Thursday, April 13, 2023

Karnataka Assembly Rewind-5: K. Changalaraya Reddy, the First Chief Minister of the state

Karnataka Assembly Rewind-5: K. Changalaraya Reddy, the First Chief Minister of the state 


Kere Manjunath ಕೆರೆ ಮಂಜುನಾಥ್‌

The House of Representatives and the Parishad were dissolved in 1949 after taking a decision to frame the constitution of Mysore State under the Constitution of India. After this, in 1952, as per the constitution, the first assembly of 80 elected members and one nominated member came into existence. After the formation of Andhra Pradesh state in 1953, some areas of Bellary district were annexed from Madras state to Mysore state. On this occasion five members joined the strength of the assembly.

 In 1956, states were recognized according to language. As a result, the new state of Mysore came into existence on 1 November 1956. Four districts from Bombay State, three districts from Hyderabad State, one district from old Madras State and one taluk from Kodagu State were added. In 1973 Mysore State was renamed as Karnataka.

The State Legislature consisted of two Houses, one named the Vidhana Sabha and the other the Legislative Council (Vidhana Parishat). In 1957, the number of assembly members increased to 179, 208 in 1962, and 216 in 1967. After the number of MLAs increased to 224 in 1978, it is still the same. In addition, there is one nominee member.

 The strength of Vidhana Parishadlt was 63 in 1957. It was expanded to 75 in 1987. Out of which 25 members are elected by the assembly. 25 members are elected from local bodies, 7 members each from graduate and teacher's field. 11 members are nominated by the government.

Anga Sadan (Constituent Assembly) was formed in 1946 to frame the Constitution of India. All the provinces of the country had this parliament according to their respective states. K. Changalaraya reddy, T. Siddalingaiah, H.R. Gaurav Reddy, S.V. Krishnamurthy Rao, K. Hanumanthaiah, H. Siddaveerappa and T. Chanaiah were in the Mysore represented team as members. As the first Chief Minister of Mysore State, K. Changalarayareddy served from 25 October 1947 to 30 March 1952. The first general election was held in 1952 after the constitution. From that the first assembly of the state was established.

ವಿಧಾನಸಭೆ ಮೆಲುಕು-5: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ. ಚಂಗಲರಾಯ ರೆಡ್ಡಿ

ಕೆರೆ ಮಂಜುನಾಥ್‌

ಭಾರತ ಸಂವಿಧಾನದಡಿಯೇ ಮೈಸೂರು ರಾಜ್ಯದ ಸಂವಿಧಾನವನ್ನೂ ರಚಿಸುವಂತೆ ನಿರ್ಣಯ ಕೈಗೊಂಡು ಪ್ರತಿನಿಧಿಗಳ ಸದನ ಹಾಗೂ ಪರಿಷತ್ 1949ರಲ್ಲಿ ವಿಸರ್ಜನೆಯಾಯಿತು. ಇದಾದ ನಂತರ 1952ರಲ್ಲಿ ಸಂವಿಧಾನದ ಪ್ರಕಾರ, ಆಯ್ಕೆಗೊಂಡ 80 ಸದಸ್ಯರು ಹಾಗೂ ಒಬ್ಬರು ನಾಮನಿರ್ದೇಶಿತ ಸದಸ್ಯರ ಪ್ರಥಮ ವಿಧಾನಸಭೆ ಅಸ್ತಿತ್ವಕ್ಕೆ ಬಂದಿತು. 1953ರಲ್ಲಿ ಆಂಧ್ರಪ್ರದೇಶ ರಾಜ್ಯ ರಚನೆಯಾದ ನಂತರ ಮದ್ರಾಸ್ ರಾಜ್ಯದಿಂದ ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದವು. ಈ ಸಂದರ್ಭದಲ್ಲಿ ವಿಧಾನಸಭೆಯ ಸಾಮರ್ಥ್ಯಕ್ಕೆ ಐವರು ಸದಸ್ಯರು ಸೇರಿಕೊಂಡರು.

1956ರಲ್ಲಿ ಭಾಷಾನುಸಾರ ರಾಜ್ಯಗಳನ್ನು ಗುರುತಿಸಲಾಯಿತು. ಇದರಿಂದ 1956ರ ನವೆಂಬರ್ 1ರಂದು ಹೊಸ ಮೈಸೂರು ರಾಜ್ಯ ಉದಯವಾಯಿತು. ಬಾಂಬೆ ರಾಜ್ಯದಿಂದ ನಾಲ್ಕು ಜಿಲ್ಲೆ, ಹೈದರಾಬಾದ್ ರಾಜ್ಯದಿಂದ ಮೂರು ಜಿಲ್ಲೆ, ಹಳೆ ಮದ್ರಾಸ್ ರಾಜ್ಯದಿಂದ ಒಂದು ಜಿಲ್ಲೆ ಮತ್ತು ಒಂದು ತಾಲೂಕು, ಕೊಡಗು ರಾಜ್ಯ ಸೇರಿಕೊಂಡವು. 1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.

