Wednesday, April 12, 2023

Karnataka Assembly Rewind-4: Members got freedom of speech

Karnataka Assembly Rewind-4: Members got freedom of speech


Kere Manjunath ಕೆರೆ ಮಂಜುನಾಥ್‌

Nomination of members to the Parishad by the House of Representatives began in 1940. And then the council began to legislate. No new rules could be introduced without the signature of the Parishad and Diwan. In case of emergencies, some matters were exempted from the Parishad, and the government used to legislate for them. In 1914, members were allowed to ask questions between councils. In 1915, the member's sub-question was also allowed. In 1914, the Parishad got the power to discuss the budget. The power to vote on demand for grants was given in 1923. In British India's some expenditure could not be voted on. This also got an opportunity. After 1919, the Parishad became capable of taking decisions.

In 1923, the Council was prohibited from changing the rules and legislative policies of the House of Representatives. In 1917 the term of Parishad members was fixed for three years and in 1940 four years. Like the Government of India Act of 1935, the Government of Mysore Act of 1940 provided freedom of speech to members of the House of Representatives.

After independence, the Maharaja of Mysore issued an order on 29 October 1947 to constitute a constituent assembly for the establishment of Mysore State. When the House of Representatives met, some of the members of the House of Representatives and the Parishad suggested that a separate constitution should be made for the state of Mysore. Most of them were of the opinion that it would be appropriate for the Government of India to draft a constitution for the administration of the state. A large number of members demanded that the Government of India should draft a constitution for the state as well. In recognition of this, a resolution was taken in the House of Assembly that the constitution of the Government of India should be adopted for the state of Mysore.

Thus the House of Representatives and the Parishad were dissolved. As per the order issued by the Maharaja in November 1949, the Sadan and the Parishad were dissolved on 16th December 1949. The Anga Sadan formed in 1947 served as the proposed House of Mysore till elections were held as per the constitution.

ವಿಧಾನಸಭೆ ಮೆಲುಕು-4: ಸದಸ್ಯರಿಗೆ ಸಿಕ್ಕಿತು ವಾಕ್‌ಸ್ವಾತಂತ್ರ್ಯ

ಕೆರೆ ಮಂಜುನಾಥ್‌

1940ರಲ್ಲಿ ಪರಿಷತ್‌ಗೆ ಪ್ರತಿನಿಧಿಗಳ ಸದನದಿಂದ ಸದಸ್ಯರು ನಾಮನಿರ್ದೇಶನವಾಗುವುದು ಪ್ರಾರಂಭವಾಯಿತು. ತದನಂತರ ಪರಿಷತ್ ಕಾನೂನು ರಚನೆ ಪ್ರಾರಂಭಿಸಿತು. ಪರಿಷತ್ ಹಾಗೂ ದಿವಾನರಿಂದ ಸಹಿಯಾಗದೆ ಯಾವುದೇ ಹೊಸ ನಿಯಮಗಳನ್ನು ಪರಿಚಯಿಸುವಂತಿರಲಿಲ್ಲ. ತುರ್ತು ಸಂದರ್ಭಗಳಲ್ಲಿ ಕೆಲವು ವಿಷಯಗಳು ಪರಿಷತ್‌ನಿಂದ ಹೊರತಾಗಿದ್ದರಿಂದ ಇವುಗಳಿಗೆ ಸರ್ಕಾರವೇ ಕಾನೂನು ರಚಿಸುತ್ತಿತ್ತು. ಪರಿಷತ್‌ನಲ್ಲಿ ನಡುವೆ ಪ್ರಶ್ನೆ ಕೇಳಲು 1914ರಲ್ಲಿ ಸದಸ್ಯರಿಗೆ ಅವಕಾಶ ಮಾಡಿಕೊಡಲಾಯಿತು. 1915ರಲ್ಲಿ ಸದಸ್ಯರ ಉಪಪ್ರಶ್ನೆಗೂ ಅನುವಾಯಿತು. 1914ರಲ್ಲಿ ಪರಿಷತ್‌ಗೆ ಬಜೆಟ್ ಮೇಲೆ ಚರ್ಚಿಸುವ ಅಧಿಕಾರ ಬಂತು. ಅನುದಾನದ ಬೇಡಿಕೆಗೆ ಮತ ಹಾಕುವ ಅಧಿಕಾರವನ್ನು 1923ರಲ್ಲಿ ನೀಡಲಾಯಿತು. ಬ್ರಿಟಿಷ್ ಇಂಡಿಯಾದಲ್ಲಿ ಕೆಲವು ವೆಚ್ಚಗಳಿಗೆ ಮತಹಾಕುವಂತಿರಲಿಲ್ಲ. ಇದಕ್ಕೂ ಅವಕಾಶ ಲಭ್ಯವಾಯಿತು. 1919ರ ನಂತರ ಪರಿಷತ್ ನಿರ್ಣಯ ತೆಗೆದುಕೊಳ್ಳಲು ಸಮರ್ಥವಾಯಿತು.

