Monday, April 10, 2023

Karnataka Assembly Rewind-1 The first house of the country

Karnataka Assembly Rewind-1 The first house of the country


Kere Manjunath ಕೆರೆ ಮಂಜುನಾಥ್

For the first time in the country, a state house was formed in Karnataka. But then Mysore was a state. Maharaja Chamarajendra Wodeyar of Mysore had formed the Government House (Assembly) and issued an order on August 25, 1881, with the intention that the citizens should participate in the policy making of the government. In March 1881, Maharaja Chamarajendra Wodeyar assumed the power of Mysore State. Before this transfer of power, in 1879, the then Chief Commissioner of Mysore, J.D. Gordon proposed to the British-Indian Government that a debating assembly should be formed of retired officers, representatives of various classes and peoples. However, without specific legislative, financial or administrative powers, the creation of a debating house was not consented to. Also, the Viceroy was also of the opinion that it was not right to introduce something like this as no such organization had been attempted till now.

However, Maharaja Chamarajendra Wodeyar created the country's first State Assembly within five months of assuming office. It has the distinction of being the first house not only for the state but also in the country. This House was formed with the objective of adopting important measures in governance with the opinion of the people. This made it mandatory for the government to submit its policies and objectives to the public. Representatives of landowners and traders from all parts of the state could participate in this annual meeting.

The first 'House of Representatives' was held on 7th October 1881. It became the first house of the country. Its representatives were elected in three ways. One- Local Fund Boards and their District Representatives. Two- one or two from each taluk covering all general information between people. Three- Three or four leading traders from each district. These representatives had to participate voluntarily.

ವಿಧಾನಸಭೆ ಮೆಲುಕು-1: ಕರ್ನಾಟಕದಲ್ಲಿ ದೇಶದ ಪ್ರಥಮ ಸದನ

ಕೆರೆ ಮಂಜುನಾಥ್

ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯವೊಂದರ ಸದನ ರಚನೆಯಾಗಿದ್ದು ಕರ್ನಾಟಕದಲ್ಲಿ. ಆದರೆ ಅಂದು ಮೈಸೂರು ರಾಜ್ಯವಾಗಿತ್ತು. ನಾಗರಿಕರು ಸರ್ಕಾರದ ನೀತಿ ರಚನೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಸರ್ಕಾರದ ಸದನ (ಸಭೆ) ರಚಿಸಿ, 1881ರ ಆಗಸ್ಟ್ 25ರಂದು ಆದೇಶ ಹೊರಡಿಸಿದ್ದರು. 1881ರ ಮಾರ್ಚ್‌ನಲ್ಲಿ ಮಹಾರಾಜ ಚಾಮರಾಜೇಂದ್ರ ಒಡೆಯರ್ ಮೈಸೂರು ರಾಜ್ಯದ ಅಧಿಕಾರವನ್ನು ಪಡೆದುಕೊಂಡರು. ಈ ಅಧಿಕಾರ ಹಸ್ತಾಂತರಕ್ಕೆ ಮುನ 1879ರಲ್ಲಿ ಅಂದಿನ ಮೈಸೂರು ಮುಖ್ಯ ಆಯುಕ್ತ ಜೆ.ಡಿ. ಗೋರ್ಡಾನ್ ಅವರು ನಿವೃತ್ತ ಅಧಿಕಾರಿಗಳು, ಹಲವು ವರ್ಗ ಹಾಗೂ ಜನರ ಪ್ರತಿನಿಧಿಗಳ ಚರ್ಚಾ ಸದನವನ್ನು ರಚಿಸಬೇಕು ಎಂದು ಬ್ರಿಟೀಷ್-ಭಾರತ ಸರ್ಕಾರಕ್ಕೆ ಪ್ರಸ್ತಾಪಿಸಿದ್ದರು. ಆದರೆ, ನಿರ್ದಿಷ್ಟ ಶಾಸನ, ಆರ್ಥಿಕ ಅಥವಾ ನಿರ್ವಾಹಕ ಅಧಿಕಾರ ಇಲ್ಲದೆ ಚರ್ಚಾ ಸದನ ರಚಿಸಲು ಸಮ್ಮತಿ ನೀಡಿರಲಿಲ್ಲ. ಅಲ್ಲದೆ, ಈವರೆಗೂ ಇಂತಹ ಯಾವುದೇ ಸಂಸ್ಥೆಗಳನು ಪ್ರಯತ್ನಿಸಿಲ್ಲವಾದ್ದರಿಂದ ಇಂತಹದ್ದನ್ನು ಪರಿಚಯಿಸುವುದು ಸರಿಯಲ್ಲ ಎಂದು ವೈಸ್‌ರಾಯ್ ಕೂಡ ಅಭಿಪ್ರಾಯಪಟ್ಟಿದ್ದರು.

