Karnataka Assembly Rewind-3: There was no right to vote, there were only two ministers
Kere Manjunath ಕೆರೆ ಮಂಜುನಾಥ್
Although the country's first House of Representatives had statutory status, members did not have voting rights. Members of this House were initially not given any substantive rights. But, it is not limited to listening to the speech of Diwan. Suggestions could have been made in public interest. Can contribute to the management of activities in all branches of administration.
This House had no right to vote. But the legislative measures had to be brought before the members in the House for the first time. Through that their opinion was collected. The main feature of the House of Representatives was that it provided representation to the government by its members. In the early 19th century there was a demand to nominate members of the House to the Council of Maharajas. In 1940, the government allowed such participation. The Government of Mysore Act of 1940 allowed the Maharaja to appoint two members as Ministers to the Council of Ministers. One of them was to be appointed by the House and the other by the Parishad.
Because, before this in 1907 Vidhana Parishat started. It was intended to appoint non-officials with practical experience and local knowledge to assist the government in formulating laws and regulations. Dewan was the president. This Parishad had not less than 10 and not more than 15 members. The government was nominating for it. Of these, one out of five should be non-officials. In 1923, the maximum number was raised to 50, allowing 60 per cent non-official members. Mysore University, commerce, traders, planters were given special representation. If they were not selected, the government would nominate them, reserving seats for Muslims, Christians and backward classes. In 1940, the maximum size of the Parishad was further increased, and the Maharaja was given the power to appoint some here and there from the House.
ವಿಧಾನಸಭೆ ಮೆಲುಕು-3: ಮತದಾನದ ಹಕ್ಕಿರಲಿಲ್ಲ, ಇದ್ದದ್ದು ಇಬ್ಬರೇ ಸಚಿವರು
ಕೆರೆ ಮಂಜುನಾಥ್
ದೇಶದ ಪ್ರಥಮ ಪ್ರತಿನಿಧಿಗಳ ಸದನಕ್ಕೆ ಶಾಸನಬದ್ಧ ಸ್ಥಾನಮಾನ ಲಭ್ಯವಾದರೂ ಸದಸ್ಯರಿಗೆ ಮತದಾನದ ಹಕ್ಕಿರಲಿಲ್ಲ. ಈ ಸದನದ ಸದಸ್ಯರಿಗೆ ಪ್ರಾರಂಭಿಕವಾಗಿ ಯಾವುದೇ ರೀತಿಯ ಗುರುತರವಾದ ಹಕ್ಕುಗಳನ್ನು ನೀಡಿರಲಿಲ್ಲ. ಆದರೆ, ದಿವಾನರ ಭಾಷಣವನ್ನು ಆಲಿಸುವುದಕ್ಕೆ ಮಾತ್ರ ಸೀಮಿತವಾಗಿರಲೂ ಇಲ್ಲ. ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಸಲಹೆಗಳನ್ನು ನೀಡಬಹುದಿತ್ತು. ಆಡಳಿತದ ಎಲ್ಲ ಶಾಖೆಗಳಲ್ಲಿನ ಕಾರ್ಯಕಲಾಪಗಳ ನಿರ್ವಹಣೆಗೆ ಕೊಡುಗೆ ನೀಡಬಹುದಿತ್ತು.