ಪ್ರತಿನಿಧಿಗಳ ಸದನದ ನಿಯಯ ಹಾಗೂ ಶಾಸನ ನೀತಿಗಳನ್ನು ಪರಿಷತ್ ಬದಲಿಸದಂತೆ 1923ರಲ್ಲಿ ಕಟ್ಟಲೆಯಾಯಿತು. 1917ರಲ್ಲಿ ಪರಿಷತ್ ಸದಸ್ಯರ ಅವಧಿಯನ್ನು ಮೂರು ವರ್ಷಕ್ಕೆ ಹಾಗೂ 1940ರಲ್ಲಿ ನಾಲ್ಕು ವರ್ಷಕ್ಕೆ ನಿಗದಿಪಡಿಸಲಾಯಿತು. 1935ರಲ್ಲಿ ಭಾರತ ಸರ್ಕಾರದ ಕಾಯಿದೆಯಂತೆಯೇ 1940ರ ಮೈಸೂರು ಸರ್ಕಾರದ ಕಾಯಿದೆ ಪ್ರಕಾರ ಪ್ರತಿನಿಧಿ ಸದನದ ಸದಸ್ಯರಿಗೆ ವಾಕ್ ಸ್ವಾತಂತ್ರ್ಯ ಲಭ್ಯವಾಯಿತು.

ಸ್ವಾತಂತ್ರ್ಯ ನಂತರ, ಮೈಸೂರು ಮಹಾರಾಜರು 1947ರ ಅಕ್ಟೋಬರ್ 29ರಂದು ಮೈಸೂರು ರಾಜ್ಯ ಸ್ಥಾಪನೆಗಾಗಿ ಅಂಗ ಸದನ ರಚಿಸಲು ಆದೇಶ ಹೊರಡಿಸಿದರು. ಅಂಗ ಸದನ ಸಭೆ ಸೇರಿದಾಗ ಪ್ರತಿನಿಧಿಗಳ ಸದನ ಹಾಗೂ ಪರಿಷತ್‌ನ ಸದಸ್ಯರಲ್ಲಿ ಕೆಲವರು ಮೈಸೂರು ರಾಜ್ಯಕ್ಕೇ ಪ್ರತ್ಯೇಕ ಸಂವಿಧಾನ ರಚನೆಯಾಗಬೇಕು ಎಂದು ಕೆಲವರು ಪ್ರತಿಪಾದಿಸಿದರು. ರಾಜ್ಯದ ಆಡಳಿತದ ಸಂವಿಧಾನವನ್ನು ಭಾರತ ಸರ್ಕಾರ ರಚಿಸುವುದೇ ಸೂಕ್ತ ಎಂದು ಬಹುತೇಕರು ಅಭಿಪ್ರಾಯಪಟ್ಟರು. ಭಾರತದ ಸರ್ಕಾರವೇ ರಾಜ್ಯಕ್ಕೂ ಸಂವಿಧಾನ ರಚಿಸಬೇಕೆಂದು ಅಧಿಕ ಸಂಖ್ಯೆಯಲ್ಲಿ ಸದಸ್ಯರು ಆಗ್ರಹಿಸಿದರು. ಇದಕ್ಕೆ ಮನ್ನಣೆ ದೊರೆತು, ಮೈಸೂರು ರಾಜ್ಯಕ್ಕೆ ಭಾರತ ಸರ್ಕಾರ ರಚಿಸುವ ಸಂವಿಧಾನವೇ ಅಳವಡಿಕೆಯಾಗಬೇಕು ಎಂಬ ನಿರ್ಣಯವನ್ನು ಅಂಗ ಸದನದಲ್ಲಿ ಕೈಗೊಳ್ಳಲಾಯಿತು.

ಹೀಗಾಗಿ ಪ್ರತಿನಿಧಿಗಳ ಸದನ ಹಾಗೂ ಪರಿಷತ್ ವಿಸರ್ಜನೆಯಾಗುವಂತಾಯಿತು. 1949ರ ನವೆಂಬರ್‌ನಲ್ಲಿ ಮಹಾರಾಜರು ಹೊರಡಿಸಿದ ಆಜ್ಞೆ ಪ್ರಕಾರ, ಸದನ ಹಾಗೂ ಪರಿಷತ್ 1949ರ ಡಿಸೆಂಬರ್ 16ರಂದು ವಿಸರ್ಜನೆಯಾದವು. ಸಂವಿಧಾನದ ಪ್ರಕಾರ ಚುನಾವಣೆ ನಡೆಯುವವರೆಗೂ 1947ರಲ್ಲಿ ರಚನೆಯಾದ ಅಂಗ ಸದನವೇ ಮೈಸೂರಿನ ಪ್ರಸ್ತಾವಿತ ಸದನವಾಗಿ ಕಾರ್ಯನಿರ್ವಹಿಸಿತು.


 

 

 

No comments:

Post a Comment