Monday, April 10, 2023

Karnataka Assembly Rewind- 2: Only those who pay tax are voters

Karnataka Assembly Rewind- 2: Only those who pay tax are voters


Kere Manjunath  ಕೆರೆ ಮಂಜುನಾಥ್

Ten years after the country's first 'House of Representatives' started on October 7, 1881, i.e. in 1891, elections were held for this House. Payers of certain revenue at the taluk level and graduates of Indian universities were eligible to vote and become members. Each taluk was fixed with the same number of members. Those who had these qualifications met annually in each taluk, and elected the members assigned to the taluk from among them.

Local organizations and associations could also send their representatives. The voting age was fixed at 18 in the wake of positive response to this process. Only those who completed 18 years of age could be elected as taluk members. In 1924, the age of candidates was increased from 18 to 21 years. In 1940, this year became 25.

In 1894, there was a further change in this election process. Only local bodies with a population of more than five thousand were allowed to send their representatives. Graduates who did not own land could not become members. The term of Taluk members was fixed at three years. In 1918 the landed property entitlement was abolished. In 1919, the terms of all these members were increased to three years, allowing for greater representation from local bodies. In 1923, the term of the House of Representatives was fixed at three years by making rules.

 In 1932, the number of taluk members was redistributed on the basis of population. Election of members from Bangalore and Mysore city bodies was introduced as early as 1932. Established in 1881, the Executive Order of the House of Representatives functioned until 1923. In 1923 the House of Representatives was given statutory status by notification of rules by the Maharaja.

ವಿಧಾನಸಭೆ ಮೆಲುಕು-2: ಕಂದಾಯ ಕಟ್ಟಿದವರು ಮಾತ್ರ ಮತದಾರರು

ಕೆರೆ ಮಂಜುನಾಥ್

ದೇಶದ ಪ್ರಥಮ ‘ಪ್ರತಿನಿಧಿಗಳ ಸದನ’ 1881ರ ಅಕ್ಟೋಬರ್ 7ರಂದು ಆರಂಭವಾದ ಹತ್ತು ವರ್ಷಗಳ ನಂತರ ಅಂದರೆ 1891ರಲ್ಲಿ ಈ ಸದನಕ್ಕೆ ಚುನಾವಣೆ ನಡೆಯಿತು. ತಾಲೂಕು ಮಟ್ಟದಲ್ಲಿ ನಿರ್ದಿಷ್ಟ ಕಂದಾಯ ಪಾವತಿಸುವವರು ಮತ್ತು ಭಾರತೀಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು ಮತದಾನ ಮಾಡಲು ಮತ್ತು ಸದಸ್ಯರಾಗಲು ಅರ್ಹರಾಗಿದ್ದರು. ಪ್ರತಿಯೊಂದು ತಾಲೂಕಿಗೆ ಇಂತಿಷ್ಟೇ ಸದಸ್ಯರು ಎಂದು ನಿಗದಿಪಡಿಸಲಾಗಿತ್ತು. ಈ ಅರ್ಹತೆ ಹೊಂದಿದವರು ವಾರ್ಷಿಕವಾಗಿ ಪ್ರತಿ ತಾಲೂಕಿನಲ್ಲಿ ಸಭೆ ನಡೆಸಿ, ಅವರಲ್ಲಿ ತಾಲೂಕಿಗೆ ನಿಗದಿಪಡಿಸಲಾಗಿದ್ದ ಸದಸ್ಯರನು ಆಯ್ಕೆ ಮಾಡುತ್ತಿದ್ದರು.

