಲ್ಲಿಸಿದ ವರದಿಯಂತೆ, ಬಿ ಖಾತಾ ನೀಡುವ ಅರ್ಜಿ ಜೊತೆಗೆ ಕೇವಲ ಪ್ರಮಾಣ ಪತ್ರವನ್ನು ನೀಡಿರುವವರಿಗೆ ಆರು ಜನರು ‘ಬಿ ಖಾತಾ’ವನ್ನು ಮಂಜೂರು ಮಾಡಿದ್ದಾರೆ. ಆದ್ದರಿಂದ, ಗಂಭೀರ ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಿ, ವೇತನ ಬಟವಾಡೆಗೆ ಅವರನ್ನು ಬೇರೆ ನಗರ ಪಾಲಿಕೆಗಳ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗಿದೆ.

ಎಂ. ಮೋಹನ್‌ ಬಾಬು ಅವರ ದೂರಿನಂತೆ, ಜಂಟಿ ಆಯುಕ್ತರು ಪ್ರಕರಣವನ್ನು ತನಿಖೆ ನಡೆಸಿದಾಗ ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯಲ್ಲಿನ ಜಮೀನುಗಳಿಗೆ ಅನಧಿಕೃತವಾಗಿ ಬಿ ಖಾತಾ ಮಾಡಿದ್ದಾರೆ ಎಂಬುದು ಸಾಬೀತಾಗಿದೆ.

ಅಮಾನತುಗೊಂಡವರು: ನರಸಿಂಹಲು, ಸಹಾಯಕ ಕಂದಾಯ ಅಧಿಕಾರಿ, ಬೇಗೂರು ಉಪವಿಭಾಗ; ಭಾಗ್ಯಶ್ರೀ, ದ್ವಿತೀಯ ದರ್ಜೆ ಸಹಾಯಕಿ; ಬಾಲಲಿಂಗರಾಜು, ದ್ವಿತೀಯ ದರ್ಜೆ ಸಹಾಯಕ; ಶಾಂತೇಶ್‌, ಉಪ ಕಂದಾಯ ಅಧಿಕಾರಿ, ಬೊಮ್ಮನಹಳ್ಳಿ ವಿಭಾಗ ಕಂದಾಯ ಅಧಿಕಾರಿ; ಸುರೇಶ್‌ ಮೌಲ್ಯಮಾಪಕ– ವಾರ್ಡ್‌ 192; ಹೇಮಂತ್‌ ಕುಮಾರ್‌, ಮೌಲ್ಯಮಾಪಕ.

ಯಾರಿಗೆ ಎಲ್ಲಿ ಅಕ್ರಮ ಬಿ ಖಾತಾ: ನಾಗನಾಥಪುರ ಗ್ರಾಮದ ಸರ್ವೆ ನಂ. 31/2ರಲ್ಲಿ 1 ಎಕರೆ 35 ಗುಂಟೆಯಲ್ಲಿ ಸಂಸ್ಕೃತಿ ಡೆವಲಪರ್ಸ್‌ಗೆ 49 ನಿವೇಶನಗಳಿಗೆ ಬಿ ಖಾತಾ. ಬಸವನಪುರ. ಬಸವನಪುರ ಗ್ರಾಮದ ಸರ್ವೆ ನಂ. 48/3ರಲ್ಲಿನ 10.12 ಗುಂಟೆ ಜಮೀನನಲ್ಲಿ ರಿಟೋ ವೈಲೋ ಫರ್ನಾಂಡೀಸ್‌ ಮತ್ತು ಇತರರಿಗೆ 37 ಬಿಡಿ ನಿವೇಶನಗಳಿಗೆ ಬಿ ಖಾತಾ. ಬೇಗೂರು ಗ್ರಾಮದ ಸರ್ವೆ ನಂ. 5/52/53ರಲ್ಲಿ 2 ಎಕರೆ 11 ಗುಂಟೆಯಲ್ಲಿ ಕಮಲಮ್ಮ ಮತ್ತು ಇತರರಿಗೆ 52 ಬಿಡಿ ನಿವೇಶನಗಳಿಗೆ ಬಿ ಖಾತಾ. 