ಆದರೆ, ಮಹಾರಾಜ ಚಾಮರಾಜೇಂದ್ರ ಒಡೆಯರ್ ಅಧಿಕಾರ ವಹಿಸಿಕೊಂಡ ಐದು ತಿಂಗಳಲ್ಲೇ ದೇಶದ ಪ್ರಥಮ ರಾಜ್ಯ ಸದನವನು ರಚಿಸಿ ಆದೇಶಿಸಿದರು. ಇದು ರಾಜ್ಯಕ್ಕೆ ಮಾತ್ರವಲ್ಲ ದೇಶದಲ್ಲೇ ಪ್ರಥಮ ಸದನ ಎಂಬ ಹೆಗ್ಗಳಿಕೆ. ಜನರ ಅಭಿಪ್ರಾಯದೊಂದಿಗೆ ಆಡಳಿತದಲ್ಲಿ ಪ್ರಮುಖ ಕ್ರಮಗಳನು ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಸದನ ರಚಿಸಲಾಯಿತು. ಈ ಮೂಲಕ ತನ ನೀತಿಗಳು ಹಾಗೂ ಉದ್ದೇಶಗಳನ್ನು ಸಾರ್ವಜನಿಕರಿಗೆ ಒಪ್ಪಿಸುವುದು ಸರ್ಕಾರದ ಕಡ್ಡಾಯವಾಯಿತು. ವಾರ್ಷಿಕವಾಗಿ ನಡೆಯುವ ಈ ಸದನದಲ್ಲಿ ರಾಜ್ಯದ ಎಲ್ಲ ಭಾಗದಲ್ಲಿರುವ  ಭೂಮಾಲೀಕರು ಹಾಗೂ ವ್ಯಾಪಾರಿಗಳ ಪ್ರತಿನಿಧಿಗಳು ಭಾಗವಹಿಸಬಹುದಾಗಿತ್ತು.

1881ರ ಅಕ್ಟೋಬರ್ 7ರಂದು ಪ್ರಥಮ ‘ಪ್ರತಿನಿಧಿಗಳ ಸದನ’ ನಡೆಯಿತು. ಇದು ದೇಶದ ಪ್ರಥಮ ಸದನವಾಯಿತು. ಇದರ ಪ್ರತಿನಿಧಿಗಳು ಮೂರು ರೀತಿಯಿಂದ ಆಯ್ಕೆಯಾಗುತ್ತಿದ್ದರು.  ಒಂದು- ಸ್ಥಳೀಯ ನಿಧಿ ಮಂಡಳಿಗಳು ಮತ್ತು ಅವರ  ಜಿಲ್ಲಾ ಪ್ರತಿನಿಧಿಗಳು. ಎರಡು- ಜನರ ನಡುವಿರುವ ಎಲ್ಲ ಸಾಮಾನ್ಯ ಮಾಹಿತಿಯನೂ ಒಳಗೊಂಡಿರುವ ಪ್ರತಿ ತಾಲೂಕಿನಿಂದ ಒಬ್ಬರು ಅಥವಾ ಇಬ್ಬರು. ಮೂರು- ಪ್ರತಿ ಜಿಲ್ಲೆಯಿಂದ ಮುಂಚೂಣಿಯಲ್ಲಿರುವ ಮೂರು ಅಥವಾ ನಾಲ್ಕು ವ್ಯಾಪಾರಿಗಳು. ಈ ಪ್ರತಿನಿಧಿಗಳು ಸ್ವಯಂಪ್ರೇರಿತವಾಗಿ ಭಾಗವಹಿಸಬೇಕಿತ್ತು.

ಕನ್ನಡಪ್ರಭದಲ್ಲಿ 2013ರಲ್ಲಿ ಪ್ರಕಟವಾದ ಮೆಲುಕು ಸರಣಿ...

 

No comments:

Post a Comment