ಈ ಸದನಕ್ಕೆ ಮತದಾನ ಮಾಡುವ ಹಕ್ಕಿರಲಿಲ್ಲ. ಆದರೆ ಶಾಸನಬದ್ಧವಾದ ಕ್ರಮಗಳನು ಪ್ರಥಮ ಬಾರಿಗೆ ಸದನದಲ್ಲಿ ಸದಸ್ಯರ ಮುಂದಿಡಬೇಕಿತ್ತು. ಆ ಮೂಲಕ ಅವರ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. ಜನಪ್ರತಿನಿಧಿಗಳ ಸದನದ ಮುಖ್ಯ ವೈಶಿಷ್ಟ್ಯವೆಂದರೆ ಅದು ಸದಸ್ಯರಿಂದ ಸರ್ಕಾರಕ್ಕೆ ಪ್ರತಿನಿಧಿತ್ವ ಒದಗಿಸುವುದಾಗಿತ್ತು. 19ನೇ ಶತಮಾನದ ಆರಂಭದಲ್ಲಿ ಮಹಾರಾಜರ ಕೌನ್ಸಿಲ್‌ಗೆ ಸದನದ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆಂಬ ಒತ್ತಾಯವಿತ್ತು. 1940ರಲ್ಲಿ ಇಂತಹ ಭಾಗವಹಿಸುವಿಕೆಗೆ ಸರ್ಕಾರ ಅನುಮತಿ ನೀಡಿತು. 1940ರ ಮೈಸೂರು ಸರ್ಕಾರದ ಕಾಯಿದೆಯಲ್ಲಿ ಇಬ್ಬರು ಸದಸ್ಯರನ್ನು ಮಂತ್ರಿಗಳ ಕೌನ್ಸಿಲ್‌ಗೆ ಸಚಿವರನಾಗಿ ನೇಮಿಸಲು ಮಹಾರಾಜರಿಗೆ ಅನುಮತಿ ನೀಡಲಾಯಿತು. ಇದರಲ್ಲಿ ಒಬ್ಬರು ಸದನ ಹಾಗೂ ಮತ್ತೊಬ್ಬರು ಪರಿಷತ್‌ನಿಂದ ನೇಮಕವಾಗಬೇಕಿತ್ತು.
ಏಕೆಂದರೆ ಇದಕ್ಕೂ ಮುನ 1907ರಲ್ಲಿ ವಿಧಾನಪರಿಷತ್ ಆರಂಭವಾಗಿತ್ತು. ಅಧಿಕಾರೇತರ ಪ್ರಾಯೋಗಿಕ ಅನುಭವ ಮತ್ತು ಸ್ಥಳೀಯ ಜ್ಞಾನ ಹೊಂದಿರುವವರನು ನೇಮಿಸಿ ಸರ್ಕಾರಕ್ಕೆ ಕಾನೂನು ಮತ್ತು ನಿಯಮ ರೂಪಿಸಲು ಸಹಕಾರ ನೀಡುವ ಉದ್ದೇಶ ಇದರದ್ದಾಗಿತ್ತು. ದಿವಾನರು ಅಧ್ಯಕ್ಷರಾಗಿದ್ದರು. ಈ ಪರಿಷತ್‌ನಲ್ಲಿ 10ಕ್ಕಿಂತ ಕಡಿಮೆ ಇಲ್ಲದ ಹಾಗೂ 15ಕ್ಕಿಂತ ಹೆಚ್ಚು ಸದಸ್ಯರು ಇರುವಂತಿರಲಿಲ್ಲ. ಸರ್ಕಾರ ಇದಕ್ಕೆ ನಾಮನಿರ್ದೇಶನ ಮಾಡುತ್ತಿತ್ತು. ಇದರಲ್ಲಿ ಐವರಲ್ಲಿ ಒಬ್ಬರು ಅಧಿಕಾರೇತರರಾಗಿರಬೇಕಿತ್ತು. 1923ರಲ್ಲಿ ಗರಿಷ್ಠ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಿ, ಶೇ.60ರಷ್ಟು ಅಧಿಕಾರೇತರ ಸದಸ್ಯರಿಗೆ ಅವಕಾಶ ಮಾಡಿಕೊಡಲಾಯಿತು. ಮೈಸೂರು ವಿವಿ, ವಾಣಿಜ್ಯ, ವ್ಯಾಪಾರಿ, ಪ್ಲಾಂಟರ್‌ಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಯಿತು. ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದುಳಿದ ವರ್ಗಕ್ಕೆ ಸ್ಥಾನ ಮೀಸಲಿರಿಸಿ, ಅವರು ಆಯ್ಕೆಯಾಗದೆ ಹೋದರೆ ಸರ್ಕಾರವೇ ನಾಮನಿರ್ದೇಶನ ಮಾಡುತ್ತಿತ್ತು. 1940ರಲ್ಲಿ ಪರಿಷತ್‌ನ ಗರಿಷ್ಠ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿ, ಸದನದಿಂದ ಇಲ್ಲಿಗೆ ಕೆಲವರನು ನೇಮಿಸುವ ಅಧಿಕಾರವನ್ನು ಮಹಾರಾಜರಿಗೆ ನೀಡಲಾಯಿತು.
No comments:
Post a Comment