 

40 ಸಾವಿರಕ್ಕೂ ಹೆಚ್ಚು ಅಕ್ರಮ ಎ ಖಾತಾ

ಬಿಬಿಎಂಪಿ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ಮಾಡಿಕೊಟ್ಟಿರುವುದನ್ನು 2023ರ ಜುಲೈನಲ್ಲಿ ಅಂದಿನ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಪತ್ತೆ ಹಚ್ಚಿದ್ದರು.

ಬಿ ಖಾತಾಗೆ ಅರ್ಹವಾಗಿರುವ ಆಸ್ತಿಗಳಿಗೆ ಅಕ್ರಮವಾಗಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು, ‘ಐಎಫ್‌ಎಂಎಸ್‌’ ತಂತ್ರಾಂಶದ ‘ಆರ್‌ ಕೋಡ್‌ 130’ ಬಳಸಿ ‘ಎ’  ಖಾತಾ ನೀಡಿರುವುದು ತನಿಖೆಯಿಂದ ಗೊತ್ತಾಗಿತ್ತು. 2015ರಿಂದ 2023ರವರೆಗೆ ಒಟ್ಟು 45,133 ಪ್ರಕರಣಗಳಲ್ಲಿ ₹898.70 ಕೋಟಿ ಪಾವತಿಸಿಕೊಳ್ಳಲಾಗಿದೆ. ಇವುಗಳಲ್ಲಿ ಶೇ 90ರಷ್ಟು ಪ್ರಕರಣಗಳು ಅಕ್ರಮ ಎಂದು ಪರಿಗಣಿಸಲಾಗಿತ್ತು. ಆ ಸಂದರ್ಭದಲ್ಲಿ ಜಯರಾಂ ಅವರನ್ನು ವರ್ಗಾಯಿಸಲಾಗಿತ್ತು. ಅಕ್ರಮ ಎ ಖಾತಾದ ಬಗ್ಗೆ ಕ್ರಮ ಕೈಗೊಳ್ಳಲು ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ವರದಿ ನೀಡಲು ಸೂಚಿಸಲಾಗಿತ್ತು. ಆದರೆ, ಈವರೆಗೂ ಕ್ರಮವಾಗಿಲ್ಲ.

Wednesday, December 3, 2025

Bengaluru: Changes to Names and Boundaries of 20 Wards… ಬೆಂಗಳೂರು 20 ವಾರ್ಡ್ ವ್ಯಾಪ್ತಿ, ಹೆಸರು ಬದಲು

Five City Corporations: Modifications to Final Notification

Bengaluru: Changes to Names and Boundaries of 20 Wards



Bengaluru: The Urban Development Department has issued a modification to the final notification regarding the wards of the five City Corporations falling under the Greater Bengaluru Area (GBA), changing the boundaries and names of certain wards.

A final notification finalizing 369 wards across the five City Corporations was originally issued on November 19. However, following objections raised by MLAs and the public, the government considered several requests, made necessary changes, and issued a fresh notification on December 1.

Details of Modifications by Corporation:

1. Bengaluru Central City Corporation:

 * Boundary Changes: The boundaries of Ward 15 (Indiranagar) and Ward 16 (New Thippasandra) have been modified.

2. Bengaluru North City Corporation:

 * Yelahanka Assembly Constituency:

   * Ward 1 (Raja Venkatappa Ward) renamed to Ward 3 (Chowdeshwari Ward).

   * Ward 2 (Akash Ward) renamed to Ward 2 (Aero City Ward).

   * Ward 3 (Yelahanka Old Town) renamed to Ward 1 (Raja Venkatappa Ward).

 * Sarvagnanagar Assembly Constituency:

   * Ward 31 (Kalya Nagar) corrected/renamed to Ward 31 (Kalyan Nagar).