ರಾಜ್ಯದ ಶಾಸನ ಸಭೆ ಎಂದು ಸದನಗಳನ್ನು ಒಳಗೊಂಡಿದ್ದು, ಒಂದನ್ನು ವಿಧಾನಸಭೆ ಹಾಗೂ ಮತ್ತೊಂದನ್ನು ವಿಧಾನಪರಿಷತ್ ಎಂದು ಹೆಸರಿಸಲಾಯಿತು. 1957ರಲ್ಲಿ ವಿಧಾನಸಭೆ ಸದಸ್ಯರ ಸಂಖ್ಯೆ 179, 1962ರಲ್ಲಿ 208, 1967ರಲ್ಲಿ 216ಕ್ಕೆ  ವಿಸ್ತರಣೆಯಾಯಿತು. 1978ರಲ್ಲಿ ಶಾಸಕರ ಸಂಖ್ಯೆ 224ಕ್ಕೆ ಹೆಚ್ಚಾದ ನಂತರ ಈಗಲೂ ಅಷ್ಟೇ ಇದೆ. ಜತೆಗೆ ಒಬ್ಬರು ನಾಮಕರಣ ಸದಸ್ಯರಿದ್ದಾರೆ.

ವಿಧಾನಪರಿಷತ್‌ನ ಸಂಖ್ಯೆ 1957ರಲ್ಲಿ 63 ಆಗಿತ್ತು. 1987ರಲ್ಲಿ 75ಕ್ಕೆ ವಿಸ್ತರಣೆಯಾಯಿತು. ಇದರಲ್ಲಿ 25 ಸದಸ್ಯರು ವಿಧಾನಸಭೆಯಿಂದ ಆಯ್ಕೆಯಾದವರು. 25 ಸದಸ್ಯರು ಸ್ಥಳೀಯ ಸಂಸ್ಥೆಗಳಿಂದ, ತಲಾ 7 ಸದಸ್ಯರು ಪದವಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. 11 ಸದಸ್ಯರನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ.

ಭಾರತದ ಸಂವಿಧಾನ ರಚನೆಗಾಗಿ 1946ರಲ್ಲಿ ಅಂಗ ಸದನ (ಕಾನ್‌ಸ್ಟಿಟ್ಯೂಯಂಟ್ ಅಸೆಂಬ್ಲಿ) ರಚಿಸಲಾಯಿತು. ದೇಶದ ಎಲ್ಲ ಪ್ರಾಂತ್ಯದಲ್ಲೂ ಆಯಾ ರಾಜ್ಯಕ್ಕನುಸಾರ ಈ ಅಂಗಸದನವಿತ್ತು. ಮೈಸೂರು ಅಂಗ ಸದನದಲ್ಲಿ ಕೆ. ಚಂಗಲರಾಯರೆಡ್ಡಿ, ಟಿ. ಸಿದ್ದಲಿಂಗಯ್ಯ, ಎಚ್.ಆರ್. ಗೌರವ್ ರೆಡ್ಡಿ, ಎಸ್.ವಿ. ಕೃಷ್ಣಮೂರ್ತಿ ರಾವ್, ಕೆ. ಹನುಮಂತಯ್ಯ, ಎಚ್. ಸಿದ್ದವೀರಪ್ಪ ಹಾಗೂ ಟಿ. ಚನಯ್ಯ ಸದಸ್ಯರಾಗಿದ್ದರು. ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಕೆ. ಚಂಗಲರಾಯರೆಡ್ಡಿ 1947ರ ಅಕ್ಟೋಬರ್ 25ರಿಂದ 1952ರ ಮಾರ್ಚ್ 30ರವರೆಗೆ ಕಾರ್ಯನಿರ್ವಹಿಸಿದರು. ಸಂವಿಧಾನದ ರಚನೆಯಾದ ನಂತರ 1952ರಲ್ಲಿ ಪ್ರಥಮ ಬಾರಿ ಸಾರ್ವತ್ರಿಕ ಚುನಾವಣೆ ನಡೆಯಿತು. ಅದರಿಂದ ರಾಜ್ಯದ ಪ್ರಥಮ ವಿಧಾನಸಭೆ ಸ್ಥಾಪನೆಯಾಯಿತು.


 

 

No comments:

Post a Comment