ಸ್ಥಳೀಯ ಸಂಸ್ಥೆ ಮತ್ತು ಸಂಘ-ಸಂಸ್ಥೆಗಳೂ ತಮ್ಮ ಪ್ರತಿನಿಧಿಗಳನು ಕಳುಹಿಸಬಹುದಿತ್ತು. ಈ ಪ್ರಕ್ರಿಯೆಗೆ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮತದಾರರ ವಯಸ್ಸನ್ನು 18ಕ್ಕೆ ನಿಗದಿಪಡಿಸಲಾಯಿತು. 18 ವರ್ಷ ತುಂಬಿದವರಷ್ಟೇ ತಾಲೂಕು ಸದಸ್ಯರಾಗಿ ಆಯ್ಕೆಯಾಗಬಹುದಾಗಿತ್ತು. 1924ರಲ್ಲಿ ಅಭ್ಯರ್ಥಿಗಳ 18 ವರ್ಷವನ್ನು 21ಕ್ಕೆ ಹೆಚ್ಚಿಸಲಾಯಿತು. 1940ರಲ್ಲಿ ಈ ವರ್ಷ 25ಕ್ಕೇರಿತು.

1894ರಲ್ಲಿ ಈ ಚುನಾವಣೆ ಪ್ರಕ್ರಿಯೆಯಲ್ಲಿ ಮತ್ತಷ್ಟು ಬದಲಾವಣೆಯಾಯಿತು. ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳು ಮಾತ್ರ ತಮ್ಮ ಪ್ರತಿನಿಧಿಗಳನು ಕಳುಹಿಸಲು ಅನುಮತಿ ಇತ್ತು. ಭೂಮಿ ಹೊಂದಿರದ ಪದವೀಧರರು ಸದಸ್ಯರಾಗುವಂತಿರಲಿಲ್ಲ. ತಾಲೂಕು ಸದಸ್ಯರ ಅವಧಿಯನ್ನು ಮೂರು ವರ್ಷಕ್ಕೆ ನಿಗದಿಪಡಿಸಲಾಯಿತು. 1918ರಲ್ಲಿ ಭೂಮಿ ಆಸ್ತಿಯ ಅರ್ಹತೆಯನ್ನು ತೆಗೆದುಹಾಕಲಾಯಿತು. 1919ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಹೆಚ್ಚು ಪ್ರತಿನಿಧಿತ್ವಕ್ಕೆ ಅವಕಾಶ ಮಾಡಿಕೊಟ್ಟು, ಈ ಎಲ್ಲ ಸದಸ್ಯರ ಅವಧಿಯನ್ನು ಮೂರು ವರ್ಷಕ್ಕೆ ಹೆಚ್ಚಿಸಲಾಯಿತು. 1923ರಲ್ಲಿ ನಿಯಮ ರೂಪಿಸುವ ಮೂಲಕ ಪ್ರತಿನಿಧಿಗಳ ಸಭೆಯ ಅವಧಿಯನ್ನು  ಮೂರು ವರ್ಷಕ್ಕೆ ನಿಗದಿಪಡಿಸಲಾಯಿತು.

1932ರಲ್ಲಿ ಜನಸಂಖ್ಯೆ ಆಧಾರದ ಮೇಲೆ ತಾಲೂಕು ಸದಸ್ಯರ ಸಂಖ್ಯೆಯನ್ನು ಪುನರ್‌ನಿಗದಿ ಮಾಡಲಾಯಿತು. ಬೆಂಗಳೂರು ಹಾಗೂ ಮೈಸೂರು ನಗರ ಸಂಸ್ಥೆಗಳಿಂದ ಸದಸ್ಯರ ಚುನಾವಣೆಯನ್ನು 1932ರಲ್ಲೇ ಪರಿಚಯಿಸಲಾಯಿತು. 1881ರಲ್ಲಿ ರಚನೆಯಾದ ಪ್ರತಿನಿಧಿಗಳ ಸದನದ ಕಾರ್ಯಕಾರಿ ಆದೇಶ 1923ರವರೆಗೆ ಕಾರ್ಯನಿರ್ವಹಿಸಿತು. 1923ರಲ್ಲಿ ಮಹಾರಾಜ ಅವರು ನಿಯಮಗಳನ್ನು ಅಧಿಸೂಚಿಸುವ ಮೂಲಕ ಪ್ರತಿನಿಧಿಗಳ ಸದನಕ್ಕೆ ಶಾಸನಬದ್ಧ ಸ್ಥಾನಮಾನ ಲಭ್ಯವಾಯಿತು.


 

 

No comments:

Post a Comment