3. Bengaluru South City Corporation:

 * Padmanabhanagar Assembly Constituency:

   * Ward 3 (Kumaraswamy Ward) renamed to Ward 3 (Yarab Nagar).

 * Boundary Changes: The boundaries of Ward 56 (Doresanipalya), Ward 60 (Bilekahalli), Ward 65 (Garvebhavipalya), and Ward 66 (Singasandra) have been altered.

4. Bengaluru East City Corporation:

 * K.R. Puram Assembly Constituency:

   * Ward 8 (T.C. Palya) renamed to Anandapura.

   * Ward 10 (Medahalli) renamed to Basavanapura.

   * Ward 11 (Basavanapura) renamed to Krishna Nagar.

   * Ward 12 (Chikka Devasandra) renamed to Devasandra.

   * Ward 13 (Devasandra) renamed to Rajarajeshwari Temple Ward.

 * Mahadevapura Assembly Constituency:

   * Ward 49 (Shivanasamudra Ward) renamed to Dodda Kannelli Ward.

5. Bengaluru West City Corporation:

 * Yeshwantpur Assembly Constituency:

   * Ward 19 (Kengeri) renamed to Shivanapalya.

   * Ward 20 (Hemmigepura) renamed to Kengeri Fort Ward.

   * Ward 21 (Mallasandra) renamed to Kengeri.

Summary of Changes

 * 14 Wards: Names have been changed.
 * 6 Wards: Boundaries have been modified.

Ward Distribution by Corporation and Assembly Constituency

1. Bengaluru Central City Corporation (63 Wards)

 * Chamarajpet: 10 Wards

 * Chickpet: 12 Wards

 * C.V. Raman Nagar: 13 Wards

 * Gandhinagar: 10 Wards

 * Shantinagar: 10 Wards

 * Shivajinagar: 8 Wards

2. Bengaluru North City Corporation (72 Wards)

 * Dasarahalli: 8 Wards

 * Pulakeshinagar: 11 Wards

 * Byatarayanapura: 7 Wards

 * Yelahanka: 14 Wards

 * Rajarajeshwarinagar: 5 Wards

 * Sarvagnanagar: 16 Wards

 * Hebbal: 11 Wards

3. Bengaluru South City Corporation (72 Wards)

 * Anekal: 1 Ward

 * Jayanagar: 10 Wards

 * Padmanabhanagar: 6 Wards

 * BTM Layout: 14 Wards

 * Bengaluru South: 19 Wards

 * Bommanahalli: 20 Wards

 * Mahadevapura: 1 Ward

 * Yeshwantpur: 1 Ward

4. Bengaluru East City Corporation (50 Wards)

 * K.R. Puram: 27 Wards

 * Mahadevapura: 23 Wards

5. Bengaluru West City Corporation (112 Wards)

 * Govindarajanagar: 13 Wards

 * Dasarahalli: 10 Wards

 * Padmanabhanagar: 8 Wards

 * Basavanagudi: 10 Wards

 * Malleshwaram: 10 Wards

 * Mahalakshmi Layout: 12 Wards

 * Yeshwantpur: 11 Wards

 * Rajarajeshwarinagar: 14 Wards

 * Rajajinagar: 11 Wards

 * Vijayanagar: 13 Wards


What is your City Corporation? Which ward is your area under? Click here to get information like your assembly constituency….

ALSO READ…. Greater Bengaluru: Wards of five City corporations published… ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ ಕರಡು ಪ್ರಕಟ

ALSO Read… GBA to Control over city administration ಜಿಬಿಎ ರಚನೆ; ನಗರ ಆಡಳಿತದ ಮೇಲೆ ಹಿಡಿತ

ALSO READ…. ಜಿಬಿಎ ಸಭಾಂಗಣವಾಗಲಿದೆ ಕೆಂಪೇಗೌಡ ಪೌರ ಸಭಾಂಗಣ* Two zones each in the five municipal corporations

ALSO read….. 450 wards in five municipal corporations… ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್‌

Work of 5 City Corporations under GBA… ಜಿಬಿಎ ನಿಗಾದಡಿ 5 ನಗರ ಪಾಲಿಕೆಗಳ ಕಾರ್ಯ

Also read…. *Greater Bengaluru Authority 5 City Corporations formed…* *ಇತಿಹಾಸ ಪುಟ ಸೇರಿದ ಬಿಬಿಎಂಪಿ, ಜಿಬಿಎಗೆ ಆಡಳಿತ ಯಂತ್ರ*

Also READ… Administrative Structure of the 5 City corporations… 5 ನಗರ ಪಾಲಿಕೆಗಳ ಆಡಳಿತ ಯಂತ್ರ ಹೇಗಿದೆ?

ALSO Read Bangalore Administration History….. From Municipal Board to 5 City Corporation.. ಮುನಿಸಿಪಲ್‌ ಬೋರ್ಡ್‌ನಿಂದ 5 ನಗರ ಪಾಲಿಕೆವರೆಗೆ..


ಐದು ನಗರ ಪಾಲಿಕೆ: ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಡು. ಬದಲಾದ ವಾರ್ಡ್ ಗಳ ವಿವರ ಇಲ್ಲಿದೆ 

20 ವಾರ್ಡ್ ವ್ಯಾಪ್ತಿ, ಹೆಸರು ಬದಲು 

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ಗಳ ಅಂತಿಮ ಅಧಿಸೂಚನೆಗೆ ಮಾರ್ಪಾಟು ಮಾಡಿರುವ ನಗರಾಭಿವೃದ್ಧಿ ಇಲಾಖೆ, ಕೆಲವು
ವಾರ್ಡ್ ಗಳ ವ್ಯಾಪ್ತಿ ಹಾಗೂ ಹೆಸರನ್ನು ಬದಲಾಯಿಸಿ ಅಧಿಸೂಚಿಸಿದೆ.
ಐದು ನಗರ ಪಾಲಿಕೆಗಳ 369 ವಾರ್ಡ್ ಅಂತಿಮಗೊಳಿಸಿ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದರ ಬಗ್ಗೆ ಶಾಸಕರು ಹಾಗೂ ಸಾರ್ವಜನಿಕರಿಂದ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲಿ ಕೆಲವನ್ನು ಪರಿಗಣಿಸಿ, ಬದಲಾವಣೆ ಮಾಡಿ ಡಿ.1ರಂದು ಅಧಿಸೂಚನೆ ಹೊರಡಿಸಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 15- ಇಂದಿರಾನಗರ, 16- ನ್ಯೂ ತಿಪ್ಪಸಂದ್ರ ವಾರ್ಡ್ ಗಳ ಗಡಿಯನ್ನು ಮಾರ್ಪಡಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಯಲಹಂಕ ವಿಧಾನಸಭೆ ಕ್ಷೇತ್ರದ ವಾರ್ಡ್ 1 ರಾಜಾ ವೆಂಕಟಪ್ಪ ವಾರ್ಡ್ ಅನ್ನು ವಾರ್ಡ್ 3 ಚೌಡೇಶ್ವರಿ ವಾರ್ಡ್, ವಾರ್ಡ್ 2 ಆಕಾಶ್ ವಾರ್ಡ್ ಅನ್ನು ವಾರ್ಡ್ 2 ಏರೋ ಸಿಟಿ ವಾರ್ಡ್ ಹಾಗೂ ವಾರ್ಡ್ 3 ಯಲಹಂಕ ಓಲ್ಡ್ ಟೌನ್ ಅನ್ನು 
ವಾರ್ಡ್ 1 ರಾಜಾ ವೆಂಕಟಪ್ಪ ವಾರ್ಡ್ ಎಂದು ಬದಲಿಸಲಾಗಿದೆ. ಸರ್ವಜ್ಞ ನಗರ ವಿಧಾನಸಭೆ ಕ್ಷೇತ್ರದ ವಾರ್ಡ್ 31 ಕಲ್ಯ ನಗರ ವಾರ್ಡ್ ಅನ್ನಿ ವಾರ್ಡ್ 31 ಕಲ್ಯಾಣ ನಗರ ಎಂದು ಬದಲಿಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡ್ 3 ಕುಮಾರಸ್ವಾಮಿ ವಾರ್ಡ್ ಅನ್ನು ವಾರ್ಡ್ 3 ಯಾರಬ್ ನಗರ ಎಂದು ಬದಲಿಸಲಾಗಿದೆ. 56- ದೊರೆಸಾನಿಪಾಳ್ಯ, 60- ಬಿಳೇಕಹಳ್ಳಿ, 65- ಗಾರ್ವೆಬಾವಿ ಪಾಳ್ಯ, 66- ಸಿಂಗಸಂದ್ರ ವಾರ್ಡ್ ಗಳ ಗಡಿಯನ್ನು ಬದಲಾಯಿಸಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದ ವಾರ್ಡ್ 8- ಟಿ.ಸಿ. ಪಾಳ್ಯವನ್ನು ಆನಂದಪುರ, ವಾರ್ಡ್ 10- ಮೇಡಹಳ್ಳಿಯನ್ನು ಬಸವನಪುರ, ವಾರ್ಡ್ 11- ಬಸವನಪುರವನ್ನು ಕೃಷ್ಣನಗರ, ವಾರ್ಡ್ 12- ಚಿಕ್ಕ ದೇವಸಂದ್ರವನ್ನು ದೇವಸಂದ್ರ, ವಾರ್ಡ್ 13- ದೇವಸಂದ್ರವನ್ನು ರಾಜರಾಜೇಶ್ವರಿ ದೇವಸ್ಥಾನ ವಾರ್ಡ್ ಹಾಗೂ ಮಹದೇವಪುರ   
ವಿಧಾನಸಭೆ ಕ್ಷೇತ್ರದ ವಾರ್ಡ್ 49- ಶಿವನಸಮುದ್ರ ವಾರ್ಡ್ ಅನ್ನು ದೊಡ್ಡ ಕನ್ನೆಲ್ಲಿ ವಾರ್ಡ್ ಆಗಿ ಹೆಸರಿಸಲಾಗಿದೆ. 
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದ ವಾರ್ಡ್ 19- ಕೆಂಗೇರಿಯನ್ನು ಶಿವನಪಾಳ್ಯ, ವಾರ್ಡ್ 20- ಹೆಮ್ಮಿಗೆಪುರವನ್ನು ಕೆಂಗೇರಿ ಕೋಟೆ ವಾರ್ಡ್ ಹಾಗೂ ವಾರ್ಡ್ 21- ಮಲ್ಲಸಂದ್ರವನ್ನು ಕೆಂಗೇರಿಯಾಗಿ ಹೆಸರು
ಬದಲಿಸಿ ಅಧಿಸೂಚಿಸಲಾಗಿದೆ.


14 ವಾರ್ಡ್; ಹೆಸರು ಬದಲಾವಣೆ ಆಗಿರುವ ವಾರ್ಡ್ ಗಳು 
6 ವಾರ್ಡ್; ಗಡಿ ಬದಲಾವಣೆ ಆಗಿರುವ ವಾರ್ಡ್ ಗಳು 



ಬೆಂಗಳೂರು ಕೇಂದ್ರ ನಗರ ಪಾಲಿಕೆ; 63 ವಾರ್ಡ್‌

ವಿಧಾನಸಭೆ ಕ್ಷೇತ್ರ: ಚಾಮರಾಜಪೇಟೆ– 10 ವಾರ್ಡ್‌, ಚಿಕ್ಕಪೇಟೆ– 12 ವಾರ್ಡ್‌, ಸಿ.ವಿ. ರಾಮನ್‌ ನಗರ– 13 ವಾರ್ಡ್‌, ಗಾಂಧಿನಗರ– 10 ವಾರ್ಡ್‌, ಶಾಂತಿನಗರ– 10 ವಾರ್ಡ್‌, ಶಿವಾಜಿನಗರ– 8 ವಾರ್ಡ್‌.

 

ಬೆಂಗಳೂರು ಉತ್ತರ ನಗರ ಪಾಲಿಕೆ;72 ವಾರ್ಡ್‌

ವಿಧಾನಸಭೆ ಕ್ಷೇತ್ರ: ದಾಸರಹಳ್ಳಿ– 8 ವಾರ್ಡ್‌, ಪುಲಕೇಶಿನಗರ– 11 ವಾರ್ಡ್‌, ಬ್ಯಾಟರಾಯನಪುರ– 7 ವಾರ್ಡ್‌, ಯಲಹಂಕ– 14 ವಾರ್ಡ್‌, ರಾಜರಾಜೇಶ್ವರಿನಗರ– 5 ವಾರ್ಡ್‌, ಸರ್ವಜ್ಞನಗರ– 16 ವಾರ್ಡ್‌; ಹೆಬ್ಬಾಳ– 11 ವಾರ್ಡ್‌.

 

ಬೆಂಗಳೂರು ದಕ್ಷಿಣ ನಗರ ಪಾಲಿಕೆ; 72 ವಾರ್ಡ್‌‌

ವಿಧಾನ ಸಭೆ ಕ್ಷೇತ್ರ: ಆನೇಕಲ್‌– 1 ವಾರ್ಡ್‌, ಜಯನಗರ– 10 ವಾರ್ಡ್‌, ಪದ್ಮನಾಭನಗರ– 6 ವಾರ್ಡ್‌, ಬಿಟಿಎಂ ಲೇಔಟ್‌– 14 ವಾರ್ಡ್, ಬೆಂಗಳೂರು ದಕ್ಷಿಣ– 19 ವಾರ್ಡ್‌, ಬೊಮ್ಮನಹಳ್ಳಿ– 20 ವಾರ್ಡ್‌, ಮಹದೇವಪುರ– 1 ವಾರ್ಡ್‌, ಯಶವಂತಪುರ– 1 ವಾರ್ಡ್‌.

 

ಬೆಂಗಳೂರು ಪೂರ್ವ ನಗರ ಪಾಲಿಕೆ;50 ವಾರ್ಡ್‌

ವಿಧಾನಸಭೆ ಕ್ಷೇತ್ರ: ಕೆ.ಆರ್‌ ಪುರ– 27 ವಾರ್ಡ್‌, ಮಹದೇವಪುರ– 23 ವಾರ್ಡ್.

 

ಬೆಂಗಳೂರು ಪಶ್ಚಿಮ ನಗರ ಪಾಲಿಕೆ;112 ವಾರ್ಡ್‌

ವಿಧಾನಸಭೆ ಕ್ಷೇತ್ರ: ಗೋವಿಂದರಾಜನಗರ– 13 ವಾರ್ಡ್‌, ದಾಸರಹಳ್ಳಿ– 10 ವಾರ್ಡ್‌, ಪದ್ಮನಾಭನಗರ– 8 ವಾರ್ಡ್, ಬಸವನಗುಡಿ–10 ವಾರ್ಡ್, ಮಲ್ಲೇಶ್ವರ– 10 ವಾರ್ಡ್, ಮಹಾಲಕ್ಷ್ಮಿ ಲೇಔಟ್‌– 12 ವಾರ್ಡ್, ಯಶವಂಪುರ– 11 ವಾರ್ಡ್, ರಾಜರಾಜೇಶ್ವರಿನಗರ– 14 ವಾರ್ಡ್, ರಾಜಾಜಿನಗರ– 11 ವಾರ್ಡ್‌, ವಿಜಯನಗರ– 13 ವಾರ್ಡ್‌.